Tag: Kannadigaru

  • ಕನ್ನಡಿಗರ ಕ್ಷಮೆ ಕೇಳುವಂತೆ ಕಿರಣ್ ಮಜುಂದಾರ್ ಭಾವಚಿತ್ರಕ್ಕೆ ಪೊರಕೆ ಏಟು!

    ಕನ್ನಡಿಗರ ಕ್ಷಮೆ ಕೇಳುವಂತೆ ಕಿರಣ್ ಮಜುಂದಾರ್ ಭಾವಚಿತ್ರಕ್ಕೆ ಪೊರಕೆ ಏಟು!

    ರಾಮನಗರ: ಕನ್ನಡ ಹಾಗೂ ಕನ್ನಡ ಪರ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹೇಳಿಕೆ ಖಂಡಿಸಿ ಚನ್ನಪಟ್ಟಣದಲ್ಲಿ ಇಂದು ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.

    ನಗರದ ಚರ್ಚ್ ಸ್ಟ್ರೀಟ್‍ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕಿರಣ್ ಮಜುಂದಾರ್ ಷಾ ಭಾವಚಿತ್ರಕ್ಕೆ ಪೊರಕೆಯಿಂದ ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಕಿರಣ್ ಮಜುಂದಾರ್ ವಿರುದ್ಧ ಧಿಕ್ಕಾರ ಕೂಗಿದರು. ಕನ್ನಡಿಗರ ವಿರುದ್ಧ ಮಾತನಾಡಿರುವ ಕಿರಣ್ ಮಜುಂದಾರ್ ಷಾ ಕೂಡಲೇ ತಮ್ಮ ಹೇಳಿಕೆಯನ್ನ ವಾಪಸ್ ಪಡೆಯಬೇಕು. ಅಲ್ಲದೇ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಕಿರಣ್ ಶಾ ಹೇಳಿಕೆ ಏನು?
    ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ-ಪ್ರವಚನ ನಡೆಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಅದರ ಅಧ್ಯಕ್ಷರು, ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳು ಕಿಡಿಗೇಡಿಗಳು ಎಂದು ಟೀಕೆ ಮಾಡಿದ್ದರು.

  • ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್

    ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್

    ಬೆಂಗಳೂರು: ಮಾನಸ ಸರೋವರಕ್ಕೆ ತೆರಳಿ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರ ಪೈಕಿ 26 ಮಂದಿಯನ್ನು ರಕ್ಷಿಸುವಲ್ಲಿ ಕರ್ನಾಟಕ ಭವನ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಮೈಸೂರಿನ ತಂಡದಲ್ಲಿದ್ದ ಶ್ರೀಕಾಂತ್ ಶರ್ಮಾ ಜೊತೆಗೆ ಬೆಂಗಳೂರಿನ ಬಸವನಗುಡಿಯ ನಿವಾಸಿಗಳಾದ ಸರಸ್ವತಿ ರೆಡ್ಡಿ, ಕೃಷ್ಣ ವೇಣಿ, ಪದ್ಮಾ, ಶೋಭಾ ದೇವಿ, ಪ್ರಮೀಳಾ ಸೇರಿದಂತೆ 26 ಮಂದಿಯ ತಂಡ ಮೈಸೂರಿಗೆ ಬಂದು ಸೇರಿದೆ. ಚನ್ನಪಟ್ಟಣದ ಮಲ್ಲೇಶ್ ಅವರು ಕೂಡಾ ಮರಳಿದ್ದು, ಕಾಲು ಮುರಿದಿದ್ದರಿಂದ ಚಿಕಿತ್ಸೆ ಪಡಿಯುತ್ತಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಹಂಚಿಕೊಂಡ ಮಲ್ಲೇಶ್, ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.

    ಮತ್ತೊಂದು ತಂಡ ಇವತ್ತು ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ. ಉಳಿದವರಲ್ಲಿ ಕೆಲವರು ಸಿಮೀಕೋಟ್‍ನಿಂದ ನೇಪಾಳದ ಗಂಜ್‍ಗೆ ಬಂದಿದ್ದು, ಕಠ್ಮಂಡು ಮೂಲಕ ನಾಳೆ ಬೆಂಗಳೂರಿಗೆ ಬರಲಿದ್ದಾರೆ. ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳಾದ ವೆಂಕಟೇಶ್, ಈಶ್ವರ್ ಕಟ್ಟಿಮನಿ ಬಳಿ ಯಾತ್ರಿಗಳು ಕಣ್ಣೀರಿಟ್ಟು, ತಾವು ಅನುಭವಿಸಿದ ನರಕಯಾತನೆಯನ್ನು ಹೇಳಿಕೊಂಡಿದ್ದಾರೆ.