Tag: kannda news

  • ನೂತನ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಆದ್ಯತೆ: ಗೆಹ್ಲೋಟ್

    ನೂತನ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಆದ್ಯತೆ: ಗೆಹ್ಲೋಟ್

    ಹುಬ್ಬಳ್ಳಿ: ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ರಾಷ್ಟ್ರದಲ್ಲಿ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಯ ಕಲಿಕೆಗೂ ಆದ್ಯತೆಯನ್ನು ನೀಡಲಾಗಿದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

    ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ರಾಜ್ಯಪಾಲರು ಸಂವಾದ ನಡೆಸಿದ್ದು ವಾರ್ತಾ ಇಲಾಖೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

    ರಾಜ್ಯಪಾಲರು ಹೇಳಿದ್ದೇನು?
    ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ‌. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ. ಕಾನೂನು ವಿಶ್ವ ವಿದ್ಯಾಲಯದಲ್ಲಿ ಓದಿದವರು ದೇಶದ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಕೆಲಸ ನಿರ್ವಹಸಿ ಹೆಸರುಗಳಿಸಿದ್ದಾರೆ.‌ ಕಾನೂನು ವಿಶ್ವ ವಿದ್ಯಾಲಯದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ವಿಶ್ವ ವಿದ್ಯಾಲಯ ಸುಧಾರಣೆ ಕುರಿತು ಸಿಂಡಿಕೇಟ್ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹದು. ಇವುಗಳ ಕುರಿತು ಲಿಖಿತವಾಗಿ ಮನವಿ ಸಲ್ಲಿಸಿದರೆ ಅವುಗಳನ್ನು ಪರಮಾಧ್ಯತೆ ಮೇರೆಗೆ ಪರಿಹರಿಸುವುದಾಗಿ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ, ಮತಭಿಕ್ಷೆ ನೀಡಿ: ಹೆಚ್‍ಡಿಡಿ

    ಸಂವಾದದಲ್ಲಿ ಮಾತನಾಡಿದ ವಿದ್ಯಾರ್ಥಿ ಪ್ರಭಯನ್ ಚರ್ಕಭೋರ್ತಿ ವಿಶ್ವ ವಿದ್ವಾಯಲಯದಲ್ಲಿನ ಅಣಕು ನ್ಯಾಯಾಲಯ ಕಲ್ಪನೆ ವಿದ್ಯಾರ್ಥಿಗಳಗೆ ಅನುಕೂಲವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಕಾನೂನು ಜ್ಞಾನ ಲಭಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಸಿದ್ಧೀ ನಾಗವೇಕರಿ ನೂತನ ಶಿಕ್ಷಣ ನೀತಿಯಲ್ಲಿನ ತ್ರಿಭಾಷ ಕಲಿಕೆಯ ಅನುಷ್ಠಾನದ ಕುರಿತು ಸಂವಾದಿಸಿದರು.

    ರಾಜ್ಯಪಾಲರ ಕನ್ನಡ ಕಲಿಕೆ ಪ್ರೀತಿ
    ಸಂವಾದದ ಆರಂಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾನು ಮಧ್ಯಪ್ರದೇಶದವನು. ಹಿಂದಿ ಭಾಷಿಕ‌. ಇಂಗ್ಲೀಷ್‌ನಲ್ಲಿ ಸಭೆ ಉದ್ದೇಶಿಸಿ ಮಾತನಾಡುವುದು ಕಡಿಮೆ. ಕರ್ನಾಟಕಕ್ಕೆ ಆಗಮಿಸಿದ ಮೇಲೆ ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಕನ್ನಡ ಭಾಷೆಯ ಕುರಿತಾದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲರು ವಿಶ್ವ ವಿದ್ಯಾಲಯದ ಗ್ರಂಥಾಲಯ ಹಾಗೂ ಮುಖ್ಯ ಸಮುಚ್ಚಯ ಕಟ್ಟಡ, ಅಣುಕು ನ್ಯಾಯಾಲಯಗಳನ್ನು ವೀಕ್ಷಿಸಿದರು.

    ಕಾನೂನು ವಿ.ವಿ‌.ಉಪಕುಲಪತಿ  ಈಶ್ವರ ಭಟ್, ರಿಜಿಸ್ಟಾರ್ ಮಹಮದ್ ಜುಬೇರ್, ಕುಲಸಚಿವೆ  ರತ್ನ ಭರಮಗೌಡರ್, ನೊಂದಣಿ ಮತ್ತು ಮೌಲ್ಯಮಾಪನ ವಿಭಾಗದ ಜಿ.ಬಿ.ಪಾಟೀಲ ಸೇರಿದಂತೆ ಸಿಂಡಿಕೇಟ್ ಸದ್ಯರಾದ ಮಹೇಶ್ ಓಡೆಯರ್, ಗಿರಿಜಾ ಹಿರೇಮಠ್, ಚಂದ್ರಮೋಹನ್ ಕಾಳೆ ಮತ್ತಿತರು ಉಪಸ್ಥಿತರಿದ್ದರು.

  • ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ಬ್ಯಾನ್

    ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ಬ್ಯಾನ್

    ನವದೆಹಲಿ: ವಾಟ್ಸಪ್ ಕಂಪನಿ ಆಗಸ್ಟ್ ತಿಂಗಳಿನಲ್ಲಿ 20 ಲಕ್ಷ ಭಾರತೀಯ ಫೋನ್ ನಂಬರ್ ಗಳನ್ನು ನಿಷೇಧಿಸಿದೆ.

    ಮಂಗಳವಾರ ಬಿಡುಗಡೆ ಮಾಡಿದ ತನ್ನ ಇತ್ತೀಚಿನ ವರದಿಯಲ್ಲಿ, ಒಟ್ಟು 20,70,000 ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ಹೇಳಿದೆ. ಭಾರತೀಯ ಖಾತೆಯನ್ನು +91 ಫೋನ್‌ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ವಾಟ್ಸಪ್ ತಿಳಿಸಿದೆ. ಇದನ್ನೂ ಓದಿ: ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್

    ಮೇ 26 ರಂದು ಹೊಸ ಐಟಿ ನಿಯಮಗಳು ಜಾರಿಯಾದ ಬಳಿಕ 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಬಳಕೆದಾರರು ಇರುವ ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಂಜಿಂಗ್ ಅಪ್ಲಿಕೇಶನ್ ಗಳು ಸರ್ಕಾರಕ್ಕೆ ವರದಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.

    ಎಷ್ಟು ದೂರುಗಳು ಬಂದಿದೆ? ದೂರಿಗೆ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಈ ಎಲ್ಲ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಸುಳ್ಳು ಸುದ್ದಿ ಜೊತೆಗೆ ನಕಲಿ ವಿಡಿಯೋಗಳು ಹರಿದಾಡಿ ಘರ್ಷಣೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಕಠಿಣ ನಿಯಮ ಜಾರಿ ಮಾಡಿದೆ. ಇದನ್ನೂ ಓದಿ: ಎಲ್ಲ ಫೋನ್‍ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್

  • ವಿಕೃತಿ ಮೆರೆದ ಮರುದಿನವೇ ಪೊಲೀಸ್ ಠಾಣೆಗೆ ಹೋಗಿತ್ತು ಗ್ಯಾಂಗ್ ರೇಪ್ ಗ್ಯಾಂಗ್

    ವಿಕೃತಿ ಮೆರೆದ ಮರುದಿನವೇ ಪೊಲೀಸ್ ಠಾಣೆಗೆ ಹೋಗಿತ್ತು ಗ್ಯಾಂಗ್ ರೇಪ್ ಗ್ಯಾಂಗ್

    ಬೆಂಗಳೂರು: ಭಾರತವನ್ನೇ ತಲ್ಲಣಗೊಳಿಸಿರುವ ಗ್ಯಾಂಗ್ ರೇಪ್ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಮಕರು ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿ ಗುಪ್ತಾಂಗದಲ್ಲಿ ಬಾಟಲ್ ಹಾಕಿ ವಿಕೃತಿ ಮೆರೆದ ಮರುದಿನವೇ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು ಎಂಬ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

    ಕಾಮುಕರಿಂದ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಯುವತಿ ತನ್ನ ಸ್ನೇಹಿತರಿಗೆ ವಿಚಾರ ತಿಳಿಸಿದ್ದಾಳೆ. ಸಂತ್ರಸ್ತ ಯುವತಿಯ ಕಡೆಯವರು ಬಂದು ಅತ್ಯಾಚಾರಿಗಳ ಗ್ಯಾಂಗ್ ಮೇಲೆ ಹಲ್ಲೆ ಮಾಡಿ ಆರೋಪಿಯೊಬ್ಬನ ಕೈ ಮುರಿದಿದ್ದಾರೆ.

    ಕಾಮುಕರು ಗಲಾಟೆ ವಿಚಾರವಾಗಿ ದೂರು ಕೊಡಲು ಠಾಣೆಗಳಿಗೆ ಅಲೆಯುತ್ತಾರೆ. ಮೊದಲು ಬಾಣಸವಾಡಿ ನಂತರ ಕೆ.ಆರ್ ಪುರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಎರಡು ಠಾಣೆಯ ಪೊಲೀಸರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಳುಹಿಸಿಕೊಟ್ಟಿದ್ದಾರೆ.

    ಆರೋಪಿಗಳಿಂದ ಅಲ್ಲಿಂದ ನೇರವಾಗಿ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಪೊಲೀಸರು ಯಾವುದೇ ದೂರನ್ನು ದಾಖಲಿಸಿಕೊಳ್ಳದೇ ಘಟನೆಯ ಬಗ್ಗೆ ಪೂರ್ವಪರ ತಿಳಿಯದೇ ಎರಡು ಗ್ಯಾಂಗ್ ಸದಸ್ಯರನ್ನು ಕರೆದು ಮಾತನಾಡಿಸಿ ರಾಜಿ ಮಾಡಿ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.  ಇದನ್ನೂ ಓದಿ : ಬೆಂಗಳೂರು ಅತ್ಯಾಚಾರ ಪ್ರಕರಣ- ಕಾಮುಕರ ಕಾಲಿಗೆ ಗುಂಡು ಹೊಡೆದ ಪೊಲೀಸರು

    ಪೊಲೀಸರು ಆರೋಪಿಗಳು ದೂರು ಕೊಡಲು ಬಂದಾಗ ಪೂರ್ವ ಪರ ತಿಳಿದುಕೊಂಡಿದ್ದರೆ ಸರಿ ಹೋಗುತ್ತಿತ್ತು. ಅದರೆ ಪೊಲೀಸರು ಅದನ್ನು ಮಾಡದೇ ಕಳುಹಿಸಿ ಕೊಟ್ಟಿರುವುದು ಮೇಲ್ನೋಟಕ್ಕೆ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸದ್ಯ ಪೊಲೀಸ್ ನಿರ್ಲಕ್ಷ್ಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದ್ದು ತನಿಖೆ ಆರಂಭವಾಗಿದೆ.

  • ಚುನಾವಣಾ ಚರ್ಚೆಯಲ್ಲಿ ನಾವು ಭಾಗವಹಿಸಲ್ಲ : ಕಾಂಗ್ರೆಸ್ ಪ್ರಕಟಣೆ

    ಚುನಾವಣಾ ಚರ್ಚೆಯಲ್ಲಿ ನಾವು ಭಾಗವಹಿಸಲ್ಲ : ಕಾಂಗ್ರೆಸ್ ಪ್ರಕಟಣೆ

    ನವದೆಹಲಿ: ಪಂಚ ರಾಜ್ಯಗಳು ಚುನಾವಣಾ ಚರ್ಚೆಯಲ್ಲಿ ಕಾಂಗ್ರೆಸ್ ತನ್ನ ವಕ್ತಾರರನ್ನು ಕಳುಹಿಸದಿರುವ ತೀರ್ಮಾನವನ್ನು ತೆಗೆದುಕೊಂಡಿದೆ.

    ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲಾ ಪ್ರತಿಕ್ರಿಯಿಸಿ, ರಾಷ್ಟ್ರವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ, ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ಕುಸಿದುಬಿದ್ದಾಗ, ಅವರನ್ನು ಹೊಣೆಗಾರರನ್ನಾಗಿ ಮಾಡದೇ ಚುನಾವಣಾ ಗೆಲುವುಗಳು ಮತ್ತು ನಷ್ಟಗಳ ಬಗ್ಗೆ ಚರ್ಚಿಸುವುದು ಸರಿಯಲ್ಲ. ಹೀಗಾಗಿ ನಮ್ಮ ವಕ್ತಾರರನ್ನು ಚುನಾವಣಾ ಚರ್ಚೆಗಳಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಮಾಧ್ಯಮ ಸ್ನೇಹಿತರು ಬಯಸುವ ಯಾವುದೇ ಕಾಮೆಂಟ್‍ಗೆ ನಾವು ಲಭ್ಯವಿರುತ್ತೇವೆ. ನಾವು ಗೆಲ್ಲಬಹುದು, ನಾವು ಸೋಲಬಹುದು. ಆದರೆ ಜನರು ಆಮ್ಲಜನಕ, ಹಾಸಿಗೆಗಳು, ಔಷಧಿಗಳು, ವೆಂಟಿಲೇಟರ್ ಗಳನ್ನು ಹುಡುಕುತ್ತಿರುವ ಸಮಯದಲ್ಲಿ ಅವರ ಜೊತೆ ನಿಲ್ಲುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

  • ಮಹಿಳೆಯರ ಭಾವನೆಗೆ ಧಕ್ಕೆ – ಮಿಂತ್ರಾದಿಂದ ಲೋಗೋ ಬದಲಾವಣೆ

    ಮಹಿಳೆಯರ ಭಾವನೆಗೆ ಧಕ್ಕೆ – ಮಿಂತ್ರಾದಿಂದ ಲೋಗೋ ಬದಲಾವಣೆ

    ಮುಂಬೈ: ಬಟ್ಟೆಗಳನ್ನು ಮಾರಾಟ ಮಾಡುತ್ತಿರುವ ಖ್ಯಾತ ಆನ್‌ಲೈನ್‌ ಶಾಪಿಂಗ್‌ ತಾಣ ಮಿಂತ್ರಾ ಮಹಿಳೆಯೊಬ್ಬರ ದೂರಿನ ಹಿನ್ನೆಲೆಯಲ್ಲಿ ತನ್ನ ಲೋಗೋವನ್ನು ಬದಲಾಯಿಸಿದೆ.

    ಸರ್ಕಾರೇತರ ಸಂಸ್ಥೆ ಅವೆಸ್ಟಾ ಫೌಂಡೇಶನಿನ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಾಜ್​ ಪಟೇಲ್​ ಎಂಬುವವರು ಕಳೆದ ಡಿಸೆಂಬರ್​ನಲ್ಲಿ ಸೈಬರ್​ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಲೋಗೋ ಬದಲಾವಣೆ ಮಾಡದೇ ಇದ್ದರೆ ಮುಂಬೈ ಮೂಲದ ಕಂಪನಿ ವಿರುದ್ಧ ಕಾನೂನು ಸಮರ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.

    ಮಿಂತ್ರಾ ಲೋಗೋ ಬೆತ್ತಲೆ ಮಹಿಳೆಯಂತೆ ಹೋಲುತ್ತದೆ. ಇದರಿಂದ ಮಹಿಳೆಯರ ಭಾವನೆಗಳಿಗೆ ಧಕ್ಕೆ ಬರುತ್ತದೆ. ಆಕ್ಷೇಪಾರ್ಹ ರೀತಿಯಲ್ಲಿ ಇರುವುದು ಮಾತ್ರವಲ್ಲೇ ಅವಮಾನ ಮಾಡುವ ರೀತಿಯಲ್ಲಿದೆ ಎಂದು ದೂರು ನೀಡಿದ್ದರು. ಅಷ್ಟೇ ಅಲ್ಲದೇ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಕಂಪನಿ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದರು.

    ದೂರು ನೀಡಿದ ಬಳಿಕ ಲೋಗೋ ಆಕ್ಷೇಪಾರ್ಹ ರೀತಿಯಲ್ಲಿರುವುದನ್ನು ನಾವು ಮನಗಂಡೆವು. ಬಳಿಕ ಕಂಪನಿಗೆ ಇಮೇಲ್‌ ಮೂಲಕ ತಿಳಿಸಿದ್ದೆವು. ಈಗ ಲೋಗೋ ಬದಲಾವಣೆ ಮಾಡಿರುವುದಾಗಿ ಸೈಬರ್ ಕ್ರೈಮ್ ವಿಭಾಗದ ಡಿಸಿಪಿ ರಶ್ಮಿ ಕರಂಡಿಕರ್ ಪ್ರತಿಕ್ರಿಯಿಸಿದ್ದಾರೆ.

    ಮಿತ್ರಾ ಸಭೆ ನಡೆಸಿ ಲೋಗೋ ಬದಲಾವಣೆಗೆ ಒಪ್ಪಿಗೆ ನೀಡಿದೆ. ವೆಬ್‌ಸೈಟ್‌, ಅಪ್ಲಿಕೇಶನ್‌, ಸಾಮಾಜಿಕ ಜಾಲತಾಣ ಅಲ್ಲದೇ ಮುಂದಿನ ದಿನಗಳಲ್ಲಿ ಪ್ಯಾಕೇಜಿಂಗ್‌ ಮತ್ತು ಪ್ರಿಂಟಿಂಗ್‌ ವಸ್ತುಗಳಲ್ಲಿ ಲೋಗೋ ಬದಲಾವಣೆ ಮಾಡಲಿದೆ ಎಂದು ವರದಿಯಾಗಿದೆ.

    ಸದ್ಯ ಮಿಂತ್ರಾ ಲೋಗೋ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದ್ದು, ನೆಟ್ಟಿಗರು ತಮ್ಮದೇ ಭಾವನೆಯನ್ನು ಬರೆದು ಟ್ವೀಟ್‌, ಪೋಸ್ಟ್‌ ಮಾಡುತ್ತಿದ್ದಾರೆ. ಈ ಸುದ್ದಿಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ

  • ದಿನ ಭವಿಷ್ಯ 03-12-2020

    ದಿನ ಭವಿಷ್ಯ 03-12-2020

    ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
    ಶರದ್ ಋತು, ಕಾರ್ತಿಕಮಾಸ, ಕೃಷ್ಣಪಕ್ಷ, ತೃತಿಯ,
    ಗುರುವಾರ,ಆರಿದ್ರ ನಕ್ಷತ್ರ / ಪುನರ್ವಸು ನಕ್ಷತ್ರ.

    ರಾಹುಕಾಲ : 1:39 ರಿಂದ 03:05
    ಗುಳಿಕಕಾಲ : 9:21 ರಿಂದ 10:47
    ಯಮಗಂಡಕಾಲ : 6:29 ರಿಂದ 7:55

    ಮೇಷ: ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳ ಸಾಧ್ಯತೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಮೋಸ

    ವೃಷಭ: ಅಹಂಭಾವ ಕೋಪ ಆತುರದ ಸ್ವಭಾವಗಳು, ದಾಂಪತ್ಯದ ಮೇಲೆ ದುಷ್ಪರಿಣಾಮ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ, ತಂದೆ- ಮಕ್ಕಳಲ್ಲಿ ಮನಸ್ತಾಪ, ಸ್ಥಿರಾಸ್ತಿ ತಗಾದೆ.

    ಮಿಥುನ: ದೂರ ಪ್ರದೇಶದಲ್ಲಿ ಉದ್ಯೋಗ, ದೂರ ಪ್ರಯಾಣ, ಆಸೆ ಮತ್ತು ಉತ್ಸಾಹಗಳು, ಕಾರ್ಮಿಕರಿಂದ ತೊಂದರೆ, ಉದ್ಯೋಗ ಒತ್ತಡಗಳು,
    ಸಾಲ ಮಾಡುವ ಪರಿಸ್ಥಿತಿ.

    ಕಟಕ: ಮಕ್ಕಳಿಂದ ಧನಾಗಮನ, ಸ್ವಯಂಕೃತ ಅಪರಾಧದಿಂದ ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ
    ಉದ್ಯೋಗ ಬದಲಾವಣೆ ಆಲೋಚನೆ. ಕುಟುಂಬಸ್ಥರಿಂದ ಅಪವಾದ.

    ಸಿಂಹ: ಅವಕಾಶ ವಂಚಿತ ತಂದೆಯಿಂದ ನಷ್ಟ. ಉದ್ಯೋಗದ ಚಿಂತೆ. ದೂರ ಪ್ರದೇಶಕ್ಕೆ ತೆರಳುವ ಆಸೆ. ಪ್ರಯಾಣದಲ್ಲಿ ಸಮಸ್ಯೆಗಳು. ದಾಯಾದಿ ಕಲಹ. ಅನಾರೋಗ್ಯ

    ಕನ್ಯಾ: ಮಿತ್ರರೊಂದಿಗೆ ಮನಸ್ತಾಪ. ಉದ್ಯೋಗ ಬದಲಾವಣೆಯಿಂದ ತೊಂದರೆ. ಅನಿರೀಕ್ಷಿತ ಪ್ರಯಾಣ. ಕೋರ್ಟ್ ಕೇಸುಗಳ ಚಿಂತೆ. ಭೂಮಿ ವ್ಯವಹಾರಗಳಿಂದ ಸಮಸ್ಯೆ. ಸಂಶಯಗಳಿಂದ ದಾಂಪತ್ಯ ಕಲಹ.

    ತುಲಾ: ಆತ್ಮ ಸಂಕಟಗಳು, ಅನಾರೋಗ್ಯ, ಅಪವಾದ ಅಪ ನಿಂದನೆಗಳು, ದಾಂಪತ್ಯದಿಂದ ದೂರಾಗುವ ಮನಸ್ಥಿತಿ, ಪಾಲುದಾರಿಕೆಯಲ್ಲಿ ನಷ್ಟ. ಸಂಗಾತಿಯಿಂದ ನಷ್ಟ. ಅನಿರೀಕ್ಷಿತ ಧನಾಗಮನ.

    ವೃಶ್ಚಿಕ: ಅವಮಾನ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಗಳಿಂದ ನೋವು, ಮಕ್ಕಳಲ್ಲಿ ಮಂದತ್ವ ಆಲಸ್ಯ, ಸ್ಥಿರಾಸ್ತಿ ಭೂಮಿ ವಾಹನದ ಮೇಲೆ ಸಾಲ. ಗರ್ಭದೋಷ ತಲೆನೋವು, ರಕ್ತದೋಷ, ಹೊಟ್ಟೆನೋವು.

    ಧನಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಿತಶತ್ರುಗಳು, ಉದ್ಯೋಗ ಅನುಕೂಲ, ಪ್ರೇಮಿಗಳು ಆತ್ಮೀಯರು ಬಂಧುಗಳು ದೂರ, ದುಃಸ್ವಪ್ನಗಳು
    ಒತ್ತಡಗಳಿಂದ ನಿದ್ರಾಭಂಗ, ಶತ್ರು ಧಮನ.

