Tag: Kannada Rajyotsava Award

  • 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ಗೌರವ

    2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ಗೌರವ

    ಬೆಂಗಳೂರು: 70ನೇ ವರ್ಷದ ರಾಜ್ಯೋತ್ಸವ ಆಚರಣೆ ಅಂಗವಾಗಿ 70 ಮಂದಿ ಸಾಧಕರಿಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

    ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೇ ಒಟ್ಟು 70 ಮಂದಿ ಸಾಧಕರನ್ನ ಆಯ್ಕೆ ಮಾಡಲಾಗಿದೆ.‌ ನಟ ಪ್ರಕಾಶ್‌ ರಾಜ್‌ ಸೇರಿದಂತೆ ವಿವಿಧ ವಲಯಗಳ ಅರ್ಹರಿಗೆ ನಾಡಿನ ಅತ್ಯುನ್ನತ ಗೌರವ ನೀಡಲಾಗುತ್ತಿದೆ. ಸಾಹಿತ್ಯ, ಸಿನಿಮಾ, ರಂಗಭೂಮಿ, ಮಾಧ್ಯಮ, ವಿಜ್ಞಾನ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ವಲಯಗಳಲ್ಲಿ ಗಣನೀಯ ಸಾಧನೆ ಮಾಡಿದ 70 ಮಂದಿಯನ್ನ ಆಯ್ಕೆ ಮಾಡಲಾಗಿದೆ.

    ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನ ಒಳಗೊಂಡಿದೆ. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

    ಯಾವ ಕ್ಷೇತ್ರದಿಂದ ಯಾರಿಗೆ ಪ್ರಶಸ್ತಿ?
    ಸಾಹಿತ್ಯ ಕ್ಷೇತ್ರ
    ಪ್ರೊ. ರಾಜೇಂದ್ರ ಚೆನ್ನಿ – ಶಿವಮೊಗ್ಗ
    ತುಂಬಾಡಿ ರಾಮಯ್ಯ – ತುಮಕೂರು
    ಪ್ರೊ ಅರ್ ಸುನಂದಮ್ಮ – ಚಿಕ್ಕಬಳ್ಳಾಪುರ
    ಡಾ.ಎಚ್.ಎಲ್ ಪುಷ್ಪ – ತುಮಕೂರು
    ರಹಮತ್ ತರೀಕೆರೆ – ಚಿಕ್ಕಮಗಳೂರು
    ಹ.ಮ. ಪೂಜಾರ – ವಿಜಯಪುರ

    ಜಾನಪದ
    ಬಸಪ್ಪ ಭರಮಪ್ಪ ಚೌಡ್ಕಿ – ಕೊಪ್ಪಳ
    ಬಿ. ಟಾಕಪ್ಪ ಕಣ್ಣೂರು – ಶಿವಮೊಗ್ಗ
    ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ – ಬೆಳಗಾವಿ
    ಹನುಮಂತಪ್ಪ, ಮಾರಪ್ಪ, ಚೀಳಂಗಿ – ಚಿತ್ರದುರ್ಗ
    ಎಂ. ತೋಪಣ್ಣ – ಕೋಲಾರ
    ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ
    ಸಿಂಧು ಗುಜರನ್‌ – ದಕ್ಷಿಣ ಕನ್ನಡ
    ಎಲ್. ಮಹದೇವಪ್ಪ ಉಡಿಗಾಲ – ಮೈಸೂರು

    ಸಂಗೀತ/ ನೃತ್ಯ ಕ್ಷೇತ್ರ
    ದೇವೆಂದ್ರಕುಮಾರ ಪತ್ತಾರ್ – ಕೊಪ್ಪಳ
    ಮಡಿವಾಳಯ್ಯ ಸಾಲಿ – ಬೀದರ್
    ಪ್ರೊ. ಕೆ. ರಾಮಮೂರ್ತಿ ರಾವ್ – ಮೈಸೂರು

    ಚಲನಚಿತ್ರ /ಕಿರುತೆರೆ
    ಪ್ರಕಾಶ್ ರಾಜ್ – ದಕ್ಷಿಣ ಕನ್ನಡ
    ವಿಜಯಲಕ್ಷ್ಮೀ ಸಿಂಗ್ -ಕೊಡಗು

    ಆಡಳಿತ/ ವೈದ್ಯಕೀಯ
    ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) – ಬೆಂಗಳೂರು ದಕ್ಷಿಣ (ರಾಮನಗರ)
    ಡಾ. ಆಲಮ್ಮ ಮಾರಣ್ಣ – ತುಮಕೂರು
    ಡಾ. ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ

    ಸಮಾಜ ಸೇವೆ
    ಸೂಲಗಿತ್ತಿ ಈರಮ್ಮ – ವಿಜಯನಗರ
    ಫಕ್ಕೀರಿ – ಬೆಂಗಳೂರು ಗ್ರಾಮಾಂತರ
    ಕೋರಿನ್ ಆಂಟೊನಿಯಟ್ ರಸ್ಕೀನಾ – ದಕ್ಷಿಣ ಕನ್ನಡ
    ಡಾ. ಎನ್. ಸೀತಾರಾಮ ಶೆಟ್ಟಿ – ಉಡುಪಿ
    ಕೋಣಂದೂರು ಲಿಂಗಪ್ಪ – ಶಿವಮೊಗ್ಗ

    ಸಂಕೀರ್ಣ
    ಉಮೇಶ ಪಂಬದ – ದಕ್ಷಿಣ ಕನ್ನಡ
    ಡಾ. ರವೀಂದ್ರ ಕೋರಿಶೆಟ್ಟಿರ್ – ಧಾರವಾಡ
    ಕೆ.ದಿನೇಶ್ – ಬೆಂಗಳೂರು
    ಶಾಂತರಾಜು – ತುಮಕೂರು
    ಜಾಫರ್ ಮೊಹಿಯುದ್ದೀನ್ – ರಾಯಚೂರು
    ಪೆನ್ನ ಓಬಳಯ್ಯ – ಬೆಂಗಳೂರು ಗ್ರಾಮಾಂತರ
    ಶಾಂತಿ ಬಾಯಿ – ಬಳ್ಳಾರಿ
    ಪುಂಡಲೀಕ ಶಾಸ್ತ್ರೀ(ಬುಡಬುಡಕೆ) – ಬೆಳಗಾವಿ

    ಹೊರನಾಡು/ ಹೊರದೇಶ
    ಜಕರಿಯ ಬಜಪೆ (ಸೌದಿ)
    ಪಿ ವಿ ಶೆಟ್ಟಿ (ಮುಂಬೈ)

    ಪರಿಸರ
    ರಾಮೇಗೌಡ – ಚಾಮರಾಜನಗರ
    ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ

    ಕೃಷಿ
    ಡಾ.ಎಸ್.ವಿ.ಹಿತ್ತಲಮನಿ – ಹಾವೇರಿ
    ಎಂ ಸಿ ರಂಗಸ್ವಾಮಿ – ಹಾಸನ

    ಮಾಧ್ಯಮ ಕ್ಷೇತ್ರ
    ಕೆ.ಸುಬ್ರಮಣ್ಯ – ಬೆಂಗಳೂರು
    ಅಂಶಿ ಪ್ರಸನ್ನಕುಮಾರ್ – ಮೈಸೂರು
    ಬಿ.ಎಂ ಹನೀಫ್ – ದಕ್ಷಿಣ ಕನ್ನಡ
    ಎಂ ಸಿದ್ಧರಾಜು – ಮಂಡ್ಯ

    ವಿಜ್ಞಾನ ತಂತ್ರಜ್ಞಾನ
    ರಾಮಯ್ಯ – ಚಿಕ್ಕಬಳ್ಳಾಪುರ
    ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ – ದಾವಣಗೆರೆ
    ಡಾ. ಆರ್. ವಿ ನಾಡಗೌಡ – ಗದಗ

    ಸಹಕಾರ
    ಶೇಖರಗೌಡ ವಿ ಮಾಲಿಪಾಟೀಲ್ – ಕೊಪ್ಪಳ

    ಯಕ್ಷಗಾನ/ ಬಯಲಾಟ/ ರಂಗಭೂಮಿ
    ಕೋಟ ಸುರೇಶ ಬಂಗೇರ- ಉಡುಪಿ
    ಐರಬೈಲ್‌ಆನಂದ ಶೆಟ್ಟಿ – ಉಡುಪಿ
    ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ) – ಉತ್ತರ ಕನ್ನಡ
    ಗುಂಡೂರಾಜ್ – ಹಾಸನ
    ಹೆಚ್.ಎಂ. ಪರಮಶಿವಯ್ಯ – ಬೆಂಗಳೂರು ದಕ್ಷಿಣ (ರಾಮನಗರ)
    ಎಲ್.ಬಿ.ಶೇಖ್ (ಮಾಸ್ತರ್) – ವಿಜಯಪುರ
    ಬಂಗಾರಪ್ಪ ಖುದಾನ್‌ಪುರ – ಬೆಂಗಳೂರು
    ಮೈಮ್ ರಮೇಶ್ – ದಕ್ಷಿಣ ಕನ್ನಡ
    ಡಿ.ರತ್ನಮ್ಮ ದೇಸಾಯಿ – ರಾಯಚೂರು

    ಶಿಕ್ಷಣ ಕ್ಷೇತ್ರ
    ಡಾ. ಎಂ.ಆರ್. ಜಯರಾಮ್ – ಬೆಂಗಳೂರು
    ಡಾ. ಎನ್ ಎಸ್ ರಾಮೇಗೌಡ -ಮೈಸೂರು
    ಎಸ್. ಬಿ. ಹೊಸಮನಿ – ಕಲಬುರಗಿ
    ನಾಗರಾಜು – ಬೆಳಗಾವಿ

    ಕ್ರೀಡೆ
    ಆಶೀಶ್ ಕುಮಾರ್ ಬಲ್ಲಾಳ್ – ಬೆಂಗಳೂರು
    ಎಂ ಯೋಗೇಂದ್ರ – ಮೈಸೂರು
    ಡಾ. ಬಬಿನಾ ಎನ್.ಎಂ (ಯೋಗ) – ಕೊಡಗು

    ನ್ಯಾಯಾಂಗ
    ನ್ಯಾ. ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ) – ಬಾಗಲಕೋಟೆ

    ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ
    ಬಸಣ್ಣ ಮೋನಪ್ಪ ಬಡಿಗೇರ – ಯಾದಗಿರಿ
    ನಾಗಲಿಂಗಪ್ಪ ಜಿ ಗಂಗೂರ – ಬಾಗಲಕೋಟೆ
    ಬಿ. ಮಾರುತಿ – ವಿಜಯನಗರ
    ಎಲ್. ಹೇಮಾಶೇಖರ್ – ಮೈಸೂರು

  • ರಾಜ್ಯೋತ್ಸವ ಪ್ರಶಸ್ತಿಗೆ ಇನ್ಮುಂದೆ ಅರ್ಜಿ ಪ್ರಕ್ರಿಯೆ ಇಲ್ಲ – ಸರ್ಕಾರದಿಂದ ಮಹತ್ವದ ನಿರ್ಧಾರ

    ರಾಜ್ಯೋತ್ಸವ ಪ್ರಶಸ್ತಿಗೆ ಇನ್ಮುಂದೆ ಅರ್ಜಿ ಪ್ರಕ್ರಿಯೆ ಇಲ್ಲ – ಸರ್ಕಾರದಿಂದ ಮಹತ್ವದ ನಿರ್ಧಾರ

    – ಈ ಬಾರಿ 70 ಮಂದಿ ಅರ್ಹ ಸಾಧಕರಿಗೆ ಪ್ರಶಸ್ತಿ ನೀಡಲು ನಿರ್ಧಾರ
    – ಕಳೆದ ವರ್ಷ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿತ್ತು

    ಬೆಂಗಳೂರು: ವರ್ಷದಿಂದ ವರ್ಷಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Kannada Rajyotsava Award) ಡಿಮ್ಯಾಂಡ್‌ ಹೆಚ್ಚಾಗುತ್ತಿದ್ದು, ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಹೀಗಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ಪ್ರಕ್ರಿಯೆಯನ್ನೇ ಕೈಬಿಟ್ಟಿದೆ

    ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹೊಸ ನಿಯಮ ಜಾರಿಗೊಳಿಸಲಾಗುತ್ತಿದ್ದು, ಆನ್‌ಲೈನ್‌ ಮೂಲಕ ಅರ್ಜಿ (Online Application) ಆಹ್ವಾನಿಸುವ ಪ್ರಕ್ರಿಯೆಯನ್ನೇ ಕೈಬಿಟ್ಟಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮಾಹಿತಿ ನೀಡಿದ್ದಾರೆ.

    ರಾಜ್ಯೋತ್ಸವ ಪ್ರಶಸ್ತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಲಹಾ ಸಮಿತಿ ಹಾಗೂ ಉನ್ನತ ಆಯ್ಕೆ ಸಮಿತಿ ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಸಮಿತಿಯಿಂದ ಆಯ್ಕೆಯಾದ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ.

    ಇನ್ನೂ ಈ ಬಾರಿ 70 ಜನ ಅರ್ಹ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸರ್ಕಾರದ ನಿರ್ಧಾರ ಮಾಡಿದೆ. ಈಗಾಗಲೇ ಇಲಾಖೆಗೆ ಸಲ್ಲಿಕೆಯಾಗಿರುವ ಸ್ವಯಂ ಅರ್ಜಿಗಳನ್ನು ಸಹ ಪ್ರಶಸ್ತಿ ಸಲಹಾ ಸಮಿತಿ ಮುಂದೆ ಮಂಡಿಸಲು ನಿರ್ಧರಿಸಲಾಗಿದೆ.

    ಕಳೆದ ವರ್ಷ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
    ಕಳೆದ ವರ್ಷ 69 ಪ್ರಶಸ್ತಿಗಳಿಗೆ 2,000 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿತ್ತು. ಇದರಲ್ಲಿ ಆನ್‌ಲೈನ್‌ ಸೇವಾಸಿಂಧು ಪೋರ್ಟಲ್‌ ಮೂಲಕವೇ ಬರೋಬ್ಬರಿ 1,135ಕ್ಕೂ ಹೆಚ್ಚು ಹಾಗೂ ಭೌತಿಕವಾಗಿ 85ಕ್ಕೂ ಹೆಚ್ಚು ಅರ್ಜಿಗಳು ಸಂದಾಯವಾಗಿತ್ತು.

    ಬಿಜೆಪಿ ಅವಧಿಯಲ್ಲೇ ಈ ಕ್ರಮ ಇತ್ತು
    2022ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಅಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸುನಿಲ್ ಕುಮಾರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಪಡೆಯದೆ, ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದ್ದರು. ಆದ್ರೆ 2023ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿತ್ತು.

  • ‘ಪಬ್ಲಿಕ್‌ ಟಿವಿ’ ಹಿರಿಯ ವರದಿಗಾರ ಸುಖ್‌ಪಾಲ್‌ ಪೊಳಲಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ‘ಪಬ್ಲಿಕ್‌ ಟಿವಿ’ ಹಿರಿಯ ವರದಿಗಾರ ಸುಖ್‌ಪಾಲ್‌ ಪೊಳಲಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ಮಂಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಪಬ್ಲಿಕ್‌ ಟಿವಿ’ಯ ಮಂಗಳೂರಿನ ಹಿರಿಯ ವರದಿಗಾರರಾದ ಸುಖ್‌ಪಾಲ್ ಪೊಳಲಿ ಭಾಜನರಾಗಿದ್ದಾರೆ.

    ನ.1 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    ಸುಖ್‌ಪಾಲ್‌ ಪೊಳಲಿ ಅವರು ‘ಪಬ್ಲಿಕ್‌ ಟಿವಿ’ಯಲ್ಲಿ ಮಂಗಳೂರಿನ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ಸಂಘ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ 56 ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

  • ಅಪರೂಪದಲ್ಲೇ ಅಪರೂಪದ ಕಲಾವಿದ – ಮುಖವೀಣೆ ಅಂಜಿನಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಅಪರೂಪದಲ್ಲೇ ಅಪರೂಪದ ಕಲಾವಿದ – ಮುಖವೀಣೆ ಅಂಜಿನಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಚಿಕ್ಕಬಳ್ಳಾಪುರ: ಅವರ ಕಲೆ ರಾಜ್ಯದಲ್ಲೇ, ಅಪರೂಪದಲ್ಲಿ ಅಪರೂಪ. ಅವರ ತರುವಾಯ ಆ ಕಲೆಯೂ ವಿನಾಶವಾಗುತ್ತದೆಂಬ ಚಿಂತೆ. ಇವೆಲ್ಲದರ ಮಧ್ಯೆ ರಾಜ್ಯ ಸರ್ಕಾರ ಈ ಬಾರಿ ಅಪರೂಪದ ಈ ಕಲಾವಿದನನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ನೀಡಿ ಗೌರವಿಸಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗುಡಿಬಂಡೆ ತಾಲೂಕು ಜನಪದ ಕಲಾವಿದ ಮುಖವೀಣೆ ಅಂಜಿನಪ್ಪನವರಿಗೆ (Mukhaveene Anjinappa) ಈ ಬಾರಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

    ಮುಖವೀಣೆ ಅಂಜಿನಪ್ಪನವರ ಹಿನ್ನಲೆ:
    ಮುಖವೀಣೆ ಅಂಜಿನಪ್ಪ ಮೂಲತಃ ಕಲಾವಿದ ಕುಟುಂಬದವರು. ತಮ್ಮ ಪೂರ್ವಜರಿಂದ ಬಂದಂತಹ ಮುಖವೀಣೆ ಕಲೆಯನ್ನು ಬಾಲ್ಯದಲ್ಲೇ ಕಲಿತುಕೊಂಡು, ಹೊಟ್ಟೆ ಪಾಡಿಗಾಗಿ ಊರೂರು ಸುತ್ತಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕಲೆಯನ್ನು ದೇಶಾದ್ಯಂತ ಪ್ರಖ್ಯಾತಿಗೊಳಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆರಳೆಣಿಕೆ ಸಂಖ್ಯೆಯಲ್ಲಿರುವ ಮುಖವೀಣೆ ಕಲಾವಿದರಲ್ಲಿ ಅಂಜಿನಪ್ಪ ಕೂಡಾ ಒಬ್ಬರು. ಅಂಜಿನಪ್ಪ ಹಾಗೂ ಅವರ ಕಲೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿ ಗೌರವ ಸಲ್ಲಿಸುತ್ತಿದೆ.

    ಮುಖವೀಣೆಯ ವೈಶಿಷ್ಟ:
    ಬಾಯಿಯ ಮೂಲಕ ಹಲವು ತರಹೇವಾರಿ ನಾದಸ್ವರಗಳನ್ನು ನುಡಿಸುವ ಅಂಜಿನಪ್ಪನವರು ನಾದಸ್ವರಗಳನ್ನು ಬಾಯಿಯ ಮೂಲಕ ನುಡಿಸುತ್ತಿರುವಾಗಲೇ ಒಂದು ಮೂಗಿನ ಹೊಳ್ಳೆಯ ಮೂಲಕ ನೀರು ಒಳಹೋಗಿಸಿ, ಮತ್ತೊಂದು ಮೂಗಿನ ಹೊಳ್ಳೆಯ ಮೂಲಕ ಹೊರಬರಿಸುವಂತಹ ಅಪರೂಪದ ಕಲಾ ಪ್ರದರ್ಶನವನ್ನು ಮೈಗೂಡಿಸಿಕೊಂಡಿದ್ದಾರೆ. ಬಹಳಷ್ಟು ಎಚ್ಚರಿಕೆಯಿಂದ ಮಾಡಬೇಕಾದ ಈ ಕಲೆಯನ್ನು ಅಂಜಿನಪ್ಪನವರು ನೀರು ಕುಡಿದಷ್ಟೇ ಸಲೀಸು ಎಂಬಂತೆ ಪ್ರದರ್ಶನ ಮಾಡುತ್ತಾರೆ. ಪುಟ್ಟ ಪುಟ್ಟ ವಾದ್ಯಗಳು ಹಾಗೂ ಮುಖವೀಣೆಯಿಂದ ಹೊರಬರುವ ಇವರ ನಾದಸ್ವರಗಳು ಎಂತಹವರನ್ನೂ ಮೋಡಿ ಮಾಡುತ್ತದೆ. ಇದನ್ನೂ ಓದಿ: ಕಾಂತಾರ ಎಫೆಕ್ಟ್ : ರಿಯಲ್ ಕಾಂತಾರಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    ಚಿಕ್ಕಬಳ್ಳಾಪುರದ ಸನಾದಿ ಅಪ್ಪಣ್ಣ ಎಂದೇ ಖ್ಯಾತರಾಗಿರುವ ಮುಖವೀಣೆ ಅಂಜಿನಪ್ಪನವರಿಗೆ ಈಗಾಗಲೇ ಹಲವಾರು ಪ್ರಶಸ್ತಿ ಸನ್ಮಾನಗಳು ಬಂದಿವೆ. ಆದರೂ ಅಂಜಿನಪ್ಪನವರನ್ನು ಕಾಡುತ್ತಿರುವ ಆರ್ಥಿಕ ಸಂಕಷ್ಟ ಮಾತ್ರ ದೂರವಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಅಂಜಿನಪ್ಪ ಕೀರ್ತಿ ತಂದಿದ್ದಾರೆ. ಈಗ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಜಿಲ್ಲೆಯ ಜನ ಹಾಗೂ ಸ್ವತಃ ಅಂಜಿನಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

