Tag: Kannada Rajyostava

  • ಕನ್ನಡ, ಕನ್ನಡಿಗರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ – ಸಿಎಂ ಎಚ್ಚರಿಕೆ

    ಕನ್ನಡ, ಕನ್ನಡಿಗರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ – ಸಿಎಂ ಎಚ್ಚರಿಕೆ

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಕೆಲಸ ಆಗುತ್ತಿದೆ. ಇನ್ನೂ ಮುಂದೆ ಯಾರಾದರೂ ನಿಂದಿಸಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಎಚ್ಚರಿಕೆ ನೀಡಿದರು.

    ಬೆಂಗಳೂರಿನ (Bengaluru) ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರೆಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಸಚಿವ ಮಧುಬಂಗಾರಪ್ಪ ಭಾಗಿಯಾಗಿದ್ದರು.ಇದನ್ನೂ ಓದಿ: ವಕ್ಫ್ ಆಸ್ತಿಯನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸಿ – ಪ್ರಧಾನಿ ಮೋದಿಗೆ ಯತ್ನಾಳ್ ಪತ್ರ

    ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಲ್ಲರಲ್ಲಿಯೂ ಕನ್ನಡ ಅಭಿಮಾನ ಇರಲಿ, ದುರಭಿಮಾನ ಬೇಡ. ಅಭಿಮಾನವಿದ್ದರೆ ಮಾತ್ರ ಕನ್ನಡ ಬೆಳೆಯುತ್ತದೆ. ಕನ್ನಡ ಬಾರದವರ ಜೊತೆಯಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿ. ಕನ್ನಡ ಬಾರದವರಿಗೆ ಕನ್ನಡ ಕಲಿಸಬೇಕು, ಆಗ ಕನ್ನಡದ ವಾತಾವರಣ ನಿರ್ಮಾಣವಾಗುತ್ತದೆ. ಎಲ್ಲರೂ ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತಹವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತಗೊಳ್ಳುತ್ತದೆ. ನಾವು ಕನ್ನಡಿಗರಾಗಿರುತ್ತೇವೆ. ಬೇರೆಯವರನ್ನೂ ಕನ್ನಡಿಗರಾಗಿ ಮಾಡುತ್ತೇವೆ. ವ್ಯವಹಾರದಲ್ಲೂ ಕನ್ನಡ ಬಳಸುತ್ತೇವೆ ಎಂದು ಶಪಥ ಮಾಡೋಣ ಎಂದು ತಿಳಿಸಿದರು.

    ರಾಜ್ಯದ ಎಲ್ಲ 57 ಲಕ್ಷ ಶಾಲಾ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ಕೊಡುತ್ತಿದ್ದೇವೆ. ಈಗ ಮಕ್ಕಳಿಗೆ ಹಾಲಿನ ಜೊತೆಗೆ ರಾಗಿ ಮಾಲ್ಟ್ ಕೊಡುತ್ತಿದ್ದೇವೆ. ಅಸಮಾನತೆ, ಅಪೌಷ್ಟಿಕತೆಯನ್ನು ಹೊಡೆದೊಡಿಸಲು ಹಾಗೂ ಗುಣಮಟ್ಟದ ಶಿಕ್ಷಣ ಕೊಡುವ ಸಲುವಾಗಿ ಈ ಯೋಜನೆಗಳನ್ನು ಮಾಡುತ್ತಿದ್ದೇವೆ. ಕನ್ನಡದ ಅಭಿಮಾನವಿರಲಿ. ಬೇರೆ ಭಾಷಿಕರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕು. ಯಾವುದೇ ಧರ್ಮ, ಭಾಷೆ, ಪ್ರಾಂತ್ಯದವರು ಇರಲಿ ಕರ್ನಾಟಕದಲ್ಲಿ ಇರುವವರೆಲ್ಲ ಕನ್ನಡಿಗರೇ. ಈ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಶಾಸ್ತ್ರೀಯ ಭಾಷೆ. ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಭಾಷೆ ವ್ಯಾಮೋಹವೂ ಅತಿಯಾಗಿರಬಾರದು, ಆದರೆ ಕನ್ನಡ ಅಭಿಮಾನ ಬಿಟ್ಟುಕೊಡಬಾರದು. ಬೇರೆ ಭಾಷೆ ಕಲಿಯಿರಿ, ಆದರೆ ಕನ್ನಡ ಮರೆಯಬೇಡಿ ಎಂದು ಹೇಳಿದರು.

    ರಾಜ್ಯಗಳ ಏಕೀಕರಣ ಆಗಿ 68 ವರ್ಷಗಳು ತುಂಬಿದ್ದು 69ಕ್ಕೆ ಕಾಲಿಟ್ಟಿದ್ದೀವಿ. 1953ರಲ್ಲಿ ಫಜಲ್ ಅಲಿ ನೇತೃತ್ವದಲ್ಲಿ ರಾಜ್ಯಗಳ ಪುನರ್ವಿಂಗಡಣೆ ಸಮಿತಿ ರಚಿಸಲಾಯಿತು. ಇವರು ಕೊಟ್ಟ ವರದಿ ಆಧಾರದಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆ ಆಯಿತು. ಆ ದಿನವನ್ನು ನಾವೆಲ್ಲರೂ ಇಡೀ ದೇಶದಲ್ಲಿ ರಾಜ್ಯಗಳ ಏಕೀಕರಣ ದಿನವಾಗಿ ಆಚರಿಸುತ್ತಿದ್ದೇವೆ. 1973ರವರೆಗೆ ಕರ್ನಾಟಕ ರಾಜ್ಯ ಆಗಿರಲಿಲ್ಲ, ಮೈಸೂರು ರಾಜ್ಯ ಆಗಿತ್ತು. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು 1973 ನವೆಂಬರ್ 1 ರಂದು ಹೆಸರು ಇಡಲಾಯಿತು. ನಾಮಕರಣ ಆಗಿ 51 ವರ್ಷ ತುಂಬುತ್ತಿದೆ. 50 ವರ್ಷವಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಆದರೆ ಅವರು 50ನೇ ವರ್ಷದ ಆಚರಣೆ ಮಾಡಲಿಲ್ಲ. ನಾವು ಬಂದ ಮೇಲೆ ಇಡೀ ವರ್ಷ ಸಂಭ್ರಮದಿಂದ ಆಚರಣೆ ಮಾಡಿದೆವು ಎಂದರು.

    ರಾಜ್ಯಕ್ಕೆ ತೆರಿಗೆ ಅನ್ಯಾಯದ ವಿಚಾರ:
    ಕರ್ನಾಟಕಕ್ಕೆ ಇವತ್ತು ದೊಡ್ಡ ಅನ್ಯಾಯ ಆಗುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದು. ನಾವು 4 ಲಕ್ಷ ಕೋಟಿ ರೂ.ಗೂ ಹೆಚ್ಚು ತೆರಿಗೆ ಕಟ್ಟಿದ್ದರೂ ವಾಪಸ್ ಪಡೆಯುತ್ತಿರುವುದು 50-60 ಸಾವಿರ ರೂ. ಕೋಟಿ ಮಾತ್ರ. 1 ರೂ.ಯಲ್ಲಿ 14-15 ಪೈಸೆ ಮಾತ್ರ ನಮಗೆ ವಾಪಸ್ ಕೊಡುತ್ತಿದ್ದಾರೆ. ನಾವು ಮುಂದುವರೆದ ರಾಜ್ಯ ಎಂದು ತೆರಿಗೆ ಪಾಲಿನಲ್ಲಿ ಅನ್ಯಾಯ ಆಗುತ್ತಿದೆ. ಹಸು ಹಾಲು ಕೊಡುತ್ತದೆ ಎಂದು ಕರುವಿಗೆ ಹಾಲು ಕೊಡದಿದ್ದರೆ ಆ ಕರು ದುರ್ಬಲ ಆಗುತ್ತದೆ. ನಾವು ಕೊಡುವ ತೆರಿಗೆ, ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡಿ ಎಂದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ. ಇದನ್ನು ನಾವೆಲ್ಲ ಕನ್ನಡಿಗರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಕ್ಕು ನಾವು ಕೇಳಬೇಕು. ಎಲ್ಲ ಸಂಸದರೂ ಲೋಕಸಭೆಯಲ್ಲಿ ಪ್ರತಿಭಟಿಸಿ, ತಮ್ಮ ದನಿಯನ್ನು ಲೋಕಸಭೆಯಲ್ಲಿ ಎತ್ತಬೇಕು ಆಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ. ಸಂಸದರಿಗೆ ನಮ್ಮ ಅನ್ಯಾಯ ಪ್ರಸ್ತಾಪಿಸಿ, ಸರಿಪಡಿಸುವ ಶಕ್ತಿ ಬರಲಿ. ಹಿಂದೆಯಿದ್ದ ಬಿಜೆಪಿ ನಮಗೆ ಬರಬೇಕಾದ ತೆರಿಗೆ ಪಾಲು ಕೇಳುವ ಕೆಲಸ ಮಾಡಲಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಸಕ್ಕರೆ ನಾಡಿಗೂ ಕಾಲಿಟ್ಟ ವಕ್ಫ್‌ ವಿವಾದ – ಮಂಡ್ಯದಲ್ಲಿ ದೇವಸ್ಥಾನವೇ ವಕ್ಫ್ ಆಸ್ತಿ

