Tag: kannada flag

  • ರಾಜ್ಯೋತ್ಸವಕ್ಕೆ ಕನ್ನಡ ಧ್ವಜ ಕಡ್ಡಾಯ – ಬಾವುಟಗಳಿಗೆ ಭಾರೀ ಬೇಡಿಕೆ

    ರಾಜ್ಯೋತ್ಸವಕ್ಕೆ ಕನ್ನಡ ಧ್ವಜ ಕಡ್ಡಾಯ – ಬಾವುಟಗಳಿಗೆ ಭಾರೀ ಬೇಡಿಕೆ

    ಬೆಂಗಳೂರು: ಕರ್ನಾಟಕ ರಾಜ್ಯೋತ್ಸವಕ್ಕೆ (Kannada Rajyotsava) ಸರ್ಕಾರ ಕಡ್ಡಾಯ ಬಾವುಟ (Kannada Flag) ಕಡ್ಡಾಯಗೊಳಿಸಿದೆ. ಹೀಗಾಗಿ ಬರುವ ತಿಂಗಳು 1ನೇ ತಾರೀಖಿನಂದು ಎಲ್ಲಾ ಶಾಲೆ- ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಲೇಬೇಕೆಂದು ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಬಾವುಟಗಳಿಗೆ ಭಾರೀ ಬೇಡಿಕೆ ಬಂದಿದೆ.

    ಈ ಬಾರಿಯ ನ.1ಕ್ಕೆ ಕರ್ನಾಟಕ ಏಕೀಕರಣಗೊಂಡು 50 ವರ್ಷವಾಗಲಿದೆ. ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಶಾಲೆ-ಕಾಲೇಜು, ಕಂಪನಿಗಳು, ಐಟಿಬಿಟಿ ಕಂಪನಿಗಳು ಹಾಗೂ ಕಾರ್ಖಾನೆಗಳು ಕೂಡ ನವೆಂಬರ್ 1ರಂದು ಕನ್ನಡ ಬಾವುಟ ಹಾರಿಸಲೇಬೇಕೆಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೇನೂ ನ.1ಕ್ಕೆ ಕೇವಲ 15 ದಿನಗಳು ಬಾಕಿ ಉಳಿದಿವೆ. ಹೀಗಾಗಿ ಎಲ್ಲಾ ವರ್ಷಕ್ಕಿಂತ ಈ ವರ್ಷ ಕನ್ನಡ ಬಾವುಟಗಳಿಗೆ ಬೇಡಿಕೆ ಹೆಚ್ಚಿದೆ.

    ಇನ್ನೂ ಈ ಕನ್ನಡ ಬಾವುಟಗಳು ಕಾಟನ್, ಪಾಲಿಸ್ಟರ್, ಸಿಲ್ಕ್ ಬಟ್ಟೆಗಳಲ್ಲಿ ತಯಾರಾಗುತ್ತಿವೆ. ಒಂದೊಂದಕ್ಕೆ ಒಂದೊಂದು ಬೆಲೆ ಇದೆ. ನಗರದ ಖಾದಿ ಭಂಡಾರ ಸೇರಿದಂತೆ ಬೇರೆ ಬೇರೆ ಖಾಸಗಿ ಅಂಗಡಿಗಳಲ್ಲಿ ಕನ್ನಡ ಬಾವುಟಗಳ ಬೆಲೆ ಹೆಚ್ಚಾಗಿದೆ. 200 ರೂ.ನಿಂದ 700 ರೂ. ªಬಾವುಟಗಳು ಮಾರಾಟವಾಗುತ್ತಿವೆ. ಈಗಾಗಲೇ ಸರ್ಕಾರದ ಕಚೇರಿಗಳು, ವಿವಿಧ ಕಂಪನಿಗಳು ಕನ್ನಡ ಧ್ವಜವನ್ನು ಕೊಳ್ಳುತ್ತಿದ್ದಾರೆ. ಕನ್ನಡ ಬಾವುಟದ ಜೊತೆಗೆ ಶಾಲು, ಬ್ಯಾಡ್ಜ್ ಗಳನ್ನು ಸಹ ಕೊಳ್ಳುತ್ತಿದ್ದಾರೆ.