    ಮಕರ: ಪ್ರೀತಿ-ಪ್ರೇಮದಲ್ಲಿ ಸಂಶಯ, ಬಾಲಗ್ರಹ ದೋಷ, ಮಕ್ಕಳಲ್ಲಿ ಮೊಂಡುತನ ಮತ್ತು ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ, ಚರ್ಮ ತುರಿಕೆ,
    ಸುಸ್ತು ಅಜೀರ್ಣ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ದಾಯಾದಿಗಳಿಂದ ತೊಂದರೆ, ಪ್ರಯಾಣ ವಿಘ್ನ.

    ಕುಂಭ: ಭೂಮಿ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃ ಕಲಹಗಳು, ಸ್ತ್ರೀಯರಿಂದ ತೊಂದರೆ, ವಾಹನಗಳಿಂದ ಸಮಸ್ಯೆ , ಯಂತ್ರೋಪಕರಣಗಳಿಂದ ಅವಘಡ, ವಿದ್ಯಾಭ್ಯಾಸದ ಒತ್ತಡಗಳು.

    ಮೀನ: ಸ್ವಯಂಕೃತ ಅಪರಾಧಗಳು, ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳ ಮನಸ್ತಾಪ, ಅತಿ ವೇಗದ ಚಾಲನೆ, ಭಂಡ ಧೈರ್ಯ ಮತ್ತು ಆತ್ಮವಿಶ್ವಾಸ.

  • ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ದರ್ಶನ್‌

    ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ದರ್ಶನ್‌

    ಬೆಂಗಳೂರು: ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರತಿ ವರ್ಷ ಆಚರಿಸಲ್ಪಡುತ್ತಿರುವ ಹಿಂದಿ ದಿವಸ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್‌ ಬರೆದು ದರ್ಶನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.

    ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ.

    ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತ್ತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

    ಬಹುಭಾಷಾ ಹಿರಿಯ ನಟ ಪ್ರಕಾಶ್‌ ರೈ ಅವರು, ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ, ನನ್ನ ಹೆಮ್ಮೆ ನನ್ನ ಮಾತೃಭಾಷೆ ಕನ್ನಡ ಹಿಂದಿ ಹೇರಿಕೆ ಬೇಡ ಎಂದು ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ವಿರೋಧವಿದೆ: ಹೆಚ್‍ಡಿಕೆ

    ಕನ್ನಡದ ನಟ ಧನಂಜಯ್‌ ಅವರು, ನನ್ನ ದೇಶ ಭಾರತ. ನನ್ನ ಬೇರು ಕನ್ನಡ. ಎಲ್ಲ ಭಾಷೆಯನ್ನು ಗೌರವಿಸುತ್ತೇನೆ. ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಯಾವುದೇ ಹೇರಿಕೆ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  • 7,040 ಮಂದಿಗೆ ಸೋಂಕು – 124 ಸೋಂಕಿತರು ಬಲಿ

    7,040 ಮಂದಿಗೆ ಸೋಂಕು – 124 ಸೋಂಕಿತರು ಬಲಿ

    ಬೆಂಗಳೂರು: ರಾಜ್ಯದಲ್ಲಿ ಇಂದು 7,040 ಮಂದಿಗೆ ಸೋಕು ಬಂದಿದ್ದು, ಆಸ್ಪತ್ರೆಯಿಂದ 6,680 ಮಂದಿ ಬಿಡುಗಡೆಯಾಗಿದ್ದಾರೆ. ಇಂದು 124 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 2,26,966ಕ್ಕೆ ಏರಿಕೆಯಾಗಿದೆ. ಈ ಪೈಕಿ 81,512 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಿಂದ 1,41,491 ಮಂದಿ ಬಿಡುಗಡೆಯಾಗಿದ್ದಾರೆ.

    ಇಲ್ಲಿಯವರೆಗೆ ರಾಜ್ಯದಲ್ಲಿ 3,947 ಮಂದಿ ಮೃತಪಟ್ಟಿದ್ದು 692 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 43,626 ಮಂದಿಗೆ ಪರೀಕ್ಷೆ ನಡೆಸಿದ್ದು ಒಟ್ಟು ರಾಜ್ಯದಲ್ಲಿ 20,37,386 ಮಂದಿಗೆ ಪರೀಕ್ಷೆ ನಡೆಸಲಾಗಿದೆ.

    ಬೆಂಗಳೂರಿನಲ್ಲಿ ಇಂದು 2,131 ಮಂದಿಗೆ ಸೋಂಕು ಬಂದಿದ್ದರೆ 49 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 620 ಮಂದಿಗೆ ಸೋಂಕು ಬಂದಿದ್ದು 10 ಮಂದಿ ಮೃತಪಟ್ಟಿದ್ದಾರೆ.

