Tag: kannada song

  • ‘ಪೂಜಿಸಲೆಂದೇ ಹೂಗಳ ತಂದೆ’; ರಾಮನ ಸ್ಮರಿಸುವ ಕನ್ನಡ ಹಾಡಿಗೆ ಮೋದಿ ಫಿದಾ

    ‘ಪೂಜಿಸಲೆಂದೇ ಹೂಗಳ ತಂದೆ’; ರಾಮನ ಸ್ಮರಿಸುವ ಕನ್ನಡ ಹಾಡಿಗೆ ಮೋದಿ ಫಿದಾ

    ನವದೆಹಲಿ: ಕನ್ನಡದ (Kannada) ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾದ ‘ಪೂಜಿಸಲೆಂದೇ ಹೂಗಳ ತಂದೆ’ ಹಾಡಿಗೆ ಪ್ರಧಾನಿ ಮೋದಿ (Narendra Modi) ಫಿದಾ ಆಗಿದ್ದಾರೆ. ಖ್ಯಾತ ಗಾಯಕಿಯೊಬ್ಬರು ಹಾಡಿದ ಈ ಹಾಡಿನ ತುಣುಕನ್ನು ಮೋದಿ ಎಕ್ಸ್‌ನಲ್ಲಿ (X) ಹಂಚಿಕೊಂಡಿದ್ದಾರೆ.

    ಶಿವಶ್ರೀ ಸ್ಕಂದ ಪ್ರಸಾದ್ (Sivasri Skandaprasad) ಹಾಡಿರುವ ವಿಡಿಯೋವನ್ನು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಶೇರ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಶಕ್ತಿಯನ್ನು ಬಿಂಬಿಸುವ, ಎತ್ತಿಹಿಡಿಯುವ ಅದ್ಭುತ ಹಾಡಿದು. ಇಂತಹ ಪ್ರಯತ್ನಗಳು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುತ್ತದೆ ಎಂದು ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೇಳಿದ ಹಾಗೆ ಕೇಳಿದ್ರೆ ನಾವು ಆಡಳಿತ ಮಾಡೋಕಾಗಲ್ಲ: ಪರಮೇಶ್ವರ್

    ಟ್ವೀಟ್‌ನಲ್ಲಿ ಏನಿದೆ?
    ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಲಿಥಿಯಂ ಗಣಿಗಾರಿಕೆಗೆ ಭಾರತ ಸಹಿ – 5 ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆಗೆ ಒಪ್ಪಂದ

    ಇದೇ ಜ.22 ರಂದು ಅಯೋಧ್ಯೆ (Ayodhya) ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಜರುಗಲಿದೆ. ಈ ಐತಿಹಾಸಿಕ ದಿನಕ್ಕಾಗಿ ಸಮಸ್ತ ರಾಮಭಕ್ತರು ಕಾದು ಕುಳಿತಿದ್ದಾರೆ. ದೇಶದೆಲ್ಲೆಡೆ ರಾಮಭಕ್ತಿ, ರಾಮಭಜನೆ, ಶ್ರೀರಾಮ ಸ್ಮರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನ ಸ್ಮರಿಸುವ ಕನ್ನಡದ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ

  • ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹಲ್ಲೆ

    ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹಲ್ಲೆ

    ಬೆಂಗಳೂರು: ಪಬ್‌ವೊಂದರಲ್ಲಿ (Pub) ಕನ್ನಡ ಹಾಡು (Kannada Song) ಹಾಕಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ (Bengaluru) ಆರ್‌ಆರ್ ನಗರದ (RR Nagar) ಐಡಿಯಲ್ ಹೋಮ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಐಡಿಯಲ್ ಹೋಮ್ ಬಳಿಯ ಪಬ್‌ನಲ್ಲಿ ಅಕ್ಟೋಬರ್ 25ರಂದು ಘಟನೆ ನಡೆದಿದ್ದು, ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶ್ರೇಯಸ್ ಹಾಗೂ ಆತನ ಸ್ನೇಹಿತರು ರಾತ್ರಿ 10:45ರ ಸುಮಾರಿಗೆ ಪಬ್‌ಗೆ ಬಂದಿದ್ದರು. ಈ ವೇಳೆ ಪಬ್‌ನಲ್ಲಿ ಕನ್ನಡ ಹಾಡು ಹಾಕಲಾಗಿತ್ತು. ಈ ವೇಳೆ ಕನ್ನಡ ಹಾಡು ಹಾಕಿದ್ದಕ್ಕೆ ಜಗಳ ತೆಗೆದಿದ್ದಾರೆ. ಇದನ್ನೂ ಓದಿ: ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಯುವಕರು – ನಾಲ್ವರು ವಶಕ್ಕೆ