    ಸರ್ಕಾರದ ಆದೇಶ ಖಾದಿ, ನೇಕಾರಿಗೆ ಹಾಗೂ ವ್ಯಾಪಾರಿಗಳಲ್ಲಿ ಮತ್ತೆ ಮರು ಚೈತನ್ಯವನ್ನುಂಟುಮಾಡಿದೆ. ಅಷ್ಟೇ ಅಲ್ಲದೇ ಇಡೀ ಕರುನಾಡಲ್ಲಿ ಕನ್ನಡ ಬಾವುಟ ನವೆಂಬರ್ 1ರಂದು ರಾರಾಜಿಸಲಿದೆ.

  • ಕರ್ನಾಟಕದಲ್ಲೇ ಕನ್ನಡಿಗರ ಮೇಲೆ ದೌರ್ಜನ್ಯ – ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಯುವಕರಿಗೆ ಥಳಿಸಿದ ಮರಾಠ ಪುಂಡರು

    ಕರ್ನಾಟಕದಲ್ಲೇ ಕನ್ನಡಿಗರ ಮೇಲೆ ದೌರ್ಜನ್ಯ – ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಯುವಕರಿಗೆ ಥಳಿಸಿದ ಮರಾಠ ಪುಂಡರು

    ಚಿಕ್ಕೋಡಿ: ಕರ್ನಾಟಕದಲ್ಲಿಯೇ (Karnataka) ಕನ್ನಡಿಗರ ಮೇಲೆ ದೌರ್ಜನ್ಯ ನಡೆದಿದೆ. ಕನ್ನಡ ಧ್ವಜ (Kannada Flag) ಅಳವಡಿಸಿದ್ದಕ್ಕೆ ಕನ್ನಡಿಗ (Kannadiga) ಯುವಕರಿಗೆ ಮರಾಠ (Marathas) ಪುಂಡರು ಥಳಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಬಳಿ ಅಳವಡಿಸಿದ್ದ ಕನ್ನಡ ಧ್ವಜವನ್ನು ತೆರವು ಮಾಡುವ ವಿಚಾರಕ್ಕೆ ಗಲಾಟೆ ಉಂಟಾಗಿತ್ತು. ಅಳವಡಿಸಿದ್ದ ಧ್ವಜವನ್ನು ತೆರವು ಮಾಡುವಂತೆ ಮರಾಠ ಪುಂಡರು ಕನ್ನಡಿಗರಿಗೆ ಥಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಕೆಲ ಮರಾಠ ಸಮುದಾಯದವರು ಕನ್ನಡಿಗರ ಮೇಲೆ ಹಲ್ಲೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವೀಡಿಯೋ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಇದನ್ನೂ ಓದಿ: ಕರ್ತವ್ಯ ಲೋಪ ಆರೋಪ – ಮೂವರು ಪಿಎಸ್‌ಐ ಸೇರಿ ಐವರು ಪೊಲೀಸರ ಅಮಾನತು

    ಈ ಬಗ್ಗೆ 5 ಮರಾಠ ಪುಂಡರ ವಿರುದ್ಧ ಸಂಕೇಶ್ವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

  • ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿಗರಿಂದ ಹಲ್ಲೆ

    ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿಗರಿಂದ ಹಲ್ಲೆ

    ಬೆಳಗಾವಿ: ರಾಮನವಮಿ (Rama Navami) ಮೆರವಣಿಗೆ ವೇಳೆ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿ (Marathi) ಭಾಷಿಕ ಪುಂಡರಿಂದ ಹಲ್ಲೆ ನಡೆದಿರುವ ಘಟನೆ ಬೆಳಗಾವಿ (Belagavi) ನಗರದಲ್ಲಿ ನಡೆದಿದೆ.

    ನಗರದ ತಿಲಕ್ ಚೌಕ್ ಬಳಿ ಗುರುವಾರ ರಾತ್ರಿ ರಾಮನವಮಿ ಮೆರವಣಿಗೆ ವೇಳೆ ನೂರಾರು ಯುವಕರು ಭಗವಾಧ್ವಜ ಹಿಡಿದು ಭಾಗಿಯಾಗಿದ್ದರು. ಈ ವೇಳೆ ಕನ್ನಡ ಬಾವುಟ (Kannada flag) ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಂಜುನಾಥ ಢಂಗ ಜೊತೆಗೆ ಮರಾಠಿ ಭಾಷಿಕ ಪುಂಡರು ವಾಗ್ವಾದ ನಡೆಸಿದ್ದಾರೆ. ಏಕಾಏಕಿ ಗಲಾಟೆ ಶುರುಮಾಡಿ ಮಂಜುನಾಥ ಢಂಗ ಅವರ ಮೇಲೆ ಹಲ್ಲೆ ನಡೆಸಿ, ಕನ್ನಡ ಬಾವುಟಕ್ಕೆ ಅಪಮಾನ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ತೆಗೆಸಿ ಮಹಿಳೆಗೆ ಕಿರುಕುಳ ನೀಡಿ ವೀಡಿಯೋ ಮಾಡಿದ್ದ ಆರೋಪಿಗಳ ಬಂಧನ

    ಕನ್ನಡಪರ ಸಂಘಟನೆಯ ಹೋರಾಟಗಾರರು ಘಟನೆಯನ್ನು ಖಂಡಿಸಿದ್ದಾರೆ. ಈ ಸಂಬಂಧ ಕಿಡಿಗೇಡಿಗಳ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

  • ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ

    ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ

    ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ (Karnataka-Maharashtra Dispute) ವಿವಾದ ಪ್ರಕರಣವನ್ನು ಸುಪ್ರೀಂಕೋರ್ಟ್‌ನಲ್ಲಿ (Supreme Court) ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮರಾಠಿ (Marati) ಭಾಷಿಕರು ಪುಂಡಾಟ ಮೆರೆಯುತ್ತಿದ್ದಾರೆ. ಎಂಇಎಸ್ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಯತ್ನಿಸುತ್ತಿದೆ.

    ಹೌದು, ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಫೆರವಲ್ ಡೇ ಆಚರಣೆ ವೇಳೆ ಕನ್ನಡ ಬಾವುಟ (Karnataka Flag) ಹಿಡಿದು ಡಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲ ಮರಾಠಿ ಭಾಷಿಕ ವಿದ್ಯಾರ್ಥಿಗಳು ಆತನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ವರುಣಾದಿಂದಲೇ ತಂದೆ ಸ್ಪರ್ಧಿಸಲಿ ಎಂದ ಯತೀಂದ್ರ – ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ

    ಕಾಲೇಜು ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಲೇಜಿಗೆ ಕರುನಾಡ ವಿಜಯ ಸೇನೆ ಯುವ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ಹಾಗೂ ಕಾರ್ಯಕರ್ತರು ಭೇಟಿ ನೀಡಿದ್ದಾರೆ.

