Tag: kantara film

  • ಸಂಕ್ರಾಂತಿ ಹಬ್ಬದಂದು ಕಿರುತೆರೆಗೆ ಬರುತ್ತಿದೆ ರಿಷಬ್‌ ನಟನೆಯ `ಕಾಂತಾರ’ ಸಿನಿಮಾ

    ಸಂಕ್ರಾಂತಿ ಹಬ್ಬದಂದು ಕಿರುತೆರೆಗೆ ಬರುತ್ತಿದೆ ರಿಷಬ್‌ ನಟನೆಯ `ಕಾಂತಾರ’ ಸಿನಿಮಾ

    ಡೀ ದೇಶವೇ ಸ್ಯಾಂಡಲ್‌ವುಡ್‌ನತ್ತ (Sandalwood) ತಿರುಗಿ ನೋಡುವಂತೆ ಮಾಡಿ, ಇತಿಹಾಸ ಸೃಷ್ಟಿಸಿದ ಕನ್ನಡದ ಹೆಮ್ಮೆಯ ಸಿನಿಮಾ `ಕಾಂತಾರ’ (Kantara Film) ಇದೀಗ ಟಿವಿ ಪರದೆಯಲ್ಲಿ ಮಿಂಚಲು ಮುಹೂರ್ತ ಫಿಕ್ಸ್ ಆಗಿದೆ.

    ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿದ `ಕಾಂತಾರ’ ಸಿನಿಮಾಗೆ ಇಡೀ ದೇಶವೇ ಹಾಡಿ ಹೊಗಳಿತ್ತು. ಚಿತ್ರಮಂದಿರದ ನಂತರ ಒಟಿಟಿಯಲ್ಲಿಯೂ ಕಮಾಲ್ ಮಾಡಿತ್ತು. ಸುವರ್ಣ ವಾಹಿನಿಯಲ್ಲಿ ಜೇಮ್ಸ್, ಲಕ್ಕಿಮ್ಯಾನ್, ಅಂತಹ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಇದೀಗ `ಕಾಂತಾರ’ (Kantara) ಎಂಬ ದಂತಕಥೆಯೊಂದು ಸೇರ್ಪಡೆಯಾಗುತ್ತಿದೆ. ಈ ಮೂಲಕ `ಕಾಂತಾರ’ ಕಿರುತೆರೆಗೆ ಲಗ್ಗೆ ಇಡುತ್ತಿದೆ. ಸಂಕ್ರಾಂತಿ ಹಬ್ಬದಂದು (Sankranti Festival) ಸಿನಿಮಾ ಪ್ರಸಾರವಾಗುವ ಮೂಲಕ ಫ್ಯಾನ್ಸ್‌ಗೆ ವಾಹಿನಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

    ಇದು ಕರ್ನಾಟಕದ (Karnataka) ತುಳುನಾಡಿನ ಪ್ರಾಂತ್ಯದಲ್ಲಿ ನಡೆಯುವ ದೈವಾರಾಧನೆ, ಭೂತಕೋಲ, ಕಂಬಳ, ಕೋಳಿ ಅಂಕ, ಇತ್ಯಾದಿ ಸಂಭ್ರಮಗಳ ಹಿನ್ನೆಲೆಯಲ್ಲಿ ನಡೆಯುವ ಕಥೆ. ಹೈವೋಲ್ಟೇಜ್ ದೃಶ್ಯಗಳಿಂದ ಆರಂಭವಾಗುವ ಸಿನಿಮಾವು ನೋಡು ನೋಡುತ್ತಿದ್ದಂತೆ ವೀಕ್ಷಕರಿಗೆ ಮಂತ್ರಮುಗ್ಧರನ್ನಾಗಿಸಿತ್ತು. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?

