`ಕಾಂತಾರ’ (Kantara Film) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty) ಸದ್ಯ ಮುಂಬೈಗೆ ಹಾರಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಮನೆ ಮುಂದೆ ಜಮಾಯಿಸಿದ ಜನಸಾಗರ ನೋಡಿ ರಿಷಬ್ ಅಚ್ಚರಿಪಟ್ಟಿದ್ದಾರೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಚಿತ್ರದ ಸಕ್ಸಸ್ ನಂತರ ಸಾಕಷ್ಟು ಕಡೆ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.
`ಕಾಂತಾರ’ ಚಿತ್ರದ ರಿಲೀಸ್ ಬಳಿಕ ಮುಂಬೈನಲ್ಲಿ ಸಾಕಷ್ಟು ಕಡೆ ಸಂದರ್ಶನ ನೀಡಿದ್ದು, ಈ ವೇಳೆ ಶಾರುಖ್ ಮನೆ ಮುಂದೆ ಜನಸಾಗರ ನೋಡಿ ಅಚ್ಚರಿಪಟ್ಟಿದ್ದೆ ಎಂದಿದ್ದಾರೆ. ಇಲ್ಲಿ ಯಾಕೆ ಇಷ್ಟು ಜನ ಸೇರಿದ್ದಾರೆ ಎಂದು ಸಂದರ್ಶಕನನ್ನು ಈ ಬಗ್ಗೆ ಕೇಳಿದಾಗ, ಇದು ಶಾರುಖ್ ಅವರ ಮನ್ನತ್ ಬಂಗಲೆ ಎಂದು ಉತ್ತರಿಸಿದ್ದಾರೆ. ಬಾದಷಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ದಂಡೇ ಜಮಾಯಿಸಿತ್ತು. ಶಾರುಖ್ ಅವರ ಅಭಿಮಾನಿಗಳ ಅಭಿಮಾನ ಕಂಡು ಅಚ್ಚರಿಪಟ್ಟಿದ್ದೆ ಎಂದು ರಿಷಬ್ ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ (Rishab Shetty) ಅಭಿನಯದ `ಕಾಂತಾರ’ (Kantara Film) ಈ ಶುಕ್ರವಾರಕ್ಕೆ 50 ದಿನಗಳನ್ನ ಪೂರೈಸಲಿದೆ. ನವರಾತ್ರಿ ಸಮಯದಲ್ಲಿ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿ 50ನೇ ದಿನಕ್ಕೆ ಕಾಲಿಡುತ್ತಿರುವ ಸಮಯದಲ್ಲೇ ಈ ಚಿತ್ರ ಥಿಯೇಟರ್‌ನಿಂದ ಎತ್ತಂಗಡಿ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಪ್ರಜ್ವಲ್ ದೇವರಾಜ್ (Prajwal Devraj) ನಟನೆಯ `ಅಬ್ಬರ’ ಚಿತ್ರ ಈ ಶುಕ್ರವಾರ(ನ.28) ತೆರೆಗೆ ಬರಲಿದೆ. ʻಕಾಂತಾರʼ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್‌ನಲ್ಲಿ ಈ ಚಿತ್ರ ರಿಲೀಸ್ ಆಗಲಿರುವುದರಿಂದ ಕಾಂತಾರದ ಕಲೆಕ್ಷನ್ ಓಟಕ್ಕೆ ಬ್ರೇಕ್ ಬೀಳಲಿದೆ. ಇದನ್ನೂ ಓದಿ:ಉರ್ಫಿ ಜಾವೇದ್ ಮೇಲೆ ದೂರುಗಳ ಸುರಿಮಳೆ : ಗೌರಮ್ಮ ಆಗಿ ಬದಲಾದ ನಟಿ
ಈ ಹಿಂದೆ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ ಮುಖ್ಯ(Santhosh Theatre) ಚಿತ್ರಮಂದಿರದಲ್ಲಿ ಕೊರೊನಾ ನಂತರ ರಿಲೀಸ್ ಆದ ಯಾವ ಚಿತ್ರವು 25 ದಿನಗಳನ್ನ ಪೂರೈಸಿರಲಿಲ್ಲ. ಈಗ ಕಾಂತಾರ 50 ದಿನ ಪೂರೈಸುವತ್ತ ಹೆಜ್ಜೆ ಇಟ್ಟಿತ್ತು. ಆದರೆ ಪ್ರಜ್ವಲ್ ದೇವರಾಜ್ ನಟನೆಯ ʻಅಬ್ಬರʼ ಚಿತ್ರ ಬರುತ್ತಿರುವ ಕಾರಣ, ಕಾಂತಾರ ಓಟಕ್ಕೆ ಬ್ರೇಕ್ ಬಿದ್ದಿದೆ. ಕಾಂತಾರದ ಮಹತ್ತರ ದಾಖಲೆಗೆ ಅಡ್ಡಿಯಾಗಿದೆ.
