Tag: kannadathi serial

  • ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಟ್ರು ರಂಜನಿ ರಾಘವನ್

    ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಟ್ರು ರಂಜನಿ ರಾಘವನ್

    ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್ (Ranjani Raghavan) ನಾಯಕಿಯಾಗಿ ಕಿರುತೆರೆ, ಹಿರಿತೆರೆಯಲ್ಲಿ ಮೋಡಿ ಮಾಡಿದ್ದಾರೆ. ಈಗ ನಿರ್ದೇಶನದ ಕ್ಯಾಪ್‌ ಧರಿಸಲು ಸಜ್ಜಾಗಿದ್ದಾರೆ. ಅವರ ನಿರ್ದೇಶನದ (Direction) ಮೊದಲ ಸಿನಿಮಾ ಕೆಲಸದ  ಬಗ್ಗೆ ಅಭಿಮಾನಿಗಳಿಗೆ ಅಪ್‌ಡೇಟ್‌ ನೀಡಿದ್ದಾರೆ. ಇದನ್ನೂ ಓದಿ: ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಫ್ಯಾನ್ಸ್‌ಗೆ ಪತ್ರ ಬರೆದ ನಜ್ರಿಯಾ

    ರಂಜನಿ ಇನ್ಸ್ಟಾಗ್ರಾಂ ಲೈವ್‌ಗೆ ಬಂದು ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೇ ಏ.18ರಂದು ಸಿನಿಮಾ ಪೋಸ್ಟರ್ ಬಿಡುಗಡೆ ಮಾಡೋದಾಗಿ ತಿಳಿಸಿದ್ದಾರೆ. ಅದರಲ್ಲಿ ಚಿತ್ರದ ಟೈಟಲ್, ತಾರಾಗಣ, ತಂತ್ರಜ್ಞರು ಸೇರಿದಂತೆ ಯಾರೆಲ್ಲಾ ಚಿತ್ರತಂಡ ಸೇರಿಕೊಂಡಿದ್ದಾರೆ ಎಂಬುದನ್ನು ಏ.18ರಂದು ಅನಾವರಣ ಮಾಡೋದಾಗಿ ಹೇಳಿದ್ದಾರೆ. ಅವರದ್ದೇ ನಿರ್ದೇಶನದ ಸಿನಿಮಾದಲ್ಲಿ ರಂಜನಿ ನಟಿಸುತ್ತಾರಾ ಎಂಬುದಕ್ಕೆ ಉತ್ತರ ಸಿಗಲಿದೆ. ಇದನ್ನೂ ಓದಿ: ಪೀರಿಯಡ್ಸ್ ಬಗ್ಗೆ ಸಮಂತಾ ಓಪನ್ ಟಾಕ್

    ಇಂದಿನ ಕಾಲಮಾನಕ್ಕೆ ಸರಿಹೊಂದುವ ಕೌಟುಂಬಿಕ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜನೆ ಮಾಡುತ್ತಿರೋದು ವಿಶೇಷವಾಗಿದೆ. ಕೆಲ ತಿಂಗಳುಗಳ ಹಿಂದೆ ಇಳಯರಾಜರನ್ನು (Ilayaraja) ರಂಜನಿ ಭೇಟಿ ಮಾಡಿದ್ದಾರೆ. ಈ ವೇಳೆ, ಕಥೆ ಕೇಳಿ ಇಂಪ್ರೆಸ್ ಆಗಿ ಸಂಗೀತ ಸಂಯೋಜನೆ ಮಾಡೋದಾಗಿ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಅಂದಹಾಗೆ, ಸಿನಿಮಾಗೆ ನಿರ್ದೇಶನ ಮಾಡೋದು ರಂಜನಿ ಕನಸು. ಅದಕ್ಕಾಗಿ ಅವರು ಒಂದೂವರೆ ವರ್ಷ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಹಾಗಾದ್ರೆ ನಟಿಯಾಗಿ ಗೆದ್ದ ‘ಕನ್ನಡತಿ’ ರಂಜನಿ ಈಗ ನಿರ್ದೇಶಕಿಯಾಗಿಯೂ ಗೆಲ್ಲುತ್ತಾರಾ ಎಂದು ಕಾದುನೋಡಬೇಕಿದೆ.

