Tag: kannada films

  • ಅ ಅಕ್ಷರದಿಂದಲೇ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ಅಮೂಲ್ಯ

    ಅ ಅಕ್ಷರದಿಂದಲೇ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ಅಮೂಲ್ಯ

    ಗೋಲ್ಡನ್ ಕ್ವೀನ್ ಅಮೂಲ್ಯ(Amulya) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಬ್ಬರು ಮುದ್ದು ಮಕ್ಕಳ ನಾಮಕರಣದ ಸಂಭ್ರಮದಲ್ಲಿದ್ದಾರೆ. ನಟಿ ಅಮೂಲ್ಯ ಜಗದೀಶ್ ಅವರ ಅವಳಿ ಮಕ್ಕಳಿಗೆ ನಾಮಕರಣಕ್ಕೆ ಇಡೀ ಸ್ಯಾಂಡಲ್‌ವುಡ್(Sandalwood) ಸಾಕ್ಷಿಯಾಗಿದೆ.

    ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಯಾಗಿ ಮಿಂಚಿದ ಗೋಲ್ಡನ್ ನಟಿ ಅಮೂಲ್ಯ ಮದುವೆ, ಸಂಸಾರ, ಮಕ್ಕಳು ಎಂದು ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ಕೆಲ ತಿಂಗಳುಗಳ ಹಿಂದೆ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅಮೂಲ್ಯ ಜಗದೀಶ್(Amulya Jagadeesh) ದಂಪತಿ ಅವಳಿ ಮಕ್ಕಳಿಗೆ (ನ.10) ನಾಮಕರಣ ಶಾಸ್ತ್ರ ಮಾಡಿದ್ದಾರೆ. ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಮುದ್ದಾದ ಹೆಸರನ್ನ ಇಟ್ಟಿದ್ದಾರೆ.

    ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂಬ ಭಿನ್ನ ಹೆಸರನ್ನ ಇಟ್ಟಿದ್ದಾರೆ. ಇನ್ನೂ ಈ ಅದ್ದೂರಿ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರು, ಆಪ್ತರು ಸಾಕ್ಷಿಯಾಗಿದ್ದಾರೆ. ಮುದ್ದಾದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಶುಭಹಾರೈಸಿದ್ದಾರೆ.

    ಅಮೂಲ್ಯ ಮಕ್ಕಳ ನಾಮಕರಣಕ್ಕೆ ಶಿವರಾಜ್‌ಕುಮಾರ್ ದಂಪತಿ, ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ, ಲವ್ಲೀ ಸ್ಟಾರ್ ಪ್ರೇಮ್ ಕುಟುಂಬ, ಹಿರಿಯ ನಟಿ ತಾರಾ, ಆಲ್ ಓಕೆ, ಅಜಯ್ ರಾವ್, ಧ್ರುವಾ ಸರ್ಜಾ, ಸೋನು ಗೌಡ, ಗೋಲ್ಡನ್‌ ಸ್ಟಾರ್‌ ಗಣೇಶ್‌,  ಹೀಗೆ ಸಾಕಷ್ಟು ತಾರೆಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕಶ್ಯಪ್

    ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕಶ್ಯಪ್

    ಸುನೀಲ್ ಪುರಾಣಿಕ್ ಅವರಿಂದ ತೆರುವಾಗಿದ್ದ ಸ್ಥಾನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ನೇಮಕಗೊಂಡಿದ್ದಾರೆ. ಸೋಮವಾರ(ನವೆಂಬರ್ 7)ರಂದು ಅಶೋಕ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬೆಂಗಳೂರಿನ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಸೋಮವಾರ ಅಶೋಕ್ ಕಶ್ಯಪ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿರುವ ಅಶೋಕ್ ಕಶ್ಯಪ್, ಲಿಫ್ಟ್ ಕೊಡ್ಲಾ, ಧ್ವಜ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಶೋಕ್ ಅವರು ಕರ್ನಾಟಕ ಚಲನಚಿತ್ರ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ, ರಾಷ್ಟ್ರ ಪ್ರಶಸ್ತಿ ಪಡೆದ ತಲೆದಂಡ ಸಿನಿಮಾಗೆ ಅಶೋಕ್ ಕಶ್ಯಪ್ ಅವರೇ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ.

