Tag: kantara film

  • ಹಿಂದಿ ಬಾಕ್ಸಾಫೀಸ್‌ನಲ್ಲಿ ರಿಷಬ್ ಶೆಟ್ಟಿ ಅಬ್ಬರ: 62 ಕೋಟಿ ರೂ. ಗಳಿಸಿದ ʻಕಾಂತಾರʼ

    ಹಿಂದಿ ಬಾಕ್ಸಾಫೀಸ್‌ನಲ್ಲಿ ರಿಷಬ್ ಶೆಟ್ಟಿ ಅಬ್ಬರ: 62 ಕೋಟಿ ರೂ. ಗಳಿಸಿದ ʻಕಾಂತಾರʼ

    ನ್ನಡದ `ಕಾಂತಾರ'(Kantara Film) ಇದೀಗ ದೇಶದ ಮೂಲೆ ಮೂಲೆಯೂ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಅದರಲ್ಲೂ ಬಾಲಿವುಡ್ (Bollywood) ಬಾಕ್ಸಾಫೀಸ್‌ನಲ್ಲಿ `ಕಾಂತಾರ’ ಭರ್ಜರಿ ಬೇಡಿಕೆ ಶುರುವಾಗಿದೆ. ಹಿಂದಿ ಸಿನಿಮಾಗೆ ಸಿಗದ ಮನ್ನಣೆ ಕನ್ನಡ `ಕಾಂತಾರ’ ಚಿತ್ರಕ್ಕೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ಇದೀಗ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

    ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ `ಕಾಂತಾರ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪಂಜುರ್ಲಿ ದೈವದ ಕಥೆಯನ್ನ ಪ್ರೇಕ್ಷಕರ ಮನಸ್ಸಿಗೆ ನಾಟುವ ಹಾಗೇ ಅದ್ಭುತವಾಗಿ ತೆರೆಯ ಮೇಲೆ ತೋರಿಸಿ ಸೈ ಎನಿಸಿಕೊಂಡಿದ್ದಾರೆ. ರಿಷಬ್ ಭಿನ್ನ ಪ್ರಯತ್ನಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಈಗ ಕನ್ನಡದ ಸಿನಿಮಾ `ಕಾಂತಾರ’ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನಾಲ್ಕನೇ ವಾರದತ್ತ ಮುನ್ನುಗ್ಗಿ, ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ:ಸಾನ್ಯ ಮಡಿಲಿನಲ್ಲಿ ತಲೆಯಿಟ್ಟು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ `ಕಾಂತಾರ’ ಚಿತ್ರ ನಾಲ್ಕನೇ ವಾರದಲ್ಲಿ 62.40 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಿಂದಿ ಸಿನಿಮಾಗೆ ಭರ್ಜರಿ ಪೈಪೋಟಿ ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದೆ `ಕಾಂತಾರ’ ಸಿನಿಮಾ.

    ಇನ್ನೂ `ಕಾಂತಾರ’ ಚಿತ್ರದ ವರ್ಲ್ಡ್ ವೈಡ್ ಕಲೆಕ್ಷನ್‌ನಲ್ಲಿಯೂ ಹಿಂದೆ ಬಿದ್ದಿಲ್ಲ. `ಕಾಂತಾರ’ ಒಟ್ಟು 332 ಕೋಟಿ ಬಾಚಿ, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ಸಿನಿಮಾ ನನ್ನದೇ: ರಿಷಬ್ ಸಿನಿಮಾ ಬಗ್ಗೆ ಯಶ್ ಪ್ರತಿಕ್ರಿಯೆ

    `ಕಾಂತಾರ’ ಸಿನಿಮಾ ನನ್ನದೇ: ರಿಷಬ್ ಸಿನಿಮಾ ಬಗ್ಗೆ ಯಶ್ ಪ್ರತಿಕ್ರಿಯೆ

    ರಿಷಬ್ ಶೆಟ್ಟಿ ನಟನೆಯ `ಕಾಂತಾರ'(Kantara Film) ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಹೀಗಿರುವಾಗ ನ್ಯಾಷನಲ್ ಸ್ಟಾರ್ ಯಶ್, ʻಕಾಂತಾರʼ ಸಿನಿಮಾ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡಿದ್ದಾರೆ.

    `ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಕಾಂತಾರ ಸಿನಿಮಾಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗ ನಟ ಯಶ್ ಈಗ `ಕಾಂತಾರ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಯಶ್(Actor Yash) ನೀಡಿದ ಸಂದರ್ಶನದಲ್ಲಿ `ಕಾಂತಾರ’ ಸಿನಿಮಾ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

    `ಕಾಂತಾರ’ ಸಿನಿಮಾ ನನ್ನದೇ. ಕಾಂತಾರ ಕರ್ನಾಟಕದ(Karnataka) ಸಿನಿಮಾ. ನಮ್ಮ ಸಿನಿಮಾಗೆ ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಯಶ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ಗರುಡ ಗಮನ ವೃಷಭ ವಾಹನ’, `ಚಾರ್ಲಿ 777′ ಸಿನಿಮಾಗಳು ಗಡಿ ಮೀರಿ ಚಿತ್ರ ಒಳ್ಳೆಯ ರೀಚ್ ಪಡೆದಿದೆ.

    ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದು ಯಶ್ ಮಾತನಾಡಿದ್ದಾರೆ. ಇನ್ನೂ ನಾನು ಪ್ಯಾನ್ ಇಂಡಿಯಾ ನಟನಾಗಿದ್ದರೂ, ನನಗೆ ಕನ್ನಡವೇ ಮೊದಲು ಎಂದು ಯಶ್ ಈ ವೇಳೆ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ʻಕಾಂತಾರʼ: 50 ಕೋಟಿ ರೂ. ಗಳಿಸಿದ ರಿಷಬ್‌ ಚಿತ್ರ

    ಹಿಂದಿ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ʻಕಾಂತಾರʼ: 50 ಕೋಟಿ ರೂ. ಗಳಿಸಿದ ರಿಷಬ್‌ ಚಿತ್ರ

    ಚಿತ್ರರಂಗದಲ್ಲಿ ಸದ್ಯ ಸಿಕ್ಕಾಪಟ್ಟೆ ಹವಾ ಎಬ್ಬಿಸಿರುವ ಸಿನಿಮಾ `ಕಾಂತಾರ’ (Kantara Film) ಪ್ಯಾನ್ ಇಂಡಿಯಾ ಸಿನಿಮಾವಾಗಿ ಕಮಾಲ್ ಮಾಡುತ್ತಿದೆ. ಇನ್ನೂ ಬಾಲಿವುಡ್‌ನ ಗಲ್ಲಾಪೆಟ್ಟಿಗೆಯಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿ, ಮುನ್ನುಗ್ಗುತ್ತಿದೆ.

    ಬಹುಮುಖ ಪ್ರತಿಭೆಯಿಂದ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishab Shetty) ನಟನೆಯ `ಕಾಂತಾರ’ ಹಿಂದಿ ಬಾಕ್ಸಾಫೀಸ್‌ನಲ್ಲಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿದೆ. ರಿಷಬ್ ನಟನೆ ಮತ್ತು ನಿರ್ದೇಶನಕ್ಕೆ ಬಾಲಿವುಡ್ ಮಂದಿ ಬೋಲ್ಡ್‌  ಆಗಿದ್ದಾರೆ.

    ಇನ್ನೂ `ಕಾಂತಾರ’ ಹಿಂದಿ ವರ್ಷನ್‌ನಲ್ಲಿ ಬಾಹುಬಲಿ 2, ಕೆಜಿಎಫ್ 2, ಆರ್‌ಆರ್‌ಆರ್, 2.0 ಬಾಹುಬಲಿ, `ಪುಷ್ಪ’ ನಂತರ 7ನೇ ಹೈಯೆಸ್ಟ್ ಕಲೆಕ್ಷನ್ ಸಿನಿಮಾವಾಗಿದೆ. ಮೊದಲ ವಾರ ಮತ್ತು ಎರಡನೇ ವಾರದ ಕಲೆಕ್ಷನ್‌ನ ಮೀರಿ ಮೂರನೇ ಭರ್ಜರಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ:ನಟಿ ಪೂಜಾ ಹೆಗ್ಡೆ ಜೊತೆ ಕಿಸ್ ಮಾಡಲಾರೆ: ಖ್ಯಾತ ನಟ ಅಡವಿ ಶೇಷ

    ಹೊಂಬಾಳೆ ಸಂಸ್ಥೆಯ(Hombale Films) `ಕಾಂತಾರ’ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ವಾರ 15 ಕೋಟಿ, 2ನೇ ವಾರ 16.70 ಕೋಟಿ, 3ನೇ ವಾರ 19.95 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟು 51.65 ಕೋಟಿ ಗಳಿಸಿ `ಕಾಂತಾರ’ ಹೊಸ ದಾಖಲೆ ಬರೆದಿದೆ. ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆದು ʻಕಾಂತಾರʼ ಸಿನಿಮಾ ಹಿಂದಿ ವರ್ಷನ್‌ನಲ್ಲಿ ಕಮಾಲ್‌ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಿಲ್ಲದ `ಕಾಂತಾರ’ ಓಟ: 300 ಕೋಟಿ ರೂ. ಕಲೆಕ್ಷನ್‌ನತ್ತ ರಿಷಬ್‌ ಸಿನಿಮಾ

    ನಿಲ್ಲದ `ಕಾಂತಾರ’ ಓಟ: 300 ಕೋಟಿ ರೂ. ಕಲೆಕ್ಷನ್‌ನತ್ತ ರಿಷಬ್‌ ಸಿನಿಮಾ

    ನ್ನಡದ `ಕಾಂತಾರ'(Kantara Film) ಪ್ಯಾನ್ ಇಂಡಿಯಾ ಸಿನಿಮಾವಾಗಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ವಿಶ್ವ ಮಟ್ಟದಲ್ಲಿ `ಕಾಂತಾರ’ ಸಿನಿಮಾ ಇದೀಗ ಒಟ್ಟು 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ರಿಷಬ್(Rishab Shetty) ಸಿನಿಮಾಗೆ ಬ್ರೇಕ್ ಇಲ್ಲದೇ ಓಡುತ್ತಿದೆ.

    ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ(Kantara Film) ಗಡಿ ಮೀರಿ ಅದ್ಬುತ ಪ್ರದರ್ಶನ ಕಾಣುತ್ತಿದೆ. ಸೆ.30ರಂದು ಕಾಂತಾರ ಸಿನಿಮಾ ರಿಲೀಸ್ ಆಗಿತ್ತು. ಚಿತ್ರ ರಿಲೀಸ್ ಆಗಿ, ಹಲವು ವಾರಗಳು ಕಳೆದರೂ ಚಿತ್ರದ ಓಟ ನಿಲ್ಲುತ್ತಿಲ್ಲ. ದೈವದ ಶಕ್ತಿಯನ್ನ ತೆರೆಯ ಮೇಲೆ ತೋರಿಸಿ, ನಟಿಸಿ ರಿಷಬ್ ಶೆಟ್ಟಿ ಗೆದ್ದು ಬೀಗಿದ್ದಾರೆ. ಈಗ ಈ ಚಿತ್ರ ವಿಶ್ವ ಮಟ್ಟದಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಕಂಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ:ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ

    ಹಿಂದಿಯಲ್ಲಿ ಕಾಂತಾರ 50 ಕೋಟಿ ರೂ, ಕನ್ನಡದಲ್ಲಿ ನೂರಾರು ಕೋಟಿ, ಜೊತೆಗೆ ತೆಲುಗು ತಮಿಳುನಲ್ಲಿಯೂ ಕಲೆಕ್ಷನ್ ವಿಷ್ಯದಲ್ಲಿ ಚಿತ್ರ ಮುಂದಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ಒಟ್ಟು 300 ಕೋಟಿ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿದೆ.