ಈಗಾಗಲೇ ಅಬ್ಬರ ಚಿತ್ರಕ್ಕೆ ಮುಂಚಿತವಾಗಿ ಮುಂಗಡ ಬುಕ್ಕಿಂಗ್ ಕೂಡ ತೆರೆಯಲಾಗಿದೆ. ಸಂತೋಷ ಚಿತ್ರಮಂದಿರವನ್ನ ಮುಖ್ಯ ಚಿತ್ರಮಂದಿರ ಎಂದು ಘೋಷಿಸಿರುವ ಕಾರಣ ಹೊಸ ಸಿನಿಮಾ ಪ್ರದರ್ಶನವಾಗುತ್ತಿದೆ.
ಹದಿನಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕಾಂತಾರ 380 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ನಿರ್ಮಾಪಕರ ಜೇಬು ತುಂಬಿಸಿದೆ. ಆದರೆ ಈ ವಾರ ʼಅಬ್ಬರʼದ ಜೊತೆ ಹಲವು ಚಿತ್ರಗಳು ಬಿಡುಗಡೆಯಾಗಲಿರುವುದರಿಂದ ಕಾಂತಾರ ಕಲೆಕ್ಷನ್ ಕಡಿಮೆಯಾಗುವ ಸಾಧ್ಯತೆಯಿದೆ.
ದೈವದ ಕಥೆಗೆ ಪರಭಾಷಾ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಕಾಂತಾರ ವರ್ಲ್ಡ್ ವೈಡ್ 400 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಮುನ್ನುಗ್ಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಒಂದು, ಎರಡು ವಾರಗಳ ಕಾಲ ಥಿಯೇಟರ್‌ನಲ್ಲಿ ಓಡುವುದು ಅಪರೂಪ. ಪ್ರತಿ ವಾರ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದರೂ ಕಾಂತಾರ ಕನ್ನಡ ಅಲ್ಲದೇ ಬೇರೆ ಭಾಷೆಗಳಲ್ಲಿ ಭಾರತ ಅಲ್ಲದೇ ವಿದೇಶದಲ್ಲೂ ಕಮಾಲ್ ಮಾಡುತ್ತಿದೆ.
Live Tv
[brid partner=56869869 player=32851 video=960834 autoplay=true]
ಕನ್ನಡದ `ಕಾಂತಾರ’ದ(Kantara) ಕಂಪು ಗಡಿ ದಾಟಿ ಸಿಕ್ಕಾಪಟ್ಟೆ ಹೈಪ್ ಕ್ರಿಯೆಟ್ ಮಾಡಿದೆ. `ಕಾಂತಾರ’ ಪರಭಾಷೆಗಳಲ್ಲೂ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬೀಳದೇ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಸದ್ಯ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ(Hindi Box Office) 100 ಕೋಟಿ ರೂ. ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ.