     

  • ರಾಜ್ಯದ ಜನತೆಗೆ ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ

    ರಾಜ್ಯದ ಜನತೆಗೆ ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ

    ನವದೆಹಲಿ: 69ನೇ ಕನ್ನಡ ರಾಜ್ಯೋತ್ಸವ (Kannada Rajyotsava) ಸಂಭ್ರಮ ನಾಡಿನಾದ್ಯಂತ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi )   ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯಗಳನ್ನು ಕೋರಿದ್ದಾರೆ.

    ಪ್ರಧಾನಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದೆ. ಇದು ಕರ್ನಾಟಕದ (Karnataka) ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದೆ. ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನತೆ ಸದಾ ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: 69ನೇ ಕನ್ನಡ ರಾಜ್ಯೋತ್ಸವ – ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದ ಸಿಎಂ

     ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ 50 ಮಹಿಳಾ ಸಾಧಕರು, 50 ಪುರುಷ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಕೂಡ ಈ ಬಾರಿ ಘೋಷಣೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಇದನ್ನೂ ಓದಿ: 130 ಇದ್ದ ಬಿಯರ್‌ ಬಾಟಲ್‌ ಬೆಲೆ 270 ರೂ. ಆಗಿದೆ – ಹೆಚ್‌. ವಿಶ್ವನಾಥ್‌

  • ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: 2200ಕ್ಕೂ ಅಧಿಕ ಪೊಲೀಸರ ನಿಯೋಜನೆ!

    ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: 2200ಕ್ಕೂ ಅಧಿಕ ಪೊಲೀಸರ ನಿಯೋಜನೆ!

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಅದ್ಧೂರಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯೋತ್ಸವ ಮೆರವಣಿಗೆ ಭದ್ರತೆಗಾಗಿ 2,200ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ (DCP Rohan Jagadish) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವದ ಭದ್ರತೆಗಾಗಿ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ನಿಗಾವಹಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳಲಾಗಿದೆ ಎಂದರು‌.ಇದನ್ನೂ ಓದಿ: ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿನ 800 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ ಮೂವರು ಎಸಿಪಿ ದರ್ಜೆಯ ಅಧಿಕಾರಿಗಳು 8 ಎಸಿಪಿಗಳು, 25 ಸಿಪಿಐಗಳು, 55 ಪಿಎಸ್ಐಗಳನ್ನು ನಿಯೋಜನೆ ಮಾಡಲಾಗಿದೆ.