  • ಫ್ಯಾನ್ಸ್‌ಗೆ ಗುಡ್ ನ್ಯೂಸ್- ಮತ್ತೆ ಕಿರುತೆರೆಗೆ ಕಿರಣ್ ರಾಜ್

    ಫ್ಯಾನ್ಸ್‌ಗೆ ಗುಡ್ ನ್ಯೂಸ್- ಮತ್ತೆ ಕಿರುತೆರೆಗೆ ಕಿರಣ್ ರಾಜ್

    ಕಿನ್ನರಿ, ಕನ್ನಡತಿ (Kannadathi) ಸೀರಿಯಲ್‌ಗಳ ಮೂಲಕ ಗಮನ ಸೆಳೆದಿದ್ದ ಕಿರಣ್ ರಾಜ್ (Kiran Raj) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಕರ್ಣ’ನಾಗಿ ಮತ್ತೆ ಕಿರುತೆರೆಯಲ್ಲಿ ರಂಜಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ 2 ದಿನದಲ್ಲಿ 10 ಲಕ್ಷ ಹಣ!

    ಕಿರಣ್ ರಾಜ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಕಿರುತೆರೆಯಲ್ಲಿ ಅವರಿಗೆ ಹೆಚ್ಚಿನ ಜನಪ್ರಿಯತೆ ಇದೆ. ‘ಕನ್ನಡತಿ’ ಸೀರಿಯಲ್ ಮುಗಿದ್ಮೇಲೆ ಟಿವಿ ಪರದೆಯಿಂದ ದೂರ ಸರಿದಿದ್ದರು. ಈಗ ಮತ್ತೆ ಕರ್ಣನ ಕಥೆ ಹೇಳೋಕೆ ಹೊರಟಿದ್ದಾರೆ. ಈ ಕುರಿತ ಪ್ರೋಮೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಕರ್ಣ ಕಥೆಯ ಹೀರೋ ಕಿರಣ್ ರಾಜ್ ಹೆಸರು. ಸೀರಿಯಲ್‌ನಲ್ಲಿ ದೊಡ್ಡ ಸ್ತ್ರೀರೋಗ ತಜ್ಞನಾಗಿ ಕಾಣಿಸಿಕೊಂಡಿದ್ದಾರೆ. ಕರ್ಣ ದೊಡ್ಡ ವೈದ್ಯನಾಗಿ ಗುರುತಿಸಿಕೊಂಡಿದ್ದರೂ ಕೂಡ ಆತ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರನಾಗಿ ಕಾಣಿಸಿಕೊಂಡಿದ್ದಾರೆ. ತನ್ನವರ ಮಧ್ಯೆಯೇ ಅನಾಥವಾಗಿರೋ ಮನೆ ಮಗನ ಕಥೆಯಾಗಿದೆ.

    ಅಂದಹಾಗೆ, ಶೇರ್, ರಾನಿ, ಬಡ್ಡೀಸ್, ಬಹದ್ದೂರ್ ಗಂಡು ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಿರಣ್ ರಾಜ್ ನಟಿಸಿದ್ದಾರೆ. ಸಿನಿಮಾಗಿಂತ ಸೀರಿಯಲ್‌ನಲ್ಲಿ ಅವರಿಗೆ ಉತ್ತಮ ಬ್ರೇಕ್ ಸಿಕ್ಕಿದೆ.

  • ಕಿರಣ್ ರಾಜ್‌ ಸ್ಥಿತಿ ಈಗ ಹೇಗಿದೆ?- ಅವಘಡದ ಬಗ್ಗೆ ವಿವರಿಸಿದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್

    ಕಿರಣ್ ರಾಜ್‌ ಸ್ಥಿತಿ ಈಗ ಹೇಗಿದೆ?- ಅವಘಡದ ಬಗ್ಗೆ ವಿವರಿಸಿದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್

    ನಪ್ರಿಯ ‘ಕನ್ನಡತಿ’ ಸೀರಿಯಲ್ ನಟ ಕಿರಣ್ ರಾಜ್ (Kiran Raj) ಪ್ರಯಾಣಿಸುತ್ತಿದ್ದ ಕಾರು ಕೆಂಗೇರಿ ಬಳಿ ಸೆ.10ರಂದು ಅಪಘಾತವಾಗಿದೆ. ಈ ವೇಳೆ, ಕಾರು ಚಲಾಯಿಸುತ್ತಿದ್ದ ‘ರಾನಿ’ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ (Girish) ಆಕ್ಸಿಡೆಂಟ್ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಕನ್ನಡ 11ರ ಪ್ರೋಮೋ ಔಟ್- ಹೊಸ ಅಧ್ಯಾಯ ಬರೆಯಲು ಸಜ್ಜಾದ ದೊಡ್ಮನೆ!

    ನಿನ್ನೆ (ಸೆ.10) ವೃದ್ಧಾಶ್ರಮಕ್ಕೆ ಹೋಗಿ ಮೈಸೂರಿಗೆ ಹೋಗಲು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ರಾತ್ರಿ 9:45ಕ್ಕೆ ಘಟನೆ ಸಂಭವಿಸಿದೆ. ಮುದ್ದರಾಯನ ಪಾಳ್ಯ ಬಳಿ ಬರುವ ವೇಳೆ ರಸ್ತೆಗೆ ಸಡನ್ ಸಗಿ ಮುಂಗುಸಿ ಬಂತು ಅದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ ಎಂದಿದ್ದಾರೆ.