ದಿನದಿಂದ ದಿನಕ್ಕೆ `ಕಾಂತಾರ’ ಚಿತ್ರದ ಮೇಲಿನ ಕ್ರೇಜ್ ಜಾಸ್ತಿ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲೂ `ಕಾಂತಾರ’ ಸೂಪರ್ ಸಕ್ಸಸ್ ಕಾಣುತ್ತಿದೆ. ವರ್ಲ್ಡ್ ವೈಡ್ ಕಲೆಕ್ಷನ್ 400 ಕೋಟಿಯತ್ತ ಮುನ್ನುಗ್ಗುತ್ತಿರುವಾಗ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಕಾಂತಾರ 100 ಕೋಟಿ ರೂ. ಕಲೆಕ್ಷನ್ ಮಾಡುವತ್ತ ಸಿನಿಮಾ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ `ಕಾಂತಾರ’ ನಟಿ ಸಪ್ತಮಿ ಭೇಟಿ
ಈಗಾಲೇ 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ರಿಷಬ್ ಸಿನಿಮಾ ಈಗ ರಿಲೀಸ್ ಆಗಿರುವ ಬಿಗ್ ಬಿ(Big B) ನಟನೆಯ `ಉಂಚೈ’ ಚಿತ್ರಕ್ಕೂ ಸೆಡ್ಡು ಹೊಡೆದು `ಕಾಂತಾರ’ ಸಿನಿಮಾ ಮುನ್ನುಗ್ಗುತ್ತಿದೆ. ಇನ್ನೂ 100 ಕೋಟಿ ರೂ. ಕಲೆಕ್ಷನ್ ಮಾಡುವುದರಲ್ಲಿ ಡೌಟೇಯಿಲ್ಲ ಅಂತಿದ್ದಾರೆ ಸಿನಿಪಂಡಿತರು.
Live Tv
[brid partner=56869869 player=32851 video=960834 autoplay=true]
`ಕಾಂತಾರ'(Kantara) ಸೂಪರ್ ಸಕ್ಸಸ್ ನಂತರ ನಾಯಕಿ ಸಪ್ತಮಿ ಗೌಡ ಕೂಡ ಫುಲ್ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾದ ಸ್ಟಾರ್ ನಾಯಕಿಯಾಗಿ ಮಿಂಚ್ತಿರುವ ಸಪ್ತಮಿ(Saptami Gowda) ಇದೀಗ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತಾಯಿ ಜೊತೆ ಭೇಟಿ ನೀಡಿದ್ದಾರೆ.
ಕನ್ನಡದ `ಕಾಂತಾರ’ ಈಗ ಗಡಿ ದಾಟಿ ಸೂಪರ್ ಸಕ್ಸಸ್ ಕಂಡಿದೆ. ಕಾಂತಾರ ಚಿತ್ರದ ಪ್ರತಿ ಕಲಾವಿದರಿಗೂ ಈಗ ಬೇಡಿಕೆ ಜಾಸ್ತಿಯಾಗಿದೆ. ಅದರಂತೆ ಚಿತ್ರದ ನಾಯಕಿ ಸಪ್ತಮಿ ಗೌಡ ಅವರಿಗೂ ಕೂಡ. ಚಿತ್ರದ ಸಕ್ಸಸ್ ನಂತರ ದೈವಿ ಕ್ಷೇತ್ರಗಳಿಗೆ ನಟಿ ಭೇಟಿ ನೀಡುತ್ತಿದ್ದಾರೆ. ಕೊರಗಜ್ಜ, ಗುಳಿಗ ಸನ್ನಿಧಿಗೆ ಭೇಟಿಯ ನಂತರ ಇದೀಗ ಕಟೀಲು ದರ್ಗಾ ಪರಮೇಶ್ವರಿ(Kateel Durga Parameshwari Temple) ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ.