    ಪಬ್ ಮಾಲೀಕ ರವಿಕಾಂತ್ ನೀಡಿದ ದೂರಿನನ್ವಯ ಎಫ್‌ಐಆರ್ (FIR) ದಾಖಲು ಮಾಡಲಾಗಿದೆ. ಶ್ರೇಯಸ್ ಹಾಗೂ ಆತನ ಸ್ನೇಹಿತನ ವಿರುದ್ಧ ಪಬ್ ಮ್ಯಾನೇಜರ್ ದೂರು ನೀಡಿದ್ದು, ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಗುಡ್ಡ ಕುಸಿದು ಮೂವರು ಕೂಲಿ ಕಾರ್ಮಿಕರ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಬೆಂಗಳೂರು: ಬೆಳಗಾವಿ ಮಾತ್ರವಲ್ಲ ಬೆಂಗಳೂರಿನಲ್ಲೂ ಅನ್ಯಭಾಷಿಕರ ದರ್ಬಾರ್ ಆರಂಭವಾಗಿದೆ. ಪಬ್‍ನಲ್ಲಿ ಕನ್ನಡ ಹಾಡು ಕೇಳೋದೇ ತಪ್ಪಾ ಅನ್ನೋ ಪ್ರಶ್ನೆ ಎದ್ದಿದೆ. ಕನ್ನಡ ಹಾಡು ಕೇಳಿದ್ದಕ್ಕೆ ಡಿಜೆ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಪಬ್‍ನಲ್ಲಿ ಈ ಘಟನೆ ನಡೆದಿದೆ. ವಿವೇಕನಗರದ ನಿವಾಸಿ ಸುಮಿತಾ ಫ್ಯಾಮಿಲಿ ನಿನ್ನೆ ರಾತ್ರಿ ಬದ್ಮಾಶ್ ಪಬ್‍ನಲ್ಲಿ ಸಹೋದರ ನಂದಕಿಶೋರ್ ಬರ್ತ್ ಡೇ ಪಾರ್ಟಿಗೆ ಬಂದಿತ್ತು. ಬರೀ ಅನ್ಯಭಾಷೆ ಹಾಡುಗಳನ್ನೇ ಪ್ಲೇ ಮಾಡ್ತಿದ್ದ ಡಿಜೆಗೆ ಕನ್ನಡ ಹಾಡು ಹಾಕಿ ಅಂತ ಸುಮಿತಾ ಕುಟುಂಬ ಕೇಳಿಕೊಂಡಿದೆ. ಈ ವೇಳೆ ಡಿಜೆ, ಕನ್ನಡ ಗಿನ್ನಡ ಇಲ್ಲ, ಕನ್ನಡ ಬೇಕು ಅಂದ್ರೇ ಈ ಪಬ್ ಗೆ ಬರಬೇಡಿ ಎಂದು ಆವಾಜ್ ಹಾಕಿದ್ದಾನೆ. ಇದನ್ನೂ ಓದಿ: 40 ವರ್ಷಗಳ ನಂತರ ತನ್ನ ಮೂಲ ಹುಡುಕುತ್ತಾ ಬಂದ ಸ್ವೀಡನ್ ಪ್ರಜೆ!

    ಆವಾಜ್ ಮಾತ್ರವಲ್ಲ ಡಿಜೆ ಸಿದ್ದಾರ್ಥ ಅಲಿಯಾಸ್ ಡಿಜೆ ಅಪೋಸಿಟ್ ಹಲ್ಲೆ ಮಾಡಲು ಸಹ ಮುಂದಾಗಿದ್ದ. ರಾತ್ರಿ 8:30 ರಿಂದ 12:30ರ ವರೆಗೂ ಕೇಳಿಕೊಂಡ್ರು ಕನ್ನಡ ಸಾಂಗ್ ಪ್ಲೇ ಮಾಡಲೇ ಇಲ್ಲ ಎಂದು ಕುಟುಂಬ ಆರೋಪಿಸಿದೆ. ಇದರಿಂದ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಹಾಗೂ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತು ಎಂಬುದು ಸ್ಪಷ್ಟವಾಗಿದೆ. ಕನ್ನಡಿಗರು ಬೆಂಗಳೂರಿನ ಪಬ್ ಗೆ ಹೋಗೊ ಹಾಗೇ ಇಲ್ವಾ, ಪಬ್ ಗೆ ಹೋದ್ರೆ ಕನ್ನಡ ಸಾಂಗ್ ಹಾಕಿ ಅಂತ ಕೇಳಲೇಬಾರದಾ ಎಂಬ ಅನುಮಾನ ಮೂಡಿದೆ.

  • ಕನ್ನಡದಲ್ಲಿ ಕೊನೆಯ ಬಾರಿ ಕೊರೊನಾ ಜಾಗೃತಿ ಗೀತೆಗೆ ದನಿಯಾಗಿದ್ರು ಎಸ್‍ಪಿಬಿ

    ಕನ್ನಡದಲ್ಲಿ ಕೊನೆಯ ಬಾರಿ ಕೊರೊನಾ ಜಾಗೃತಿ ಗೀತೆಗೆ ದನಿಯಾಗಿದ್ರು ಎಸ್‍ಪಿಬಿ

    ಬೆಂಗಳೂರು: ಗಾನ ಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು ವಿಧಿವಶರಾಗಿದ್ದು, ಹಲವು ಭಾಷೆಗಳಲ್ಲಿ ಹಾಡಿರುವ ಹಾಡುಗಳನ್ನು ನಾವಿಂದು ನೆನಪಿಸಿಕೊಳ್ಳಬಹುದು.