    ಜಗ್ಗೇಶ್, ಉಪೇಂದ್ರ, ಪ್ರಿಯಾಮಣಿ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟರ ಚಿತ್ರಗಳಿಗೆ ಕ್ಯಾಮೆರಾ ಕೆಲಸ ಮಾಡಿದ ಹೆಗ್ಗಳಿಕೆ ಅಶೋಕ್ ಅವರದ್ದು. ಅಲ್ಲದೇ ಅನೇಕ ಧಾರಾವಾಹಿಗಳಿಗೆ ಕೆಲಸ ಕೂಡ ಮಾಡಿದ್ದಾರೆ. ಇವರದ್ದೇ ನಿರ್ಮಾಣ ಸಂಸ್ಥೆಯಿAದ ಧಾರಾವಾಹಿಗಳು ಕೂಡ ನಿರ್ಮಾಣವಾಗಿವೆ. ಸಿನಿಮಾಟೋಗ್ರಾಫರ್, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಸಿನಿಮಾಟೋಗ್ರಾಫರ್‌ಗಳಲ್ಲಿ ಅಶೋಕ್ ಕಶ್ಯಪ್ ಒಬ್ಬರಾಗಿದ್ದಾರೆ. ಇನ್ನೂ ಹಿರಿಯ ನಿರ್ದೇಶಕ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಛಾಯಾಗ್ರಾಹಕ ಬಸವರಾಜ್, ಹೀಗೆ ಹಲವು ಗಣ್ಯರು ಈ ವೇಳೆ ಹಾಜರಿದ್ದು, ಅಶೋಕ್ ಅವರ ಹೊಸ ಹೆಜ್ಜೆಗೆ ಶುಭ ಕೋರಿದರು.

    Live Tv
    [brid partner=56869869 player=32851 video=960834 autoplay=true]

  • `ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

    `ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

    ಹಾಲಿವುಡ್‌ನ(Hollywood) `ಅವತಾರ್ 2′ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದು ಪ್ರೇಕ್ಷಕರ ಗಮನ ಸೆಲೆಯುತ್ತಿದೆ. ಇದರ ನಡುವೆ `ಅವತಾರ್ 2′ (Avatara 2) ಸಿನಿಮಾ ತಂಡ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

     

    View this post on Instagram

     

    A post shared by Avatar (@avatar)

    20th Century Fox ನಿರ್ಮಾಣದ, ಜೇಮ್ಸ್ ಕ್ಯಾಮರೂನ್ ನಿರ್ದೇಶನದ `ಅವತಾರ್ 2′ ಟ್ರೈಲರ್  ಹಾಲಿವುಡ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. 24 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೈಲರ್ ರಿಲೀಸ್ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದಾರೆ. ಭಾರತದಲ್ಲಿ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ, ಕನ್ನಡ ಮಾತ್ರ ಡಬ್ ಆಗುತ್ತಿಲ್ಲ. ಈ ವಿಚಾರ ಇದೀಗ ಕನ್ನಡಿಗರನ್ನ ಕೆರಳಿಸಿದೆ. ಇದನ್ನೂ ಓದಿ:‘ಜುಗಲ್ ಬಂದಿ’ಗಾಗಿ ಕನ್ನಡಕ್ಕೆ ಬಂದ ಅಪರೂಪದ ತಮಿಳು ಗಾಯಕಿ ವೈಕಂ ವಿಜಯಲಕ್ಷ್ಮಿ

     

    View this post on Instagram

     

    A post shared by Avatar (@avatar)

