ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಮುಖ್ಯಮಂತ್ರಿಗಳ ಸೂಚನೆ ಬಳಿಕ ಮುಖ್ಯಕಾರ್ಯದರ್ಶಿ ನಿರಂತರವಾಗಿ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ʻಬೆಂಕಿಯ ಬಲೆʼಯಲ್ಲಿ ನೇಪಾಳ – ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ ರಾಜ್ಯ ಸರ್ಕಾರ
– ಕನ್ನಡಿಗರಿಂದ ಪ್ರವಾಸಿ ಮಂದಿರಕ್ಕೆ ಉದ್ರಿಕ್ತರಿಂದ ಬೆಂಕಿ
– ಕಠ್ಮಂಡು ನಗರ ಸುತ್ತುವರಿದ ಸೇನೆ, ಕರ್ಫ್ಯೂ ಜಾರಿ
ಬೆಂಗಳೂರು: ನೇಪಾಳದಲ್ಲಿ (Nepal) ಭುಗಿಲೆದ್ದ ಪ್ರತಿಭಟನೆಯಿಂದ ದೇಶಾದ್ಯಂತ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ (Shalini Rajneesh) ಅವರಿಗೆ ಸೂಚನೆ ನೀಡಿದ್ದಾರೆ.
ನೇಪಾಳದಲ್ಲಿ ವಿದ್ಯಾರ್ಥಿ – ಯುವಜನರ ಕ್ಷಿಪ್ರ ಬೃಹತ್ ಪ್ರತಿಭಟನೆ ಕಾರಣಕ್ಕೆ ದೇಶಾದ್ಯಂತ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ @siddaramaiah ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್…
ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸಿದ್ದಾರೆ. ಸದ್ಯ ಕನ್ನಡಿಗರು ನೇಪಾಳದಲ್ಲಿ ಸಿಲುಕಿರುವ ಸುರಕ್ಷಿತವಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವಿವಿಧ ತಂಡಗಳಲ್ಲಿ ಇರುವ ಕನ್ನಡಿಗರ (Kannadigas) ಸಂಪರ್ಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಸೇನೆಯಿಂದ ಕರ್ಫ್ಯೂ ಜಾರಿ
ನೇಪಾಳದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸೇನೆ ಕಾರ್ಯಾಚರಣೆಗೆ ಇಳಿದಿದೆ. ಕಠ್ಮಂಡು ನಗರವನ್ನ ನೇಪಾಳಿ ಸೇನೆ (Nepali Army) ಸುತ್ತುವರಿದಿದ್ದು, ರಾಜಧಾನಿಯಾದ್ಯಂತ ಕರ್ಫ್ಯೂ ಜಾರಿಗೊಳಿಸಿದೆ. ನಾಳೆ ಬೆಳಗ್ಗೆ 6 ಗಂಟೆವರೆಗೆ ಜನರು ರಸ್ತೆಗಿಳಿಯದಂತೆ ಸೂಚನೆ ನೀಡಿದೆ. ಜೊತೆಗೆ ಪ್ರವಾಸಿಗರು ಉಳಿದುಕೊಂಡಿರುವ ಹೊಟೇಲ್, ಲಾಡ್ಜ್ ಆವರಣದ ಗೇಟ್‌ಗಳನ್ನ ಕೂಡಲೇ ಬಂದ್ ಮಾಡುವಂತೆ ಸೂಚನೆ ನೀಡಿದೆ. ಇದರೊಂದಿಗೆ ಹಿಂದೂ ದೇವಾಲಯದ ಬಳಿಯೂ ಬಿಗಿ ಭದ್ರತೆ ನೀಡಲಾಗಿದೆ. ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು
ಆನೇಕಲ್‌ನಿಂದ ಪ್ರವಾಸ ಹೊರಟಿದ್ದ ಕನ್ನಡಿಗರಿಗೆ ಸಂಕಷ್ಟ
ಆನೇಕಲ್ ಸೇರಿದಂತೆ ಬೇರೆ ಬೇರೆ ಏರಿಯಾಗಳಿಂದ ಹೊರಟ್ಟಿದ್ದ 27 ಜನರ ಕನ್ನಡಿಗರ ತಂಡವೂ ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಟ್ರಾವೆಲ್ಸ್ ಮೂಲಕ ಪ್ರವಾಸ ಹೊರಟಿದ್ದ ತಂಡ ಶನಿವಾರ ವಾಪಸ್ ಬರುವ ನಿರೀಕ್ಷೆಯಲ್ಲಿದೆ, ಫ್ಲೈಟ್ ಕೂಡ ಬುಕಿಂಗ್ ಮಾಡಲಾಗಿದೆ. ಆದ್ರೆ ಸೇನೆಯಿಂದ ಕರ್ಫ್ಯೂ ಜಾರಿಯಾದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಣಕ್ಕೆ ಬರೋವರೆಗೆ ಅಲ್ಲಿಂದ ಹೊರಡುವುದು ಕಷ್ಟಸಾಧ್ಯವಾಗುತ್ತದೆ ಎಂದು ಕನ್ನಡಿಗರು ಗೋಳಿಟ್ಟಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು
ಭುಗಿಲೆದ್ದ ಪ್ರವಾಸಿಗರು ಉಳಿದುಕೊಂಡಿದ್ದ ಬಿಲ್ಡಿಂಗ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಸುತ್ತಮುತ್ತ ನಾಲ್ಕು ಕಡೆ ಬೆಂಕಿ ಹಚ್ಚಿರೋದ್ರಿಂದ ಕನ್ನಡಿಗರು ಜೀವ ಭಯದಲ್ಲಿದ್ದಾರೆ. ಸದ್ಯ ಈ ಪ್ರವಾಸಿ ತಂಡದೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ, ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ಕರೆತರುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಅಬುಧಾಬಿ (ಯುಎಇ): SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಘದ ಜಂಟಿ ಆಶ್ರಯದಲ್ಲಿ ಕಳೆದ ಜೂನ್ 28ರಂದು ಹಮ್ಮಿಕೊಂಡಿದ್ದ 4ನೇ ಸಾರ್ವಜನಿಕ ರಕ್ತದಾನ ಶಿಬಿರವು (Blood Camp) ಅಬುಧಾಬಿ ಖಾಲಿದಿಯ್ಯಾದಲ್ಲಿರುವ ಸೇಹಾ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ಜರುಗಿತು.
ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕರ್ತ ಮಜೀದ್ ಬೊಳ್ವಾರು ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದಲ್ಲಿ ಒಟ್ಟು 86 ಮಂದಿ ರಕ್ತದಾನ ಮಾಡಿದ್ದು, ಈ ಪೈಕಿ ಮೂವರು ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ದಾನ ಮಾಡಿದ್ದಾರೆ. ರಕ್ತದಾನ ಪ್ರಕ್ರಿಯೆಯಲ್ಲಿ ಸೇಹಾ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದರು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಉಸ್ತಾದ್ ಶಹೀರ್ ಹುದವಿ ಅವರು ರಕ್ತದಾನದ ಇಸ್ಲಾಮಿಕ್ ಮಹತ್ವವನ್ನು ವಿವರಿಸಿದರು. ಒಬ್ಬ ಮನುಷ್ಯ ತನ್ನ ಸಹೋದರನ ನೆರವಿಗೆ ನಿಲ್ಲುವುದಾದರೆ, ಅಲ್ಲಾಹ್ ತನ್ನ ನೆರವಿನಲ್ಲಿ ಅವನ ಜೊತೆಗಿರುತ್ತಾನೆ ಎಂಬ ಹದೀಸ್ ಉಲ್ಲೇಖಿಸಿ, ರಕ್ತದಾನವೆಂದರೆ ಕೇವಲ ಮಾನವೀಯತೆ ಅಲ್ಲ, ಇದು ಇಮಾನ್‌ನ ಭಾಗವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಖ್ಯಾತ ಸಾಹಿತಿ ಅನ್ಸಾರ್ ಕಾಟಿಪಳ್ಳ ಅವರು, ನಾವೆಲ್ಲರೂ ಅನಿವಾಸಿಗಳಾದರೂ ಸಮಾಜದ ಒಳಿತಿಗಾಗಿ ಜವಾಬ್ದಾರಿ ವಹಿಸಬೇಕು ಎಂದು ಹೇಳಿ, ಸ್ವತಃ ತಮ್ಮದೇ ಬರವಣಿಗೆಯಲ್ಲಿ ರಕ್ತದಾನದ ಬಗ್ಗೆ ಕವನವನ್ನು ವಾಚಿಸಿ ಕಾರ್ಯಕ್ರಮಕ್ಕೆ ಸಾಹಿತ್ಯದ ನೋಟವನ್ನು ಜೋಡಿಸಿದರು.
ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ವ್ಯವಸ್ಥಾಪಕ ಸಿರಾಜುದ್ದೀನ್ ಪರ್ಲಡ್ಕ ಮತ್ತು ಕಾರ್ಯ ನಿರ್ವಾಹಕ ಶಾಫಿ ಮಾಣಿ ಹಾಗೂ ಇಕ್ಬಾಲ್ ಕನಕಮಜಲು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಯಾನ್ ರಿಯಲ್ ಎಸ್ಟೇಟ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅನ್ಸಾರ್ ಬೆಳ್ಳಾರೆ ಹಾಗೂ ಕೆಎಂಸಿಸಿ ಪ್ರಮುಖರಾದ ಅಝೀಝ್ ಪರ್ಮುದೆ, ಕಾಸರಗೋಡು SKSSF ಪ್ರಮುಖರಾದ ನೌಫಲ್ ಪಟ್ಟಾಂಬಿ, ಕೆ.ಎಚ್ ಅಲಿ ಮಾಸ್ತಿಕುಂಡು, ಕಮಾಲ್ ಮಲ್ಲಮ್, ಅಶ್ರಫ್ ಮೀನಾಪೀಸ್, ಫೈಝಲ್ ಸೀತಾಂಗೋಳಿ, ಬಾದುಷಾ ಕಾಞಂಗಾಡ್, ಹನೀಫಾ ಎರಿಯಾಲ್, ಪಿಕೆ ಅಶ್ರಫ್ ಮುಂತಾದ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಶುಭಾಶಯಗಳೊಂದಿಗೆ ಪ್ರೋತ್ಸಾಹ ನೀಡಿದರು.
ಶಿಬಿರದಲ್ಲಿ SKSSF ಅಬುಧಾಬಿ ಕರ್ನಾಟಕದ ಪ್ರಮುಖರಾದ ಉಸ್ತಾದ್ ಹಾರಿಸ್ ಮಕ್ದೂಮಿ ಕುಕ್ಕಾಜೆ, ಅಬೂಬಕ್ಕರ್ ಸಕಲೇಶಪುರ, ದಾರುಲ್ ಹಸನಿಯ್ಯ ಅಬುಧಾಬಿ ಸಮಿತಿ ಅಧ್ಯಕ್ಷ ಶಾಕಿರ್ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿ ಜಾಫರ್ ಉಪ್ಪಿನಂಗಡಿ, ಶಿಬಿರದ ಉಸ್ತುವಾರಿ ಹಾಗೂ ಕೆಐಸಿ ಕುಂಬ್ರ ಅಬುಧಾಬಿ ಘಟಕದ ಪ್ರಧಾನ ಕಾರ್ಯದರ್ಶಿ ಹಂಝ ನಾಳ, SKSSF ಕಾರ್ಯಕರ್ತರಾದ ತ್ವಾಹ ಉಪ್ಪಿನಂಗಡಿ, ಅಬೂಬಕ್ಕರ್ ಮುಂಡೋಳೆ,ಅನಸ್ ಕರಾಯ, ಅನ್ಸಾರ್ ಅಲ್ ಐನ್, ಯಾಸೀರ್ ಬೋಳಿಯಾರ್,ಶಾಫಿ ಕಿನ್ಯಾ, ಸಫ್ವಾನ್ ಕೊಡಾಜೆ, ಸ್ವಾದಿಕ್ ಬೆಳ್ಳಾರೆ, ಉಮ್ಮರ್ ಪಾಂಡವರಕಲ್ಲು,ಬಶೀರ್ ಕಾವು, ಬಿಡಬ್ಲ್ಯೂ ಎಫ್ ಅಬುದಾಬಿ ಪ್ರತಿನಿಧಿಗಳಾದ ನವಾಝ್ ಉಚ್ಚಿಲ, ಮುಜೀಬ್ ಉಚ್ಚಿಲ ಹಾಗೂ ಇನ್ನೂ ಅನೇಕರು ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು.
ಕಾರ್ಯಕ್ರಮವನ್ನು SKSSF ಅಬುಧಾಬಿ ಕರ್ನಾಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಫಿಳ್ ಝೈನ್ ಸಖಾಫಿ ನಿರೂಪಣೆ ಮಾಡಿದರೆ, ಬಶೀರ್ ಕೊಡ್ಲಿಪೇಟೆ ಧನ್ಯವಾದ ಸಲ್ಲಿಸಿದರು. ಧಾರ್ಮಿಕ ಕ್ಷೇತ್ರದೊಂದಿಗೆ ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿರುವ SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ.) ಇದರ ಜಂಟಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ಸಂಘರ್ಷದಿಂದ ಅಲ್ಲಿ ಸಿಲುಕಿಕೊಂಡಿದ್ದ 18 ಕನ್ನಡಿಗರು ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.
ಇರಾನ್ ಮತ್ತು ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಆತಂಕದ ಕಾರ್ಮೋಡ ಕವಿದಿದೆ. ತಾಯ್ನಾಡಿಗೆ ವಾಪಸ್ ಆಗಲು ಮನ ಹಂಬಲಿಸುತ್ತಿದೆ. ಭಾರತ ಸರ್ಕಾರವು ಸ್ಥಳಾಂತರ ಪ್ರಕ್ರಿಯೆಯನ್ನು ಬಿರುಸುಗೊಳಿಸಿದೆ. ಭಾರತೀಯರ ರಕ್ಷಣೆಗೆ `ಆಪರೇಷನ್ ಸಿಂಧೂ’ ಹೆಸರನ್ನಿಟ್ಟಿದೆ. ಇದೀಗ ಆಪರೇಷನ್ ಸಿಂಧೂನ ಮೊದಲ ಬ್ಯಾಚ್ ದೆಹಲಿಗೆ ಬಂದಿಳಿದಿದೆ.
ಊರ್ಮಿ ಯೂನಿವರ್ಸಿಟಿಯ 110 ವಿದ್ಯಾರ್ಥಿಗಳನ್ನು ಭೂ ಮಾರ್ಗವಾಗಿ ಇರಾನ್‌ನಿಂದ ಅರ್ಮೇನಿಯಾವನ್ನು ಸುರಕ್ಷಿತವಾಗಿ ತಲುಪಿಸಲಾಗಿತ್ತು. ಅವರೆಲ್ಲ ಇದೀಗ ದೆಹಲಿ ತಲುಪಿದ್ದಾರೆ. ಅರ್ಮೇನಿಯಾದ ಯೆರೆವಾನ್ ಏರ್‌ಪೋರ್ಟ್ನಿಂದ ವಿಶೇಷ ಇಂಡಿಗೋ ವಿಮಾನದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ಆದರೆ, ದೆಹಲಿಯಿಂದ ಕಾಶ್ಮೀರಕ್ಕೆ ತೆರಳಲು ವಿಮಾನ ಬೇಕಂತ ಕಾಶ್ಮೀರಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಆದರೆ, ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ಅಧ್ಯಯನ ಪ್ರವಾಸಕ್ಕೆ ಹೋಗಿದ್ದ ಬಿ-ಪ್ಯಾಕ್‌ನ 18 ಸದಸ್ಯರು ಇಸ್ರೇಲ್‌ನಿಂದ ಬೆಂಗಳೂರು ಏರ್‌ಪೋರ್ಟ್ಗೆ ಬಂದಿಳಿದಿದ್ದಾರೆ. ಆದರೆ, ಇರಾನ್‌ನಿಂದ ಬರಬೇಕಿದ್ದ ಐವರು ಕನ್ನಡಿಗರಿದ್ದ ವಿಮಾನ ಕಾರಣಾಂತರಗಳಿಂದ ರದ್ದಾಗಿದೆ.
ಇರಾನ್‌ನ ಖೋಮ್ ನಗರದಿಂದ 500 ಕಾಶ್ಮೀರಿ ವಿದ್ಯಾರ್ಥಿಗಳು ಸೇರಿದಂತೆ 600 ಭಾರತೀಯರನ್ನು ಮಶ್ಶಾದ್ ನಗರಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇಸ್ರೇಲ್‌ನಿಂದಲೂ ಏರ್‌ಲಿಫ್ಟ್ಗೆ ಪ್ರಕ್ರಿಯೆ ಶುರುವಾಗಿದೆ.
ಬೆಂಗಳೂರು: ಕನ್ನಡಿಗರಿಗೆ ಅಪಮಾನ ಪ್ರಕರಣ ಸಂಬಂಧ ಗಾಯಕ ಸೋನು ನಿಗಮ್ ಪೊಲೀಸರ ಜೊತೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ಪೊಲೀಸರ ಭೇಟಿಗೆ ಸಮಯ ಕೊಡದೇ ಸೋನು ನಿಗಮ್ (Sonu Nigam) ಸತಾಯಿಸುತ್ತಿದ್ದಾರೆ.
ಹಾಗಾದ್ರೆ ಹೈಕೋರ್ಟ್ ಮಾತಿಗೆ ಸೋನು ನಿಗಮ್ ಬೆಲೆ ನೀಡುತ್ತಿಲ್ವಾ ಎಂಬ ಪ್ರಶ್ನೆ ಎದ್ದಿದೆ. ಸದ್ಯ ಇನ್ನೆರೆಡು ದಿನ ಕಾದು ನೋಡಲು ಪೊಲೀಸರು ಚಿಂತನೆ ನಡೆಸಿದ್ದು, ನಂತವೂ ಸಮಯ ಕೊಟ್ಟಿಲ್ಲ ಅಂದರೆ ಕೋರ್ಟ್ ಗಮನಕ್ಕೆ ತರಲು ಅವಲಹಳ್ಳಿ ಪೊಲೀಸರು (Avalahlli Police) ನಿರ್ಧಾರ ಮಾಡಿದ್ದಾರೆ.
ಟೆಲ್ ಅವೀವ್: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವೆ ಸಂಘರ್ಷ ಉಂಟಾಗಿ, ದಾಳಿ-ಪ್ರತಿದಾಳಿಗಳು ನಡೆಸುತ್ತಿದೆ. ಇದೀಗ ಇಸ್ರೇಲ್‌ನಲ್ಲಿ ಸಿಲುಕಿರುವ ಕರ್ನಾಟಕದ ಮಹಿಳೆಯೊಬ್ಬರು ಇರಾನ್ ದಾಳಿಯ ಭೀಕರತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಸ್ರೇಲ್‌ನಲ್ಲಿ ಕೇರ್ ಟೇಕರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಗಳೂರಿನ ಮಹಿಳೆಯೊಬ್ಬರು, ಪಬ್ಲಿಕ್ ಟಿವಿಯೊಂದಿಗೆ ದಾಳಿ ಭೀಕರತೆಯನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಇಂದು ಬೆಳಗ್ಗೆ ಕೂಡಾ ಡ್ರೋನ್, ಮಿಸೈಲ್ ಅಟ್ಯಾಕ್ (Missile attack) ಆಗಿದೆ. ಇಲ್ಲಿನ ಒಂದೊಂದು ಕ್ಷಣವೂ ಭಯದಿಂದ ಕೂಡಿದೆ. ರಾಶಿ, ರಾಶಿ ಡ್ರೋನ್, ಮಿಸೈಲ್‌ಗಳಿಂದ ದಾಳಿ ನಡೆಯುತ್ತಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Israel-Iran Conflict | ಇಸ್ರೇಲ್‌ನಲ್ಲಿ ಸಿಲುಕಿದ 18 ಮಂದಿ ಕನ್ನಡಿಗರು
ರಸ್ತೆಗಳಿಗೆ ಇಳಿಯಲು ಭಯ ಆಗ್ತಿದೆ. ಜೆರುಸೇಲಂನಲ್ಲಿ 2 ದಿನಗಳಿಂದ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಕಚೇರಿ, ಕಾರ್ಖಾನೆಗಳಿಗೆ ರಜೆ ನೀಡಲಾಗಿದೆ. ಅಧಿಕಾರಿಗಳು, ರಸ್ತೆಗೆ ಇಳಿಯದಂತೆ ನಾಗರಿಕರಿಗೆ ಸೂಚನೆ ನೀಡಿದ್ದಾರೆ. ಜೇರುಸೇಲಂನ ಹಲವು ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗ್ತಿದೆ. ಸೈರನ್ ಮೊಳಗ್ತಿದ್ದಂತೆ ಬಂಕರ್‌ಗೆ ಜನರು ಓಡಿ ಹೋಗುತ್ತಿದ್ದಾರೆ ಎಂದು ಇರಾನ್ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್, ಇಸ್ರೇಲ್‌ನಲ್ಲಿ 80 ಮಂದಿ ಸಾವು
ತುರ್ತು ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಯಾವುದೇ ಸಂಚಾರ ಅನುಮತಿ ಇಲ್ಲ. ಟೆಲ್ ಅವೀವ್, ಬೆತ್ಲಹೆಂನಲ್ಲಿ ಮನೆಗಳಿಗೆ ಹಾನಿ ಆಗಿದೆ. ಜೆರುಸಲೆಂನಲ್ಲಿ ಹಾನಿಯಾಗಿಲ್ಲ. ಆದರೆ ಕ್ಷಿಪಣಿ, ಡ್ರೋನ್ ದಾಳಿಗಳು ನಡೆಯುತ್ತಿವೆ. ರಾತ್ರಿ, ಬೆಳಗ್ಗೆ ಎನ್ನದೇ ದಾಳಿ ನಡೆಯುತ್ತಿದೆ. ಇದರ ಭಯದಲ್ಲಿ ನಮಗೆ ಇಲ್ಲಿ ನಿದ್ದೆ ಇಲ್ಲದಂತಾಗಿದೆ. ಮೊನ್ನೆ ನಡೆದ ಕ್ಷಿಪಣಿ ದಾಳಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ನೋಡಿ ತುಂಬಾ ಭಯ ಆಯ್ತು. ಬಳಿಕ ಬಿಲ್ಡಿಂಗ್ ಕೆಳಗೆ ಇರುವ ಬಂಕರ್‌ಗೆ ಹೋಗಿ ಕುಳಿತಿದ್ದೆವು ಎಂದು ದಾಳಿ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಟೆಲ್ ಅವೀವ್: ಇಸ್ರೇಲ್ (Israel) ಹಾಗೂ ಇರಾನ್ (Iran) ನಡುವೆ ಸಂಘರ್ಷ ತೀವ್ರಗೊಂಡಿದ್ದು, ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ 18 ಮಂದಿ ಕನ್ನಡಿಗರು (Kannadigas) ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ.
ಇಸ್ರೇಲ್ ಹಾಗೂ ಇರಾನ್ ನಡುವೆ ದಾಳಿ- ಪ್ರತಿದಾಳಿ ತೀವ್ರಗೊಂಡ ಬೆನ್ನಲ್ಲೇ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ 61 ಮಂದಿ ಭಾರತೀಯರು ಜಾರ್ಜಿಯಾದಲ್ಲಿ ಸಿಲುಕಿದ್ದಾರೆ. ರಾಜಸ್ಥಾನದ 61 ಮಂದಿಯ ತಂಡ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮಕ್ಕೆ ಜೂನ್ 8ರಂದು ತೆರಳಿದ್ದರು. ಜೂನ್ 13ರಂದು ಶಾರ್ಜಾ ಮೂಲಕ ಭಾರತಕ್ಕೆ ವಾಪಸ್ ಆಗಬೇಕಿತ್ತು. ವಿಮಾನ ಸ್ಥಗಿತಗೊಂಡ ಹಿನ್ನೆಲೆ ಅಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ತುರ್ತಾಗಿ ತಮಗೆ ಸಹಾಯ ಮಾಡುವಂತೆ ಕೋರಿ ಭಾರತ ಸರ್ಕಾರಕ್ಕೆ ಭಾರತೀಯ ತಂಡ ಮನವಿ ಮಾಡಿದೆ. ಭಾರತಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳುವಂತೆ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆ ಹಲ್ಲೆ ಪ್ರಕರಣ – ಕಠಿಣ ಕ್ರಮಕ್ಕೆ ರಾಮಲಿಂಗಾ ರೆಡ್ಡಿ ಪತ್ರ
ಕಮಲ್ ಹಾಸನ್ (Kamal Haasan) ಕನ್ನಡ ಹೇಳಿಕೆ ಕುರಿತು ಬೆಂಗಳೂರಿನ (Bengaluru) ತಮ್ಮ ನಿವಾಸದಲ್ಲಿ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ತಮಿಳು ನಟನನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರಲ್ಲದೇ ನಟ ಶಿವರಾಜ್ ಕುಮಾರ್ ವಿರುದ್ಧವೂ ಗರಂ ಆದರು. ಇದನ್ನೂ ಓದಿ: ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ಸುಧಾರಾಣಿ
ಈ ಘಟನೆ ನಡೀಬಾರದಿತ್ತು, ಈ ಹೇಳಿಕೆ ಕೊಟ್ಟ ಅವ್ನು ದುರಹಂಕಾರಿ, ಅಯೋಗ್ಯ. ಅವ್ನು ಹೇಳಿದ ಹೇಳಿಕೆ ನಮ್ಮ ನಾಡಿಗೆ ಅವಮಾನ ಆಗಿದೆ. ಆ ಘಟನೆಗೆ ಸಾಕ್ಷಿಯಾಗಿದ್ದ ಶಿವರಾಜ್ ಕುಮಾರ್ ಪಲಾಯನವಾದ ಮಾಡಿ ಬಿಟ್ಟರು. ಕಮಲ್ ಹಾಸನ್ ಅವ್ರ ಹೇಳಿಕೆಯನ್ನ ಖಂಡಿಸಬೇಕಿತ್ತು. ನಾನು, ನನ್ನ ಕುಟುಂಬ ನಿಮಗೆ ಧನ್ಯವಾದ ಹೇಳ್ತೀವಿ ಆದ್ರೆ ನಾಡು, ನುಡಿ ವಿಚಾರದಲ್ಲಿ ಹೋರಾಟದ ಪರವಾಗಿ ಇರ್ತೀನಿ ಅಂತ ಹೇಳಬೇಕಿತ್ತು. ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ… ಹಾಗಿದ್ರೆ ಕನ್ನಡ ವಿಚಾರಕ್ಕೆ ಬಂದಾಗ ನೀವೇನು ಮಾಡ್ತಿದ್ರಿ? ನನಗೆ ಅರ್ಥವೇ ಆಗಲಿಲ್ಲ ಅನ್ನೋದು ಬೇಜವಾಬ್ದಾರಿ ತನ ಎಂದರಲ್ಲದೇ ಶಿವಣ್ಣ ರೀತಿಯಲ್ಲಿ ಇನ್ನೂ ಯಾರು ಅವರ (ಕಮಲ್ ಹಾಸನ್) ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಅಂತ ಮಾರ್ಮಿಕವಾಗಿ ನುಡಿದರು.