    ಇನ್ನೂ `ಕಾಂತಾರ’ ಮಾಡಿ, ಗೆದ್ದಿರುವ ರಿಷಬ್ ಶೆಟ್ಟಿಯ ಮುಂದಿನ ಸಿನಿಮಾ ಬಗ್ಗೆ ಫ್ಯಾನ್ಸ್ ಕಾಯ್ತಿದ್ದಾರೆ. ಕಾಂತಾರ 2ಗಾಗಿ ಅಭಿಮಾನಿಗಳು ಡಿಮ್ಯಾಂಡ್ ಮಾಡ್ತಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ ಪಾರ್ಟ್ ಬಗ್ಗೆ ಸೂಚನೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಹುಬಲಿ 2 ಸಿನಿಮಾಗೆ ಸೆಡ್ಡು ಹೊಡೆದ `ಕಾಂತಾರ’

    ಬಾಹುಬಲಿ 2 ಸಿನಿಮಾಗೆ ಸೆಡ್ಡು ಹೊಡೆದ `ಕಾಂತಾರ’

    ಚಿತ್ರರಂಗದಲ್ಲಿ `ಕಾಂತಾರ'(Kantara Film) ಪರ್ವ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕಾಂತಾರ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇದೀಗ `ಬಾಹುಬಲಿ 2′ (Bahubali 2) ಚಿತ್ರದ ಕಲೆಕ್ಷನ್ ಮೀರಿಸಿ ಕಾಂತಾರ ಚಿತ್ರ ಗೆದ್ದಿದೆ.

    ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿರುವ `ಕಾಂತಾರ’ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡದ ಕಾಂತಾರ ಇದೀಗ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಿರ ಮಿರ ಅಂತಾ ಮಿಂಚುತ್ತಿದೆ. ಸದ್ಯ `ಬಾಹುಬಲಿ 2′(Bahubali 2) ಈ ಹಿಂದೆ ಮಾಡಿರುವ ದಾಖಲೆಯನ್ನ `ಕಾಂತಾರ’ ಉಡೀಸ್ ಮಾಡಿದೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    `ಬಾಹುಬಲಿ 2′ 5ನೇ ವಾರಾಂತ್ಯದಲ್ಲಿ 23.30 ಕೋಟಿ ಗಳಿಸಿತ್ತು. ಆದರೆ ಕಾಂತಾರ 5ನೇ ವಾರಕ್ಕೆ 36 ಕೋಟಿ ಕಲೆಕ್ಷನ್ ಮಾಡಿದೆ. ಪ್ರಭಾಸ್ ಚಿತ್ರಕ್ಕೆ ರಿಷಬ್ ಶೆಟ್ಟಿ ಸೆಡ್ಡು ಹೊಡೆದು ಮುನ್ನುಗ್ಗುತ್ತಿದ್ದಾರೆ.

    ಇನ್ನೂ `ಕಾಂತಾರ’ ಚಿತ್ರದ ಕಲೆಕ್ಷನ್‌ಗೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಒಟ್ಟು 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಗಲ್ಲಾಪೆಟ್ಟಿಗೆ ಸಿನಿಮಾ ಹೊಸ ದಾಖಲೆ ಬರೆದಿದೆ.

    Live Tv
    [brid partner=56869869 player=32851 video=960834 autoplay=true]

  • ʻಕಾಂತಾರʼ ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣಗೆ ನೆಟ್ಟಿಗರಿಂದ ಕ್ಲಾಸ್

    ʻಕಾಂತಾರʼ ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣಗೆ ನೆಟ್ಟಿಗರಿಂದ ಕ್ಲಾಸ್

    ಕ್ಕಿ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಸದಾ ಒಂದಲ್ಲಾ ಒಂದು ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ʻಕಾಂತಾರʼ ಚಿತ್ರ ನೋಡಿಲ್ಲ ಎಂದಿರುವ ರಶ್ಮಿಕಾ, ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ನಟಿಯ ಉಡಾಫೆಯ ಉತ್ತರಕ್ಕೆ ನೆಟ್ಟಿಗರು ಖಡಕ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ರಿಷಬ್ ಶೆಟ್ಟಿ(Rishab Shetty) ನಿರ್ದೇಶನದ ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ನಟನಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಇದೀಗ ಸೌತ್ ಮತ್ತು ಬಾಲಿವುಡ್‌ನಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಇನ್ನೂ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕ ರಶ್ಮಿಕಾ ಮಂದಣ್ಣಗೆ ಪಾಪರಾಜಿಗಳು `ಕಾಂತಾರ'(Kantara Film) ಚಿತ್ರ ನೋಡಿದ್ರಾ ಅಂತಾ ಕೇಳಿದ್ದಾರೆ. ಇದನ್ನೂ ಓದಿ:ದಆಮೀರ್‌ ಖಾನ್‌ ತಾಯಿಗೆ ಹೃದಯಾಘಾತ