    ವಿವಿಧ ಪ್ರಶಸ್ತಿಗಳ ಮಧ್ಯೆ ಇದೀಗ ನಾಡಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಮುಖವೀಣೆ ಅಂಜಿನಪ್ಪನವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸರ್ಕಾರ ಹಾಗೂ ದಾನಿಗಳು ಅವರ ಸಹಾಯಕ್ಕೆ ಬರಬೇಕು ಎಂದು ಪ್ರಜ್ಞಾವಂತ ಅವರ ಒಡನಾಡಿಗಳು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟ ಪುನೀತ್‌ ರಾಜ್‌ಕುಮಾರ್‌ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

    ಜಿಲ್ಲೆಯ ಶಿಕ್ಷಣ ತಜ್ಞ ಕೋಡಿರಂಗಪ್ಪನವರಿಗೆ ಪ್ರಶಸ್ತಿ:
    ಈ ಬಾರಿ ಮುಖವೀಣೆ ಅಂಜಿನಪ್ಪನವರ ಜೊತೆಯಲ್ಲೇ ಜಿಲ್ಲೆಯ ಶಿಕ್ಷಣ ತಜ್ಞ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೋಡಿ ರಂಗಪ್ಪನವರು ಕೂಡಾ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಹಳ್ಳಿಯ ಬಡವ – ಧರ್ಮದ ದಾರಿಯಲ್ಲಿ ನಡೆದದ್ದಕ್ಕೆ ರಾಜ್ಯ ಪ್ರಶಸ್ತಿ ಬಂತು: ಗುಡ್ಡ ಪಾಣಾರ ಸಂತಸ

    ನಾನು ಹಳ್ಳಿಯ ಬಡವ – ಧರ್ಮದ ದಾರಿಯಲ್ಲಿ ನಡೆದದ್ದಕ್ಕೆ ರಾಜ್ಯ ಪ್ರಶಸ್ತಿ ಬಂತು: ಗುಡ್ಡ ಪಾಣಾರ ಸಂತಸ

    ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ದೈವ ನರ್ತಕ ಗುಡ್ಡ ಪಾಣಾರರಿಗೆ (Gudda Panara) ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಒಲಿದಿದೆ. ರಾಜ್ಯ ಸರ್ಕಾರ ಹೊರಡಿಸಿದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಹಳ್ಳಿಯ ಬಡವನಿಗೆ ಪ್ರಶಸ್ತಿ ನೀಡಿದ್ದು ಭಾರೀ ಖುಷಿಯಾಗಿದೆ ಎಂದು ಗುಡ್ಡ ಪಾಣಾರಾ ಸಂತಸ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ತೀರ ಹಳ್ಳಿಯವ. ನಾನು ಬಡವ. ನನ್ನನ್ನು ಹುಡುಕಿ ರಾಜ್ಯ ಪ್ರಶಸ್ತಿ ಕೊಟ್ಟದ್ದು ನನಗೆ ಖುಷಿ ಮತ್ತು ಸಂತೋಷ ತಂದಿದೆ. ಖುಷಿ ಅಂದ್ರೆ ನನಗೆ ಅಷ್ಟಿಷ್ಟು ಖುಷಿಯಲ್ಲ. ತುಂಬಾ, ತುಂಬಾ ಖುಷಿಯಾಗಿದೆ ಎಂದು ತುಳುವಿನಲ್ಲೇ ಹೇಳಿದ್ದಾರೆ. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ – ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು

    ಗ್ರಾಮದ 10 ಸಮಸ್ತರ ಸಹಕಾರದಿಂದ ಈ ಪ್ರಶಸ್ತಿ ಸಿಕ್ಕಿತು. ನಾನು ನಂಬಿಕೊಂಡು ಬಂದ ಧರ್ಮ ಮತ್ತು ದೇವರು, ಭಕ್ತರ ಸಹಕಾರದಿಂದ ಪ್ರಶಸ್ತಿ ಸಿಕ್ಕಿತು. ಕಳೆದ 38 ವರ್ಷಗಳಿಂದ ನಾನು ದೈವದ ಸೇವೆ ಮಾಡುತ್ತಿದ್ದೇನೆ. ಕಳೆದ 27 ವರ್ಷಗಳಿಂದ ನಾನು ಕಾಪುವಿನಲ್ಲಿ ಹುಲಿಭೂತ ಕಟ್ಟುತ್ತಿದ್ದೇನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಮನೆಯಲ್ಲಿನ ಅಪ್ಪು ಫೋಟೋ ವೈರಲ್