    ಕನ್ನಡ ಸಿನಿಮಾಗಳು ಇದೀಗ ವಿಶ್ವಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗುತ್ತಿರುವ ‘ಅವತಾರ್ 2’ ಚಿತ್ರ ಕನ್ನಡವನ್ನ ಕಡೆಗಣಿಸಿದೆ ಎಂದು ಚಿತ್ರತಂಡದ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ. ಈ ಹಿಂದೆ ಬಿಡುಗಡೆ ಮಾಡಿದ್ದ ಪೋಸ್ಟರ್‌ನಲ್ಲಿ ಕನ್ನಡದ ಹೆಸರನ್ನೂ ಸೇರಿಸಲಾಗಿತ್ತು. ಅಲ್ಲದೇ, ಕೆಲವೇ ತಿಂಗಳ ಹಿಂದೆ ಕನ್ನಡ ವರ್ಷನ್‌ನಲ್ಲಿ ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅದು ಕನ್ನಡಕ್ಕೆ ಡಬ್ ಆಗಿಲ್ಲ. ಅಲ್ಲದೇ, ಪೋಸ್ಟರ್‌ನಲ್ಲಿ ಇದ್ದ ಕನ್ನಡ ಕೂಡ ತೆಗೆಯಲಾಗಿದೆ. ಅಫಿಷಿಯಲ್ ಯೂಟ್ಯೂಬ್ ಖಾತೆಯಲ್ಲಿ ಈ ಮೊದಲು ಇದ್ದ ಕನ್ನಡ ಟೀಸರ್ ಸಹ ಈಗ ಕಾಣಿಸುತ್ತಿಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

    ಕನ್ನಡಿಗರು ಮೂಲ ಭಾಷೆಯಲ್ಲಿಯೇ ಎಲ್ಲ ಸಿನಿಮಾವನ್ನು ನೋಡುತ್ತಾರೆ. ಎಲ್ಲಾ ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಈ ಚಿತ್ರ, ಮಾರ್ಕೆಟ್ ದೃಷ್ಟಿಯಿಂದ `ಅವತಾರ್ 2′ ಚಿತ್ರದ ನಿರ್ಮಾಪಕರು ಕೂಡ ಹಾಗೆಯೇ ಮಾಡಿದ್ದರೆ ಅದು ಕನ್ನಡದ ಪ್ರೇಕ್ಷಕರಿಗೆ ತೋರಿದ ಅಗೌರವ ಆಗುತ್ತದೆ ಎಂದು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

    `ಅವತಾರ್ 2’ನಲ್ಲಿ ಯುದ್ಧದ ಜೊತೆಗೆ ಚೆಂದದ ಪ್ರೇಮಕಥೆಯಿದೆ. ಟ್ರೈಲರ್‌ನೋಡಿ, ಫಿದಾ ಆಗಿರುವ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ. `ಅವತಾರ್ 2′ ಸಿನಿಮಾ ವಿಶ್ವಾದ್ಯಂತ ಡಿಸೆಂಬರ್ 16ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

    Live Tv
    [brid partner=56869869 player=32851 video=960834 autoplay=true]

  • ಮಗ ಯಥರ್ವ್ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಲವ್ಲಿ ವಿಶ್

    ಮಗ ಯಥರ್ವ್ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಲವ್ಲಿ ವಿಶ್

    `ಮೊಗ್ಗಿನ ಮನಸ್ಸು’ (Moggina Manasu) ಚಿತ್ರದ ಮೂಲಕ ಧ್ರುವತಾರೆಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ಪ್ರತಿಭಾನ್ವಿತ ನಟಿ ರಾಧಿಕಾ ಪಂಡಿತ್(Radhika Pandit) ಇದೀಗ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಯಶ್ ಮತ್ತು ರಾಧಿಕಾ ದಂಪತಿಯ ಎರಡನೇ ಮಗ ಯಥರ್ವ್ ಬರ್ತ್‌ಡೇಗೆ ಪ್ರೀತಿಯಿಂದ ರಾಧಿಕಾ ಶುಭಹಾರೈಸಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Radhika Pandit (@iamradhikapandit)

