ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪುನೀತ್ ಸಮಾಧಿಗೆ ಬಣ್ಣ ಬಣ್ಣದ ಗುಲಾಬಿ ಹೂವಿನ ಅಲಂಕಾರ ಮಾಡಲಾಗಿದೆ. ದೊಡ್ಮನೆ ಕುಟುಂಬ ಬೆಳಗ್ಗೆ 9:30ರ ಸುಮಾರಿಗೆ ಪುನೀತ್ ಸಮಾಧಿಗೆ ಪೂಜೆ ನೆರವೇರಿಸಲಿದ್ದು, ಇಷ್ಟದ ಖಾದ್ಯಗಳನ್ನಿಟ್ಟು ಪೂಜೆ ಮಾಡಲಿದ್ದಾರೆ.ಇದನ್ನೂ ಓದಿ:ಆಂಧ್ರ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತ
ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಇಂದು ಇಡೀ ದಿನ ಅನ್ನಸಂತರ್ಪಣೆ ಜೊತೆಗೆ ನೇತ್ರದಾನ, ರಕ್ತದಾನ ಶಿಬಿರಗಳ ಆಯೋಜನೆ ಮಾಡಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲಗಳಿಂದ ಅಭಿಮಾನಿಗಳು ಆಗಮಿಸಿ, ಅಪ್ಪುಗೆ ನಮನ ಸಲ್ಲಿಸಲಿದ್ದಾರೆ. ಅಲ್ಲದೇ, ರಾಜ್ಯಾದ್ಯಂತ ಅವರ ಅಭಿಮಾನಿಗಳು ತಾವಿರುವ ಸ್ಥಳದಿಂದಲೇ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡ ಇಂಡಸ್ಟ್ರಿಯಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. 5 ದಿನಗಳ ಕಾಲ ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಸಾಧನೆ..ಸಂಭ್ರಮ..ಚಿತ್ರೋತ್ಸವ ಕಾರ್ಯಕ್ರಮ ನಡೆದಿದೆ. ಅಕ್ಟೋಬರ್ 23 ರಿಂದ 27ರವರೆಗೆ ರಾಜೇಂದ್ರಸಿಂಗ್ ಬಾಬು ಅವರ ಸಿನಿಮಾಗಳ ಪ್ರದರ್ಶನ, ಸಂವಾದ ಸಂಕೀರ್ಣ ಕಾರ್ಯಕ್ರಮಕ್ಕೆ ಅಕೋಬರ್ 27ರಂದು ಎಳೆಯಲಾಗಿದೆ.
ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ರಾಜೇಂದ್ರ ಸಿಂಗ್ ಬಾಬು ಅವರ ಆಪ್ತರು ಹಾಗೂ ಕುಟುಂಬಸ್ಥರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಸುಹಾಸಿನಿ ರಾಜೇಂದ್ರ ಸಿಂಗ್ ಬಾಬು ಅವರ ಒಟ್ಟಿಗಿನ ಒಡನಾಟ, ಸಿನಿಮಾ ಶೂಟಿಂಗ್ ದಿನಗಳನ್ನ ನೆನೆದಿದ್ದಾರೆ. ಜೊತೆಗೆ ಬಾಬು ಅವರು ಅವಕಾಶ ಕೊಡದೇ ಇದ್ದಿದ್ದರೇ ಸುಹಾಸಿನಿ ಏನೂ ಅಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: SVR @ 50 – ಕನ್ನಡ ಚಿತ್ರರಂಗದ ಗಣ್ಯರು ಭಾಗಿ
ಸರಳ, ಸಹಜ ಮಾತುಗಳಿಂದ ತಮ್ಮ ಗುರುಗಳಾದ ರಾಜೇಂದ್ರ ಸಿಂಗ್ ಅವರನ್ನ ಹಾಡಿ ಹೊಗಳಿದ್ದಾರೆ. ಬಂಧನ, ಮುತ್ತಿನ ಹಾರ ಸಿನಿಮಾಗಳ ಮೂಲಕ ಸಿನಿಮಾ ಮಂದಿಯ ಹೃದಯದಲ್ಲಿ ಈಗಲೂ ಹಚ್ಚೆ ಒತ್ತಿದ್ದಾರೆ ಸುಹಾಸಿನಿ. ಎಸ್‌ವಿಆರ್ @50 ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದ ಅವರು ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದು ಖುಷಿ ಕೊಟ್ಟಿದೆ. ನೂರೊಂದು ನೆನಪು ಎದೆಯಾಳದಿಂದ ಹಾಡು ವಂಡರ್‌ಫುಲ್ ಎಂದಿದ್ದಾರೆ. ಇನ್ನು ರಾಜೇಂದ್ರ ಸಿಂಗ್ ಬಾಬು ಅವರಿಗೆ ಸಲ್ಲಬೇಕಾದ ಗೌರ ಸಲ್ಲಿದೆ ಎಂದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಸೇವೆ ಸಲ್ಲಿಸಿರುವ ಸಾಧಕಿಯರಿಗೆ ಪ್ರಶಸ್ತಿ
ಬೆಂಗಳೂರು: ಹಿರಿಯ ನಟಿ, ಪಂಚಭಾಷಾ ತಾರೆ ದಿವಂಗತ ಬಿ.ಸರೋಜಾದೇವಿ (B.Sarojadevi) ಅವರ ಹೆಸರಿನಲ್ಲಿ `ಅಭಿನಯ ಸರಸ್ವತಿ’ (Abhinaya Saraswati) ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ (State Govt) ಘೋಷಿಸಿದೆ.
