Tag: Kannada writer

  • ಮೈಸೂರಿನಲ್ಲೇ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಘೋಷಣೆ

    ಮೈಸೂರಿನಲ್ಲೇ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಘೋಷಣೆ

    – ಭೈರಪ್ಪ ಅವ್ರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತು; ಸಿದ್ದರಾಮಯ್ಯ ಅಭಿಪ್ರಾಯ

    ಬೆಂಗಳೂರು: ಅಕ್ಷರ ಮಾಂತ್ರಿಕ ಎಸ್.ಎಲ್ ಭೈರಪ್ಪ (SL Bhyrappa) ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.

    ರವೀಂದ್ರ ಕಲಾಮಂದಿರದಲ್ಲಿಂದು ಎಸ್.ಎಸ್ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಜೆಪಿಯವರು (BJP) ಹೇಳಿದ್ರು ಎಂದು ಭೈರಪ್ಪ ಅವರ ಸ್ಮಾರಕ ಮಾಡಲ್ಲ. ಮೈಸೂರನಲ್ಲೇ (Mysuru) ಸ್ಮಾರಕ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಭೈರಪ್ಪ ಅವರು ಬಹುಕಾಲ ಮೈಸೂರಿನಲ್ಲೇ ಕಾಲ ಕಳೆದದ್ದರಿಂದ ಅಲ್ಲೇ ಸ್ಮಾರಕ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬದುಕಿನ `ಯಾನ’ ಮುಗಿಸಿದ ಭೈರಪ್ಪ – ನಾಳೆ ಮೈಸೂರಲ್ಲಿ ಅಂತ್ಯಕ್ರಿಯೆ

    ಭೈರಪ್ಪಗೆ ನುಡಿ ನಮನ
    ಭೈರಪ್ಪ ಅವ್ರು ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕಷ್ಟಪಟ್ಟು ಮೇಲೆ ಬಂದು, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದವರು. ಭೋದನೆ ಮಾಡುತ್ತಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಸಾಮಾನ್ಯವಾಗಿ ಎರಡೂ ಕೆಲಸ ಮಾಡುವುದು ಕಷ್ಟ. ಭೋದನೆ ಮಾಡುತ್ತಿದ್ರೂ, ಅವರಿಗೆ ಸಾಹಿತ್ಯದ ಮೇಲೆ ಹೆಚ್ಚು ಆಸಕ್ತಿಯಿತ್ತು. ಅವರ ನಿಧನದಿಂದ ಇಂದು ಸಾರಸ್ವತ ಲೋಕ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 181 ರೂ. ಸಂಬಳ, SL ಭೈರಪ್ಪಗೂ ಹುಬ್ಬಳ್ಳಿಗೂ ಅವಿನಾಭಾವ ನಂಟು

    ಭೈರಪ್ಪನವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದಾರೆ. ಅವರು ಮೈಸೂರಿನಲ್ಲೇ ಹೆಚ್ಚು ಕಾಲ ಇದ್ದರು. ಹೈಸ್ಕೂಲ್‌ನಿಂದ ಎಂಎ ವರೆಗಿನ ವಿದ್ಯಾಭ್ಯಾಸವನ್ನ ಮೈಸೂರಿನಲ್ಲೇ ಮಾಡಿದ್ದರು. ಮೈಸೂರು ಅವರ ಕರ್ಮಸ್ಥಳವಾಗಿದೆ. ಅವರ ಕಾದಂಬರಿಗಳು 40 ಭಾಷೆಗಳಿಗೆ ಭಾಷಾಂತರವಾಗಿದೆ. ಬಹುಷಃ ಇಷ್ಟು ಬರಹಳಿಗೆ ಭಾಷಾಂತರವಾಗಿದ್ದು ಅವರೊಬ್ಬರದ್ದೇ ಅನಿಸುತ್ತೆ. ತಮ್ಮ ಬರಹಗಳಿಂದ ಕನ್ನಡ ಹಾಗೂ ಬೇರೆ ಬೇರೆ ಭಾಷೆಗಳಲ್ಲಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದರು ಎಂದು ತಿಳಿಸಿದ್ದಾರೆ.

    ಪದ್ಮಭೂಷಣ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿಗೆ ಲಭಿಸಿದ್ದವು. ಅವರ ಈ ಎಲ್ಲಾ ಪ್ರಶಸ್ತಿಗೆ ಅವ್ರು ಅರ್ಹರಾಗಿದ್ದರು. ನನ್ನ ಪ್ರಕಾರ ಅವರಿಗೆ ಜ್ಞಾನಪೀಠ ಪ್ರಶಸ್ತಿಗೆ ಸಿಗಬೇಕಿತ್ತು. ಆದ್ರೆ ಯಾವ ಪ್ರಶಸ್ತಿಗೂ ಅವ್ರು ಆಸೆಪಟ್ಟವರಲ್ಲ. ಕಾದಂಬರಿ ಬರೆಯೋದು ನನ್ನ ಆತ್ಮ ತೃಪ್ತಿಗೆ ಎಂದು ಹೇಳುತ್ತಿದ್ದರು. ಜಗತ್ಪçಸಿದ್ಧ ಕಾದಂಬರಿಗಳನ್ನೇ ಬರೆದಿದ್ದಾರೆ, ನನಗೆ ಅವರ ಎಲ್ಲಾ ಕಾದಂಬರಿಗಳನ್ನು ಓದೋಕೆ ಆಗಿಲ್ಲ. ಕೆಲವು ಕಾದಂಬರಿಗಳನ್ನಷ್ಟೇ ಓದಿದ್ದೇನೆ ಎಂದು ತಿಳಿಸಿದ್ದಾರೆ.

    ಭೈರಪ್ಪನವರಿಗೆ ಚಿರಶಾಂತಿ ಕೋರುತ್ತ, ಕುಟುಂಬಸ್ಥರಿಗೆ ಹಾಗೂ ಅವರ ಅಭಿಮಾನಿಗಳಿಗೆ ಭೈರಪ್ಪ ಅವರ ಅಗಲಿಕೆಯ ದುಃಖ ಬರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

  • ದೇಶದ ಆತ್ಮವನ್ನು ಅರಿತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ: ಚಕ್ರವರ್ತಿ ಸೂಲಿಬೆಲೆ

    ದೇಶದ ಆತ್ಮವನ್ನು ಅರಿತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ: ಚಕ್ರವರ್ತಿ ಸೂಲಿಬೆಲೆ

    ಬೆಂಗಳೂರು: ದೇಶದ ಆತ್ಮವನ್ನು ಅರಿತುಕೊಂಡ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬೇಸರ ವ್ಯಕ್ತಪಡಿಸಿದ್ದಾರೆ.

    ಎಸ್.ಎಲ್ ಭೈರಪ್ಪ (SL Bhyrappa) ಅವರ ನಿಧನದ ಬಗ್ಗೆ ಸಂತಾಪ ಸೂಚಿಸುತ್ತ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಭೈರಪ್ಪ ಅವರ ದೇಹತ್ಯಾಗದ ಪರಿಸ್ಥಿತಿಯಿದೆ ಎಂದು ಗೊತ್ತಿತ್ತು. ನಾನು ಎರಡು ವರ್ಷದ ಹಿಂದೆ ಸಾವರ್ಕರ್ ಪುರಸ್ಕಾರವನ್ನು ಪಡೆಯುತ್ತಿದ್ದಾಗ ಅವರಿಗೆ ನೆನಪಿನ ಶಕ್ತಿ ಕಡಿಮೆ ಆಗಿರೋದು ಎಲ್ಲವೂ ಗೊತ್ತಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಭೈರಪ್ಪರ ಸಾಹಿತ್ಯದಲ್ಲಿ ಬೇರೆ ಸಾಹಿತಿಗಳಂತೆ ಕಾಲ್ಪನಿಕತೆ ಇರಲಿಲ್ಲ, ವಸ್ತುನಿಷ್ಠತೆ ಇತ್ತು: ಪ್ರತಾಪ್‌ ಸಿಂಹ

    ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಾಗ ಉಂಟಾಗುವ ನಿರ್ವಾತವು ಇಂದು ಭೈರಪ್ಪ ಅವರನ್ನು ಕಳೆದುಕೊಂಡಾಗ ಆಗಿದೆ. ದೇಶವನ್ನು ಪರಿಪೂರ್ಣವನ್ನು ಅರಿತುಕೊಂಡು ಬದುಕಬೇಕು ಅಂದುಕೊಂಡ ವ್ಯಕ್ತಿಗಳಲ್ಲಿ ಭೈರಪ್ಪ ಅವರು ಒಬ್ಬರಾಗಿದ್ದರು. ಅವರನ್ನು ಕಳೆದುಕೊಂಡು ಎಲ್ಲಿಂದ ಮಾತು ಶುರು ಮಾಡ್ಬೇಕು, ಎಲ್ಲಿಂದ ಅಂತ್ಯ ಮಾಡ್ಬೇಕು ಅಂತ ಗೊತ್ತಾಗದಿರುವಂತ ಪರಿಸ್ಥಿತಿ ಎದುರಾಗಿದೆ ಶೋಕ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿಂಗಳಿಗೆ 5 ರೂ. ಸಂಬಳಕ್ಕೆ ಸಿನಿಮಾ ಟಾಕೀಸ್‌ನಲ್ಲಿ ಗೇಟ್‌ ಕೀಪರ್‌ ಆಗಿದ್ರು ಭೈರಪ್ಪ

    ಕಡು ಬಡತನದಲ್ಲಿ ಬಂದತಹ ವ್ಯಕ್ತಿ, ತನ್ನ ಊರಿಗೆ ಹೋಗಿ ಸರಸ್ವತಿ ಸಮ್ಮಾನ್ ಪುರಸ್ಕಾರ ಸ್ವೀಕರಿಸಿ, ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿದ ದಿನ ಅವರ ಭಾವ ಹೇಗಿದ್ದಿರಬಹುದು. ಒಬ್ಬ ವ್ಯಕ್ತಿಗೆ ನೊಬೆಲ್ ಪ್ರಶಸ್ತಿಯೂ ಅತ್ಯಂತ ಶ್ರೇಷ್ಠವಾದ ಗೌರವ ಅಲ್ಲ. ತನ್ನ ಊರಿನ ಜನ ಕರೆದು ಸನ್ಮಾನ ಮಾಡಿದ್ದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ಅದು ಭೈರಪ್ಪ ಅವರಿಗೆ ಸಿಕ್ಕಿದೆ ಎಂದು ಹೇಳಿದ್ದಾರೆ.

    ಕನ್ನಡದ ಸಾಹಿತಿ ಒಬ್ಬರಿಗೆ 100ನೇ ಕೃತಿಗೆ ಅಕಾಡೆಮಿ ಪ್ರಶಸ್ತಿ ಬಂತು ಎಂದು ಹೇಳಿದಾಗ ಭೈರಪ್ಪ ಅವರು 1 ಪ್ರಶಸ್ತಿಗೆ 100 ಪುಸ್ತಕ ಬರೆಯಬೇಕಾಯಿತ ಅಂತಾ ಕೇಳಿದ್ರಂತೆ. ಭೈರಪ್ಪ ಅವರ ಪ್ರತಿಯೊಂದು ಪುಸ್ತಕವೂ ಕೂಡಾ ಅಂಬಾರಿಯಲ್ಲಿ ಮೆರವಣಿಗೆ ಮಾಡುವಂತಹ ಅದ್ಭುತವಾದ ಸಾಹತ್ಯವನ್ನು ಸೃಜಿಸಿದ್ದಾರೆ ಎಂದಿದ್ದಾರೆ

    ಅವರ ಭಾಷೆ, ಒಂದು ವಸ್ತುವಿನ ಬಗ್ಗೆಗಿನ ಅಧ್ಯಯನ, ಇಂದಿನ ಯುಗಕ್ಕೆ ಕಟ್ಟಿಕೊಳ್ಳುವ ರೀತಿ ಎಲ್ಲವೂ ಬಹಳ ವಿಶಿಷ್ಟವಾದ್ದದ್ದು. ಅವರನ್ನು ಇತರ ಲೇಖಕರಿಗೆ ಹೋಲಿಸಲೂ ಸಾಧ್ಯವಾಗದ ಲೇಖಕರಾಗಿದ್ದಾರೆ ಎಂದು ಭೈರಪ್ಪ ಅವರು ಅಕ್ಷರ ಲೋಕಕ್ಕೆ ನೀಡಿದ ಕೊಡುಗೆಯನ್ನು ಬಣ್ಣಿಸಿದ್ದಾರೆ.

    ಬರಹಗಾರರ ಹೃದಯವು ಇಂದಿನ ದಿನಗಳನ್ನು ನೋಡುವುದಿಲ್ಲ. ಮುಂದಿನ 50 ವರ್ಷದ ಬಗ್ಗೆ ಆಲೋಚನೆಯನ್ನು ಮಾಡುತ್ತದೆ. ಕೆಲವೊಬ್ಬರು ಇಂದಿನ ದಿನಕ್ಕೆ ಬೇಕಾಗುವ ಸಾಹಿತ್ಯವನ್ನು ನೀಡುತ್ತಾರೆ. ಅದೇನೂ ಅಷ್ಟು ಕ್ಲಿಷ್ಟದ ವಿಷಯಗಳಲ್ಲ. ಆದರೆ ಕೆಲವೊಬ್ಬರು ಮುಂದಿನ ಹತ್ತಾರು ವರ್ಷದ ನಂತರ ಈ ಸಮಸ್ಯೆ ಜ್ವಲಂತವಾಗಿರುತ್ತದೆ. ಆ ಸಂದರ್ಭದಲ್ಲೂ ಅದಕ್ಕೆ ಇದೇ ಉತ್ತರವಾಗಿರುತ್ತದೆ ಎಂದು ಆಲೋಚನೆ ಮಾಡುವುದು ಅಸಮಾನ್ಯ ಸಾಮರ್ಥ್ಯ. ಭೈರಪ್ಪ ಅವರ ಪರ್ವ ಹೀಗೆ ಅವರ ಎಲ್ಲಾ ಪುಸ್ತಕದಲ್ಲಿ ಕೂಡಾ ಕಾಳಜಿಯುಕ್ತ ಸಮಾಜದ ನಿರ್ಮಾಣದ ಕಡೆ ಗಮನ ಕೊಡೋದು ಬಹಳ ವಿಶಿಷ್ಟವಾಗಿರುವ ಸಂಗತಿ ಎಂದು ಹೇಳಿದ್ದಾರೆ.

    ನಾನು ಭೈರಪ್ಪ ಅವರ ಕೃತಿಗಳ ಮೇಲಾದ ಸೆಮಿನಾರ್‌ಗಳನ್ನು ಬೇರೆಯಾವುದೇ ಸಾಹಿತಿಗಳ ಕೃತಿಗಳದ್ದೂ ಆಗಿಲ್ಲ. ಒಬ್ಬ ವ್ಯಕ್ತಿಯ ವಿಚಾರ ಬಂದಾಗ ಅವರ ಸಮಗ್ರ ಸಾಹಿತ್ಯದ ಮೇಲೆ ಸೆಮಿನಾರ್ ಆಗುತ್ತದೆ. ಆದರೆ ಭೈರಪ್ಪ ಅವರ ಪ್ರತಿಯೊಂದು ಕೃತಿಯ ಬಗ್ಗೆ ಸೆಮಿನಾರ್ ಆಗಿದೆ. ಎಸ್.ಆರ್ ಲೀಲಾ, ಶತಾವಧಾನಿ ಗಣೇಶ್ ಅವರು ಭೈರಪ್ಪ ಅವರ ಕೃತಿಯ ಮೇಲೂ ಭಿನ್ನ ಭಿನ್ನವಾಗಿ ಆಯಾಮಗಳಲ್ಲಿ ಚೆಲ್ಲುತ್ತಿದ್ದ ಬೆಳಕು ಅದು ಸಾಮಾನ್ಯವಾದ್ದುದ್ದಾಗಿರಲಿಲ್ಲ. ಅವರ ಕೃತಿಗಳ ವಿಮರ್ಶಕರಾಗಿಯೇ ಸಮಾಜದಲ್ಲಿ ದೊಡ್ಡವರಾಗಿ ಬೆಳೆದರು ಎಂದಿದ್ದಾರೆ.

    ಭೈರಪ್ಪ ಅವರ ಕಾದಂಬರಿಯನ್ನು ಓದುವುದೇ ಒಂದು ರಸಸ್ವಾದವಾದ್ರೆ, ಅದನ್ನು ಓದಿದವರ ದೃಷ್ಟಿಕೋನದಲ್ಲಿ ಕೇಳೋದೇ ಒಂದು ಚೆಂದ. ಇದು ಭೈರಪ್ಪನವರಿಗೆ ಮಾತ್ರ ಸಿಗುವ ಅಪರೂಪದ ಗೌರವ ಎಂದು ನುಡಿದಿದ್ದಾರೆ.

    ಅನಂತ್‌ನಾಗ್ ಅವ್ರು ಸಾಹಿತ್ಯ ಒಂದರ ದೃಷ್ಟ್ರಿಯಿಂದ ಹಿಮಾಲಯ ಅಂತಾ ಹೇಳಿದ್ರೋ ಗೊತ್ತಿಲ್ಲ. ಸಾಹಿತ್ಯ ಒಂದರಲ್ಲಿ ಭೈರಪ್ಪ ಅವ್ರು ಹಿಮಾಲಯ ಅಂತ ಅಂದ್ರೆ ಅದು ಅಲ್ಲ. ಅವರು ಶ್ರೇಷ್ಠ ಕಾದಂಬರಿ ನೀಡುವುದರ ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಯ ವಿಚಾರ ಬಂದಾಗ ಭೈರಪ್ಪ ಅವರ ಉತ್ತರವೇ ಬೇರೆಯಾಗಿತ್ತು. ಟಿಪ್ಪು ವಿಚಾರವಾಗಿ ಭಾರೀ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ಶಿಕ್ಷಣ ಸಚಿವರಾಗಿ ಡಿ.ಹೆಚ್ ಶಂಕರ್‌ಮೂರ್ತಿ ಅವರ ಹೇಳಿಕೆ ಕೊಟ್ಟರು ಎಂದು ಸೈಧಾಂತಿಕರರೆಲ್ಲ ಮುಗಿಬಿದ್ದಿದ್ದರು. ಆ ವಿಚಾರವಾಗಿ ಎಲ್ಲರ ಒಂದೊಂದು ಲೇಖನವನ್ನು ಬರೆಯುತ್ತಿದ್ದರು. ಆಗ ಸಂದರ್ಭ ಪತ್ರಿಕೆಯೊಂದರಲ್ಲಿ ಭೈರಪ್ಪ ಅವರು ಬರೆದ ಒಂದು ಲೇಖನ ಬಂದ ಮೇಲೆ ಎಲ್ಲರೂ ಸುಮ್ಮನಾದರು. ಆಗ ಪತ್ರಿಕೆಯವರೇ ಹೇಳಿದರೂ ಇನ್ನೇನೂ ಹೇಳಲು ಉಳಿದಿಲ್ಲ. ಇನ್ನೇನು ಈ ವಿಚಾರವನ್ನೂ ಇಲ್ಲಿಗೆ ನಿಲ್ಲಿಸಬಹುದಾ ಎಂದು ಕೇಳಿದ್ರು. ಇದು ಭೈರಪ್ಪ ಅವರ ಸಾಧನೆಯಾಗಿದೆ ಎಂದರು.

    ಭೈರಪ್ಪ ಅವರು ಯಾವುದಾದರೂ ವಿಚಾರವೊಂದು ಬಿಟ್ಟು, ಬೇರೆ ವಿಚಾರವನ್ನು ಬಿಟ್ಟು ಕೆದಕಿ ಕೇಳುತ್ತಿದ್ದರು. ಆ ವಿಚಾರದ ಬಗ್ಗೆ ಇನ್ನಷ್ಟು ವಿಚಾರಗಳು ಹುಡುಕಿಕೊಡಬಹುದಾ ಎಂದು ಕೇಳುತ್ತಿದ್ದರು. ನಂತರ ಮಾಹಿತಿಯನ್ನು ಪಡೆದುಕೊಂಡು ಬಳಿಕ ಅವರ ಭಾಷಣದಲ್ಲಿ ಈ ವಿಷಯಗಳನ್ನು ಅಳವಡಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