    ನ್ಯಾಷನಲ್ ಸ್ಟಾರ್ ಯಶ್(Yash) ಪತ್ನಿ ನಟಿ ರಾಧಿಕಾ ಪಂಡಿತ್ ಇದೀಗ ನಟನೆಯಿಂದ ದೂರ ಉಳಿದಿದ್ದಾರೆ. ಮಕ್ಕಳ ಪಾಲನೆಯಲ್ಲಿ ನಟಿ ರಾಧಿಕಾ ಪಂಡಿತ್ ಬ್ಯುಸಿಯಾಗಿದ್ದಾರೆ. ಸದ್ಯ ಮಗ ಯಥರ್ವ್ 3 ವರ್ಷ ತುಂಬಿರುವ ಖುಷಿಗೆ ಬ್ಯೂಟಿಫುಲ್ ಫೋಟೋಗಳನ್ನ ಶೇರ್ ಮಾಡಿ, ನಟಿ ಶುಭಹಾರೈಸಿದ್ದಾರೆ. ಇದನ್ನೂ ಓದಿ:`ಕಾಂತಾರ’ ಸಕ್ಸಸ್ ನಂತರ ರಿಷಬ್ ಶೆಟ್ಟಿ ಟೆಂಪಲ್ ರನ್


    ನನ್ನ ಮುದ್ದು ಕಂದ ನನ್ನ ಹೃದಯವನ್ನು ತುಂಬಿದ್ದಾನೆ. ಹ್ಯಾಪಿ ಬರ್ತ್‌ಡೇ ಯಥರ್ವ್, ಸದಾ ಖುಷಿಯಾಗಿರು ಲವ್ ಯೂ ಎಂದು ಪೋಸ್ಟ್ ಹಾಕಿ, ಲವ್ಲಿ ವಿಶ್ಸ್ ತಿಳಿಸಿದ್ದಾರೆ. ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಂದೂವರೆ ವರ್ಷದ ಬಳಿಕ ಮನೆಯ‌ ಫಸ್ಟ್ ಸಿಲಿಂಡರ್‌ ಮೊನ್ನೆ ಖಾಲಿಯಾಯ್ತು:ನಿವೇದಿತಾ ಗೌಡ

    ಒಂದೂವರೆ ವರ್ಷದ ಬಳಿಕ ಮನೆಯ‌ ಫಸ್ಟ್ ಸಿಲಿಂಡರ್‌ ಮೊನ್ನೆ ಖಾಲಿಯಾಯ್ತು:ನಿವೇದಿತಾ ಗೌಡ

    `ಬಿಗ್ ಬಾಸ್’ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬೆಳ್ಳಿತೆರೆಯಲ್ಲಿ ರಂಜಿಸಲು ತೆರೆಮರೆಯಲ್ಲಿ ಸಕಲ ತಯಾರಿ ಮಾಡುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಿವೇದಿತಾ ಗೌಡ ಸಿಲಿಂಡಲ್ ಸೀಕ್ರೆಟ್ ಕುರಿತು ಬಾಯ್ಬಿಟ್ಟಿದ್ದಾರೆ.

    ದೊಡ್ಮನೆಯಲ್ಲಿ ಸದ್ದು ಮಾಡಿದ ಮೇಲೆ ಚಂದನ್ ಶೆಟ್ಟಿ (Chandan Shetty) ಜತೆ ಹಸೆಮಣೆ ಏರಿದ ನಿವೇದಿತಾ ಈಗ ಖುಷಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ದೀಪಾವಳಿ ಹಬ್ಬದ ಪ್ರಯುಕ್ತ `ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2′ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ನಿವೇದಿತಾ, ಅವರ ಮನೆಯ ಸೀಕ್ರೆಟ್‌ವೊಂದನ್ನ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ನಿವೇದಿತಾ ಅವರು ಮನೆಗೆ ಶಿಫ್ಟ್ ಆಗಿ ಒಂದೂವರೆ ವರ್ಷವಾಗಿದೆ. ಅವರ ಮನೆಯ ಫಸ್ಟ್ ಸಿಲಿಂಡರ್ ಮೊನ್ನೆ ಖಾಲಿಯಾಗಿದೆ ಎಂದು ಸೃಜನ್ ಲೋಕೇಶ್ ಕಾಲೆಳೆದಿದ್ದಾರೆ. ಇನ್ನೂ ಜಾಸ್ತಿ ದಿನ ಬರುತ್ತಿತ್ತು ಅಮ್ಮಾ ಮನೆಗೆ ಬಂದು ಅಡುಗೆ ಮಾಡಿ, ಬೇಗ ಖಾಲಿಯಾಗಿ ಹೋಯ್ತು ಎಂದು ನಿವೇದಿತಾ ಹೇಳಿದ್ದಾರೆ. ಈ ಶತಮಾನದ ಮಾದರಿ ಹೆಣ್ಣು ಎಂದು ನಿರೂಪಕ ನಿರಂಜನ್ ದೇಶಪಾಂಡೆ ಕೂಡ ತಮಾಷೆ ಮಾಡಿದ್ದಾರೆ. ಈ ಮೂಲಕ ಮನೆಯಲ್ಲಿ ನಿವಿ ಅಡುಗೆ ಮಾಡಲ್ಲ ಎಂಬುದು ರಿವೀಲ್‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗುವ ಹುಡುಗ ಹೀಗಿರಬೇಕು ಎಂದ ರಮ್ಯಾ