    ಇದರ ಪರಿಣಾಮ, ನಾನು ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿದ್ದೆ ಹಾಗಾಗಿ ನನಗೆ ಸೊಂಟಕ್ಕೆ ಸ್ವಲ್ಪ ಸಮಸ್ಯೆ ಆಗಿದೆ. ಕಿರಣ್ ಹಿಂದೆ ಕೂತಿದ್ದರಿಂದ ಎದೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ರೀತಿ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಮಂತ್ರಾಲಯಕ್ಕೆ ಭೇಟಿ ನೀಡಿದ ‘ಅಮೃತಧಾರೆ’ ನಟಿ ಸಾರಾ ಅಣ್ಣಯ್ಯ

    ಮಂತ್ರಾಲಯಕ್ಕೆ ಭೇಟಿ ನೀಡಿದ ‘ಅಮೃತಧಾರೆ’ ನಟಿ ಸಾರಾ ಅಣ್ಣಯ್ಯ

    ಕಿರುತೆರೆಯ ಜನಪ್ರಿಯ ‘ಕನ್ನಡತಿ’ (Kannadati) ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಸಾರಾ ಅಣ್ಣಯ್ಯ (Sara Annaiah) ಅವರು ಮಂತ್ರಾಲಯಕ್ಕೆ (Mantralaya)  ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ರಾಯರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ:ಮೈಸೂರಿಗೆ ಬಂದಿಳಿದ ನಟ ಉಸ್ತಾದ್ ರಾಮ್ ಪೋತಿನೇನಿ

    ‘ಕನ್ನಡತಿ’ ಸೀರಿಯಲ್‌ನ ವರುಧಿನಿ ಆಗಿ ಸೈ ಎನಿಸಿಕೊಂಡಿದ್ದ ನಟಿ ಸಾರಾ ಅವರು ಇತ್ತೀಚಿಗೆ ‘ನಮ್ಮ ಲಚ್ಚಿ’ (Namma Lacchi) ಎಂಬ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ನಟಿಸುತ್ತಿದ್ದರು. ಆದರೆ ಸಡನ್ ಆಗಿ ಈ ಸೀರಿಯಲ್‌ನಿಂದ ಹೊರಬಂದರು. ಈ ಬೆನ್ನಲ್ಲೇ ಹೊಸ ಧಾರಾವಾಹಿ ‘ಅಮೃತಧಾರೆ’ಯ (Amruthadaare) ಮಹಿಮ ಪಾತ್ರಕ್ಕೆ ಸಾರಾ ಜೀವ ತುಂಬುತ್ತಿದ್ದಾರೆ.

    ಸದ್ಯ ವೆಸ್ಟರ್ನ್ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೂರ್ಗ್ ಬ್ಯೂಟಿ ಸಾರಾ ಅಣ್ಣಯ್ಯ ಅವರು ಇದೀಗ ಟ್ರೆಡಿಷನಲ್ ಆಗಿ ಸೀರೆಯುಟ್ಟು ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಸದಾ ತುಂಡು ಬಟ್ಟೆಗಳನ್ನ ತೊಡುತ್ತಿದ್ದ ನಟಿ ಸಾರಾ ಈಗೀನ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಹೀಗೆ ಟ್ರೆಡಿಷನಲ್ ಬಟ್ಟೆಗಳನ್ನ ಧರಿಸಿ ಎಷ್ಟು ಚೆಂದ ಕಾಣ್ತೀರಾ ಅಂತಾ ಮನವಿ ಮಾಡಿದ್ದಾರೆ.

     

  • `ಬಡ್ಡೀಸ್’ ಪ್ರಚಾರದ ವೇಳೆ ಅಪಘಾತ: ಕಿರಣ್ ರಾಜ್ ಜಸ್ಟ್ ಮಿಸ್

    `ಬಡ್ಡೀಸ್’ ಪ್ರಚಾರದ ವೇಳೆ ಅಪಘಾತ: ಕಿರಣ್ ರಾಜ್ ಜಸ್ಟ್ ಮಿಸ್

    ಸ್ಯಾಂಡಲ್‌ವುಡ್ ನಿರೀಕ್ಷಿತ ಸಿನಿಮಾ `ಬಡ್ಡೀಸ್’ ರಿಲೀಸ್‌ಗೆ ರೆಡಿಯಿದೆ. ಈ ಬೆನ್ನಲ್ಲೇ `ಬಡ್ಡೀಸ್’ ಚಿತ್ರ ಪ್ರಚಾರದ ವೇಳೆ ರ್ಧುಘಟನೆಯೊಂದು ಸಂಭವಿಸಿದೆ. ʻಬಡ್ಡೀಸ್’ ಸಿನಿಮಾ ಪ್ರಚಾರದ ವಾಹನ ಜಖಂಯಾಗಿದೆ. ಅಪಾಯದಿಂದ ಕಿರಣ್ ರಾಜ್ ಮತ್ತು ತಂಡ ಸೇಫ್ ಆಗಿದ್ದಾರೆ.

