Tag: Kannappa film

  • ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್‌ಗಳ ಅಬ್ಬರ- ಪ್ರಭಾಸ್ ಎಂಟ್ರಿಯೇ ಚಿಂದಿ

    ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್‌ಗಳ ಅಬ್ಬರ- ಪ್ರಭಾಸ್ ಎಂಟ್ರಿಯೇ ಚಿಂದಿ

    ಟಾಲಿವುಡ್ ನಟ ಮಂಚು ವಿಷ್ಣು (Manchu Vishnu) ನಟನೆಯ ‘ಕಣ್ಣಪ್ಪ’ (Kannappa) ಟೀಸರ್ ರಿಲೀಸ್ ಆಗಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗಿರೋ ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್ ಕಲಾವಿದರು ಮಿಂಚಿದ್ದಾರೆ. ಅದರಲ್ಲಿ ಪ್ರಭಾಸ್ (Prabhas) ಕಣ್ಣೇ ಹೈಲೈಟ್ ಆಗಿದೆ. ಪ್ರಭಾಸ್ ಲುಕ್‌ಗೆ ಫ್ಯಾನ್ಸ್ ಕಳೆದೋಗಿದ್ದಾರೆ. ಇದನ್ನೂ ಓದಿ:‘ಗುಡ್ ಬ್ಯಾಡ್ ಅಗ್ಲಿ’ ಅವತಾರವೆತ್ತಿದ ಅಜಿತ್ ಕುಮಾರ್- ಟೀಸರ್‌ಗೆ ಫ್ಯಾನ್ಸ್ ಮೆಚ್ಚುಗೆ

    ನಾಯಕನಾಗಿ ಮಂಚು ವಿಷ್ಣು, ಶಿವನಾಗಿ ಅಕ್ಷಯ್ ಕುಮಾರ್, ಪಾರ್ವತಿಯಾಗಿ ಕಾಜಲ್ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ಜೊತೆ ಮೋಹನ್ ಲಾಲ್, ಶರತ್ ಕುಮಾರ್, ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕೊನೆಯಲ್ಲಿ ಪ್ರಭಾಸ್ ಎಂಟ್ರಿ ಆಗುತ್ತಿದೆ. ಪ್ರಭಾಸ್ ನೋಡೋ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟನ ಎಂಟ್ರಿ ಚಿಂದಿ ಎಂದಿದ್ದಾರೆ.

    150 ಕೋಟಿ ರೂ. ಬಜೆಟ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಮಾಡಲಾಗಿದೆ. ಟೀಸರ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

    ಅಂದಹಾಗೆ, ಇತ್ತೀಚೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು, ನಾಯಕ ನಟ ಮಂಚು ವಿಷ್ಣು, ನಟಿ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಭಾರತಿ ವಿಷ್ಣುವರ್ಧನ್ ಕೂಡ ಭಾಗಿಯಾಗಿದ್ದರು.

  • ಕೊನೆಗೂ ರಿವೀಲ್ ಆಯ್ತು ಪ್ರಭಾಸ್ ಲುಕ್- ‘ಕಣ್ಣಪ್ಪ’ ಚಿತ್ರದ ಪೋಸ್ಟರ್ ಔಟ್

    ಕೊನೆಗೂ ರಿವೀಲ್ ಆಯ್ತು ಪ್ರಭಾಸ್ ಲುಕ್- ‘ಕಣ್ಣಪ್ಪ’ ಚಿತ್ರದ ಪೋಸ್ಟರ್ ಔಟ್

    ಡಾರ್ಲಿಂಗ್ ಪ್ರಭಾಸ್ (Darling Prabhas) ಅವರು ‘ಕಲ್ಕಿ’ ಆಗಿ ಸಕ್ಸಸ್ ಕಂಡ ಮೇಲೆ ರುದ್ರನಾಗಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ‘ಕಣ್ಣಪ್ಪ’ (Kannappa) ಸಿನಿಮಾದಲ್ಲಿ ಕೊನೆಗೂ ಪ್ರಭಾಸ್ ಲುಕ್ ರಿವೀಲ್ ಆಗಿದೆ. ಚಿತ್ರದ ನಯಾ ಪೋಸ್ಟರ್ ರಿವೀಲ್ ಆಗಿದೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ‘ಮಹಾನಟಿ’ ವಿನ್ನರ್ ಎಂಟ್ರಿ- ‘ಕಾಟೇರ’ ಡೈರೆಕ್ಟರ್‌ ತರುಣ್‌ ಸಿನಿಮಾದಲ್ಲಿ ಪ್ರಿಯಾಂಕಾ

