Tag: kantara film

  • `ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ

    `ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ

    ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ `ಕಾಂತಾರ’ (Kantara Film) ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. 400 ಕೋಟಿ ರೂಪಾಯಿಗಿಂತ ಅಧಿಕ ಗಳಿಕೆ ಮಾಡಿದೆ. `ಕಾಂತಾರ’ ಚಿತ್ರದ ದೊಡ್ಡ ಮಟ್ಟದಲ್ಲಿ ಗೆಲ್ಲಲು ಕಾರಣ ಯಾರು ಎಂಬುದನ್ನ ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

    `ಕಾಂತಾರ’ ಸಕ್ಸಸ್ ನಂತರ ಸಿನಿಮಾ ಪತ್ರಕರ್ತರ ಜೊತೆ ರಿಷಬ್ ಮುಖಾಮುಖಿಯಾಗಿದ್ದಾರೆ. ಶನಿವಾರ (ಫೆ.11)ರಂದು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದಲ್ಲಿ (Karnataka Patrakartara Sangha) ಸಿನಿಮಾ ಪತ್ರಕರ್ತರ ಜೊತೆ ರಿಷಬ್ ಶೆಟ್ಟಿ ಅವರು ಮೊದಲ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು `ಕಾಂತಾರ’ ಸಿನಿಮಾದ ಸಕ್ಸಸ್ (Success) ಸೀಕ್ರೆಟ್ ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಕಥೆ ಹುಟ್ಟಿದ್ದು ಹೇಗೆ? ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲಲು ಕಾರಣವೇನು? ಎಂಬುದರ ಬಗ್ಗೆ ಮಾತನಾಡಿದ್ದಾರೆ.

    `ಕಾಂತಾರ’ ಎಂಬ ದೈವದ ಕಥೆ ಹುಟ್ಟಿದ್ದು 2021ರ ಏಪ್ರಿಲ್ ತಿಂಗಳಲ್ಲಿ ಆಗ ಕೊರೋನಾವಿದ್ದ ಕಾರಣ ಲಾಕ್‌ಡೌನ್‌ನಲ್ಲಿ ನಾನು ಊರಿನಲ್ಲಿದ್ದೆ. ಆಗ `ಕಾಂತಾರ’ ಸಿನಿಮಾದ ಕಥೆ ಹುಟ್ಟಿತ್ತು. ನಾನು ಸಾವಯವ ಕೃಷಿ ಮಾಡುವ ಆಲೋಚನೆಯಲ್ಲಿದ್ದೆ. ಇದಕ್ಕಾಗಿ ಮಾಹಿತಿ ಪಡೆಯಲು ಹೋಗಿದ್ದೆ. ಅಲ್ಲಿ ಕಾಡು ಪ್ರಾಣಿ ಹೊಡೆಯುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಫಾರೆಸ್ಟ್ ಇಲಾಖೆಯವರು ಅಲ್ಲಿ ರೈಡ್ ಮಾಡಿದರು. ಹಾಗಾಗಿ ‘ಕಾಂತಾರ’ ಚಿತ್ರದ ಕಥೆ ಹುಟ್ಟಿತು’ ಎಂದಿದ್ದಾರೆ ರಿಷಬ್ ಶೆಟ್ಟಿ. ಇದನ್ನೂ ಓದಿ:ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದಳು ಎಂದವರಿಗೆ ನಟಿ ಹನ್ಸಿಕಾ ಸ್ಪಷ್ಟನೆ

    `ಕೆಜಿಎಫ್ 2′ (KGF 2) ಚಿತ್ರ ನಿರ್ಮಾಣಕ್ಕೆ ಸಾಥ್ ನೀಡಿದ್ದು ಹೊಂಬಾಳೆ ಫಿಲ್ಮ್ಸ್ (Hombale Films) ಈ ಚಿತ್ರ ಯಶಸ್ಸು ಕಂಡಿದ್ದರಿಂದ ಈ ನಿರ್ಮಾಣ ಸಂಸ್ಥೆಯ ಹಸೆರು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿತು. ಇನ್ನೂ `ಕಾಂತಾರ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಕಾಣಲು ಸಾಧ್ಯವಾಯಿತು. ಕಾಂತಾರ ಚಿತ್ರ ಕನ್ನಡದಲ್ಲಿ ಯಶಸ್ಸು ಕಂಡ ನಂತರ ಅದನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ರಿಮೇಕ್ ಮಾಡಲಾಯಿತು. ಹೊಂಬಾಳೆ ಸಂಸ್ಥೆಗೆ ಈಗಾಗಲೇ ಜನಪ್ರಿಯತೆ ಇರುವ ಕಾರಣ `ಕಾಂತಾರ’ ಚಿತ್ರಕ್ಕೆ ಮತ್ತಷ್ಟು ಫ್ಲಸ್ ಆಯಿತು ಎಂದು ರಿಷಬ್ ವಿವರಿಸಿದ್ದಾರೆ.