    ಕನ್ನಡದ ಕಿರೀಟ `ಕಾಂತಾರ’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ರಿಷಬ್ ಶೆಟ್ಟಿ (Rishab Shetty) ಹಾಗೂ ಸಪ್ತಮಿ ಗೌಡ (Saptami Gowda) ನಟಿಸಿದ್ದು, ದೀಪಕ್ ರೈ, ಗುರು ಸನಿಲ್, ಪ್ರಕಾಶ್ ತುಮಿನಾಡು, ರಂಜನ್, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಸೇರಿದಂತೆ ಇನ್ನು ಅನೇಕರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಕನ್ನಡಿಗರು ಹೊತ್ತು ಕೊಂಡಾಡಿದ ಹೆಮ್ಮೆಯ ಕಥೆ `ಕಾಂತಾರ’ ಜನವರಿ 15 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯಲ್ಲಿ ದೈವ ದರ್ಶನವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಶೂಟಿಂಗ್‌ಗೆ ಬ್ರೇಕ್ ಹಾಕಿ, ಮಂಗಳೂರಿಗೆ ಬಂದಿದ್ದಾರೆ. ತಮ್ಮ ಮನೆಯ ಭೂತಕೋಲದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    `ಬಾಹುಬಲಿ 2′ (Bahubali 2) ಸಕ್ಸಸ್ ನಂತರ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳದೇ ಅನುಷ್ಕಾ ಸೈಲೆಂಟ್‌ ಆಗಿದ್ದಾರೆ. ಆದರೆ ಈಗ ಹೊಸ ಪ್ರತಿಭೆ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಚಿತ್ರದ ಮೂಲಕ ಸ್ವೀಟಿ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ರಿಲೀಸ್‌ಗೆ ಸಜ್ಜಾಗಿರುವ ಬೆನ್ನಲ್ಲೇ ತಮ್ಮ ಮನೆಯ ಪಂಜುರ್ಲಿ ದೈವಕೋಲಕ್ಕೆ ಅನುಷ್ಕಾ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ದೈವದ ವೀಡಿಯೋ ಮಾಡ್ತಿರುವ ಅನುಷ್ಕಾ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅನುಷ್ಕಾ ಕುಟುಂಬದಲ್ಲಿ ದೈವದ ಆರಾಧನೆ ಮಾಡಿದ್ದಾರೆ. ನಟಿ ಮೂಲತಃ ಮಂಗಳೂರಿನವರಾಗಿದ್ದು, ಭೂತಕೋಲವನ್ನು ಮಾಡುತ್ತಾರೆ.

    ಇನ್ನೂ ಇತ್ತೀಚೆಗೆ ಕಾಂತಾರ (Kantara) ಸಿನಿಮಾ ನೋಡಿ, ಖುಷಿಯಿಂದ ಚಿತ್ರಕ್ಕೆ ಮತ್ತು ರಿಷಬ್ ಶೆಟ್ಟಿ ನಟನೆಗೆ ಅನುಷ್ಕಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಂತಾರದಲ್ಲಿ ದೈವ ಕಥೆಯನ್ನ ಅಚ್ಚುಕಟ್ಟಾಗಿ ತೆರೆಯ ಮೇಲೆ ತೋರಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

    IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

    ಭಾರತೀಯ ಸಿನಿಮಾ ರಂಗದಲ್ಲಿ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ವಿಶೇಷ ಮನ್ನಣೆ ನೀಡಲಾಗಿದೆ. ಈ ಬಾರಿ ಬಿಡುಗಡೆಯಾದ IMDB 2022ರ ಅತ್ಯಂತ ಜನಪ್ರಿಯ ಭಾರತೀಯ ಚಿತ್ರ ಪಟ್ಟಿಯಲ್ಲಿ ಕನ್ನಡದ ಚಿತ್ರಗಳು ಸೇರಿಕೊಂಡಿದೆ.

    ಪ್ರತಿ ವರ್ಷದಂತೆ ಈ ವರ್ಷವು ಕೂಡ IMDB ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯನ್ನು ಪ್ರಕಟಿಸಿದೆ. ವಿಶೇಷವೆಂದರೆ, ಈ ಬಾರಿ 10 ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಚಿತ್ರಗಳಿರೋದು ವಿಶೇಷ. ಐಎಮ್‌ಡಿಬಿ 2022ರ ಪಟ್ಟಿ ಅನೌನ್ಸ್ ಆಗಿದ್ದು, 10 ಚಿತ್ರಗಳ ಲಿಸ್ಟ್‌ನಲ್ಲಿ ʻಕೆಜಿಎಫ್ 2ʼಗೆ (Kgf 2) ಮೂರನೇ ಸ್ಥಾನದಲ್ಲಿದ್ದರೆ, `ಕಾಂತಾರ’ (kantara) 5ನೇ ಸ್ಥಾನದಲ್ಲಿದೆ. `777 ಚಾರ್ಲಿ’ (777 Charlie) 10ನೇ ಸ್ಥಾನದಲ್ಲಿದೆ. ನಂಬರ್ ಒನ್ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ (Rrr) ಚಿತ್ರವಿದೆ. ಇದನ್ನೂ ಓದಿ: ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ

    ಇನ್ನೂ ಯಶ್‌ (Yash) ನಟನೆಯ ಕನ್ನಡದ ಕೆಜಿಎಫ್‌ 2, ರಿಷಬ್‌ (Rishab Shetty) ನಟನೆಯ ʻಕಾಂತಾರʼ ಮತ್ತು ರಕ್ಷಿತ್‌ ಶೆಟ್ಟಿ (Rakshith Shetty) ನಟನೆ ʻ777 ಚಾರ್ಲಿʼ ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್‌ ಮಾಡಿ, ಕಮಾಲ್‌ ಮಾಡಿತ್ತು.

    IMDB 2022ರ 10 ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿ ಹೀಗಿದೆ.

    1. ಆರ್‌ಆರ್‌ಆರ್
    2. ದಿ ಕಾಶ್ಮೀರ್ ಫೈಲ್ಸ್
    3. ಕೆಜಿಎಫ್ 2
    4. ವಿಕ್ರಂ
    5. ಕಾಂತಾರ
    6. ರಾಕೆಟ್ರಿ: ದಿ ನಂಬಿ ಎಫೆಕ್ಟ್
    7. ಮೇಜರ್
    8. ಸೀತಾರಾಮಂ
    9. ಪೊನ್ನಿಯನ್ ಸೆಲ್ವನ್: ಪಾರ್ಟ್ 1
    10. 777 ಚಾರ್ಲಿ

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಕ್ರಿಯೆಟ್ ಮಾಡಿದ `ಕಾಂತಾರ’ (Kantara Film) ಸಿನಿಮಾವನ್ನು ಸಿನಿ ಪ್ರೇಕ್ಷಕರು, ಪರಭಾಷೆಯ ತಾರೆಯರು ಹಾಡಿ ಹೊಗಳುತ್ತಿದ್ದಾರೆ. ಈ ಬೆನ್ನಲ್ಲೇ ಬಾಲಿವುಡ್ (Bollywood) ಸೂಪರ್ ಸ್ಟಾರ್ ಹೃತಿಕ್ ರೋಷನ್ (Hrithik Roshan), ರಿಷಬ್ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ `ಕಾಂತಾರ’ ಕ್ಲೈಮ್ಯಾಕ್ಸ್ ಸಖತ್ ಇಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಿಷಬ್ (Rishab Shetty) ನಟನೆ, ನಿರ್ದೇಶನದ `ಕಾಂತಾರ’ ಸಿನಿಮಾ ಹವಾ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಒಟಿಟಿಯಲ್ಲಿ ಕೂಡ ಸಿನಿಮಾ ಸಂಚಲನ ಮೂಡಿಸುತ್ತಿದೆ. ಇದೀಗ `ಕಾಂತಾರ’ ಚಿತ್ರವನ್ನು ಬಿಟೌನ್ ಸ್ಟಾರ್ ಹೃತಿಕ್ ರೋಷನ್ ನೋಡಿ ಭೇಷ್ ಎಂದಿದ್ದಾರೆ. ಸಿನಿಮಾ ಬಗೆಗಿನ ಭಾವನೆಯನ್ನ ನಟ ಖುಷಿಯಿಂದ ಹೇಳಿಕೊಂಡಿದ್ದಾರೆ.

    `ಕಾಂತಾರ’ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಕಂಡ ಬದಲಾವಣೆಯಿಂದ ನನಗೆ ರೋಮಾಂಚನ ಆಯಿತು. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು’ ಎಂದು ಹೃತಿಕ್ ರೋಷನ್ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ರಿಷಬ್ ತಂಡದ ವಿಭಿನ್ನ ಪ್ರಯತ್ನವನ್ನ ಹಾಡಿ ಹೊಗಳಿದ್ದಾರೆ. ಹೃತಿಕ್‌ ರೋಷನ್‌ಗೆ ಪ್ರತಿಯುತ್ತರವಾಗಿ ರಿಷಬ್ ಕೂಡ ಧನ್ಯವಾದಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಇನ್ನೂ `ಕಾಂತಾರ 2′ ಮಾಡಲು ಪಂಜುರ್ಲಿ ದೈವ ಅನುಮತಿ ನೀಡಿದೆ. ಈ ಸುದ್ದಿ ಕೇಳಿ, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ರಿಷಬ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ಪಾರ್ಟ್‌ 2ಗೆ ಪಂಜುರ್ಲಿ ಮೊರೆ ಹೋದ ರಿಷಬ್ ಶೆಟ್ಟಿ

    `ಕಾಂತಾರ’ ಪಾರ್ಟ್‌ 2ಗೆ ಪಂಜುರ್ಲಿ ಮೊರೆ ಹೋದ ರಿಷಬ್ ಶೆಟ್ಟಿ

    `ಕಾಂತಾರ’ (Kantara) ಸೂಪರ್ ಸಕ್ಸಸ್ ನಂತರ ಮತ್ತೆ ಚಿತ್ರತಂಡ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ರಿಷಬ್ ನಟನೆ, ನಿರ್ದೇಶನದ ಕಾಂತಾರ ಅದ್ಭುತ ಯಶಸ್ಸನ್ನು ಕಂಡಿದೆ. ಈಗ ಪಾರ್ಟ್ 2ಗಾಗಿ ತಯಾರಿ ನಡೆಸುವ ಮುಂಚೆ ಅಣ್ಣಪ್ಪ ಪಂಜುರ್ಲಿ (Annappa Panjurli) ದೈವದ ಹರಕೆ ಕೋಲ ಮಾಡಿ, ಅನುಮತಿ ಕೇಳಿದ್ದಾರೆ.

    ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಸಿನಿಮಾ ಅಂದ್ರೆ `ಕಾಂತಾರ’ ಚಿತ್ರ. ಈ ಸಿನಿಮಾ ನೋಡಿ ಫಿದಾ ಆಗಿರುವ ಅಭಿಮಾನಿಗಳು ಪಾರ್ಟ್ 2ಗಾಗಿ ಕಾಯ್ತಿದ್ದಾರೆ. ಈ ಬೆನ್ನಲ್ಲೇ ರಿಷಬ್ (Rishab Shetty) ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು (Vijay Kiragandoor) ಸೇರಿದಂತೆ ಇಡೀ ಚಿತ್ರತಂಡ ಮಂಗಳೂರಿನಲ್ಲಿ ಅಣ್ಣಪ್ಪ ಪಂಜುರ್ಲಿಗೆ ದೈವದ ಹರಕೆ ನೀಡಿದ್ದಾರೆ. ಕದ್ರಿ ಮಂಜುನಾಥೇಶ್ವರ ಪ್ರಧಾನ ಅರ್ಚಕ ಕೃಷ್ಣ ಅಡಿಗ ಸಮ್ಮುಖದಲ್ಲಿ ದೈವ ಕೋಲ ನಡೆದಿದೆ. ಈ ವೇಳೆ ಕಾಂತಾರ ಪಾರ್ಟ್ 2 ಮಾಡಲು ಅನುಮತಿ ಕೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

    ಪಂಜುರ್ಲಿ ದೈವವು ಕೂಡ `ಕಾಂತಾರ 2′ ಮಾಡಲು ಅನುಮತಿ ನೀಡಿದೆ. ಜೊತೆಗೆ ಕೆಲವು ಸಲಹೆ ಮತ್ತು ಎಚ್ಚರಿಕೆಗಳನ್ನ ಕೂಡ ನೀಡಿದೆ. ಪಾರ್ಟ್ 2ನಲ್ಲಿ ಈ ಹಿಂದಿನ ಕಲಾವಿದರೇ ಮುಂದುವರೆಯಲಿದ್ದಾರೆ. ಇನ್ನೂ ಕಾಂತಾರ ಸಿನಿಮಾ ತಂಡದ ಜೊತೆ ರಿಷಬ್ ಕುಟುಂಬ ಕೂಡ ಕೋಲ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

    ಇದೀಗ `ಕಾಂತಾರ’ ಮುಂದುವರೆದ ಭಾಗಕ್ಕೆ ದೈವ ಕೂಡ ಸೂಚನೆ ನೀಡಿದೆ. ಪಾರ್ಟ್ 2 ಕೂಡ ಅದೆಷ್ಟರ ಮಟ್ಟಿಗೆ ಹವಾ ಕ್ರಿಯೆಟ್ ಮಾಡಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿದೇಶಿ ಭಾಷೆಗೆ ಡಬ್ ಆಗಲಿದೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’

    ವಿದೇಶಿ ಭಾಷೆಗೆ ಡಬ್ ಆಗಲಿದೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’

