Tag: kannada rajyothsava

  • ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ: ಬಿಬಿಎಂಪಿ ಕಮಿಷನರ್‌ ಕರೆ

    ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ: ಬಿಬಿಎಂಪಿ ಕಮಿಷನರ್‌ ಕರೆ

    ಬೆಂಗಳೂರು: ನವೆಂಬರ್‌ 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ವಿಶೇಷ ರೀತಿಯಲ್ಲಿ ಮನೆಯಲ್ಲಿ ಆಚರಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ (Tushar Girinath) ಕರೆ ನೀಡಿದ್ದಾರೆ.

    ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ಆಯುಕ್ತರು, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಎಂದು ಜನತೆಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: KSRTC ನೌಕರರ ಕುಟುಂಬ ಕಲ್ಯಾಣ ಯೋಜನೆ ಪರಿಹಾರ ಮೊತ್ತ 3 ರಿಂದ 10 ಲಕ್ಷಕ್ಕೆ ಹೆಚ್ಚಳ

    ಬಿಬಿಎಂಪಿ ಸಲಹೆ ಏನು?
    * ಬಿಬಿಎಂಪಿ ವ್ಯಾಪ್ತಿಯಲ್ಲಿ ನವೆಂಬರ್ 01 ರಂದು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮ ವೇಳಾಪಟ್ಟಿಯಲ್ಲಿರುವಂತೆ ಧ್ವಜಾರೋಹಣ ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ ಐದು ಕನ್ನಡ ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವುದು.

    * ನವೆಂಬರ್ 1 ರಂದು ಬೆಂಗಳೂರು ನಗರದ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ ಕರ್ನಾಟಕ ಸಂಭ್ರಮ-50 “ಹೆಸರಾಯಿತು. ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷ ವಾಕ್ಯವನ್ನು ಬರೆಯುವಂತೆ ನಾಗರಿಕರಲ್ಲಿ ಮನವಿ ಮಾಡುವುದು. ಇದನ್ನೂ ಓದಿ: ಹೀಗೆ ಆದ್ರೆ ಮುಂದೆ ಕುಡಿಯೋಕು ಸಹ ನೀರು ಇರಲ್ಲ: ಕಾವೇರಿ ಹೋರಾಟದಲ್ಲಿ ಅಜ್ಜಿ ಕಣ್ಣೀರು

    * ನವೆಂಬರ್ 1 ರ ಬೆಳಗ್ಗೆ 9 ಗಂಟೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೋ) ನಾಡಗೀತೆಯನ್ನು ಪ್ರಸಾರ ಮಾಡಲಾಗುವುದು. ಆ ಸಮಯದಲ್ಲಿ ಕನ್ನಡ ನಾಡಿನ ಸಮಸ್ತ ನಾಗರಿಕರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡಗೀತೆಗೂ ಗೌರವ ಸಲ್ಲಿಸಲು ಮನವಿ ಮಾಡುವುದು.

    ನವೆಂಬರ್ 1ರ ಸಂಜೆ 50 ಗಂಟೆಗೆ ಬೆಂಗಳೂರು ನಗರದ ಎಲ್ಲಾ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಲು ಮನವಿ ಮಾಡುವುದು. ಇದನ್ನೂ ಓದಿ: ಮುಂದಿನ 15 ದಿನ ನಿತ್ಯ ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಬಿಡಿ – ಕರ್ನಾಟಕಕ್ಕೆ CWRC ನಿರ್ದೇಶನ

    * ನವೆಂಬರ್ 1ರ ಸಂಜೆ 7 ಗಂಟೆಗೆ ಬೆಂಗಳೂರು ನಗರದ ಎಲ್ಲಾ ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಬೇಕು ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂಗಾರಪೇಟೆಯಲ್ಲಿ ವರ್ಷ ಪೂರ್ತಿ ಕನ್ನಡ ಹಬ್ಬ ಆಚರಿಸ್ತಾರೆ ಕೋಲಾರದ ಸುಬ್ರಮಣಿ