    ʻಕಾಂತಾರʼ ಚಿತ್ರಕ್ಕೆ ರಿಲೀಸ್ ಸಮಯದಲ್ಲಿ ಹೆಚ್ಚು ಪ್ರಚಾರ ಮಾಡಿರಲಿಲ್ಲ. ಬಾಯಿಮಾತಿನ ಪ್ರಚಾರ ಚಿತ್ರಕ್ಕೆ ಸಹಕಾರಿ ಆಯಿತು. `ಕಾಂತಾರ’ ಪ್ಯಾನ್ ಇಂಡಿಯಾ ಸಿನಿಮಾ (Pan India Film) ಆಗುತ್ತದೆ ಎಂದು ಯಾರು ಊಹಿಸಿರಲಿಲ್ಲ. ನಮ್ಮ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಲು ವಿಜಯ್ ಕಿರಂಗದೂರು ಅವರೇ ಕಾರಣ. ಅವರಿಗೆ ನಮ್ಮ ಸಿನಿಮಾನ ಹೇಗೆ ತಲುಪಿಸಬೇಕು ಎನ್ನುವ ಕ್ಲ್ಯಾರಿಟಿ ಇತ್ತು. ಈ ಕ್ಲ್ಯಾರಿಟಿ ಇದ್ದಿದ್ದರಿಂದಲೇ ಯಶಸ್ಸು ಸಿಕ್ಕಿತು ಎಂದು ರಿಷಬ್ ಹಾಡಿ ಹೊಗಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ಕಥೆ ಇದ್ದರೆ ಜನ ಒಪ್ಪಿಕೊಳ್ತಾರೆ, `ಕಾಂತಾರ’ ಸಕ್ಸಸ್ ಬಗ್ಗೆ ಕಿಚ್ಚನ ಮಾತು

    ಹೊಸ ಕಥೆ ಇದ್ದರೆ ಜನ ಒಪ್ಪಿಕೊಳ್ತಾರೆ, `ಕಾಂತಾರ’ ಸಕ್ಸಸ್ ಬಗ್ಗೆ ಕಿಚ್ಚನ ಮಾತು

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) `ವಿಕ್ರಾಂತ್ ರೋಣ’ (Vikrantrona) ಸಿನಿಮಾ ನಂತರ ಹೊಸ ಸಿನಿಮಾ ಮೂಲಕ ಬರುವ ತಯಾರಿ ನಡೆಯಲ್ಲಿದ್ದಾರೆ. ಹೀಗಿರುವಾಗ ಕಾಂತಾರ (KANTARA) ಸಿನಿಮಾ ಸಕ್ಸಸ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ಕನ್ನಡ ಮತ್ತು ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲುತ್ತಿದೆ. ಬಾಲಿವುಡ್‌ನಲ್ಲಿ ದಕ್ಷಿಣದ ಸಿನಿಮಾಗಳು ಕಮಾಲ್ ಮಾಡುತ್ತಿದೆ. ಹೀಗಿರುವಾದ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್‌ಗೆ ಪ್ರಶ್ನೆಯೊಂದು ಎದುರಾಗಿದೆ. ಸಿನಿಮಾ ಸಕ್ಸಸ್ ಸೂತ್ರಗಳು ಬಗ್ಗೆ ನಟ ಮಾಡಿದ್ದಾರೆ. ಇತ್ತೀಚಿಗೆ ಕಾರ್ಯಕ್ರಮದಲ್ಲಿವೊಂದರಲ್ಲಿ ಭಾಗವಹಿಸಿದ ಸುದೀಪ್‌ಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹೇಗೆ ಗೆಲ್ಲುತ್ತವೆ, ಯಾವ ಚಿತ್ರಗಳನ್ನು ಪ್ಯಾನ್ ಇಂಡಿಯಾ ಮಾಡಬೇಕು ಎಂಬುದನ್ನು ನಿರ್ಧರಿಸುವುದು ಹೇಗೆ, ಇದರ ಒತ್ತಡ ನಿರ್ಮಾಪಕರ ಮೇಲೆ ಯಾವ ರೀತಿ ಬೀಳಲಿದೆ ಎಂಬ ಪ್ರಶ್ನೆ ಎದುರಾಯಿತು.

    ಈ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದ ಸುದೀಪ್ ಚೈನೀಸ್ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದರು. ಬೇರೆ ಭಾಷೆಗಳಿಗೆ ಡಬ್ ಮಾಡಿ ವಿಶ್ವದಾದ್ಯಂತ ತಮ್ಮ ಸಿನಿಮಾಗಳು ಹಬ್ಬುವಂತೆ ಮಾಡಿದರು. ಇಂಗ್ಲಿಷ್ ಭಾಷೆಗೆ ಡಬ್ ಆದ ಚೈನೀಸ್ ಭಾಷೆಗಳು ದೇಶದೆಲ್ಲೆಡೆ ಗೆದ್ದವು, ಪ್ರೇಕ್ಷಕನಿಗೆ ಹೊಸತನ್ನು ನೋಡುವ ಬಯಕೆ ಇರುತ್ತದೆ. ಹಾಗಾಗಿಯೇ ಹೊಸತನದಿದ್ದ ಚೈನೀಸ್ ಕೊರಿಯನ್ ಚಿತ್ರಗಳನ್ನು ಭಾರತದ ಅಭಿಮಾನಿಗಳು ಮೆಚ್ಚಿಕೊಂಡರು ಎಂದು ಕಿಚ್ಚ ಮಾತನಾಡಿದ್ದಾರೆ.