    ಅಲ್ಲದೇ 130 ಎಎಸೈಗಳು, 1,300 ಪೊಲೀಸ್ ಕಾನ್‌ಸ್ಟೇಬಲ್‌ಗಳು ಭದ್ರತೆಗೆ ನಿಯೋಜನೆ ಮಾಡಿದ್ದು, ಜನರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಶಾಂತಿಯುತ ಕರ್ನಾಟಕ ರಾಜ್ಯೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೆನ್ನುನೋವಿನಿಂದ ದಿನವಿಡೀ ವಿಶ್ರಾಂತಿ – ಇಂದು ದರ್ಶನ್ ಆಸ್ಪತ್ರೆಗೆ ದಾಖಲು?

  • ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌, ಕುಡಿಯುವ ನೀರು: ಸಿಎಂ ಘೋಷಣೆ

    ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌, ಕುಡಿಯುವ ನೀರು: ಸಿಎಂ ಘೋಷಣೆ

    ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ಮತ್ತು ಕುಡಿಯುವ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದರು.

    ನಗರದಲ್ಲಿ ಕನ್ನಡ ರಾಜ್ಯೋತ್ಸವ (Kannada Rajyotsava) ಸಮಾರಂಭದಲ್ಲಿ ಉತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಕನ್ನಡ ರಾಜ್ಯೋತ್ಸವಕ್ಕೆ ಸರ್ಕಾರಿ ಶಾಲೆಗಳಿಗೆ ಉಚಿತ ಘೋಷಣೆಯ ಉಡುಗೊರೆ ನೀಡಿದರು. ಇದನ್ನೂ ಓದಿ: Operation Leopard: ರಣತಂತ್ರ ರೂಪಿಸಿ ಕೊನೆಗೂ ಬೊಮ್ಮನಹಳ್ಳಿ ಚಿರತೆ ಸೆರೆ

    ಉಚಿತ ವಿದ್ಯುತ್, ಕುಡಿಯುವ ನೀರು ಬೇಕು ಎಂದು ಶಿಕ್ಷಣ ಇಲಾಖೆ ಬೇಡಿಕೆ ಇಟ್ಟಿತ್ತು. ಇಂದಿನಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯುತ್‌, ಕುಡಿಯುವ ನೀರನ್ನು ಉಚಿತವಾಗಿ ನೀಡಲಾಗುವುದು ಎಂದು ವೇದಿಕೆಯಲ್ಲೇ ಸಿಎಂ ಘೋಷಿಸಿದರು.

    ಇತ್ತೀಚೆಗೆ ಕನ್ನಡ ಮಾಧ್ಯಮಗಳಲ್ಲಿ ಕಲಿಯುವ ಪ್ರೀತಿ ಕಡಿಮೆ ಆಗುತ್ತಿದೆ. ಇಂಗ್ಲಿಷ್ ಮಾಧ್ಯಮಗಳ ಮೇಲಿನ ವ್ಯಾಮೋಹ ಜಾಸ್ತಿ ಆಗುತ್ತಿದೆ. ಕನ್ನಡ ಶಾಲೆಯಲ್ಲಿ ಓದಿದರೆ ಕೆಲಸ ಸಿಗುವುದಿಲ್ಲ ಎನ್ನುವ ಕಲ್ಪನೆ ಇದೆ. ಈ ಕಲ್ಪನೆ ಬಿಡಬೇಕು. ಕನ್ನಡ ಮಾಧ್ಯಮಗಳಲ್ಲಿ ಕಲಿಯುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕರ್ನಾಟಕ ಆಧುನಿಕ ಉದ್ಯಮದ ತೊಟ್ಟಿಲು – ರಾಜ್ಯೋತ್ಸವಕ್ಕೆ ಶುಭಕೋರಿದ ಮೋದಿ, ಸಿಎಂ