ಈ ವೇಳೆ ಸಪ್ತಮಿ ತನ್ನ ತಾಯಿ ಜೊತೆ, ಕಟೀಲು ದುರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರ ವಿಶೇಷ ವಸ್ತ್ರ ನೀಡಿ, ದವಳದ ಅರ್ಚಕರು ಗೌರವಿಸಿದ್ದಾರೆ. ಹಾಗೆಯೇ ಮಾಧ್ಯಮಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದ ಅಮಿತಾಭ್ ಬಚ್ಚನ್
ʻಕಾಂತಾರʼ ಚಿತ್ರದ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ. ತುಳುನಾಡಿನ ದೈವರಾಧನೆ ಬಗ್ಗೆ ಮೊದಲು ನನಗೆ ತಿಳಿದಿರಲಿಲ್ಲ. ಕಾಂತಾರ ಚಿತ್ರೀಕರಣದ ವೇಳೆ ಈ ಬಗ್ಗೆ ತಿಳಿದುಕೊಂಡೆ. ಇನ್ನೂ ಬೇರೆ ಬೇರೇ ಸಿನಿಮಾಗಳ ಮಾತುಕಥೆ ನಡೆಯುತ್ತಿದೆ. ಇನ್ನೂ ತುಳು ಭಾಷೆಯಲ್ಲೂ ನಟಿಸಲು ಅವಕಾಶ ಸಿಕ್ಕರೆ ಖಂಡಿತಾ ನಟಿಸುವೆ ಎಂದು ಸಪ್ತಮಿ ಮಾತನಾಡಿದ್ದಾರೆ. ಅಭಿಮಾನಿಗಳು ಈ ವೇಳೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ(Rishab Shetty) ನಿರ್ದೇಶಿಸಿ, ನಟಿಸಿರುವ `ಕಾಂತಾರ'(Kantara Film) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. `ಕಾಂತಾರ’ ಕನ್ನಡದಲ್ಲಿ ಕಮಾಲ್ ಮಾಡಿದ ಬೆನ್ನಲ್ಲೇ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಡಬ್ ಆಗಿ ತೆರೆಕಂಡಿತ್ತು. ಇದೀಗ ತುಳು ಭಾಷೆಯಲ್ಲೂ ಡಬ್ ಆಗಲಿದೆ. ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ `ಕಾಂತಾರ’ ಸೂಪರ್ ಸಕ್ಸಸ್ ಖುಷಿಯಲ್ಲಿದ್ದಾರೆ. ಕನ್ನಡದ `ಕಾಂತಾರ'(Kantara Film) ಕಂಪು ಪಸರಿಸಿದ ಮೇಲೆ ಬಹುಭಾಷೆಯಲ್ಲಿ ಡಬ್ ಆಗಿ ರಿಲೀಸ್ ಬಳಿಕ ಗಲ್ಲಾಪೆಟ್ಟಿಗೆ ಕೋಟಿಗಟ್ಟಲ್ಲೇ ಕಲೆಕ್ಷನ್ ಮಾಡಿತ್ತು. ದೈವದ ಕಥೆಯಾಗಿರುವ `ಕಾಂತಾರ’ ತುಳುವಿನಲ್ಲಿಯೂ ತೆರೆ ಕಾಣುತ್ತಿದೆ. ಇದನ್ನೂ ಓದಿ:ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ
ಹೊಂಬಾಳೆ ಬ್ಯಾನರ್‌ನ `ಕಾಂತಾರ’ ಸಿನಿಮಾ ತುಳು ಭಾಷೆಯಲ್ಲೂ ಕೂಡ ಡಬ್ ಆಗಲಿದೆ. ಈಗಾಗಲೇ ಡಬ್ಬಿಂಗ್ ಪ್ರಕ್ರಿಯೆ ಕೂಡ ಶುರುವಾಗಿದೆ. ಸೆನ್ಸಾರ್ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ `ಕಾಂತಾರ’ ತುಳುವಿನಲ್ಲಿ ತೆರೆ ಕಾಣಲಿದೆ.
ಇನ್ನೂ `ಕಾಂತಾರ’ ದೇಶದ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ವರ್ಲ್ಡ್ ವೈಡ್ ಕಲೆಕ್ಷನ್ 367 ಕೋಟಿ ರೂ. ಕಲೆಕ್ಷನ್ ಮಾಡಿ 400 ಕೋಟಿ ರೂ. ಕಲೆಕ್ಷನ್ ಮಾಡುತ್ತ ರಿಷಬ್ ಶೆಟ್ಟಿ ಸಿನಿಮಾ ಮುನ್ನುಗ್ಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡುತ್ತಿರುವ ಸಿನಿಮಾ `ಕಾಂತಾರ’ಗೆ(Kantara