ನಾಡು ನುಡಿಗೆ ಧಕ್ಕೆ ಬಂದಾಗ ರಾಜ್ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಒಬ್ಬರೇ ಕನ್ನಡ ನಾಡಲ್ಲ. ಕನ್ನಡ ನಾಡಿನಿಂದ ಅವರೆಲ್ಲ ಬಂದಿದ್ದಾರೆ. ಆದ್ರೆ ಅವರ ಪ್ರತಿಕ್ರಿಯೆ ನೋಡಿದಾಗ ಅರಿವಿನ ಕೊರತೆಯಿಂದ ಫಲಾಯನವಾದ ಮಾಡಿದ್ರು ಅನ್ನಿಸುತ್ತೆ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ಕೊನೆಗೂ ಮೌನ ಮುರಿದ ಶಿವಣ್ಣ
ಕಮಲ್ ಹಾಸನ್ ಅಯೋಗ್ಯ:
ಇನ್ನೂ ಕಮಲ್ ಹಾಸನ್ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಅವನೊಬ್ಬ ಅಯೋಗ್ಯ. ಅವ್ನ ಸಿನಿಮಾ ರಿಲೀಸ್ ಮಾಡದೇ ಇದ್ರೆ ನಮ್ಮ ವಿತರಕರಿಗೆ ಲಾಸ್ ಆಗುತ್ತೆ. ನಮ್ಮ ರಾಜ್ಯಕ್ಕೆ ಬರದಂತೆ ಅವ್ನಿಗೆ ಬಹಿಷ್ಕಾರ ಹಾಕ್ಬೇಕು ಅಂತಾ ಒತ್ತಾಯ ಮಾಡಿದರು. ಇದನ್ನೂ ಓದಿ: ‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್
ಈ ವಿಚಾರದಲ್ಲಿ ಸರ್ಕಾರಕ್ಕೆ ಧನ್ಯವಾದ ಹೇಳ್ತೀನಿ.. ಮಂತ್ರಿ ಈ ವಿಚಾರದಲ್ಲಿ ಖಡಕ್ ಆಗಿ ಹೇಳಿದ್ದಾರೆ. ತಮಾಷೆಗೆ ಹೇಳಿದ್ದು ಅಂತ ಹೇಳ್ತಾನೆ ಕಮಲ್ ಹಾಸನ್ ವಿವೇಕ ರಹಿತವ್ಯಕ್ತಿ. ಕಮಲ್ ಹಾಸನ್ ಮಾಡಿದ್ದು ತಪ್ಪು ಅಂತಾ ಹೇಳದೇ ಇದ್ರೆ, ರಾಜಕೀಯ ಗಿಮಿಕ್ಕು, ಚಿತ್ರ ಚೆನ್ನಾಗಿ ಓಡಲಿ ಅಂತ ಕೂಡ ಮಾಡಿರಬಹುದು. ಕಮಲ್ ಹಾಸನ್ ಮಾಡಿದ್ದು ತಪ್ಪು ಅಂತ ಹೇಳದಿದ್ರೆ, ಶಿವಣ್ಣ ಕೂಡ ತಪ್ಪಿತಸ್ಥರಾಗ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
– ಆಗ ಕಮಲ್ ಏನು ಮಾತಾಡ್ತಿದ್ದಾರೆ ಅಂತಾ ಗೊತ್ತಾಗ್ಲಿಲ್ಲ ಎಂದ ಶಿವರಾಜ್‌ಕುಮಾರ್
ಕನ್ನಡ ಭಾಷೆ ಬಗ್ಗೆ ನಟ ಕಮಲ್ ಹಾಸನ್ (Kamal Haasan) ನೀಡಿದ ಹೇಳಿಕೆ ವಿವಾದದ ಬಗ್ಗೆ ಕೊನೆಗೂ ನಟ ಶಿವರಾಜ್‌ಕುಮಾರ್ (Shivarajkumar) ಮೌನ ಮುರಿದಿದ್ದಾರೆ.
ವಿವಾದ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಶಿವಣ್ಣ ಅವರು, ಕಮಲ್ ಹಾಸನ್ ಹೇಳಿದ ಮಾತನ್ನ ನಾನೇನು ಸಮರ್ಥನೆ ಮಾಡಿಕೊಳ್ಳಲ್ಲ. ಭಾಷೆ ಮಾತಾಡ್ತಿದ್ದಾರೆ ಅಂದಾಗ ನಾನು ಕೈ ತಟ್ಟಿದ್ದು ನಿಜ. ಆ ಸಂದರ್ಭದಲ್ಲಿ ಏನ್ ಮಾತಾಡ್ತಿದ್ದಾರೆ ಅಂತಾ ಗೊತ್ತಾಗ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಕ್ಷಮೆ ಕೇಳೋವರೆಗೂ ಬಿಡೋದಿಲ್ಲ: ಶಿವರಾಜ್ ತಂಗಡಗಿ
ಕನ್ನಡ ಅಭಿಮಾನದ ಬಗ್ಗೆ ಎಲ್ಲರೂ ಮಾತಾಡ್ತಿದ್ದಾರೆ. ಕನ್ನಡ ಅಭಿಮಾನ ಏನು ಅನ್ನೋದು ನಮಗೂ ಗೊತ್ತಿದೆ. ನಾನು ಕೂಡ ಕನ್ನಡ ಅಭಿಮಾನೀನೆ. ನಾನು ಕೂಡ ಕನ್ನಡ ಅಭಿಮಾನೀನೆ. ಅಣ್ಣಾವ್ರ ಕನ್ನಡ ಅಭಿಮಾನ ನಿಮಗೆಲ್ಲರಿಗೂ ಗೊತ್ತೇ ಇದೆ ಎಂದು ಶಿವಣ್ಣ ತಿಳಿಸಿದ್ದಾರೆ.
ಸ್ಟೇಜ್‌ನಲ್ಲಿ ನೀವು ಯಾಕೆ ಪ್ರಶ್ನೆ ಮಾಡ್ಲಿಲ್ಲ ಅಂದಾಗ, ಅವ್ರು ಮಾತನಾಡಿದ್ದು ನನಗೆ ಸ್ಪಷ್ಟವಾಗಿ ಕೇಳಲಿಲ್ಲ. ನೀವು ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಬೇಕು. ಕಮಲ್ ಹಾಸನ್ ಮಾತಾಡಿದ್ದನ್ನ ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಿ. ನಾನು ಎರಡನೇ ಬಾರಿ ಕ್ಲಿಪ್ಪಿಂಗ್ ಕೇಳಿದಾಗಲೇ ಗೊತ್ತಾಗಿದ್ದು ಎಂದಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಕನ್ನಡ ಕಾಂಟ್ರವರ್ಸಿ ಬಗ್ಗೆ ಕೇಳ್ತಿದ್ದಂತೆ ಕೈಮುಗಿದ ಶಿವಣ್ಣ!
ಆ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಮಾತಾಡಿದ್ದು, ನನಗೆ ಗೊತ್ತಾಗಿಲ್ಲ. ಹೀಗಾಗಿ ಚಪ್ಪಾಳೆ ತಟ್ಟಿದೆ. ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ. ಕೊನೆಗೂ ಕನ್ನಡ ಅವಮಾನದ ಬಗ್ಗೆ ಶಿವಣ್ಣ ಮೌನ ಮುರಿದಿದ್ದಾರೆ.