    ಇದೇ ವೇಳೆ ರಿಷಬ್‌ ನಟನೆ, ನಿರ್ದೇಶನದ `ಕಾಂತಾರ’ (KANTARA) ಚಿತ್ರ ಒಂದು ಕನ್ನಡ ಚಿತ್ರ, ಕರ್ನಾಟಕದ (Karnataka) ಆಚರಣೆಯಾದ ಭೂತಕೋಲದ ಕಥೆ ಇರುವ ಚಿತ್ರ, ಈ ಚಿತ್ರವನ್ನು ಉತ್ತರ ಪ್ರದೇಶದ ಸಿನಿ ರಸಿಕ ಮೆಚ್ಚಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಯೂ ಸಹ ಸುದೀಪ್ ಅವರಿಗೆ ಎದುರಾಯಿತು. ಇದರ ಬಗ್ಗೆಯೂ ಮಾತನಾಡಿದ ಸುದೀಪ್ ʻಕಾಂತಾರʼ ನಮ್ಮ ನಾಡಿನ ಕಥೆಯಾದರೂ ಬೇರೆ ಭಾಷೆಯ ಜನರಿಗೆ ಹೊಸತು, ಸಾಮಾನ್ಯ ಕಥೆಗಳನ್ನು ನೋಡಿರುವ ಸಿನಿ ರಸಿಕರಿಗೆ ಆ ಚಿತ್ರ ಹೊಸ ಅನುಭವವನ್ನು ನೀಡಿತು, ಅದು ಬೇರೆ ರಾಜ್ಯದ ಸಿನಿ ರಸಿಕರಿಗೆ ಹೊಸತು, ಹಾಗಾಗಿ ಗೆಲುವು ಕಂಡಿತು, ಪ್ಯಾನ್ ಇಂಡಿಯಾ ಚಿತ್ರಗಳು ಗೆಲ್ಲುವುದೇ ಈ ರೀತಿ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿನಿಮಾ ಸಕ್ಸಸ್ ಸೆಲೆಬ್ರೇಶನ್ ಸಂಭ್ರಮದಲ್ಲಿ `ಕಾಂತಾರ’ ಟೀಮ್

    ಸಿನಿಮಾ ಸಕ್ಸಸ್ ಸೆಲೆಬ್ರೇಶನ್ ಸಂಭ್ರಮದಲ್ಲಿ `ಕಾಂತಾರ’ ಟೀಮ್

    ನ್ನಡದ `ಕಾಂತಾರ’ (Kantara) ಪ್ಯಾನ್ ಇಂಡಿಯಾ ಸಿನಿಮಾವಾಗಿ ದಶದಿಕ್ಕುಗಳಲ್ಲೂ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. 100 ದಿನಗಳನ್ನ ಪೂರೈಸಿರುವ ಬೆನ್ನಲ್ಲೇ ಇದೀಗ ಸಕ್ಸಸ್ ಪಾರ್ಟಿ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ `ಕಾಂತಾರ’ ದೈವದ ಕಥೆಗೆ ಕನ್ನಡಿಗರು ಮಾತ್ರವಲ್ಲದೇ ಪರಭಾಷಿಗರು ಫಿದಾ ಆಗಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಕೋಟಿಗಟ್ಟಲೇ ಲೂಟಿ ಮಾಡುವ ಮೂಲಕ ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆದಿತ್ತು. ಇದನ್ನೂ ಓದಿ:ರಾಮ್ ಚರಣ್ ಅದೃಷ್ಟವನ್ನೇ ಬದಲಿಸಿದ ಆರ್.ಆರ್.ಆರ್ ಚಿತ್ರ

    `ಕಾಂತಾರ’ ಸಿನಿಮಾ ಶತದಿನೋತ್ಸವ ಪೂರೈಸಿದೆ. ಈ ಸಂಭ್ರಮವನ್ನು ಇಡೀ ಚಿತ್ರತಂಡ ಒಟ್ಟಾಗಿ ಫೆ.5ರಂದು ಬೆಂಗಳೂರು ವಿಜಯನಗರದ ಬಂಟ್ಸ್ ಸಂಘದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಕ್ಸಸ್ ಸೆಲೆಬ್ರೆಟ್ ಮಾಡಲಿದ್ದಾರೆ.

    ಇದೇ ಭಾನುವಾರ ರಿಷಬ್ ಶೆಟ್ಟಿ, ನಾಯಕಿ ಸಪ್ತಮಿ (Saptami Gowda) ಸೇರಿದಂತೆ ಹಲವರು ಚಿತ್ರದ ಸಕ್ಸಸ್ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಒಂದೇ ವೇದಿಕೆಯ ಮೇಲೆ ಕಾಂತಾರ ಚಿತ್ರತಂಡದ ಸಮಾಗಮವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸ್ಟಾರ್ ನಟ-ನಟಿಯರನ್ನ ಕೂಡ ಹೊಂಬಾಳೆ ಸಂಸ್ಥೆ (Hombale Films) ಆಹ್ವಾನ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಕಾಂತಾರ’ ಬ್ಯೂಟಿ ಸಪ್ತಮಿ ಗೌಡ

    ಹೊಸ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಕಾಂತಾರ’ ಬ್ಯೂಟಿ ಸಪ್ತಮಿ ಗೌಡ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಸಪ್ತಮಿ ಗೌಡ (Saptami Gowda)  ಸದ್ಯ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ಈ ನಡುವೆ ಚೆಂದದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.

    `ಪಾಫ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಸುಂದರಿ ಸಪ್ತಮಿ ಗೌಡ, `ಕಾಂತಾರ’ (Kantara) ಸಿನಿಮಾದ ಸಕ್ಸಸ್ ನಂತರ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ನಯಾ ಫೋಟೋಶೂಟ್‌ ಶೇರ್‌ ಮಾಡಿ, ಲೈಟ್ಸ್‌, ಕ್ಯಾಮರಾ, ಆಕ್ಷನ್‌ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಿರ್ದೇಶಕಿ ರಿಷಿಕಾ ಜೊತೆ ಫೆ.15ಕ್ಕೆ ನಟ ನಿಹಾಲ್ ಮದುವೆ

     

    View this post on Instagram

     

    A post shared by Sapthami Gowda ???? (@sapthami_gowda)

    ಮೆರುನ್ ಬಣ್ಣದ ಲೆಹೆಂಗಾ ಧರಿಸಿ ನಟಿ ಸಪ್ತಮಿ, ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮರಾಗೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ನಟಿಯ ಹೊಸ ಲುಕ್ ನೋಡಿ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಕಾಂತಾರ ನಟಿಯ ಹೊಸ ಲುಕ್‌ ಈಗ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ.

    ಇನ್ನೂ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ `ದಿ ವಾಕ್ಸಿನ್ ವಾರ್’ ಚಿತ್ರದ ಮೂಲಕ ಬಾಲಿವುಡ್‌ಗೆ ನಟಿ ಕಾಲಿಡುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಸಿನಿಮಾ ಕೂಡ ಮಾಡ್ತಿದ್ದಾರೆ. `ಉತ್ತರಕಾಂಡ’ ಚಿತ್ರದಲ್ಲಿ ಡಾಲಿ ಮತ್ತು ರಮ್ಯಾ ಜೊತೆ ಸಪ್ತಮಿ ಗೌಡ ಕೂಡ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿದರೂ, ನನ್ನ ಮೊದಲ ಆದ್ಯತೆ ಕನ್ನಡಕ್ಕೆ: ʻಕಾಂತಾರʼ ನಟಿ

    ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿದರೂ, ನನ್ನ ಮೊದಲ ಆದ್ಯತೆ ಕನ್ನಡಕ್ಕೆ: ʻಕಾಂತಾರʼ ನಟಿ

    `ಕಾಂತಾರ’ (Kantara) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚ್ತಿರುವ ಸಪ್ತಮಿ ಗೌಡ (Saptami Gowda) ಇದೀಗ ಬಾಲಿವುಡ್‌ಗೆ (Bollywood) ಹಾರಿದ್ದಾರೆ. `ಕಾಶ್ಮೀರ್ ಫೈಲ್ಸ್’ (Kashmir Files) ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಜೊತೆ ಸಿನಿಮಾಗಾಗಿ ಸಪ್ತಮಿ ಕೈ ಜೋಡಿಸಿದ್ದಾರೆ. ನಾನು ಯಾವುದೇ ಭಾಷೆಯಲ್ಲಿ ನಟಿಸಿದ್ರು ನನ್ನ ಆದ್ಯತೆ ಕನ್ನಡಕ್ಕೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಸಪ್ತಮಿ ಮಾತನಾಡಿದ್ದಾರೆ.

    ಹೊಂಬಾಳೆ ಸಂಸ್ಥೆಯ `ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ಪಾತ್ರಕ್ಕೂ ತೂಕವಿದೆ. ತಮಗೆ ಸಿಕ್ಕ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈಗ ಸಪ್ತಮಿಗೆ ಬಹುಭಾಷೆಗಳಿಂದ ಅನೇಕ ಆಫರ್ಸ್‌ಗಳು ಅರಸಿ ಬರುತ್ತಿದೆ. ಸದ್ಯ ಬಾಲಿವುಡ್ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ `ದಿ ವಾಕ್ಸಿನ್ ವಾರ್’ ಚಿತ್ರಕ್ಕೆ ಓಕೆ ಅಂದಿದ್ದಾರೆ. ಈ ಸಿನಿಮಾಗೆ ಆಯ್ಕೆಯಾಗಿದ್ದು ಹೇಗೆ? ಎಂಬುದರ ಜೊತೆಗೆ ಸಾಕಷ್ಟು ವಿಚಾರಗಳ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ವಿವೇಕ್ ಅಗ್ನಿಹೋತ್ರಿ ಅವರು, ಕಾಂತಾರ ಸಿನಿಮಾದಲ್ಲಿ ಸಪ್ತಮಿ (Saptami) ನಟನೆ ನೋಡಿ, ರಿಷಬ್‌ಗೆ ಕಾಲ್ ಮಾಡಿದ್ದರು. ಚಿತ್ರದಲ್ಲಿನ ಪಾತ್ರಕ್ಕೆ ಸಪ್ತಮಿ ಸೂಕ್ತ ಎಂದೆನಿಸಿ ನನ್ನ ಫೋನ್ ನಂಬರ್ ಕೇಳಿದ್ದಾರೆ. ಬಳಿಕ ನನಗೆ ಕರೆ ಮಾಡಿ, ಈ ಪಾತ್ರ ನಾನು ಮಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿದರು. ನಾನು ತಕ್ಷಣ ಒಪ್ಪಿಕೊಂಡೆ, ಬಳಿಕ ನನಗೆ ಸ್ಕ್ರಿಪ್ಟ್ (Script) ಕಳುಹಿಸಲಾಯಿತು. ಬಳಿಕ ನಾನು ಈ ಚಿತ್ರದ ಭಾಗವಾದೆ ಎಂದು `ಕಾಂತಾರ’ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ: `ವಾರಿಸು’ದಲ್ಲಿ ತನ್ನ ಪಾತ್ರಕ್ಕೆ ಮಹತ್ವವಿಲ್ಲ: ಕಾರಣ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Sapthami Gowda ???? (@sapthami_gowda)

