Tag: Kannda

  • ಬಿಗ್‌ಬಾಸ್ ಮನೆಯಲ್ಲಿ ವಿವಾದಿತ ಸ್ಪರ್ಧಿಗಳು!

    ಬಿಗ್‌ಬಾಸ್ ಮನೆಯಲ್ಲಿ ವಿವಾದಿತ ಸ್ಪರ್ಧಿಗಳು!

    ವಿವಾದಾತ್ಮಕವಾಗಿ ಗುರುತಿಸಿಕೊಂಡವರಿಗೆ ಬಿಗ್‌ಬಾಸ್‌ನಲ್ಲಿ (Bigg Boss) ಮಣೆ ಹಾಕಲಾಗುತ್ತದೆ ಅನ್ನೋದು ಬಿಗ್‌ಬಾಸ್ ಕಾರ್ಯಕ್ರಮದ ವಿರುದ್ಧ ಜನರ ಒಂದು ಅಸಮಾಧಾನ. ಅದರಂತೆ ಈ ಬಾರಿಯೂ ವಿವಾದವನ್ನ ಬೆನ್ನಿಗೆ ಕಟ್ಟಿಕೊಂಡ ಅನೇಕರು ಬಿಗ್ ಮನೆಯೊಳಗೆ ಎಂಟ್ರಿ ಪಡೆದಿರುವುದು ಚರ್ಚೆಗೆ ಕಾರಣವಾಗಿದೆ.

    ಧ್ರುವಂತ್

    ಧ್ರುವಂತ್
    ಮುದ್ದುಲಕ್ಷ್ಮಿ ಧಾರಾವಾಹಿ ನಟ ಧ್ರುವಂತ್ ನಟನಾಗಷ್ಟೇ ಅಲ್ಲ, ಲೈಂಗಿಕ ಕಿರುಕುಳ ಆರೋಪಿ ಕೂಡ. ವರ್ಷದ ಹಿಂದೆ ಧ್ರುವಂತ್ (Dhruvanth) ಮೇಲೆ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಬಿಗ್‌ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:  ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್

     ಸತೀಶ್

     ಸತೀಶ್
    50 ಕೋಟಿ ರೂ. ನಾಯಿ ಖರೀದಿಸಿದ್ದೇನೆ ಎಂದು ಬಿಲ್ಡಪ್ ಕೊಟ್ಟಿದ್ದ ಬೆಂಗಳೂರಿನ ಉದ್ಯಮಿ ಸತೀಶ್ (Satish) ಕೂಡ ಬಿಗ್‌ಬಾಸ್ ಹೌಸ್‌ಗೆ ಆಶ್ಚರ್ಯಕರ ಎಂಟ್ರಿ ಪಡೆದುಕೊಂಡಿದ್ದಾರೆ. ಬಿಲ್ಡಪ್ ಕೊಟ್ಟಿದ್ದಕ್ಕೆ ಇಡಿ ಶಾಕ್ ಕೊಟ್ಟಿತ್ತು. ಸತೀಶ್ ಮೇಲೆ ಇಡಿ ರೇಡ್ ನಡೆದಿತ್ತು. ವುಲ್ಫ್ ಡಾಗ್ ನಾಯಿಗೆ 50 ಕೋಟಿ ಕೊಟ್ಟು ಖರೀದಿಸಿದ್ದೇನೆ ಎಂದು ಬಿಲ್ಡಪ್ ಶೋ ಕೊಟ್ಟಿದ್ದ ವ್ಯಕ್ತಿಯ ಸುಳ್ಳನ್ನ ಇಡಿ ಬಯಲುಮಾಡಿತ್ತು.

    ಚಂದ್ರಪ್ರಭ

    ಚಂದ್ರಪ್ರಭ
    ಹಾಸ್ಯನಟ ಚಂದ್ರಪ್ರಭ (Chandra Prabha) ಜನಪ್ರಿಯತೆ ಗಳಿಸಿದ್ದು ಗಿಚ್ಚಿಗಿಲಿಗಿಲಿ ಕಾರ್ಯಕ್ರಮದ ಮೂಲಕವೇ ಆಗಿದ್ದರೂ ಇವರ ಮೇಲೆ ಆಕ್ಸಿಡೆಂಟ್ ಮಾಡಿರೋ ಆರೋಪವಿದೆ. ಚಿಕ್ಕಮಗಳೂರಿನಲ್ಲಿ ಕಾರನ್ನು ಓಡಿಸುವಾಗ ಬೈಕ್‌ಗೆ ಕಾರು ಗುದ್ದಿದ್ದಲ್ಲವೇ ಹಿಟ್ & ರನ್ ಮಾಡಿರುವ ಆರೋಪ ಹೊತ್ತಿದ್ದವರು. ಬಳಿಕ ಸ್ಟೇಷನ್‌ಗೂ ತೆರಳಿದ್ದ ಚಂದ್ರಪ್ರಭ ಬೇಲ್ ಪಡೆದುಕೊಂಡಿದ್ರು. ತಮ್ಮ ಹಾಸ್ಯಪ್ರಜ್ಞೆ ಹಾಗೂ ಅಭಿನಯದ ಜೊತೆಗೆ ಕ್ರೈಂಸ್ಟೋರಿಯಲ್ಲೂ ಹೆಡ್‌ಲೈನ್‌ನಲ್ಲಿ ಬಂದವ್ರು ಹಾಸ್ಯನಟ ಚಂದ್ರಪ್ರಭ. ಇದನ್ನೂ ಓದಿ:  ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!

     ಅಶ್ವಿನಿ ಗೌಡ

     ಅಶ್ವಿನಿ ಗೌಡ
    ನಟಿ ಅಶ್ವಿನಿ ಗೌಡ (Ashwini Gowda) ಅನೇಕ ಸಿನಿಮಾಗಳಲ್ಲಿ ಪ್ರತಿಭೆ ತೋರಿಸಿರುವ ನಟಿ. ಅನೇಕ ಧಾರಾವಾಹಿಗಳನ್ನ ಅಭಿನಯದ ಮೂಲಕ ಕನ್ನಡಿಗರ ಮನಸ್ಸು ಗೆದ್ದ ನಟಿ. ಜೊತೆಗೆ ರಾಜಕೀಯವಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ. ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಇವರ ಮೇಲೆ ಅನೇಕ ಆರೋಪಗಳಿವೆ. ಅನೇಕ ಕೇಸ್‌ಗಳ ವಿಚಾರವಾಗಿ ಅಶ್ವಿನಿ ಗೌಡ ಕೋರ್ಟು, ಕಛೇರಿ, ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.

    ಹೀಗೆ ವಿವಾದದಿಂದ ಗುರುತಿಸಿಕೊಂಡು ದೊಡ್ಮನೆಗೆ ಹೋದವರು ತಮ್ಮ ಮೇಲಿನ ಆರೋಪದಿಂದ ಇತರರಿಂದ ಸಪರೇಷನ್ ಭಯವನ್ನೂ ಅನುಭವಿಸಿಸಬಹುದು ಅಥವಾ ಸಿಂಪತಿಯನ್ನೂ ಗಿಟ್ಟಿಸಿಕೊಳ್ಳುವ ಚಾನ್ಸ್ ಇರುತ್ತೆ. ಇಷ್ಟೇ ಅಲ್ಲ ಮೈಗೆ ಅಂಟಿಕೊಂಡಿರುವ ವಿವಾದ ಶಮನ ಮಾಡಿಕೊಳ್ಳುವ ಅಥವಾ ವಿವಾದ ಹೆಚ್ಚಿಸಿಕೊಳ್ಳುವ ಅವಕಾಶವೂ ಅವರ ವರ್ತನೆಯಲ್ಲಿ ಸಾಧ್ಯವಾಗುವ ಸಂಭವ ಇರುತ್ತೆ.

  • ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

    ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

    ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಹಿರಿಯ ಸಾಹಿತಿ, ಚಿಂತಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರನ್ನು ಡಾ. ಎಂ.ಎಂ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ.

    ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನಕ್ಕೆ ನೀಡಲಾಗಿದೆ. ಡಾ. ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಮೈಸೂರಿನ ಸಯ್ಯದ್ ಇಸಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಅನುಪಮ ನಿರಂಜನ ವೈದ್ಯಕೀಯ, ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಸುಧೀಂದ್ರ ಹಾಲ್ದೊಡ್ಡೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ:ಆಪ್ತ ಅರೆಸ್ಟ್ – ವಿಜಯೇಂದ್ರ ವಿರುದ್ಧ ಶೀರಾಮುಲು ಕೆಂಡಾಮಂಡಲ

    ಪುಸ್ತಕ ಬಹುಮಾನಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಕೆಲವು ದಿನಗಳಲ್ಲೇ ಪ್ರಕಟವಾಗಲಿದೆ. ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ರೂ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಡಾ. ಎಂ.ಎಂ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ರೂ. 75,000 ನಗದು ಹಾಗೂ ಪ್ರಶಸ್ತಿ ಫಲಕ, ಡಾ. ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ರೂ.50,000 ನಗದು ಹಾಗೂ ಪ್ರಶಸ್ತಿ ಫಲಕ, ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ರೂ.25,000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

  • ಮಕ್ಕಳಿಗೆ ಸಾಂಸ್ಕೃತಿಕ ವಾತಾವರಣ ಕಟ್ಟಿಕೊಡಿ: ಟಿ.ಎಸ್ ನಾಗಾಭರಣ

    ಮಕ್ಕಳಿಗೆ ಸಾಂಸ್ಕೃತಿಕ ವಾತಾವರಣ ಕಟ್ಟಿಕೊಡಿ: ಟಿ.ಎಸ್ ನಾಗಾಭರಣ

    ಬೆಂಗಳೂರು: ಅನಿವಾಸಿ ಕನ್ನಡಿಗರು ಎಲ್ಲೇ ಇದ್ದರೂ ತಮ್ಮ ಮಕ್ಕಳಿಗೆ ಕನ್ನಡದ ಸಾಂಸ್ಕೃತಿಕ ವಾತಾವರಣ ಕಟ್ಟಿಕೊಡಿ. ಕನ್ನಡಿಗರು ಎಲ್ಲಿ ಇದ್ದರೂ ಕೂಡ ತಮ್ಮ ಭಾಷಾ ಕೌಶಲ್ಯವನ್ನು ವೃದ್ಧಿಸಿಕೊಂಡು ಕನ್ನಡದ ಹಿರಿಮೆ-ಗರಿಮೆಯನ್ನು ಎತ್ತಿ ಹಿಡಿದು ಕನ್ನಡ ರಾಯಭಾರಿಗಳಾಗುವವರು ನಮ್ಮ ನಾಡಿನ ಹೆಮ್ಮೆಯ ಪ್ರತೀಕ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಾಭರಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಲಾಸ್ ಏಂಜಲೀಸ್‍ನ ಆರೆಂಜ್ ಕೌಂಟಿಯ ಕನ್ನಡ ಶಾಲೆಯ ಗ್ರಾಜ್ಯುಯೇಷನ್ ಡೇ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಇಂದು ಮುಖ್ಯ ಅತಿಥಿಯಾಗಿ ಮಾತನಾಡಿದ ನಾಗಾಭರಣ ಅವರು, ಕನ್ನಡಿಗರು ತಾವಿರುವಲ್ಲಿಯೇ ಕನ್ನಡದ ವಾತಾವರಣ ನಿರ್ಮಿಸಿಕೊಂಡು ತಮ್ಮ ಮಕ್ಕಳಿಗೆ ತಾಯ್ನಾಡಿನ ಸಾಂಸ್ಕೃತಿಕ ವಾತಾವರಣವನ್ನು ಕಟ್ಟಿಕೊಡುವಂತೆ ಸಲಹೆ ನೀಡಿದರು.  ಇದನ್ನೂ ಓದಿ: ಕನ್ನಡಿಗರಿಗೆ ಕಡ್ಡಾಯವಾಗಿ ಕೆಲಸ ಸಿಗುವಂತೆ ಮಾಡಬೇಕಿದೆ: ನಾಗಾಭರಣ

    ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಕವಿತೆಯ ಸಾಲುಗಳನ್ನು ಮಕ್ಕಳಿಗೆ ನೆನಪಿಸುವ ಮೂಲಕ ಕನ್ನಡದ ಕಂಪನ್ನು ಪಸರಿಸಿ ಅನಿವಾಸಿ ಕನ್ನಡಿರಿಗರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ನಟ, ನಾವಿಕ ಸಂಘಟಕರಾದ ವಲ್ಲೀಶ್ ಶಾಸ್ತ್ರಿ, ಆರೆಂಜ್ ಕೌಂಟಿಯ ಶ್ರೀಧರ ರಾಜಣ್ಣ, ಶ್ರೀನಿವಾಸ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.

  • ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಶಿವಣ್ಣ

    ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಶಿವಣ್ಣ

    ಮೈಸೂರು: ಶುಕ್ರವಾರ ರಾತ್ರಿ ಚಾಮುಂಡಿ ಬೆಟ್ಟಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿ ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.

    ಕುಟುಂಬ ಸಮೇತ ಬೆಟ್ಟಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡಿದ್ದಾರೆ.

    ದೀಪಾವಳಿ ಮಗಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಸಹ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

  • ದೇವರ ಉತ್ಸವದ ವೇಳೆ ಸ್ಥಳೀಯರು, ಕರವೇ ಕಾರ್ಯಕರ್ತರ ನಡುವೆ ಮಾರಾಮಾರಿ

    ದೇವರ ಉತ್ಸವದ ವೇಳೆ ಸ್ಥಳೀಯರು, ಕರವೇ ಕಾರ್ಯಕರ್ತರ ನಡುವೆ ಮಾರಾಮಾರಿ

    ಬೆಂಗಳೂರು: ಕನ್ನಡ ಹಾಡುಗಳನ್ನು ಬಳಸಿಲ್ಲ ಎಂಬ ಕಾರಣಕ್ಕೆ ಸ್ಥಳೀಯರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

    ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಜೆಜೆ ನಗರ ಬಳಿಯ ಮಾರ್ಕಂಡೇಶ್ವರ ನಗರದಲ್ಲಿ ಗಂಗಮ್ಮ ದೇವಿ ಉತ್ಸವ ವೇಳೆ ಮನರಂಜನೆಗಾಗಿ ಆರ್ಕೆಸ್ಟ್ರಾ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಕದೇ ಕೇವಲ ತಮಿಳು ಹಾಡನ್ನು ಹಾಕಿದ್ದನ್ನು ಕರವೇ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

    ಈ ಆರ್ಕೆಸ್ಟ್ರಾದ ಉಸ್ತುವಾರಿಯನ್ನು ರೌಡಿಶೀಟರ್‍ ಗಳಾದ ಲವ, ಕುಶ ನೋಡಿಕೊಳ್ಳುತ್ತಿದ್ದು, ತಮಿಳು ಹಾಡುಗಳನ್ನು ಹಾಡದಂತೆ ಕರವೇ ಕಾರ್ಯಕರ್ತರು ಮನವಿ ಮಾಡಿಕೊಂಡರು ಅವರ ಮಾತಿಗೆ ಕಿವಿ ಕೊಡದೆ ತಮಿಳು ಸಾಂಗ್ ಹಾಕಿದ್ದ ಕಾರಣ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.

    ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಜೆಜೆ ನಗರ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕಾಳಾ ಸಿನಿಮಾ ನೋಡಿದವರನ್ನು ಸನ್ಮಾನಿಸಿದ ಕನ್ನಡ ಪರ ಹೋರಾಟಗಾರರು

    ಕಾಳಾ ಸಿನಿಮಾ ನೋಡಿದವರನ್ನು ಸನ್ಮಾನಿಸಿದ ಕನ್ನಡ ಪರ ಹೋರಾಟಗಾರರು

    ಬೆಂಗಳೂರು: ನಗರದ ಜಾಲಹಳ್ಳಿಯ ಭಾರತಿ ಚಿತ್ರಮಂದಿರದಲ್ಲಿ ಕಾಳಾ ಸಿನಿಮಾ ನೋಡಿದ ಕೆಲವರಿಗೆ ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿ ಅಣಕು ಪ್ರದರ್ಶನ ಮಾಡಿದ್ದಾರೆ.

    ಕನ್ನಡಪರ ಸಂಘಟನೆಗಳ ಸಾಕಷ್ಟು ವಿರೋಧದ ನಡುವೆಯು ಕೆಲವು ಚಿತ್ರ ಮಂದಿರಗಳಲ್ಲಿ ರಜಿನಿಕಾಂತ್ ಅಭಿನಯದ ಕಾಳಾ ಚಿತ್ರ ಪ್ರದರ್ಶನಗೊಂಡಿದೆ. ಪ್ರತಿಭಟನೆ ಮಾಡಿದರೆ ಪೊಲೀಸರು ಬಂಧಿಸುತ್ತಾರೆ ಎಂದು ಚಿತ್ರ ನೋಡಿ ಹೊರ ಬಂದ ಕೆಲವರಿಗೆ ಮೈಸೂರು ಪೇಟಾ, ಶಾಲು, ಹೂವಿನ ಹಾರ ಹಾಕಿ ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿ ಅಣಕವಾಡಿದ್ದಾರೆ.

    ಸನ್ಮಾನ ಮಾಡಿದ ನಂತರ ಮಾತನಾಡಿದ ಹೋರಾಟಗಾರರು, ಕನ್ನಡ ದ್ರೋಹಿಗಳನ್ನು ಹುಡುಕುತ್ತಾ ಇದ್ದೀವಿ, ಅದು ನೀವೆ ಅಂತಾ ಸನ್ಮಾನ ಮಾಡಿದ್ದೇವೆ, ಸ್ವಾಭಿಮಾನಕ್ಕಿಂತ ಸಿನಿಮಾನೇ ಜಾಸ್ತಿ ಆಯಿತಾ ಅಂತಾ ಪ್ರಶ್ನಿಸಿದ್ದೇವೆ. ಸನ್ಮಾನ ಸ್ವೀಕರಿಸಿದ ಕೆಲ ಪ್ರೇಕ್ಷಕರು ಕ್ಷಮೆಯಾಚಿಸಿದರು. ಪೊಲೀಸರು ಸನ್ಮಾನ ಮಾಡುತ್ತಾರೆ ಎಂದು ಹೋರಾಟಗಾರರಿಗೆ ಅನುವು ಮಾಡಿಕೊಟ್ಟರು ಅಂತಾ ಹೇಳಿದರು.

    ಜ್ಯುರಾಸಿಕ್ ವಲ್ರ್ಡ್ ಹಾಲಿವುಡ್ ಸಿನಿಮಾ ಟಿಕೆಟ್ ನೀಡಿ ಕಾಳಾ ಚಿತ್ರವನ್ನು ನಗರದ ಊರ್ವಶಿ ಚಿತ್ರಮಂದಿರದಲ್ಲಿ ನಿನ್ನೆ ಪ್ರದರ್ಶನ ಮಾಡಿದ್ದು ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿತ್ತು. ಇದನ್ನೂ ಓದಿ:ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ: ರೊಚ್ಚಿಗೆದ್ದ ಪ್ರೇಕ್ಷಕರಿಂದ ಥಿಯೇಟರ್ ಗೆ ಮುತ್ತಿಗೆ