Film) ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಶಿವನ ಪಾತ್ರದಲ್ಲಿ ಮಿಂಚಿ ಗಮನ ಸೆಳೆದ ರಿಷಬ್ ಶೆಟ್ಟಿಗೆ(Rishab Shetty) ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ `ಕಾಂತಾರ’ ಶಿವನ ಪಾತ್ರಕ್ಕೆ ಪುನೀತ್‌ಗೆ(Puneeth Rajkumar) ನಟಿಸಲು ಕೇಳಲಾಗಿತ್ತು. ಆದರೆ ಅಪ್ಪು ಈ ಚಿತ್ರದಲ್ಲಿ ನಟಿಸಿಲ್ಲ. ಆದರೆ ಅಪ್ಪು ನಟಿಸಿದ್ದರೆ ಹೇಗಿರುತ್ತಿತ್ತು ಎಂಬ ಪರಿಕಲ್ಪನೆಯಲ್ಲಿ ಪುನೀತ್ ಪೋಸ್ಟರ್ ಮಾಡಲಾಗಿದೆ. ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅಪ್ಪು ಒಂದು ವೇಳೆ `ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದರೆ ಹೇಗಿರುತ್ತಿತ್ತು ಎಂದು ಅಭಿಮಾನಿಯೊಬ್ಬರ ಕಲ್ಪನೆಯಲ್ಲಿ ಮೂಡಿಬಂದ ಪೋಸ್ಟರ್ ವೈರಲ್ ಆಗಿದೆ. ಪುನೀತ್ `ಕಾಂತಾರ’ ಶಿವನಾಗಿ ಕಾಣಿಸಿಕೊಂಡಿದ್ದರೆ ಹೇಗಿರುತ್ತಿತ್ತು ಎಂದು ಅಭಿಮಾನಿಯೊಬ್ಬರು ತನ್ನ ಕಲ್ಪನೆಯಲ್ಲಿ ಪೋಸ್ಟರ್ ಮಾಡಿದ್ದಾರೆ. ಈ ಪೋಸ್ಟರ್ ಈಗ ವೈರಲ್ ಆಗಿದೆ. ಈ ಪೋಸ್ಟರ್‌ಗೆ ಅಪ್ಪು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿಗೆ ಶಿಕ್ಷೆ
ಈ ಪೋಸ್ಟರ್ ಡಿಸೈನ್ ಮಾಡಿದ್ದು ಡಿಜಿಟಲ್ ಆರ್ಟಿಸ್ಟ್ ಕುಶಾಲ್ ಹಿರೇಮಠ್(Kushal Hiremath). ಪುನೀತ್ ಅವರ ಬೇರೆ ಫೋಟೋವನ್ನು ಬಳಸಿಕೊಂಡು ಈ ರೀತಿ ವಿನ್ಯಾಸ ಮಾಡಲಾಗಿದೆ. `ಕಾಂತಾರ’ ಚಿತ್ರದ ಹೀರೋ ಶಿವನ ಪಾತ್ರವನ್ನು ಪುನೀತ್ ನಿರ್ವಹಿಸಿದ್ದರೆ ಅವರ ಗೆಟಪ್ ಹೇಗಿರುತ್ತಿತ್ತು ಎಂದು ಈ ರೀತಿಯಾಗಿ ಅವರು ಕಲ್ಪಿಸಿಕೊಂಡು ಡಿಸೈನ್ ಮಾಡಿದ್ದಾರೆ. ಈ ಫೋಟೋ ನೋಡಿ ಪುನೀತ್ ಅಭಿಮಾನಿಗಳು ಭಾವುಕರಾಗಿದ್ದಾರೆ.
`ಕಾಂತಾರ’ (Kantara) ಅಬ್ಬರ ಜೋರಾಗಿದೆ. ಕನ್ನಡದ ಸಿನಿಮಾ ಇದೀಗ ಗಡಿ ದಾಟಿ ಸೌಂಡ್ ಮಾಡುತ್ತಿದೆ. ಈ ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚುತ್ತಿರುವ ರಿಷಬ್ ಶೆಟ್ಟಿ(Rishab Shetty) ಸದ್ಯ ಹಿಂದಿ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ(Rashmika Mandanna) ಕುರಿತು ಮೌನ ಮುರಿದಿದ್ದಾರೆ.
ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ರಿಷಬ್ ಶೆಟ್ಟಿ ಸದ್ಯ `ಕಾಂತಾರ’ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಸದ್ದು ಮಾಡ್ತಿದ್ದಾರೆ. ಹೀಗಿರುವಾಗ ಇತ್ತೀಚಿನ ಹಿಂದಿ ಸಂದರ್ಶನವೊಂದರಲ್ಲಿ ರಶ್ಮಿಕಾ ಅಥವಾ ಸಮಂತಾ ಯಾರು ನಟಿಸಲು ಇಷ್ಟ ಎಂದು ನಿಪೂಪಕಿ, ರಿಷಬ್‌ಗೆ ಕೇಳಿದ್ದಾರೆ.