    ನಮ್ಮ ‌ಪ್ರಯತ್ನಕ್ಕೆ ಕೋರ್ಟ್‌ಗಳು ಸಹಕಾರ ನೀಡುತ್ತಿಲ್ಲ. ತಮ್ಮ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಅಂತ ಪೋಷಕರು ನಿರ್ಧಾರ ಮಾಡಬಹುದು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ನಮ್ಮ ‌ಪ್ರಯತ್ನಕ್ಕೆ ಹಿನ್ನಡೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಕನಿಷ್ಠ SSLC ವರೆಗೆ ಕನ್ನಡ ಮಾಧ್ಯಮದಲ್ಲಿ ಮಕ್ಕಳು ಓದಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: BMTC ಸಾರಥಿಗಳ ಹಾರ್ಟ್ ಇನ್ ಡೇಂಜರ್- ಜಯದೇವ ವೈದ್ಯರ ವರದಿಯಲ್ಲಿ ಬಹಿರಂಗ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಡು, ನುಡಿಗಾಗಿ ರಾಜಕಾರಣಿಗಳು ಏನೂ ಮಾಡಿಲ್ಲ.. ಕನ್ನಡ ಕಾರ್ಯಕ್ರಮಗಳಿಗೆ ಅವರನ್ನ ಕರೆಯಲ್ಲ – ಕರವೇ ಅಧ್ಯಕ್ಷ

    ನಾಡು, ನುಡಿಗಾಗಿ ರಾಜಕಾರಣಿಗಳು ಏನೂ ಮಾಡಿಲ್ಲ.. ಕನ್ನಡ ಕಾರ್ಯಕ್ರಮಗಳಿಗೆ ಅವರನ್ನ ಕರೆಯಲ್ಲ – ಕರವೇ ಅಧ್ಯಕ್ಷ

    ಮಂಡ್ಯ: ನಾಡು, ನುಡಿಗಾಗಿ ರಾಜಕಾರಣಿಗಳು ಏನನ್ನೂ ಮಾಡಿಲ್ಲ. ಹೀಗಾಗಿ ಇನ್ಮುಂದೆ ಕನ್ನಡ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ (T.A.Narayana Gowda) ಹೇಳಿದ್ದಾರೆ.

    ಕೆ.ಆರ್‌. ಪೇಟೆಯಲ್ಲಿ (K.R. Pet) ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಲಿಬಾಬ ಎಂದಿದ್ದಕ್ಕೆ ಬಿಜೆಪಿ ಸಚಿವ ಕೆ.ಸಿ.ನಾರಾಯಣಗೌಡ (K.C.Narayana Gowda) ಹಾಗೂ ಜೆಡಿಎಸ್‌ ಮುಖಂಡ ಸಂತೋಷ್‌ ನಡುವೆ ವೇದಿಕೆಯಲ್ಲೇ ಜಗಳವಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಮಾತನಾಡಿದ ಕರವೇ ಅಧ್ಯಕ್ಷ, ಇನ್ಮೇಲೆ ಯಾವ ರಾಜಕಾರಣಿಗಳನ್ನೂ ಕನ್ನಡ ಕಾರ್ಯಕ್ರಮಗಳಿಗೆ ಕರೆಯಲ್ಲ. ನಾನು ನಮ್ಮ ಕಾರ್ಯಕರ್ತರಿಗೆ ರಾಜಕಾರಣಿಗಳನ್ನ ದೂರವಿಡಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಲಿಬಾಬಗೆ ಹೋಲಿಕೆ ವಿಚಾರಕ್ಕೆ ವೇದಿಕೆಯಲ್ಲೇ ಜೆಡಿಎಸ್ ಮುಖಂಡ, ಬಿಜೆಪಿ ಸಚಿವರ ಮಧ್ಯೆ ಫೈಟ್

