Tag: Kannada Songs

  • ಕನ್ನಡಕ್ಕೆ ಅಪಮಾನ – ಸೋನು ನಿಗಮ್ ವಿರುದ್ಧ ಮಂಡ್ಯದಲ್ಲೂ ದೂರು

    ಕನ್ನಡಕ್ಕೆ ಅಪಮಾನ – ಸೋನು ನಿಗಮ್ ವಿರುದ್ಧ ಮಂಡ್ಯದಲ್ಲೂ ದೂರು

    ಮಂಡ್ಯ: ಕರ್ನಾಟಕದ ನೆಲದಲ್ಲಿ ಕನ್ನಡಿಗರನ್ನು ಭಯೋತ್ಪಾದಕರು ಎಂದು ಅವಮಾನಿಸಿರುವ ಗಾಯಕ ಸೋನು ನಿಗಮ್ (Sonu Nigam) ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು (Kannada Sene Worker) ಆಗ್ರಹಿಸಿದರು.

    ಮಂಡ್ಯ (Mandya) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯರಿಗೆ ದೂರು ಸಲ್ಲಿಸಿದ ನಂತರ ಗಾಯಕ ಸೋನು ನಿಗಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್

    ಕರ್ನಾಟಕದ ನೆಲದಲ್ಲಿ ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿ ಅವಮಾನಿಸಿದ್ದಾರೆ. ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ. ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಅವರನ್ನು ಖಳನಾಯಕರನ್ನಾಗಿ ಮಾಡಿರುವ ಹುನ್ನಾರ ನಡೆಯುತ್ತಿದೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.  ಇದನ್ನೂ ಓದಿ: 100 ಕೋಟಿ ಕ್ಲಬ್‌ಗೆ `ಹಿಟ್-3′ ಮೂವಿ – ಮೊದಲ ಬಾರಿಗೆ ನಾನಿ ಚಿತ್ರ ಭರ್ಜರಿ ಕಲೆಕ್ಷನ್‌

    ಕನ್ನಡಿಗರನ್ನು ನಿಂದಿಸಿರುವ ಸೋನುನಿಗಮ್ ಅವರನ್ನು ಕನ್ನಡ ಚಿತ್ರರಂಗ ಬಹಿಷ್ಕರಿಸಬೇಕು. ಕರ್ನಾಟಕದ ಜನಪ್ರತಿನಿಧಿಗಳು ಮೌನ ಮುರಿದು ಮಾತನಾಡಬೇಕು. ಮೂರು ಸಾವಿರ ವರ್ಷ ಹಾಗೂ ದೇಶದ ಎಲ್ಲ ಭಾಷೆಯ ತಾಯಿ ಭಾಷೆ ಕನ್ನಡಕ್ಕೆ ಅವಮಾನಿಸಿದ ಯಾವುದೇ ವ್ಯಕ್ತಿಯಾದರೂ ಅಂಥವರ ವಿರುದ್ಧ 24 ಗಂಟೆಯೊಳಗೆ ಕಾನೂನು ಕ್ರಮ ಕೈಗೊಳ್ಳುವ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

  • ಗಾಯಕ ಪಿ.ಜಯಚಂದ್ರನ್‌ ಹಾಡಿದ್ದ ಕನ್ನಡದ ಸೂಪರ್‌ ಹಿಟ್‌ ಹಾಡುಗಳಿವು..

    ಗಾಯಕ ಪಿ.ಜಯಚಂದ್ರನ್‌ ಹಾಡಿದ್ದ ಕನ್ನಡದ ಸೂಪರ್‌ ಹಿಟ್‌ ಹಾಡುಗಳಿವು..

    ಲೆಜೆಂಡರಿ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್‌ (P.Jayachandran) ಅವರು ಕನ್ನಡದಲ್ಲಿ ಸೂಪರ್‌ ಹಿಟ್‌ ಹಾಡುಗಳನ್ನು ಹಾಡಿದ್ದಾರೆ.