    ಕಿರುತೆರೆಯ `ಕನ್ನಡತಿ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟ ಕಿರಣ್ ರಾಜ್ ಅವರು ಜೂನ್‌ 24ಕ್ಕೆ ರಿಲೀಸ್‌ ಆಗಲಿರುವ ‘ಬಡ್ಡೀಸ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಬೆಳಗಾವಿಯ ಕಾಲೇಜ್‌ವೊಂದರಲ್ಲಿ ಭೇಟಿ ನೀಡುವ ವೇಳೆ ಪ್ರಚಾರಕ್ಕಾಗಿ ರೆಡಿ ಮಾಡಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದು, ವಾಹನ ಜಖಂ ಆಗಿದೆ. ಸಿನಿಮಾ ಪ್ರಚಾರಕ್ಕೆ ಹೋಗುವಾಗ ಸಿನಿಮಾದ ಪ್ರಚಾರ ವಾಹನ ಜಖಂ `ಬಡ್ಡೀಸ್’ ಸಿನಿಮಾ ತಂಡದ ಯಾರಿಗೂ ಏನೂ ಆಗಿಲ್ಲ ಎಂದು ಕಿರಣ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

     

    View this post on Instagram

     

    A post shared by Kiran Raj (@itskiranraj)

    ಕಿರಣ್ ರಾಜ್ ಅವರು ಪ್ರಚಾರಕ್ಕೆಂದೇ ಸಿದ್ಧಗೊಳಿಸಿರುವ ವಾಹನದಲ್ಲಿ ಸುಮಾರು ಕಾಲ ಟ್ರಾವೆಲ್ ಮಾಡಿದ್ದರು. ಬೆಳಗಾವಿಯಲ್ಲಿ ಒಂದು ಕಾಲೇಜ್‌ಗೆ ಭೇಟಿ ನೀಡಿದ ನಂತರ ಇನ್ನೊಂದು ಕಾಲೇಜಿಗೆ ಭೇಟಿ ಕೊಡಬೇಕಿತ್ತು. ಹೀಗಾಗಿ ಆ ಪ್ರಚಾರದ ವಾಹನ ಮೊದಲಿಗೆ ಹೋಯಿತು. ಆಗ ಕಿರಣ್ ರಾಜ್ ಅವರು ಪ್ರಚಾರದ ವಾಹನದಿಂದ ಇಳಿದು, ಅವರ ಕಾರ್‌ನಲ್ಲಿ ಬರುತ್ತಿದ್ದರು. ಇದನ್ನೂ ಓದಿ:ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?

    ಬಳಿಕ ಪ್ರಚಾರದ ವಾಹನದವರು ಟೀ ಕುಡಿಯುವ ಸಲುವಾಗಿ ವಾಹನವನ್ನು ನಿಲ್ಲಿಸಿ ಅದರಿಂದ ಇಳಿದಿದ್ದಾರೆ. ಆ ವೇಳೆ ಆ ವಾಹನದ ಮೇಲೆ ಕಂಬ ಬಿದ್ದಿದೆ. ವಾಹನದ ಮುಂಭಾಗ ಫುಲ್ ಜಖಂ ಆಗಿದೆ. ಕಂಬ ಬೀಳುವ ವೇಳೆ ವಾಹನದ ಒಳಗಡೆ ಯಾರೂ ಇರಲಿಲ್ಲ. ಹೀಗಾಗಿ ಯಾವ ಅಪಾಯವೂ ಆಗಿಲ್ಲ. ಆ ವಾಹನಕ್ಕೆ ಅಪಾಯ ಆಗುವ ಅರ್ಧ ಗಂಟೆ ಮುಂಚೆ ನಾನು ಅದರಿಂದ ಇಳಿದಿದ್ದೆ. ಯಾರಿಗೂ ಯಾವ ಹಾನಿಯೂ ಆಗಿಲ್ಲ ಇದೀಗ ಚಿತ್ರತಂಡ ಬೆಂಗಳೂರಿಗೆ ಹಿಂದಿರುಗಿದ್ದಾರೆ ಎಂದು ನಟ ಕಿರಣ್ ರಾಜ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    Live Tv