    ಕೆ.ಆರ್. ಪೇಟೆಯಲ್ಲಿ ಕನ್ನಡ ವೇದಿಕೆಯನ್ನ ರಾಜಕಾರಣಕ್ಕೆ ಬಳಸಿಕೊಳ್ಳಲು ಬಂದರು. ಕಾರ್ಯಕ್ರಮವನ್ನ ರಾಜಕಾರಣದಿಂದ ಹಾಳು‌ಮಾಡಲು ನೋಡಿದರು. ಕೆ.ಆರ್. ಪೇಟೆಯಲ್ಲಿ ನಡೆಯುತ್ತಿದ್ದದ್ದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ. ಅದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಎಲ್ಲಾ ಪಕ್ಷದ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಜೆಡಿಎಸ್ ಮುಖಂಡ ಸಂತೋಷ್ ರಾಜಕೀಯ ಮಾತಾಡಲು ಶುರು ಮಾಡಿದ. ಕರವೇ ಕಾರ್ಯಕ್ರಮದಲ್ಲಿ ಕನ್ನಡ, ಕರ್ನಾಟಕ ಪರ ಮಾತನಾಡಿಲ್ಲ. ಅದನ್ನ ಬಿಟ್ಟು ರಾಜಕಾರಣ ಮಾಡಲು ಶುರು ಮಾಡಿದ್ರು. ನಂತರ ನಾನು ಮೈಕ್ ತೆಗೊಂಡು ಸಚಿವ ನಾರಾಯಣಗೌಡ ಹಾಗೂ ಸಂತೋಷ್‌ ಇಬ್ಬರನ್ನೂ ಸುಮ್ಮನಾಗಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ವೇದಿಕೆಯಲ್ಲಿ ಹೊಡೆದಾಟಗಳು ಆಗುತ್ತಿದ್ವು. ಅದನ್ನ ನಾನು ತಡೆದೆ. ನೀವು ರಾಜಕೀಯ ಮಾಡಬೇಕಿದ್ರೆ ನಿಮ್ಮ ವೇದಿಕೆಗಳಲ್ಲಿ ಮಾಡಿ. ನಾಡು, ನುಡಿಗೆ ಎಲ್ಲಾ ರಾಜಕೀಯ ‌ಪಕ್ಷಗಳ ಸಾಧನೆ ಶೂನ್ಯ. ಅವರ ವೇದಿಕೆಗಳಲ್ಲಿ ರಾಜಕಾರಣ ಮಾಡಿಕೊಳ್ಳಲಿ. ಕನ್ನಡದ ಕಾರ್ಯಕ್ರಮದಲ್ಲಿ ರಾಜಕಾರಣ ಮಾಡಬಾರದು ಅನ್ನೋ ತಿಳುವಳಿಕೆ ಸಚಿವರಿಗೆ ಇರಬೇಕಿತ್ತು. ಕನ್ನಡವನ್ನ ಮರೆತು ರಾಜಕೀಯ ಕೆಸರೆರೆಚಾಟ ಮಾಡಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಾರಿಕ್‌ನನ್ನು ವಶಕ್ಕೆ ಪಡೆದ NIA ಅಧಿಕಾರಿಗಳು

    Live Tv
    [brid partner=56869869 player=32851 video=960834 autoplay=true]

  • ಕನ್ನಡ ರಾಜ್ಯೋತ್ಸವದಂದೇ ಅಬ್ಬರಿಸಲಿದ್ದಾನೆ ಸ್ಟಾರ್ ಕನ್ನಡಿಗ!

    ಕನ್ನಡ ರಾಜ್ಯೋತ್ಸವದಂದೇ ಅಬ್ಬರಿಸಲಿದ್ದಾನೆ ಸ್ಟಾರ್ ಕನ್ನಡಿಗ!