    ಮುಂದೆ ಕೂಡ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ, ನನಗೆ ಕಥೆ ಇಷ್ಟವಾದರೆ ಖಂಡಿತಾ ನಟಿಸುತ್ತೇನೆ. ಆದರೆ ನನ್ನ ಆದ್ಯತೆ ಕನ್ನಡಕ್ಕೆ ಮತ್ತು ಕನ್ನಡ ಸಿನಿಮಾಗಳಿಗಾಗಿ (Kannada Films) ಎದುರು ನೋಡುತ್ತಿದ್ದೇನೆ ಎಂದು ನಟಿ ಮಾತನಾಡಿದ್ದಾರೆ.

    ಇನ್ನೂ `ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ನಾಯಕ- ನಾಯಕಿ ಎಂಬುದಿಲ್ಲ. ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ನನ್ನ ಪಾತ್ರವಂತೂ ಕಷ್ಟಕರವಾಗಿದೆ. ಸುಲಭ ಇದ್ದರೆ ಮಜಾ ಇರೋಲ್ಲ. ಈ ಪಾತ್ರ ಮಾಡುವುದ್ದಕ್ಕೆ ನನಗೆ ವಿವೇಕ್ ಅಗ್ನಿಹೋತ್ರಿ ನನಗೆ ತುಂಬಾ ಬೆಂಬಲಿಸಿದ್ದಾರೆ ಎಂದು ನಟಿ ಸಪ್ತಮಿ ಮುಕ್ತವಾಗಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Kantara: ಹಿಂದಿಯಲ್ಲಿ ಶತದಿನ ಪೂರೈಸಿದ ರಿಷಬ್ ನಟನೆಯ `ಕಾಂತಾರ’ ಸಿನಿಮಾ

    Kantara: ಹಿಂದಿಯಲ್ಲಿ ಶತದಿನ ಪೂರೈಸಿದ ರಿಷಬ್ ನಟನೆಯ `ಕಾಂತಾರ’ ಸಿನಿಮಾ

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ’ ಹಿಂದಿ ಅವತರಣಿಕೆ ಸಿನಿಮಾ ನೂರು ದಿನಗಳನ್ನ ಪೂರೈಸಿದೆ. ಬಾಲಿವುಡ್ ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿ `ಕಾಂತಾರ’ ಸಿನಿಮಾ ಯಶಸ್ವಿಯಾಗಿದೆ. ಈ ಬಗ್ಗೆ ರಿಷಬ್ ಮತ್ತು ʻಹೊಂಬಾಳೆʼ ಸಂಸ್ಥೆ ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು `ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಿಯಾಂಕಾ ಕಾಮತ್ ಎಂಗೇಜ್‌ಮೆಂಟ್

    2022, ಸೆ.30 ರಿಲೀಸ್ ಆದ ಕಾಂತಾರ ಸಿನಿಮಾಗೆ ದೇಶದ ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ `ಕಾಂತಾರ’ ಚಿತ್ರ ಗೆದ್ದು ಬೀಗಿದೆ. ಹಿಂದಿ ವರ್ಷನ್‌ನ ʻಕಾಂತಾರʼ ಸಿನಿಮಾ ಫ್ಯಾನ್ಸ್‌ಗೆ ಇಷ್ಟವಾಗಿದೆ. ಅಲ್ಲೂ ಕೂಡ ರಿಷಬ್ ಶೆಟ್ಟಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ.

    ಈಗ ಚಿತ್ರದ ಸಕ್ಸಸ್ ಕುರಿತು ರಿಷಬ್ ಶೆಟ್ಟಿ, ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿ `ಕಾಂತಾರ’ 100 ದಿನಗಳನ್ನ ಪೂರೈಸಿದೆ ಎಂದು ಹೇಳಲು ನಾವು ಸಂಭ್ರಮಿಸುತ್ತೇವೆ. ಹಿಂದಿ ಚಿತ್ರರಂಗದ ಬೆಂಬಲಕ್ಕಾಗಿ ನಾವು ಪ್ರೇಕ್ಷಕರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇವೆ ಎಂದಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ.