    ಇಂದು ಕಾಲೇಜಿಗೆ ಮುತ್ತಿಗೆ ಹಾಕೋದಾಗಿ ಕನ್ನಡಪರ ಸಂಘಟನೆ ಎಚ್ಚರಿಕೆ ನೀಡಿದೆ. ಇನ್ನು ಸ್ಥಳಕ್ಕೆ ಟಿಳಕವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ನಿಂತವರಲ್ಲಿ ಒಳ್ಳೆಯವರು ಕಾಣದಿದ್ರೆ ನೋಟಾಗೆ ಒತ್ತಿ: ಕಾಗೇರಿ ಕರೆ

    Live Tv
    [brid partner=56869869 player=32851 video=960834 autoplay=true]

  • ಮದುವೆ ಮನೆಯಲ್ಲಿ ಕನ್ನಡ ಧ್ವಜ- ಕನ್ನಡಾಭಿಮಾನ ಮೆರೆದ ನವ ದಂಪತಿ

    ಮದುವೆ ಮನೆಯಲ್ಲಿ ಕನ್ನಡ ಧ್ವಜ- ಕನ್ನಡಾಭಿಮಾನ ಮೆರೆದ ನವ ದಂಪತಿ

    ಚಿಕ್ಕೋಡಿ : ಮದುವೆ ಸಮಾರಂಭದಲ್ಲಿ ಸಾಮಾನ್ಯವಾಗಿ ಆಡಂಬರದ ಅಲಂಕಾರ ಮಾಡುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಮದುವೆಯಲ್ಲಿ ಕನ್ನಡದ ಕಂಪು ಸೂಸುವ ವಾತವರಣ ನಿರ್ಮಾಣವಾಗಿತ್ತು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ನಾಗಯ್ಯಾ ತೇರಣಿಮಠ ಅವರು ಮದುವೆ ಸಮಾರಂಭದಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡದ ಧ್ವಜಗಳು, ಕನ್ನಡದ ಶಾಲುಗಳು ಕಂಡು ಬಂದವು.

    ನಾಗಯ್ಯಾ ತೇರಣಿಮಠ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ರೂಪಾ ಹಿರೇಮಠ ಅವರನ್ನು ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಖಾನಾಪುರ ಗ್ರಾಮದ ಬ್ರಹ್ಮ ಮಠದ ಸಿದ್ದೇಶ್ವರ ಸ್ವಾಮಿಜಿ ಸೇರಿದಂತೆ ಹಲವಾರು ಮಠದ ಶ್ರಿಗಳು ಈ ಕನ್ನಡದ ಮದುವೆಗೆ ಸಾಕ್ಷಿಯಾಗಿದ್ದರು. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

    ಮದುವೆಯ ಗಂಡು ಹೆಣ್ಣು ಹೂಮಾಲೆ ಜೊತೆಗೆ ಕನ್ನಡದ ಶಾಲು ಹಾಕಿಕೊಂಡು ಕನ್ನಡತನವನ್ನ ಪ್ರದರ್ಶನ ಮಾಡಿದರು. ಗಡಿಭಾಗದಲ್ಲಿ ಕನ್ನಡತನ ಮೆರೆಯುವ ಮೂಲಕ ಈ ಜೋಡಿ ಹೊಸತನಕ್ಕೆ ನಾಂದಿ ಹಾಡಿದೆ. ಇದನ್ನೂ ಓದಿ: ಇನ್ಮುಂದೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವಂತಿಲ್ಲ: ಸುನಿಲ್ ಕುಮಾರ್

  • ಕನ್ನಡಕ್ಕಾಗಿ ಪ್ರಾಣ ಕೊಡೋಕು ಸಿದ್ಧ: ಶಿವಣ್ಣ ಖಡಕ್‌ ಮಾತು

    ಕನ್ನಡಕ್ಕಾಗಿ ಪ್ರಾಣ ಕೊಡೋಕು ಸಿದ್ಧ: ಶಿವಣ್ಣ ಖಡಕ್‌ ಮಾತು

    ಬೆಂಗಳೂರು: ಕನ್ನಡಕ್ಕಾಗಿ ನಾವು ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ಮರಾಠಿಗರ ಕೃತ್ಯಕ್ಕೆ ನಟ ಶಿವರಾಜ್‌ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