    ಕರ್ನಾಟಕದಲ್ಲಿ ಚೇತರಿಕೆ ಪ್ರಮಾಣ ಶೇ.62.34 ಇದ್ದರೆ ಮರಣ ಪ್ರಮಾಣ ಶೇ.1.74ರಷ್ಟಿದೆ. ಬೆಂಗಳೂರಿನಲ್ಲಿ ಚೇತರಿಕೆ ಪ್ರಮಾಣ ಶೇ.59.89 ರಷ್ಟಿದ್ದರೆ ಮರಣ ಪ್ರಮಾಣ ಶೇ.1.61ರಷ್ಟಿದೆ.

  • ಚೀನಾದ ಸಾಮಾಜಿಕ ಜಾಲತಾಣಕ್ಕೆ ಮೋದಿ ಗುಡ್‌ಬೈ – 2 ಪೋಸ್ಟ್‌ ಬಿಟ್ಟು ಎಲ್ಲ ಪೋಸ್ಟ್‌ ಡಿಲೀಟ್‌

    ಚೀನಾದ ಸಾಮಾಜಿಕ ಜಾಲತಾಣಕ್ಕೆ ಮೋದಿ ಗುಡ್‌ಬೈ – 2 ಪೋಸ್ಟ್‌ ಬಿಟ್ಟು ಎಲ್ಲ ಪೋಸ್ಟ್‌ ಡಿಲೀಟ್‌

    ನವದೆಹಲಿ: 59 ಚೈನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಚೀನಾದಲ್ಲಿ ಬಳಕೆಯಾಗುತ್ತಿರುವ ಸಾಮಾಜಿಕ ಜಾಲತಾಣ ಖಾತೆಗೆ ಗುಡ್‌ಬೈ ಹೇಳಿದ್ದಾರೆ.

    ಚೀನಾದ ಸಾಮಾಜಿಕ ಜಾಲತಾಣ ವೈಬೋದಲ್ಲಿ ಮೋದಿ ಖಾತೆ ತೆರೆದಿದ್ದರು. ಆದರೆ ಈಗ ಈ ಖಾತೆಯಲ್ಲಿರುವ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ.

    ಮೋದಿ 2015ರಲ್ಲಿ ವೈಬೋದಲ್ಲಿ ಖಾತೆ ತೆರೆದಿದ್ದು ಇಲ್ಲಿಯವರೆಗೆ ಒಟ್ಟು 115 ಪೋಸ್ಟ್‌ ಮಾಡಿದ್ದಾರೆ. ಈ ಪೈಕಿ 2 ಪೋಸ್ಟ್‌ ಬಿಟ್ಟು ಉಳಿದ ಎಲ್ಲ ಪೋಸ್ಟ್‌ಗಳನ್ನು ಮೋದಿ ಡಿಲೀಟ್‌ ಮಾಡಿದ್ದಾರೆ. ಈ ಎರಡು ಪೋಸ್ಟ್‌ಗಳಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಫೋಟೋಗಳನ್ನು ಹಾಕಿರುವ ಕಾರಣ ಡಿಲೀಟ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 59 ಆ್ಯಪ್ ಆಯ್ತು, ಈಗ ರಾಷ್ಟ್ರೀಯ ಹೆದ್ದಾರಿಯಲ್ಲೂ ಚೀನಾ ಬ್ಯಾನ್‌

    ಪ್ರಧಾನಿ ನರೇಂದ್ರ ಮೋದಿಯವರು ಖಾತೆಗೆ ಗುಡ್‌ಬೈ ಹೇಳಿದ್ದರೂ ಖಾತೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿಲ್ಲ. ಗಣ್ಯವ್ಯಕ್ತಿಗಳಿಗೆ ನೀಡುವ ಅಧಿಕೃತ ಖಾತೆಗಳನ್ನು ಸುಲಭವಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಕೆಲವೊಂದು ಪ್ರಕ್ರಿಯೆಗಳು ನಡೆಯಬೇಕಾಗಿರುವ ಕಾರಣ ಮೋದಿ ಖಾತೆ ಈಗಲೂ ವೈಬೋದಲ್ಲಿದೆ.

