Tag: kantara film

  • ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್

    ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್

    `ಕಾಂತಾರ’ (Kantara Film) ಸೂಪರ್ ಸಕ್ಸಸ್ ನಂತರ ಭೂತಕೋಲ ಹಿಂದೂ ಧರ್ಮದ ಆಚರಣೆ ಅಲ್ಲ ಎಂದು ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಹೇಳಿಕೆ ಸಂಬಂಧಿಸಿದಂತೆ ನಟ ರಿಷಬ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಚೇತನ್(Chetan) ಮಾತಿಗೆ ನೋ ಕಾಮೆಂಟ್ಸ್ ಎಂದಿದ್ದಾರೆ.

    ಕನ್ನಡದ `ಕಾಂತಾರ’ ಸಿನಿಮಾ ಇದೀಗ ಬಹುಭಾಷೆಗಳಲ್ಲಿ ರಿಲೀಸ್ ಆಗಿ, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ಚೇತನ್ ವಿವಾದ ಬಗ್ಗೆ ರಿಷಬ್‌ಗೆ ಕೇಳಲಾಗಿದೆ. ಇದಕ್ಕೆ ಪ್ರತಿಯುತ್ತರವಾಗಿ ನೋ ಕಾಮೆಂಟ್ಸ್ ಎಂದು ಮಾತನಾಡಿದ್ದಾರೆ.

    ನೋ ಕಮೆಂಟ್ಸ್. ಆದರೆ ಈ ಕಾಂತಾರ ಚಿತ್ರ ಮಾಡುವ ಯೋಚನೆ ಬಂದಾಗಲೇ ದೈವಗಳಿಗೆ, ದೈವಾರಾಧಕರ ಭಾವನೆಗಳಿಗೆ ಧಕ್ಕೆ ಆಗಬಾರದು ಎಂಬ ಎಚ್ಚರಿಕೆ ಇತ್ತು. ಹೀಗಾಗಿ ದೈವಾರಾಧಕರನ್ನು ಜೊತೆಯಲ್ಲಿ ಇಟ್ಟುಕೊಂಡು ಪ್ರತೀ ದೃಶ್ಯ ತೆಗೆಯುವಾಗಲೂ ಇದು ಸರಿಯೇ ಎಂದು ಅವರನ್ನು ಕೇಳಿ ತಿಳಿದು ಕಾಂತಾರ ಚಿತ್ರೀಕರಣ ಮಾಡಿದ್ದೆನೆ. ಇದನ್ನೂ ಓದಿ:ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ 

    ಸಂಸ್ಕೃತಿ ಬಗ್ಗೆ ಮಾತಾಡುವಷ್ಟು ಅರ್ಹತೆ ನನಗಿಲ್ಲ. ಪ್ರಶ್ನೆ ಕೇಳುವವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಪ್ರಕಾರ ಮಾತಾಡುವ ಅರ್ಹತೆ ಇರುವುದು ಆ ಸಂಸ್ಕೃತಿಯನ್ನು ಪಾಲಿಸುತ್ತಿರುವವರಿಗೆ, ದೈವರಾಧನೆ ಮಾಡುತ್ತಿರುವವರಿಗೆ. ಭೂತಕೋಲಕ್ಕೆ ಅದರದ್ದೇ ಆದ ಭವ್ಯ ಇತಿಹಾಸವಿದೆ. ಗೊತ್ತಿಲ್ಲದೇ ಅದರ ಬಗ್ಗೆ ಮಾತಾಡುವುದು ತಪ್ಪಾಗುತ್ತದೆ ಎಂದು ರಿಷಬ್ ಶೆಟ್ಟಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ

    ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ

    ನ್ನಡದ `ಕಾಂತಾರ’ (Kantara Film) ಸಿನಿಮಾ ದಶದಿಕ್ಕುಗಳಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ದೈವದ ಅಪ್ಪಟ ಕಥೆಗೆ ಕನ್ನಡಿಗರು ಮಾತ್ರವಲ್ಲದೇ ಪರಭಾಷೆಯ ಪ್ರೇಕ್ಷಕರು ಮಾರುಹೋಗಿದ್ದಾರೆ. ಹೊರದೇಶದಲ್ಲೂ ಕನ್ನಡಿಗರು ನೆಲೆಸಿದ್ದಾರೆ ಅವರಿಗಾಗಿ ವಿಶೇಷ ʻಕಾಂತಾರʼ ಚಿತ್ರ ಪ್ರದರ್ಶನ ಆಯೋಜಿಸಲು ತಯಾರಿ ನಡೆಸುತ್ತಿದ್ದಾರೆ.

    ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ `ಕಾಂತಾರ’ ಸಿನಿಮಾ(Kantara Film) ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಮೋಡಿ ಮಾಡುತ್ತಿರುವ ಈ ಚಿತ್ರದ ವಿಶೇಷ ಪ್ರದರ್ಶನವನ್ನ ನ.1ರಂದು ಆಯೋಜಿಸಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಹೊರದೇಶದಲ್ಲೂ ಕನ್ನಡಿಗರು ಇರುವ ಕಾರಣ. ಕನ್ನಡಿಗರ ವಿಶೇಷ ದಿನ ನ.1ರಂದು ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯ ಪ್ರೇಕ್ಷಕರಿಗೆ ಕಾಂತಾರ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ. ಇದನ್ನೂ ಓದಿ: ರಮ್ಯಾ ನಿರ್ಮಾಣದ ಸಿನಿಮಾದಿಂದ ರಮ್ಯಾನೇ ಔಟ್ : ಕೈ ಜಾರಿತಾ ಸ್ವಾತಿ ಮುತ್ತು?

    ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ `ಕಾಂತಾರ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಹೊರದೇಶದಲ್ಲೂ ಸಿನಿಮಾ ಮೋಡಿ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ವಿವಾದದ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

    `ಕಾಂತಾರ’ ವಿವಾದದ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

    ಚಿತ್ರರಂಗದಲ್ಲಿ `ಕಾಂತಾರ’ (Kantara Film) ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. `ಕಾಂತಾರ’ ಆರ್ಭಟಕ್ಕೆ ಇತರೆ ಸಿನಿಮಾಗಳು ಡಲ್ ಹೊಡೆದಿದೆ. ದೈವ ಅಪ್ಪಟ ಕಥೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ನಡುವೆ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಚೇತನ್ ಹೇಳಿಕೆ ವಿವಾದ ಸೃಷ್ಟಿಸಿದೆ. ಇದೀಗ ಚೇತನ್ ಹೇಳಿಕೆಯನ್ನ ನಾನು ಒಪ್ಪೋದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Gnanendra) ಪ್ರತಿಕ್ರಿಯೆ ನೀಡಿದ್ದಾರೆ.

    ಚಂದನವನದಲ್ಲಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾಗೆ ಇಡೀ ಚಿತ್ರರಂಗವೇ ತಲೆಬಾಗಿದೆ. ಪರಭಾಷೆಯ ಸ್ಟಾರ್‌ಗಳು ಕೂಡ ಕನ್ನಡದ `ಕಾಂತಾರ’ ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಹೀಗಿರುವಾಗ ನಟ ಚೇತನ್ ಮಾತಿಗೆ ಆರಗ ಜ್ಞಾನೇಂದ್ರ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:BREAKING:`ಕಾಂತಾರ’ ಪಾರ್ಟ್ 2 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ನಟ ಪ್ರಮೋದ್ ಶೆಟ್ಟಿ

    ಎಲ್ಲರಿಗೂ ವಾಕ್ ಸ್ವಾತಂತ್ರ‍್ಯ ಇರುತ್ತೆ ಮಾತಾಡಿಕೊಳ್ಳಲಿ  ಬೇಕಾದ್ರೆ. ಆದರೆ ಚೇತನ್‌ ಮಾತನ್ನ ನಾನು ಒಪ್ಪೋದಿಲ್ಲ ಎಂದು ಖಡಕ್‌ ಉತ್ತರ ಕೊಟ್ಟಿದ್ದಾರೆ. `ಕಾಂತಾರ’ (Kantara Film) ಸಿನಿಮಾ ನಾನು ನೋಡಿದೆ ತುಂಬಾ ಚೆನ್ನಾಗಿದೆ. ನಮ್ಮ ಮಲೆನಾಡಿನ ಸೊಗಡನ್ನ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಸಿನಿಮಾವೊಂದರ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಚೇತನ್ ವಿವಾದ ಕುರಿತು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು

    ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು

    ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ(Rishab Shetty) ಕಾಂತಾರ ಚಿತ್ರದ ಮೂಲಕ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹೆಗ್ಗಳಿಕೆಯ ಜೊತೆಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗ ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ಅವರ ತಂದೆ ಭಾಸ್ಕರ್ ಶೆಟ್ಟಿ(Bhaskar Shetty) ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    `ಕಾಂತಾರ’ (Kantara Film) ಚಿತ್ರದ ಸಕ್ಸಸ್ ಅಲೆಗೆ ಚಿತ್ರರಂಗವೇ ಶೇಕ್ ಆಗಿದೆ. ರಿಷಬ್ ಕಥೆಗೆ ಮತ್ತು ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಪರಭಾಷೆಗಳಿಂದಲೂ ಶೆಟ್ರಿಗೆ ಭರ್ಜರಿ ಆಫರ್ಸ್ ಅರಸಿ ಬರುತ್ತಿದೆ. ಇದೀಗ ಈ ಸಕ್ಸಸ್ ಹಿಂದಿರುವ ಸೀಕ್ರೆಟ್ ಬಗ್ಗೆ ಅವರ ತಂದೆ ಭಾಸ್ಕರ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

    ಪ್ರತಿಭಾವಂತ ನಟ ರಿಷಬ್ ಶೆಟ್ಟಿ ಶ್ರಮಜೀವಿ ಅದರಲ್ಲಿ ಎರಡು ಮಾತಿಲ್ಲ. ರಿಷಬ್ ಅವರ ತಂದೆ ಸಾಕಷ್ಟು ವರ್ಷಗಳಿಂದ ಜ್ಯೋತಿಷ್ಯ ಕಾರ್ಯ ಮಾಡುತ್ತಿದ್ದರು. ಇದೀಗ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. 2021ರಿಂದ 16 ವರ್ಷ ರಿಷಬ್‌ಗೆ ಗಜಕೇಸರಿ ಯೋಗ ಇದೆ ಎಂದು ಅವರು ಹೇಳಿದ್ದಾರೆ. ಈ ಗಜಕೇಸರಿ ಯೋಗದಿಂದಲೇ ಶ್ರಮದ ಜೊತೆ ಸಕ್ಸಸ್ ಕೂಡ ಸಿಕ್ಕಿದೆ ಎಂಬುದನ್ನ ರಿಷಬ್ ತಂದೆ ಮಾತನಾಡಿದ್ದಾರೆ.‌ ಇದನ್ನೂ ಓದಿ:ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಸದ್ಯ ರಿಷಬ್ ಶೆಟ್ಟಿಗೆ ಟಾಲಿವುಡ್ ಸ್ಟಾರ್ ನಿರ್ಮಾಪಕ ಅಲ್ಲು ಅರವಿಂದ್ ಅವರು ತಮ್ಮ ಬ್ಯಾನರ್ ನಟಿಸುವಂತೆ ಆಫರ್ ಮಾಡಿದ್ದಾರೆ. ಅದಕ್ಕೆ ರಿಷಬ್ ಕೂಡ ಸಮ್ಮತಿ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ಮೂಲಕ ಸಂಚಲನ ಮೂಡಿಸುತ್ತಿರುವ ನಟ ಚೇತನ್ (Chetan) ಇದೀಗ ಮತ್ತೆ ಧರ್ಮದ ಬಗ್ಗೆ ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ಎಡೆಮಾಡಿ ಕೊಟ್ಟಿದ್ದಾರೆ.