    ಡಾಲಿ ಧನಂಜಯ್‌ ಅಭಿನಯದ ಬಡವ ರಾಸ್ಕಲ್‌ ಸಿನಿಮಾ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಎಲ್ಲರಿಗೂ ಮುಖ್ಯ. ಭಾರತದಲ್ಲಿರಬೇಕಾದರೆ ಎಲ್ಲ ಭಾಷೆಯೂ ಮುಖ್ಯ. ಯಾವುದೇ ರಾಜ್ಯದ ಸಂಸ್ಕೃತಿಯನ್ನು ಮೊದಲು ಗೌರವಿಸಬೇಕು. ಒಂದು ರಾಜ್ಯದಲ್ಲಿದ್ದರೆ ಆ ರಾಜ್ಯದ ಜನತೆಯನ್ನು ಗೌರವದಿಂದ ಕಾಣಬೇಕು. ಕನ್ನಡ ಬಾವುಟ ಸುಟ್ಟು ಹಾಕಿದ್ದು ಅಕ್ಷಮ್ಯ ಎಂದು ಶಿವಣ್ಣ ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಿವಾಜಿ ಪ್ರತಿಮೆಗೆ ಮಸಿ – ರಣಧೀರ ಪಡೆಯ 7 ಜನರ ಬಂಧನ

    ನಾನು ಚೆನ್ನೈನಲ್ಲಿ ಹುಟ್ಟಿದ್ದೇನೆ. ಅಲ್ಲೇ ಓದಿ ಬೆಳೆದಿದ್ದೇನೆ. ಆ ಭಾಗದಲ್ಲಿ ಅದೇ ಭಾಷೆಯನ್ನು ಮಾತನಾಡಬೇಕು. ನಾನು ಎಲ್ಲಾ ಭಾಷೆಗಳ ಸಿನಿಮಾ ನೋಡುತ್ತೇನೆ. ಯಾರು ಯಾವುದೇ ರಾಜ್ಯದಲ್ಲಿದ್ದರೂ ಮೊದಲು ಅಲ್ಲಿನ ಭಾಷೆಯನ್ನು ಪ್ರೀತಿಸಬೇಕು. ಮನುಷ್ಯನಿಗೆ ಕೋಪ ಬಂದರೆ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೆ. ಇಂತಹ ಕೃತ್ಯಗಳ ವಿರುದ್ಧ ಸರ್ಕಾರ ಹೋರಾಡಬೇಕು. ಮತಕ್ಕಾಗಿ ಯಾರೂ ರಾಜಕೀಯ ಮಾಡಬಾರದು ಎಂದು ತಿಳಿಸಿದ್ದಾರೆ.

    ಕರ್ನಾಟಕದಲ್ಲಿ ನಮ್ಮ ಭಾಷೆಗೆ ನಾವು ಪ್ರಾಣ ಕೊಡುವುದಕ್ಕೂ ಸಿದ್ಧ. ಇದರಿಂದಾನೇ ಪ್ರಾಣ ಹೋಗಬೇಕೆಂದರೆ ಹೋಗಲಿ ಬಿಡಿ. ಬಾವುಟ ಸುಟ್ಟು ಹಾಕಿದ್ದು, ತಾಯಿಯನ್ನೇ ಸುಟ್ಟಂತೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಧಕ್ಕೆ ತರುವಂತಹ ಸನ್ನಿವೇಶ ಬಂದರೆ ನಾವೆಲ್ಲ ಹೋರಾಟ ಮಾಡಬೇಕು: ಹೆಚ್.ಡಿ.ರೇವಣ್ಣ

  • ಬೆಂಗಳೂರಿನ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಕಾಂಗ್ರೆಸ್ ಕಾರ್ಯಕರ್ತರು: ಬಿಜೆಪಿ

    ಬೆಂಗಳೂರಿನ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಕಾಂಗ್ರೆಸ್ ಕಾರ್ಯಕರ್ತರು: ಬಿಜೆಪಿ

    ಬೆಂಗಳೂರು: ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಕಾಂಗ್ರೆಸ್ ವಿರುದ್ಧ ನೇರ ಆರೋಪ ಹೊರಿಸಿದೆ.

