Tag: Kannada Sahitya Sammelan

  • Mandya| ಧ್ವಜಾರೋಹಣದ ಮೂಲಕ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

    Mandya| ಧ್ವಜಾರೋಹಣದ ಮೂಲಕ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

    ಮಂಡ್ಯ: ಶುಕ್ರವಾರದಿಂದ ಮೂರು ದಿನಗಳ ಕಾಲ ಮಂಡ್ಯದ (Mandya) ಸ್ಯಾಂಜೋ ಆಸ್ಪತ್ರೆ ಹಿಂಭಾಗ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Literary Conference) ಅದ್ಧೂರಿ ಚಾಲನೆ ದೊರತಿದೆ.

    ರಾಷ್ಟ್ರ ಧ್ವಜ, ನಾಡ ಧ್ವಜ ಹಾಗೂ ಪರಿಷತ್ತಿನ ಧ್ವಜಗಳ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ. ಸಮ್ಮೇಳನದ ಪ್ರಧಾನ ವೇದಿಕೆ ಮುಖ್ಯದ್ವಾರದ ಮುಂಭಾಗ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ. ಸಚಿವ ಚಲುವರಾಯಸ್ವಾಮಿ (Chaluvarayaswamy) ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದು, ಕ.ಸಾ.ಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ (Mahesh Joshi) ನಾಡ ಧ್ವಜಾರೋಹಣ ಮಾಡಿದರು. ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ ಪರಿಷತ್ತು ಧ್ವಜ ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧ್ವಜಾರೋಹಣದ ವೇಳೆ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಡಿಸಿ ಡಾ.ಕುಮಾರ್, ಸಿಇಓ ಶೇಕ್ ತನ್ವೀರ್ ಆಸೀಫ್, ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಉಪಸ್ಥಿತರಿದ್ದರು. ಇದನ್ನೂ ಓದಿ: ರಕ್ತ ಬರುವಂತೆ ಸಿ.ಟಿ ರವಿ ಮೇಲೆ ಹಲ್ಲೆ – ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆಂದು ಚೀರಾಡಿದ ಎಂಎಲ್‌ಸಿ

    ಇಂದಿನಿಂದ ಮೂರು ದಿನ ಮಂಡ್ಯದಲ್ಲಿ ನುಡಿಹಬ್ಬದ ಕಲರವ ನಡೆಯಲಿದ್ದು, ಸಕ್ಕರೆ ನಗರಿ ಸಂಪೂರ್ಣ ಸಜ್ಜಾಗಿದೆ. ಮೂರು ದಶಕಗಳ ಬಳಿಕ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, 80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ ಹಾಗೂ ಎರಡು ಸಮಾನಂತರ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಕೆಆರ್‌ಎಸ್ ಡ್ಯಾಂ ಮಾದರಿಯಲ್ಲಿ ಪ್ರಧಾನ ವೇದಿಕೆ ನಿರ್ಮಾಣಗೊಂಡಿದೆ. ವೇದಿಕೆ ಸೇರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕನ್ನಡ ಬಾವುಟ ರಾರಾಜಿಸುತ್ತಿದೆ. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದ್ದು, 11 ಗಂಟೆಯ ವೇಳೆಗೆ ಸಿಎಂ ಸಿದ್ದರಾಮಯ್ಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿಕೆಶಿ, ಉಸ್ತುವಾರಿ ಸಚಿವ ಸೇರಿ ಸಚಿವರು, ಶಾಸಕರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ನೂಕಾಟದಿಂದ ಬಿಜೆಪಿಯ ಇಬ್ಬರು ಸಂಸದರಿಗೆ ಗಾಯ – ರಾಹುಲ್‌ ಗಾಂಧಿ ವಿರುದ್ಧ FIR

    ಮಧ್ಯಾಹ್ನ 2 ಗಂಟೆಯಿಂದ ಗೋಷ್ಠಿಗಳು ಆರಂಭಗೊಳ್ಳಲಿದೆ. ಸಂಜೆ 7:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಂದು ಸಾಧುಕೋಕಿಲ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯಾಸಕ್ತರಿಗಾಗಿ 450 ಪುಸ್ತಕ ಮಳಿಗೆಗಳು ನಿರ್ಮಾಣಗೊಂಡಿದ್ದು, 350ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಶಿವಮೊಗ್ಗ| ರೈಸ್‌ ಮಿಲ್‌ನಲ್ಲಿ ಬಾಯ್ಲರ್‌ ಸ್ಫೋಟ; 7 ಮಂದಿಗೆ ಗಾಯ

  • 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ನಗರ ಸಜ್ಜು- ಶುಕ್ರವಾರದಿಂದ 3 ದಿನಗಳ ಕಾಲ ಕನ್ನಡ ಹಬ್ಬ

    86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ನಗರ ಸಜ್ಜು- ಶುಕ್ರವಾರದಿಂದ 3 ದಿನಗಳ ಕಾಲ ಕನ್ನಡ ಹಬ್ಬ

    ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನ (Kannada Sahitya Sammelan) ಕ್ಕೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಸಜ್ಜಾಗಿದೆ. ಜನವರಿ 6, 7 ಮತ್ತು 8 ರಂದು ನಡೆಯುವ ಈ ಅದ್ದೂರಿ ಕನ್ನಡ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದೆ.

    ಹಾವೇರಿಯ ಹೊರವಲಯದ ಅಜ್ಜಯ್ಯ ಗುಡಿಯ ಹತ್ತಿರ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಜರ್ಮನ್ (German Technology) ತಂತ್ರಜ್ಞಾನವನ್ನ ಬಳಿಸಿ ಪ್ರಧಾನ ವೇದಿಕೆ ಹಾಗೂ ಪುಸ್ತಕ ಮಳಿಗೆ, ವಸ್ತು ಪ್ರದರ್ಶನ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾಡಳಿತ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

    ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಲಕ್ಷಾಂತರ ಭಾಗಿಯಾಗುವ ಸಾಧ್ಯತೆ ಇದೆ. ಪ್ರತಿ ದಿನ 1.5 ಲಕ್ಷ ಜನರಿಗೆ ಊಟ ಹಾಗೂ 70 ಸಾವಿರ ಜನರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬ ಕನ್ನಡ ಅಭಿಮಾನಿಗಳಿಗೆ ಹೊಟ್ಟೆ ತುಂಬ ಬಗೆ ಬಗೆಯಾದ ಊಟದ ವ್ಯವಸ್ಥೆ ನೀಡಲು ಭರದ ಸಿದ್ಧತೆ ನಡೆದಿದೆ. ಇದನ್ನೂ ಓದಿ: ನಮ್ಮ ಮೀಸಲಾತಿಗೆ ಕನ್ನ- ಸರ್ಕಾರದ ವಿರುದ್ಧ ಬ್ರಾಹ್ಮಣ ಮಹಾಸಭಾ ಕಿಡಿ

    ಸಮ್ಮೇಳನಕ್ಕೆ ಬರುವ ಸಾಹಿತ್ಯಾಭಿಮಾನಿಗಳಿಗೆ ಉತ್ತರ ಕರ್ನಾಟಕ (Uttara Karnataka) ಶೈಲಿಯಲ್ಲಿ ಭರ್ಜರಿ ಊಟ ಮಾಡಲಾಗುತ್ತೆ. 60 ಸಾವಿರ ಜನರಿಗೆ ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಸೀರಾ, ಬೆಲ್ಲದ ಟೀ, 1.5 ಲಕ್ಷ ಜನರಿಗೆ ಮಧ್ಯಾಹ್ನ ಊಟ, ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯಾ, ಚಪಾತಿ, ವೈಟ್ ರೈಸ್, ಸಾಂಬಾರ್, ಉಪ್ಪಿನ ಕಾಯಿ, ಶೇಂಗಾ ಚಟ್ನಿ ಮತ್ತು ಮೊಸರನ್ನು ನೀಡಲಾಗುವುದು. ಇದನ್ನೂ ಓದಿ: ಸರ್ಕಾರ ನಿಗದಿಪಡಿಸಿದ ದರಕ್ಕೆ ಓಲಾ, ಉಬರ್ ಆಕ್ಷೇಪ – ಅಧಿಸೂಚನೆಗೆ ಹೈಕೋರ್ಟ್‌ ತಡೆ

    60 ಸಾವಿರ ಜನರಿಗೆ ರಾತ್ರಿ ಊಟಕ್ಕೆ ಹೆಸರು ಬೇಳೆ, ಪಾಯಸ, ಪುಳಿಯೋಗರೆ, ವೈಟ್ ರೈಸ್, ಸಾಂಬಾರ್, ಉಪ್ಪಿನಕಾಯಿಯನ್ನು ಸಿದ್ಧಪಡಿಸಲಾಗುತ್ತೆ. ಹೀಗೆ ಮೂರು ದಿನವೂ ಬಗೆಬಗೆಯ ಅಡುಗೆ ಮಾಡಲು ಸುಮಾರು 4 ಸಾವಿರ ಬಾಣಸಿಗರ ತಂಡ ಸಜ್ಜಾಗಿದೆ. ಒಟ್ಟಾರೆ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ಮುಧುವಣಗಿತ್ತಿಯಂತೆ ಸಜ್ಜಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಲುಮೆಯ ಕವಿ ದೊಡ್ಡರಂಗೇಗೌಡ್ರಿಗೆ ಹಾವೇರಿ 86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಿರೀಟ

    ಒಲುಮೆಯ ಕವಿ ದೊಡ್ಡರಂಗೇಗೌಡ್ರಿಗೆ ಹಾವೇರಿ 86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಿರೀಟ

    ಹಾವೇರಿ: ನಗರದಲ್ಲಿ ಇದೇ ಫೆಬ್ರುವರಿ 26, 27 ಹಾಗೂ 28 ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ.

    ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದೊಡ್ಡರಂಗೇಗೌಡರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.

    ಕವಿ, ಪ್ರಾಧ್ಯಾಪಕ, ವಿದ್ವಾಂಸ, ಚಲನಚಿತ್ರ ಸಾಹಿತಿ, ಉಪನ್ಯಾಸಕ ಹೀಗೆ ಹಲವು ರೀತಿಯಲ್ಲಿ ಶೋಭಾಯಮಾನರಾಗಿ ಕನ್ನಡ ನಾಡಿನಲ್ಲಿ ಪ್ರಕಾಶಮಾನರಾಗಿದ್ದು, ಇವೆಲ್ಲ ಗುಣಗಳನ್ನೂ ಸವಿಪಾಕವಾಗಿ ಎಂಬಂತೆ ಸರಳ ಸಜ್ಜನಿಕೆಯಲ್ಲಿ ಬೆಸೆದಂತಿರುವ ನಮ್ರತೆಯ ಹಿರಿಯ ಚೇತನರು ದೊಡ್ಡರಂಗೇಗೌಡರು.

    ಶ್ರೀಯುತ ರಂಗೇಗೌಡರು ಮತ್ತು ಅಕ್ಕಮ್ಮನವರ ಮಗನಾಗಿ 1946ರ ಫೆಬ್ರವರಿ 7ರಂದು ಜನಿಸಿದ ದೊಡ್ಡರಂಗೇಗೌಡರು ಕುರುಬರ ಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ 1970ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಪದವಿ, 1972 ರಲ್ಲಿ ಎಂ.ಎ. ಪದವಿ ಪಡೆದರು. ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಜಾನಪದದ ಕುರಿತು ಅವರು ವಿಶೇಷ ಅಧ್ಯಯನ ಕೈಗೊಂಡರು. 2004 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ‘ನವೋದಯ ಕಾವ್ಯ: ಒಂದು ಪುನರ್ ಮೌಲ್ಯಮಾಪನ ಎಂಬ ಮಹಾಪ್ರಬಂಧಕ್ಕಾಗಿ ಅವರು ಡಾಕ್ಟರೇಟ್ ಪದವಿ ಲಭಿಸಿದೆ.

    1972ರಿಂದ ಬೆಂಗಳೂರು ನಗರದ ಕೃಷ್ಣರಾಜಮಾರುಕಟ್ಟೆ ಬಳಿಯಲ್ಲಿನ ‘ಎಸ್.ಎಲ್.ಎನ್. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ದೊಡ್ಡರಂಗೇಗೌಡರು 2002ರಲ್ಲಿ ನಿವೃತ್ತರಾಗಿದ್ದಾರೆ. ಅವರು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾಗಿ ಸಹ ಕೆಲಸ ಮಾಡಿದ್ದಾರೆ. ಕನ್ನಡ ನಾಡು ಅವರನ್ನು ವಿಧಾನ ಪರಿಷತ್ತಿಗೂ ಬರಮಾಡಿಕೊಂಡಿದೆ. ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಲ್ಲೂ ಅವರ ಸೇವೆ ಸಂದಿದೆ.

    ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದ ಡಾ. ದೊಡ್ಡರಂಗೇಗೌಡರು ನೂರಾರು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟರಾಗಿ ಕಂಗೊಳಿಸಿದ್ದಾರೆ. 1972 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌಡರ ಕವನ ಸಂಕಲನ ‘ಕಣ್ಣು ನಾಲಗೆ ಕಡಲು ಕಾವ್ಯ ಕೃತಿಗೆ ಬಹುಮಾನ ಬಂದಿದೆ. 1990ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇವರ ‘ಪ್ರೀತಿ ಪ್ರಗಾಥ ಕೃತಿಯು ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರ ಮೆಚ್ಚುಗೆ ಪಡೆದು. ರತ್ನಾಕರವರ್ಣಿ ಮುದ್ದಣ ಕಾವ್ಯ ಪ್ರಶಸ್ತಿ ಗೌರವ ಲಭಿಸಿದೆ.

    ದೊಡ್ಡರಂಗೇಗೌಡರು ನವ್ಯ ಕವಿಯಾಗಿ ಕನ್ನಡ ಸಾಹಿತ್ಯದಲ್ಲಿ ವಿಶೇಷ ಛಾಪು ಮೂಡಿಸಿದ್ದು ಅವರ ಕಾವ್ಯ ಸಂಕಲನಗಳಾದ ‘ಜಗಲಿ ಹತ್ತಿ ಇಳಿದು, ‘ಕಣ್ಣು ನಾಲಿಗೆ ಕಡಲು, ‘ನಾಡಾಡಿ’, ‘ಮೌನ ಸ್ಪಂದನ, ‘ಏಳು ಬೀಳಿನ ಹಾದಿ, ‘ಕುದಿಯುವ ಕುಲುಮೆ, ‘ಚದುರಂಗದ ಕುದುರೆಗಳು, ‘ಯುಗವಾಣಿ, ‘ಅವತಾರ ಐಸಿರಿ’, ‘ಬದುಕು ತೋರಿದ ಬೆಳಕು, ‘ಹೊಸ ಹೊನಲು, ‘ಲೋಕಾಯಣ’, ‘ನಿಕ್ಷೇಪ, ‘ಗೆಯ್ಮೆ’ ಮುಂತಾದವು ಕನ್ನಡ ಕಾವ್ಯ ರಸಿಕರ ಮತ್ತು ವಿಮರ್ಶಕರ ನಲ್ಮೆ ಸಂಪಾದಿಸಿವೆ. ಅವರ ‘ಪ್ರೀತಿ ಪ್ರಗಾಥ ಮತ್ತು ‘ಹಳ್ಳಿ ಹುಡುಗಿ ಹಾಡು-ಪಾಡು ಪ್ರಗಾಥಗಳ ಸಾಲಿಗೆ ಸೇರಿವೆ. ಮುಕ್ತಕಗಳಲ್ಲಿ ‘ಮಣ್ಣಿನ ಮಾತುಗಳು, ‘ಮಿಂಚಿನ ಗೊಂಚಲು ಪ್ರಧಾನವಾಗಿವೆ. ದೊಡ್ಡರಂಗೇಗೌಡರು ಗದ್ಯಕೃತಿಗಳಲ್ಲೂ ಸಮಾನ ಕೃಷಿ ನಡೆಸಿದ್ದು ‘ವರ್ತಮಾನದ ವ್ಯಂಗ್ಯದಲ್ಲಿ, ‘ವಿಚಾರ ವಾಹಿನಿ, ‘ವಿಶ್ವಮುಖಿ’, ‘ದಾರಿ ದೀಪಗಳು ಮುಂತಾದ ಕೃತಿಗಳನ್ನು ನೀಡಿದ್ದಾರೆ. ‘ಅನನ್ಯನಾಡು ಅಮೆರಿಕ ಮತ್ತು ‘ಪಿರಮಿಡ್ಡುಗಳ ಪರಿಸರದಲ್ಲಿ ದೊಡ್ಡರಂಗೇಗೌಡರ ಪ್ರವಾಸ ಕಥನಗಳು. ದೊಡ್ಡರಂಗೇಗೌಡರು ಅನೇಕ ಭಕ್ತಿಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಶ್ರೀಸಿದ್ದೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ, ನೂರೆಂಟು ನಮನ, ಶ್ರೀ ಗುರುಚರಣದಲ್ಲಿ, ವಚನವಾರಿದಿ ಇವುಗಳಲ್ಲಿ ಪ್ರಮುಖವಾಗಿವೆ.

    ಕನ್ನಡ ಚಲನಚಿತ್ರಗೀತೆಗಳಲ್ಲಿ ಜಾನಪದ, ನವ್ಯ ಸಾಹಿತ್ಯಗಳ ಸೊಬಗನ್ನು ತುಂಬಿದ ಕೀರ್ತಿವಂತರಲ್ಲಿ ದೊಡ್ಡರಂಗೇಗೌಡರು ಪ್ರಮುಖರಾಗಿ ಕಾಣುತ್ತಾರೆ. ಭಾರತೀಯ ಸಾಮಾನ್ಯನ ಆಪ್ತ ಮಾಧ್ಯಮಗಳಾದ ಸಿನಿಮಾ, ದೂರದರ್ಶನ, ರೇಡಿಯೋ ಹಾಗೂ ಶ್ರವ್ಯಮಾಧ್ಯಮಗಳಲ್ಲಿ ದೊಡ್ಡರಂಗೇಗೌಡರು ಅಪಾರ ಸಾಧನೆ ಮಾಡಿರುವುದನ್ನು ನೆನೆದಾಗ ಅವರನ್ನು ಅರಿಯದ ಕನ್ನಡಿಗನೇ ಇಲ್ಲ ಎಂಬುದು ಮನವರಿಕೆಯಾಗುತ್ತದೆ.