    ಮೂಲತಃ ಕರ್ನಾಟಕದವರು ಅಲ್ಲದಿದ್ದರೂ ಅವರು ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಿದ್ದರು. ಅವರು ಕೊನೆಯ ಬಾರಿ ಕನ್ನಡದಲ್ಲಿ ಕೊರೊನಾ ಕುರಿತ ಹಾಡು ಹಾಡಿ ಜನ ಮೆಚ್ಚುಗೆ ಪಡೆದಿದ್ದರು.

    ಗೀತೆ ರಚನೆಕಾರರು ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಕೊರೊನಾ ಜಾಗೃತಿ ಕುರಿತಂತೆ ಗೀತೆಯೊಂದನ್ನು ರಚಿಸಿದ್ದು, ಅದಕ್ಕೆ ಎಸ್‍ಪಿಬಿ ದನಿಯಾಗಿದ್ದರು. ಈ ಜಾಗೃತಿ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನೂ ಓದಿ: ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡ್ತೀನಿ ಅಂದಿದ್ರು ಗಾನ ಗಂಧರ್ವ

    ಜಯಂತ್ ಕಾಯ್ಕಿಣಿಯವರು ಕೇವಲ ಸಾಹಿತ್ಯ, ಸಿನಿಮಾ ಗೀತೆ ರಚಿಸುವುದು ಮಾತ್ರವಲ್ಲ, ಸಮಾಜದ ಆಗುಹೋಗುಗಳ ಕುರಿತು ಸಹ ಆಗಾಗ ಪ್ರತಿಕ್ರಿಯಿಸುತ್ತಿರುತ್ತಾರೆ. ಹಲವು ಸಂದರ್ಭಗಳಲ್ಲಿ ವಿವಿಧ ಸಲಹೆಗಳನ್ನು ಸಹ ನೀಡುತ್ತಾರೆ. ಹಲವು ಬಾರಿ ಅವರ ಗೀತೆಗಳ ಮೂಲಕವೇ ಜನರಲ್ಲಿ ಅರಿವು ಮೂಡಿಸುತ್ತಾರೆ. ಅದರಂತೆ ಕೊರೊನಾ ಬಗ್ಗೆ ಜಾಗೃತಿ ಗೀತೆಯನ್ನು ರಚಿಸಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದ್ದರು. ಹೀಗಾಗಿ ಈ ಹಾಡಿಗೆ ಮಹತ್ವ ಇನ್ನೂ ಹೆಚ್ಚಾಗಿತ್ತು.

    ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಹಲವರು ಈ ಕುರಿತು ಕಮೆಂಟ್ ಮಾಡಿದ್ದು, ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್, ಜಯಂತ್ ಕಾಯ್ಕಿಣಿಯವರು ಅರ್ಥಗರ್ಭಿತವಾಗಿ ಸಾಹಿತ್ಯ ಬರೆದಿದ್ದಾರೆ. ನೀವೂ ಅದಕ್ಕೆ ನ್ಯಾಯ ಒದಗಿಸಿದ್ದೀರಿ. ಕೇಳಲು ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದರು.

    ಕೊರೊನಾ ಹಿನ್ನೆಲೆಯಲ್ಲಿ ಆಗಸ್ಟ್ 5ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍ಪಿಬಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಎಸ್‍ಪಿಬಿ ಅವರ ಮರಣದ ಬಳಿಕ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 4ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು ಎಂದು ತಿಳಿಸಿದೆ.

  • ಕೃಷ್ಣ ಜನಾರ್ದನ ಯದುನಂದನ ಕೃಷ್ಣ.. ಶರಾಯು ಹಾಡು ರಿಲೀಸ್‌

    ಕೃಷ್ಣ ಜನಾರ್ದನ ಯದುನಂದನ ಕೃಷ್ಣ.. ಶರಾಯು ಹಾಡು ರಿಲೀಸ್‌

    ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಹಲವೆಡೆ ಮಕ್ಕಳು ಕೃಷ್ಣನ ವೇಷ ಧರಿಸಿದರೆ ಇನ್ನು ಕೆಲವರು ಹಾಡಿನ ಮೂಲಕ ಕೃಷ್ಣನನ್ನು ಸ್ತುತಿಸುತ್ತಾರೆ. ಅದೇ ರೀತಿಯಾಗಿ ಬೆಂಗಳೂರಿನ ಬಾಲಕಿಯೊಬ್ಬಳು ಕೃಷ್ಣನ ಹಾಡನ್ನು ಹಾಡಿದ್ದಾಳೆ.

    4ನೇ ತರಗತಿ ಓದುತ್ತಿರುವ ಶರಾಯು ಯತೀಶ್‌ “ಕೃಷ್ಣ ಜನಾರ್ದನ ಯದುನಂದನ ಕೃಷ್ಣ ಮಧುಸೂದನ…” ರಿಮಿಕ್ಸ್‌ ಹಾಡನ್ನು ಹಾಡಿದ್ದಾಳೆ. ಒಟ್ಟು 4 ನಿಮಿಷ 37 ಸೆಕೆಂಡ್‌ ಇಡುವ ವಿಡಿಯೋ ಯೂ ಟ್ಯೂಬ್‌ನಲ್ಲಿ ಅಪ್ಲೋಡ್‌ ಆಗಿದೆ.

    ಸಂಗೀತ ಮತ್ತು ಸಾಹಿತ್ಯವನ್ನು ಅನುಪಮಾ ನೀಡಿದ್ದರೆ ಸ್ಯಾಮ್ ಅವರು ಪ್ರೋಗ್ರಾಮಿಂಗ್ ಮಾಡಿದ್ದಾರೆ. ಫಣೀಂದ್ರ ರೆಡ್ಡಿ ಛಾಯಾಗ್ರಹಣ ಮಾಡಿದ್ದು, ಯತೀಶ್ ವೆಂಕಟೇಶ್‌ ಹಾಡಿನ ನಿರ್ಮಾಪಕರಾಗಿದ್ದಾರೆ. ಸಂಭ್ರಮ್ ಸ್ಟುಡಿಯೋದಲ್ಲಿ ರೆಕಾರ್ಡ್‌ ಮಾಡಲಾಗಿದ್ದು, ಹಾಡು ಸುಂದರವಾಗಿ ಮೂಡಿ ಬಂದಿದೆ. ಶರಾಯು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಮೊಮ್ಮಗಳು.

  • ಆಂಧ್ರ ಗಡಿಭಾಗದಲ್ಲಿ ಕನ್ನಡದ ಕಂಪು – ಕನ್ನಡ ಹಾಡಿನಿಂದಲೇ ಜಾಗೃತಿ ಮೂಡಿಸುವ ಗ್ರಾ.ಪಂ. ಸದಸ್ಯ

    ಆಂಧ್ರ ಗಡಿಭಾಗದಲ್ಲಿ ಕನ್ನಡದ ಕಂಪು – ಕನ್ನಡ ಹಾಡಿನಿಂದಲೇ ಜಾಗೃತಿ ಮೂಡಿಸುವ ಗ್ರಾ.ಪಂ. ಸದಸ್ಯ

    ಚಿತ್ರದುರ್ಗ: ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿರುವ ಶಾಲಾ ಕಾಲೇಜುಗಳಲ್ಲೇ ಕನ್ನಡ ಮಾತನಾಡೋದು, ಓದೋದು ಕಡಿಮೆ. ಹೀಗಾಗಿ ಉದ್ಯಾನವನಗಳಲ್ಲಿ ಮತ್ತು ಜನನಿಬಿಡ ಪ್ರದೇಶದಲ್ಲಿ ಕನ್ನಡ ಹಾಡನ್ನು ಹಾಡುತ್ತಾ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಹಿರೆಕೇರೂರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ.

    ಹಿರೆಕೇರೂರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಲೋಕೇಶ್ ಪಲ್ಲವಿ ಅವರು ಕನ್ನಡದ ಜಾಗೃತಿ ಹಾಡುಗಳ ಮೂಲಕ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜ ಪರಿವರ್ತನೆಗಾಗಿ ಶ್ರಮವಹಿಸುತಿದ್ದಾರೆ.

    ಲೋಕೇಶ್ ಪಲ್ಲವಿ ಅವರು ಕಳೆದ 15 ವರ್ಷಗಳಿಂದ ಜಾಗೃತಿ ಗೀತೆಗಳು, ಜಾನಪದ ಗೀತೆಗಳು, ಚಿತ್ರ ಗೀತೆಗಳು ಹಾಗೂ ದೇಶ ಭಕ್ತಿಗೀತೆಗಳನ್ನು ಸ್ವಯಂ ರಚಿಸಿ ಹಾಡುತ್ತಿದ್ದಾರೆ. ಇವರು ಆಂಧ್ರ ಹಾಗೂ ಕರ್ನಾಟಕದ ಗಡಿಭಾಗದಲ್ಲಿರುವ ಹಿರೆಕೇರೂರಹಳ್ಳಿಯ ಗ್ರಾಮಪಂಚಾಯ್ತಿ ಸದಸ್ಯರಾಗಿದ್ದು, ಜಿಲ್ಲೆಯಾದ್ಯಂತ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಅನುಭವಿಸುವ ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಅತ್ಯಾಚಾರ, ಬಾಲಕಾರ್ಮಿಕ ಪದ್ಧತಿ ಹಾಗೂ ಸಾಮಾಜಿಕ ಅಸಮಾನತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ಶಾಲೆಯಿಂದ ವಂಚಿತರಾದ ಮಕ್ಕಳನ್ನು ಶಾಲೆಗೆ ಕರೆತರುವಂತಹ ಆಕರ್ಷಕ ಹಾಡುಗಳನ್ನು ರಚಿಸಿರುವುದರ ಜೊತೆಗೆ ಹಲವು ಚಿತ್ರಗೀತೆಗಳನ್ನು ಸಹ ಲೋಕೇಶ್ ರಚಿಸಿದ್ದಾರೆ. ಇವರ ಸಾಮಾಜಿಕ ಕಳಕಳಿ ಹಾಗೂ ಜಾಗೃತಿ ಭಾವ ಕಂಡ ಜಿಲ್ಲೆಯ ಜನರು ಕೂಡ ಇವರನ್ನು ಮನಸಾರೆ ಹೊಗಳಿದ್ದು, ಸಾಮಾಜಿಕ ಪಿಡುಗುಗಳನ್ನು ನಿವಾರಣೆ ಮಾಡುವಲ್ಲಿ ಲೋಕೇಶ್ ಅವರ ಸೇವೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಇವರ ಸೇವೆ ಇನ್ನಷ್ಟು ಹೆಚ್ಚಾಗಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.