    ಟ್ವಿಟ್ಟರ್‌ನಂತೆ ಕಾರ್ಯನಿರ್ವಹಿಸುವ ವೈಬೋದಲ್ಲಿ 2015ರ ಮೇ 4 ರಂದು ಪ್ರಧಾನಿ ನರೇಂದ್ರ ಮೋದಿ ಖಾತೆ ತೆರೆದಿದ್ದರು. ಚೀನಾ ಪ್ರವಾಸಕ್ಕೆ ತೆರಳುವ ಒಂದು ತಿಂಗಳ ಮೊದಲು ಈ ಖಾತೆಯನ್ನು ತೆರೆಯಲಾಗಿತ್ತು. 2.4 ಲಕ್ಷ ಮಂದಿ ಮೋದಿಯವರನ್ನು ಫಾಲೋ ಮಾಡುತ್ತಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್‌ಗೆ ಮತ್ತೊಂದು ಶಾಕ್

    ಜೂನ್‌ 18 ರಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಆರಂಭದಲ್ಲಿ ಗಲ್ವಾನ್‌ ಘರ್ಷಣೆಯನ್ನು ಪ್ರಸ್ತಾಪಿಸಿ ಭಾರತೀಯ ಯೋಧರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಭಾರತದ ವಿದೇಶಾಂಗ ಸಚಿವ ಜೈ ಶಂಕರ್‌ ಸಹ ಈ ವಿಚಾರದ ಬಗ್ಗೆ ಮಾತನಾಡಿದ್ದ ವಿಡಿಯೋ ಚೀನಾದ ಎರಡು ವೈಬೋ ಖಾತೆಯಲ್ಲಿ ಅಪ್ಲೋಡ್‌ ಆಗಿತ್ತು. ಆದರೆ ಈ ಎರಡು ಖಾತೆಯನ್ನು ನಂತರ ಡಿಲೀಟ್‌ ಮಾಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಸರ್ಕಾರದ ಗಮನಕ್ಕೆ ತಂದಿತ್ತು. ಇದನ್ನೂ ಓದಿ : ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

    ಚೀನಾದಲ್ಲಿರುವ ಎಲ್ಲ ದೇಶಗಳ ರಾಯಭಾರ ಕಚೇರಿಗಳು ವೈಬೋದಲ್ಲಿ ಖಾತೆ ತೆರೆದು ಅಲ್ಲಿನ ಪ್ರಜೆಗಳ ಜೊತೆ ಸಂವಹನ ನಡೆಸುತ್ತದೆ. ವಿಶ್ವದ ಹಲವು ಗಣ್ಯರು ವೈಬೋದಲ್ಲಿ ಖಾತೆ ತೆರೆದಿದ್ದಾರೆ.

  • 57,633 ವಾಹನ ಸೀಜ್, 2181 ಮಂದಿ ಮೇಲೆ ಎಫ್‍ಐಆರ್ – ಇಂದಿನಿಂದ ಮತ್ತಷ್ಟು ಬಿಗಿ ಕ್ರಮ

    57,633 ವಾಹನ ಸೀಜ್, 2181 ಮಂದಿ ಮೇಲೆ ಎಫ್‍ಐಆರ್ – ಇಂದಿನಿಂದ ಮತ್ತಷ್ಟು ಬಿಗಿ ಕ್ರಮ

    ಬೆಂಗಳೂರು: ಇಂದಿನಿಂದ ಮತ್ತಷ್ಟು ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ. ಈ ಕ್ರಮಕ್ಕೆ ಜನರು ಸಹಕಾರ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 3ರ ತನಕ ಲಾಕ್‍ಡೌನ್ ವಿಸ್ತರಣೆಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ ನಾವು ಪಾಲಿಸುತ್ತೇವೆ ಎಂದು ತಿಳಿಸಿದರು.

    ಏಪ್ರಿಲ್ 20ರ ತನಕ ಹಾಟ್ ಸ್ಪಾಟ್ ಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಮಾರ್ಗಸೂಚಿ ಬಂದ ಬಳಿಕ ರಾಜ್ಯ ಸರ್ಕಾರ ಮತ್ತಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಈ ನಿರ್ಧಾರಕ್ಕೆ ಜನ ಸಹಕರಿಸಬೇಕು ಎಂದು ಹೇಳಿದರು.

    ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಇಲ್ಲಿಯವರೆಗೆ 57,633 ವಾಹನಗಳು ಸೀಜ್, 2181 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. 85 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇವತ್ತಿಂದ ಮತ್ತಷ್ಟು ಬಿಗಿಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕೃಷಿಗೆ ಯಾವುದೇ ತೊಂದರೆ ಆಗದ ರೀತಿ ಕ್ರಮ ವಹಿಸಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿಕೊಂಡಿದ್ದೇವೆ. ಮದ್ಯದಂಗಡಿ, ಸರ್ಕಾರಿ ಕಚೇರಿ ಒಪನ್ ಬಗ್ಗೆ ಮಾರ್ಗಸೂಚಿ ಬಂದ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.