Tag: kantara film

  • ಚಿನ್ನಸ್ವಾಮಿಯಲ್ಲಿ ವೀಕ್ಷಿಸಿದ ಮೊದಲ ಪಂದ್ಯದ ಅನುಭವ ಹೇಗಿತ್ತು ಎಂದು ವಿವರಿಸಿದ ರಿಷಬ್ ಶೆಟ್ಟಿ

    ಚಿನ್ನಸ್ವಾಮಿಯಲ್ಲಿ ವೀಕ್ಷಿಸಿದ ಮೊದಲ ಪಂದ್ಯದ ಅನುಭವ ಹೇಗಿತ್ತು ಎಂದು ವಿವರಿಸಿದ ರಿಷಬ್ ಶೆಟ್ಟಿ

    ರ್‌ಸಿಬಿ ರೋಚಕವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಈ ಬಾರಿ ಆರ್‌ಸಿಬಿ ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಸಿಎಸ್‌ಕೆ ಮುಂದೆ ಗೆದ್ದು ಬೀಗಿದೆ. ಹೀಗಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ನೇರವಾಗಿ ರಿಷಬ್ ಶೆಟ್ಟಿ (Rishab Shetty) ವೀಕ್ಷಿಸಿದ್ದಾರೆ. ಅವರ ಮೊದಲ ಪಂದ್ಯದ ಅನುಭವ ಹೇಗಿತ್ತು? ಎಂದು ರಿಷಬ್ ಮಾತನಾಡಿದ್ದಾರೆ. ಆರ್‌ಸಿಬಿ ವಿನ್ ಆಗಲೇಬೇಕು ಎಂದು ಪಂದ್ಯ ಶುರುವಾಗುವ ಮುನ್ನ ಶುಭಹಾರೈಸಿದ್ದರು. ಇದೀಗ ಆರ್‌ಸಿಬಿ (RCB) ಇನ್ಸ್ಟಾಗ್ರಾಂ ಖಾತೆಯಲ್ಲಿ ರಿಷಬ್ ವಿಡಿಯೋ ಸದ್ದು ಮಾಡುತ್ತಿದೆ. ಇದನ್ನೂ ಓದಿ:ನಟಿ ಪವಿತ್ರಾ ಜಯರಾಮ್ ಸಾವಿನ ಬಳಿಕ ಸ್ನೇಹಿತ ಚಂದು ಆತ್ಮಹತ್ಯೆ

    ತುಂಬಾ ಖುಷಿಯಾಗುತ್ತಿದೆ. ವಿಷಯ ಏನೆಂದರೆ ನಾನು ಮೊದಲ ಬಾರಿಗೆ ಸ್ಟೇಡಿಯಂನಲ್ಲಿ ಮ್ಯಾಚ್ ನೋಡ್ತಾ ಇರೋದು. ಪ್ಲೇ-ಆಪ್ ಹೋಗಬೇಕು ಎಂಬ ಆಸೆಯಿದೆ ಎಂದಿದ್ದಾರೆ ರಿಷಬ್ ಶೆಟ್ಟಿ. ಮುಂಚೆಯಿಂದ ಕೂಡ ನಮ್ಮ ಬೆಂಗಳೂರು ಟೀಮ್ ಬೆಂಬಲಿಸುತ್ತಿದ್ದೆ. ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್‌ಗೆ ಫ್ಯಾನ್ ನಾನು. ಐಪಿಎಲ್‌ ಬಂದ ಮೇಲೆ ಆರ್‌ಸಿಬಿ ಎನ್ನುವ ಹೋರಾಟ ನಮ್ಮ ಸರ್ಕಲ್‌ನಲ್ಲಿ ನಡೆಯುತ್ತಿತ್ತು. ನನಗೆ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಇಷ್ಟ ಎಂದು ಮಾತನಾಡಿದ್ದಾರೆ.

    ಈ ವೇಳೆ, ಆರ್‌ಸಿಬಿ ಹೆಸರು ಬದಲಿಸಿದ ಪ್ರೋಮೋ ಬಗ್ಗೆ ಮಾತನಾಡಿದ್ದಾರೆ. ತಂಡ ನನಗೆ ಅಪ್ರೋಚ್ ಮಾಡಿದಾಗ ಕಾಲ್‌ನಲ್ಲಿ ಡ್ಯಾನೀಶ್ ಸೇಠ್ ಕೂಡ ಇದ್ದರು. ಹೊಂಬಾಳೆ ಸಂಸ್ಥೆ ನಿರ್ಮಾಪಕರು ಕೂಡ ಇದ್ದರು. ವಿಭಿನ್ನವಾಗಿ ಪ್ರೋಮೋ ತೋರಿಸಬೇಕು ಎಂದು ‘ಕಾಂತಾರ’ (Kantara) ಕೋಣವನ್ನೇ ಬಳಸಿಕೊಂಡಿದ್ದೇವೆ. Royal Challengers Banglore ಈಗ Royal Challengers Bengaluru ಆಗಿದೆ. ಮುಂಚೆಯಿಂದಲೂ ಆರ್‌ಸಿಬಿ ಫ್ಯಾನ್ ಆಗಿದ್ದೆ ಈಗ ಇದರ ಪ್ರಚಾರ ಭಾಗವಾಗಿರೋದರ ಬಗ್ಗೆ ಖುಷಿಯಿದೆ ಎಂದು ಮಾತನಾಡಿದ್ದರು.


    ಕ್ರಿಸ್‌ ಗೇಲ್‌ ಮತ್ತು ಅನುಷ್ಕಾ ಶಮಾ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ (ಮೇ 18) ಪಂದ್ಯ ವೀಕ್ಷಿಸಿದ್ದಾರೆ. ಈ ವೇಳೆ, ಕ್ರಿಸ್ ಗೇಲ್ ಅವರ ಅಭಿಮಾನಿ ನಾನು ಎಂದು ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಅನುಷ್ಕಾ ಶರ್ಮಾ ಅವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ ಎಂದು ರಿಷಬ್ ಮಾತನಾಡಿದ್ದಾರೆ.

  • ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ಸಿನಿಮಾರಂಗದಲ್ಲಿ ನಾನಾ ಬಗೆಯ ಪ್ರಯೋಗಗಳು ಮತ್ತು ನವೀನ ಕಥಾನಕದ ಚಿತ್ರಗಳು ವ್ಯಾಪಕವಾಗಿ ರೂಪುಗೊಳ್ಳುತ್ತಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲಾ ಲಕ್ಷಣಗಳನ್ನೂ ಒಳಗೊಂಡಿರುವ ಚಿತ್ರ ಅಂದರೆ ‘ಕರಿಹೈದ ಕೊರಗಜ್ಜ'(Kari Haida Koragajja). ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸದ್ಯದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣವಾಗಿರೋದು ಅಂದರೆ ಕಥೆ ಮತ್ತು ಒಟ್ಟಾರೆ ಸಿನಿಮಾ ಸಿದ್ದಗೊಂಡಿರುವ ರೀತಿ.

     

    ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡಿರುವ ಈ ಚಿತ್ರವೀಗ ಎಲ್ಲರ ನಿರೀಕ್ಷೆಗೆ ಕಾರಣವಾಗಿದೆ. ಅಷ್ಟಕ್ಕೂ ಇದೀಗ ಎಲ್ಲೆಡೆ ತುಳುನಾಡ ದೈವವಾದ ಕೊರಗಜ್ಜನ ಕಾರಣೀಕಗಳ ಪ್ರಭೆ ಹಬ್ಬಿಕೊಂಡಿದೆ. ತುಳುನಾಡಿನ ಗಡಿ ದಾಟಿ ಕೊರಗಜ್ಜನ ಪವಾಡಗಳು ಪಸರಿಸಿಕೊಂಡು, ಎಲ್ಲಾ ಭೂ ಭಾಗಗಳಲ್ಲಿ ಯೂ ಕೊರಗಜ್ಜನಿಗೆ ಭಕ್ತಗಣ ಸೃಷ್ಟಿಯಾಗಿದೆ. ಇಂಥಾ ಶಕ್ತಿ ಹೊಂದಿರುವ ಕೊರಗಜ್ಜನ ನಿಖರವಾದ ಕಥೆ ಹೊಂದಿರೋ ಈ ಚಿತ್ರ ತಯಾರುಗೊಂಡಿದ್ದರ ಹಿಂದೆ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯರ ಶ್ರಮ ದೊಡ್ಡದಿದೆ. ಇದನ್ನೂ ಓದಿ:‘ಪೊನ್ನಿಯನ್ ಸೆಲ್ವನ್ 2’ ಸಕ್ಸಸ್ ಬಳಿಕ ನಯನತಾರಾ ಜೊತೆಯಾದ ಜಯಂರವಿ

    ತ್ರಿವಿಕ್ರಮ ಸಾಫಲ್ಯ (Trivikram Sapalya) ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. ಯಶಸ್ವಿ ಉದ್ಯಮಿಯಾಗಿದ್ದರೂ ಸಿನಿಮಾ ಪ್ರೇಮವನ್ನು ಸದಾ ಕಾಯ್ದುಕೊಂಡಿದ್ದ ಅವರು ದಶಕಗಳಷ್ಟು ಕಾಲದಿಂದ ನಿರ್ಮಾಪಕರಾಗಿ (Producer) ಗುರುತಿಸಿಕೊಂಡಿದ್ದಾರೆ. 2012ರಲ್ಲಿ ‘ಪರಿ’ ಎಂಬ ಸಿನಿಮಾವನ್ನು ತ್ರಿವಿಕ್ರಮ ನಿರ್ಮಾಣ ಮಾಡಿದ್ದರು. ರಾಕೇಶ್ ಅಡಿಗ, ಹರ್ಷಿಕಾ ಪೂಣಚ್ಚ ಮುಂತಾದವರು ನಟಿಸಿದ್ದ ಆ ಚಿತ್ರ ಒಂದು ಮಟ್ಟಿಗೆ ಗೆಲುವು ದಾಖಲಿಸಿತ್ತು. ಆ ನಂತರದಲ್ಲಿ ಸಾಫಲ್ಯ ನಿರ್ಮಾಣ ಮಾಡಿದ್ದದ್ದು ‘ಸೀಜರ್’ ಎಂಬ ಚಿತ್ರವನ್ನು. ವಿನಯ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ (Chiranjeevi Sarja) ನಾಯಕನಾಗಿ ನಟಿಸಿದ್ದರು. ರವಿಚಂದ್ರನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂದಿತ್ತು. ಸಂಪೂರ್ಣ ಆಕ್ಷನ್ ಅಂಶಗಳೊಂದಿಗೆ ಮೂಡಿ ಬಂದಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿತ್ತು. ಬೆಸ್ಟ್ ಆಕ್ಷನ್ ಚಿತ್ರವಾಗಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿತ್ತು. ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

    ಗ್ಯಾಪ್‌ನ ನಂತರ ಇದೀಗ ತ್ರಿವಿಕ್ರಮ್ ಸಾಫಲ್ಯ ನಿರ್ಮಾಣ ಮಾಡಿರುವ ಚಿತ್ರ ‘ಕರಿಹೈದ ಕೊರಗಜ್ಜ’. ಸುಧೀರ್ ಅತ್ತಾವರ್ ನಿರ್ದೇಶನ ಮಾಡಿರುವ ಈ ಚಿತ್ರ ಕೊರಗಜ್ಜನ ರೋಚಕ ಜೀವನಗಾಥೆಯನ್ನೊಳಗೊಂಡಿದೆ. ಕೊರಗ ಸಮುದಾಯದ ಒಪ್ಪಿಗೆ ಪಡೆದೇ, ಕೊರಗಜ್ಜನ ಅಧಿಕೃತ ಕಥೆಗೆ ಸಿನಿಮಾ ಫ್ರೇಮು ತೊಡಿಸಲಾಗಿದೆಯಂತೆ. ಈ ಚಿತ್ರದಲ್ಲಿ ಘಟನುಘಟಿ ಕಲಾವಿದರ ದಂಡೇ ಇದೆ. ಬಾಲಿವುಡ್ ಖ್ಯಾತ ನಟ ಕಬೀರ್ ಬೇಡಿ ರಾಜನಾಗಿ ನಟಿಸಿದ್ದಾರೆ. ಭವ್ಯ, ಶ್ರುತಿ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರತಿಭಾವಂತ ಯುವ ನಟ ಭರತ್ ಕೊರಗಜ್ಜನಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಾ ಖ್ಯಾತ ಕೊರಿಗ್ರಾಫರ್ ಸೋಫಾರ್ಕರ್ ಗುಳಿಗನ ಪಾತ್ರ ಮಾಡಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

    ಇಂಥದೊಂದು ಅಪರೂಪದ ಸಿನಿಮಾವನ್ನು ಸಾಧ್ಯವಾಗಿಸಿರುವ ತ್ರಿವಿಕ್ರಮ್ ಸಾಫಲ್ಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಅಲ್ಲಿಯೇ ಓದು ಮುಗಿಸಿ, ಆ ನಂತರ ಕಷ್ಟದಿಂದಲೇ ಬದುಕು ಕಟ್ಟಿಕೊಂಡಿರುವ ಸಾಫಲ್ಯ ಯಶಶ್ವಿ ಉದ್ಯಮಿಯಾಗಿ ನೆಲೆ ಕಂದುಕೊಂಡಿದ್ದರ ಹಿಂದೆ ಎಲ್ಲರಿಗೂ ಸ್ಫೂರ್ತಿಯಾಗುವಂಥ ಕಥನವಿದೆ. ಟ್ರಾನ್ಸ್ಫರ್ಮೆರ್ ತಯಾರಿಸುವ ಬಹು ದೊಡ್ಡ ಉದ್ದಿಮೆ ನಡೆಸುವ ತ್ರಿವಿಕ್ರಮ ಅವರು ಇದೀಗ ನಿರ್ಮಾಪಕರಾಗಿಯೂ ನೆಲೆ ಕಂಡುಕೊಂಡಿದ್ದಾರೆ. ಕೊರಗಜ್ಜ ಚಿತ್ರದ ಜೊತೆಗೇ ಮತ್ತೊಂದಷ್ಟು ಸಿನಿಮಾಗಳ ನಿರ್ಮಾಣ ಕಾರ್ಯದಲ್ಲಿಯೂ ಬ್ಯುಸಿಯಾಗಿದ್ದಾರೆ. ರಾಜಕುಮಾರ್, ವಿಷ್ಣುವರ್ಧನ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದು, ಅಪಾರವಾದ ಸಿನಿಮಾಶಕ್ತಿ ರೂಢಿಸಿಕೊಂಡಿರುವ ತ್ರಿವಿಕ್ರಮ ಸಾಫಲ್ಯ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರಾಗಿ ಮುಂಚೂಣಿಯಲ್ಲಿದ್ದಾರೆ.

  • ಸಪ್ತಮಿ ಫ್ಯಾನ್ಸ್‌ಗೆ ಬ್ಯಾಡ್‌ ನ್ಯೂಸ್-‌ ಮುಂದಕ್ಕೆ ಹೋಯ್ತು ಬಾಲಿವುಡ್‌ ಚಿತ್ರದ ರಿಲೀಸ್‌ ಡೇಟ್

    ಸಪ್ತಮಿ ಫ್ಯಾನ್ಸ್‌ಗೆ ಬ್ಯಾಡ್‌ ನ್ಯೂಸ್-‌ ಮುಂದಕ್ಕೆ ಹೋಯ್ತು ಬಾಲಿವುಡ್‌ ಚಿತ್ರದ ರಿಲೀಸ್‌ ಡೇಟ್

    ನ್ನಡದ ‘ಕಾಂತಾರ’ (Kantara) ಬ್ಯೂಟಿ ಸಪ್ತಮಿ ಗೌಡ (Saptami Gowda) ಅವರು ಜೂನ್ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಭಿಮಾನಿಗಳು, ಆಪ್ತರ ಹಾರೈಕೆ ನೋಡಿ ನಟಿ ಖುಷಿಪಟ್ಟರು. ಈ ಬೆನ್ನಲ್ಲೇ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ಸಪ್ತಮಿ ನಟನೆಯ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

    ‘ಕಾಂತಾರ’ ಸಿನಿಮಾದ ನಟನೆ ನೋಡಿ ಬಾಲಿವುಡ್ ಚಿತ್ರಕ್ಕೆ ವಿವೇಕ್ ಅಗ್ನಿಹೋತ್ರಿ ಬಂಪರ್ ಆಫರ್ ಕೊಟ್ರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ‘ದಿ ವ್ಯಾಕ್ಸಿನ್ ವಾರ್’ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕನ್ನಡದ ಸಿನಿಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. ಈ ವರ್ಷ ಸ್ವಾತಂತ್ರೋತ್ಸವದ ದಿನದಂದು ಸಿನಿಮಾ ರಿಲೀಸ್ ಮಾಡುವ ಬಗ್ಗೆ ತಂಡ ಯೋಚಿಸಿತ್ತು. ಆದರೆ ಈಗ ಕಾರಣಾಂತರಗಳಿಂದ ಸಿನಿಮಾ ಮುಂದಕ್ಕೆ ಹೋಗಿದೆ.

    ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗೆ ಈಗ ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಕೆಲವು ದಿನಗಳ ಶೂಟಿಂಗ್ ಬಾಕಿ ಇದೆ. ಭಾರತದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅಮೆರಿಕದಲ್ಲಿ ಪ್ರೀಮಿಯರ್ ಮಾಡಲು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಯೋಚಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ಯೋಗಾಭ್ಯಾಸದ ವೀಡಿಯೋದಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ರಾಗಿಣಿ

    ಸಪ್ತಮಿ ಗೌಡ ಅವರ ಕೈಯಲ್ಲಿ ದಿ ವ್ಯಾಕ್ಸಿನ್ ವಾರ್, ಕಾಳಿ, ಯುವ ಸಿನಿಮಾಗಳಿವೆ. ಮತ್ತೊಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಒಟ್ನಲ್ಲಿ ‘ಕಾಂತಾರ’ ಚಿತ್ರದ ಬಳಿಕ ಲೀಲಾ ಬಿಗ್ ಆಫರ್ಸ್‌ಗಳನ್ನೇ ಚಾಚಿಕೊಳ್ತಿದ್ದಾರೆ.

    ವಿವೇಕ್ ಅಗ್ನಿಹೋತ್ರಿ ಅವರು ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡದ ವಿಷಯವನ್ನು ಆಧರಿಸಿ ದಿ ಕಾಶ್ಮೀರ್ ಫೈಲ್ಸ್ ಮೂಡಿಬಂದಿತ್ತು. ಆ ಸಿನಿಮಾ ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗ ಅವರು ಕೊರೊನಾ ವ್ಯಾಕ್ಸಿನ್ ಕುರಿತು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮಾಡುತ್ತಿದ್ದಾರೆ.

  • ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ರಿಷಬ್ ಶೆಟ್ಟಿ ಪುತ್ರಿ

    ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ರಿಷಬ್ ಶೆಟ್ಟಿ ಪುತ್ರಿ

    ಕೊಹ್ಲಿ ಭರ್ಜರಿ ಶತಕ ಹಾಗೂ ಫಾಫ್ ಡು ಪ್ಲೆಸಿಸ್ ಸ್ಫೋಟಕ ಅರ್ಧ ಶತಕದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ (RCB) ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೇ 18ರಂದು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆರ್‌ಸಿಬಿ ಗೆದ್ದಿದ್ದಕ್ಕೆ ‘ಕಾಂತಾರ’ (Kantara) ಹೀರೋ ರಿಷಬ್ ಶೆಟ್ಟಿ (Rishab Shetty) ಪುತ್ರಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆರ್‌ಸಿಬಿ ತಂಡಕ್ಕೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ. ಬೆಂಗಳೂರು ತಂಡ ಅಖಾಡದಲ್ಲಿದೆ ಅಂದರೆ ಕಾದು ಕೂರುವ ಅಪಾರ ಅಭಿಮಾನಿಗಳಿದ್ದಾರೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಹೆನ್ರಿಚ್ ಕ್ಲಾಸೆನ್ ಭರ್ಜರಿ ಶತಕದೊಂದಿಗೆ 20 ಓವರ್‌ಗಳಲ್ಲಿ 186 ರನ್ ಗಳಿಸಿತ್ತು. 187 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಗೆದ್ದು ಬೀಗಿತು.

    ರಿಷಬ್ ಶೆಟ್ಟಿ (Rishab Shetty) ಕುಟುಂಬ ಆರ್‌ಸಿಬಿ ತಂಡಕ್ಕೆ ಅಭಿಮಾನಿಯಾಗಿದ್ದು, ರಿಷಬ್ ಮತ್ತು ಅವರ ಪುತ್ರಿ ರಾಧ್ಯಾ (Radya) ಕೂಡ ಆರ್‌ಸಿಬಿ ಗೆಲುವಿಗೆ ಜೈ ಎಂದಿದ್ದಾರೆ. ಆರ್‌ಸಿಬಿ ಗೆದ್ದಿದ್ದಕ್ಕೆ ಖುಷಿಯಿಂದ ಬೀಗುತ್ತಿರುವ ವೀಡಿಯೋವನ್ನ ನಟ ರಿಷಬ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಆದಿಪುರುಷ್‌’ ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ

    ‘ಕಾಂತಾರ’ ಸಕ್ಸಸ್ ನಂತರ ಕಾಂತಾರ 2 ಸಿನಿಮಾ ತಯಾರಿಯಲ್ಲಿದ್ದಾರೆ. ಕಥೆ ಈಗಾಗಲೇ ಸಿದ್ಧವಾಗಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.

  • ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ ಟೆಂಪಲ್ ರನ್

    ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ ಟೆಂಪಲ್ ರನ್

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ಕಾಂತಾರ 2 (Kantara 2) ಸಿದ್ಧತೆಯ ನಡುವೆ ಕುಟುಂಬದ ಜೊತೆ ಕುಕ್ಕೆ ಸುಬ್ರಹ್ಮಣ್ಯ (Kukke Subramanya) ಸನ್ನಿಧಿಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋ, ವಿಡಿಯೋ ಎಲ್ಲೆಡೆ ಸದ್ದು ಮಾಡ್ತಿದೆ.

    ‘ಕಾಂತಾರ’ ಸಿನಿಮಾ ಮೂಲಕ ಜಗತ್ತಿನ ಎಲ್ಲೆಡೆ ಸೌಂಡ್ ಮಾಡ್ತಿರುವ ರಿಷಬ್ ಶೆಟ್ಟಿ ಅವರು ಕಾಂತಾರ ಪಾರ್ಟ್ 2 ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಮೊದಲ ಡ್ರಾಫ್ಟ್ ಕೂಡ ರೆಡಿಯಾಗಿದೆ. ಪಾರ್ಟ್ 2 ಕಥೆ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ:‘ಪಠಾಣ್’ ಸಕ್ಸಸ್ ನಂತರ ಸಿಹಿಸುದ್ದಿ ನೀಡಿದ ದೀಪಿಕಾ ಪಡುಕೋಣೆ

    ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಮತ್ತು ಮಕ್ಕಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಕೂಡ ಮಾಡಿಸಿದ್ದಾರೆ. ಪೂಜೆಯ ಬಳಿಕ ರಿಷಬ್ ಜೊತೆ ಫೋಟೋಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

  • ‘ಕಾಂತಾರ’ ಚಿತ್ರದಲ್ಲಿ ಧರಿಸಿದ್ದ 32 ವರ್ಷ ಹಳೆಯ ಸೀರೆ ಬಗ್ಗೆ ರಿವೀಲ್ ಮಾಡಿದ ಪ್ರಗತಿ ಶೆಟ್ಟಿ

    ‘ಕಾಂತಾರ’ ಚಿತ್ರದಲ್ಲಿ ಧರಿಸಿದ್ದ 32 ವರ್ಷ ಹಳೆಯ ಸೀರೆ ಬಗ್ಗೆ ರಿವೀಲ್ ಮಾಡಿದ ಪ್ರಗತಿ ಶೆಟ್ಟಿ

    ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ‘ಕಾಂತಾರ’ (Kantara) ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಕಾಂತಾರ ಪಾರ್ಟ್ 2ಗೆ ಎದುರು ನೋಡ್ತಿರುವ ಸಂದರ್ಭದಲ್ಲಿ ‘ಕಾಂತಾರ’ ಚಿತ್ರದಲ್ಲಿ ಧರಿಸಿದ್ದ 32 ವರ್ಷ ಹಳೆಯ ಸೀರೆ ಬಗ್ಗೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ರಿವೀಲ್ ಮಾಡಿದ್ದಾರೆ. ಸದ್ಯ ಪ್ರಗತಿ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

    ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಪತ್ನಿ ಪ್ರಗತಿ ಅವರು ರಾಜನ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ರಾಣಿಯಾಗಿ ಪ್ರಗತಿ ಶೆಟ್ಟಿ ಪಾತ್ರದಲ್ಲಿ ನಟಿಸಿದ್ದರು. ಚಿಕ್ಕ ಪಾತ್ರವಾಗಿದ್ದರು ಪ್ರಗತಿ ಗಮನ ಸೆಳೆದಿದ್ದರು. ಇದನ್ನೂ ಓದಿ:3 ವರ್ಷಗಳ ನಂತರ ಸ್ವೀಟಿ ಅನುಷ್ಕಾ ಶೆಟ್ಟಿ ಕಮ್‌ಬ್ಯಾಕ್

    ಇದೀಗ ರಾಣಿಯ (Queen) ಪಾತ್ರಕ್ಕಾಗಿ ಉಟ್ಟಿದ್ದ ಸೀರೆ ಬಗ್ಗೆ ಪ್ರಗತಿ ಶೆಟ್ಟಿ ಸೀಕ್ರೆಟ್‌ವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ರಾಣಿಯ ಪಾತ್ರಕ್ಕಾಗಿ ಅಮ್ಮನ (Mother) ಸೀರೆಯನ್ನ (Saree) ಉಟ್ಟಿರೋದಾಗಿ ಪ್ರಗತಿ ತಿಳಿಸಿದ್ದಾರೆ. ನಮ್ಮ ಅಮ್ಮನ ಮದುವೆಯ ಸೀರೆಯನ್ನು ಮುವ್ವತ್ತೆರೆಡು ವರ್ಷದ ನಂತರ ‘ಕಾಂತಾರ’ ಸಿನಿಮಾದಲ್ಲಿ ಉಟ್ಟಿದ್ದು ತುಂಬಾ ಸಂತಸ ತಂದಿತ್ತು ಎಂದು ತಿಳಿಸಿದ್ದಾರೆ.

    ‘ಕಾಂತಾರ’ (Kantara) ಚಿತ್ರದಲ್ಲಿ ಪ್ರಗತಿ ಶೆಟ್ಟಿ ಅವರು ರಾಣಿ ಪಾತ್ರದಲ್ಲಿಷ್ಟೇ ನಟಿಸಿರಲಿಲ್ಲ. ಎಲ್ಲಾ ಪಾತ್ರಗಳಿಗೂ ಕಾಸ್ಟ್ಯೂಮ್ ಡಿಸೈನ್ ಮಾಡಿ ಸೈ ಎನಿಸಿಕೊಂಡಿದ್ದರು. ‘ಕಾಂತಾರ’ ಚಿತ್ರದಲ್ಲಿ ಪತಿಯ ಕೆಲಸಕ್ಕೆ ಪ್ರಗತಿ ಸಾಥ್ ನೀಡಿದ್ದರು. ‘ಕಾಂತಾರ’ ಪಾರ್ಟ್ 2ನಲ್ಲೂ (Kantara 2) ರಿಷಬ್ ಶೆಟ್ಟಿ ಕೆಲಸಗಳಿಗೆ ಸಾಥ್ ನೀಡಲಿದ್ದಾರೆ.

  • ಪಂಜುರ್ಲಿ ದೈವ ಆಶೀರ್ವಾದ ಪಡೆದ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ

    ಪಂಜುರ್ಲಿ ದೈವ ಆಶೀರ್ವಾದ ಪಡೆದ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ 2’ (Kantara 2) ಸಿದ್ಧತೆಯ ಬೆನ್ನಲ್ಲೇ ಪಂಜುರ್ಲಿ ದೈವ ಆಶೀರ್ವಾದ ಪಡೆದಿದ್ದಾರೆ. ಈ ಕುರಿತ ವೀಡಿಯೋವನ್ನ ನಟ ರಿಷಬ್ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಇಡೀ ದೇಶವೇ ಮೆಚ್ಚಿದ ಸಿನಿಮಾ ಅಂದರೆ ಇತ್ತೀಚಿನ ‘ಕಾಂತಾರ’ ಸಿನಿಮಾ. ನಟನೆಯ ಜೊತೆ ನಿರ್ದೇಶನ ಮಾಡಿ ರಿಷಬ್ ಶೆಟ್ಟಿ ಸೈ ಎನಿಸಿಕೊಂಡಿದ್ದರು. ಪಂಜುರ್ಲಿ ದೈವದ ಕಥೆ ಅದ್ಭುತವಾಗಿ ತೆರೆಯ ಮೇಲೆ ತೋರಿಸಿದ್ದರು. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?‌

    ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಮುತ್ತೂರು ನೆಟ್ಟಿಲ ಪಂಜುರ್ಲಿ (Panjurli) ದೈವ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ರಿಷಬ್ ಅವರು ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿ ನಟ ರಿಷಬ್ ದೈವದ ಪಾತ್ರದಲ್ಲಿ ನಟಿಸಿದ್ದರು. ಚಿತ್ರ ಗ್ರ್ಯಾಂಡ್ ಸಕ್ಸಸ್ ಕಂಡಿತ್ತು. ಸಿನಿಮಾ ಸಕ್ಸಸ್ ಬಳಿಕ ದೈವಕ್ಕೆ ವಿಶೇಷ ಪೂಜೆ ಕೂಡ ಸಲ್ಲಿಸಿದ್ದರು.

     

    View this post on Instagram

     

    A post shared by Rishab Shetty (@rishabshettyofficial)

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೇರ್ ಮಾಡಿರುವ ಮುತ್ತೂರು ನೆಟ್ಟಿಲ ‘ಪಂಜುರ್ಲಿ’ ಕೋಲದ ವೀಡಿಯೋ ಭರ್ಜರಿ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಈ ವೀಡಿಯೋ ವೈರಲ್ ಆಗ್ತಿದ್ದಂತೆ ‘ಕಾಂತಾರ 2’ (Kantara 2) ಸಿನಿಮಾ ಬಗ್ಗೆ ಫ್ಯಾನ್ಸ್ ಅಪ್‌ಡೇಟ್ ಕೇಳಿದ್ದಾರೆ.

  • `ಕಾಂತಾರ’ ಚಿತ್ರದ ಬಗ್ಗೆ ಗುಡ್ ನ್ಯೂಸ್ ನೀಡಿದ ಹೊಂಬಾಳೆ ಫಿಲ್ಮ್ಸ್

    `ಕಾಂತಾರ’ ಚಿತ್ರದ ಬಗ್ಗೆ ಗುಡ್ ನ್ಯೂಸ್ ನೀಡಿದ ಹೊಂಬಾಳೆ ಫಿಲ್ಮ್ಸ್

    ನ್ನಡದ `ಕಾಂತಾರ’ (Kantara) ಗಡಿ ದಾಟಿ ಬೆಳೆದಿದೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸದ್ದು ಮಾಡುತ್ತಲೇ ಇದೆ. `ಕಾಂತಾರ’ ಚಿತ್ರ ಬಿಡುಗಡೆ ಆದ ದಿನದಿಂದಲೂ ಸಾಕಷ್ಟು ದಾಖಲೆಗಳನ್ನ ಬ್ರೇಕ್ ಮಾಡಿದೆ. ಈಗ ಕನ್ನಡಿಗರು ಮತ್ತೆ ಹೆಮ್ಮೆಪಡುವಂತಹ ಸಿಹಿಸುದ್ದಿಯನ್ನ ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ. ಇದನ್ನೂ ಓದಿ: 12 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ಯಾಕೆ? ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ಅನುಪ್ರಭಾಕರ್

    ಮೊದಲು `ಕಾಂತಾರ’ ಬಿಡುಗಡೆ ಆಗಿದ್ದು ಕನ್ನಡದಲ್ಲಿ ಮಾತ್ರ. ಮೊದಲ ದಿನವೇ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತು. ಪರಭಾಷೆ ಪ್ರೇಕ್ಷಕರು ಕೂಡ ಆಸಕ್ತಿ ತೋರಿಸಿದ್ದರಿಂದ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲ ಭಾಷೆಗಳಿಂದಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್ ವರ್ಷನ್ ಕೂಡ ರಿಲೀಸ್ ಆಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಲಾಗುತ್ತಿರುವುದು ವಿಶೇಷ. ಈ ಬಗ್ಗೆ ನಿರ್ಮಾಣ ಸಂಸ್ಥೆ ಅಪ್‌ಡೇಟ್ ನೀಡಿದೆ.

    ಈ ವಿಷಯ ತಿಳಿಸಲು ನಮಗೆ ಖುಷಿ ಎನಿಸುತ್ತಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ `ಕಾಂತಾರ’ ಚಿತ್ರವನ್ನು ಎಡಿಟ್ ಮಾಡಲಾಗುತ್ತಿದೆ ಎಂದು ಇಟಾಲಿಯನ್ ಭಾಷೆಯಲ್ಲಿ ಹೊಂಬಾಳೆ ಫಿಲ್ಮ್ಸ್ (Hombale Films) ಟ್ವೀಟ್ ಮಾಡಿದೆ. ಜಪಾನಿ ಭಾಷೆಯಲ್ಲೂ ರಿಲೀಸ್ ಮಾಡಿ ಎಂದು ನೆಟ್ಟಿಗರು ಬೇಡಿಕೆ ಇಟ್ಟಿದ್ದಾರೆ.

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು `ಕಾಂತಾರ 2′ ಚಿತ್ರದ ಸ್ಟೋರಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಾಗಿ ಸಕಲ ತಯಾರಿ ಕೂಡ ಮಾಡ್ತಿದ್ದಾರೆ. ʻಕಾಂತಾರʼ ಪಾರ್ಟ್ 2ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

  • ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮ ಪ್ರಶಸ್ತಿ ಪಡೆದ `ಕಾಂತಾರ’ ನಟ ರಿಷಬ್ ಶೆಟ್ಟಿ

    ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮ ಪ್ರಶಸ್ತಿ ಪಡೆದ `ಕಾಂತಾರ’ ನಟ ರಿಷಬ್ ಶೆಟ್ಟಿ

    `ಕಾಂತಾರ’ ಸೂಪರ್ ಸಕ್ಸಸ್ ನಂತರ ಕನ್ನಡದ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅವರು `ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫೆಸ್ಟಿವಲ್ ಭರವಸೆಯ ನಟ’ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

    ನಟ, ನಿರ್ದೇಶಕನಾಗಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿರುವ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಅವರು `ಕಾಂತಾರ’ ಸಿನಿಮಾ ನಟಿಸಿ, ನಿರ್ದೇಶಿಸಿ ಇಡೀ ವಿಶ್ವ ಮಟ್ಟದಲ್ಲಿ ಗಮನ ಸೆಳೆದರು. ಅದರ ಪ್ರತಿಫಲ ಇದೀಗ ಡಿವೈನ್ ಸ್ಟಾರ್ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫೆಸ್ಟಿವಲ್ ಭರವಸೆಯ ನಟ ಹಿಂದಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೆ.20ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮ ರಿಷಬ್ ಕೂಡ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಈ ಪ್ರೀತಿ ಪುರಸ್ಕಾರಕ್ಕೆ ನಾನು ಸದಾ ಚಿರಋಣ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನಿಮಾ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ರಿಷಬ್ ಸಂಭ್ರಮಿಸಿದ್ದಾರೆ. ನನ್ನನ್ನು ನಂಬಿ ಅವಕಾಶ ಕೊಟ್ಟಿದ ಹೊಂಬಾಳೆ ಸಂಸ್ಥೆ ಮತ್ತು ವಿಜಯ್ ಕಿರಗಂದೂರು ಸರ್ ಅವರಿಗೆ ಋಣಿಯಾಗಿರುವೆ. ನಿಮ್ಮ ಜೊತೆ ಕೈ ಜೋಡಿಸಿ ಹೆಚ್ಚು ಸಿನಿಮಾ ಮಾಡಲು ಕಾಯುತ್ತಿರುವೆ ಎಂದು ಹೇಳಿದ್ದಾರೆ.

     

    View this post on Instagram

     

    A post shared by Rishab Shetty (@rishabshettyofficial)

    ಕಾಂತಾರ ಇಡೀ ತಂಡದಿಂದ ಇದು ಸಾಧ್ಯವಾಗಿದ್ದು ಹೀಗಾಗಿ ಕಲಾವಿದರು, ತಂತ್ರಜ್ಞರಿಗೆ ಪ್ರತಿಯೊಬ್ಬರಿಗೂ ಇದನ್ನು ಅರ್ಪಿಸುವೆ. ನನ್ನ ಪಿಲ್ಲರ್ ಆಫ್ ಲೈಫ್ ಪ್ರಗತಿ ಶೆಟ್ಟಿ ಕೂಡ ಎಂದಿದ್ದಾರೆ. ಈ ಪ್ರಶಸ್ತಿಯನ್ನು ದೈವ ನರ್ತಕರು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸರ್, ಭಗವಾನ್ ಸರ್‌ಗೆ ಅರ್ಪಿಸುವೆ ಎಂದು ಬರೆದಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ ಭಾಜನರಾದ ರಿಷಬ್ ಶೆಟ್ಟಿ

    ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ ಭಾಜನರಾದ ರಿಷಬ್ ಶೆಟ್ಟಿ

    ಡಿವೈನ್ ಸ್ಟಾರ್ (Divine Star) ರಿಷಬ್ ಶೆಟ್ಟಿ (Rishab Shetty) ಅಭಿಮಾನಿಗಳಿಗೆ ಇದು ನಿಜಕ್ಕೂ ಖುಷಿಯ ಸುದ್ದಿ. ರಿಷಬ್ ಶೆಟ್ಟಿ ಅವರು ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ (Dadasaheb Phalke Internatinal Award) ರಿಷಬ್ ಶೆಟ್ಟಿ ಭಾಜನರಾಗಿದ್ದಾರೆ. ಇದನ್ನೂ ಓದಿ:ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ’ (Kantara Film) ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ದೇಶಾದ್ಯಂತ ಕೋಟಿ ಕೋಟಿ ಕಲೆಕ್ಷನ್ ಹೊಸ ದಾಖಲೆಯನ್ನೇ ಬರೆದಿದೆ. ಹೀಗಿರುವಾಗ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅವರು ಇದೀಗ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಯನ್ನ  ತಮ್ಮದಾಗಿಸಿಕೊಂಡಿದ್ದಾರೆ.

    ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ರಿಷಬ್‌ಗೆ ಈ ಪ್ರಶಸ್ತಿ ಲಭ್ಯವಾಗಿದೆ. ಫೆ.20ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದ್ದು, ಕಾಂತಾರ ಚಿತ್ರದ ಮೂಲಕ ವಿಶ್ವದೆಲ್ಲೆಡೆ ಮನ್ನಣೆ ಪಡೆದ ರಿಷಬ್ ಶೆಟ್ಟಿ ಅವರಿಗೆ ತಾಜ್ ಲ್ಯಾಂಡ್ ಎಂಡ್ ಹೋಟೆಲ್‌ನಲ್ಲಿ ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾರೆ.

    ಇನ್ನೂ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ (Direction) `ಕಾಂತಾರ’ ಪ್ರೀಕ್ವೆಲ್‌ಗೆ ಸಕಲ ಸಿದ್ಧತೆ ನಡೆಯುತ್ತಿದೆ. ಸದ್ಯ ಈ ಸಿನಿಮಾದ ಅಪ್‌ಡೇಟ್ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k