    ದೇಶವೇ ಮೆಚ್ಚಿರುವ `ಕಾಂತಾರ’ ಸಿನಿಮಾವನ್ನ ರಶ್ಮಿಕಾ ನೋಡಿಲ್ಲ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ನಾನಿನ್ನೂ ಸಿನಿಮಾ ನೋಡಿಲ್ಲ. ಆದರೆ ನೋಡುತ್ತೇನೆ. ಬೆಂಗಳೂರಿಗೆ ಹಿಂದಿರುಗಿದ ಮೇಲೆ ವೀಕ್ಷಿಸುತ್ತೇನೆ ಎಂದು ಸಬೂಬಿನ ಉತ್ತರ ನೀಡಿದ್ದಾರೆ.

    `ಕಾಂತಾರ’ ಸಿನಿಮಾ ನೋಡಿ ಪರಭಾಷೆಯ ಸೂಪರ್ ಸ್ಟಾರ್‌ಗಳೇ ಹಾಡಿ ಹೊಗಳುತ್ತಿರುವಾಗ ಕನ್ನಡದವರೇ ಆಗಿರುವ ರಶ್ಮಿಕಾ ಇನ್ನೂ ಸಿನಿಮಾ ನೋಡದೇ ಇರುವುದು ಕನ್ನಡಿಗರನ್ನ ಕೆರಳಿಸಿದೆ. ತಮ್ಮ ಮೊದಲ ಸಿನಿಮಾ ನಿರ್ದೇಶಕನ ಚಿತ್ರ ಹೇಗಿದೆ ಎಂದು ಹೇಳುವ ನಿಯತ್ತು ಕೂಡ ಇಲ್ವಾ ಎಂದು ಫ್ಯಾನ್ಸ್ ರಶ್ಮಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ಸಕ್ಸಸ್ ನಂತರ ರಿಷಬ್ ಶೆಟ್ಟಿ ಟೆಂಪಲ್ ರನ್

    `ಕಾಂತಾರ’ ಸಕ್ಸಸ್ ನಂತರ ರಿಷಬ್ ಶೆಟ್ಟಿ ಟೆಂಪಲ್ ರನ್

    ನ್ನಡ ಚಿತ್ರರಂಗಕ್ಕೆ ಶುಕ್ರದೆಸೆ ಶುರುವಾಗಿದೆ. ಅದರಲ್ಲೂ ನಟ ರಿಷಬ್ ಶೆಟ್ಟಿಗೆ(Rishab shetty) `ಕಾಂತಾರ'(Kantara Film) ಸಕ್ಸಸ್ ನಂತರ ಅದೃಷ್ಟ ಖುಲಾಯಿಸಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನ ಭೇಟಿಯಾದ ಬೆನ್ನಲ್ಲೇ ಇದೀಗ ಸಿದ್ಧಿವಿನಾಯಕ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ಭೇಟಿ ಕೊಟ್ಟಿದ್ದಾರೆ.

    ಚಿತ್ರ ಜಗತ್ತಿನಲ್ಲಿ `ಕಾಂತಾರ’ ಕ್ರಾಂತಿ ಜೋರಾಗಿದೆ. `ಕಾಂತಾರ’ ಸಿನಿಮಾ ನೋಡಿದ ಪ್ರತಿಯೊಬ್ಬರು ರಿಷಬ್‌ಗೆ ಜೈಕಾರ ಹಾಕುತ್ತಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮುಂಬೈನಲ್ಲಿ(Mumbai) ಬೀಡು ಬಿಟ್ಟಿದ್ದು, ಅಲ್ಲಿನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಾಪರಾಜಿಗಳ ಕಣ್ಣಿಗೆ ಬಿದ್ದಿರುವ ರಿಷಬ್, ಫೋಟೋಗಳನ್ನ ಕ್ಲಿಕ್ಕಿಸಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ರಿಷಬ್ ಶೆಟ್ಟಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡ ಸೂಪರ್ ಸ್ಟಾರ್ ರಜನಿ

