Tag: kannda film industry

  • ಭೋಜ್‍ಪುರಿ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ

    ಭೋಜ್‍ಪುರಿ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ

    ಬೆಂಗಳೂರು: ಕನ್ನಡ, ತೆಲುಗು, ತಮಿಳು, ಕೊಡವ, ತುಳು, ಕೊಂಕಣಿ ಹಾಗೂ ಮಲೆಯಾಳಂ ಸಿನಿಮಾಗಳಲ್ಲಿ ಅಭಿನಯಿಸಿರುವ ಹರ್ಷಿಕಾ ಪೂಣಚ್ಚ ಇದೀಗ ಬೇರೊಂದು ಭಾಷೆಯ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.

    ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿರುವ ಈ ಕೊಡವ ಸುಂದರಿ ಈಗ ಉತ್ತರ ಭಾರತದ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಇದೇ ಮೊದಲ ಬಾರಿಗೆ ಭೋಜ್‍ಪುರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭೋಜ್‍ಪುರಿ ಸಿನಿರಂಗದ ಸೂಪರ್ ಸ್ಟಾರ್ ನಟ ಪವನ್ ಸಿಂಗ್ ಅವರ ಜೊತೆ ನಟನೆ ಮಾಡಲಿದ್ದಾರೆ.

    ಒಂದೂವರೆ ವರ್ಷದ ನಂತರ ಚಿತ್ರೀಕರಣದ ಸೆಟ್‍ಗೆ ಮರಳಿದ್ದೇನೆ. ಭೋಜ್‍ಪುರಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಭೋಜ್‍ಪುರಿ ಸಿನಿಮಾದ ಸೂಪರ್ ಸ್ಟಾರ್ ನಟ ಪವನ್ ಸಿಂಗ್ ಅವರ ಜೊತೆ ತೆರೆ ಹಂಚಿಕೊಳ್ಳಲಿದ್ದೇನೆ ಎಂದು ಬರೆದು ಹರ್ಷಿಕಾ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

    ಹರ್ಷಿಕಾ ನಟಿಸುತ್ತಿರುವ ಭೋಜ್‍ಪುರಿ ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲ. ಆದರೆ ಚಿತ್ರತಂಡ ಈಗಾಗಲೇ ಶೂಟಿಂಗ್ ಆರಂಭಿಸಿದೆ. ಸಿನಿಮಾದಲ್ಲಿ ಲಂಡನ್‍ನ ಶ್ರೀಮಂತ ಹುಡುಗಿ ಪಾತ್ರದಲ್ಲಿ ಹರ್ಷಿಕಾ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಸಂಪೂರ್ಣ ಚಿತ್ರೀಕರಣ ಲಂಡನ್‍ನಲ್ಲಿಯೇ ನಡೆಯಲಿದೆಯಂತೆ. ಭೋಜ್‍ಪುರಿ ಜೊತೆಗೆ ಹಿಂದಿ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.

    ಸಿನಿಮಾವನ್ನು ಯಾಶಿ ಪ್ರೊಡಕ್ಷನ್ ನಲ್ಲಿ ಅಭಯ್ ಸಿನ್ಹಾ ಎಂಬುವವರು ನಿರ್ಮಿಸುತ್ತಿದ್ದಾರೆ. ಪ್ರೇಮಾಂಶು ಸಿಂಗ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೇ.50 ರಷ್ಟು ಪೂರ್ಣವಾಗಿದೆ. ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಹರ್ಷಿಕಾ ಕಳೆದ ಒಂದೂವರೆ ವರ್ಷದಿಂದ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ. ಇದೀಗ ಭೋಜ್‍ಪುರಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲತಾಣದಲ್ಲಿಯು ಅಷ್ಟೇ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ಚಿತ್ರೀಕರಣ ವೇಳೆ ಲಂಡನ್‍ನಲ್ಲಿ ತೆಗೆದಿರುವ ಫೋಟೋವನ್ನು ಸೊಷೀಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  • ಕನ್ನಡ ಚಿತ್ರರಂಗದ ಟ್ರಬಲ್ ಶೂಟರ್ ಅಂಬರೀಶ್ ಹೇಗೆ? ಅಂಬಿ ಮಾತಿಗೆ ಬೆಲೆ ಯಾಕೆ?