    ಇನ್ನೂ ʻಹೊಂಬಾಳೆ ಸಂಸ್ಥೆʼ ನಿರ್ಮಾಪಕ ವಿಜಯ್ ಕಿರಗಂದೂರು ಇತ್ತೀಚಿನ ಸಂದರ್ಶನವೊಂದರಲ್ಲಿ `ಕಾಂತಾರ 2′ ಸಿನಿಮಾ ಮಾಡುವ ಕುರಿತಾಗಿ ಮಾತನಾಡಿದ್ದಲ್ಲದೇ, ಸಿನಿಮಾ ಶೂಟಿಂಗ್ ಮತ್ತು ರಿಲೀಸ್ ದಿನಾಂಕವನ್ನೂ ಅವರು ಘೋಷಿಸಿದ್ದಾರೆ. ಜೊತೆಗೆ ಈಗಾಗಲೇ ರಿಷಬ್ ಮತ್ತು ಟೀಮ್ ಕಥೆ ಮಾಡುವುದರಲ್ಲಿ ತೊಡಗಿದೆ ಎನ್ನುವ ವಿಷಯವನ್ನೂ ಬಹಿರಂಗಪಡಿಸಿದ್ದಾರೆ. ಚಿತ್ರೀಕರಣದ ಸ್ಥಳ ಹುಡುಕಲು ಕಾಡು ಮೇಡು ಅಲೆಯುತ್ತಿರುವುದಾಗಿಯೂ ತಿಳಿಸಿದ್ದಾರೆ.

    ವಿಜಯ್ ಕಿರಗಂದೂರು ಅವರೇ ಹೇಳಿದಂತೆ ಈ ವರ್ಷ ಜೂನ್‌ನಿಂದ ಚಿತ್ರೀಕರಣ ಶುರುವಾಗಲಿದೆ. ಏಪ್ರಿಲ್ ಅಥವಾ ಮೇ 2024ರಂದು `ಕಾಂತಾರ 2′ ಚಿತ್ರ ತೆರೆಗೆ ಬರಲಿದೆಯಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾವು ಸಾಕಷ್ಟು ಕಲಾವಿದರನ್ನ ಲಾಂಚ್ ಮಾಡಿದ್ದೇವೆ: ರಶ್ಮಿಕಾ ಮಂದಣ್ಣಗೆ ರಿಷಬ್ ಶೆಟ್ಟಿ ಟಾಂಗ್

    ನಾವು ಸಾಕಷ್ಟು ಕಲಾವಿದರನ್ನ ಲಾಂಚ್ ಮಾಡಿದ್ದೇವೆ: ರಶ್ಮಿಕಾ ಮಂದಣ್ಣಗೆ ರಿಷಬ್ ಶೆಟ್ಟಿ ಟಾಂಗ್

    `ಕಾಂತಾರ’ (Kantara) ಸಕ್ಸಸ್‌ ಅಲೆಯಲ್ಲಿ ರಿಷಬ್‌ ಶೆಟ್ಟಿ ತೇಲುತ್ತಿದ್ದಾರೆ. ಈ ಬೆನ್ನಲ್ಲೇ ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ರಿಷಬ್‌ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ʻಕಾಂತಾರʼ ಹೀರೋ ಕಿರಿಕ್ ಬ್ಯೂಟಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ಬಹುಭಾಷಾ ನಟಿಯಾಗಿ ಮಿಂಚ್ತಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಕನ್ನಡಿಗರ ಕೆಂಗಣ್ಣಿಗೆ ಹಲವು ವಿಚಾರಗಳಿಗೆ ಗುರಿಯಾಗಿದ್ದಾರೆ. ಕನ್ನಡದ ಮೊದಲ ಸಿನಿಮಾ ನಿರ್ಮಾಣ ಸಂಸ್ಥೆ ಬಗ್ಗೆ ನಟಿ ಕೊಟ್ಟ ಉತ್ತರಕ್ಕೆ ಕನ್ನಡಿಗರು ಕಿಡಿಕಾರಿದ್ದರು. ಅದಕ್ಕೆ ರಿಷಬ್ ಶೆಟ್ಟಿ (Rishab Shetty) ಕೂಡ ಪರೋಕ್ಷವಾಗಿ ಉತ್ತರ ಕೊಟ್ಟಿರುವ ಇದೀಗ ಮತ್ತೆ ರಶ್ಮಿಕಾ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ರಿಷಬ್‌ಗೆ ಕೇಳಲಾಗಿದೆ. ಇದನ್ನೂ ಓದಿ: ವಿಜಯ್ ಕಿರಗಂದೂರು ಸೇರಿದಂತೆ ಮೂವರಿಗೆ ವಿಶೇಷ ಪ್ರಶಸ್ತಿ

    ಅಯ್ಯೋ.. ಅಂತವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನಾವು ಸಾಕಷ್ಟು ಕಲಾವಿದರನ್ನ ಲಾಂಚ್ ಮಾಡಿದ್ದೇವೆ. ನಮಗೂ ಕೂಡ ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಅಂತಹ ದೊಡ್ಡ ವ್ಯಕ್ತಿಗಳ ಲಿಸ್ಟ್ ನಮ್ಮ ಬಳಿಯೂ ಇದೆ, ಈ ಬಗ್ಗೆ ಮತ್ತೆ ಮಾತನಾಡೋಕೆ ಎನು ಇಲ್ಲಾ ಎಂದು ರಿಷಬ್ ಮಾತನಾಡಿದ್ದಾರೆ. ಈ ಮೂಲಕ ರಶ್ಮಿಕಾಗೆ ರಿಷಬ್ ಟಾಂಗ್ ಕೊಟ್ಟಿದ್ದಾರೆ.

    ಇನ್ನೂ ನಟಿಯ ಹಳೆಯ ವಿವಾದದ ಬಳಿಕ ಇತ್ತೀಚಿನ ‌ʻಮಿಷನ್‌ ಮಜ್ನುʼ ಸಂದರ್ಶನದಲ್ಲಿ, ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಅವರು ಸಿನಿಮಾ ಇಂಡಸ್ಟ್ರಿಯ ದಾರಿ ತೋರಿಸಿದರು. ಅವರು ನನಗೆ ಅವಕಾಶ ನೀಡಿದರು. `ಅಂಜನಿಪುತ್ರ’ ಚಿತ್ರದಲ್ಲಿ ಪುನೀತ್ ಜೊತೆ ನಟಿಸಿದೆ. ಅವರು ವಿಶಾಲವಾಗಿ ಹೇಗೆ ಆಲೋಚಿಸೋದು ಅಂತಾ ಹೇಳಿಕೊಟ್ಟರು. ನಾನು ನಾಲ್ಕು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನೇ ಅಚ್ಚರಿಗೊಳ್ಳುತ್ತೇನೆ. ನನ್ನ ಕಡೆಯಿಂದ ಅವರಿಗೆ ಧನ್ಯವಾದ ಎಂದಿದ್ದಾರೆ ರಶ್ಮಿಕಾ.

    ಇದೀಗ ರಶ್ಮಿಕಾ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಕೆಟ್ಟ ಮೇಲೆ ಈಗ ಬುದ್ಧಿ ಬಂತಾ ಅಂದರೆ, ಇನ್ನೂ ಕೆಲವರು ನಮ್ಮವರಾಗಲು ಪ್ರಯತ್ನಿಸಬೇಡಿ ಎಂದು ರಶ್ಮಿಕಾ ವಿರುದ್ಧ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದುಬೈಗೆ ಹಾರಿದ ರಿಷಬ್ ಶೆಟ್ಟಿ ಫ್ಯಾಮಿಲಿ: ಶೆಟ್ರ ಅಡ್ವೆಂಚರ್ ಹೇಗಿದೆ ಗೊತ್ತಾ?

    ದುಬೈಗೆ ಹಾರಿದ ರಿಷಬ್ ಶೆಟ್ಟಿ ಫ್ಯಾಮಿಲಿ: ಶೆಟ್ರ ಅಡ್ವೆಂಚರ್ ಹೇಗಿದೆ ಗೊತ್ತಾ?

    `ಕಾಂತಾರ’ (Kantara Film) ಹೀರೋ ರಿಷಬ್ ಶೆಟ್ಟಿ (Rishab Shetty) ದುಬೈಗೆ (Dubai) ಹಾರಿದ್ದಾರೆ. ಸಿನಿಮಾಗೆ ಬ್ರೇಕ್ ಕೊಟ್ಟು ಪತ್ನಿ ಪ್ರಗತಿ ಮತ್ತು ಮಕ್ಕಳೊಂದಿಗೆ ಅರಬ್ ದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    `ಕಾಂತಾರ’  ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ಈಗ ದುಬೈನಲ್ಲಿ ಫ್ಯಾಮಿಲಿ (Family) ಜೊತೆ ರಿಷಬ್ ಶೆಟ್ಟಿ ಟ್ರಿಪ್ ಹೋಗಿದ್ದಾರೆ. ಸಿನಿಮಾ ಪ್ರಚಾರ, ಶೂಟಿಂಗ್ ಅಂತಾ ವರ್ಷಾನುಗಟ್ಟಲೇಯಿಂದ ಬ್ಯುಸಿಯಿದ್ದ ರಿಷಬ್ ಶೆಟ್ಟಿ ಈಗ ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ನೀಡಿ ಕುಟುಂಬದ ಜೊತೆ ಅಡ್ವೆಂಚರ್ ಆಗಿ ಕಾಲ ಕಳೆಯುತ್ತಿದ್ದಾರೆ.

