ಕರುನಾಡ ರಾಜಕುಮಾರ ಪುನೀತ್‌ಗಾಗಿ ಇಂದಿಗೂ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಅಪ್ಪು ಅಗಲಿಕೆ ಈಗಲೂ ಫ್ಯಾನ್ಸ್ಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಶಿವಣ್ಣ ಅವರಲ್ಲಿ ಅಪ್ಪು ಅವರನ್ನ ಕಾಣ್ತಿದ್ದಾರೆ. ದೂರದ ಬೀದರ್‌ನಿಂದ ಬಂದ ಅಭಿಮಾನಿ ದಂಪತಿಯ ಪುತ್ರನಿಗೆ ಅಪ್ಪು ಹೆಸರಿಟ್ಟು ಶಿವಣ್ಣ ನಾಮಕರಣ ಮಾಡಿದ್ದಾರೆ.

ಅಪ್ಪು ಅಗಲಿ ಇದೀಗ 10 ತಿಂಗಳಾಗಿದೆ. ಶಿವಣ್ಣ ಅವರಲ್ಲಿ ಅಪ್ಪುನ ನೋಡಿ ಖುಷಿಪಡ್ತಿದ್ದಾರೆ. ಹೀಗಿರುವಾಗ ಶಿವಣ್ಣ ಅವರ ಕುಟುಂಬದ ಅಭಿಮಾನಿಯೊಬ್ಬರು ದೊಡ್ಮನೆಗೆ ಬಂದು ಶಿವಣ್ಣಗೆ ಭೇಟಿ ಕೊಟ್ಟಿದ್ದಾರೆ. ಇದೀಗ ಮನೆಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪು ಅಂತಾ ಶಿವಣ್ಣ ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್‌ನಲ್ಲಿ ಲೈಟ್ ಆಫ್ ಆದ್ಮೇಲೆ ನಡೆಯೋದೆ ಬೇರೆ!

ಬೀದರ್‌ನಿಂದ ಬೆಂಗಳೂರಿಗೆ ಆಗಮಿಸಿದ ಅಭಿಮಾನಿ ದಂಪತಿಯ ಮಗುವಿಗೆ ಅಪ್ಪು ಅಂತಾ ನಾಮಕರಣ ಮಾಡಿ, ದಂಪತಿಗೆ ಆತಿಥ್ಯ ನೀಡಿದ್ದಾರೆ. ಇದೀಗ ಶಿವಣ್ಣ ಅವರ ನಡೆ ನೋಡಿ ಫ್ಯಾನ್ಸ್ ಕೂಡ ಶುಭ ಹಾರೈಸಿದ್ದಾರೆ.


ಸಿನಿಮಾರಂಗದಲ್ಲಿ ಶಿವಣ್ಣ ಅವರು 125ಕ್ಕೂ ಅಧಿಕ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ರವಿಚಂದ್ರನ್ ಅವರು ನಟನೆಯ ಜತೆಗೆ ನಿರ್ಮಾಪಕನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಶಿವಣ್ಣಗೆ 60 ವರ್ಷ ವಯಸ್ಸು. ರವಿಚಂದ್ರನ್‌ಗೆ 61 ವರ್ಷ ತುಂಬಿದೆ. ಈಗ ಇಬ್ಬರ ಬರ್ತ್ಡೇಯನ್ನು ಒಟ್ಟಾಗಿ ಆಚರಿಸಲು ಕರ್ನಾಟಕ ಫಿಲಂ ಚೇಂಬರ್ ನಿರ್ಧರಿಸಿದೆ. ಶಿವರಾಜ್‌ಕುಮಾರ್ ಜುಲೈ 12ರಂದು ಜನಿಸಿದ್ದಾರೆ. ರವಿಚಂದ್ರನ್ ಅವರು ಜನಿಸಿದ್ದು ಮೇ 30ರಂದು. ಇವರ ಬರ್ತ್ಡೇಯನ್ನು ದೊಡ್ಡದಾಗಿ ಆಚರಿಸಲು ಪ್ಲ್ಯಾನ್ ಮಾಡಿದ್ದಾರೆ. ಫಿಲ್ಮಂ ಚೇಂಬರ್ ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಈ ಬಗ್ಗೆ ಕರ್ನಾಟಕ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್ ಯೋಚಿಸಿದ್ದಾರೆ. ಇದನ್ನೂ ಓದಿ:
ಶಿವರಾಜ್‌ಕುಮಾರ್ ಅವರು ಈ ಬಾರಿ 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಿಸಲು ಪುನೀತ್ ರಾಜ್‌ಕುಮಾರ್ ಈ ಮೊದಲೇ ನಿರ್ಧರಿಸಿದ್ದರು. ಆದರೆ, ಪುನೀತ್ ಅಕಾಲಿಕ ಮರಣ ಇಡೀ ಚಿತ್ರರಂಗಕ್ಕೆ ಶಾಕ್ ಕೊಟ್ಟಂತೆ ಆಗಿದೆ. ಬಾರದ ಲೋಕಕ್ಕೆ ಅಪ್ಪು ಹೋಗಿರೋದು ಶಿವಣ್ಣನ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಈ ನೋವಿನಲ್ಲಿ ಅವರು ಈ ಬಾರಿ ಬರ್ತ್ಡೇ ಆಚರಿಸಿಕೊಂಡಿಲ್ಲ. ಈ ಕಾರಣಕ್ಕೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಶಿವಣ್ಣ ಹಾಗೂ ರವಿಚಂದ್ರನ್ ಬರ್ತ್ಡೇ ದೊಡ್ಡದಾಗಿ ಆಯೋಜಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗವೇ ಸಾಥ್ ನೀಡಲಿದೆ.
`ವಿಕ್ರಾಂತ್ ರೋಣ’ ಚಿತ್ರದ ಸಕ್ಸಸ್ ನಂತರ ದೆಹಲಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ವೀರೇಂದ್ರ ಹೆಗ್ಗಡೆ ಅವರನ್ನು ಕಿಚ್ಚ ಸುದೀಪ್ ದಂಪತಿ ಮತ್ತು ನಿರ್ಮಾಪಕ ಜಾಕ್ ಮಂಜು ಭೇಟಿ ಮಾಡಿ, ಆರ್ಶೀವಾದ ಪಡೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:
ಅನೂಪ್ ಭಂಡಾರಿ ನಿರ್ದೇಶನದ `ವಿಕ್ರಾಂತ್ ರೋಣ’ ಚಿತ್ರ ಚಿತ್ರಮಂದಿರದಲ್ಲಿ ಕಮಾಲ್ ಮಾಡುತ್ತಿದೆ. ಇದೀಗ ಕಿಚ್ಚನ ಸಿನಿಮಾದ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ಕಾಯ್ತಿದ್ದಾರೆ.
ರಾಕಿಭಾಯ್ ಆಗಿ `ಕೆಜಿಎಫ್ 2′ ಚಿತ್ರದ ಭರ್ಜರಿ ಸಕ್ಸಸ್ ನಂತರ ಪತ್ನಿ ರಾಧಿಕಾ ಪಂಡಿತ್ ಜೊತೆ ವಿದೇಶದ ಪ್ರವಾಸದಲ್ಲಿರುವ ಯಶ್‌ಗೆ ಇಟಲಿ ಮತ್ತು ಬಾಂಗ್ಲಾ ದೇಶದ ಅಭಿಮಾನಿಗಳ ಭೇಟಿಯಾಗಿದೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಪೆಷಲ್ ಆಗಿ ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ಯಶ್ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:
ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ, ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟಿ ಸಂಗೀತಾ ಭಟ್ ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸುತ್ತಿದ್ದರು. ಇದೀಗ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗಿದ್ದಾರೆ. ಕಿರುತೆರೆಯಲ್ಲಿ ಛಾಪೂ ಮೂಡಿಸಲು ರೆಡಿಯಾಗಿದ್ದಾರೆ. ಇದನ್ನೂ ಓದಿ:
ಖಾಸಗಿ ವಾಹಿನಿಯ `ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ನಿರ್ವಹಿಸಿದ್ದಾರೆ. ನಾಗರಪಂಚಮಿ ಪ್ರಯುಕ್ತ ನಾಗಮಣಿ ರಹಸ್ಯ ಎಂಬ ಎಪಿಸೋಡ್‌ಗಾಗಿ ವಿಶೇಷ ಪಾತ್ರ ಮಾಡಿದ್ದಾರೆ. 3 ಗಂಟೆಗಳ ಮಹಾ ಸಂಚಿಕೆ ಇದಾಗಿದೆ. ಈ ಸೀರಿಯಲ್ ಸಂಗೀತಾ ಭಟ್ ನಾಗಿಣಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಜುಲೈ 31ರಂದು ಸಂಜೆ 6 ಗಂಟೆಗೆ ಸಂಚಿಕೆ ಪ್ರಸಾರವಾಗಲಿದೆ. ಸೀರಿಯಲ್ ಪ್ರೋಮೋ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ ಸೀರಿಯಲ್, ಪ್ರಸಾರದ ನಂತರ ಹೇಗೆಲ್ಲಾ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

ಮುದ್ದು ಮಗನ ಪೋಷಣೆಯಲ್ಲಿ ಬ್ಯುಸಿಯಾಗಿರುವ ಸಂಜನಾ ಗಲ್ರಾನಿ, ಇದೀಗ ಮಗುವಿನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿ ಸಿನಿರಸಿಕರ ಗಮನ ಸೆಳೆದಿದ್ದಾರೆ. ಮುದ್ದು ಮಗ ಅಲಾರಿಕ್ ಜತೆ ಚೆಂದದೊಂದು ರೀಲ್ಸ್‌ಗೆ ಹೆಜ್ಜೆ ಸಂಜನಾ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ ಚಂದನವನದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಚಿತ್ರದ ಮೊದಲ ಸಾಂಗ್ `ರಾ ರಾ ರಕ್ಕಮ್ಮ’ ಸಾಂಗ್‌ನಿಂದ ಹಿಡಿದು ಈಗ ರಿಲೀಸ್ ಆಗಿರುವ `ಗುಮ್ಮ ಬಂದ ಗುಮ್ಮ’ ಸಾಂಗ್‌ವೆರೆಗೂ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನೂ ಓದಿ:
ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ `ಗುಮ್ಮ ಬಂದ ಗುಮ್ಮ’ ಸಾಂಗ್ ಮೂಡಿ ಬಂದಿದೆ. ಈ ಹಾಡು ಸಿನಿರಸಿಕರ ಗಮನ ಸೆಳೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಂಗ್ ವೈರಲ್ ಆಗುತ್ತಿದೆ. ರಕ್ಕಮ್ಮನ ಕಿಕ್‌ನಲ್ಲಿರುವ ಫ್ಯಾನ್ಸ್ಗೆ ಗುಮ್ಮನ ಸಾಂಗ್ ದಿಲ್ ಗೆದ್ದಿದೆ.