    ಪ್ರಮುಖವಾಗಿ ಅಂಬರೀಶ್‌ ಅಭಿನಯದ ಒಲವಿನ ಉಡುಗೊರೆ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು..’, ಅಮೃತ ಘಳಿಗೆ ಸಿನಿಮಾದ ‘ಹಿಂದೂಸ್ತಾನವು ಎಂದೂ ಮರೆಯದ..’, ರಂಗನಾಯಕಿ ಸಿನಿಮಾದ ‘ಮಂದಾರ ಪುಷ್ಪವು ನೀನು..’, ಮಾನಸ ಸರೋವರದ ‘ಚಂದ..ಚಂದ..’, ಹಂತಕನ ಸಂಚು ಸಿನಿಮಾದ ‘ಜೀವನ ಸಂಜೀವನ..’. ಭಕ್ತ ಪ್ರಹ್ಲಾದ ಸಿನಿಮಾದ ‘ಕಮಲ ನಯನ..  ಕಮಲ ವದನ..’ ಪ್ರಾಯ ಪ್ರಾಯ ಪ್ರಾಯ ಸಿನಿಮಾದ ‘ಭೂಮಿ ತಾಯಾಣೆ, ನೀ ಇಷ್ಟ ಕಣೆ..’ ಹಾಗೂ ಮಸಣದ ಹೂವು ಚಿತ್ರದ ‘ಕನ್ನಡ ನಾಡಿನ ಕರಾವಳಿ..’ ಮೊದಲಾದ ಸುಪ್ರಸಿದ್ಧ ಗೀತೆಗಳಿಗೆ ಅವರು ದನಿಯಾಗಿದ್ದರು. ಇದನ್ನೂ ಓದಿ: ಒಲವಿನ ಉಡುಗೊರೆ ಕೊಡಲೇನು ಹಾಡಿಗೆ ದನಿಯಾಗಿದ್ದ ಗಾಯಕ ಪಿ.ಜಯಚಂದ್ರನ್‌ ಇನ್ನಿಲ್ಲ

    ಮುನಿಯನ ಮದರಿ ಚಿತ್ರದ ‘ಕಾಲ್ಗೆಜ್ಜೆ ತಾಳಕೆ’, ಕಿಲಾಡಿಗಳು ಸಿನಿಮಾದ ‘ಕಾಲ ಮತ್ತೊಮ್ಮೆ ನಮಗಾಗಿ ಬಂತು’ ಮತ್ತು ‘ಅಳುಕದೆ ಬಳುಕುತ’, ಸುವರ್ಣ ಸೇತುವೆ ಚಿತ್ರದ ‘ಸಾವಿರ ಹೂಗಳಲಿ’, ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ‘ಉಯ್ಯಾಲೆ ಆಡೋಣ ಬನ್ನಿರೋ’, ಗಣೇಶನ ಮದುವೆ ಚಿತ್ರದ ‘ಶ್ರೀದೇವಿ ಮಾಧವಿ ಕಣ್ಣೋಟ ಬೇಡ’ ಮತ್ತು ‘ಪ್ರೇಮದ ಶ್ರುತಿ ಮೀಟಿದೆ’, ರೈತರ ಮಕ್ಕಳು ಸಿನಿಮಾದ ‘ಮನಸು ಕಳೆಯಿತು’ ಮೊದಲಾದ ಗೀತೆಗಳನ್ನು ಹಾಡಿ ಕನ್ನಡಿಗರ ಮನಸೂರೆಗೊಂಡಿದ್ದಾರೆ.

    ಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್‌ ಗುರುವಾರ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ತ್ರಿಶೂರ್ ಅಮಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪುಟ್ಟಣ್ಣ ಕಣಗಾಲ್ ಅವರು ಒಮ್ಮೆ, ‘ಜಯಚಂದ್ರನ್ ಕನ್ನಡ ಮಾತೃಭಾಷೆಯವರಲ್ಲ ಎಂದು ಹೇಳಲು ಆಗುವುದೇ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಛತ್ತೀಸ್‌ಗಢ | ಉಕ್ಕಿನ ಸ್ಥಾವರ ಕುಸಿದು ನಾಲ್ವರು ಸಾವು; 25 ಜನ ಸಿಲುಕಿರುವ ಶಂಕೆ

  • ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್

    ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್

    ಬೆಂಗಳೂರು: ಕೋರಮಂಗಲದ ಪಬ್‌ವೊಂದರಲ್ಲಿ ಸೌತ್ ಇಂಡಿಯಾ (South India) ಹಾಡುಗಳನ್ನು ಹಾಕುವುದಕ್ಕೆ ಪಬ್ (Pub) ಸಿಬ್ಬಂದಿ ನಿರಾಕರಿಸಿದ್ದರಿಂದ ಗ್ರಾಹಕ ಮತ್ತು ಸಿಬ್ಬಂದಿ ನಡುವೆ ಕಿರಿಕ್ ನಡೆದಿದೆ.