    ಮದುವೆಯಾಗುವ ಹುಡುಗ ಹೀಗಿರಬೇಕು ಎಂದ ರಮ್ಯಾ

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ(Actress Ramya) ಮತ್ತೆ ಸಾಕಷ್ಟು ವರ್ಷಗಳ ನಂತರ ಬಣ್ಣದ ಲೋಕಕ್ಕೆ ಕಂಬ್ಯಾಕ್ ಆಗಲು ಸಜ್ಜಾಗಿದ್ದಾರೆ. ಇದೀಗ ಖಾಸಗಿ ವಾಹಿನಿಯ ಅವಾರ್ಡ್ ಇವೆಂಟ್‌ಗೆ ಭೇಟಿ ಕೊಟ್ಟಿದ್ದ ವೇಳೆ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ರಮ್ಯಾ ರಿವೀಲ್ ಮಾಡಿದ್ದಾರೆ.

    ಚಂದನವನದ ಸಾಕಷ್ಟು ಸಿನಿಮಾಗಳ ಮೂಲಕ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡು ಮೋಡಿ ಮಾಡಿರುವ ನಟಿ ರಮ್ಯಾ ಮತ್ತೆ ಚಿತ್ರರಂಗದಲ್ಲಿ ಸದ್ದು ಮಾಡ್ತಿದ್ದಾರೆ. `ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಭಿನ್ನ ಕಥೆಯ ಮೂಲಕ ಕಂಬ್ಯಾಕ್ ಆಗಿದ್ದಾರೆ. ಇದೀಗ ವೇದಿಕೆಯೊಂದರಲ್ಲಿ ತಾವು ಮದುವೆ ಆಗುವ ಹುಡುಗ ಹೀಗೆ ಇರಬೇಕು ಎಂದು ರಮ್ಯಾ ಹೇಳಿದ್ದಾರೆ.

    ಅನುಬಂಧ ಅವಾರ್ಡ್ಸ್‌ ನಿರೂಪಕ ಅಕುಲ್ ಬಾಲಾಜಿ, ಪ್ರೀತಿ ಹುಡುಗ ಹೇಗಿರಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ನಾನು ಸಿಂಗಲ್ ಆಗಿದ್ದೇನೆ, ಆತ ಕೂಡ ಸಿಂಗಲ್ ಆಗಿರಬೇಕು. ಆತನಿಗೆ ಮದುವೆ ಆಗಿರಬಾರದು. ಹುಡುಗನ ಲುಕ್ಸ್ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ಅವರು ಒಳ್ಳೆಯ ಮನುಷ್ಯನಾಗಿರಬೇಕು. ಅವನಲ್ಲಿ ಕರುಣೆಯ ಗುಣ ಹೆಚ್ಚಿಗೆ ಇರಬೇಕು ಎಂದು ರಮ್ಯಾ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ಗುಣಗಳನ್ನ ಅಳವಡಿಸಿಕೊಳ್ಳಬೇಕು ಎಂದು ಫ್ಯಾನ್ಸ್‌ಗೆ ಉಪ್ಪಿ ಸಂದೇಶ