    ನನಗೀಗ 68 ವರ್ಷ ವಯಸ್ಸಾಗಿದೆ. ಈವರೆಗೆ ನಾನು ಭೂತಾರಾಧನೆಯನ್ನು ಕಾಯಕವಾಗಿ ಮಾಡುತ್ತಿದ್ದೇನೆ. ಧರ್ಮದ ದಾರಿಯಲ್ಲಿ ನಡೆದಿದ್ದೇನೆ. ಮುಂದೆಯೂ ದೈವದೇವರ ಚಾಕರಿ ಮಾಡುವ ಶಕ್ತಿ ಕೊಡು ಎಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಶಾಕ್‍ನಿಂದ ದಂಪತಿ ಸಾವು- ಪತ್ನಿ ಉಳಿಸಲು ಹೋಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುರ್ಮರಣ

    ವಿದ್ಯುತ್ ಶಾಕ್‍ನಿಂದ ದಂಪತಿ ಸಾವು- ಪತ್ನಿ ಉಳಿಸಲು ಹೋಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುರ್ಮರಣ

    ಬಳ್ಳಾರಿ: ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿಯಲ್ಲಿ ನಡೆದಿದೆ.

    ಜಿಲ್ಲೆಯ ಬಂಡಿಹಟ್ಟಿಯಲ್ಲಿ ವಿದ್ಯುತ್ ಸ್ಪರ್ಶಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ಹಾಗೂ ಪತ್ನಿ ದ್ಯಾವಮ್ಮಾ ಮೃತಪಟ್ಟಿದ್ದಾರೆ. ಮನೆಯ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿ ತಾಗಿದ್ದರಿಂದ ದ್ಯಾವಮ್ಮಗೆ ಮೊದಲು ವಿದ್ಯುತ್ ಶಾಕ್ ಹೊಡೆದಿದೆ. ಈ ಸಂದರ್ಭದಲ್ಲಿ ಪತ್ನಿಯನ್ನು ಉಳಿಸಲು ಪಂಪಾಪತಿ ಅವರು ಸಹಾಯಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ:  ಪ್ರಧಾನಿಗೆ ಕ್ಷಮಾಪಣೆ ಪತ್ರ ನೀಡಿದ್ರೆ ಗುತ್ತಿಗೆದಾರರ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ – ಮುನಿರತ್ನ

    crime

    ಈ ವೇಳೆ ಇಬ್ಬರಿಗೂ ವಿದ್ಯುತ್ ಶಾಕ್ ಹೊಡೆದು ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆ ಸಂಬಂಧಿಸಿ ಕೌಲ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ಗೆ ಕಳಂಕ ತರುವ ಸಂಚು ನಡೆಯುತ್ತಿದೆ – ಮೋದಿ ಅಸಮಾಧಾನ

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಹೀರೋ, ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಗೆ ರಾಜ್ಯೋತ್ಸವ ಪ್ರಶಸ್ತಿ

    ಪಬ್ಲಿಕ್ ಹೀರೋ, ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಗೆ ರಾಜ್ಯೋತ್ಸವ ಪ್ರಶಸ್ತಿ

    ಗದಗ: 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗದಗ ಜಿಲ್ಲೆಯ ಇಬ್ಬರು ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಗರದ ಬೆಟಗೇರಿಯ ಪಬ್ಲಿಕ್ ಹೀರೋ ರಾಮಣ್ಣ ಬ್ಯಾಟಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಗರದ ಬಿ.ಎಫ್ ದಂಡಿನ ಅವರಿಗೆ ಲಭಿಸಿದೆ.

    ವಿಶೇಷ ಚೇತನ ರಾಮಣ್ಣ ಬ್ಯಾಟಿ ಅವರ ಸಾಹಿತ್ಯ ಸಾಧನೆ ಕುರಿತು ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಸುದ್ದಿ ಪ್ರಸಾರ ಮಾಡಲಾಗಿತ್ತು. ವರದಿ ಬಂದ ನಂತರ ಎರಡು ಬಾರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗ ರಾಜ್ಯೋತ್ಸವ ಪ್ರಶಸ್ತಿ ರಾಮಣ್ಣ ಅವರ ಮುಡಿಗೇರಿದೆ. ಇದು ಪಬ್ಲಿಕ್ ಟಿವಿ ಇಂಪ್ಯಾಕ್ಟ್. ಇಂದು ಸರ್ಕಾರ ಪಟ್ಟಿ ಪ್ರಕಟಿಸುತ್ತಿದ್ದಂತೆ ಮನೆಯಲ್ಲಿ ಹಬ್ಬದ ವಾತಾವರಣ. ಕುಟುಂಬಸ್ಥರು ಒಟ್ಟಾಗಿ ಸಿಹಿ ತಿನಿಸಿ ಸಂಭ್ರಮಿಸಿದರು.

    ರಾಮಣ್ಣ ಅನಕ್ಷರಸ್ಥ, ಇಂದಿಗೂ ಓದಲು ಬರೆಯಲು ಬರೋದಿಲ್ಲ, ಕಣ್ಣು ಕಾಣುವುದಿಲ್ಲ, ಕಿವಿ ಸಹ ಅಲ್ಪಸ್ವಲ್ಪ ಮಾತ್ರ ಕೇಳಿಸುವ ವಿಶೇಷ ಚೇತನ ಸಾಹಿತಿ. ಮಕ್ಕಳು, ಸ್ನೇಹಿತರು ಇವರು ಹೇಳಿದಂತೆ ಬರೆಯುತ್ತಾರೆ. ಗಾಡ್ ಗಿಫ್ಟ್ ಅನ್ನುವಂತೆ ಇಲ್ಲಿಯವರೆಗೆ ಸುಮಾರು 30 ಸಾವಿರ ಪದ್ಯಗಳು, 50ಕ್ಕೂ ಅಧಿಕ ಗ್ರಂಥಗಳು, 20ಕ್ಕೂ ಅಧಿಕ ಪುರಾಣಗಳು ಬರೆದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಬೇಡ್ಕರ್ ಪುರಾಣ, ಬಸವ ಪುರಾಣ, ಬುದ್ಧ ಪುರಾಣ, ಇಟಗಿ ಭೀಮಾಂಬಿಕೆ ಪುರಾಣ, ಶಂಕರಾಚಾರ್ಯರ ಪುರಾಣ ಹೀಗೆ ಅನೇಕ ಪುರಾಣಗಳನ್ನು ಬರೆದಿದ್ದಾರೆ. ನೂರಾರು ಚಟುವಟಿಕೆಗಳನ್ನು ಬರೆದಿದ್ದಾರೆ.

    ಇವರು ಬರೆದ ಕೃತಿಗಳು ಭಾಮಿನಿ ಷಟ್ಪದಿ, ಗದ್ಯ, ಪದ್ಯ, ಚೌಪದಿ ರೂಪದಲ್ಲಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಮಣ್ಣ ಅವರು ಬರೆದ 60ಕ್ಕೂ ಅಧಿಕ ಕೃತಿಗಳು ಬಿಡುಗಡೆ ಆಗಬೇಕಿವೆ. 4 ಸಾವಿರ ಪದ್ಯದ ರಾಮಾಯ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇದಕ್ಕೆಲ್ಲಾ ಸ್ಪೂರ್ತಿ ಮಗ ದಾನೇಶ. ಮಗಳು ಗಾಯತ್ರಿ ಹಾಗೂ ಸ್ನೇಹಿತರ ಬಳಗದವರು ಇವರು ಹೇಳಿದ ಗ್ರಂಥಗಳನ್ನು ಬರೆಯುತ್ತಾರೆ. ಇದನ್ನೂ ಓದಿ: ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್‍ಗೆ ರಾಜ್ಯೋತ್ಸವ ಪ್ರಶಸ್ತಿ

    ಗದಗ ತಾಲೂಕಿನ 3 ನೇ ಕನ್ನಡ ಸಾಹಿತ್ಯ ಸಮ್ಮೇಳ ಹಾಗೂ ರಾಮದುರ್ಗ ತಾಲೂಕು 4 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಇವರ ಸಾಧನೆಗೆ ಸಾವಿರಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ವೇದಿಕೆಯಲ್ಲಿ ಸುದ್ದಿ ಪ್ರಸಾರದ ನಂತರ ಸಾಕಷ್ಟು ಪ್ರಶಸ್ತಿ ಸನ್ಮಾನಗಳು ದೊರೆತಿವೆ. ಇದನ್ನೂ ಓದಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

  • ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

    ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

    ಮಂಗಳೂರು: ಸ್ಕೇಟಿಂಗ್ ಪಟು ಅನಾಘಾಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.

    ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ, ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಅತಿಥಿಗಳು ಪ್ರಶಸ್ತಿ ನೀಡಿ ಗೌರವಿಸಿದರು.

    ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಸ್ಕೇಟಿಂಗ್ ಪಟು ಅನಘಾ,ತನ್ನ ನಾಲ್ಕನೇ ವಯಸ್ಸಿನಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಆರಂಭಿಸಿದ್ದು ಪ್ರಸ್ತುತ 9 ವರ್ಷ ವಯಸ್ಸಿನಲ್ಲಿ, ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅನಘಾ ಈವರೆಗೆ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 22 ಚಿನ್ನದ ಪದಕ, 9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ. ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಯು.ಟಿ.ಖಾದರ್, ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಭೋಜೆಗೌಡ, ಜಿ.ಪಂ.ಅಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ.ಅಧ್ಯಕ್ಷ ಮೋನು, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಉಪಸ್ಥಿತರಿದ್ದರು.

  • ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕ್ರೀಡಾ ವಿಭಾಗದಿಂದ ಮಂಗಳೂರಿನ ಸ್ಕೇಟಿಂಗ್ ಪಟು ಅನಘಾ ಆಯ್ಕೆಯಾಗಿದ್ದಾರೆ.

    ತನ್ನ ನಾಲ್ಕನೇ ವಯಸ್ಸಿನಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಆರಂಭಿಸಿದ 9 ವರ್ಷ ವಯಸ್ಸಿನ ಅನಘಾ ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅನಘಾ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಈವರೆಗೆ ಒಟ್ಟು 22 ಚಿನ್ನದ ಪದಕ, 9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ. ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಸೆಂಟ್ರಲ್ ಸ್ಕೂಲ್ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಕಳೆದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಪ್ರಶಸ್ತಿ ನೀಡಲಿಲ್ಲ. ಹೀಗಾಗಿ 2019-20ರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಜಿಲ್ಲಾಡಳಿತ ನಾಳೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.

  • ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಜಾತಿ ಪಾಲಿಟಿಕ್ಸ್ – ವಿಕಲಚೇತನ ಕ್ರೀಡಾಪಟುವಿಗೆ ಅವಮಾನ

    ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಜಾತಿ ಪಾಲಿಟಿಕ್ಸ್ – ವಿಕಲಚೇತನ ಕ್ರೀಡಾಪಟುವಿಗೆ ಅವಮಾನ

    ಬೆಂಗಳೂರು: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಗೌರವಿಸಿ, ಪ್ರೋತ್ಸಾಹಿಸಲು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲೂ ಜಾತಿ ಪಾಲಿಟಿಕ್ಸ್ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಶಸ್ತಿ ಆಯ್ಕೆ ಸಮಿತಿಯವರು ಜಾತಿ ಕೇಳಿ ವಿಕಲಚೇತನ ಕ್ರೀಡಾಪಟುವಿಗೆ ಅವಮಾನ ಮಾಡಿದ್ದಾರೆ.

    ಈ ಜಾತಿ ರಾಜಕೀಯ ನೋಡಿ ಬೇಸತ್ತ ಬೆಂಗಳೂರಿನ ವಿಜಯನಗರದ ನಿವಾಸಿ ಅಂತಾರಾಷ್ಟ್ರೀಯ ಕ್ರೀಡಾಪಟು ರಾಘವೇಂದ್ರ ಪಬ್ಲಿಕ್ ಟಿವಿ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಭರತಕ್ಕೆ ಚಿನ್ನದ ಪದಕ ತಂದುಕೊಟ್ಟ ರಾಘವೇಂದ್ರ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಮಿಟಿ ಅವಮಾನ ಮಾಡಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

    ರಾಜ್ಯೋತ್ಸವ ಪ್ರಶಸ್ತಿ ಪಡೆಯೋದಕ್ಕೂ ಜಾತಿ ಲೆಕ್ಕಚಾರ ಬೇಕಾ? ಎರಡು ಕಾಲು ಸ್ವಾಧೀನವಿಲ್ಲದೇ ಇದ್ದರೂ ಬದುಕಿಗೆ ಸವಾಲೆಸೆದು, ಷಾಟ್‍ಪುಟ್, ಡಿಸ್ಕಸ್ ಎಸೆತ, ಬ್ಯಾಡ್ಮಿಂಟನ್, ದೇಹದಾಡ್ರ್ಯ ಸ್ಫರ್ದೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕವನ್ನು ರಾಘವೇಂದ್ರ ಅವರು ಭಾರತಕ್ಕಾಗಿ ಗೆದ್ದು, ಕೀರ್ತಿ ತಂದಿದ್ದಾರೆ. ಆದರೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ ರಾಘವೇಂದ್ರಗೆ ಕಳೆದೆರಡು ವಾರದ ಹಿಂದೆ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಕರೆ ಬಂದಿತ್ತು. ಕಮಿಟಿ ಸದಸ್ಯರು ನೇರವಾಗಿ ನಿಮ್ಮದ್ಯಾವ ಜಾತಿ, ಯಾವ ಊರು ಎಂದು ಕೇಳಿದರು. ಈ ವಿಚಾರ ರಾಘವೇಂದ್ರವರರಿಗೆ ನೋವು ತಂದಿದ್ದು, ನಾವು ನಮ್ಮ ಬದುಕಿನ ಸವಾಲನ್ನು ಮೆಟ್ಟಿನಿಂತು ಸಾಧನೆ ಮಾಡಿದರೆ ಇವರು ಜಾತಿ ಲೆಕ್ಕಚಾರ ಹಾಕಿ ಪ್ರಶಸ್ತಿ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅಷ್ಟೇ ಅಲ್ಲದೆ ಈ ಬಾರಿ ಪ್ಯಾರ ಒಲಿಂಪಿಕ್ಸ್ ನಲ್ಲಿ ಸಾಧನೆಗೈದ ಯಾರಿಗೂ ಪ್ರಶಸ್ತಿ ನೀಡಿಲ್ಲ, ಈ ರೀತಿ ಜಾತಿ ಲೆಕ್ಕಚಾರ ಹಾಕೋದು ನಿಜಕ್ಕೂ ನಾಚಿಕೆಗೇಡು ಎಂದು ರಾಘವೇದ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಸಿಎಂ ಅವರಿಗೂ ಗೊತ್ತಿದೆಯಾ? ಜಾತಿ ಲೆಕ್ಕಚಾರ ಹಾಕಿ ಕೊಡಲು ಇದೇನು ಎಲೆಕ್ಷನ್ ಟಿಕೇಟ್ ಹಂಚಿಕೆನಾ? ವಿಕಲಚೇತನ ಪ್ರತಿಭೆ ರಾಘವೇಂದ್ರರಿಗೆ ಸರ್ಕಾರ ಏನು ಉತ್ತರ ಕೊಡುತ್ತೆ? ಪ್ರಶಸ್ತಿ ಪರಿಗಣನೆ ಮಾಡೋದು ಬೇಡ ಆದರೆ ಜಾತಿ ಲೆಕ್ಕಚಾರ ಯಾಕೆ ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ. ಹೀಗಾಗಿ ಈ ಬಗ್ಗೆ ಸಿಎಂ ಯಡಿಯೂರಪ್ಪ, ಸಚಿವರು ಹಾಗೂ ಅಧಿಕಾರಿಗಳು ಗಮನಕೊಟ್ಟು ಈ ರೀತಿ ಜಾತಿ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಿ, ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.