     

    ಟ್ವೀಟ್‍ನಲ್ಲಿ ಏನಿದೆ?
    ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಚು ನಡೆಸಿದ್ದೂ ಕಾಂಗ್ರೆಸ್ ಕಾರ್ಯಕರ್ತರು. ಇವರ ಕೃತ್ಯ, ಉದ್ದೇಶ ಹಾಗೂ ಹಿಂದಿರುವ ಶಕ್ತಿಗಳು ಕಾಂಗ್ರೆಸ್ಸಿಗರೇ ಎನ್ನುವ ಸಂಶಯ ರಾಜ್ಯದ ಜನತೆಯನ್ನು ಕಾಡುತ್ತಿದೆ. ಇದನ್ನೂ ಓದಿ: ಕನ್ನಡ ಧ್ವಜಕ್ಕೆ ಬೆಂಕಿ – ಕನ್ನಡ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್‍ಡಿಕೆ ಆಗ್ರಹ

    ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿದ್ದಕ್ಕೆ ಡಿಕೆಶಿ ಅವರು ಏಕೆ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದಕ್ಕೆ ಕಾರಣ ಸ್ಪಷ್ಟವಾಗಿದೆ. ಎಲ್ಲದಕ್ಕೂ ಉತ್ತರ ಒಂದೇ. ಅದರ ಹಿಂದಿರುವ ವ್ಯಕ್ತಿಗಳೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಪಿಸಿಸಿ ಅಧ್ಯಕ್ಷರ ಹಿಂದೆ ನಿಂತವರು. ಸಿದ್ದರಾಮಯ್ಯನವರೇ, ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಯಾರಿಗೆ ಆಪ್ತರು ಎನ್ನುವುದನ್ನು ಗಮನಿಸಿ! ಈಗ ನಿಮ್ಮ “ಕ್ರಿಯೆಗೆ ತಕ್ಕ ಪ್ರತಿಕ್ರಿಯೆ” ಏನು?. ಇದನ್ನೂ ಓದಿ: ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

     

  • ಕನ್ನಡ ಧ್ವಜಕ್ಕೆ ಬೆಂಕಿ – ಕನ್ನಡ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್‍ಡಿಕೆ ಆಗ್ರಹ

    ಕನ್ನಡ ಧ್ವಜಕ್ಕೆ ಬೆಂಕಿ – ಕನ್ನಡ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್‍ಡಿಕೆ ಆಗ್ರಹ

    ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು ಕರ್ನಾಟಕ ಮತ್ತು ಕನ್ನಡಿಗರನ್ನು ಕೆಣಕಿರುವ ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಕೊಲ್ಲಾಪುರದಲ್ಲಿ ನಮ್ಮ ಧ್ವಜ ದಹನ ಮಾಡಿರುವುದು ಅತ್ಯಂತ ನೀಚತನದ ಪರಮಾವಧಿ. ಕನ್ನಡ ದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ವರ್ತಿಸಬೇಕು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ಅಪಚಾರ ಕ್ಷಮಾರ್ಹವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಇದನ್ನು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಪರಮ ಕಿರಾತಕ ಕೃತ್ಯಕ್ಕೆ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣವಾಗಿ ವರ್ತಿಸಬೇಕು. ನಮ್ಮ ಧ್ವಜವನ್ನು ಅಪಮಾನಿಸಿದ ಕನ್ನಡ ದ್ರೋಹಿಗಳಿಗೆ ತಕ್ಕಶಾಸ್ತಿ ಮಾಡಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ

    ಕನ್ನಡಕ್ಕಾಗಿ ಹೋರಾಡಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಒಂದು ವೇಳೆ ಕನ್ನಡ ದ್ರೋಹಿಗಳನ್ನು ಹಾಗೆಯೇ ಬಿಟ್ಟರೆ ಕರ್ನಾಟಕ ನಿಮ್ಮನ್ನು ಕ್ಷಮಿಸುವುದಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕ್ರಮ ವಹಿಸಬೇಕು ಎಂಬುದು ನನ್ನ ಆಗ್ರಹ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

  • ಜಾಗತಿಕವಾಗಿ ಅಮೆಜಾನ್ ಕ್ಷಮೆ ಕೋರಬೇಕು, ಕನ್ನಡ ಮನಸ್ಸುಗಳಿಗೆ ಅಭಿನಂದನೆ – ಎಚ್‍ಡಿಕೆ

    ಜಾಗತಿಕವಾಗಿ ಅಮೆಜಾನ್ ಕ್ಷಮೆ ಕೋರಬೇಕು, ಕನ್ನಡ ಮನಸ್ಸುಗಳಿಗೆ ಅಭಿನಂದನೆ – ಎಚ್‍ಡಿಕೆ

    ಬೆಂಗಳೂರು: ಕನ್ನಡದ ಧ್ವಜವನ್ನು ಅಪಮಾನಿಸಿದ ಕೆನಡಾದ ಅಮೆಜಾನ್‍ಗೆ ಕನ್ನಡಿಗರು ಬಿಸಿಮುಟ್ಟಿಸಿದ್ದಾರೆ. ಅಮೆಜಾನ್ ತನ್ನ ತಪ್ಪು ಸರಿಪಡಿಸಿಕೊಂಡಿದೆ. ಕನ್ನಡವನ್ನು ಅವಮಾನಿಸಿದ ಗೂಗಲ್‍ಗೆ ಪಾಠ ಕಲಿಸಿದ್ದು, ಈಗ ಅಮೆಜಾನ್‍ಗೆ ಬುದ್ಧಿ ಕಲಿಸಿದ್ದರಲ್ಲಿ ಎದ್ದು ಕಾಣುವಂಥದ್ದು ಕನ್ನಡಿಗರ ‘ಅಭಿಮಾನ’. ಅದಕ್ಕಾಗಿ ಕನ್ನಡದ ಮನಸ್ಸುಗಳನ್ನು ಅಭಿನಂದಿಸುತ್ತೇನೆ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಸರಣಿ ಟ್ವೀಟ್ ಮಾಡಿ ಕುಮಾರಸ್ವಾಮಿ ಅಮೆಜಾನ್ ವಿರುದ್ಧ ಕಿಡಿ ಕಾರಿದ್ದು ಅಮೆಜಾನ್ ಜಾಗತಿಕವಾಗಿ ಕ್ಷಮೆ ಕೋರಬೇಕು. ತಪ್ಪಿತಸ್ಥರನ್ನು ಹಿಡಿದುಕೊಡಬೇಕು ಎಂದು ಆಗ್ರಹಿಸಿದ್ದಾರೆ. ಕನ್ನಡಿಗರ ಆಕ್ರೋಶಕ್ಕೆ ಮಣಿದ ಅಮೆಜಾನ್ ಈಗ ಆ ಪುಟದಲ್ಲಿ ಕಾಣುತ್ತಿದ್ದ ಬಿಕಿನಿ ಚಿತ್ರವನ್ನು ತೆಗೆದು ಹಾಕಿದೆ. ಇದನ್ನೂ ಓದಿ: ಬ್ರಾ, ಪ್ಯಾಂಟಿ ಮೇಲೆ ಕರ್ನಾಟಕದ ಲಾಂಛನ, ಕನ್ನಡದ ಬಣ್ಣ- ಗೂಗಲ್ ಬಳಿಕ ಅಮೇಜಾನ್ ಅವಾಂತರ