    ಪಬ್‌ನಲ್ಲಿ ಪ್ರಾದೇಶಿಕ ಭಾಷೆಯ (Regional Language) ಹಾಡುಗಳನ್ನು ಹಾಕಿ ಎಂದು ಗ್ರಾಹಕರೊಬ್ಬರು ಒತ್ತಾಯ ಮಾಡಿದ್ದರು. ಆವಾಗ, ಇಲ್ಲ ಬರೀ ಇಂಗ್ಲಿಷ್ ಹಾಡುಗಳನ್ನು ಮಾತ್ರ ಹಾಕ್ತೀವಿ, ಇಂಗ್ಲಿಷ್ ಬಿಟ್ಟು ಬೇರೆ ಹಾಡುಗಳನ್ನು ಹಾಕುವುದಿಲ್ಲ ಎಂದು ಪಬ್‌ನ ಮಹಿಳಾ ಸಿಬ್ಬಂದಿ ಪಟ್ಟು ಹಿಡಿದಿದ್ದರು.  ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ- ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ

    ಈ ಘಟನೆಯನ್ನು ಗ್ರಾಹಕ ವೀಡಿಯೋ ಮಾಡಲು ಮುಂದಾದರು. ವೀಡಿಯೋ ಮಾಡುವುದನ್ನು ನೋಡಿದ ಪಬ್‌ನ ಮತ್ತೊಬ್ಬ ಸಿಬ್ಬಂದಿ ವೀಡಿಯೋ ಹೊರಗಡೆ ಬಂದರೆ ಕನ್ನಡಪರ ಸಂಘಟನೆಯವರು ಹೋರಾಟ ಮಾಡ್ತಾರೆ, ಪೊಲೀಸ್ ಕೇಸ್ ಆಗುತ್ತೆ ಎಂದು ಭಯಪಟ್ಟು ಕನ್ನಡ ಹಾಡು ಹಾಕುವುದಕ್ಕೆ ಒಪ್ಪಿಗೆ ನೀಡಿದ್ದರು. ಕನ್ನಡ ಹಾಡು ಮಾತ್ರ ಹಾಕುತ್ತೇವೆ. ಆದರೆ ತೆಲುಗು ಮತ್ತು ತಮಿಳು ಹಾಡುಗಳನ್ನು ಹಾಕುವುದಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದರು. ಇದನ್ನೂ ಓದಿ: ಎಸ್‌ಸಿಒ ಸಭೆಗೆ ಮೋದಿಗೆ ಆಹ್ವಾನ ನೀಡಿದ ಪಾಕ್‌ – ಪ್ರಧಾನಿ ಭಾಗವಹಿಸೋದು ಡೌಟ್‌

    ಒಂದು ವೇಳೆ ವೀಡಿಯೋ ಮಾಡಿ ಗಟ್ಟಿ ಧ್ವನಿಯಲ್ಲಿ ಕೇಳಿದರೆ ಮಾತ್ರ ಕನ್ನಡ ಹಾಡುಗಳನ್ನು ಹಾಕುತ್ತಾರೆ ಎಂದು ಗ್ರಾಹಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾರಿಗೆ KSRTC ಬಸ್ ಡಿಕ್ಕಿ – ಐವರಿಗೆ ಗಾಯ

  • ಚಿನ್ನಸ್ವಾಮಿಯಲ್ಲಿ ʻಕಾಂತಾರʼ ಸಾಂಗ್‌ – RCB ಗೆಲುವಿಗೆ ದೈವ ಕಾರಣ ಅಂದ್ರು ಫ್ಯಾನ್ಸ್‌

    ಚಿನ್ನಸ್ವಾಮಿಯಲ್ಲಿ ʻಕಾಂತಾರʼ ಸಾಂಗ್‌ – RCB ಗೆಲುವಿಗೆ ದೈವ ಕಾರಣ ಅಂದ್ರು ಫ್ಯಾನ್ಸ್‌

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ರಾಜಸ್ಥಾನ್‌ ರಾಯಲ್ಸ್‌ (RR) ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ರನ್‌ಗಳ ರೋಚಕ ಜಯ ಸಾಧಿಸಿತು.

