ಸ್ಯಾಂಡಲ್‌ವುಡ್ ನಟಿ ಸಂಜನಾ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮುದ್ದು ಮಗನ ಆಗಮನದ ಖುಷಿಯಲ್ಲಿದ್ದಾರೆ. ಈ ಮಧ್ಯೆ ತನ್ನ ಸಿಸೇರಿಯನ್ ಹೆರಿಗೆಯ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಂಜನಾ ಗಲ್ರಾನಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ನಂತರ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ ನಂತರ ತಮ್ಮ ವೈಯಕ್ತಿಕ ಜೀವನದತ್ತ ಮುಖ ಮಾಡಿದ್ದಾರೆ. ಮದುವೆ, ಸಂಸಾರ ಅಂತಾ ತನ್ನದೇ ಪ್ರಪಂಚ ಕಟ್ಟಿಕೊಂಡು ಖುಷಿಯಾಗಿದ್ದಾರೆ. ಹೀಗಿರುವಾಗ ಇತ್ತೀಚೆಗಷ್ಟೇ ಗಂಡು ಮಗುವಿಗೆ ಸಂಜನಾ ತಾಯಿಯಾಗಿದ್ದರು. ಈ ಮೂಲಕ ಮನೆಗೆ ಹೊಸ ಅತಿಥಿಯ ಆಗಮನವಾಗಿತ್ತು. ತಮ್ಮ ಹೆರಿಗೆಯ ಅನುಭವ ಕಷ್ಟ ಹೇಗಿತ್ತು ಎಂಬ ಸಣ್ಣ ತುಣುಕನ್ನ ಸಂಜನಾ ಸಾಮಾಜಿಕ ಜಾತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ
View this post on Instagram
ತಂಗಿ ನಿಕ್ಕಿ ಗಲ್ರಾನಿ ಮದುವೆಯ ದಿನವೇ ಮಗುವಿನ ಆಗಮನವಾಗಿತ್ತು. ಸಿಸೇರಿಯನ್ ಹೆರಿಗೆ ಸಂಜನಾಗೆ ಆಗಿತ್ತು. ಅಂದಿನ ದಿನ ಹೇಗಿತ್ತು. ಆ ದಿನ ಎಷ್ಟು ಕಷ್ಟವಾಗಿತ್ತು ಎಂಬುದನ್ನ ವಿಡಿಯೋ ಮುಖಾಂತರ ತಿಳಿಸಿದ್ದಾರೆ. ಈ ಮೂಲಕ ತಮಗೆ ಹೆರಿಗೆ ಮಾಡಿಸಿದ ಡಾಕ್ಟರ್ ಹೇಮಾ ನಂದಿನಿ ಅವರಿಗೆ ಸಂಜನಾ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋ ಈಗ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
Live Tv
[brid partner=56869869 player=32851 video=960834 autoplay=true]




ಡಾ.ಸುಧಾರಾಣಿ ಅವರು ಖಾಸಗಿ ವಾಹಿನಿಯ ಧಾರಾವಾಹಿವೊಂದರಲ್ಲಿ ಮುಖ್ಯ ಪೋಷಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೊರಗಿನ ಪ್ರಪಂಚವನ್ನು ಮರೆತು ತನ್ನ ಕುಟುಂಬವೇ ಒಂದು ಪ್ರಪಂಚ ಎಂದು ಬದುಕುತ್ತಿರುವ ಒಂದು ಹೆಣ್ಣು ತಾಯಿಯಾಗಿ, ಸೊಸೆಯಾಗಿ ಮನೆ ಹೀಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಎಂಬ ಕಥೆಯಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ. ಈ ಮೂಲಕ ಕಿರುತೆರೆಯತ್ತ ಬಂದಿರುವ ಸುಧಾರಾಣಿ ಈಗ ಬೋಲ್ಡ್ ಆಗಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಇದನ್ನೂ ಓದಿ: 


`ವಿಕ್ರಾಂತ್‌ರೋಣ’ ಸಿನಿಮಾದ ಸುದೀಪ್ ಮತ್ತು ಜಾಕ್ವೇಲಿನ್ ಕಾಂಬಿನೇಷನ್ `ರಾ ರಾ ರಕ್ಕಮ್ಮ’ ಯೂತ್ಸ್ಗೆ ಅಡಿಕ್ಟ್ ಆಗಿರುವ ಬೆನ್ನಲ್ಲೇ ಮತ್ತೊಂದು ಕಲರ್‌ಫುಲ್ ಸಾಂಗ್ ತೆರೆ ಕಾಣಲು ರೆಡಿಯಾಗಿದೆ. ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಮತ್ತೊಂದು ಚೆಂದದ ಲಿರಿಕಲ್ ಸಾಂಗ್ ಲಹರಿ ಮ್ಯೂಸಿಕ್ ಆಡಿಯೋದಲ್ಲಿ ರಿಲೀಸ್ ಆಗುತ್ತಿದೆ.




ಇನ್ನು ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದ ಬಹುಭಾಷಾ ನಟಿ ನಮಿತಾ ಈಗ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ತುಂಬು ಗರ್ಭೀಣಿಯಾಗಿರುವ ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಮಗುವಿನ ಆಗಮನದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಲಿದ್ದಾರೆ. ಮತ್ತೆ ಚಿತ್ರಗಳಲ್ಲಿ ನಮಿತಾ ಕಾಣಿಸಿಕೊಳ್ಳಲಿದ್ದಾರೆ.










ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ಮತ್ತು ಅಮೋಘ ವರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಈ `ಗಂಧದ ಗುಡಿ’ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಪುನೀತ್, ಕರ್ನಾಟಕದ ಹಲವು ಜಾಗಗಳಿಗೆ ಭೇಟಿ ನೀಡಿ, ಬೆಟ್ಟ ಗುಡ್ಡ ಪರಿಸರಗಳ ಮಧ್ಯೆ ಚಿತ್ರೀಸಿರೋ ಈ ಚಿತ್ರ, ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ತೆರೆಗೆ ಬದರಲು ಸಿದ್ದವಾಗಿದೆ ಎನ್ನುತ್ತಿದೆ ಗಾಂಧಿನಗರದ ಮೂಲಗಳು.