    ಮಂಚು ವಿಷ್ಣು ಹೀರೋ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ ರುದ್ರನಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹರಡಿದ ತಲೆಗೂದಲು, ಕೈಯಲ್ಲಿ ಅರ್ಧ ಚಂದ್ರಾಕೃತಿಯ ಕೋಲು ಹಿಡಿದು ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಇದೆ. ಹೆಗಲಿಗೆ ಕೇಸರಿ ವಸ್ತ್ರವನ್ನು ಹೊದ್ದಿದ್ದಾರೆ. ಹಣೆಯಲ್ಲಿ ವಿಭೂತಿ ಇಟ್ಟುಕೊಂಡು ನಗುತ್ತಾ ಪ್ರಭಾಸ್ ಅವರು ಕಾಣಿಸಿಕೊಂಡಿದ್ದು, ಈ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Vishnu Manchu (@vishnumanchu)

    ಇನ್ನೂ ‘ಕಣ್ಣಪ್ಪ’ ಸಿನಿಮಾದಲ್ಲಿ ಶಿವನಾಗಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಶಿವನ ಅನುಯಾಯಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ವಿಷ್ಣು ಮಂಚು ಜೊತೆ ಮೋಹನ್ ಲಾಲ್, ಕಾಜಲ್, ಪ್ರೀತಿ ಮುಕುಂದನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ವಿಷ್ಣು ಮಂಚು ತಂದೆ ಮೋಹನ್ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಏ.25ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  • ಟಾಲಿವುಡ್‌ನತ್ತ ಅಕ್ಷಯ್ ಕುಮಾರ್- ‘ಕಣ್ಣಪ್ಪ’ ಸಿನಿಮಾದಲ್ಲಿ ಕಿಲಾಡಿ

    ಟಾಲಿವುಡ್‌ನತ್ತ ಅಕ್ಷಯ್ ಕುಮಾರ್- ‘ಕಣ್ಣಪ್ಪ’ ಸಿನಿಮಾದಲ್ಲಿ ಕಿಲಾಡಿ

    ಬಾಲಿವುಡ್ (Bollywood) ಹೀರೋ ಅಕ್ಷಯ್ ಕುಮಾರ್‌ಗೆ (Akshay Kumar) ಹಿಂದಿ ಸಿನಿಮಾರಂಗದಲ್ಲೇ ಭಾರೀ ಬೇಡಿಕೆ ಇದೆ. ಇದರ ನಡುವೆ ಟಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈಗ ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾಗೆ ಸಾಥ್‌ ನೀಡಲಿದ್ದಾರೆ. ಇದನ್ನೂ ಓದಿ:ಪಂಚ ಭಾಷೆಗಳಲ್ಲಿ ‘ಶಬರಿ’: ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಇದೀಗ ಸಿನಿಮಾರಂಗದಲ್ಲಿ ಹೆಚ್ಚೆಚ್ಚು ಸಕ್ಸಸ್ ಕಾಣುತ್ತಿರುವ ಸಿನಿಮಾಗಳಂದ್ರೆ ದಕ್ಷಿಣದ ಸಿನಿಮಾಗಳು. ಅದಕ್ಕಾಗಿಯೇ ಈಗಾಗಲೇ ಮೃಣಾಲ್ ಠಾಕೂರ್ (Mrunal Thakur), ಜಾನ್ವಿ ಕಪೂರ್ (Janhvi Kapoor), ಬಾಬಿ ಡಿಯೋಲ್, ಸಂಜಯ್ ದತ್, ಸನ್ನಿ ಲಿಯೋನ್ ಹೀಗೆ ಅನೇಕರು ಬಾಲಿವುಡ್‌ನಿಂದ ಟಾಲಿವುಡ್‌ಗೆ ಬಂದು ಸಕ್ಸಸ್ ಕಂಡಿದ್ದಾರೆ. ಅದೇ ಹಾದಿಯಲ್ಲಿ ಅಕ್ಷಯ್ ಕುಮಾರ್ ಕೂಡ ಹೆಜ್ಜೆ ಇಡುತ್ತಿದ್ದಾರೆ.

    ಸದ್ಯ ವಿಷ್ಣು ಮಂಚು (Vishnu Manchu) ನಟನೆಯ ಸಿನಿಮಾ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್ ಈಗಾಗಲೇ ಚಿತ್ರತಂಡವನ್ನು ಸೇರಿದ್ದಾರೆ. ಅಕ್ಷಯ್ ಕುಮಾರ್ ಕೂಡ ಈ ಪ್ರಾಜೆಕ್ಟ್‌ಗಳಲ್ಲಿ ನಟಿಸಲಿದ್ದಾರೆ. ಬಹುಮುಖ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಪಾತ್ರದ ಕುರಿತು ಮುಂದಿನ ದಿನಗಳಲ್ಲಿ ತಂಡದ ಕಡೆಯಿಂದ ಮಾಹಿತಿ ಸಿಗಲಿದೆ.

    ಬಿಗ್ ಬಜೆಟ್‌ನಲ್ಲಿ ಕಣ್ಣಪ್ಪ ಸಿನಿಮಾ ಮೂಡಿ ಬರಲಿದೆ. ಮಲ್ಟಿ ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.