ಸಮಂತಾ ಪರ್ಫಾಮೆನ್ಸ್ ನನಗೆ ತುಂಬಾ ಇಷ್ಟವಾಗುತ್ತಿದೆ. ಹೊಸ ಹೊಸ ಕಲಾವಿದರನ್ನು ಕರೆದು ಕೆಲಸ ಮಾಡುವುದಕ್ಕೆ ಇಂಟ್ರೆಸ್ಟ್ ಇದೆ. ವಿಭಿನ್ನ ಕ್ಯಾರೆಕ್ಟರ್‌ಗಳಿರುತ್ತದೆ ಯಾವುದೇ ಬ್ಯಾಗೇಜ್ ಹೊತ್ತಿಕೊಂಡು ಬರುವುದಿಲ್ಲ ನಮಗೂ ಯಾವ ಬ್ಯಾಗೇಜ್ ಇರುವುದಿಲ್ಲ ಎಂದಿದ್ದಾರೆ. ರಶ್ಮಿಕಾ ಅಥವಾ ಸಮಂತಾ ಎಂದಾಗ ಸ್ಯಾಮ್ ಹೆಸರನ್ನ ರಿಷಬ್ ಸೂಚಿಸಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ
ಇನ್ನೂ `ಕಾಂತಾರ’ ಸಿನಿಮಾ ಒಟ್ಟು 350 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ರಿಷಬ್ ಸಿನಿಮಾ ಕರ್ನಾಟಕದಲ್ಲಿ 1 ಕೋಟಿಗೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿದೆ.
Live Tv
[brid partner=56869869 player=32851 video=960834 autoplay=true]
`ಕಾಂತಾರ’ (Kantara Film) ಚಿತ್ರದ ಓಟಕ್ಕೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿದೆ. ಬಿಟೌನ್ ಅಂಗಳದಲ್ಲಿ ಅಲ್ಲಿನ ಸಿನಿಮಾಗಳಿಗೆ ಸಿಗದ ಯಶಸ್ಸು ದಕ್ಷಿಣ ಸಿನಿಮಾಗಳಿಗೆ ಸಿಗುತ್ತಿದೆ. `ಕೆಜಿಎಫ್ 2′(Kgf 2), `ಕಾಂತಾರ’ ನಂತರ ಬಾಲಿವುಡ್ ಶೇಕ್ ಆಗಿದೆ.
ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನ ಕೊಡುತ್ತಿರುವ ಹಿಂದಿ ಚಿತ್ರರಂಗಕ್ಕೆ ದಕ್ಷಿಣದ ಸಿನಿಮಾಗಳ ಗೆಲುವು ಇದೀಗ ನುಂಗಲಾರದ ತುತ್ತಾಗಿದೆ. ಇದೀಗ ಪ್ರೇಕ್ಷಕರಿಗೂ ದಕ್ಷಿಣದ ಸಿನಿಮಾಗಳ ಕಂಟೆಂಟ್ ಇಷ್ಟವಾಗಿದೆ. ತನ್ನ ನೆಲದಲ್ಲೇ ಹಿಂದಿ ಸಿನಿಮಾಗಳಿಗೆ ನೆಲೆ ಇಲ್ಲದಂತೆ ಆಗಿದೆ. ರಿಷಬ್(Rishab Shetty) ನಟನೆಯ `ಕಾಂತಾರ’ ಚಿತ್ರದ ಸಕ್ಸಸ್ ಬಾಲಿವುಡ್ ಅನ್ನೇ ಆಳುತ್ತಿದೆ. ಇದನ್ನೂ ಓದಿ:ಸಿನಿಮಾವಾಗಲಿದೆ ವಿಜಯ್ ಮಲ್ಯ ವಂಚನೆ ಕಥೆ: ಮಲ್ಯ ಪಾತ್ರದಲ್ಲಿ ಅನುರಾಗ್
ಇತ್ತೀಚಿನ ಹೊಂಬಾಳೆ ಬ್ಯಾನರ್‌ನ(Hombale Films) `ಕೆಜಿಎಫ್ 2′ ಮತ್ತು `ಕಾಂತಾರ’ ಸಕ್ಸಸ್‌ಗೆ ಬಾಲಿವುಡ್ ಬೆಚ್ಚಿ ಬಿದ್ದಿದೆ. ವರ್ಲ್ಡ್ ವೈಡ್ ಒಟ್ಟು `ಕೆಜಿಎಫ್ 2′ 1000 ಕೋಟಿ ರೂ. ಬಾಚಿದ್ರೆ, `ಕಾಂತಾರ’ 350 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಒಟ್ನಲ್ಲಿ ದಕ್ಷಿಣ ಸಿನಿಮಾಗಳಿಂದ ಬಾಲಿವುಡ್‌ಗೆ ಗಟ್ಟಿ ನೆಲೆ ಇಲ್ಲದಂತಾಗಿದೆ. ಮುಂಬರುವ ದಿನಗಳಲ್ಲಿ ಖಡಕ್ ಕಂಟೆಂಟ್ ಸಿನಿಮಾಗಳೊಂದು ಗೆದ್ದಿ ಬಿಗಿ ತೋರಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
`ಕಾಂತಾರ'(Kantara Film) ಸಿನಿಮಾ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ. ಇದೀಗ ರಿಷಬ್ ಶೆಟ್ಟಿ ಅವರ ಶಕ್ತಿಯಾಗಿರುವ ಅವರ ಪತ್ನಿ ಪ್ರಗತಿ(Pragathi Shetty) ಕೂಡ ಫುಲ್ ಟೈಮ್ ಬಣ್ಣ ಹಚ್ಚುತ್ತಾರಾ ಎಂಬುದನ್ನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ(Sandalwood) ಈಗಾಗಲೇ ಫ್ಯಾಷನ್ ಡಿಸೈನರ್ ಆಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರಗತಿ ಶೆಟ್ಟಿ, ನೋಡಲು ಯಾವ ಹೀರೋಯಿನ್‌ಗೂ ಕಮ್ಮಿಯಿಲ್ಲ. ನೋಡಲು ಚೆಂದ, ಪ್ರತಿಭಾವಂತೆ ಕೂಡ. ಈಗಾಗಲೇ `ಕಾಂತಾರ’ ಚಿತ್ರದಲ್ಲಿ ರಾಣಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೊತೆಗೆ ಕಾಂತಾರ ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರಿಗೂ ಪ್ರಗತಿ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ನೀವ್ಯಾಕೆ ಹೀರೋಯಿನ್ ಆಗಬಾರದು ಅಂತಾ ಫ್ಯಾನ್ಸ್ ಕೂಡ ಪ್ರಗತಿಗೆ ಹೊಸ ಬೇಡಿಕೆ ಇಟ್ಟಿದ್ದಾರೆ. ನಟನೆಗೆ ಬಗ್ಗೆ ಆಸಕ್ತಿ ಇದ್ಯಾ ಎಂಬುದರ ಬಗ್ಗೆ ರಿಷಬ್ ಪತ್ನಿ ಪ್ರಗತಿ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ:ಗಡಿನಾಡ ಕನ್ನಡಿಗ ಎಂದ ರೂಪೇಶ್ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು
ಆಕ್ಟಿಂಗ್ ಕಡೆ ಖಂಡಿತಾ ಆಸಕ್ತಿ ಅಂತಾ ಎನುಯಿಲ್ಲ. ನಾನು ಈ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿಲ್ಲ. `ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು’ ನನಗೇನು ಹೇಳದೇ ರಿಷಬ್(Rishab Shetty) ಪುಟ್ಟ ಪಾತ್ರ ಮಾಡಿಸಿದ್ದರು ಅದು ಕೂಡ ಕಡೆಯ ಕ್ಷಣದಲ್ಲಿ, ಕಾಂತಾರ ಎರಡು ದಿನ ಮುಂಚಿತವಾಗಿ ಹೇಳಿದ್ದರು. ಆದರೆ ನಟಿಸಲೇಬೇಕು ಯಾವುದೇ ಆಸಕ್ತಿಯಿಲ್ಲ. ಸಮಯ ಮತ್ತು ಸಂದರ್ಭಕ್ಕೆ ಅನಿವಾರ್ಯವಾಗಿದ್ದಾಗ ನಟಿಸುತ್ತೇನೆ. ಆದರೆ ಫ್ಯಾಷನ್ ಡಿಸೈನಿಂಗ್ ಕಡೆ ನನ್ನ ಗಮನವಿರುತ್ತದೆ ಎಂದು ಮಾತನಾಡಿದ್ದಾರೆ.