    ಟ್ವೀಟ್‍ನಲ್ಲಿ ಏನಿದೆ?
    ಕನ್ನಡ, ಕರ್ನಾಟಕದ ವಿಚಾರದಲ್ಲಿ ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಗಳು ಅತ್ಯಂತ ಅಜಾಗರೂಕವಾಗಿ, ಅಸೂಕ್ಷ್ಮವಾಗಿ ವರ್ತಿಸುತ್ತಿವೆ. ಗೂಗಲ್ ನಂತರ ಈಗ ಅಮೆಜಾನ್ ಕೆನಡಾ ವಿಭಾಗ ನಿರ್ಲಕ್ಷ್ಯ ಮೆರೆದಿದೆ. ಈ ಸಂಸ್ಥೆಗಳು ಭಾಷೆ ಮತ್ತು ಭಾವನೆಗಳ ವಿಚಾರದಲ್ಲಿ ಯಾಕಿಂಥ ನಿರ್ಲಕ್ಷ್ಯವಹಿಸುತ್ತಿವೆ? ಈ ಬಗ್ಗೆ ಅಮೆಜಾನ್ ಪ್ರತಿಕ್ರಿಯೆ ನೀಡಬೇಕು.

    ಬಾವುಟದ ಜೊತೆಗೇ, ಕರ್ನಾಟಕದ ರಾಜಲಾಂಛನವನ್ನೂ ಅಮೆಜಾನ್ ಅಮಾನಿಸಿದೆ. ಇದು ಸರ್ಕಾರಕ್ಕೆ ಮಾಡಲಾದ ಅಪಮಾನ. ಸರ್ಕಾರ ಸಂವಿಧಾನದ ಅಂಗ. ಹೀಗಾಗಿ ಅಮೆಜಾನ್‍ನಿಂದ ಬಹುದೊಡ್ಡ ಅಪಚಾರವಾಗಿದೆ. ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದರತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು. ಮುಂದೆ ಇಂಥ ಮುಜುಗರ ತಪ್ಪಿಸಲು ಇದು ಅಗತ್ಯ. ಇದನ್ನೂ ಓದಿ: ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

    ‘ಕನ್ನಡ ಕೆಟ್ಟ ಭಾಷೆ‘ ಎಂಬ ವಿಚಾರ ಗೂಗಲ್‍ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ಘಟನೆಯೂ ಬಯಲಾಗಿರುವುದನ್ನು ಗಮನಿಸುತ್ತಿದ್ದರೆ, ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ. ಜನಸಮುದಾಯವೊಂದರ ಭಾವನೆಗಳ ಜೊತೆಗೆ ಆಟವಾಡುತ್ತಿರುವವರನ್ನು ಪತ್ತೆ ಹಚ್ಚುವ ಸಂದರ್ಭ ಈಗ ಸೃಷ್ಟಿಯಾಗಿದೆ.

    ಇಂಥ ಅಪಮಾನಗಳ ಮೂಲಕ ಕನ್ನಡಿಗರ ಸಹನೆ ಕೆಣಕುವ ಕೆಲಸ ಇಂಥ ಸಂಸ್ಥೆಗಳಿಂದ ಆಗುತ್ತಲೇ ಇವೆ. ಕನ್ನಡಿಗರ ಕೋಪದಿಂದ ಸಿಡಿಯುವ ಕಿಡಿಯಿಂದ ಅನಾಹುತಗಳು ಸಂಭವಿಸಿದರೆ, ಅದನ್ನು ತಾಳಿಕೊಳ್ಳುವ ಶಕ್ತಿ ಈ ಸಂಸ್ಥೆಗಳಿಗೆ ಉಳಿಯಲಾರದು. ಪರಿಸ್ಥಿತಿ ಅಲ್ಲಿಗೆ ಹೋಗುವ ಮೊದಲು ಅಮೆಜಾನ್ ಜಾಗತಿಕವಾಗಿ ಕ್ಷಮೆ ಕೋರಬೇಕು. ತಪ್ಪಿತಸ್ಥರನ್ನು ಹಿಡಿದುಕೊಡಬೇಕು.