    ಆಂಧ್ರ ಗಡಿಭಾಗದಲ್ಲಿದ್ದರೂ ಸಹ ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ ತಮ್ಮ ಗಾಯನದ ಕಲೆಯನ್ನು ಉಳಿಸಿಕೊಳ್ಳುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡ್ತಿರೋ ಲೋಕೇಶ್ ಕಾರ್ಯ ಇತರರಿಗೆ ಮಾದರಿಯಾಗಿದೆ.

  • ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಅಣ್ಣಾವ್ರು -ವಿಷ್ಣು ದಾದ ಹಾಡುಗಳ ಕಂಪು

    ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಅಣ್ಣಾವ್ರು -ವಿಷ್ಣು ದಾದ ಹಾಡುಗಳ ಕಂಪು

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯ ಭರ್ಜರಿಯಾಗಿ ನಡೆಯಿತು. ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಆಯ್ತು. ಬೆಂಗಳೂರಿಗರಿಗೆ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಭಾರತದ ಬ್ಯಾಟ್ಸ್ ಮನ್ ಗಳು ರಸದೌತಣ ನೀಡಿದರು. ಇದು ನಿಜವಾದ ವಿಶೇಷ ಅಲ್ಲ. ಪಂದ್ಯದಲ್ಲಿ ಕನ್ನಡದ ವೈಭವ ಹಬ್ಬಿದ್ದು ವಿಶೇಷ. ಹೌದು. ನಿನ್ನೆಯ ಪಂದ್ಯದಲ್ಲಿ ಕನ್ನಡ ಹಾಡುಗಳ ಕಂಪು ಎಲ್ಲರನ್ನೂ ಮನಸೋರೆಗೊಳಿಸಿತು.

    ಪಂದ್ಯ ಪ್ರಸಾರದವಾದ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಈಗ ಕನ್ನಡ ವೀಕ್ಷಕ ವಿವರಣೆ ಲಭ್ಯವಾಗುತ್ತಿದೆ. ನಿನ್ನೆಯ ವೀಕ್ಷಕ ವಿವರಣೆ ಪ್ಯಾನಲ್ ಸಖತ್ ವಿಶೇಷವಾಗಿತ್ತು. ಭಾರತದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್ ಹಾಗೂ ವಿಜಯ್ ಭಾರದ್ವಾಜ್ ನಿನ್ನೆ ವೀಕ್ಷಕ ವಿವರಣೆ ಜೊತೆ ಕನ್ನಡ ಹಾಡುಗಳ ಸುಧೆ ಹರಿಸಿ ಕೇಳುಗರ ಮನ ಗೆದ್ದರು.

    ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಈ ಇಬ್ಬರು ಮಾಜಿ ಆಟಗಾರರು ಪದ್ಮಭೂಷಣ ಡಾ.ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್ ಹಾಡುಗಳನ್ನು ಹಾಡೋ ಮೂಲಕ ಕನ್ನಡದ ಕಂಪು ಹರಿಸಿದರು. ವೆಂಕಟೇಶ್ ಪ್ರಸಾದ್ ಅಂತು ಅದ್ಭುತವಾಗಿ ಕಾಮೆಂಟ್ರಿ ಜೊತೆ ಹಾಡನ್ನು ಹಾಡಿ ಎಲ್ಲರ ಮನಗೆದ್ದರು. ಇದನ್ನೂ ಓದಿ: ಆಸೀಸ್ ವಿರುದ್ಧ ರೋಹಿತ್, ವಿರಾಟ್ ಅಬ್ಬರ- ಸರಣಿ ಗೆದ್ದ ಭಾರತ

    ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಜಿಮ್ಮಿಗಲ್ಲು’ ಚಿತ್ರದ ‘ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ’ ಹಾಡು ಹಾಡಿದರು. ಅದಲ್ಲದೆ ರಾಜ್ ಕುಮಾರ್ ಅವರ ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ ಕಲಕಿ ಉಕ್ಕಿದೆ ದ್ವೇಷದ ಬೆಂಕಿ’ ಗೀತೆ ಹಾಗೂ ‘ವಿಜಯನಗರ ವೀರಪುತ್ರ’ ಚಿತ್ರದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ಹಾಡು ಹೇಳಿ ಮನರಂಜನೆ ನೀಡಿದರು.

    ವಿಜಯ್ ಭಾರದ್ವಾಜ್ ‘ಭಕ್ತ ಕುಂಬಾರ’ ಚಿತ್ರದ ‘ಮಾನವ ದೇಹವು ಮೂಳೆ ಮಾಂಸದ ತಡಿಕೆ’ ಹಾಡು ಮತ್ತು ದಾಸರ ಪದವನ್ನ ಹಾಡಿ ಮುದ ನೀಡಿದರು. ಈ ಇಬ್ಬರ ಕನ್ನಡ ಹಾಡಿನ ಮೋಡಿಗೆ ಜನರು ಕೂಡ ಟ್ವೀಟ್ ಮಾಡಿ ಅಭಿನಂದನೆಗಳ ಮಹಾಪೂರ ಹರಿಸಿದರು.

  • ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 64ನೇ ಕನ್ನಡ ಹಬ್ಬ ರಂಗೇರಿದ್ದು, ಅಂಗವಿಕಲ ಕನ್ನಡ ಪ್ರೇಮಿಯೊಬ್ಬ ಕನ್ನಡ ಡಿಜೆ ಹಾಡಿಗೆ ಊರುಗೋಲು ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ.

    ಹುಕ್ಕೇರಿ ತಾಲೂಕಿನ ಗುಟಗುದ್ದಿಯ ಅಶೋಕ್ ಕಳಸನ್ನ ಅವರು ಹುಟ್ಟು ಅಂಗವಿಕಲರಾಗಿದ್ದು, ಬಹುದೊಡ್ಡ ಕನ್ನಡ ಪ್ರೇಮಿಯಾಗಿದ್ದಾರೆ. ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಡಿಜೆ ಅಳವಡಿಕೆ ಮಾಡಲಾಗಿತ್ತು. ಇಲ್ಲಿ ಆಶೋಕ್ ಅವರು ಮಲ್ಲ ಚಿತ್ರದ ಹಾಡಿಗೆ ಊರುಗೋಲು ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ.

    ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನ ಮಧ್ಯರಾತ್ರಿಯೇ ಆಚರಣೆ ಮಾಡುವ ಮೂಲಕ ಕುಂದಾನಗರಿಯಲ್ಲಿ ಕನ್ನಡಿಗರು ಸಂಭ್ರಮಿಸಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಸರಿಯಾಗಿ 12 ಗಂಟೆಗೆ ಕನ್ನಡಪರ ಸಂಘಟನೆ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಕನ್ನಡ ಹಬ್ಬ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ, ಮಳೆಯಲ್ಲೇ ಕನ್ನಡ ಗೀತೆಗಳಿಗೆ ಸ್ಟೆಪ್ಸ್ ಹಾಕಿದರು. 2005ರ ನಂತರ ಮೊದಲ ಬಾರಿಗೆ ಡಿಸಿ ಕಚೇರಿ ಮುಂಭಾಗದಲ್ಲಿ ಕನ್ನಡದ ಧ್ವಜವನ್ನು ಹಾರಿಸುವುದರ ಮೂಲಕ ಖುಷಿ ಪಟ್ಟರು.

    ಡಿಸಿ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣಕ್ಕೆ ಪೊಲೀಸರು ಕಾವಲಿದ್ದು, ಧ್ವಜಕ್ಕೆ ಧಕ್ಕೆಯಾಗದಂತೆ ನೋಡಿಕೊಂಡರು. ಮಧ್ಯರಾತ್ರಿ ಕನ್ನಡಿಗರೆಲ್ಲರೂ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದು, ಇಂದು ಇಡೀ ದಿನ ಕುಂದಾನಗರಿಯಲ್ಲಿ ಕನ್ನಡದ ಕಂಪು ಪಸರಿಸಲಿದೆ.

  • ಕನ್ನಡದ ಕುವರನಿಗೆ ಅವಮಾನ- ಹಿಂದಿ ಬರಲ್ಲ ಅಂತ ಮೈಕ್ ಕಸಿದುಕೊಂಡ್ರು

    ಕನ್ನಡದ ಕುವರನಿಗೆ ಅವಮಾನ- ಹಿಂದಿ ಬರಲ್ಲ ಅಂತ ಮೈಕ್ ಕಸಿದುಕೊಂಡ್ರು

    ಕಲಬುರಗಿ: ರಾಜ್ಯದಲ್ಲಿ ನಮ್ಮ ಹಾವೇರಿಯ ಕುರಿಗಾಹಿ, ಗಾಯಕ ಹನುಮಂತ ಹವಾ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇಂತಹ ಹನುಮಂತರನ್ನು ಕಲಬುರಗಿಯ ಓರ್ವ ಆಯೋಜಕರು ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ. ಇದು ಇದೀಗ ಕಲಬುರಗಿ ಸೇರಿದಂತೆ ರಾಜ್ಯದ ಜನರಲ್ಲಿ ಆಯೋಜಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹನುಮಂತು ಅಂದ್ರೆ ಸಾಕು ಕಲಬುರಗಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಹೀಗಾಗಿಯೇ ಕಲಬುರಗಿಯಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮ ಆಯೋಜಿಸಿ (ದಿ ಸ್ಟಾರ್ ವರ್ಲ್ಡ್  ಹಾನರ್ಸ್ ದಿ ಬ್ರೇವ್ ಹಾರ್ಟ್ಸ್) ಆಯೋಜಕರು ಹನುಮಂತರನ್ನು ಕರೆಸಿದ್ದರು. ಹೀಗಾಗಿ ಅವರ ಅಪಾರ ಅಭಿಮಾನಿಗಳು ಜವಾರಿ ಸಾಂಗ್ ಕೇಳಲು ಕಾಯುತ್ತಿದ್ದರು. ಅಷ್ಟರಲ್ಲಿ ಅಲ್ಲಿ ನಿರೂಪಣೆ ಮಾಡುತ್ತಿದ್ದ ವ್ಯಕ್ತಿ ಹನುಮಂತ ಅವರ ವೇಷ ಭೂಷಣ ಕಂಡು ಜೋಕ್ ಮಾಡಿದ್ದು, ಹಿಂದಿಯಲ್ಲಿ ಮಾತನಾಡಲು ಹೇಳಿ ಹನುಮಂತನಿಗೇ ಕಿಂಡಲ್ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆ ನಿರೂಪಕ ನಿನಗೆ ಹಿಂದಿ ಬರಲ್ಲ ನನಗೇ ಕನ್ನಡ ಬರಲ್ಲ ಅಂತಾ ಹನುಮಂತನ ಕೈಯಲ್ಲಿದ್ದ ಮೈಕ್ ಕಸಿದುಕೊಂಡಿದ್ದಾರೆ. ಆ ಮೈಕ್‍ನ್ನು ಕಸಿದು ಹಿಂದಿ ಬಿಗ್‍ಬಾಸ್-9ರ ಸೀಸನ್‍ನ ಖ್ಯಾತಿಯ ನಟಿ ಸೋನಾಲಿ ರಾವತ್‍ಗೆ ನೀಡಿದ್ದಾರೆ. ಇದನ್ನೂ ಓದಿ: ಸರಿಗಮಪ ವೇದಿಕೆಯಲ್ಲಿ ಹನುಮಂತ ತಂಗಿಗೆ ಸಿಕ್ತು ಅಚ್ಚರಿಯ ಉಡುಗೊರೆ

    ಈ ಕಾರ್ಯಕ್ರಮಕ್ಕೆ ಡಬ್ಲೂಡಬ್ಲೂಇ ಖ್ಯಾತಿಯ ದಿ ಗ್ರೇಟ್ ಖಲಿ ಸಹ ಆಗಮಿಸಿದ್ದು, ಖಲೀ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಇತರೆ ಕಲಾವಿದರನ್ನು ವೇದಿಕೆಗೆ ಕರೆಯಲಾಗಿತ್ತು. ಆದರೆ ಮುಗ್ಧ ಮನಸ್ಸಿನ ಹನುಮಂತನನ್ನು ಮೈಕ್ ಕಸಿದು ಕೆಳಗೆ ಕಳುಹಿಸಿದ ನಂತರ ಸೌಜನ್ಯಕ್ಕೂ ಸಹ ವೇದಿಕೆಗೆ ಕರೆಯಲಿಲ್ಲ. ಅದೇ ವೇದಿಕೆಯಲ್ಲಿ ಹಿಂದಿಯ ಸರಿಗಮಪ ಸಿಂಗರ್, ಜಯಶ್ ಕುಮಾರ್ ಕನ್ನಡದ ಚುಟು ಚುಟು ಅಂತೈದೇ ಅಂತಾ ಹಾಡು ಹಾಡಲು ಮುಂದಾದ್ರೆ, ಆತನ ಹಾಡಿಗೆ ಮ್ಯೂಸಿಕ್ ಹಾಕದೇ ಅರ್ಧದಲ್ಲಿಯೇ ಆತನ ಹಾಡು ನಿಲ್ಲಿಸಲಾಯ್ತು. ಆತನನ್ನು ಸಹ ವೇದಿಕೆಯಿಂದ ಕರೆಸಿ ಮತ್ತೆ ಕನ್ನಡಕ್ಕೆ ಅವಮಾನ ಮಾಡಲಾಯಿತು. ಇದನ್ನೂ ಓದಿ: ಅಂದುಕೊಂಡಿದ್ದೆ ಆಯ್ತು, ಖುಷಿ ತಡೆಯಲು ಆಗ್ತಿಲ್ಲ: ರನ್ನರ್ ಅಪ್ ಹನುಮಂತ

    ಹನುಮಂತ ಬರ್ತಾರೆ ಅಂತ ಬಹುತೇಕರು ಕಾರ್ಯಕ್ರಮಕ್ಕೆ ಬಂದಿದ್ದರು. ಹಿಂದಿ ನಟರು ಬಂದ ಕೂಡಲೇ ಹನುಮಂತರ ಮೈಕ್ ಕಸಿದುಕೊಂಡರು. ಹಿಂದಿ ಗಾಯಕರಿಂದಲೇ ಹಾಡುಗಳನ್ನು ಹಾಡಿಸಿದರು. ಹನುಮಂತ ಅವರಿಗೆ ಹಿಂದಿ, ಇಂಗ್ಲಿಷ್ ಬರಲ್ಲ ಎಂದು ಕಾರ್ಯಕ್ರಮ ನಿರೂಪಕ ಅವಮಾನ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಡಿಸಲು ಆಯೋಜಕರು ಹಿಂದೇಟು ಹಾಕಿದ್ದು ಕನ್ನಡಕ್ಕೆ ಅವಮಾನವಾಗಿದೆ. ಇಲ್ಲಿ ಕೇವಲ ಹನುಮಂತ ಅವರಿಗೆ ಮಾತ್ರ ಅವಮಾನವಾಗಿಲ್ಲ, ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಕನ್ನಡಿಗರು ಅವಮಾನವಾದಂತೆ ಎಂದು ಕರವೇ ಸದಸ್ಯ ರವಿ ಖಂಡಿಸಿದ್ದಾರೆ. ಇದನ್ನೂ ಓದಿ: ಮೈ ಮರೆತು ಹಾಡು ಹೇಳ್ತಿದ್ದ ಹನುಮಂತನ ಮೊಬೈಲ್ ಕದ್ದ ಕಳ್ಳರು