    `ಕಾಂತಾರ’ (Kantara) ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತಿದೆ. ಈ ಬೆನ್ನಲ್ಲೇ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ಮೂಲಕ ವಿರೋಧ ಮತ್ತು ಚರ್ಚೆ ನಡೆದಿತ್ತು. `ಆಮದು ಮಾಡಿಕೊಂಡ ಧರ್ಮಗಳು’ ಎಂಬ ಹೇಳಿಕೆಯನ್ನ ಚೇತನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಭಾರತವು ವೈವಿಧ್ಯಮಯವಾದ ಮತ್ತು ರೋಮಾಂಚಕವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿದೆ. ನಮ್ಮ ಆದಿವಾಸಿ- ಅಲೆಮಾರಿ ಮೂಲನಿವಾಸಿ ವಿಶ್ವಗಳನ್ನು ಸಂರಕ್ಷಿಸುವ ಮತ್ತು ಗುರುತಿಸುವ ಆಂದೋಲನವು ನಡೆಯುತ್ತಿದೆ. ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಇಂತದ `ಆಮದು ಮಾಡಿಕೊಂಡ’ ಧರ್ಮಗಳು – ಇತರ ಎಲ್ಲಾ ಧರ್ಮಗಳಂತೆಯೇ ಅವಿಭಾಜ್ಯವಾಗಿವೆ. ಎಲ್ಲಾ ಅಸಮಾನತೆಗಳನ್ನ ನಾವು ವಿರೋಧಿಸಬೇಕು ಎಂದಿದ್ದಾರೆ.

    ಸಿನಿಮಾಗಿಂತ ವಿವಾದಗಳ ಮೂಲಕ ಸುದ್ದಿಯಾಗುವ ನಟ ಚೇತನ್‌, ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ವಿವಾದ್ಮಾತಕ ಹೇಳಿಕೆಯ ನಂತರ ಇದೀಗ ಧರ್ಮದ ಬಗ್ಗೆ ಮಾತನಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ: ಚೇತನ್‌ಗೆ ಉಪೇಂದ್ರ ಟಾಂಗ್

    ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ: ಚೇತನ್‌ಗೆ ಉಪೇಂದ್ರ ಟಾಂಗ್

    ಲ್ಲಾಪೆಟ್ಟಿಗೆಯಲ್ಲಿ `ಕಾಂತಾರ'(Kantara Film) ಸೂಪರ್ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ವಿವಾದ ಕೂಡ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು  ಚೇತನ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಚೇತನ್(Chethan) ಹೇಳಿಕೆಗೆ ರಿಯಲ್ ಸ್ಟಾರ್ ಉಪೇಂದ್ರ(Upendra) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಸಾಲು ಸಾಲು ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಿರುವ ನಟ ಉಪೇಂದ್ರ ಇದೀಗ `ಕಾಂತಾರ’ ಚಿತ್ರದ ಬಗ್ಗೆ ಹಾಗೂ ನಟ ಚೇತನ್ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. `ಕಾಂತಾರ'(Kantara) ಸಿನಿಮಾ ನೋಡಿಲ್ಲ. ಚಿತ್ರ ನೋಡಿ ರಿಯಾಕ್ಟ್ ಮಾಡ್ತೀನಿ. ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ.

    ನಿನ್ನೆ ಘಟನೆಯ ಬಗ್ಗೆ ನಾನು ಏನೂ ಹೇಳಲ್ಲ. ಈ ತರದ ಬೆಳವಣಿಗೆ ಅಸಹ್ಯ ಅನಿಸುತ್ತಿದೆ. ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ. ಭೂತಾರಾಧನೆ ಅದು ಅವರವರ ವೈಯಕ್ತಿಕ ನಂಬಿಕೆ. ನಾನು ಅದೇ ಊರಿನಿಂದ ಬಂದವನು, ನನಗೆ ವಿಶೇಷವಾದ ನಂಬಿಕೆ ಇದೆ ಜೊತೆಗೆ ನನ್ನ ತಂದೆ ಇವತ್ತಿಗೂ ನಾಗರಾದನೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ ಎಂದು ಚೇತನ್ ಹೇಳಿಕೆಗೆ ಉಪೇಂದ್ರ ಪ್ರತಿಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ ಎಂಬ ಹೇಳಿಕೆಯ ಮೂಲಕ ನಟ ಉಪೇಂದ್ರ ಚೇತನ್‌ಗೆ ಟಾಂಗ್‌ ಕೊಟ್ಟಿದ್ದಾರೆ. ಇನ್ನೂ `ಕಾಂತಾರ’ ಸಿನಿಮಾ ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸೌತ್‌ನಲ್ಲೂ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ʻಕಾಂತಾರʼ ಸಿನಿಮಾ ನೋಡದ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಪ್ರತಿಕ್ರಿಯೆ