    ದೈವ ಕಥೆಯನ್ನ ತೆರೆಯ ಮೇಲೆ ಅಚ್ಚುಕಟ್ಟಾಗಿ ತೋರಿಸಿರುವ ರಿಷಬ್ ಕಲೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. `ಕಾಂತಾರ’ ಪಾರ್ಟ್ 2(Kantara 2 Film) ಬರುವ ಬಗ್ಗೆ ಸೂಚನೆ ನೀಡಿರುವ ರಿಷಬ್ ಶೆಟ್ಟಿ ಅವರ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    ಈಗಾಗಲೇ `ಕಾಂತಾರ’ ಸಿನಿಮಾ ಒಟ್ಟು 200 ಕೋಟಿ ಅಧಿಕ ಹಣವನ್ನು ಗಳಿಸಿದೆ. ಈ ಚಿತ್ರದಿಂದ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಮುಂದಿನ ನಡೆಯೇನು ಎಂಬುದರ ಬಗ್ಗೆ ಸಿನಿರಸಿಕರಿಗೆ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ನೋಡಿ ರಿಷಬ್‌ಗೆ ಹ್ಯಾಟ್ಸ್ ಆಫ್ ಎಂದ ವಿವೇಕ್ ಅಗ್ನಿಹೋತ್ರಿ

    `ಕಾಂತಾರ’ ನೋಡಿ ರಿಷಬ್‌ಗೆ ಹ್ಯಾಟ್ಸ್ ಆಫ್ ಎಂದ ವಿವೇಕ್ ಅಗ್ನಿಹೋತ್ರಿ

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ `ಕಾಂತಾರ’ (Kantara Film) ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ರಾರಾಜಿಸುತ್ತಿದೆ. ಇದೀಗ `ದಿ ಕಾಶ್ಮೀರ್ ಫೈಲ್ಸ್’ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ `ಕಾಂತಾರ’ ಸಿನಿಮಾ ನೋಡಿ, ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    90ರ ದಶಕದ ಕಾಶ್ಮೀರಿ ಪಂಡಿತರ ಕಥೆಯನ್ನ ತೆರೆಯ ಮೇಲೆ ತೋರಿಸಿ, ಅಪಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ `ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ `ಕಾಂತಾರ’ ಚಿತ್ರವನ್ನು ನೋಡಿ ಹೊಗಳಿದ್ದಾರೆ. ರಿಷಬ್ ಶೆಟ್ಟಿಯ (Rishab Shetty) ಬೆನ್ನು ತಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

    `ಕಾಂತಾರ’ ಸಿನಿಮಾ ನೋಡಿ ಬಂದೆ. ಇದೊಂದು ಅದ್ಭುತ ಅನುಭವ ಕೊಟ್ಟ ಚಿತ್ರ. ಈ ರೀತಿಯ ಚಿತ್ರವನ್ನು ನೀವು ನೋಡಿರುವುದಿಲ್ಲ. ನಾನಂತೂ ಈ ರೀತಿಯ ಸಿನಿಮಾವನ್ನು ನೋಡಿರಲಿಲ್ಲ. ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್. ರಿಷಬ್ ನೀವು ಅದ್ಭುತ ಕೆಲಸ ಮಾಡಿದ್ದೀರಿ. ನಾನು ನಿಮಗೆ ಕರೆ ಮಾಡಿ ಮಾತನಾಡುತ್ತೇನೆ. ಇದನ್ನೂ ಓದಿ:ಚೇತನ್ ಹೇಳಿಕೆ ಬಗ್ಗೆ ಏನೂ ಹೇಳಲ್ಲ: ರಿಷಬ್ ಶೆಟ್ಟಿ