    ರ್ನಾಟಕದಲ್ಲಿ ಕನ್ನಡಿಗರೇ ನಿಜವಾದ ಸ್ಟಾರ್​​​ಗಳೆಂಬುದು ವಾಸ್ತವ. ಕನ್ನಡಕ್ಕೆ ಕುತ್ತುಂಟಾದರೆ ಕನ್ನಡಿಗರೆಲ್ಲರೂ ಒಗ್ಗಟಾಗಿ ನಿಂತು ಹೋರಾಡುತ್ತಾರೆಂಬುದೂ ನಿರ್ವಿವಾದ. ಅಂಥಾ ಅಪ್ಪಟ ಕನ್ನಡತನದೊಂದಿಗೆ, ಸಹಜ ಸುಂದರವಾದ ದೇಸೀ ಕಥೆಯೊಂದಿಗೆ ಮೂಡಿ ಬಂದಿರುವ ಚಿತ್ರ ಸ್ಟಾರ್ ಕನ್ನಡಿಗ. ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರವನ್ನು ಆಟೋ ಡ್ರೈವರ್‌ಗಳು, ಶ್ರಮ ಜೀವಿಗಳೆಲ್ಲ ಕಾಸು ಹೊಂದಿಸಿ ನಿರ್ಮಾಣ ಮಾಡಿದ್ದಾರೆ. ಇಂಥಾ ಕಲಾ ಪ್ರೇಮವಿದ್ದಲ್ಲಿ ಒಂದೊಳ್ಳೆ ಚಿತ್ರ ರೂಪುಗೊಂಡಿರುತ್ತದೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ತಕ್ಕುದಾಗಿಯೇ ಮೈ ಕೈ ತುಂಬಿಕೊಂಡಿರುವ ಸ್ಟಾರ್ ಕನ್ನಡಿಗ ಇದೇ ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದಂದೇ ಅಬ್ಬರಿಸಲು ತಯಾರಾಗಿದ್ದಾನೆ.

    ಇದು ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಚಿತ್ರ. ಶಾಲಿನಿ ಭಟ್ ಇಲ್ಲಿ ನಾಯಕಿಯಾಗಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಆಟೋ ಡ್ರೈವರ್‌ಗಳೇ ಬೆವರಿನ ಹಣದಿಂದ ನಿರ್ಮಾಣ ಮಾಡಿರುವ ಈ ಚಿತ್ರ ಹೆಸರಿಗೆ ತಕ್ಕುದಾಗಿಯೇ ಕನ್ನಡಾಭಿಮಾನದ ಕಥೆ ಹೊಂದಿರೋ ಚಿತ್ರ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಇದು ಕನ್ನಡ ಪರವಾದ ಹೋರಾಟವನ್ನು ಮಾತ್ರವೇ ಆಧಾರವಾಗಿಸಿಕೊಂಡಿರುವ ಚಿತ್ರವಲ್ಲ. ಇಲ್ಲಿ ಬದುಕನ್ನೇ ಹೋರಾಟವೆಂದುಕೊಂಡ ಜೀವಗಳ ಮನ ಮಿಡಿಯುವ ಕಥೆಯಿದೆ. ಅದು ಪ್ರತಿಯೊಬ್ಬರನ್ನೂ ಮುಟ್ಟುವಂತೆ ಮೂಡಿ ಬಂದಿದೆ.

    ಇಲ್ಲಿ ವೈಭವೀಕರಣಕ್ಕೆ ಆಸ್ಪದ ಕೊಟ್ಟಿಲ್ಲ. ಅದನ್ನೆಲ್ಲ ಇಲ್ಲಿರೋ ಸಹಜ ಸುಂದರ ಕಥೆಯೇ ಮಾಡುತ್ತದೆ. ಚಿತ್ರತಂಡವೇ ಹೇಳಿಕೊಳ್ಳುವ ಪ್ರಕಾರ ಈ ಕಥೆಯನ್ನು ಅತ್ಯಂತ ಸಹಜವಾಗಿ ಅಣಿಗೊಳಿಸಲಾಗಿದೆ. ನೋಡುಗರಿಗೆ ಕಣ್ಣಮುಂದೊಂದು ಕಥೆ ನಡೆಯುತ್ತದೆ ಅನ್ನಿಸೋದಕ್ಕಿಂತ ತಮ್ಮ ನಡುವಿನದ್ದೇ ಕಥೆಗಳು ತೆರೆ ಮೇಲೆ ಸುರುಳಿ ಬಿಚ್ಚಿಕೊಳ್ಳುತ್ತಿದೆ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆಯಂತೆ. ಇದೆಲ್ಲದರಾಚೆಗೂ ಹೆಸರಿಗೆ ತಕ್ಕುದಾದ ಗುಣ ಲಕ್ಷಣಗಳು ಈ ಸಿನಿಮಾದಲ್ಲಿವೆ. ಕನ್ನ ಪ್ರೀತಿಯ ಸ್ಟಾರ್ ಕನ್ನಡಿಗ ಚಿತ್ರ ಕನ್ನಡ ರಾಜ್ಯೋತ್ಸವದಂದೇ ಬಿಡುಗಡೆಗೊಳ್ಳುತ್ತಿರೋದು ನಿಜಕ್ಕೂ ಕನ್ನಡದ ಪ್ರೇಕ್ಷಕರ ಪಾಲಿಗೆ ಹಬ್ಬದಂಥಾ ಸಂಗತಿ.