ರಿಷಬ್ ಅವರ ಸಕ್ಸಸ್‌ನಲ್ಲಿ ಪ್ರಗತಿ ಶೆಟ್ಟಿ ಅವರ ಶ್ರಮ ಸಾಕಷ್ಟಿದೆ. ರಿಷಬ್ ಸಿನಿಮಾ ಜರ್ನಿ ಜೊತೆ ಪ್ರಗತಿ ಅವರ ನಡೆಗೂ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಯಾಗುತ್ತಿದೆ. ನಟನೆ ಮತ್ತು ಫ್ಯಾಷನ್ ಲೋಕದಲ್ಲಿ ಪ್ರಗತಿ ಶೆಟ್ಟಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.
Live Tv
[brid partner=56869869 player=32851 video=960834 autoplay=true]
ಚಿತ್ರರಂಗದಲ್ಲಿ ಸದ್ಯ ಹೈಪ್ ಸೃಷ್ಟಿಸಿರುವ ಚಿತ್ರ ಅಂದ್ರೆ ಕನ್ನಡದ `ಕಾಂತಾರ’ (Kantara Film) ಸಿನಿಮಾ. ಗಡಿದಾಟಿ ಸೌಂಡ್ ಮಾಡುತ್ತಿರುವ `ಕಾಂತಾರ’ ಇಂಡೋನೇಷ್ಯಾದಲ್ಲೂ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇಲ್ಲಿ ರಿಲೀಸ್ ಆಗಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಕುರಿತು ರಿಷಬ್ ಶೆಟ್ಟಿ(Rishab Shetty) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
`ಕಾಂತಾರ’ ಸಿನಿಮಾ ಗಡಿದಾಟಿ ದೇಶ ವಿದೇಶದಲ್ಲೂ ಸೌಂಡ್ ಮಾಡುತ್ತಿದೆ. ಇದೀಗ ಮೊಟ್ಟ ಮೊದಲ ಬಾರಿಗೆ ಇಂಡೋನೇಷ್ಯಾದಲ್ಲಿ ಕನ್ನಡದ ಕಾಂತಾರ ರಿಲೀಸ್ ಆಗುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಕನ್ನಡದ ಸಿನಿಮಾ ಇಲ್ಲೂ ರಿಲೀಸ್ ಆಗಬೇಕು ಎಂದು ಇಂಡೋನೇಷ್ಯಾದ ಕನ್ನಡಿಗರು ಕಾಂತಾರಗೆ ಸಾಥ್ ನೀಡಿದ್ದಾರೆ.
ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ನೋಡಿ, ಇಂಡೋನೇಷ್ಯಾದ(Indonesia) ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇಂಡೋನೇಷ್ಯಾದಲ್ಲಿ ನಾಲ್ಕು ಶೋಗಳನ್ನ ಪ್ರದರ್ಶಿಸಲಾಗಿತ್ತು. ಈ ನಾಲ್ಕು ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಈ ಚಿತ್ರಕ್ಕೆ ಅಲ್ಲಿನ ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡದ ಸಿನಿಮಾವೊಂದು ಇಂಡೋನೇಷ್ಯಾದಲ್ಲೂ ಬೀಗಬೇಕೆಂದು ಅಲ್ಲಿನ ಸುವರ್ಣ ಕನ್ನಡ ಸಂಘದವರು ರಿಷಬ್ ಸಿನಿಮಾಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್
`ಕಾಂತಾರ’ ಸಿನಿಮಾವನ್ನ ಇಂಡೋನೇಷ್ಯಾದ ಕನ್ನಡಿಗರು ನೋಡಿ ಖುಷಿಪಟ್ಟಿರೋದಕ್ಕೆ ರಿಷಬ್ ಶೆಟ್ಟಿ ಕೂಡ ಧನ್ಯವಾದ ತಿಳಿಸಿದ್ದಾರೆ. ಕನ್ನಡದ ಚಿತ್ರವನ್ನ ಅಲ್ಲೂ ಗೆಲ್ಲಿಸಿಕೊಟ್ಟಿದಕ್ಕೆ ಡಿವೈನ್ ಸ್ಟಾರ್ ರಿಷಬ್ ವೀಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]