    ಅರಬ್ ದೇಶದಲ್ಲಿ ಪತ್ನಿ ಪ್ರಗತಿ ಮತ್ತು ಇಬ್ಬರು ಮುದ್ದು ಮಕ್ಕಳೊಂದಿಗೆ ಬೀಡು ಬಿಟ್ಟಿದ್ದಾರೆ. ಡೆಸರ್ಟ್ ರೈಡಿಂಗ್, ಪ್ಯಾರಾ ಗ್ಲೈಡಿಂಗ್, ಸೇರಿದಂತೆ ಅಡ್ವೆಂಚರ್ ಆಟಗಳನ್ನ ಆಡಿದ್ದಾರೆ. ಕುಟುಂಬದೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದಾರೆ. ಈ ಕುರಿತ ವೀಡಿಯೋವನ್ನ ರಿಷಬ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ

    ಇನ್ನೂ ಈ ವೀಡಿಯೋ ಶೇರ್ ಆಗುತ್ತಿದ್ದಂತೆ `ಕಾಂತಾರ 2′ ಚಿತ್ರದ ಬಗ್ಗೆ ಫ್ಯಾನ್ಸ್ ಅಪ್‌ಡೇಟ್ ಕೇಳಿದ್ದಾರೆ. ಕಾಂತಾರ ಪಾರ್ಟ್ 2 ಯಾವಾಗ ಎಂದು ಪ್ರಶ್ನೆಗಳನ್ನ ರಿಷಬ್ ಮುಂದಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂತಾರ ಸಿನಿಮಾ ಬಗ್ಗೆ ರೂಪೇಶ್‌ ರಾಜಣ್ಣ ಹೇಳಿದ್ದೇನು?

    ಕಾಂತಾರ ಸಿನಿಮಾ ಬಗ್ಗೆ ರೂಪೇಶ್‌ ರಾಜಣ್ಣ ಹೇಳಿದ್ದೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳಕು, ಆದರೆ ಇದು ಬೆಳಕಲ್ಲ 100 ದಿನದ ದರ್ಶನ: ಸಕ್ಸಸ್ ಬಗ್ಗೆ ರಿಷಬ್ ಸ್ಪೆಷಲ್ ನೋಟ್

    ಬೆಳಕು, ಆದರೆ ಇದು ಬೆಳಕಲ್ಲ 100 ದಿನದ ದರ್ಶನ: ಸಕ್ಸಸ್ ಬಗ್ಗೆ ರಿಷಬ್ ಸ್ಪೆಷಲ್ ನೋಟ್

    ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕನ್ನಡದ `ಕಾಂತಾರ’ (Kantara Film) ಸಿನಿಮಾ ಶತದಿನೋತ್ಸವ ಆಚರಿಸಿದೆ. `ಕಾಂತಾರ’ ಸಿನಿಮಾದ ಸಕ್ಸಸ್‌ಫುಲ್ ಜರ್ನಿಯ ಬಗ್ಗೆ ರಿಷಬ್ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಪೆಷಲ್ ನೋಟ್ ಬರೆದುಕೊಂಡಿದ್ದಾರೆ.

    ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಾಣದ, ರಿಷಬ್‌ ಶೆಟ್ಟಿ (Rishab Shetty) ನಿರ್ದೇಶನದ `ಕಾಂತಾರ’ 100 ದಿನಗಳನ್ನ ಪೂರೈಸಿದೆ. ಸೆಪ್ಟೆಂಬರ್ 30ರಂದು `ಕಾಂತಾರ’ ಸಿನಿಮಾ ತೆರೆಕಂಡಿತ್ತು. 2022ರ ವರ್ಷದ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಸಿನಿಮಾ ಸಕ್ಸಸ್ ಕಂಡಿದೆ. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹೀಗಿರುವಾಗ `ಕಾಂತಾರ’ 100 ದಿನಗಳನ್ನ ಪೂರೈಸಿರುವ ಬಗ್ಗೆ ರಿಷಬ್ ಶೆಟ್ಟಿ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ.

    ʻಬೆಳಕು.. ಆದರೆ ಇದು ಬೆಳಕಲ್ಲ 100 ದಿನದ ದರ್ಶನʼ ಎಂದು ರಿಷಬ್ ಶೆಟ್ಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪ್ರಯಾಣದ ಉದ್ದಕ್ಕೂ ನಮ್ಮನ್ನು ಹಿಡಿದಿಟ್ಟುಕೊಂಡು ದೈವತ್ವವನ್ನು ಕಂಡುಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಕಾಂತಾರ ಸಿನಿಮಾ ಡಿವೈನ್ ಬ್ಲ್ಯಾಕ್ ಬಸ್ಟರ್, 100 ದಿನಗಳನ್ನ ಪೂರೈಸಿದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕೊನೆಗೂ ಸಿಹಿ ಸುದ್ದಿ ಕೊಟ್ರು ವಿಕ್ಕಿ ಕೌಶಲ್-‌ ಕತ್ರಿನಾ ಕೈಫ್‌ ದಂಪತಿ

     

    View this post on Instagram

     

    A post shared by Rishab Shetty (@rishabshettyofficial)

    ʻಕಾಂತಾರʼ ಸಿನಿಮಾ ತುಳುನಾಡಿನ ದೈವದ ಕಥೆಯಾಗಿದ್ದು, ಚಿತ್ರಮಂದಿರದ ನಂತರ ಒಟಿಟಿಯಲ್ಲಿ ಕೂಡ ಚಿತ್ರ ಪ್ರಸಾರವಾಗಿತ್ತು. ಇದೀಗ ಶತ ದಿನಗಳನ್ನ(100 Days) ಪೂರೈಸಿರುವ ರಿಷಬ್ ಶೆಟ್ಟಿ ಸಿನಿಮಾ ಈಗ ಕಿರುತೆರೆಗೆ ಲಗ್ಗೆ ಇಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k