    ಕೊನೆ ಕ್ಷಣದಲ್ಲಿ ಪಿಂಕ್‌ Vs ಗ್ರೀನ್‌ ಆರ್ಮಿ ನಡುವಿನ ಕದನ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕ್ರೀಡಾಂಗಣದ ತುಂಬಾ ನೆರೆದಿದ್ದ ಅಭಿಮಾನಿಗಳು ಕೊನೆಯವರೆಗೂ ʻಆರ್‌ಸಿಬಿ, ಆರ್‌ಸಿಬಿ, ಕೊಹ್ಲಿ, ಕೊಹ್ಲಿʼ ಎಂದು ಕೂಗುತ್ತಾ ಆಟಗಾರರನ್ನ ಹುರಿದುಂಬಿಸಿದರು. ಇದನ್ನೂ ಓದಿ: BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

    ಇದೇ ವೇಳೆ ಆರ್‌ಸಿಬಿ ಅಭಿಮಾನಿಗಳನ್ನ ರಂಜಿಸಲು ಕನ್ನಡ ಗೀತೆಗಳನ್ನ (Kannada Song) ಪ್ರಸಾರ ಮಾಡಲಾಗಿತ್ತು. ಮೊದಲಿಗೆ ನಟ ಶಿವರಾಜ್‌ ಕುಮಾರ್‌ ಅಭಿನಯದ ಟಗರು (Tagaru) ಚಿತ್ರದ ʻಟಗರು ಬಂತು ಟಗರುʼ ಗೀತೆ ಪ್ರಸಾರ ಮಾಡಲಾಗಿತ್ತು. ಕೆಲ ಹೊತ್ತು ಕಳೆದ ಬಳಿಕ ಕಾಂತಾರ ಚಿತ್ರದ ʻವರಾಹ ರೂಪಂʼ ಗೀತೆಯ ಮ್ಯೂಸಿಕ್‌ ಪ್ರಸಾರ ಮಾಡಲಾಯಿತು. ಕಾಂತಾರ ಚಿತ್ರದ ಗೀತೆಯ ಮ್ಯೂಸಿಕ್‌ ಪ್ರಸಾರ ಮಾಡುತ್ತಿದ್ದಂತೆ ಕ್ರೀಸ್‌ನಲ್ಲಿದ್ದ ರಾಜಸ್ಥಾನ್‌ ತಂಡದ ಆಟಗಾರ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕೈಚೆಲ್ಲಿದರು. ಇದು ಆರ್‌ಸಿಬಿಗೆ ಬೆನಿಫಿಟ್‌ ಆಯಿತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಹುಟ್ಟಿಕೊಂಡಿದ್ದು, ಆರ್‌ಸಿಬಿ ಗೆಲುವಿಗೆ ದೈವವೇ ಕಾರಣ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.

    ಕೊಹ್ಲಿ ಸಂಜುಗೆ ಸ್ಪೆಷಲ್‌ ಗಿಫ್ಟ್‌: ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಗ್ರೀನ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದ ಆರ್‌ಸಿಬಿ ತಂಡದ ನಾಯಕತ್ವ ವಹಿಸಿದ್ದ ವಿರಾಟ್‌ ಕೊಹ್ಲಿ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಗಿಡಗಳನ್ನು ನೀಡಿ ಸ್ವಾಗತಿಸಲಾಯಿತು. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (Royal Challengers Bangalore) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

  • ಕನ್ನಡದ ಸೂಪರ್‌ ಹಿಟ್‌ ಹಾಡು ಹಾಡಿದ ಶಿವಣ್ಣ

    ಕನ್ನಡದ ಸೂಪರ್‌ ಹಿಟ್‌ ಹಾಡು ಹಾಡಿದ ಶಿವಣ್ಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k