    ʻಕಾಂತಾರʼ ಸಿನಿಮಾ ನೋಡದ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಪ್ರತಿಕ್ರಿಯೆ

    ರಾಜ್ಯದಲ್ಲಷ್ಟೇ ಅಲ್ಲದೇ ಇಡೀ ದೇಶದಲ್ಲಿ ಯಾರನ್ನ ಕೇಳಿದರೂ ಒಂದೇ ಪದ ಅದು `ಕಾಂತಾರ'(Kantara Film) ಸಿನಿಮಾ. ಈ ಚಿತ್ರ ನೋಡಿ ಇಡೀ ದೇಶವೇ ದಂಗಾಗಿದೆ. ಅನೇಕ ಸೆಲೆಬ್ರಿಟಿಗಳು ಮತ್ತು ಪರಭಾಷಾ ನಟ ನಟಿಯರು ಈ ಚಿತ್ರದ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಹೀಗಿರುವಾಗ ರಶ್ಮಿಕಾ ಮೌನ ವಹಿಸಿರುವುದರ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ರಶ್ಮಿಕಾ ಈವರೆಗೂ ಸಿನಿಮಾ ನೋಡದೇ ಇರೋದರ ಬಗ್ಗೆ ನಟ ಪ್ರಮೋದ್ ಶೆಟ್ಟಿ(Pramod Shetty) ಪಬ್ಲಿಕ್ ಟಿವಿ ಡಿಜಿಟೆಲ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶನದ `ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾಲಿವುಡ್(Bollywood) ಮತ್ತು ಸೌತ್ ಸ್ಟಾರ್ ಆಗಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಇನ್ನೂ ನಟಿ ರಶ್ಮಿಕಾ ಮಂದಣ್ಣಗೆ ಟ್ರೋಲ್ ಆಗೋದು ಹೊಸದಲ್ಲ ಆದರೆ ಈಗ ಕಾಂತಾರ ಸಿನಿಮಾ ವಿಷ್ಯವಾಗಿ ಟ್ರೋಲ್ ಆಗುತ್ತಿದ್ದಾರೆ.

    ರಶ್ಮಿಕಾ ಮೊದಲ ಸಿನಿಮಾ ʻಕಿರಿಕ್‌ ಪಾರ್ಟಿʼ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಅವರ ʻಕಾಂತಾರʼ ಸಿನಿಮಾಗೆ ದೇಶದೆಲ್ಲಡೇ ಸಂಚಲನ ಮೂಡಿಸುತ್ತಿರುವಾಗ ರಶ್ಮಿಕಾ ಮೌನ ವಹಿಸುವುದರ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನೂ `ಕಾಂತಾರ’ ಸಿನಿಮಾ ನೋಡಿಲ್ವಾ ಅಂತಾ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಷ್ಯವಾಗಿ ಕಿರಿಕ್ ಪಾರ್ಟಿ ಮತ್ತು `ಕಾಂತಾರ’ (Kantara Film) ಖ್ಯಾತಿಯ ನಟ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

    ಪಾಪ ಬ್ಯುಸಿಯಿದ್ದಾರೆ ಅನಿಸುತ್ತೆ ಬಿಡುವಾದಾಗ `ಕಾಂತಾರ’ ಸಿನಿಮಾ ರಶ್ಮಿಕಾ ನೋಡುತ್ತಾರೆ. ಅವರದ್ದೇ ಸಿನಿಮಾ ಕೆಲ ದಿನಗಳ ಹಿಂದೆ ಅಷ್ಟೇ ಬಿಡುಗಡೆಯಾಗಿದೆ. ʻಗುಡ್‌ಬೈʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರಬಹುದು. ಫ್ರಿ ಆದಾಗ ನೋಡುತ್ತಾರೆ, ನೋಡಿ ಕಾಮೆಂಟ್ ಮಾಡುತ್ತಾರೆ. ಅವರು ಕಾಮೆಂಟ್ ಮಾಡಿಲ್ಲ ಅಂತಾ ನೀವೆಲ್ಲರೂ ಸಿನಿಮಾ ನೋಡದೇ ಇರಬೇಡಿ ಎಂದು ಪ್ರಮೋದ್ ಶೆಟ್ಟಿ ರಶ್ಮಿಕಾ ಕುರಿತು ಮಾತನಾಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ನಟ ಪ್ರಮೋದ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿಗೆ ತೆಲುಗಿನಿಂದ ಭಾರೀ ಆಫರ್: ಸಣ್ಣದೊಂದು ಬ್ರೇಕ್ ಕೇಳಿದ ನಟ

    ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಸಿನಿಮಾದ ಮುಂದೆ ರಶ್ಮಿಕಾ ನಟನೆಯ ಗುಡ್‌ಬೈ(Good Bye Film) ಸಿನಿಮಾ ಡಲ್ ಹೊಡೆದಿದೆ. ಇನ್ನೂ ಎಲ್ಲೆಡೆ ಸಂಚಲನ ಮೂಡಿಸುತ್ತಿರುವ `ಕಾಂತಾರ’ ಸಿನಿಮಾವನ್ನ ವೀಕ್ಷಿಸಿದ ನಂತರ ರಶ್ಮಿಕಾ ಮಂದಣ್ಣ ಮುಂದಿನ ದಿನಗಳಲ್ಲಿ ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

    `ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

    ಚಿತ್ರರಂಗದಲ್ಲಿ ಸದ್ಯ ಚಾಲ್ತಿಯಲ್ಲಿರುವ ಹೆಸರು ಒಂದೇ ಕಾಂತಾರ (Kantara Film) ಸಿನಿಮಾ. ರಿಷಬ್ ಶೆಟ್ಟಿ ನಿರ್ದೇಶನದ ದೈವದ ಕಥೆಗೆ ಚಿತ್ರರಸಿಕರು ಫಿದಾ ಆಗಿದ್ದಾರೆ. ಇನ್ನೂ ಕಲೆಕ್ಷನ್ ವಿಚಾರದಲ್ಲಿ `ಕೆಜಿಎಫ್ 2’ಗೆ(Kgf 2) ಸೆಡ್ಡು ಹೊಡೆದು `ಕಾಂತಾರ’ 100 ಕೋಟಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ.

    ಕನ್ನಡದ ಸಿನಿಮಾ `ಕಾಂತಾರ’ವನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ರಿಷಬ್ (Rishab Shetty) ಕಲ್ಪನೆಯ ಸಿನಿಮಾಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಇದೀಗ ಬಹುಭಾಷೆಗಳಲ್ಲಿ ರಿಲೀಸ್‌ಗೆ ಸಜ್ಜಾಗಿದೆ. `ಕೆಜಿಎಫ್ 2′ ಚಿತ್ರದ ಕಲೆಕ್ಷನ್ ಅನ್ನು ಮೀರಿ, ಕಾಂತಾರ ಸಿನಿಮಾ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಪುತ್ರಿಯ ಜೊತೆ ಶುಭಮನ್ ಗಿಲ್ ಡೇಟಿಂಗ್

    ಕಾಂತಾರ ಸಿನಿಮಾ ಮೊದಲ ವಾರಕ್ಕಿಂತ ಎರಡನೇ ವಾರ 40%ರಷ್ಟು ಕಲೆಕ್ಷನ್ ಮಾಡಿದೆ. ಎರಡನೇ ವಾರದಲ್ಲಿ 36.50 ಕೋಟಿ ಗಳಿಕೆ ಮಾಡಿದೆ. ಗಲ್ಲಾಪೆಟ್ಟಿಗೆಯ ಒಟ್ಟು ಗಳಿಕೆ 62.75 ಕೋಟಿ ರೂಪಾಯಿ ಗಳಿಸಿದೆ. ಎರಡೇ ವಾರಕ್ಕೆ ನೂರು ಕೋಟಿ ಕ್ಲಬ್ ಮಾಡುತ್ತ ಮುನ್ನುಗ್ಗುತ್ತಿದೆ. ಈ ಮೂಲಕ `ಕೆಜಿಎಫ್ 2′ ದಾಖಲೆಯನ್ನ ಕಾಂತಾರ ಉಡೀಸ್ ಮಾಡಿದೆ.

    ಗಲ್ಲಾಪೆಟ್ಟಿಗೆ ಕಲೆಕ್ಷನ್ ಹೀಗಿದೆ.

    2ನೇ ಶುಕ್ರವಾರ-4.40 ಕೋಟಿ ರೂ.
    2ನೇ ಶನಿವಾರ- 6.50 ಕೋಟಿ ರೂ.
    2ನೇ ಭಾನುವಾರ-7.50 ಕೋಟಿ ರೂ.
    2ನೇ ಸೋಮವಾರ-4.75 ಕೋಟಿ ರೂ
    2ನೇ ಮಂಗಳವಾರ-4.60 ಕೋಟಿ ರೂ.
    2ನೇ ಬುಧವಾರ -4.50 ಕೋಟಿ ರೂ.
    2ನೇ ಗುರುವಾರ- 4.25 ಕೋಟಿ ರೂ.

    ಒಟ್ಟು- ರೂ. 62.75 ಕೋಟಿ ರೂ. ಕಾಂತಾರ ಕಲೆಕ್ಷನ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಗಲ್ಲಾಪೆಟ್ಟಿಗೆಗೆ ಕನ್ನಾ ಹಾಕಿದ ʻಕಾಂತಾರʼ: 2ನೇ ವಾರವೂ ಯಶಸ್ವಿ ಪ್ರದರ್ಶನ

    ಗಲ್ಲಾಪೆಟ್ಟಿಗೆಗೆ ಕನ್ನಾ ಹಾಕಿದ ʻಕಾಂತಾರʼ: 2ನೇ ವಾರವೂ ಯಶಸ್ವಿ ಪ್ರದರ್ಶನ

    ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿದ `ಕಾಂತಾರ’ (Kantara) ಸಿನಿಮಾ ಎರಡನೇ ವಾರವೂ ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದೆ. ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಎರಡನೇ 4.50 ಕೋಟಿ ಕಲೆಕ್ಷನ್ ಮಾಡಿ, ದಾಖಲೆ ಬರೆದಿದೆ.

    ರಿಷಬ್ ಶೆಟ್ಟಿ, ಸಪ್ತಮಿ ಗೌಡ (Saptami Gowda) ನಟನೆಯ `ಕಾಂತಾರ’ ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದಶದಿಕ್ಕುಗಳಲ್ಲೂ `ಕಾಂತಾರ'(Kantara Film) ಚಿತ್ರದ ಹೆಸರು ಕೇಳಿ ಬರುತ್ತಿದೆ. ಇದೀಗ ಎರಡನೇ ವಾರ ಕೂಡ 4.50 ಕೋಟಿ ಗಳಿಸಿದೆ. ʻಕಾಂತಾರʼ ಒಟ್ಟು ಗಲ್ಲಾಪೆಟ್ಟಿಗೆ ಕಲೆಕ್ಷನ್ 48.50 ಕೋಟಿ ರೂ. ದಾಟಿದೆ. ಇದೀಗ 50 ಕೋಟಿ ಕಲೆಕ್ಷನ್‌ ಮಾಡುವತ್ತ ಸಿನಿಮಾ ಮುನ್ನುಗ್ಗುತ್ತಿದೆ. ಇದನ್ನೂ ಓದಿ:‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್ : ಅಮಿತಾಭ್, ರಜನಿ ಸೇರಿ ಗಣ್ಯರಿಗೆ ಆಹ್ವಾನ

    ಇನ್ನೂ ಕರ್ನಾಟಕದಲ್ಲಿ 46.30 ಕೋಟಿ ಕಲೆಕ್ಷನ್ ಮಾಡಿದ್ರೆ, ಭಾರತದ ಉಳಿದ ಭಾಗದಲ್ಲಿ 2.20 ಕೋಟಿ ಕಲೆಕ್ಷನ್ ಮಾಡಿದೆ. ಈ ವಾರ `ಕಾಂತಾರ’ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲೂ ರಿಲೀಸ್‌ಗೆ ರೆಡಿಯಾಗಿದೆ. ಇನ್ನೂ ಕಾಂತಾರಾ ಎರಡನೇ 4.50 ಕೋಟಿ ಗಳಿಸಿದೆ.

    `ಕಾಂತಾರ’ ದೈವದ ಅಪರೂಪದ ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲೂ ರೇಸ್ ಸ್ಪೀಡ್ ಹೆಚ್ಚುತ್ತಲೇ ಇದೆ. ಇನ್ನೂ 100 ಕೋಟಿ ಕ್ಲಬ್ ಸೇರುವ ದಿನ ದೂರವಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮುಂಬೈ ಥಿಯೇಟರ್‌ನಲ್ಲಿ ಕನ್ನಡದ ʻಕಾಂತಾರʼಕ್ಕೆ ಸಲಾಂ ಎಂದ ಪ್ರೇಕ್ಷಕರು

    ಮುಂಬೈ ಥಿಯೇಟರ್‌ನಲ್ಲಿ ಕನ್ನಡದ ʻಕಾಂತಾರʼಕ್ಕೆ ಸಲಾಂ ಎಂದ ಪ್ರೇಕ್ಷಕರು

    ಸ್ಯಾಂಡಲ್‌ವುಡ್‌ನ ಹೆಮ್ಮೆ `ಕಾಂತಾರ’ (Kantara Film) ಸಿನಿಮಾಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಇನ್ನೊಂದು ಹಿರಿಮೆಗೆ ಪಾತ್ರವಾಗಿದೆ. ಮುಂಬೈನ ಪ್ರಸಿದ್ಧ ಥಿಯೇಟರ್‌ನಲ್ಲಿ ಹಿಂದೆ ಡಬ್ ಆಗದೇ ಮೂಲ ಭಾಷೆಯಲ್ಲಿ ರಿಲೀಸ್ ಆಗಿರುವ ಮೊದಲ ಸೌತ್ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

    ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿರುವ `ಕಾಂತಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇನ್ನೂ ತೆಲುಗಿನಲ್ಲಿ ಅ.15ರಂದು ಮತ್ತು ಹಿಂದಿಯಲ್ಲಿ ಇದೇ ಅ.14ರಂದು ತೆರೆಗೆ ಬರಲಿದೆ. ಪರರಾಜ್ಯದಲ್ಲಿ ಕನ್ನಡ ಸಿನಿಮಾಗೆ ನೋಡೋಕೆ ಹಿಂದೆ ಮುಂದೆ ನೋಡುವ ಜನ, ಇದೀಗ `ಕಾಂತಾರ’ ಚಿತ್ರವನ್ನ ನೋಡಲು ಮುಗಿಬಿದ್ದು ನೋಡ್ತಿದ್ದಾರೆ. ಈ ಮಧ್ಯೆ ಮುಂಬೈನ ಪ್ರಸಿದ್ಧ ಥಿಯೇಟರ್‌ನಲ್ಲಿ ಹಿಂದೆ ಡಬ್ ಆಗದೇ ಮೂಲ ಭಾಷೆಯಲ್ಲಿ ರಿಲೀಸ್ ಆಗಿರುವ ಮೊದಲ ಚಿತ್ರವಾಗಿದೆ.

    ಪ್ರದರ್ಶಕರು ಆರಂಭದಲ್ಲಿ ಹಿಂದಿಯೇತರ ಚಲನಚಿತ್ರವನ್ನು ಬಿಡುಗಡೆ ಮಾಡಲು ಹಿಂಜರಿದರು, ನಂತರ ಸಿನಿಮಾ ಕುರಿತ ಭರಪೂರ ವಿಮರ್ಶೆ ಅವರ ಇಷ್ಟು ವರ್ಷಗಳ ಸಂಪ್ರದಾಯವನ್ನೇ ಮುರಿಯುವಂತೆ ಮಾಡಿದೆ. ಮೂಲ ಭಾಷೆಯಲ್ಲಿ ಮುಂಬೈನ ಐಕಾನಿಕ್ ಮರಾಠ ಮಂದಿರದಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕಾಂತಾರ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

     

    View this post on Instagram

     

    A post shared by Sapthami Gowda ???? (@sapthami_gowda)

    ರಿಷಬ್ ಮತ್ತು ಸಪ್ತಮಿ ಗೌಡ(Saptami Gowda) ನಟನೆಯ `ಕಾಂತಾರ’ ಮುಂಬೈನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಸಿನಿಮಾ ಲೂಟಿ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]