    ಹನುಮಂತನನ್ನು ವೇದಿಕೆಯೇ ಅವಮಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಮಳೆ ಬಂದಿರುವ ಹಿನ್ನೆಲೆ, ಕಾರ್ಯಕ್ರಮವನ್ನು ಆಯೋಜಕರು ಸ್ಥಗಿತ ಮಾಡಿ ಸ್ಥಳದಿಂದ ಕಾಲ್ಕಿತ್ತರು. ಈ ಮೂಲಕ ಹನುಮಂತು ಹಾಡಿಗಾಗಿ ಬಂದಿದ್ದ ಅಭಿಮಾನಿಗಳು ಗಾಯಕನಿಗೆ ಅವಮಾನ ಹಾಗೂ ಹಾಡು ಕೇಳದ ಹಿನ್ನೆಲೆ ಆಕ್ರೋಶ ಹೊರಹಾಕಿದರು. ನೂರಾರು ಕಿಮೀನಿಂದ ದೂರ ಕರೆಸಿ ಈ ರೀತಿ ಅವಮಾನ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಒಂದೇ ಒಂದು ಚಾನ್ಸ್ ಕೊಡಿ – ಹನುಮಂತ ಅಭಿಮಾನಿ ಮನವಿ

  • ಹಿಂದಿ ಹಾಡು ಹಾಕಿದ್ದಕ್ಕೆ ಕಸದ ವಾಹನದ ಡ್ರೈವರ್‌ಗೆ ತರಾಟೆ

    ಹಿಂದಿ ಹಾಡು ಹಾಕಿದ್ದಕ್ಕೆ ಕಸದ ವಾಹನದ ಡ್ರೈವರ್‌ಗೆ ತರಾಟೆ

    ಬೆಂಗಳೂರು: ಮಾಲ್‍ಗಳಲ್ಲಿ, ಶಾಪ್‍ಗಳಲ್ಲಿ, ಜಿಮ್ ಸೆಂಟರ್ ನಲ್ಲಿ ಕನ್ನಡ ಹಾಡು ಹಾಕಿಲ್ಲ ಎಂದು ಕೆಲ ಕನ್ನಡಿಗರು ಜಗಳ ಮಾಡುವುದು ಕಾಮನ್. ಆದರೆ ಈಗ ಈ ಗಲಾಟೆ ಟ್ರೆಂಡು ಬಿಬಿಎಂಪಿ ಕಸದ ಗಾಡಿಗೆ ಶಿಫ್ಟ್ ಆಗಿದೆ.

    ಶ್ರೀನಗರದಲ್ಲಿ ಕಸದ ಗಾಡಿ ಡ್ರೈವರ್ ಇಡೀ ಊರಿಗೆ ಕೇಳುವಂತೆ ನಿತ್ಯ ಹಿಂದಿ ಹಾಡು ಹಾಕಿಕೊಂಡು ಕಸ ಸಂಗ್ರಹಣೆ ಮಾಡುವುದಕ್ಕೆ ಬರುತ್ತಿದ್ದನು. ಇವನ ಕಾಟ ತಾಳಲಾರದೇ ಕೆಲ ಕನ್ನಡಿಗರು ಹಿಂದಿ ಹಾಡು ಹಾಕಿದ್ದಕ್ಕೆ ಸರಿಯಾಗಿ ಬೆಂಡೆತ್ತಿದ್ದಾರೆ.

    ಅಷ್ಟೇ ಅಲ್ಲದೇ ಕಸದ ಗಾಡಿಯಲ್ಲಿ ಈಗ ಡಾ. ರಾಜ್‍ಕುಮಾರ್ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಹಾಕುವಂತೆ ಗಲಾಟೆ ಮಾಡಿದ್ದಾರೆ. ಕೊನೆಗೆ ಬೆದರಿದ ಡ್ರೈವರ್ ಕನ್ನಡ ಹಾಡನ್ನೇ ಹಾಕುತ್ತೇನೆ ಎಂದು ಹೇಳಿ ಹೋಗಿದ್ದಾನೆ.

    ಈ ವಿಡಿಯೋ ಈಗ ವೈರಲ್ ಆಗಿದೆ. ಕೆಲವರು ಈ ಸಿಲ್ಲಿ ಮ್ಯಾಟ್ರಿಗೆಲ್ಲ ಈ ರೀತಿ ಗಲಾಟೆ ಮಾಡಬೇಕಾ ಎಂದು ಹೇಳಿದರೆ, ಮತ್ತೆ ಕೆಲವರು ಸರಿಯಾಗೇ ಮಾಡಿದ್ದೀರಿ ಎಂದು ಬೆನ್ನು ತಟ್ಟಿದ್ದಾರೆ.