    ಇನ್ನೂ ಸಾಕಷ್ಟು ವರ್ಷಗಳ ನಂತರ ಕಂಬ್ಯಾಕ್ ಆಗುತ್ತಿರುವ ಮೋಹಕ ತಾರೆ ರಮ್ಯಾ ಎಂಟ್ರಿಯ ಬಗ್ಗೆ ಅಭಿಮಾನಿಗಳು ಕಾತುರರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗುವ ಹುಡುಗಿಯ ಬಗ್ಗೆ ಕೊನೆಗೂ ಮೌನ ಮುರಿದ ಧನಂಜಯ್

    ಮದುವೆಯಾಗುವ ಹುಡುಗಿಯ ಬಗ್ಗೆ ಕೊನೆಗೂ ಮೌನ ಮುರಿದ ಧನಂಜಯ್

    ಸ್ಯಾಂಡಲ್‌ವುಡ್‌ನ(Sandalwood) ಬ್ಯುಸಿ ನಟ ಧನಂಜಯ್(Dhananjay) ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸೌಂಡ್ ಮಾಡುತ್ತಾರೆ. ಕಳೆದ ಬಾರಿ ಪ್ರಭಾಸ್ ಮದುವೆಯಾಗುವವೆರೆಗೂ ತಾನು ಮದುವೆ ಆಗಲ್ಲ ಅಂತಾ ಸುದ್ದಿಯಾಗಿದ್ದರು. ಈಗ ತಾನು ಮದುವೆಯಾಗುವ ಹುಡುಗಿಗೆ ಈ ಗುಣ ಇರಲೇಬೇಕು ಅಂತಿದ್ದಾರೆ ಡಾಲಿ.

    ಕನ್ನಡ ಮಾತ್ರವಲ್ಲದೇ ಬಹುಭಾಷಾ ಚಿತ್ರಗಳಲ್ಲಿ ಮಿಂಚ್ತಿರುವ ನಟ ಧನಂಜಯ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದೆ. ಸದ್ಯ ಸಿನಿಮಾಗಿಂತ ವೈಯಕ್ತಿಕ ವಿಷ್ಯವಾಗಿ ಸೌಂಡ್ ಮಾಡುತ್ತಿದ್ದಾರೆ. ಡಾಲಿ ಮದುವೆಯಾಗುವ ಹುಡುಗಿ ಹೇಗಿರಬೇಕು ಯಾವ ಕ್ವ್ಯಾಲಿಟಿ ಇರಬೇಕು ಎಂಬುದನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ

    ತಾನು ಮದುವೆಯಾಗುವ ಹುಡುಗಿ ಹೇಗಿರಬೇಕು ಅಂದ್ರೆ ನಾನು ಅವಳನ್ನು ನೋಡಿದರೆ ಖುಷಿಯಾಗಬೇಕು ಎಂದಿದ್ದಾರೆ ಡಾಲಿ. ಇದೊಂಥರಾ ವಿಶೇಷ ಅನಿಸಿದ್ದರು ನಿಜ ಎಂದಿದ್ದಾರೆ. ತಾವು ಮದುವೆಯಾಗುವ ಹುಡುಗಿಯಲ್ಲಿ ಲವಲವಿಕೆ ನೋಡುತ್ತಾರೆ ಎಂಬುದನ್ನ ತಿಳಿಸಿದ್ದಾರೆ.

    ಇನ್ನು ಡಾಲಿ ಹೆಸರು ಸಹನಟಿ ಅಮೃತಾ ಜತೆ ಕೇಳಿ ಬರುತ್ತಿದೆ. ಅಭಿಮಾನಿಗಳ ನೆಚ್ಚಿನ ಜೋಡಿಯಾಗಿರುವ ಅಮೃತಾ ಮತ್ತು ಡಾಲಿ ನಿಜ ಜೀವನದಲ್ಲೂ ಜೋಡಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್

    ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್

    ನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಮೇಶ್ (Ramesh Aravind)  ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮದೇ ರೀತಿಯಲ್ಲಿ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಇದೀಗ ಈ ಮಹಾನ್ ನಟನನ್ನ ಗುರುತಿಸಿ ರಾಣಿ ಚೆನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.