    ನನ್ನ ಅನುಭವವನ್ನು ಹಂಚಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಕಲೆ, ಜಾನಪದ ವಿಚಾರಗಳು ಸಿನಿಮಾದಲ್ಲಿ ಅಡಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ನಿಮ್ಮ ಬಳಿ ಇರುವುದು ಅದೆಂತಹ ಎನರ್ಜಿ. ನಾನು ಈವರೆಗೆ ನೋಡಿಲ್ಲ. ರಿಷಬ್ ಶೆಟ್ಟಿ ಮಾಡಿದ ಮಾಸ್ಟರ್‌ಪೀಸ್ ಈ ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹಾಡಿ ಹೊಗಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಚಾರ,  ನಂಬಿಕೆ, ತಲೆಮಾರು, ಧರ್ಮ ಇವುಗಳ ಬಗ್ಗೆ ಮಾತಾಡೋ ಅರ್ಹತೆ ನನಗಿಲ್ಲ ಅನಿಸತ್ತೆ: ರಿಷಬ್‌ ಶೆಟ್ಟಿ

    ಆಚಾರ, ನಂಬಿಕೆ, ತಲೆಮಾರು, ಧರ್ಮ ಇವುಗಳ ಬಗ್ಗೆ ಮಾತಾಡೋ ಅರ್ಹತೆ ನನಗಿಲ್ಲ ಅನಿಸತ್ತೆ: ರಿಷಬ್‌ ಶೆಟ್ಟಿ

    ದೇಶದ ದಶದಿಕ್ಕುಗಳಲ್ಲೂ ಸೌಂಡ್ ಮಾಡುತ್ತಿರುವ `ಕಾಂತಾರ’ (Kantara Film) ಸಿನಿಮಾಗೆ ಇತ್ತೀಚೆಗೆ ನಟ ಚೇತನ್(Chetan) ಭೂತಾಕೋಲದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಕ್ಕೆ ರಿಷಬ್ ಕೂಡ ನೋ ಕಾಮೆಂಟ್ಸ್ ಅಂತಾ ಉತ್ತರಿಸಿದ್ದರು. ಮತ್ತೆ ರಿಷಬ್‌ಗೆ ಚೇತನ್ ಟಾಂಗ್ ಕೊಟ್ಟಿದ್ದರು. ಈ ವಿಷ್ಯವಾಗಿ ರಿಷಬ್ ಶೆಟ್ಟಿ ರಿಯಾಕ್ಷನ್ ಕೊಟ್ಟಿದ್ದಾರೆ.

    ದೈವ ಕೋಲದ ಕಥೆಗೆ ಇಡೀ ಚಿತ್ರರಂಗವೇ ತಲೆಬಾಗಿದೆ. ಸಿನಿಮಾ ನೋಡಿ ಎಲ್ಲರೂ ತಮ್ಮ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹೀಗಿರುವಾಗ ಭೂತಕೋಲ ಹೀಂದೂ ಸಂಸ್ಕೃತಿಯಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ, ತುಳುನಾಡಿನ ದೈವ ನಂಬುವವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೆ ರಿಷಬ್(Rishab Shetty) ಅವರನ್ನ ಚೇತನ್ ಕೆಣಕಿದ್ದಾರೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    `ಕಾಂತಾರ'(Kantara Film) ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಇದೀಗ ಚೇತನ್ ಹೇಳಿಕೆ ನಟ ಪ್ರತಿಯುತ್ತರ ನೀಡಿದ್ದಾರೆ. ಚೇತನ್ ಹೇಳಿಕೆಗೆ ಬಗ್ಗೆ ನಾನು ಏನು ಹೇಳಲ್ಲ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಚೇತನ್ ಮಾತಿಗೆ ಯಾವುದೇ ರಿಯಾಕ್ಷನ್ ಕೊಡುವುದಿಲ್ಲ ಎಂದು ಮಾತನಾಡಿದ್ದಾರೆ.

    ಈ ಬಗ್ಗೆ ನಾನೇನೂ ಕಾಮೆಂಟ್‌ ಮಾಡಲ್ಲ. ಅವರವರ ಅಭಿಪ್ರಾಯವನ್ನು ತಿಳಿಸುತ್ತಾರೆ. ಈ ಆಚರಣೆ , ನಂಬಿಕೆ ತಲೆಮಾರು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದರ ಬಗ್ಗೆ ಮಾತಾಡೋಕೆ ನನಗೆ ಅರ್ಹತೆ ಇಲ್ಲ. ದೈವ ನರ್ತಕರು ಹಾಗೂ ಅದನ್ನು ಪಾಲಿಸಿಕೊಂಡು ಹೋಗುವವರಿಗೆ ಮಾತ್ರ ಈ ಬಗ್ಗೆ ಮಾತನಾಡುವುದಕ್ಕೆ ಅರ್ಹತೆ ಇರುವುದು. ಅವರುಗಳು ಈಗಾಗಲೇ ಮಾತಾಡಿದ್ದಾರೆ. . ಹೀಗಾಗಿ ಈ ಬಗ್ಗೆ ನಾನು ಹೆಚ್ಚೇನು ಕಾಮೆಂಟ್‌ ಮಾಡಲ್ಲ ಎಂದು ರಿಷಬ್‌ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ಸಕ್ಸಸ್ ನಂತರ ಚಿರಂಜೀವಿ ಅಳಿಯನ ಚಿತ್ರಕ್ಕೆ ಅಜನೀಶ್ ಸಂಗೀತ

    `ಕಾಂತಾರ’ ಸಕ್ಸಸ್ ನಂತರ ಚಿರಂಜೀವಿ ಅಳಿಯನ ಚಿತ್ರಕ್ಕೆ ಅಜನೀಶ್ ಸಂಗೀತ

    ಚಿತ್ರರಂಗದಲ್ಲಿ `ಕಾಂತಾರ’ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ. ಸಿನಿಮಾ ಕಥೆ ಮಾತ್ರವಲ್ಲ. ಚಿತ್ರದ ಸಾಂಗ್ಸ್ ಕೂಡ ಸೂಪರ್ ಹಿಟ್ ಆಗಿದೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದ ಅಜನೀಶ್ ಲೋಕನಾಥ್‌ಗೂ ಭರ್ಜರಿ ಆಫರ್ಸ್‌ ಅರಸಿ ಬರುತ್ತಿದೆ. ಮೆಗಾಸ್ಟಾರ್ ಕುಟುಂಬದ ಸ್ಟಾರ್ ನಟನ ಸಿನಿಮಾಗೆ ಅಜನೀಶ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

    `ಕಾಂತಾರ’ ಚಿತ್ರದಲ್ಲಿ ಕಥೆಯಷ್ಟೇ ಅಲ್ಲ, ಹಾಡಿನ ಮೇಲೂ ಫ್ಯಾನ್ಸ್ ಸಿಕ್ಕಾಪಟ್ಟೆ ಕ್ರೇಜ್ ಇದೆ. ಪ್ರಮೋದ್ ಮರವಂತೆ ಬರೆದಿರುವ `ಸಿಂಗಾರ ಸಿರಿಯೇ’ ಸಾಹಿತ್ಯಕ್ಕೆ ಅಜನೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. `ವರಾಹ ರೂಪಂ’ ಸಾಂಗ್ ಬಿಗ್ ಹಿಟ್ ಆಗಿದೆ. ಈ ಸಕ್ಸಸ್ ಬೆನ್ನಲ್ಲೇ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ಗೆ ತೆಲುಗಿನಿಂದ ಬುಲಾವ್ ಬಂದಿದೆ. ತೆಲುಗಿನಲ್ಲಿ ತೆರೆಕಂಡ ʻಕಿರಿಕ್ ಪಾರ್ಟಿʼ ಚಿತ್ರಕ್ಕೆ ಅಜನೀಶ್ ಸಂಗೀತ ನಿರ್ದೇಶನ ಮಾಡಿದ್ದರು. ಇದೀಗ ಮತ್ತೆ ಮೆಗಾಸ್ಟಾರ್ ಕುಟುಂಬದ ಕುಡಿ ಸಾಯಿ ಧರ್ಮ್ ತೇಜ್‌ ಮುಂಬರುವ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ಮತ್ತೆ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್

    ಮೆಗಾಸ್ಟಾರ್ ಚಿರಂಜೀವಿ ಅಳಿಯ ಸಾಯಿ ಧರ್ಮ್ ತೇಜ್ ಮುಂದಿನ ಪ್ರಾಜೆಕ್ಟ್‌ಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಂಪ್ಲೀಟ್ ಅಪ್‌ಡೇಟ್‌ವೊಂದಿಗೆ ಅಧಿಕೃತವಾಗಿ ತಿಳಿಸುವುದಾಗಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]