Tag: kannada name board

  • ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ

    ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ

    – ನಾಳೆಯೊಳಗೆ ನಾಮಫಲಕ ಹಾಕದಿದ್ದರೆ ನಾವೇ ತೆರವು ಮಾಡ್ತೀವಿ
    – ಅಂಗಡಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಎಚ್ಚರಿಕೆ

    ಬೆಂಗಳೂರು: ಕಡ್ಡಾಯ ಕನ್ನಡ ನಾಮಫಲಕ (Kannada Name Board) ಅಳವಡಿಕೆಗೆ ಇಂದು ಕೊನೆಯ ದಿನವಾಗಿದ್ದು, ಈ ಗಡುವನ್ನು ಒಂದು ದಿನ ವಿಸ್ತರಣೆ ಮಾಡಿ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಆದೇಶ ಹೊರಡಿಸಿದ್ದಾರೆ.

    ಇಂದು ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಲಾಗಿತ್ತು. ಆದರೆ ಇದನ್ನು ಕಮೀಷನರ್ ಒಂದು ದಿನ ವಿಸ್ತರಣೆ ಮಾಡಿದ್ದಾರೆ. 3,000 ಅಂಗಡಿಗಳು ಇನ್ನೂ ಕನ್ನಡ ನಾಮಫಲಕ ಹಾಕಿಲ್ಲ. ನಾಳೆಯೊಳಗೆ (ಫೆ.29) ನಾಮಫಲಕ ಹಾಕದಿದ್ದರೆ ನಾವೇ ತೆರವು ಮಾಡುತ್ತೇವೆ. ಕೂಡಲೇ ನಾಮಫಲಕ ಬದಲಾಯಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್‌ – ಅಖಿಲೇಶ್‌ ಯಾದವ್‌ಗೆ ಸಿಬಿಐ ಸಮನ್ಸ್‌

    ಕಡ್ಡಾಯ ಕನ್ನಡ ನಾಮಫಲಕ ಬಳಸದವರಿಗೆ ಮತ್ತೊಂದು ದಿನ ಅವಕಾಶ ನೀಡಲಾಗಿದೆ. ನಾಳೆ ಸಂಜೆಯವರೆಗೆ ನಾಮಫಲಕ ಬದಲಾವಣೆಗೆ ಅವಕಾಶ ನೀಡಿದ್ದು, ನಾಳೆಯೊಳಗೆ ಬದಲಾಯಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ಕೊಡಲಾಗಿದೆ. ಈಗಾಗಲೇ 90% ರಷ್ಟು ನಾಮಫಲಕ ಬದಲಾಗಿದೆ. ಇನ್ನು ಉಳಿದಿರೋದು 3 ಸಾವಿರ ನಾಮಫಲಕ ಮಾತ್ರ. ಅವರು ನಾಳೆ ಸಂಜೆಯೊಳಗೆ ಬದಲಾಯಿಸಬೇಕು. ಕೆಲವು ಅಂತಾರಾಷ್ಟ್ರೀಯ ಕಂಪನಿಗಳು ಹಾಗೂ ಎಸ್‌ಬಿಐ, ಕೆನರಾ ಬ್ಯಾಂಕ್ ಮನವಿ ಕೊಟ್ಟಿವೆ. ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ಕೇಳಿದ್ದಾರೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    ಇನ್ನು ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿದ್ದು, ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಬಿಬಿಎಂಪಿ ಹಾಗೂ ಸರ್ಕಾರ ನಾಮಫಲಕ ಜಾರಿಗೊಳಿಸಲು ಇವತ್ತಿನವರೆಗೂ ಗಡುವು ಕೇಳಿತ್ತು. ಒಟ್ಟು 50,216ಗಳಲ್ಲಿ 40,600 ಉದ್ಯಮಿಗಳಿಗೆ ನೋಟಿಸ್ ಕೊಟ್ಟಿದ್ದೇವೆ. 3,600 ಉದ್ಯಮಿಗಳು ಕನ್ನಡ ನಾಮಫಲಕ ಹಾಕಿಕೊಳ್ಳಬೇಕು. ಒಂದು ವೇಳೆ ನಾಳೆಯೊಳಗೆ ಕನ್ನಡ ನಾಮಫಲಕ ಜಾರಿಯಾಗದಿದ್ದರೆ ಅವರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಕಮೀಷನರ್ ಹೇಳಿದ್ದಾರೆ. 100% ಕನ್ನಡೀಕರಣ ಆಗದಿದ್ದರೇ ಮತ್ತೆ ಬೀದಿಗೆ ಇಳಿಯುತ್ತೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಕನ್ನಡ ನಾಮಫಲಕಗಳು ಇರಬೇಕು. ಇಲ್ಲದಿದ್ದರೆ ಎಲ್ಲಾ ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರು ಬೀದಿಗಿಳಿಯುತ್ತಾರೆ. ಬೆಂಗಳೂರಲ್ಲಿ 3,500-4,000 ಉದ್ಯಮಿಗಳು ಕನ್ನಡ ಬಳಸದೇ ಇರೋರು ನಾಮಫಲಕದಲ್ಲಿ 60% ಕನ್ನಡ ನಾಮಫಲಕ ಹಾಕಬೇಕು. ನುಡಿದಂತೆ ನಡೆಯದಿದ್ದರೇ, ಕನ್ನಡ ಬಳಸದೇ ಇದ್ದರೇ ಮತ್ತೆ ಬೆಂಗಳೂರಲ್ಲಿ ಕರವೇ ಕಾರ್ಯಕರ್ತರು ಬೀದಿಗೆ ಇಳಿಯುತ್ತೇವೆ. ನಾಮಫಲಕ ಹಾಕದೇ ಇರೋರ ಮೇಲೆ ಮಾರ್ಚ್ 1 ರವರೆಗೂ ಬಿಬಿಎಂಪಿ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡುತ್ತೇವೆ. ಬಿಬಿಎಂಪಿಯಿಂದ ಯಾವುದೇ ಕ್ರಮ ಆಗದಿದ್ದರೇ ಮತ್ತೆ ಮಾರ್ಚ್ 5 ರಂದು ಬೀದಿಗಿಳಿಯುತ್ತೇವೆ. ಮಾರ್ಚ್ 5 ರಂದು ಬಿಬಿಎಂಪಿ ವಿರುದ್ಧ ಕರವೇ ಪ್ರೊಟೆಸ್ಟ್ ಮಾಡುವುದಾಗಿ ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: 15 ಬಿಜೆಪಿ ಶಾಸಕರ ಅಮಾನತುಗೊಳಿಸಿದ ಸ್ಪೀಕರ್‌

  • ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

    ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

    – ಪೆಟ್ರೋಲ್ ಬಾಟಲಿ ಹಿಡಿದು ಬಸ್ಸಿಗೆ ಬೆಂಕಿ ಹಚ್ಚಲು ಯತ್ನ
    – ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪ

    ಬೆಳಗಾವಿ: ಕಳೆದ ರಾತ್ರಿ ಎಂಇಎಸ್ ಕಾರ್ಯಕರ್ತರು ನಡೆಸಿದ್ದ ದಾಂಧಲೆ ಕುರಿತ ಇಂಚಿಂಚೂ ಮಾಹಿತಿಯ ವೀಡಿಯೋಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ

    ಶುಕ್ರವಾರ ರಾತ್ರಿ 10:0ರ ವೇಳೆಗೆ ಮುಖಕ್ಕೆ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ 6-7 ಜನರಿದ್ದ 5 ಎಂಇಎಸ್ ಗ್ಯಾಂಗ್ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕನ್ನಡದ ನಾಮಫಲಕಗಳನ್ನು ಕೆಳಕ್ಕುರುಳಿಸಿ ಕಾಲಿನಿಂದ ಹಾನಿಗೊಳಿಸಿ ಹೋಟೆಲ್‍ಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಕಾರಿನ ಮೇಲೆ ಶಿವಸೇನೆ ಪುಂಡರಿಂದ ಕಲ್ಲು ತೂರಾಟ

    ದುಷ್ಕರ್ಮಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಹಾನಿಪಡಿಸಿ ಖಡ್ಗ, ಗುರಾಣಿ ಬೇರೆ, ಬೇರೆ ಕಡೆ ಇಟ್ಟು ವಿಕೃತಿಗೊಳಿಸಿ ದುಷ್ಕೃತ್ಯವೆಸಗಿದ್ದಾರೆ. ಜೊತೆಗೆ ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 20ಕ್ಕೂ ಹೆಚ್ಚು ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಿಂಸಾಚಾರ ಕೃತ್ಯವೆಸಗಿದ್ದಾರೆ.

    MES

    ನಗರದ ವಿವಿಧೆಡೆ ಲಾಡ್ಜ್‌ಗಳ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ಆರ್‌ಟಿಓ ವೃತ್ತದ ಬಳಿಯ ನಿರ್ಮಾಣ ಹಂತದ ಪೊಲೀಸ್ ಕಾಂಪ್ಲೆಕ್ಸ್‌ನ ಪಾರ್ಕಿಂಗ್‍ನಲ್ಲಿ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

    ಬೆಳಗಾವಿ ಹೊರವಲಯದಲ್ಲಿ ಕೂಡ ಕೆಎಸ್ಆರ್‌ಟಿಸಿ ಬಸ್ ಮೇಲೆ ಕಿಡಿಕೇಡಿಗಳು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಓರ್ವ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಬಸ್‍ಗೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ.

    ಈ ಘಟನೆಯ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದು, ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹಸಚಿವರಿಗೆ ಸೂಚನೆ ನೀಡಲಾಗಿದ್ದು, ಹಲವರ ಬಂಧನವೂ ಆಗಿದೆ. ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಕಾನೂನುಬಾಹಿರ. ಇಂತಹ ಘಟನೆ ನಡೆಯದಂತೆ ದೀರ್ಘಾವಧಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಇದನ್ನೂಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ರಾಷ್ಟ್ರಭಕ್ತರ ಪ್ರತಿಮೆಗೆ ಭಂಗ ತರುವುದು ಸರಿಯಲ್ಲ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸಬೇಕು. ನಾಡಿಗೆ ಹೋರಾಡಿದವರ, ತ್ಯಾಗ ಮಾಡಿದವರ ಗೌರವ ಉಳಿಸಬೇಕು. ನಾಡಿನಲ್ಲಿ ಕ್ಷೋಭೆ ಉಂಟುಮಾಡುವುದು ಸರಿಯಲ್ಲ. ಕೆಲವೇ ಕೆಲವು ಪುಂಡರು ಇಂತಹ ದುಷ್ಕೃತ್ಯ ಮಾಡುತ್ತಿದ್ದು, ಅವರನ್ನು ಸದೆಬಡಿಯುತ್ತೇವೆ”