    ಎಪ್ಪತ್ತರ ದಶಕದಲ್ಲಿ ಮೂಡಿಬಂದ ‘ಮಾಗಿಯ ಕನಸು ಚಿತ್ರದ ‘ಬಂದಿದೆ ಬದುಕಿನ ಬಂಗಾರದಾ ದಿನ ಗೀತೆಯೊಂದಿಗೆ ಚಿತ್ರರಂಗಕ್ಕೆ ಬಂದ ದೊಡ್ಡರಂಗೇಗೌಡರು ಕನ್ನಡ ಚಿತ್ರರಂಗಕ್ಕೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಬಂಗಾರದಂತಹ ಗೀತೆಗಳನ್ನು ನೀಡುತ್ತಾ ಬಂದಿದ್ದಾರೆ. ‘ಬಂಗಾರದ ಜಿಂಕೆಯ ‘ಒಲುಮೆ ಸಿರಿಯಾ ಕಂಡು, ‘ಪರಸಂಗದ ಗೆಂಡೆತಿಮ್ಮನ ‘ತೇರ ಏರಿ ಅಂಬರದಾಗೆ, ‘ನೋಟದಾಗೆ ನಗೆಯಾ ಮೀಟಿ’ ಮತ್ತು ‘ನಿನ್ನ ರೂಪು ಎದೆಯ ಕಲಕಿ’, ‘ಕಿಲಾಡಿ ಜೋಡಿ’ಯ ‘ಆಡಬೇಕು ಕರಾಟೆ ಆಡಬೇಕು; ‘ಭೂಲೋಕದಲ್ಲಿ ಯಮರಾಜನ’ ‘ಎಂದೂ ಕಾಣದ ಬೆಳಕು ಕಂಡೆ, ‘ಪಡುವಾರಳ್ಳಿ ಪಾಂಡವರ, ‘ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ಮರೆಯಲಿ, ‘ಸುವರ್ಣ ಸೇತುವೆಯ ‘ಮಲೆನಾಡಿನ್ ಮೂಲೆನ್ಯಾಗೆ ಇತ್ತೊಂದು ಸಣ್ಣ ಹಳ್ಳಿ, ‘ಅರುಣ ರಾಗದ ನಾನೊಂದು ತೀರ ನೀನೊಂದು ತೀರ, ‘ಹುಲಿ ಹೆಜ್ಜೆಯ ‘ಕಂಡದ್ದು ಕಂಡ್ಹಾಂಗೆ, ‘ಬೆಳ್ಳಿ ಕಾಲುಂಗುರದ ‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ’, ‘ಮತ್ಸರದ ಹೊತ್ತಾರೆ ಸೂರ್ಯನಂಗೆ, ‘ಶರವೇಗದ ಸರದಾರನ ‘ಕನ್ನಡನಾಡಿನ ರನ್ನದ ರತುನ, ಆಲೆಮನೆಯ ‘ನಮ್ಮೂರ ಮಂದಾರ ಹೂವೆ, ‘ಎಲ್ಲ ಮೇಲು ಕೀಳು ಸುಳ್ಳು ಭೇದಭಾವ ಬಗೆದ ಮನುಜ ಕಣೋ; ‘ಪ್ರಾಯ ಪ್ರಾಯ ಪ್ರಾಯದ ‘ಭೂಮೀ ತಾಯಾಣೆ ನೀ ಇಷ್ಟ ಕಣೆ, ‘ಟೋನಿಯ ‘ಆನಂದವೇ ಮೈತುಂಬಿದೆ ಮತ್ತು ‘ನೀಲಿಯ ಬಾನಿಂದ; ‘ಹೃದಯಗೀತೆಯ ‘ಹೃದಯ ಗೀತೆ ಹಾಡುತಿರೆ, ‘ಜನುಮದ ಜೋಡಿ’ಯ ‘ಕೋಲು ಮಂಡೆ ಜಂಗಮ ದೇವರು, ‘ಅಶ್ವಮೇಧದ ಹೃದಯ ಸಮುದ್ರ ಕಲಕಿ’, ‘ದೊಡ್ಡಮನೆ ಎಸ್ಟೇಟಿ’ನ ‘ಮನಸಿನಾಗೆ ಕೂಗಿದೆ ಇತ್ಯಾದಿ ಇತ್ಯಾದಿಯಾಗಿ ದೊಡ್ಡರಂಗೇಗೌಡರ ರಂಗುರಂಗಿನ ಪ್ರಸಿದ್ಧ ಹಾಡುಗಳನ್ನೇ ಪುಟಗಟ್ಟಲೆ ಪಟ್ಟಿ ಮಾಡಬಹುದು. ಅವರು ರಚಿಸಿದ ಚಿತ್ರಗೀತೆಗಳ ಸಂಖ್ಯೆಯೇ ಆರು ಶತಕಗಳನ್ನು ದಾಟಿವೆ. ‘ಮಾವು ಬೇವು, ‘ಗೀತವೈಭವ, ‘ಕಾವ್ಯ-ಕಾವೇರಿ’, ‘ತಂಗಾಳಿ, `ಪ್ರೀತಿ ಭಾವನೆ, `ಪ್ರೇಮಪಯಣ’, `ಹೃದಯದಹಕ್ಕಿ, `ಹೋಳಿಹುಣ್ಣಿಮೆ, ‘ಯುಗಾದಿಚೈತ್ರೋತ್ಸವ, `ಮಾವು ಮಲ್ಲಿಗೆ, `ಭೂಮಿ ಬಾನು, `ಸಿರಿ ಸಂವರ್ಧನ, ‘ನಲ್ಮೆ ನೇಸರ, ‘ರಾಗರಂಗು, ‘ಅಂತರಂಗದಹೂಬನ ಮುಂತಾದವು ದೊಡ್ಡರಂಗೇಗೌಡರ ಕ್ಯಾಸೆಟ್-ಸಿಡಿ ಲೋಕದ ಸುಂದರ ಕೊಡುಗೆಗಳು. ಭಕ್ತಿಗೀತೆಗಳಲ್ಲೂ ಅವರ ಕ್ಯಾಸೆಟ್-ಸಿಡಿಗಳು ಸಾಕಷ್ಟು ಧ್ವನಿಮಾಡಿವೆ.

    ಸಾಹಿತ್ಯ ಮತ್ತು ಸಿನಿಮಾಲೋಕಗಳೆರಡರಲ್ಲೂ ದೊಡ್ಡರಂಗೇಗೌಡರು ಕನ್ನಡ ನಾಡಿನ ಹಲವಾರು ವಿಶಿಷ್ಟ ಗೌರವಗಳಿಗೆ ಪಾತ್ರರಾಗಿದ್ದಾರೆ. ಇದೀಗ ಹಾವೇರಿಯಲ್ಲಿ ಜರುಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

  • ಸಿಎಂ ಪ್ರಶ್ನೆಗೆ ಉತ್ತರಿಸಿ, ಸಂಯಮದ ಪಾಠ ಹೇಳಿದ ಚಂಪಾ

    ಸಿಎಂ ಪ್ರಶ್ನೆಗೆ ಉತ್ತರಿಸಿ, ಸಂಯಮದ ಪಾಠ ಹೇಳಿದ ಚಂಪಾ

    ಧಾರವಾಡ: ನನ್ನ ಇಬ್ಬರು ಮಕ್ಕಳು 7ನೇ ತರಗತಿವರೆಗೂ ಕನ್ನಡ ಕಲಿತ್ತಿದ್ದು, ಆದರೆ ಸಿಎಂ ಅವರ ಮಕ್ಕಳು, ಮೊಮ್ಮಕ್ಕಳು ಯಾರು ಕನ್ನಡ ಕಲಿತ್ತಿದ್ದಾರೆ ಎಂದು ಉತ್ತರಿಸಲಿ ಎಂದು ಸಾಹಿತಿ ಚಂಪಾ ಪ್ರಶ್ನಿಸಿದ್ದಾರೆ.

    ಸಿಎಂ ಅವರ ಕನ್ನಡ ಕಲಿಕೆಯ ಪ್ರಶ್ನೆ ಧಾರವಾಡದಲ್ಲಿ ಪಬ್ಲಿಕ್ ಟಿವಿಗೆ ಉತ್ತರಿಸಿ ಮಾತನಾಡಿದ ಚಂಪಾ ಅವರು, ಸಿಎಂ ಕುಮಾರಸ್ವಾಮಿ ಅವರು ನನ್ನ ಮನೆಯಲ್ಲಿ ಯಾರ್ಯಾರು ಕನ್ನಡ ಕಲಿತ್ತಿದ್ದಾರೆ ಎಂದು ಕೇಳಿದ್ದಾರೆ. ನನ್ನ ಇಬ್ಬರು ಮಕ್ಕಳು 7ನೇ ತರಗತಿವರೆಗೆ ಕನ್ನಡ ಕಲಿತ್ತಿದ್ದಾರೆ. ಮೊಮ್ಮಗ ಕೂಡಾ ಕನ್ನಡ ಕಲಿತ್ತಿದ್ದಾರೆ. ಆದರೆ ಸಿಎಂ ಅವರ ಮಕ್ಕಳು, ಮೊಮ್ಮಕ್ಕಳು ಯಾರು ಕನ್ನಡ ಕಲಿತ್ತಿದ್ದಾರೆ ಎಂಬುದು ಹೇಳಲಿ ಎಂದು ಪ್ರಶ್ನಿಸಿದರು.

    ಸಿಎಂ ಅವರು ನನಗೆ ಪ್ರಶ್ನೆ ಮಾಡಿದ ಬಗ್ಗೆ ಬೇಸರವಿಲ್ಲ. ಆದರೆ ಅವರು ನೇರವಾಗಿ ಪ್ರಶ್ನೆ ಕೇಳಬಹುದಿತ್ತು, ಆದರೆ ಮಾಧ್ಯಮಗಳ ಮೂಲಕ ಪ್ರಶ್ನೆ ಕೇಳಿದ್ದಾರೆ. ಆದ್ದರಿಂದ ನಾನು ಕೂಡ ಮಾಧ್ಯಮಗಳಿಂದಲೇ ಉತ್ತರ ಕೊಡುತ್ತೆನೆ ಎಂದರು. ಅಲ್ಲದೇ ಕನ್ನಡದ ಬಗ್ಗೆ ತಾವು ಬಹಳ ಕಳಕಳಿ ವ್ಯಕ್ತಪಡಿಸಿದ್ದೀರಿ. ನೀವು ಒಂದು ಜಾತ್ಯಾತೀತ ಪಕ್ಷವಾದ ಕಾರಣ ನಿಮ್ಮ ಮಕ್ಕಳು ಯಾವ ಭಾಷೆಯಲ್ಲಿ ಓದುತ್ತಿದ್ದಾರೆ ಎಂದು ಕೇಳುತ್ತಿದ್ದೇನೆ ಎಂದರು.

    ನಾನು ಬಹಳ ಮುಖ್ಯಮಂತ್ರಿಗಳನ್ನು ನೋಡಿದ್ದು, ರಾಜಕಾರಣಿಗಳು ಬಹಳ ಗಂಭೀರವಾಗಿ ಇರಬೇಕು. ಮಾತನಾಡುವಾಗ ತಾಳ್ಮೆ ಕಳೆದುಕೊಳ್ಳದೆ ಮಾತನಾಡಬೇಕು. ಮಾಜಿ ಪ್ರಧಾನಿಗಳಾದ ಎಚ್‍ಡಿ ದೇವೆಗೌಡರು ತಾಳ್ಮೆ ಮನುಷ್ಯ, ಆದರೆ ಅವರ ಮಗ ಯಾಕೋ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅವರ ಗೆಳೆಯನಾಗಿ ನಾನು ಅವರು ಸಂಯಮದಿಂದ ಇರಬೇಕು ಎಂದು ಹೇಳುವೆ ಎಂದು ತಿಳಿಸಿದರು. ಅಲ್ಲದೇ ಸಮ್ಮೇಳನದಲ್ಲಿ ಸಿಎಂ ಅವರು ಕೊಟ್ಟ ಮಾತು ನಡೆಸಿಕೊಟ್ಟರೆ ಸಾಕು ಎಂದರು.

    ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ದಿನ ಚಂಪಾ ಅವರು ವೇದಿಕೆ ಮೇಲೆ ಮಾತನಾಡುತ್ತಾ ಕನ್ನಡ ಇಂಗ್ಲಿಷ್ ಶಾಲೆಗಳ ಬಗ್ಗೆ ಸಿಎಂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಸಿಎಂ ಗರಂ ಕೂಡ ಆಗಿದ್ರು. ಈ ಕುರಿತು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಚಂಪಾ ಅವರ ಮಕ್ಕಳು ಯಾವ ಮಾಧ್ಯಮದಲ್ಲಿ ಓದಿದ್ದಾರೆ ಎಂದು ತಿಳಿಸಲಿ ಎಂದು ಪ್ರಶ್ನೆ ಮಾಡಿದ್ದರು. ಸದ್ಯ ಸಿಎಂ ಅವರ ಮಾತಿಗೆ ಚಂಪಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಹಿತ್ಯ ಸಮ್ಮೇಳನದಲ್ಲಿ ಟಾಂಗ್ ಕೊಟ್ಟ ಬೆನ್ನಲ್ಲೇ ಅನಂತ್ ಕುಮಾರ್ ಗೆ ಚಂಪಾ ತಿರುಗೇಟು

    ಸಾಹಿತ್ಯ ಸಮ್ಮೇಳನದಲ್ಲಿ ಟಾಂಗ್ ಕೊಟ್ಟ ಬೆನ್ನಲ್ಲೇ ಅನಂತ್ ಕುಮಾರ್ ಗೆ ಚಂಪಾ ತಿರುಗೇಟು

    ಮೈಸೂರು: ನಾನು ಯಾವ ಪಕ್ಷಕ್ಕೂ ಮತ ಹಾಕಿ ಅಂದಿಲ್ಲ. ನಾನು ಸೆಕ್ಯೂಲರ್ ಪಕ್ಷಕ್ಕೆ ಮತ ಹಾಕಿ ಅಂದಿರೋದು. ನಾನು ಯಾವ ಪಕ್ಷದ ಪರ ಇಲ್ಲ ಅಂತ ಸಮ್ಮೇಳನಾಧ್ಯಕ್ಷ ಪ್ರೊ. ಚಂಪಾ ಹೇಳಿದ್ದಾರೆ.

    83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ವೈಭವದ ತೆರೆ ಬಿದ್ದಿದ್ದು, ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಂಪಾ, ಸೆಕ್ಯುಲರ್ ಪದ ಕೇಳಿದ್ರೆ ಅವರು ಚಿಕ್ಕ ಮಕ್ಕಳಂತೆ ಉಚ್ಚೆ ಊಯ್ದುಕೊಳ್ಳುತ್ತಾರೆ. ಕನ್ನಡ, ನೆಲ, ಜಲದ ವಿಚಾರವಾಗಿ ಕೆಲಸ ಮಾಡುವ ಪ್ರಾದೇಶಿಕ ಜಾತ್ಯಾತೀತ ಪಕ್ಷ ಬೇಕು. ಜಾತ್ಯಾತೀತ ಅನ್ನೋ ಪದವೇ ಸಚಿವ ಅನಂತಕುಮಾರ್ ಅವರಿಗೆ ಅರ್ಥವಾಗಿಲ್ಲ. ಅವರನ್ನು ರಿಪೇರಿ ಮಾಡೋದು ನಮ್ಮ ಕೆಲಸವಲ್ಲ. ಅವರನ್ನು ರಿಪೇರಿ ಮಾಡುವ ಪ್ರಯತ್ನವೂ ವ್ಯರ್ಥ. ಕನ್ನಡದ ಭಾಷೆ, ನೆಲ, ಜಲದ ವಿಚಾರದಲ್ಲಿ ಇದುವರೆಗೂ ಪಕ್ಷಾತೀತವಾದ ಒಂದೇ ಒಂದು ಕೆಲಸ ಆಗಿಲ್ಲ ಎಂದು ಅನಂತ ಕುಮಾರ್ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ರು.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತಕುಮಾರ್ ಅವರ ಭಾಷಣದಲ್ಲಿ ಪವಿತ್ರ ಗಂಗಾ ಜಲವೂ ಇತ್ತು. ಮಲೀನ ಗಟಾರದ ನೀರೂ ಇತ್ತು. ಒಳ್ಳೆಯದನ್ನು ನಾನು ಸ್ವೀಕರಿಸಿದ್ದೇನೆ. ಕೆಟ್ಟದ್ದನ್ನು ಬಿಟ್ಟುಬಿಡೋಣ. ನಾನು ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ಸ್ವೀಕರಿಸುತ್ತೇನೆ. ಅವರ ಭಾಷಣದ ಶೇ.50ರಷ್ಟನ್ನು ನಾನು ಸ್ವೀಕರಿಸಿದ್ದೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಉತ್ತರ ಕರ್ನಾಟಕದವರು. ಅವರ ತಾಯಿ ಉತ್ತಮ ವ್ಯಕ್ತಿ. ಅವರ ಪರಂಪರೆಯನ್ನು ಅನಂತ್ ಕುಮಾರ್ ಮುಂದುವರಿಸಿದ್ದಾರೆ ಅಂದ್ರು.

    ಇನ್ನು ಅನಂತ್ ಕುಮಾರ್ ಹೋಗುವಾಗ ಚಂಪಾ ನಮ್ ಮೇಷ್ಟ್ರು ಅಂದ್ರು. ಅನಂತ್ ಕುಮಾರ್ ನನ್ನ ವಿದ್ಯಾರ್ಥಿ ಆಗಿರಬಹುದು. ಅದನ್ನ ನೆನಪಿಟ್ಟಿದ್ದಕ್ಕೆ ನಾನು ಋಣಿ. ಕನ್ನಡದ ಬಗ್ಗೆ ಕಳಕಳಿಯಿಂದ ಮಾತಾಡಿದ್ದು ಖುಷಿ ಕೊಡ್ತು. ಇದು ಏಕಮುಖ ವೇದಿಕೆ ಅಲ್ಲ. ಆದ್ರೆ ಕೆಲವರು ತಾವು ಏನು ಹೇಳಬೇಕೋ ಹೇಳಿ, ಬೇರೆಯವರು ಏನು ಹೇಳ್ತಾರೆ ಎಂಬುದನ್ನ ಕೇಳುವ ತಾಳ್ಮೆ ಇರದೆ ಹೋಗ್ತಾರೆ. ಅನಂತ್ ಕುಮಾರ್, ಪ್ರತಾಪ್ ಹೋದ್ರೂ ಅವರ ಕಣ್ಣು, ಕಿವಿ ಇಲ್ಲೇ ಇವೆ. ನನ್ನ ಮಾತು ವಾಟ್ಸಪ್, ಫೇಸ್ ಬುಕ್, ಟಿವಿ ಮೂಲಕ ಅನಂತ್ ಕುಮಾರ್ ಕಿವಿಗೆ ಬೀಳುತ್ತೆ ಅಂತ ನೇರವಾಗಿಯೇ ಟಾಂಗ್ ನೀಡಿದ್ರು.

    ಸಚಿವರು ಏನ್ ಹೇಳಿದ್ದರು?: ಈ ವೇದಿಕೆ ರಾಜಕೀಯ ಭಾಷಣ ಮಾಡಲು ಅಲ್ಲ. ಯಾರಿಗೆ ಮತ ಹಾಕಬೇಕು ಅನ್ನುವುದನ್ನು ಹೇಳುವುದಕ್ಕೆ ಬೇರೆ ವೇದಿಕೆಗಳಿವೆ, ಅಲ್ಲಿ ಹೇಳಿ. ಕನ್ನಡ ಸಮ್ಮೇಳನದಲ್ಲಿ ಕನ್ನಡದ ಬಗ್ಗೆ ಮಾತನಾಡಿ. ಇಡೀ ದೇಶವೇ ಸಮ್ಮೇಳವನ್ನು ನೋಡುತ್ತಿದೆ. ಹೀಗಿರುವಾಗ ಇಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳದಲ್ಲಿ ಡೋಂಗಿತನಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ವೇದಿಕೆಯ ಮೌಲ್ಯ ಹಾಳಾಗುತ್ತದೆ ಎಂದು ಅನಂತ್ ಕುಮಾರ್ ನೇರವಾಗಿ ಹೇಳಿದ್ದರು.

  • ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪ್ರತಾಪ್ ಸಿಂಹಗೆ ಚಂಪಾ ನೇರ ಟಾಂಗ್!

    ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪ್ರತಾಪ್ ಸಿಂಹಗೆ ಚಂಪಾ ನೇರ ಟಾಂಗ್!

    ಮೈಸೂರು: ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಚಂಪಾ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ನೇರವಾಗಿ ಟಾಂಗ್ ನೀಡಿದ್ದಾರೆ.

    ಸಿಂಹ ಸಮ್ಮೇಳನಕ್ಕೆ ಮೊದಲೇ ಬರಬೇಕಿತ್ತು. ಆದ್ರೆ ಇವತ್ತಾದ್ರೂ ಬಂದಿದ್ದಾರೆ. ಪ್ರತಾಪ್ ಸಿಂಹ ಬಗ್ಗೆ ನನಗೆ ಗೌರವ ಇತ್ತು. ಅವನ ಲೇಖನಗಳನ್ನು ನಾನು ಇಂದಿಗೂ ಇಟ್ಟಿದ್ದೇನೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೂರುವ ಬದಲು ಹೊರಟುಹೋದ. ಬಸವನ ಜೊತೆ ಬಾಲ ಇದ್ದ ಹಾಗೆ, ಅನಂತ್ ಕುಮಾರ್ ಬಾಲ ಹಿಡಿದು ಹೊರಟು ಹೋದ ಅಂತ ನೇರವಾಗಿ ಟಾಂಗ್ ನೀಡಿದ್ರು.

    ಸಮಾರೋಪದಲ್ಲಿ ಮಾತನಾಡಿ ಸಚಿವ ಅನಂತ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಬಳಿಕ ಪ್ರತಾಪ್ ಸಿಂಹ ಅವರಿಗೂ ಚಂಪಾ ನೇರವಾಗಿ ಟಾಂಗ್ ನೀಡಿದ್ರು. ಟಿಪ್ಪು ಒಬ್ಬ ಹೀರೋ. ಆತ ಒಬ್ಬ ಸ್ವಾತಂತ್ರ್ಯ ಯೋಧ. ಮೈಸೂರಿನ ಹುಲಿ ಟಿಪ್ಪು ಸುಲ್ತಾನ್. ಅವನ ಜಯಂತಿ ಮಾಡುವಾಗ ಆತನನ್ನು ಕ್ರೂರಿ ಎಂದ್ರು. ಪ್ರತಾಪ್ ಸಿಂಹ ಕರ್ನಾಟಕದಾದ್ಯಂತ ವಿಷ ಬೀಜ ಬಿತ್ತಿದ. ರಾಷ್ಟಪತಿ ಕೋವಿಂದ್ ಟಿಪ್ಪು ಬಗ್ಗೆ ಹೊಗಳಿದ್ರು. ಆದರೆ ಸಿಂಹ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಅಂತ ಟಿಪ್ಪುವನ್ನು ಹಾಡಿ ಹೊಗಳಿದ್ರು.

    ಒಟ್ಟಿನಲ್ಲಿ ರಾಜಕೀಯ ಭಾಷಣದಿಂದ ಆರಂಭವಾದ ಸಮ್ಮೇಳನ ರಾಜಕೀಯ ಭಾಷಣದಿಂದಲೇ ಮುಕ್ತಾಯವಾಯಿತು. ಸಮ್ಮೇಳನದ ಸಮಾರೋಪ ಕಾರ್ಯಕ್ರಮ ರಾಜಕೀಯ ಜಿದ್ದಾಜಿದ್ದಿನ ಭಾಷಣಕ್ಕೆ ವೇದಿಕೆಯಾಯಿತು.

  • ಸಾಹಿತ್ಯ ಸಮ್ಮೇಳನದಲ್ಲಿ ಮತಯಾಚನೆ ಘೋಷಣೆ ಮಾಡಿರೋದು ದುರಂತ: ಧರ್ಮ ಸಂಸದ್‍ನಲ್ಲಿ ಶೋಭಾ ಕಿಡಿ

    ಸಾಹಿತ್ಯ ಸಮ್ಮೇಳನದಲ್ಲಿ ಮತಯಾಚನೆ ಘೋಷಣೆ ಮಾಡಿರೋದು ದುರಂತ: ಧರ್ಮ ಸಂಸದ್‍ನಲ್ಲಿ ಶೋಭಾ ಕಿಡಿ

    ಉಡುಪಿ: ಮೈಸೂರಿನಲ್ಲಿ ನೆಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಗ್ರೆಸ್ ಮಯವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಘೋಷಣೆ ಕೂಗಿರೋದು ದುರಂತ ಅಂತ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

    ನಗರದಲ್ಲಿ ನಡೆಯುತ್ತಿರೋ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಕನ್ನಡಿಗರ ಸಮ್ಮೇಳನವಾಗಿ ಉಳಿದಿಲ್ಲ. ಕನ್ನಡಿಗರ ಬಗ್ಗೆ ಚರ್ಚೆಯಾಗದೇ ಬಿಜೆಪಿಯನ್ನು ವಿರೋಧ ಮಾಡುವ ಕಡೆ ಚರ್ಚೆಯಾಗುತ್ತಿರುವುದು ನಮ್ಮೆಲ್ಲರ ದುರಂತ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೇವಲ ಎಡಪಂಥಿಯರಿಗೆ ಮಣೆ ಹಾಕುವ ಕೆಲಸವಾಗುತ್ತಿದೆ. ಯಾರು ಅವರ ಕಿವಿ ಕಚ್ಚುತ್ತಿದ್ದಾರೋ, ಯಾರೂ ಹಿಂದು ವಿರೋಧಿ ಭಾವನೆ ಹೊಂದಿದ್ದಾರೋ ಅವರನ್ನು ಮಾತ್ರ ಸಾಹಿತ್ಯ ಸಮ್ಮೇಳನಕ್ಕೆ ಕರೆಯಲಾಗಿದೆ. ಅವರಿಗೆ ಕಮಿಟಿಯಲ್ಲಿ ಹಾಗೂ ಆಯೋಗದಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ಟೀಕಿಸಿದ್ರು.

    ಚಂಪಾ ಹೇಳಿದ್ದು ಏನು?: ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಾತಂತ್ರ್ಯ, ಸಮಾನತೆ, ಸಹಭಾವ, ಸೆಕ್ಯುಲರಿಸಂ, ಸಾಮಾಜಿಕ ನ್ಯಾಯ ಮುಂತಾದವುಗಳಿಗೆ ಕಂಟಕ ಒದಗಿಬಂದಿದೆ ಎಂಬ ಆತಂಕ ವ್ಯಕ್ತಪಡಿಸಿದ್ರು. ಅಲ್ಲದೇ ನಮ್ಮ ರಾಜ್ಯದ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಸೆಕ್ಯುಲರ್ ಪಕ್ಷಗಳ ಪರವಾಗಿ ಮತಚಲಾಯಿಸಬೇಕು ಎಂದು ಮನವಿ ಮಾಡಿದ್ದರು.

    ಒಂದು ರಾಷ್ಟ್ರೀಯ ಪಕ್ಷ ಕನ್ನಡದ ಪರ ಕೆಲಸ ಮಾಡುತ್ತಿದೆ. ಆದರೆ, ಇನ್ನೊಂದು ರಾಷ್ಟ್ರೀಯ ಪಕ್ಷವು ನಾಡಧ್ವಜ ವಿವಾದ, ಮೆಟ್ರೋದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಧ್ವನಿಯೆತ್ತುತ್ತಿ ಮೌನ ತಾಳಿದೆ. ಈ ಚುನಾವಣೆಯಲ್ಲಿ ಆ ಪಕ್ಷವನ್ನು ಜನ ದೂರವಿಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಮತ ಹಾಕುವಂತೆ ನೆರೆದಿದ್ದ ಜನತೆಗೆ ಕರೆಕೊಟ್ಟಿದ್ದರು.

    ಕನ್ನಡ ಸಂಸ್ಕೃತಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್ ಕಡುವೈರಿಯಾಗಲು ಕೇಂದ್ರ ಸರಕಾರದ ನೀತಿಯೇ ಕಾರಣವಾಗಿದೆ. ಒಂದೇ ಭಾಷೆ-ಒಂದೇ, ಧರ್ಮ-ಒಂದೇ ಸಿದ್ಧಾಂತ ಎಂಬ ಧಾಟಿಯಲ್ಲಿ ನಾವೆಲ್ಲ ಒಕ್ಕೊರಲಿನಿಂದ ಹಾಡುತ್ತಿದ್ದ ವಂದೇಮಾತರಂ ಗೀತೆಯನ್ನೇ ಹೈಜಾಕ್ ಮಾಡಲಾಗಿದೆ. ಭಾರತ ಮಾತೆ, ಬರೀ ಹಿಂದೂ ಮಾತೆ ಆಗುತ್ತಿರುವಳೇ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಶ್ನೆ ಮಾಡುವುದೇ ರಾಷ್ಟ್ರದ್ರೋಹವಾಗಿ, ವೈಚಾರಿಕತೆ ಮೇಲೆ ಹಲ್ಲೆ ಎಸಗುವುದೇ ಸಂಸ್ಕೃತಿಯಾಗಿ, ದಟ್ಟ ಭಯ ಆವರಿಸಿದೆ ಎಂದಿದ್ದರು.

     

  • 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ

    83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ

    ಮಂಗಳೂರು: ಪ್ರೊ. ಚಂದ್ರಶೇಖರ ಪಾಟೀಲ ಅವರನ್ನು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

    ಕರ್ನಾಟಕ-ಕೇರಳ ಗಡಿ ಪ್ರದೇಶ ತಲಪಾಡಿಯಲ್ಲಿ ಕಸಾಪ ರಾಜ್ಯಾಧ್ಯಕ್ಷ ಮನುಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಮಿತಿ ಸಭೆ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ನವೆಂವರ್ 24ರಿಂದ 26 ರವರೆಗೆ ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಯಲಿದೆ. ಪ್ರೊ. ಚಂದ್ರಶೇಖರ ಪಾಟೀಲ ಅವರು, 2009ನೇ ಸಾಲಿನ ಪಂಪ ಪ್ರಶಸ್ತಿಗೆ ಪಾತ್ರರಾಗಿದ್ದರು.

    ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಖಂಡಿಸಿದ್ದ ಪ್ರೊ. ಚಂದ್ರಶೇಖರ ಪಾಟೀಲ ಅವರು, 2009ನೇ ಸಾಲಿನ ಪಂಪ ಪ್ರಶಸ್ತಿಯನ್ನು 2015ರಲ್ಲಿ ಸರ್ಕಾರಕ್ಕೆ ಹಿಂದಿರುಗಿಸಿದ್ದರು.