ಕನ್ನಡ ಚಲನಚಿತ್ರ ನಟಿ, ಪಂಚಭಾಷಾ ತಾರೆ, ಪದ್ಮಶ್ರೀ ಹಾಗೂ ಪದ್ಮಭೂಷಣ ವಿಜೇತೆ ದಿವಂಗತ ಬಿ.ಸರೋಜಾದೇವಿ ಅವರು ಪಂಚಭಾಷಾ ತಾರೆಯಾಗಿದ್ದು, ಭಾರತೀಯ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅದನ್ನು ಪರಿಗಣಿಸಿ ಅವರು ಪಡೆದಿದ್ದ “ಅಭಿನಯ ಸರಸ್ಕೃತಿ” ಬಿರುದಿನ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ-2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಅನುಬಂಧ-1ರಡಿ ಜಾರಿಗೆ ತರಲಾಗಿದೆ.ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ
ಈ ಪ್ರಶಸ್ತಿಯಡಿಯಲ್ಲಿ 1 ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ಸುಮ್ಮನೇ ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ನಟಿ ಸರೋಜಾದೇವಿಯವರು (B.Sarojadevi) ಇದನ್ನೆಲ್ಲ ಮಾಡಲೇ ಇಲ್ಲ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ಹೇಳಿದರು.
ನಟಿ ಬಿ.ಸರೋಜಾದೇವಿ ಅವರ ಸಿನಿ ಪಯಣದ ಬಗ್ಗೆ `ಪಬ್ಲಿಕ್ ಟಿಬಿ’ (PUBLiC TV) ಜೊತೆ ಮಾತನಾಡಿದ ಅವರು, ಸುಮಾರು 1954ರಲ್ಲಿ ನಮ್ಮ ತಂದೆಯವರ `ಆಷಾಡಭೂತಿ’ (AshadaBhooti) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅವಾಗಿನಿಂದಲೂ ನಮ್ಮ ಕುಟುಂಬಕ್ಕೆ ತೀರ ಹತ್ತಿರವಾದವರು. ಪ್ರತಿ ಬಾರಿ ನಮ್ಮ ಮನೆಗೆ ಬಂದಾಗ ನಮ್ಮನ್ನೆಲ್ಲಾ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅದಾದ ನಂತರ ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಬಹು ದೊಡ್ಡ ಸ್ಟಾರ್ ಆದರು. ಆಗಲೂ ಅವರು ನಮ್ಮ ಮನೆಗೆ ಬಂದಾಗ ಮೊದಲು ಹೇಗೆ ನೋಡಿಕೊಳ್ಳುತ್ತಿದ್ದರೂ ಅದೇ ರೀತಿ ನಮ್ಮನ್ನೆಲ್ಲಾ ಕಾಣುತ್ತಿದ್ದರು. ಇನ್ನೂ ನನಗೆ ತುಂಬಾ ಹತ್ತಿರದವರು, ಯಾಕಂದ್ರೆ ಪ್ರತಿ ಬಾರಿ ನಾನು ಮದ್ರಾಸ್‌ಗೆ ಹೋದಾಗ ಚೆನ್ನಾಗಿ ಓದಬೇಕು ಅಂತ ಹೇಳಿ, ಒಂದು ಗಡಿಯಾರ ಉಡುಗೊರೆಯಾಗಿ ನೀಡಿದ್ದರು ಎಂದರು.ಇದನ್ನೂ ಓದಿ: ಪೂಜೆ ಮಾಡಿ ಟಿವಿ ಆನ್ ಮಾಡಿದ್ದರು – ಸರೋಜಾದೇವಿಯವರ ಕೊನೆ ಕ್ಷಣ ಹೀಗಿತ್ತು