    ಪ್ಯಾನ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty) ನಟನೆಯ ಕನ್ನಡದ `ಕಾಂತಾರ’ (Kantara) ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿ ಕಮಾಲ್ ಮಾಡುತ್ತಿದೆ. ಒಟಿಟಿಯಲ್ಲಿ ಸದ್ದು ಮಾಡ್ತಿರುವ `ಕಾಂತಾರ’ ಈಗ ಹೊಸ ಹೆಜ್ಜೆ ಇಡುತ್ತಿದೆ. ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ, ವಿದೇಶಿ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

    ಕನ್ನಡದ `ಕಾಂತಾರ’ ಈಗಾಗಲೇ ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ಇದೀಗ ‌ʻಕಾಂತಾರʼ ಇಂಗ್ಲೀಷ್ ಭಾಷೆಗೆ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಎಲ್ಲಾ ಭಾಷೆಯ ಪ್ರೇಕ್ಷಕರನ್ನ ಸೆಳೆಯುತ್ತಿರುವ ಕಾಂತಾರ ಈಗ ವಿದೇಶಿಗರನ್ನು ಸೆಳೆಯಲು ಚಿತ್ರತಂಡ ರೆಡಿಯಾಗಿದೆ.

    ಇನ್ನೂ ʻಕಾಂತಾರʼ ಇಂಗ್ಲೀಷ್ ವರ್ಷನ್ (English Version) ಜನವರಿಯಿಂದ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ತುಳುನಾಡಿನ ನೆಲ, ಸಂಸ್ಕೃತಿಯ ಇಂಗ್ಲೀಷ್ ಭಾಷೆಗೆ ಹೇಗೆ ಡಬ್ ಮಾಡುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಗಗ್ಗರ, ಕಂಬಳ, ಕೋಲ, ಕಾರ್ಣೀಕ, ನೇಮ ಎಂಬುದನ್ನ ವಿದೇಶಿ ಭಾಷೆಗೆ ಹೇಗೆ ಡಬ್ ಮಾಡುತ್ತಾರೆ ಎಂಬುದು ಅನೇಕರಿಗೆ ಈ ಬಗ್ಗೆ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ವಿಷ್ಣುವರ್ಧನ್ ನೂತನ ಮನೆಗೆ ಯಶ್ ದಂಪತಿ, ಸುದೀಪ್ ಭೇಟಿ

    ಪರಭಾಷೆಯಲ್ಲೂ ʻಕಾಂತಾರʼ (Kantara) ಗೆದ್ದು ಬೀಗಿದ ಹಾಗೇ ವಿದೇಶಿಗರನ್ನ ಸೆಳೆಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ವರ್ಷನ್ `ಕಾಂತಾರ’ ಒಟಿಟಿ ಎಂಟ್ರಿಗೆ ಡೇಟ್ ಫಿಕ್ಸ್

    ಹಿಂದಿ ವರ್ಷನ್ `ಕಾಂತಾರ’ ಒಟಿಟಿ ಎಂಟ್ರಿಗೆ ಡೇಟ್ ಫಿಕ್ಸ್

    ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೆಟ್ ಮಾಡಿರುವ ಸಿನಿಮಾ `ಕಾಂತಾರ’ ಇದೀಗ ಹಿಂದಿ ವರ್ಷನ್ ಒಟಿಟಿಯಲ್ಲಿ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಬಾಲಿವುಡ್‌ನ ಗೆಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಸಿನಿಮಾ, ಒಟಿಟಿಯ ಹಿಂದಿ ವರ್ಷನ್‌ನಲ್ಲಿ `ಕಾಂತಾರ’ ಬರಲಿದೆ.

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ `ಕಾಂತಾರ’ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಬಳಿಕ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಮಲಯಾಳಂ ವರ್ಷನ್‌ನಲ್ಲಿ `ಕಾಂತಾರ’ ಅಮೆಜಾನ್ ಪ್ರೈಮ್‌ನಲ್ಲಿ ಈಗಾಗಲೇ ರಿಲೀಸ್ ಆಗಿದೆ. ಚಿತ್ರಮಂದಿರದ ಬಳಿಕ ಒಟಿಟಿಯಲ್ಲೂ `ಕಾಂತಾರ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಹಿಂದಿ ವರ್ಷನ್ ಒಟಿಟಿಗೆ ರಿಲೀಸ್ ಯಾವಾಗ ಎಂದು ಹಿಂದಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ.