  • ಸಾಹಿತಿ ಕಮಲಾ ಹಂಪನ ಹೃದಯಾಘಾತದಿಂದ ನಿಧನ

    ಸಾಹಿತಿ ಕಮಲಾ ಹಂಪನ ಹೃದಯಾಘಾತದಿಂದ ನಿಧನ

    ಬೆಂಗಳೂರು: ಹಿರಿಯ ಲೇಖಕಿ ಕಮಲಾ ಹಂಪನ (89) ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ರಾಜರಾಜೇಶ್ವರಿ ನಗರದ ಮಗಳ ಮನೆಯಲ್ಲಿ ಲೇಖಕಿ ಕೊನೆಯುಸಿರೆಳೆದಿದ್ದಾರೆ. ಅಗ್ರಗಣ್ಯ ಮಹಿಳಾ ಲೇಖಕಿಯಾಗಿದ್ದ ಕಮಲಾ ಹಂಪನ ತನ್ನ ಸಾಹಿತ್ಯಾಭಿಮಾನಿಗಳನ್ನ ಅಗಲಿದ್ದಾರೆ.

    ಇಂದು ಸಂಜೆಯವರೆಗೂ ಆರ್.ಆರ್. ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ದರ್ಶನದ ಬಳಿಕ ರಾಮಯ್ಯ ಮೆಡಿಕಲ್ ಕಾಲೇಜಿಗೆ ಕುಟುಂಬಸ್ಥರು ದೇಹದಾನ ಮಾಡಲಿದ್ದಾರೆ.

    ಕನ್ನಡ ಸಾಹಿತ್ಯಕ್ಕೆ ಅನೇಕ ಪುಸ್ತಕಗಳ ಕೊಡುಗೆ ನೀಡಿ ಕನ್ನಡ ಸಾಹಿತ್ಯ ಸೇವೆಗೆ ಮನೆ ಮಾತಾಗಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರೂ ಆಗಿದ್ದ ಡಾ. ಕಮಲಾ ಹಂಪನ ಸಾಹತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

    ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿಗೆ ಲೇಖಕಿ ಭಾಜನರಾಗಿದ್ದರು. ಇವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ.

  • ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

    ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

    ಧಾರವಾಡ: ಹಿರಿಯ ಸಾಹಿತಿ ಗುರುಲಿಂಗ ಕಾಪಸೆ (Gurulinga Kapse) ಅವರು ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಧಾರವಾಡ ಸಪ್ತಾಪುರ ದುರ್ಗಾ ಕಾಲೊನಿಯ ನಿವಾಸದಲ್ಲಿ ಕಾಪಸೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಕಾಪಸೆ ಅವರು 1928ರ ಎಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿ ಬಿ.ಕೆ. ಯಲ್ಲಿ ಜನಿಸಿದ್ದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾಗಿದ್ದರು. ಹಲಸಂಗಿ ಗೆಳೆಯರು, ಅಕ್ಕಮಹಾದೇವಿ, ಅರವಿಂದರು, ಬಸವೇಶ್ವರ, ಶಾಲ್ಮಲೆಯಿಂದ ಗೋದಾವರಿ ವರೆಗೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕವಿ ರವಿಂದ್ರರು, ಶಿ.ಶಿ.ಬಸವನಾಳ ಎಂಬ ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಬೆಂಗ್ಳೂರು, ಶಿವಮೊಗ್ಗ, ಹುಬ್ಬಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

    ಕಾಪಸೆ ಅವರ ಸಾಹಿತ್ಯ ಸಾಧನೆಗೆ ವರದರಾಜ ಆದ್ಯ ಪ್ರಶಸ್ತಿ, ಆನಂದಕಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಒಲಿದುಬಂದಿವೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

    ಗುರುಲಿಂಗ ಕಾಪಸೆ ಅವರ ಇಚ್ಛೆಯಂತೆ ಡಾ. ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಬೈಲಹೊಂಗಲದ ಮುಖಾಂತರ ಕೆಎಲ್ಇ ಆಯುರ್ವೇದ ಮಹಾವಿದ್ಯಾಲಯ ಬೆಳಗಾವಿಗೆ ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್ -‌ ರಾಜ್ಯದ 58 ಕಡೆ ದಾಳಿ

  • ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ – ಗಣ್ಯರ ಸಂತಾಪ

    ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ – ಗಣ್ಯರ ಸಂತಾಪ

    ಬೆಂಗಳೂರು: ಹಿರಿಯ ಸಾಹಿತಿಗಳೂ ಆಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್.ನಾಗಭೂಷಣ್ ಬುಧವಾರ ತಡರಾತ್ರಿ ನಿಧನರಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

    ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಸಿದ್ದರಾಮಯ್ಯ ಅವರು, ಅನ್ಯಾಯ, ಅಸಮಾನತೆ ಮತ್ತು ಆತ್ಮವಂಚಕ ನಡವಳಿಕೆಗಳ ವಿರುದ್ಧದ ಹೋರಾಟಕ್ಕೆ, ಸಮಾಜವಾದಿ ಚಿಂತನೆಗಳನ್ನು ಅಸ್ತ್ರವಾಗಿ ಬಳಸುತ್ತಾ ಬಂದಿದ್ದ ಡಿ.ಎಸ್.ನಾಗಭೂಷಣ್ ಅವರ ಅಗಲಿಕೆಯಿಂದ ಆಘಾತಕ್ಕೀಡಾಗಿದ್ದೇನೆ. ಅವರ ಪತ್ನಿ ಮತ್ತು ಗೆಳೆಯರೆಲ್ಲರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ್ರೆ ತಾನೇ ಕೊಟ್ಟ ಭರವಸೆ ಈಡೇರಿಸುವುದು: ಬಿ.ಸಿ.ಪಾಟೀಲ್

    ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಹಾಗೂ ಸಾಮಾಜಿಕ ಚಿಂತಕ ಡಿ.ಎಸ್.ನಾಗಭೂಷಣ ಅವರು ಕಾಲವಾದ ವಿಷಯ ತಿಳಿದು ಬೇಸರವಾಯಿತು. ಗಾಂಧಿ ಚಿಂತನೆಗಳ ಬಗ್ಗೆ ಮತ್ತಷ್ಟು ಅರಿವು ಮೂಡಿಸಿದ ಅವರ ಅಗಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ – 1,000 ರೂ. ದಾಟಿದ LPG ಸಿಲಿಂಡರ್ ದರ

    ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ, ಖ್ಯಾತ ವಿಮರ್ಶಕ, `ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ ಸಾಹಿತಿ ಡಿ.ಎಸ್.ನಾಗಭೂಷಣ್ ಅವರ ನಿಧನ ಸುದ್ಧಿ ದುಃಖ ತರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

  • ಹಿರಿಯ ಕನ್ನಡ ವಿದ್ವಾಂಸ ಪ್ರೊ. ಟಿ.ಆರ್. ಮಹದೇವಯ್ಯ ಇನ್ನಿಲ್ಲ

    ಹಿರಿಯ ಕನ್ನಡ ವಿದ್ವಾಂಸ ಪ್ರೊ. ಟಿ.ಆರ್. ಮಹದೇವಯ್ಯ ಇನ್ನಿಲ್ಲ

    ಬೆಂಗಳೂರು: ಹಿರಿಯ ಕನ್ನಡ ವಿದ್ವಾಂಸ ಪ್ರೊ. ಟಿ.ಆರ್. ಮಹದೇವಯ್ಯ (82) ಇಂದು ನಗರದ ನಾಗರಬಾವಿಯ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

    ಮಹದೇವಯ್ಯ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕನ್ನಡ ನಿಘಂಟು ರಚನೆಗಾಗಿ ನಾಲ್ಕು ದಶಕಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಮಹದೇವಯ್ಯ
    ಅವರು ವಚನಜ್ಯೋತಿ ಬಳಗದ ಗೌರವಾ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.

    ತಮ್ಮ ಸಾವಿನ ಬಳಿಕ ತಮ್ಮ ದೇಹವನ್ನು ದಾನ ಮಾಡಬೇಕೆಂಬ ಇಚ್ಚೆಯನ್ನು ಮಹದೇವಯ್ಯ ಅವರು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಜೆಎಸ್‍ಎಸ್ ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಮಹದೇವಯ್ಯನವರು ಸಮಗ್ರ ಚಿಂತನೆ ಸೇರಿದಂತೆ ಹತ್ತಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.