– ಶಿವರಾಜ್‌ಕುಮಾರ್ ಸಮರ್ಥನೆ ಬಿಟ್ಟು ಕಮಲ್‌ಗೆ ಬುದ್ದಿ ಹೇಳಲಿ: ಕರವೇ ಅಧ್ಯಕ್ಷ
ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಚಿತ್ರ ಬಿಡುಗಡೆ ಮಾಡಿದರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ (Narayana Gowda) ಎಚ್ಚರಿಕೆ ನೀಡಿದರು.
ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣಗೌಡ, ಆಗಾಗ ಕನ್ನಡಿಗರ ವಿಚಾರದಲ್ಲಿ ಮಾತು ಜಾಸ್ತಿ ಆಗಿದೆ. ಹೊರಗಿಂದ ಬಂದವರು ಕರ್ನಾಟಕ, ಕನ್ನಡದವರ ವಿರುದ್ಧ ಮಾತು ಆಡುತ್ತಿದ್ದಾರೆ. ತಮಿಳುನಾಡು ಆಗಾಗ ಕಾವೇರಿ ವಿಚಾರದಲ್ಲಿ ಸಂಘರ್ಷ ನಡೆಸುತ್ತಿತ್ತು. ಸಂಘರ್ಷಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ ದ್ರಾವಿಡ ರಾಜ್ಯದ ಪ್ರಮುಖ ಸಾಹಿತ್ಯ ಜೊತೆ ಮಾತನಾಡಿದ್ದೆ. ಆದರೆ ಇದೇ ಸಂದರ್ಭದಲ್ಲಿ ಕಮಲ್ ಹಾಸನ್ ಈ ರೀತಿ ಹೇಳಿದ್ದಾರೆ. ನಟನ ಬಗ್ಗೆ ಅಭಿಮಾನ ಇತ್ತು. ಆದರೆ ಮೊನ್ನೆ ಆಡಿದ ಮಾತು ಕನ್ನಡಿಗರನ್ನ ಕೆರಳಿಸುವ, ಕನ್ನಡಿಗರನ್ನ ಒಗ್ಗೂಡಿಸುವ, ಪ್ರತಿಭಟಿಸುವ ಸಂದರ್ಭಕ್ಕೆ ಬಂದಿದ್ದಾರೆ. ಯಾವ ಆಧಾರದಲ್ಲಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಏಕಾಏಕಿ ತಮಿಳುಗರನ್ನ ಓಲೈಸುವ ನಿಟ್ಟಿನಲ್ಲಿ ದುರಹಂಕಾರ, ದುರಾಭಿಮಾನದ ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಪ್ಪು ಮಾಡಿದ್ಮೇಲೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿದೆ- ಕಮಲ್ ಹಾಸನ್ ಹೇಳಿಕೆಗೆ ರಚಿತಾ ರಾಮ್ ಕಿಡಿ
ತಮಿಳಿನ ಬಗ್ಗೆ ಅವರು ಏನು ಬೇಕಾದರೂ ಹೇಳಲಿ. ಇನ್ನೊಂದು ಭಾಷೆ ಬಗ್ಗೆ ಮಾತನಾಡುವಾಗ ಕನಿಷ್ಠ ಅರಿವು ಇರಬೇಕಿತ್ತು. ಅದೇ ಸಂದರ್ಭದಲ್ಲಿ ಕನ್ನಡಿಗರನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದವರ ಸುಪುತ್ರ ಶಿವರಾಜ್ ಕುಮಾರ್ ಇದ್ದರು. ಅವರು ಅಲ್ಲಿಯೇ ಹೇಳಬಹುದಾಗಿತ್ತು. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ ಅಂತ ಹೇಳಬಹುದಾಗಿತ್ತು. ವಿಶ್ವದ ಲಿಪಿ ರಾಣಿ ಅಂತ ಕರೆದಿರೋದು ಕನ್ನಡ ಅಂತ ಹೇಳಬಹುದಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಮಾಹಿತಿ ಇಲ್ಲದೆ ಇದ್ದಿರಬಹುದು. ಆದರೆ ಇವತ್ತಿಗೂ ಶಿವರಾಜ್ ಕುಮಾರ್ ಕಮಲ್ ಹಾಸನ್‌ರನ್ನ ವಹಿಸಿಕೊಳ್ಳುತ್ತಿರೋದನ್ನ ಸಹಿಕೊಳ್ಳೋಕೆ ಆಗಲ್ಲ. ಶಿವರಾಜ್ ಕುಮಾರ್ ಆಗಿದ್ದರೆ ದೊಡ್ಡ ವಿಷಯ ಯಾವುದು? ಏಳೂವರೆ ಕೋಟಿ ಕನ್ನಡಿಗರ ಭಾವನೆ ದೊಡ್ಡದು ಅನ್ನಿಸಲಿಲ್ಲವಾ? ಅಥವಾ ಇದನ್ನ ನೇರವಾಗಿ ಹೇಳುವ ಧೈರ್ಯ ಇಲ್ಲವಾ ಎಂದು ಶಿವರಾಜ್‌ಕುಮಾರ್ ನಡೆಗೂ ಅಸಮಾಧಾನ ವ್ಯಕ್ತಪಡಿಸಿದರು.
ಶಿವರಾಜ್ ಕುಮಾರ್ ಸಮರ್ಥನೆ ಬಿಟ್ಟು, ಕಮಲ್ ಹಾಸನ್‌ಗೆ ಹೇಳಿ. ಕ್ಷಮೆಯಾಚಿಸುವಂತೆ ಹೇಳಿ. ಅದನ್ನ ಬಿಟ್ಟು ಕನ್ನಡಿಗರಿಗೆ ಹೇಳೋದು ಸರಿಯಲ್ಲ. ದೊಡ್ಮನೆಗೆ ಇದು ಧಕ್ಕೆಯಾಗುತ್ತೆ. ನೀವೇ ಬುದ್ದಿ ಹೇಳಿ ಕ್ಷಮೆ ಕೇಳಿಸಿ. ಇದನ್ನ ಶಿವರಾಜ್ ಕುಮಾರ್ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕ್ಷಮೆ ಕೇಳಲ್ಲ ಅಂದಾಗ ಬಿಸಿ ಮುಟ್ಟಿಸಬೇಕು- ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ ಆಕ್ರೋಶ
ಯದುವೀರ್ ಒಡೆಯರ್ ರಾಜ್ಯವಿಲ್ಲದ ರಾಜ. ಇವರು ಹೇಳುತ್ತಾರೆ. ಇವರಿಗೆ ಕರ್ನಾಟಕದ ಭಾಷ ಇತಿಹಾಸ ಗೊತ್ತಿಲ್ಲ. ಕನ್ನಡ ಸಂಸ್ಕೃತದಿAದಲೂ ಬಂದಿಲ್ಲ, ತಮಿಳಿನಿಂದಲೂ ಬಂದಿಲ್ಲ ಅನ್ನೋದನ್ನ ಇತಿಹಾಸ ಸಾರಿ ಸಾರಿ ಹೇಳುತ್ತದೆ. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ. ಕೆಲವು ಪದಗಳು ಹೊರ ಭಾಷೆಯಿಂದ ಬಂದಿರಬಹುದಷ್ಟೇ. ಕನ್ನಡದ ಮೂಲ ಯಾವುದೇ ಭಾಷೆ ಅಲ್ಲ ಅನ್ನೋದನ್ನ ಯದುವೀರ್ ಒಡೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ಕೊಟ್ಟರು.
ರಮ್ಯ ಹೇಳಿಕೆ ಸರಿಯಲ್ಲ. ತಮಿಳಿನ ಯಾವುದೇ ಸಾಮಾನ್ಯ ಕಲಾವಿದರನ್ನ ಮಾತನಾಡಿಸಿ. ಆದರೆ ನಮ್ಮಲ್ಲಿ ಎಲ್ಲರೂ ತಜ್ಞರು ಆಗುತ್ತಾರೆ. ರಮ್ಯ ಉಪದೇಶ ಮಾಡಬೇಡಿ, ಇಲ್ಲಿ ಉಪದೇಶ ತೆಗೆದುಕೊಳ್ಳೋಕೆ ಯಾರೂ ಇಲ್ಲ. ನಮ್ಮ ನೆಲದಲ್ಲಿ ಕನ್ನಡವೇ ದೊಡ್ಡದು. ಮೂರ್ಖತನದ ವಿಚಾರವನ್ನ ಸಮರ್ಥನೆ ಮಾಡಿಕೊಳ್ಳುವಾಗ ಉಪಯೋಗಿಸಬೇಡಿ. ಬುದ್ದಿ ಹೇಳೋ ಆಗಿದ್ದರೆ ಕಮಲ್ ಹಾಸನ್‌ಗೆ ಹೇಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಮಲ್ ಹಾಸನ್ ಚಾಲ್ತಿಯಲ್ಲಿಲ್ಲದ ನಾಣ್ಯ, ವ್ಯಾಲ್ಯೂ ಇಲ್ಲ: ಶೋಭಾ ಕರಂದ್ಲಾಜೆ ವ್ಯಂಗ್ಯ
ಕಮಲ್ ಹಾಸನ್ ಸಿನಿಮಾ ಬಿಡುಗಡೆಯಾಗಬೇಕಾದ್ರೆ ಕ್ಷಮೆಯಾಚಿಸಲೇಬೇಕು. ಇಲ್ಲದಿದ್ದರೆ ಚಿತ್ರ ಬಿಡುಗಡೆಗೆ ಬಿಡಲ್ಲ. ನಮ್ಮ ರಾಜ್ಯದ ನಟರು ತಮಿಳು ಕನ್ನಡಿದಿಂದ ಹುಟ್ಟಿದೆ ಅಂದಿದ್ದರೆ ತಮಿಳುನಾಡು ಹತ್ತಿ ಉರಿಯುತ್ತಿತ್ತು. ನಾವು ಎಲ್ಲವನ್ನ ಸಹಿಸಿಕೊಳ್ಳುವವರು. ಹಾಗಾಗಿ ತಾಳ್ಮೆಯಿಂದ ಇದ್ದೇವೆ. ಶಿವರಾಜ್ ಕುಮಾರ್ ಈಗಲೂ ಕಮಲ್ ಹಾಸನ್ ಬುದ್ದಿ ಹೇಳಿ. ಕನ್ನಡಿಗರಿಗೆ ಹೇಳೋದನ್ನ ಬಿಟ್ಟು ಬಿಡಿ. ಎಲ್ಲಾ ಕನ್ನಡದ ನಟ-ನಟಿಯರು ಕಮಲ್ ಹಾಸನ್ ಹೇಳಿಕೆಯನ್ನ ಖಂಡಿಸಿಬೇಕು. ಇಲ್ಲದಿದ್ದರೆ ನಿಮ್ಮನ್ನ ರಣಹೇಡಿಗಳು ಅಂತ ತೀರ್ಮಾನ ಮಾಡಿ, ಕನ್ನಡಿಗರು ಪಾಠ ಕಲಿಸುತ್ತಾರೆ. ಶಿವರಾಜ್ ಕುಮಾರ್‌ರನ್ನ ಭೇಟಿ ಮಾಡುತ್ತೇವೆ. ಒಂದಷ್ಟು ಕನ್ನಡದ ಇತಿಹಾಸದ ಪುಸ್ತಕಗಳನ್ನ ತೆಗೆದುಕೊಂಡು ಹೋಗಿ ಇತಿಹಾಸದ ಬಗ್ಗೆ ಹೇಳುತ್ತೇವೆ ಎಂದು ತಿರುಗೇಟು ನೀಡಿದರು.