  • ಧ್ವಜಾರೋಹಣ ಬಿಟ್ಟು ಚುನಾವಣೆ ಪ್ರಚಾರ ಮಾಡಲು ಹೊರಟ ಜಮೀರ್ ಅಹ್ಮದ್

    ಧ್ವಜಾರೋಹಣ ಬಿಟ್ಟು ಚುನಾವಣೆ ಪ್ರಚಾರ ಮಾಡಲು ಹೊರಟ ಜಮೀರ್ ಅಹ್ಮದ್

    ಹಾವೇರಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡೋದನ್ನ ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉಪಚುನಾವಣೆಯ ಪ್ರಚಾರ ಮಾಡಿದ್ದಾರೆ.

    63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಧ್ವಜಾರೋಹಣ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಆಚರಣೆಯಲ್ಲಿ ಭಾಗಿಯಾಗದೇ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ.

    ಸಚಿವರ ಗೈರಿನಿಂದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮತ್ತು ಇತರ ಅಧಿಕಾರಿಗಳು ಸೇರಿ ಧ್ವಜಾರೋಹಣ ಮಾಡಿದರು. ಈ ಸಂಭ್ರಮದಲ್ಲಿ ಸ್ಥಳಿಯ ಶಾಸಕ ನೆಹೆರು ಓಲೇಕಾರ್ ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡ ರಾಜ್ಯೋತ್ಸವದ ದಿನವೇ ಪ್ರತ್ಯೇಕ ರಾಜ್ಯಕ್ಕಾಗಿ ಕಲಬುರಗಿಯಲ್ಲಿ ಹೋರಾಟ

    ಕನ್ನಡ ರಾಜ್ಯೋತ್ಸವದ ದಿನವೇ ಪ್ರತ್ಯೇಕ ರಾಜ್ಯಕ್ಕಾಗಿ ಕಲಬುರಗಿಯಲ್ಲಿ ಹೋರಾಟ

    ಕಲಬುರಗಿ: ಇಂದು ನಾಡಿನೆಲ್ಲೆಡೆ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಆದರೆ ಬಿಸಿಲೂರು ಕಲಬುರಗಿಯಲ್ಲಿ ಮಾತ್ರ ಪ್ರತ್ಯೇಕತೆಯ ಕೂಗು ತೀವ್ರಗೊಂಡಿದೆ. ರಾಜ್ಯೋತ್ಸವದ ದಿನವಾದ ಇಂದೇ ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟಗಳು ನಡೆದಿವೆ.

    ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರು ಇಂದು ಬೆಳ್ಳಂ ಬೆಳಿಗ್ಗೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್ ಬಳಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾಗಿದ್ದು, ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆಯೇ ಹೋರಾಟಗಾರರು ಬಂಧನಕ್ಕೆ ಬೆದರಿ ಓಡಿ ಹೋಗುವ ಮೂಲಕ ನಗೆಪಾಟಲಿಗೀಡಾದರು. ಇನ್ನೊಂದಡೆ ಹೈದರಾಬಾದ್ – ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರೂ ಸಹ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್ ನಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದರು. ಈ ಕಾರ್ಯಕರ್ತರನ್ನೂ ಸಹ ಪೊಲೀಸರು ವಶಕ್ಕೆ ತೆಗೆದುಕೊಂಡರು.