ನಮ್ಮ ತಾಯಿಯನ್ನು ಕಂಡರೆ ಅವರಿಗೆ ತುಂಬಾ ಪ್ರೀತಿ, ಅದಲ್ಲದೇ ನನ್ನ ಸ್ನೇಹಿತನೊಬ್ಬನಿಗೆ ತುಂಬಾ ಸಹಾಯ ಮಾಡಿದ್ದರು. ಬಹಳ ಶಿಸ್ತಿನ ನಟಿ, ಅವರ ರೀತಿ ಈಗಿನ ಯಾವ ನಟಿಯರೂ ಇಲ್ಲ. ಸುಮ್ಮನೇ ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ಸರೋಜಾದೇವಿಯವರು ಇದನ್ನೆಲ್ಲ ಮಾಡಲೇ ಇಲ್ಲ. ನಾಲ್ಕು ಭಾಷೆಯಲ್ಲಿ ನಟಿಸೋದು ಅಂದರೆ ಸಣ್ಣ ಮಾತಲ್ಲ. ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿದರು. ಅವರು ಎಷ್ಟೇ ಬೆಳೆದರೂ ಕೂಡ ಕನ್ನಡದಲ್ಲಿ ಕಿತ್ತೂರು ಚೆನ್ನಮ್ಮ, ಭಾಗ್ಯವಂತರು ಅಂತಹ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಲಿಲ್ಲ. ಕೆಲವರಾದರೆ ಕನ್ನಡವನ್ನೇ ಮರೆತು ಬಿಡುತ್ತಿದ್ದರು. ಆದರೆ ಇವರು ಯಾವತ್ತೂ ಕನ್ನಡವನ್ನು ಮರೆಯಲಿಲ್ಲ. ಅಚ್ಚ ಕನ್ನಡದ ನಟಿ, ತುಂಬಾ ಎತ್ತರಕ್ಕೆ ಬೆಳೆದವರು. ಅವರ ಮಟ್ಟಕ್ಕೆ ಯಾರೂ ತಲುಪಲೇ ಇಲ್ಲ. ರಾಜಕುಮಾರ್ ಬಳಿಕ ಯಾರಿಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಿಲ್ಲ, ಬಿ.ಸರೋಜಾದೇವಿ ಅವರಿಗೆ ಈ ಪ್ರಶಸ್ತಿ ನೀಡಬೇಕಿತ್ತು ಎಂದರು ತಿಳಿಸಿದರು.
– ಈಗಿನವರು ಬೇಗ ಬೆಳೆಯಬೇಕು, ಹಣ ಗಳಿಸಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆಂದು ಬೇಸರ
ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ, ಈ ಕುರಿತು ನಮ್ಮ ಸಮುದಾಯದವರು ಮಾತನಾಡುತ್ತಾರೆ ಎಂದು ಹಿರಿಯ ನಟಿ ಪ್ರೇಮ (Actress Prema) ತಿಳಿಸಿದರು.
ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಮೊದಲು ಬಂದಿದ್ದು ನಾನೇ ಎಂಬ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹೇಳಿಕೆ ಸಂಬಂಧ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಅವರು, ನಡೆದಿರುವ ವಿಷಯದ ಬಗ್ಗೆ ಜನರು ಕಾಮೆಂಟ್ಸ್ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ, ನಾನೇನು ಹೇಳಬೇಕಾಗಿಲ್ಲ. ಒಬ್ಬೊಬ್ಬರ ಭಾವನೆಗಳು ಒಂದೊಂದು ರೀತಿಯಾಗಿರುತ್ತೆ. ಅವರು ಈ ಸಮುದಾಯದ ವಿಷಯವನ್ನು ಯಾಕೆ ಮಾತನಾಡಿದ್ರೋ ನನಗೂ ಗೊತ್ತಾಗಿಲ್ಲ. ಆದರೆ ನಮ್ಮ ಸಮುದಾಯವನ್ನು ನಾನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.ಇದನ್ನೂ ಓದಿ: ರಶ್ಮಿಕಾ ಬೈ ಮಿಸ್ ಆಗಿ ಹೇಳಿರಬೇಕು, ಕ್ಷಮಿಸಿಬಿಡೋಣ: ನಟಿ ಹರ್ಷಿಕಾ ಪೂಣಚ್ಚ
ಕನ್ನಡ ಚಿತ್ರರಂಗಕ್ಕೆ ಕೊಡವ ಸಮುದಾಯದಿಂದ ನನಗಿಂತ ಮುಂಚೆ ಚಾಮರಾಜಪೇಟೆ ಮೂಲದ ಶಶಿಕಲಾ ಎಂಬುವವರು ಬಂದಿದ್ದರು. ಅವರು ಪೋಷಕ ಪಾತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಾನು ನಟಿಯಾಗಿ ಬಂದೆ. ನಂತ್ರ ಕೊಡವ ಸಮುದಾಯದ ಹಲವಾರು ಜನರು ಚಿತ್ರರಂಗಕ್ಕೆ ಬಂದಿದ್ದಾರೆ ಎಂದು ಹೇಳಿದರು.
ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಕುರಿತು ಮಾತನಾಡಲು ನಮ್ಮ ಕೊಡವ ಸಮುದಾಯವಿದೆ, ಅವರು ಚರ್ಚೆ ಮಾಡಿ, ಮಾತನಾಡುತ್ತಾರೆ. ಈ ಬಗ್ಗೆ ಮಾತಾಡುವಷ್ಟು ದೊಡ್ಡವಳು ನಾನಲ್ಲ. ಅಷ್ಟೊಂದು ದೊಡ್ಡ ವ್ಯಕ್ತಿಯೂ ನಾನಲ್ಲ. ನನಗಿನ್ನೂ ಕಲಿಯೋಕೆ ತುಂಬಾ ಇದೆ. ಆದರೆ ಮೊದಲಿನಿಂದಲೂ ಕೊಡವ ಸಮುದಾಯದವರು ಎಲ್ಲರನ್ನೂ ಬೆಂಬಲಿಸಿದ್ದಾರೆ ಎಂದರು.
ಈಗಿನವರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಾನು ಮೊದಲಿನಿಂದಲೂ ನನಗೆ ಕೊಟ್ಟಿರುವ ಪಾತ್ರವನ್ನು ಸರಿಯಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಅದರ ಹೊರತಾಗಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಯಾವತ್ತೂ ಯಾವುದೇ ರೀತಿಯಲ್ಲಿಯೂ ನೋಯಿಸಿಲ್ಲ. ಚಿತ್ರರಂಗದಲ್ಲಿ ನನಗಿಂತ ಕಲ್ಪನಾ, ಆರತಿ, ಮಂಜುಳಾ, ಭಾರತಿ ಇವರೆಲ್ಲರೂ ಅಗ್ರ ಸ್ಥಾನದಲ್ಲಿರುವ ನಟಿಯರು. ಇನ್ನೂ ನಾವೆಲ್ಲರು ರಾಜಕುಮಾರ್ ಸರ್, ವಿಷ್ಟುವರ್ಧನ್ ಸರ್ ಅವರನ್ನು ನೋಡಿಕೊಂಡು ಬೆಳೆದಿದ್ದೇವೆ. ಆದರೆ ಈಗಿನವರೂ ಬೇಗ ಬೆಳೆಯಬೇಕು, ಹಣ ಗಳಿಸಬೇಕು, ಕಾರು ತೆಗೆದುಕೊಳ್ಳಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಮೊದಲು ಯಾವುದೇ ಕೆಲಸದಲ್ಲಿಯೂ ಎಲ್ಲರೂ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಇದನ್ನೂ ಓದಿ:ಕೊಡವ ಕಮ್ಯೂನಿಟಿಯಿಂದ ಇಂಡಸ್ಟ್ರಿಗೆ ಬಂದಿದ್ದು ನಾನೇ ಫಸ್ಟ್ – ರಶ್ಮಿಕಾ ಮತ್ತೊಂದು ಯಡವಟ್ಟು
– ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ 27 ಸಿನಿಮಾಗಳ ನಿರ್ದೇಶನ
ಬೆಂಗಳೂರು: `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎಟಿ ರಘು (AT Raghu) ಗುರುವಾರ ರಾತ್ರಿ ನಿಧನರಾಗಿದ್ದಾರೆ.
76 ವರ್ಷದ ರಘು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜೊತೆಗೆ ಡಯಾಲಿಸಿಸ್ ಮಾಡಿಸಿಕೊಳುತ್ತಿದ್ದರು. ಗುರುವಾರ ರಾತ್ರಿ 9:20ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಸದ್ಯ ಆರ್‌ಟಿ ನಗರದ ಮಠದಹಳ್ಳಿಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಇಂದು ಮದ್ಯಾಹ್ನ 2-3 ಗಂಟೆಯೊಳಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಇದನ್ನೂ ಓದಿ: ದಿನ ಭವಿಷ್ಯ 21-03-2025
ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ಖ್ಯಾತ ನಿರ್ದೇಶಕರಾಗಿದ್ದ ಇವರು, ಸಾಹಸ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದರು. `ಮಂಡ್ಯದ ಗಂಡು’ ಸಿನಿಮಾ ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇನ್ನೂ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambarish) ನಟನೆಯ 27 ಸಿನಿಮಾಗಳನ್ನು ನಿರ್ದೇಶಿದ್ದರು.
ಮಂಡ್ಯದ ಗಂಡು (Mandyada Gandu) ಸಿನಿಮಾ ಸೇರಿದಂತೆ ಕನ್ನಡದ ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಬೇಟೆಗಾರ, ಧರ್ಮ ಯುದ್ಧ, ನ್ಯಾಯ ನೀತಿ ಧರ್ಮ ಇನ್ನಿತರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 21-03-2025