    ಇದೀಗ ರಿಷಬ್ ಶೆಟ್ಟಿ ಹಿಂದಿ ವರ್ಷನ್ ರಿಲೀಸ್ ಡೇಟ್ ಮತ್ತು ಯಾವ ಒಟಿಟಿ ಪ್ಲಾಟ್‌ಪಾರ್ಮ್ ಎಂದು ಬಹಿರಂಗ ಪಡಿಸಿದರು. ಅಂದಹಾಗೆ ಹಿಂದಿ ವರ್ಷನ್ ʻಕಾಂತಾರʼ ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನೆಟ್‌ಫ್ಲಿಕ್ಸ್ `ಕಾಂತಾರ’ ಸ್ಟ್ರೀಮಿಂಗ್ ಬಗ್ಗೆ ರಿಷಬ್ ಶೆಟ್ಟಿ ದಿನಾಂಕ ಬಹಿರಂಗಪಡಿಸಿದರು. `ಕಾಂತಾರ’ ಹಿಂದಿ ವರ್ಷನ್ ಒಟಿಟಿಯಲ್ಲಿ ಡಿಸೆಂಬರ್ 9ಕ್ಕೆ ತೆರೆಗೆ ಬರಲಿದೆ. ಇದನ್ನೂ ಓದಿ: ನಿರ್ದೇಶನದತ್ತ ಶಾರುಖ್ ಪುತ್ರ ಆರ್ಯನ್ ಖಾನ್

    ಈಗಾಗಲೇ ಕೋಟಿ ಕೋಟಿ ಲೂಟಿ ಮಾಡಿರುವ ʻಕಾಂತಾರʼ ಸಿನಿಮಾ ಹಿಂದಿ ವರ್ಷನ್‌ನಲ್ಲಿ ಗೆಲ್ಲಲು ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಡಿ.12ಕ್ಕೆ ರಜನೀಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಡಿ.12ಕ್ಕೆ ರಜನೀಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಜನೀಕಾಂತ್ (Rajanikanth) ಅಭಿಮಾನಿಗಳಿಗೆ ನಿಜಕ್ಕೂ ಇದು ಸಿಹಿ ಸುದ್ದಿ. ತಲೈವಾ ನಟನೆಯ `ಬಾಬಾ’ (Baba) ಸಿನಿಮಾ ಮತ್ತೆ ತೆರೆ ಬರಲು ಸಿದ್ಧವಾಗಿದೆ. ಚಿತ್ರವನ್ನು ಅಪ್‌ಗ್ರೇಡ್ ಮಾಡಿ, ತೆರೆಗೆ ತರಲಾಗುತ್ತಿದೆ. ಸದ್ಯ ಈ ಚಿತ್ರದ ಟ್ರೈಲರ್ ಹಂಚಿಕೊಂಡು, ಚಿತ್ರದ ಬಗ್ಗೆ ರಜನೀಕಾಂತ್ ಮೇಜರ್ ಅಪ್‌ಡೇಟ್ ಕೊಟ್ಟಿದ್ದಾರೆ.

    ತಲೈವಾ, ಮನಿಷಾ ಕೊಯಿರಾಲ ನಟನೆಯ `ಬಾಬಾ’ ಡಿಸೆಂಬರ್ 12ಕ್ಕೆ ತೆರೆಗೆ ಅಪ್ಪಳಿಸಲಿದೆ. ರಜನೀಕಾಂತ್ ಹುಟ್ಟುಹಬ್ಬದಂದೇ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಚಿತ್ರದ ಅಪ್‌ಡೇಟ್ ವರ್ಷನ್ ಮೂಲಕ ಮತ್ತೆ ತೆರೆಯ ಮೇಲೆ ಕಮಾಲ್ ಮಾಡಲು ರಜನೀಕಾಂತ್ ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಟ್ರೈಲರ್ ಹಂಚಿಕೊಂಡು, ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ `ಬಾಬಾ’ ಎಂದು ಟ್ವೀಟ್ಟರ್‌ನಲ್ಲಿ ನಟ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Kantara ಸಂಘರ್ಷಕ್ಕೆ ತೆರೆ: `ವರಾಹರೂಪಂ’ ಹಾಡಿಗಿದ್ದ ಅಡಚಣೆ ನಿವಾರಣೆ

    ಇಪ್ಪತ್ತು ವರ್ಷಗಳ ಹಿಂದೆ ತೆರೆಗೆ ಮೇಲೆ ಕಮಾಲ್ ಮಾಡೋದರಲ್ಲಿ ಬಾಬಾ ಸಿನಿಮಾ ಸೋತಿತ್ತು. ಈಗ `ಕಾಂತಾರ’ (Kantara Film) ಚಿತ್ರದ ಯಶಸ್ಸು ಚಿತ್ರದಲ್ಲಿನ ದೈವ ಶಕ್ತಿ ನೋಡಿ, `ಬಾಬಾ’ ಚಿತ್ರದ ರಿಲೀಸ್‌ಗೆ ತಲೈವಾ ಮನಸ್ಸು ಮಾಡಿದ್ದಾರೆ. `ಬಾಬಾ’ ಚಿತ್ರದ ದೈವ ಶಕ್ತಿಯ ಒಳಗೊಂಡ ಚಿತ್ರವಾಗಿದ್ದು, ಡಿ.12ರಂದು ತಮಿಳುನಾಡು ಸೇರಿದಂತೆ ರಾಜ್ಯದ ಎಲ್ಲೆಡೆ ಸಿನಿಮಾ ರಿಲೀಸ್ ಆಗುತ್ತಿದೆ.

     

    View this post on Instagram

     

    A post shared by Rishab Shetty (@rishabshettyofficial)

    ಸಿನಿಮಾಗೆ ಹೊಸ ರೀತಿಯ ಕಲರ್ ಗ್ರೇಡಿಂಗ್, ಮತ್ತೊಮ್ಮೆ ರಜನೀಕಾಂತ್ ವಾಯ್ಸ್ ಡಬ್ಬಿಂಗ್ ಮಾಡಿ, ಭಿನ್ನವಾಗಿ ಅಭಿಮಾನಿಗಳ ಮನ ತಲುಪಲು ರೆಡಿಯಾಗಿದ್ದಾರೆ. 20 ವರ್ಷಗಳ ಹಿಂದೆ ಸೋತಿದ್ದ ಬಾಬಾ ಸಿನಿಮಾ ಇದೀಗ ಗೆಲ್ಲುತ್ತಾ, ಕಾಂತಾರ ಚಿತ್ರದ ಸ್ಪೂರ್ತಿ ಪಡೆದು ಮುನ್ನುಗ್ಗುತ್ತಿರುವ ತಲೈವಾ ಸಕ್ಸಸ್ ಸಿಗುತ್ತಾ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • Kantara ಸಂಘರ್ಷಕ್ಕೆ ತೆರೆ: `ವರಾಹರೂಪಂ’ ಹಾಡಿಗಿದ್ದ ಅಡಚಣೆ ನಿವಾರಣೆ

    Kantara ಸಂಘರ್ಷಕ್ಕೆ ತೆರೆ: `ವರಾಹರೂಪಂ’ ಹಾಡಿಗಿದ್ದ ಅಡಚಣೆ ನಿವಾರಣೆ

    ನ್ನಡದ `ಕಾಂತಾರ’ (Kantara) ಚಿತ್ರದ ‘ವರಾಹರೂಪಂ’ (Varaha Roopam) ಹಾಡಿನ ವಿವಾದಕ್ಕೆ ಜಯ ಸಿಕ್ಕಿದೆ. ವರಾಹರೂಪಂ ಹಾಡಿನ ಬಳಕೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್‌ ತೆರವುಗೊಳಿಸಿದೆ.

    ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು.  ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿದ್ದರಿಂದ ಇನ್ನು ಮುಂದೆ ಒಟಿಟಿಯಲ್ಲೂ ಹಳೆಯ ವರಾಹರೂಪಂ ಹಾಡನ್ನು ನೋಡಬಹುದು.

    ಕೇರಳದ ಪಾಲಕ್ಕಾಡ್ ಕೋರ್ಟ್ ಕೂಡ ಹಾಡು ಬಳಸದಂತೆ ತಡೆ ನೀಡಿತ್ತು. ಈ ಕೋರ್ಟ್‌ ತಡೆಯನ್ನು ತೆರವುಗೊಳಿಸಿದೆ. ಈ ಮೂಲಕ `ಕಾಂತಾರ’ ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದರೊಂದಿಗೆ ‘ಕಾಂತಾರ ‘ಚಿತ್ರದ ‘ವರಾಹರೂಪಂ’ ಹಾಡಿಗೆ ಇದ್ದ ಎಲ್ಲಾ ಅಡೆತಡೆ ನಿವಾರಣೆ ಆಗಿದೆ.‌ ಇದನ್ನೂ ಓದಿ: ಶಿವನ ಮುಡಿಗೆ ಸಿದ್ಧಶ್ರೀ ಪ್ರಶಸ್ತಿಯ ಗರಿ – ಪಂರ್ಜುಲಿ ದೈವಕ್ಕೆ ಅರ್ಪಿಸಿದ ರಿಷಬ್

    ನಿನ್ನೆಯಷ್ಟೇ ಹೊಂಬಾಳೆ ಬ್ಯಾನರ್, ರಿಷಬ್ ಶೆಟ್ಟಿ, ಪೃಥ್ವಿರಾಜ್ ಫಿಲ್ಮ್ಸ್, ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಗೂಗಲ್ ಇಂಡಿಯಾ ಹೆಡ್ ಆಫೀಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.

    ಇದೀಗ ನಟ ರಿಷಬ್ ಶೆಟ್ಟಿ (Rishab Shetty) ಸಂತಸ ವ್ಯಕ್ತಪಡಿಸಿದ್ದಾರೆ. “ದೇವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿನಲ್ಲಿ ಹಾಡು ಬದಲಾಯಿಸಲಿದ್ದೇವೆ” ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ `ತುಳು’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಡೇಟ್ ಔಟ್

    ಕಾಂತಾರ `ತುಳು’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಡೇಟ್ ಔಟ್

    ನ್ನಡದ ಜೊತೆ ಬಹುಭಾಷೆಗಳಲ್ಲಿ ‌ʻಕಾಂತಾರʼ (Kantara Film) ಭರ್ಜರಿ ಸೌಂಡ್ ಮಾಡಿತ್ತು. ಇದೀಗ ತುಳುನಾಡಿನಲ್ಲೂ ದೈವದ ಕಥೆ ತೆರೆಯ ಮೇಲೆ ತೋರಿಸಲು ರೆಡಿಯಾಗಿದ್ದಾರೆ. ತುಳುವಿನಲ್ಲಿ ತೆರೆಗೆ ಅಬ್ಬರಿಸಲು ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಸದ್ಯ `ಕಾಂತಾರ’ ತುಳು ಟ್ರೈಲರ್(Tulu Trailer) ರಿಲಿಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ.

    ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ `ಕಾಂತಾರ’ ಅಪ್ಪಟ ತುಳುನಾಡಿನ ದೈವದ ಕಥೆಯಾಗಿದೆ. ಪಂಜುರ್ಲಿ, ಗುಳಿಗ ಕೊರಗಜ್ಜ ದೈವವನ್ನು ಆರಾಧಿಸುವ ತುಳು ಪ್ರೇಕ್ಷಕರಿಗಾಗಿ `ಕಾಂತಾರ’ ಚಿತ್ರ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸದ್ಯ ಚಿತ್ರದ ಝಲಕ್ ಎಂಬಂತೆ ಟ್ರೈಲರ್ ಕೂಡ ರಿಲೀಸ್ ಆಗಿ ವ್ಯಾಪಕ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಟ್ರೈಲರ್‌ನಲ್ಲಿ ಎಲ್ಲೂ ಕೂಡ ದೋಷ ಬರದೇ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಇದನ್ನೂ ಓದಿ: ನಾನು ಮದುವೆ ಆಗಲ್ಲ ಎಂದ ಮೋಹಕತಾರೆ ರಮ್ಯಾ

    ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣ `ಕಾಂತಾರ’ ತುಳು ವರ್ಷನ್ ಚಿತ್ರವನ್ನು ಡಿಸೆಂಬರ್ 2ರಂದು 2022ಕ್ಕೆ ಭಾರತದಲ್ಲಿ ತೆರೆ ಕಾಣುತ್ತಿದೆ. ನವೆಂಬರ್ 25ರಂದು ವಿದೇಶದಲ್ಲಿ ಸಿನಿಮಾ ತೆರೆ ಕಾಣುತ್ತಿದೆ.

    ಕಾಂತಾರ ಈಗಾಗಲೇ 50 ದಿನ ಪೂರೈಸಿ 400 ಕೋಟಿಗೂ ಅಧಿಕ ಕಲೆಕ್ಷನ್ ಹೊಸ ದಾಖಲೆ ಬರೆದಿದೆ. ಒಟಿಟಿಯಲ್ಲೂ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]