    ನಟ, ನಿರ್ದೇಶಕ, ಬರಹಗಾರನಾಗಿ ಸೈ ಎನಿಸಿಕೊಂಡಿರುವ ರಮೇಶ್ ಅರವಿಂದ್ ಅವರು ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಸುವರ್ಣಸೌಧ ಸಭಾಭವನದಲ್ಲಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ 10ನೇ ಘಟಿಕೋತ್ಸವ ಇಂದು (ಸೆ.14) ನಡೆದಿದೆ. ಸಮಾಜ ಸೇವಕರಾದ ವ್ಹಿ.ರವಿಚಂದನ್ ವೆಂಕಟರಾಮನ್ ಅವರಿಗೆ `ಡಾಕ್ಟರ್ ಆಫ್ ಸೈನ್ಸ್’, ಚಿತ್ರರಂಗ ಮತ್ತು ಧಾರ್ಮಿಕ ವಲಯದ ಸೇವೆಯನ್ನ ಗುರುತಿಸಿ ನಟ ರಮೇಶ್ ಅರವಿಂದ್ (Ramesh Aravind) ಮತ್ತು ಅಕ್ಕ ಅನ್ನಪೂರ್ಣ (Akka Annapoorna) ಅವರಿಗೆ `ಡಾಕ್ಟರ್ ಆಫ್ ಲೆಟರ್ಸ್’ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಕನ್ನಡದ ಖ್ಯಾತ ಕಿರುತೆರೆ ನಟ ಮಂಡ್ಯ ರವಿ ಸ್ಥಿತಿ ಚಿಂತಾಜನಕ: ಬೆಂಗಳೂರಿನಿಂದ ಮಂಡ್ಯ ಆಸ್ಪತ್ರೆಗೆ ಶಿಫ್ಟ್

    ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ವೇಳೆ ಡಾಕ್ಟರೇಟ್ ಅನ್ನು ಪ್ರಧಾನ ಮಾಡಿದ್ದಾರೆ. ರಾಣಿ ಚೆನ್ನಮ್ಮ ವಿವಿ. ಕುಲಪತಿ ಪ್ರೋ. ರಾಮಚಂದ್ರೆಗೌಡ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ನೆಚ್ಚಿನ ನಟನಿಗೆ ಅಭಿಮಾನಿಗಳು, ಸಿನಿಮಾರಂಗದ ಸ್ನೇಹಿತರು ಶುಭಹಾರೈಸಿದ್ದಾರೆ.

    ಗೌರವ ಡಾಕ್ಟರೇಟ್ ಬಳಿಕ ರಮೇಶ್ ಅರವಿಂದ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನನ್ನ ಈ ಸಂಭ್ರಮದ ಕ್ಷಣದಲ್ಲಿ ತಂದೆ ಇರಬೇಕಿತ್ತು. ನನಗೆ ಗೌರವ ಡಾಕ್ಟರೇಟ್ ಸಿಗ್ತಿದ್ದಂತೆ ಸಂಬಂಧಿಕರಿಗೆ ವಾಟ್ಸಪ್ ಮೆಸೇಜ್ ಮಾಡಿದೆ. ಅಭಿನಂದನೆಗಳು, ನಿಮ್ಮ ತಂದೆ ಇರಬೇಕಿತ್ತು ಎಂದು ಆ ಕಡೆಯಿಂದ ಪ್ರತಿಕ್ರಿಯೆ ಬಂದಿದೆ ಎಂದು ತಂದೆ ಅವರನ್ನ ನೆನೆದು ನಟ ರಮೇಶ್ ಭಾವುಕರಾಗಿದ್ದಾರೆ. 30 ವರ್ಷ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಟಿಕೆಟ್ ತೆಗೆದುಕೊಂಡು ನನ್ನ ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕನಿಗೆ ನಾನು ಋಣಿ ಆಗಿದ್ದೇನೆ. ಈ ವೇಳೆ ನನ್ನ ಜೊತೆಗೆ ನಟಿಸಿರುವ ಹಲವು ಕಲಾವಿದರನ್ನು ನಾನು ಸ್ಮರಿಸುವೆ. ಎಲ್ಲರ ಸಹಾಕರವೇ ನನ್ನ ಈ ಸಾಧನೆಗೆ ಕಾರಣ ಎಂದು ರಮೇಶ್ ಅರವಿಂದ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ ತನ್ನಿ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

    ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ ತನ್ನಿ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

    ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ನಟ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿವೊಂದನ್ನ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕನಾಗಿ ನಟ ಉಪೇಂದ್ರ ಅವರು ಛಾಪೂ ಮೂಡಿಸಿದ್ದಾರೆ. ಇನ್ನು ತಮ್ಮ ಹುಟ್ಟುಹಬ್ಬಕ್ಕೆ ಉಪೇಂದ್ರ ಅವರು ಬ್ರೇಕ್ ಹಾಕಿ, ಭಿನ್ನವಾಗಿ ಯೋಚಿಸಿದ್ದಾರೆ.ವಿಚಾರವಂತರಾಗೋಣಾ ಎಂದು ನಟ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಸೆಪ್ಟೆಂಬರ್ 18ರಂದು ಉಪೇಂದ್ರ, 53ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವೇಳೆ ಉಪ್ಪಿ ಶೇರ್ ಮಾಡಿರುವ ಪೋಸ್ಟ್ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಮಿಸ್ ಮ್ಯಾಚ್ ಜೋಡಿ: ಅತೀ ಹೆಚ್ಚು ಟ್ರೋಲ್ ಗೆ ಒಳಗಾದ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್

    ವಿಚಾರವಂತರಾಗೋಣಾ, ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ. ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ ಎಂದು ಉಪೇಂದ್ರ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಗೆ ಉಡುಗೊರೆ ನೀಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ- ಗಮನಹರಿಸುವಂತೆ ಜಗ್ಗೇಶ್ ಮನವಿ

    ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ- ಗಮನಹರಿಸುವಂತೆ ಜಗ್ಗೇಶ್ ಮನವಿ

    ಟ ಕಮ್ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನವರಸನಾಯಕ ಜಗ್ಗೇಶ್ ಅವರ ಮಾಯಸಂದ್ರದ ಮನೆ ಜಲಾವೃತವಾಗಿದೆ. ಈ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಜಗ್ಗೇಶ್ ಈಗ ನಟನೆಯ ಜತೆ ರಾಜ್ಯಸಭಾ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ತಮ್ಮ ಮನೆ ಜಲಾವೃತವಾಗಿರೋದರ ಬಗ್ಗೆ ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದಾರೆ. ನೀರಾವರಿನಿಗಮದವರಿಗೆ ಗಮನ ಹರಿಸಿ ಎಂದು ಮನವಿ ಮಾಡಿದ್ದಾರೆ.

    ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ. ಮಾಯಸಂದ್ರ ತಳದಲ್ಲಿ ಇರುವ ಸುಮಾರು 20 ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ ಎಂದು ನಟ ಜಗ್ಗೇಶ್ ವಿನಂತಿಸಿಕೊಂಡಿದ್ದಾರೆ. ಜೊತೆಗೆ ಸಿಎಂ ಬೊಮ್ಮಾಯಿ ಅವರಿಗೂ ಜಗ್ಗೇಶ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಸಮಂತಾ ನೋ ಅಂದಿದ್ಯಾಕೆ?

    JAGGESH

    ಈಗಾಗಲೇ ಜಲಾವೃತವಾಗಿರುವ ಮನೆಗಳ ಬಗ್ಗೆ ಮತ್ತು ನಟ ಜಗ್ಗೇಶ್ ಮನವಿಗೆ ನೀರಾವರಿನಿಗಮ ಯಾವ ರೀತಿಯಲ್ಲಿ ಸಾಥ್ ನೀಡಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]