    ಬಂಗಾರಪೇಟೆಯಲ್ಲಿ ವರ್ಷ ಪೂರ್ತಿ ಕನ್ನಡ ಹಬ್ಬ ಆಚರಿಸ್ತಾರೆ ಕೋಲಾರದ ಸುಬ್ರಮಣಿ

    ಕೋಲಾರ: ತೆಲುಗು-ತಮಿಳು ಪ್ರಭಾವ ಹೆಚ್ಚಾಗಿರೋ ಕೋಲಾರದ ಬಂಗಾರಪೇಟೆಯಲ್ಲಿ ಬರೀ ನವೆಂಬರ್ ಅಲ್ಲ, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ನಡೆಯುತ್ತೆ. ಇದಕ್ಕೆ ಕಾರಣ ಇಂದಿನ ನಮ್ಮ ಪಬ್ಲಿಕ್ ಹೀರೋ ಸುಬ್ರಮಣಿ.

    ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ನಿವಾಸಿಯಾಗಿರೋ ಡಾ.ಎಂ. ಸುಬ್ರಮಣಿ ಕನ್ನಡಾಭಿಮಾನಿ. ಇವರು ತೆಲುಗು, ತಮಿಳು ಭಾಷೆಯ ಪ್ರಭಾವಕ್ಕೊಳಗಾದ ಪಟ್ಟಣದಲ್ಲಿ ವರ್ಷಪೂರ್ತಿ ಕನ್ನಡ ಹಬ್ಬ ಆಚರಿಸುತ್ತಾರೆ.

    ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಎಂ.ಸುಬ್ರಮಣಿ ಅವರು 2009ರಿಂದ ನಿರಂತವಾಗಿ ಕನ್ನಡ ಸೇವೆ ಮಾಡಿಕೊಂಡು ಬಂದಿದ್ದಾರೆ. ಪ್ರತಿ ತಿಂಗಳು ರಾಜ್ಯೋತ್ಸವ ಮಾಡುವ ಇವರು ರಾಜ್ಯದ ಸಾಹಿತಿಗಳು, ಚಿಂತಕರು, ಹ್ಯಾಸ ಕಲಾವಿದರು ಹಾಗೂ ಅನೇಕ ಗಾಯಕರನ್ನು ಕರೆಸಿ ಕನ್ನಡ ಕಾರ್ಯಕ್ರಮ ಮಾಡುತ್ತಾರೆ.

    1968 ರಲ್ಲಿ ಈ ಕನ್ನಡ ಸಂಘ ಸ್ಥಾಪನೆಯಾಗಿದ್ರೂ, 2009ರಿಂದ ಪ್ರತಿ ತಿಂಗಳು ಕನ್ನಡಹಬ್ಬ ನಡೀತಿದೆ. ಕನ್ನಡದ ವೈಭವ ಹೆಚ್ಚಿಸಲು ಇಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲದೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಐಎಎಸ್ ಹಾಗೂ ಕೆಎಎಸ್‍ನಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿದೆ.

    ಯಾರಿಂದಲೂ ಆರ್ಥಿಕ ಸಹಾಯದ ನಿರೀಕ್ಷೆಗಳನ್ನಿಟ್ಟುಕೊಳ್ಳದೆ ಕನ್ನಡ ಸಂಘದ ಅಧ್ಯಕ್ಷ ಸುಬ್ರಮಣಿ ಅವರು ಕನ್ನಡ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.

  • ಡಿಪೋದಲ್ಲಿನ ವಸ್ತುಗಳಿಂದ ಗುಂಬಜ್ ನಿರ್ಮಿಸಿ ಕನ್ನಡಾಭಿಮಾನ ಮೆರೆದ KSRTC ಸಿಬ್ಬಂದಿ

    ಡಿಪೋದಲ್ಲಿನ ವಸ್ತುಗಳಿಂದ ಗುಂಬಜ್ ನಿರ್ಮಿಸಿ ಕನ್ನಡಾಭಿಮಾನ ಮೆರೆದ KSRTC ಸಿಬ್ಬಂದಿ

    ಬೀದರ್: ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಗುಂಬಜ್ ನಿರ್ಮಿಸಿ ಕನ್ನಡಾಭಿಮಾನ ಮೆರೆದಿದ್ದಾರೆ. ಗಡಿ ಜಿಲ್ಲೆಯ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಅಷ್ಟೂರು ಗುಂಬಜ್ ನಿರ್ಮಾಣ ಮಾಡಿ ಕನ್ನಡದ ಹಬ್ಬಕ್ಕೆ ಸಮರ್ಪಣೆ ಮಾಡಿದ್ದಾರೆ. ಡಿಪೋದಲ್ಲಿನ ವಸ್ತುಗಳಿಂದ 20ಕ್ಕೂ ಹೆಚ್ಚು ಸಿಬ್ಬಂದಿಗಳು ಕಲಾವಿದರಾಗಿ ನಿರ್ಮಾಣ ಮಾಡಿದ ಅಪರೂಪದ ಕನ್ನಡದ ಗುಂಬಜ್ ಇದು.

    ಬೀದರ್‍ನ ನೌಬಾದ್‍ನಲ್ಲಿರುವ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಕೆಲಸದ ನಡುವೆ ಬಿಡುವಿನ ವೇಳೆಯಲ್ಲಿ ಡಿಪೋದಲ್ಲಿನ ಕಬ್ಬಿಣದ ವಸ್ತುಗಳಿಂದ ಅಪರೂಪದ ಕನ್ನಡದ ಗುಂಬಜ್ ಮಾಡಿ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದ್ದಾರೆ. 20ಕ್ಕೂ ಹೆಚ್ಚು ಕೆಎಸ್‍ಆರ್‍ಟಿಸಿ ಡೀಪೋ ಸಿಬ್ಬಂದಿಗಳು ಹಿಂದೂ, ಮುಸ್ಲಿಂ ಧರ್ಮದ ಐಕ್ಯತೆ ಸಾರುವ ಅಷ್ಟೂರು ದರ್ಗಾದ ಗುಂಬಜ್ ನಿರ್ಮಾಣ ಮಾಡಿ ಕನ್ನಡ ಕಹಳೆ ಮೊಳಗಿಸಿದ್ದಾರೆ.

    ಸತತ 12 ದಿನಗಳ ಪರಿಶ್ರಮದಿಂದ ಈ ಐತಿಹಾಸಿಕ ಅಷ್ಟೂರು ಗುಂಬಜ್ ನಿರ್ಮಾಣ ಮಾಡಿದ್ದು, ಗಡಿ ಭಾಗದಲ್ಲಿ ಅನ್ಯಭಾಷೆಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಕನ್ನಡಕ್ಕೆ ಮತ್ತೆ ಜೀವ ತುಂಬಿದ್ದಾರೆ.

    ಒಂದು ಕಡೆ ತೆಲುಗು ಮೊತ್ತೊಂದು ಕಡೆ ಮರಾಠಿ, ಮೊಗದೊಂದು ಕಡೆ ಉರ್ದು, ಹಿಂದಿ ಭಾಷೆಗಳ ಪ್ರಭಾವಕ್ಕೆ ನಲುಗಿ ಹೋಗಿರುವ ಗಡಿ ಜಿಲ್ಲೆ ಬೀದರ್‍ನಲ್ಲಿ ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಮತ್ತೆ ಕನ್ನಡದ ಕಂಪನ್ನು ಸೂಸಿದ್ದಾರೆ. ಈ ಕನ್ನಡದ ಗುಂಬಜ್ ಇಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮಾಡಿ ನಂತರ ನೆಹರು ಸ್ಟೇಡಿಯಂನಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜೋತ್ಸವ ಕಾರ್ಯಕ್ರಮದ ಭಾಗವಾಗಲಿದೆ.