    ಕನ್ನಡ ಚಿತ್ರರಂಗದ ಟ್ರಬಲ್ ಶೂಟರ್ ಅಂಬರೀಶ್ ಹೇಗೆ? ಅಂಬಿ ಮಾತಿಗೆ ಬೆಲೆ ಯಾಕೆ?

    ಬೆಂಗಳೂರು: ಕನ್ನಡ ಚಿತ್ರರಂಗ ಯಾವುದೇ ಸಂಕಷ್ಟದಲ್ಲಿದ್ದರೂ ರೆಬಲ್ ಸ್ಟಾರ್ ಅಂಬರೀಶ್ ಚಿತ್ರೋದ್ಯಮಕ್ಕೆ ಹಿರಿಯರಾಗಿ ಬಂದ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ಡಾ. ರಾಜ್‍ಕುಮಾರ್ ನಿಧನರಾದ ನಂತರ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಸಲಹೆ ಸೂಚನೆ ನೀಡುತ್ತ ಹಿರಿಯಣ್ಣನಾಗಿ, ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು.

    ಕನ್ನಡ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಎದುರಾದರೂ ಇಡೀ ಚಿತ್ರೋದ್ಯಮ ಅಂಬರೀಶ್ ಬಳಿ ಹೋಗುವುದು ಮಾಮೂಲು ಆಗಿತ್ತು. ಹೀಗಾಗಿ ರೆಬೆಲ್ ಸ್ಟಾರ್ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರುವಾಸಿಯಾಗಿದ್ದರು.

    ಡಾ. ರಾಜ್‍ಕುಮಾರ್ ಅವರನ್ನು ಚಿತ್ರರಂಗ ಕಳೆದುಕೊಂಡ ನಂತರವೂ ಕನ್ನಡ ಚಿತ್ರೋದ್ಯಮ ಹಲವಾರು ಸಮಸ್ಯೆಗಳನ್ನು, ಸಂಕಷ್ಟಗಳನ್ನು, ಸವಾಲುಗಳನ್ನು ಎದುರಿಸಿತ್ತು. ಚಿತ್ರರಂಗಕ್ಕೆ ಹಿರಿಯರಾಗಿದ್ದಾರೆ ಎನ್ನುವ ಕಾರಣಕ್ಕೆ ಅಂಬರೀಶ್ ಅವರ ಮಾತಿಗೆ ಗೌರವ ನೀಡುವುದಕ್ಕಿಂತ ಅವರ ರೆಬೆಲ್ ಸ್ವಭಾವಕ್ಕೆ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಮರುಮಾತನಾಡದೆ ಅವರ ತೀರ್ಮಾನಕ್ಕೆ ಓಕೆ ಎನ್ನುತ್ತಿದ್ದರು. ಈ ಕಾರಣಕ್ಕಾಗಿಯೇ ಅಂಬರೀಶ್ ಇದ್ದಲ್ಲಿ ಜಗಳವಿಲ್ಲ, ವಿವಾದವಿಲ್ಲ ಎಂದು ಚಿತ್ರರಂಗದಲ್ಲಿ ಮಾತು ಕೇಳಿ ಬಂದಿತ್ತು.

    ನಟ ಅರ್ಜುನ್ ಸರ್ಜಾ ಮೇಲೆ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಅಂಬರೀಶ್ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿರಲಿಲ್ಲ. ಸಂಧಾನ ಮಾತುಕಥೆಯಿಂದ ಇಬ್ಬರ ವಿವಾದ ಇತ್ಯರ್ಥವಾಗದೇ ಪ್ರಕರಣ ಕೋರ್ಟ್ ಮೆಟ್ಟಿಲು ಏರಿದಾಗ, `ನಾನೇನು ಸುಪ್ರೀಂ ಅಲ್ಲ. ನನಗೂ ವಯಸ್ಸಾಯ್ತು’ ಎಂದು ನಗುಮುಖದಿಂದಲೇ ಉತ್ತರಿಸಿ ಅಸಹಾಯಕತೆಯನ್ನು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv