Tag: Kannada Literary Conference

  • ಸಾಹಿತ್ಯ ಸಮ್ಮೇಳನಕ್ಕೂ ಮುನ್ನವೇ ವಿವಾದ; ಟಿಪ್ಪು ಕುರಿತ ವಿಚಾರ ಸಂಕಿರಣಕ್ಕೆ ಪ್ರಗತಿಪರ ಒತ್ತಾಯ

    ಸಾಹಿತ್ಯ ಸಮ್ಮೇಳನಕ್ಕೂ ಮುನ್ನವೇ ವಿವಾದ; ಟಿಪ್ಪು ಕುರಿತ ವಿಚಾರ ಸಂಕಿರಣಕ್ಕೆ ಪ್ರಗತಿಪರ ಒತ್ತಾಯ

    ಮಂಡ್ಯ: 87ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ (87th Kannada Literary Conference) ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಜರುಗಲಿದೆ. ಸಮ್ಮೇಳನದ ಆರಂಭಕ್ಕೂ ಮೊದಲೇ ಇದೀಗ ಟಿಪ್ಪು ಸುಲ್ತಾನ್ ಬಗೆಗಿನ ವಿಚಾರ ಸಂಕಿರಣದ (Symposium) ವಿವಾದ ಹುಟ್ಟಿಕೊಂಡಿದೆ.

    ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್ ವಿಚಾರ ಸಂಕಿರಣವನ್ನು ನಡೆಸಬೇಕೆಂದು ಪ್ರಗತಿಪರರು ಆಗ್ರಹ ಮಾಡ್ತಾ ಇದ್ದರೆ, ಇನ್ನೊಂದೆಡೆ ಹಿಂದೂ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಇದನ್ನೂ ಓದಿ: ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ನಿಂದನೆ – ವಿವಾದದ ಬಳಿಕ ಪ್ರೀತಿಯಿಂದ ಕರೆದಿದ್ದು ಅಂತ ಸ್ಪಷ್ಟನೆ

    ಮಂಡ್ಯದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರನ್ನು ನೆನೆಯಬೇಕು. ಇವರಿಗಿಂತ ಹೆಚ್ಚಾಗಿ ಟಿಪ್ಪು ಸುಲ್ತಾನ್ ಅವರನ್ನು ನೆನಯಬೇಕು. ಟಿಪ್ಪು ರೈತರಿಗೆ, ಜನ ಸಾಮಾನ್ಯರಿಗೆ ಹಾಗೂ ಮಂಡ್ಯ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಟಿಪ್ಪು ಆಡಳಿತ ವ್ಯವಸ್ಥೆಯನ್ನು ನಾವು ಇಂದಿಗೂ ಸಹ ಅಳವಡಿಸಿಕೊಂಡಿದ್ದೇವೆ, ಹೀಗಿರುವಾಗ ಟಿಪ್ಪು ನೆನೆಯುವುದು ನಮ್ಮ ಕರ್ತವ್ಯ ಎಂದು ಪ್ರಗತಿಪರರು ಪಟ್ಟು ಹಿಡಿದಿದ್ದಾರೆ.

    ಮಂಡ್ಯದಲ್ಲಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಕುರಿತ ವಿಚಾರ ಗೋಷ್ಠಿ ಇರಲೇಬೇಕೆಂದು ಪ್ರಗತಿಪರ ಚಿಂತಕ ಜಗದೀಶ್ ಕೊಪ್ಪ ಆಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಉಪಚುನಾವಣಾ ಕಣದಲ್ಲಿ ಬೆಟ್ಟಿಂಗ್ ಭರಾಟೆ – ಕುತೂಹಲ ಹೆಚ್ಚಿಸಿದ ಚನ್ನಪಟ್ಟಣ ಫಲಿತಾಂಶ

    ಇನ್ನೂ ಇದಕ್ಕೆ ಹಿಂದೂ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಟಿಪ್ಪು ಒಬ್ಬ ಕನ್ನಡ ಹಾಗೂ ಹಿಂದೂ ವಿರೋಧಿಯಾಗಿದ್ದ. ಈತ ಕನ್ನಡದ ಬದಲು ಪರ್ಷಿಯನ್ ಭಾಷೆಗೆ ಹೆಚ್ಚು ಒಲವು ನೀಡುತ್ತಿದ್ದ ವ್ಯಕ್ತಿ. ಇಂತಹ ವ್ಯಕ್ತಿಯ ವಿಚಾರ ಸಂಕೀರ್ಣವನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಲು ಮುಂದಾದರೆ ನಾವು ತಡೆಯುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಲಕ್ಷ ಲಕ್ಷ ವಂಚನೆ – ಆರೋಪಿ ಅರೆಸ್ಟ್

  • 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವೆಂಕಟೇಶ ಮೂರ್ತಿ ಆಯ್ಕೆ

    85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವೆಂಕಟೇಶ ಮೂರ್ತಿ ಆಯ್ಕೆ

    ಬೆಂಗಳೂರು: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ, ಅಂಕಣಕಾರ, ವಿಮರ್ಶಕ, ನಾಟಕಕಾರ ಎಚ್.ಎಸ್.ವೆಂಕಟೇಶ ಮೂರ್ತಿ ಆಯ್ಕೆಯಾಗಿದ್ದಾರೆ.

    ಬೆಂಗಳೂರಿನ ಸಾಹಿತ್ಯ ಪರಿಷತ್ ನಲ್ಲಿ ನಡೆದ ಸಭೆಯಲ್ಲಿ ಹೆಚ್.ಎಸ್. ವೆಂಕಟೇಶ ಮೂರ್ತಿ ಹೆಸರು ಅಂತಿಮಗೊಳಿಸಲಾಗಿದೆ. ಕಲಬುರಗಿಯಲ್ಲಿ 2020ರ ಫೆಬ್ರವರಿ 5, 6 ಮತ್ತು 7 ರಂದು 3 ದಿನಗಳ ಕಾಲ ನಡೆಯಲಿದೆ. ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಬಿಸಿಲ ನಾಡಿನಲ್ಲಿ ಕನ್ನಡದ ಕಲರವಕ್ಕೆ ರಂಗು ಬಂದತ್ತಾಗಿದೆ.

    32 ವರುಷಗಳ ನಂತರ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗೆ ಕ್ಯಾಂಪಸ್‍ನಲ್ಲಿ ಸಮ್ಮೇಳನ ನಡೆಸುವ ನಿರ್ಣಯವಾಗಿದ್ದು ಸಿದ್ಧತೆಗಳು ನಡೆಯುತ್ತಿದೆ.

    ಭದ್ರಾವತಿಯಲ್ಲಿ ಡಿಪ್ಲೋಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭಿಸಿದ ವೆಂಕಟೇಶ ಮೂರ್ತಿಯವರು 1966ರಿಂದ 1971ರ ವರೆಗೆ ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದರು. 1971ರಿಂದ 1973ರವರೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಅಧ್ಯಯನ ನಡೆಸಿ 1973ರಿಂದ 2000ದ ವರೆಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ, ಅಲ್ಲೇ ಪ್ರಾಧ್ಯಾಪಕನಾಗಿ ನಿವೃತ್ತಿ ಪಡೆದರು. 2000ದಿಂದ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ.