Tag: kannada films

  • ಕನ್ನಡ ಚಲನಚಿತ್ರ ರಂಗದ ಯಶಸ್ವಿ ಚಿತ್ರ ನಿರ್ದೇಶಕ ಎಸ್.ಉಮೇಶ್ ನಿಧನ

    ಕನ್ನಡ ಚಲನಚಿತ್ರ ರಂಗದ ಯಶಸ್ವಿ ಚಿತ್ರ ನಿರ್ದೇಶಕ ಎಸ್.ಉಮೇಶ್ ನಿಧನ

    ಬೆಂಗಳೂರು: ಕಳೆದ ಕೆಲ ವರ್ಷಗಳಿಂದಲೂ ಅನಾರೋಗ್ಯ ಸಮಸ್ಯೆದಿಂದ ಬಳಲುತ್ತಿದ್ದ ಕನ್ನಡ ಚಲನಚಿತ್ರ ರಂಗದ ಯಶಸ್ವಿ ನಿರ್ದೇಶಕ ಎಸ್.ಉಮೇಶ್ (Director S Umesh) ನಿಧನ ಹೊಂದಿದ್ದಾರೆ.

    ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಮೇಶ್‌ ಚಿಕಿತ್ಸೆ ಫಲಕಾರಿಯಾಗದೇ ಇಂದು (ಫೆ.21) ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಕನ್ನಡ ಚಿತ್ರರಂಗರಲ್ಲಿ (Kannada Film Industry) ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದ ಉಮೇಶ್‌ ಅವರು, ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’,‌ ‘ರಾಜ ಕೆಂಪು ರೊಜ’, ‘ಅವಳೆ ನನ್ನ ಹೆಂಡ್ತಿ’, ಎಲ್ಲರಂಥಲ್ಲ ನನ್ನ ಗಂಡ ಇನ್ನೂ ಕೆಲವು ಸಿನಿಮಾಗಳನ್ನ ನಿರ್ದೇಶಿಸಿದ್ದ ಸೈ ಎನಿಸಿಕೊಂಡಿದ್ದರು.

  • ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ.ಗೆ ನಿಗದಿಪಡಿಸುವಂತೆ ಸಿಎಂಗೆ ಮನವಿ

    ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ.ಗೆ ನಿಗದಿಪಡಿಸುವಂತೆ ಸಿಎಂಗೆ ಮನವಿ

    ಬೆಂಗಳೂರು: ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ (Multiplex Theatre) ಟಿಕೆಟ್‌ ದರ 200 ರೂ.ಗೆ ನಿಗದಿಪಡಿಸಿ ಸರ್ಕಾರದಿಂದ ಆದೇ ಹೊರಡಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಸಲ್ಲಿಸಿದೆ.

    ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್, ಸಾ.ರಾ ಗೋವಿಂದು ನೇತೃತ್ವದ ನಿಯೋಗ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಟಿಕೆಟ್‌ ದರ (Cinema Ticket Price) 200 ರೂ.ಗೆ ನಿಗದಿಪಡಿಸುವಂತೆ ಮನವಿ ಮಾಡಿದೆ. ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿಗೆ 7,000 ಕೋಟಿ ನೆರವು ನೀಡಲು ವಿಶ್ವಬ್ಯಾಂಕ್‌ ಒಪ್ಪಿದೆ: ಸಿಎಂ

    ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಾ.ರಾ ಗೋವಿಂದು, ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದ್ದು, ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೂ ಟಿಕೆಟ್ ದರ ನಿಗದಿಪಡಿಸಲಾಗುತ್ತಿದೆ. ಇದರಿಂದ ಕನ್ನಡ ಪ್ರೇಕ್ಷಕರಿಗೆ ಹೊರೆಯಾಗಿರುತ್ತದೆ. ಹಾಗಾಗಿ ಟಿಕೆಟ್‌ ದರ 200 ರೂ. ಮೀರದಂತೆ ನಿಗದಿಪಡಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಇದೇ ರೀತಿ ಮನವೊಗೆ ವಾರ್ತಾ ಇಲಾಖೆಯ ಮೂಲಕ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಿ ಸರ್ಕಾರ ಟಿಕೆಟ್‌ ದರ ನಿಗದಿಪಡಿಸಬೇಕೆಂದು ಮನವಿ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ – ಹಸಿರು ಪಟಾಕಿಗೆ ಮಾತ್ರ ಅವಕಾಶ ಎಂದ ಸಿಎಂ

    ದುಬಾರಿ ಪ್ರವೇಶದರದಿಂದ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡು ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ವಾಪಸ್ ಪಡೆಯಲು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಕೂಡಲೇ 200 ರೂ. ಮೀರದಂತೆ ಪ್ರವೇಶದರ ನಿಗದಿಪಡಿಸಲು ಕೋರಿದ್ದೇವೆ. ಈಗಾಗಲೇ ನೆರೆರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮತ್ತು ಚೆನ್ನೈ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರೂ. ನಿಂದ 200 ರೂ. ಪ್ರವೇಶದರ ನಿಗದಿಪಡಿಸಲಾಗಿದೆ. ನಮ್ಮಲ್ಲೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 150 ರೂ.ನಿಂದ 200 ರೂ.ಗೆ ಟಿಕೆಟ್‌ ದರ ನಿಗದಿ ಮಾಡಿ ಸರ್ಕಾರದಿಂದಲೇ ಆದೇಶ ಹೊರಡಿಸುವಂತೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ.

  • ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!

    ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra) ಅವರೇ ನಿರ್ದೇಶಿಸಿ ನಟಿಸಿರುವ ʻಯುಐʼ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಉಪ್ಪಿ ಅವರೇ ನಿರ್ದೇಶಿಸಿ ನಟಿಸಿದ್ದ ‘ಉಪೇಂದ್ರ’ ಸಿನಿಮಾ (Upendra Cinema) ರೀರಿಲೀಸ್‌ ಆಗಿದೆ. ರೀರಿಲೀಸ್‌ ಆಗ್ತಿದ್ದಂತೆ ಮೊದಲ ಶೋನಲ್ಲೇ ಅಭಿಮಾನಿಗಳೊಂದಿಗೆ ಕುಳಿತು ಉಪೇಂದ್ರ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

    ಉಪೇಂದ್ರ ಸಿನಿಮಾಗೆ 25 ವರ್ಷ ಆದ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ರೀರಿಲೀಸ್‌ ಆಗಿದೆ. ಬೆಳ್ಳಂಬೆಳಗೆ 6 ಗಂಟೆ ಸುಮಾರಿಗೆ ನಟ ಉಪೇಂದ್ರ ಮೊದಲ ಶೋವನ್ನು ಅಭಿಮಾನಿಗಳೊಂದಿಗೆ ಥಿಯೇಟರ್‌ನಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಇದರಿಂದ ಉಪ್ಪಿ ಅಭಿಮಾನಿಗಳೂ ಫುಲ್‌ ಖುಷ್‌ ಆಗಿದ್ದಾರೆ. ಉಪ್ಪಿ ಥಿಯೇಟರ್‌ಗೆ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮಳೆಗರೆದಿದ್ದಾರೆ.

    ಹೌದು. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಉಪ್ಪಿ ಏನೋ ದೊಡ್ಡದಾಗಿಯೇ ಪ್ಲ್ಯಾನ್ ಮಾಡಿದ್ದಾರೆ. ವಿದೇಶಗಳಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಎಂದು ಈಗಾಗಲೇ ಘೋಷಿಸಿದ್ದಾರೆ. ‘ಯುಐ’ ವಿಚಾರ ಪಕ್ಕಕ್ಕಿಟ್ಟರೆ ಈ ಬಾರಿ ಉಪ್ಪಿ ಹುಟ್ಟುಹಬ್ಬಕ್ಕೆ ಮತ್ತೊಂದು ಸರ್‌ಪ್ರೈಸ್ ಕಾಯ್ತಿದೆ. ಈ ನಡುವೆ ʻಉಪೇಂದ್ರʼ ರೀ-ರಿಲೀಸ್‌ ಆಗಿದೆ. ಇದನ್ನೂ ಓದಿ: ಪ್ರಭಾಸ್ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲು ಸೈಫ್ ಅಲಿ ಖಾನ್ ದಂಪತಿಗೆ ಆಫರ್

    ಸದ್ಯ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳನ್ನು ಮತ್ತೆ ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಇತ್ತಿಚೆಗೆ ದರ್ಶನ್‌ ನಟನೆಯ ʻಕರಿಯʼ ಸಿನಿಮಾ ರೀ-ರಿಲೀಸ್ ಆಗಿತ್ತು. ಇದಕ್ಕೂ ಮುನ್ನ ‘ಜಾಕಿ’, ‘ಶಾಸ್ತ್ರಿ’, ‘ರಾಜಾಹುಲಿ’ ಹೀಗೆ ಹಲವು ಸಿನಿಮಾಗಳು ಮರು ಬಿಡುಗಡೆ ಆಗಿತ್ತು. 3 ತಿಂಗಳ ಹಿಂದೆ ಉಪೇಂದ್ರ ಅವರ ʻಎʼ ಸಿನಿಮಾ ಸಹ ಬಂದಿತ್ತು. ಇದನ್ನೂ ಓದಿ: 42ರ ಹರೆಯದಲ್ಲೂ ಬೋಲ್ಡ್ ಆಗಿ ಕಾಣಿಸಿಕೊಂಡ ಶ್ರೀಯಾ ಶರಣ್

    ಹೆಚ್ಚು ಕಮ್ಮಿ 25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾ ಬಿಡುಗಡೆ ಆಗಿ ದಾಖಲೆ ಬರೆದಿತ್ತು. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ತೆರೆಗಪ್ಪಳಿಸಿ ಗೆದ್ದಿತ್ತು. ಉಪ್ಪಿ ತಮ್ಮ ವಿಭಿನ್ನ ಶೈಲಿಯ ನಿರ್ದೇಶನ, ನಿರೂಪಣೆ, ನಟನೆಯಿಂದ ಮೋಡಿ ಮಾಡಿದ್ದರು. ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ನಾಯಕಿಯರಾಗಿ ನಟಿಸಿದ್ದರು.

    ಬಹಳ ದಿನಗಳಿಂದ ಅಭಿಮಾನಿಗಳು ‘ಉಪೇಂದ್ರ’ ಸಿನಿಮಾ ರೀ-ರಿಲೀಸ್ ಮಾಡುವಂತೆ ಕೇಳುತ್ತಲೇ ಇದ್ದರು. ಅದರಂತೆ ಆರ್‌.ಕೆ ಗ್ರೂಪ್ಸ್ ಸಿನಿ ಕಂಬೈನ್ಸ್ ಸಂಸ್ಥೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದೆ. ಇದನ್ನೂ ಓದಿ: ಬಳೆ ಶಾಸ್ತ್ರ ಮಾಡಿಕೊಂಡ ಸೋನಲ್ ಮೊಂಥೆರೋ

  • ಗಣೇಶ ಚತುರ್ಥಿ: ಸಿನಿಮಾಗಳಲ್ಲಿ ಗಣಪನ ಗುಣ’ಗಾನ’

    ಗಣೇಶ ಚತುರ್ಥಿ: ಸಿನಿಮಾಗಳಲ್ಲಿ ಗಣಪನ ಗುಣ’ಗಾನ’

    ಣೇಶ ಮೋದಕ ಪ್ರಿಯನಾದರೂ, ನಾದಪ್ರಿಯನಂತೆ ಭಕ್ತರು ಗುಣಗಾನ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಸಿನಿಮಾ ರಂಗದಲ್ಲಿ ಗಣಪನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಎಷ್ಟೋ ಥಿಯೇಟರ್‌ಗಳಲ್ಲಿ ‘ನಮೋ ಗಣೇಶ..’ ಹಾಡಿನ ಮೂಲಕವೇ ಚಿತ್ರಗಳನ್ನು ಶುರು ಮಾಡುವ ಪರಿಪಾಠವೂ ಇದೆ. ‘ಗೌರಿ ಗಣೇಶ’ (Gowri Ganesh Festival) ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಣಪನ ಹಬ್ಬ ಬಂತಂದ್ರೆ ಕೆಲವು ಸಿನಿಮಾ ಹಾಡುಗಳು ನೆನಪಾಗುತ್ತೆ. ಎಷ್ಟೇ ಹೊಸ ಹೊಸ ಹಾಡುಗಳು (Kannada Songs) ಬಂದ್ರು ಈ ಹಾಡುಗಳನ್ನ ಮಾತ್ರ ಮರೆಯಲಾಗದು. ಇದನ್ನೂ ಓದಿ:ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ‘ಜಿಗ್ರಾ’ ನಟಿ ಆಲಿಯಾ ಭಟ್

    ಬೀದಿ ಬೀದಿಯಲ್ಲಿ, ಗಲ್ಲಿ ಗಲ್ಲಿಯಲ್ಲೂ ಈ ಹಾಡುಗಳನ್ನ ಕೇಳುತ್ತಿರುತ್ತಾರೆ. ಸಾಮಾನ್ಯ ದಿನಗಳಿಗಿಂತ ಗಣೇಶ ಹಬ್ಬಗಳಲ್ಲೇ ಈ ಹಾಡುಗಳನ್ನು ಹೆಚ್ಚಿಗೆ ನೆನಪಿಸಿಕೊಳ್ಳುತ್ತಾರೆ ಭಕ್ತಗಣ. ಹಾಗಾಗಿ ಗಣೇಶ ಹಬ್ಬದಲ್ಲಿ ಈ ಹಾಡುಗಳು ಟ್ರೆಂಡಿಂಗ್ ಆಗಿ ಬಿಡುತ್ತದೆ. ಹಾಗಿದ್ರೆ, ಗಣೇಶ ಚತುರ್ಥಿಯ ದಿನದಂದು ಚಾಲ್ತಿಯಲ್ಲಿರುವ ಸಿನಿಮಾ ಹಾಡುಗಳ ಲಿಸ್ಟ್ ಇಲ್ಲಿದೆ.

    ‘ಜೈ ಗಣೇಶʼ ಹಾಡು

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಕುಟುಂಬ’ (Kutumba) ಸಿನಿಮಾದಲ್ಲಿ ಗಣೇಶನ ಬಗ್ಗೆ ಹಾಡೊಂದಿದೆ. ಗಣೇಶ ಹಬ್ಬಕ್ಕೆ ಥಟ್ ಅಂತ ನೆನಪಾಗೋದೇ ಈ ಹಾಡು. ಕಾಡಿನಲ್ಲಿ ಮೀಸೆಯಿಟ್ಟೆ, ಮೀಸೆಯಲ್ಲಿ ದ್ವೇಷವಿಟ್ಟೆ. ನಾಡಿನಲ್ಲಿ ರೋಷವಿಟ್ಟೆ ಕಿಲಾಡಿ ಜೈ ಗಣೇಶ ಎಂಬ ಹಾಡು ಪದೇ ಪದೇ ಕೇಳಬೇಕು ಎನಿಸುತ್ತದೆ. ಇಂದಿಗೂ ಈ ಹಾಡನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಆರ್ಕೆಸ್ಟ್ರಾಗಳಲ್ಲಂತೂ ಈ ಹಾಡು ಸಖತ್ ಫೇಮಸ್.

    ‘ಗಣ ಗಣ ಗಣೇಶ’ ಹಾಡು

    ರಮ್ಯಾ ಕೃಷ್ಣ, ಅನುಪ್ರಭಾಕರ್ ನಟನೆಯ ‘ಶ್ರೀಕಾಳಿಕಾಂಬ’ (Shreekalikamba) ಚಿತ್ರದಲ್ಲೂ ಕೂಡ ಗಣೇಶನ ಬಗ್ಗೆ ವಿಶೇಷವಾದ ಹಾಡಿದೆ. ‘ಗಣೆ ಗಣೆ ಗಣೆ ಗಣೇಶ ಹೊಟ್ಟೆ, ಗಣೇಶ ಹೀರೋ’ ಎಂದು ಮೂಷಿಕವಾಹನನ ಬಗ್ಗೆ ಹಾಡು ಕೇಳಿರಬಹುದು. ಈ ಹಾಡು ನೆನಪಾಗುತ್ತೆ.

    ‘ನೀ ನಮ್ಮ ಗೆಲುವಾಗಿ ಬಾ’ ಹಾಡು

    ‘ಶಬರಿಮಲೈ ಸ್ವಾಮಿ ಅಯ್ಯಪ್ಪ’ ಚಿತ್ರದಲ್ಲಿ ಗಣೇಶನ ಬಗ್ಗೆ ಒಂದು ಭಕ್ತಿಗೀತೆ ಇದೆ. ಗಣೇಶನ ಬಗ್ಗೆ ಹಾಡುಗಳು ಅಂದರೆ ಈ ಹಾಡು ಕೂಡ ಥಟ್ ಅಂತ ನೆನಪಾಗುತ್ತದೆ. ನೀ ನಮ್ಮ ಗೆಲುವಾಗಿ ಬಾ ಗಜಮುಖನೇ ನೀ ನಮ್ಮ ಗೆಲುವಾಗಿ ಬಾ ಎಂಬ ಹಾಡು ಕೇಳಲು ಬಹಳ ಇಂಪಾಗಿದೆ.

    ‘ಗಣಪತಿ ಬಪ್ಪಾ ಮೋರಿಯಾ’ ಹಾಡು

    ಡಾ ವಿಷ್ಣುವರ್ಧನ್, ರಮೇಶ್ ಅರವಿಂದ್, ಪ್ರೇಮಾ ಅಭಿನಯದ ‘ಏಕದಂತ’ ಸಿನಿಮಾದಲ್ಲಿ ಗಣೇಶ ಮಹಿಮೆಯನ್ನ ಹೇಳುವ ಹಾಡಿದೆ. ‘ನಗುವ ನಮ್ಮೇಜಮಾನ, ನಗಿಸೋ ನಮ್ಮ ಜನನಾ….ಕಾಪಾಡೋ ಕಾಪಾಡೋ…ಗಣಪತಿ ಬಪ್ಪಾ ಮೋರಿಯಾ, ಹರಿಸೋ ನಮ್ಮ ಏರಿಯಾನ ಎಂದು ಹಾಡು ಕೇಳಿರಬಹುದು.

    ‘ಮಹಾ ಗಣಪತಿ’ ಹಾಡು

    ಶಿವರಾಜ್‌ಕುಮಾರ್, ದಾಮಿನಿ ನಟನೆಯ ‘ಅಸುರ’ ಮಹಾ ಗಣಪತಿ ಸಾಂಗ್ ಇಂದಿಗೂ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ಗೀತೆಯಾಗಿದೆ. ಈ ಹಾಡಿನಲ್ಲಿ ರಾಘವ್ ಲಾರೆನ್ಸ್ ಹೆಜ್ಜೆ ಹಾಕಿದ್ದರು ಎಂಬುದು ವಿಶೇಷ.

  • ‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು

    ‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು

    ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ನಾಗರ ಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ. ಈ ವಿಶೇಷ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ನಾಗಪಂಚಮಿಯ (Nagapanchami) ಬಗ್ಗೆ ಪುರಾಣಗಳಲ್ಲಿ ಹಲವು ರೀತಿಯ ಕಥೆಗಳಿವೆ. ಇದನ್ನೂ ಓದಿ:ವಿನಯ್ ರಾಜ್‌ಕುಮಾರ್ ನಟನೆಯ ‘ಪೆಪೆ’ ಸಿನಿಮಾದ ಜೇನು ಕುರುಬ ಸಾಂಗ್ ರಿಲೀಸ್

    ಹೀಗಿರುವಾಗ ನಾಗದೇವತೆ (Nagadevathe) ಹಾಗೂ ನಾಗರಹಾವಿನ ಮಹತ್ವಗಳನ್ನು ಸಾರುವ ಅನೇಕ ಚಲನಚಿತ್ರಗಳು ಬಂದಿದೆ. ಕನ್ನಡದಲ್ಲೂ ನಾಗರ ಮಹಿಮೆ ಸಾರುವ ನಾಗ ದೇವರ ಹೆಸರಿನಲ್ಲಿ ಹಲವು ಚಿತ್ರಗಳು (Movies) ಬಂದಿದೆ. ಇದರ ಕುರಿತು ವಿಶೇಷ ಮಾಹಿತಿ ಇಲ್ಲಿದೆ.

    1975ರಲ್ಲಿ ಬಂದ ಸಿನಿಮಾ ‘ನಾಗಕನ್ಯೆ’. ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ಬಾರಿಗೆ ನಿರ್ದೇಶಿಸಿದ ಚಿತ್ರವಾಗಿದೆ. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

    1982ರಲ್ಲಿ ಬಂದ ಸಿನಿಮಾ ‘ಗರುಡರೇಖೆ’. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಅನೇಕರು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ.

    1986ರಲ್ಲಿ ಮೂಡಿ ಬಂದಿದ್ದ ಸಿನಿಮಾ ‘ಬೆಳ್ಳಿನಾಗ’ ಸಿನಿಮಾ. ಟೈಗರ್ ಪ್ರಭಾಕರ್, ನಿಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

    1991ರಲ್ಲಿ ಬಂದಿದ್ದ ‘ನಾಗಿಣಿ’ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಶ್ರೀಪ್ರಿಯ ನಿರ್ದೇಶನದ ಈ ಚಿತ್ರ ಸೇಡಿನ ಕಥೆಯಾಗಿತ್ತು. ನಾಗರಾಜನನ್ನು ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು.

    1992ರಲ್ಲಿ ಬಿಡುಗಡೆಯಾದ ಚಿತ್ರ ‘ಶಿವನಾಗ’. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನು ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆ.ಎಸ್ ಆರ್ ದಾಸ್ ಈ ಚಿತ್ರ ನಿರ್ದೇಶನ ಮಾಡಿದ್ದರು.

    ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ‘ಖೈದಿ’ ಸಿನಿಮಾದ ಹಾಡೊಂದು ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ `ತಾಳೆ ಹೂವು ಎದೆಯಿಂದ’ ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ.

    ಗಿರೀಶ್ ಕಾರ್ನಾಡ್ ನಾಟಕ ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಹಾವಿನ ಪಾತ್ರ ಮಾಡಿದ್ದರು. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.

    ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಚಿತ್ರಗಳು ಹೆಚ್ಚಿವೆ. ರುದ್ರನಾಗ, ನಾಗರಹೊಳೆ, ನಾಗಕಾಳಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿದೆ.

  • ಸಂಬಂಧಿಕರ ಮದುವೆಯಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್

    ಸಂಬಂಧಿಕರ ಮದುವೆಯಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್ (Sandalwood) ನಟಿ ರಾಧಿಕಾ ಪಂಡಿತ್ (Radhika Pandit)  ತಮ್ಮ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ನಟಿ ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ನಟಿ ರಾಧಿಕಾ ಪಂಡಿತ್ (Radhika Pandit) ಅವರು ನಟನೆಗೆ (Acting) ಬ್ರೇಕ್ ಹಾಕಿ, ಮಕ್ಕಳ ಪಾಲನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮದುವೆ, ಸಂಸಾರ, ಮಕ್ಕಳು ಎಂದು ತಮ್ಮ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಲವ್ಲಿ ಸ್ಟಾರ್ ಪ್ರೇಮ್‌ಗೆ `ಟಗರು’ ನಟಿ ಮಾನ್ವಿತಾ ನಾಯಕಿ

    ಇದೀಗ ತಮ್ಮ ಸಂಬಂಧಿಕರ ಮದುವೆಯಲ್ಲಿ (Relatives Wedding) ರಾಧಿಕಾ ಪಂಡಿತ್ ಮಿಂಚಿದ್ದಾರೆ. ತಮ್ಮ ಕುಟುಂಬದ (Family) ಜೊತೆಗೂಡಿ ಮದುವೆ ಸಂಭ್ರಮದಲ್ಲಿ ನಟಿ ಭಾಗಿಯಾಗಿದ್ದಾರೆ. ವಧು ಜೊತೆ ಮುದ್ದಾಗಿ ಪೋಸ್ ಕೊಟ್ಟಿರುವ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಯಥರ್ವ್ ಮತ್ತು ಐರಾ ಜೊತೆ ಕೂಡ ಕ್ಯಾಮೆರಾ ಕಣ್ಣಿಗೆ ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ. ಸದ್ಯ ಕೊಂಕಣಿ ಶೈಲಿಯ ಮದುವೆಯಲ್ಲಿ ಮಿಂಚಿದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Radhika Pandit (@iamradhikapandit)

    ಇನ್ನೂ `ಕೆಜಿಎಫ್ 2′ ಸಕ್ಸಸ್ ನಂತರ ಯಶ್ (Yash) ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. ಅದಷ್ಟೇ ಅಲ್ಲ, ರಾಧಿಕಾ ಪಂಡಿತ್ ಅದ್ಯಾವಾಗ ಸಿನಿಮಾಗೆ ಕಮ್ ಬ್ಯಾಕ್ ಆಗುತ್ತಾರೆ ಅವರ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅರೆಸ್ಟ್‌ ಆದ ಮೂರೇ ಗಂಟೆಯಲ್ಲಿ ಗುರುಪ್ರಸಾದ್‌ಗೆ ಬೇಲ್

    ಅರೆಸ್ಟ್‌ ಆದ ಮೂರೇ ಗಂಟೆಯಲ್ಲಿ ಗುರುಪ್ರಸಾದ್‌ಗೆ ಬೇಲ್

    ನ್ನಡದ ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಗುರುಪ್ರಸಾದ್  ಅವರಿಗೆ 21ನೇ ಎಸಿಎಂಎಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು  ಗುರುಪ್ರಸಾದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಗುರುಪ್ರಸಾದ್‌ ಅವರ ಜೊತ ಕೆಲಸ ಮಾಡಿದ್ದ ಶ್ರೀನಿವಾಸ್ ಅವರ ದೂರಿನ ಹಿನ್ನೆಲೆಯಲ್ಲಿ ಗುರುಪ್ರಸಾದ್‌ ವಿರುದ್ಧ ಕೇಸ್‌ ದಾಖಲಾಗಿತ್ತು. ಇದನ್ನೂ ಓದಿ:‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಗುರುಪ್ರಸಾದ್ 2015-16 ರಲ್ಲಿ ಶ್ರೀನಿವಾಸ್ ಬಳಿ 30 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಗುರುಪ್ರಸಾದ್ ಪಡೆದಿದ್ದ ಸಾಲವನ್ನು ಮರು ಪಾವತಿಸಿರಲಿಲ್ಲ. ಗುರುಪ್ರಸಾದ್ ಶ್ರೀನಿವಾಸ್ ಗೆ ನೀಡಿದ್ದ ಮೂರು ಚೆಕ್‌ಗಳು ಬೌನ್ಸ್ ಆಗಿದ್ದವು. ಹಾಗಾಗಿ ಶ್ರೀನಿವಾಸ್ ನ್ಯಾಯಾಲದ ಮೊರೆ ಹೋಗಿದ್ದರು.

    ಕೋರ್ಟ್ ಗುರುಪ್ರಸಾದ್ ಗೆ ವಾರಂಟ್ ಜಾರಿ ಮಾಡಿತ್ತು. ಆದರೂ ಕೂಡ ಗುರುಪ್ರಸಾದ್ ಕೋರ್ಟ್ ಹಾಜರಾಗದ ಕಾರಣ ಇಂದು ಗುರುಪ್ರಸಾದ್ ಇದ್ದ ಕಡೆ ಗಿರಿನಗರ ಪೊಲೀಸರು ಹುಡುಕಿಕೊಂಡು ಹೋಗಿ ಬಂಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿಧನ

    ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿಧನ

    ಚಿತ್ರರಂಗದಲ್ಲಿ ಪೋಷಕ ನಟನಾಗಿ, ವಸ್ತ್ರಾಲಂಕಾರ ಕಲಾವಿದನಾಗಿ ಗುರುತಿಸಿಕೊಂಡಿದ್ದ ಗಂಡಸಿ ನಾಗರಾಜ್ (Gandasi Nagaraj) ಇಹಲೋಕ ತ್ಯಜಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಗಂಡಸಿ ನಾಗರಾಜ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ದೇವೇಗೌಡ ಆಸ್ಪತ್ರೆಯಲ್ಲಿ (Devegowda Hospital) ನಟ ನಿಧನರಾಗಿದ್ದಾರೆ. ಇದನ್ನೂ ಓದಿ: ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಎರಡನೇ ಸಿನಿಮಾಗೆ ಮುಹೂರ್ತ

    ವಸ್ತ್ರಾಲಂಕಾರ ಕಲಾವಿದನಾಗಿ ಹಾಗೂ ನಟನಾಗಿ ಕೆಲಸ ಮಾಡಿದ್ದ ಗಂಡಸಿ ನಾಗರಾಜ್ ಅವರು ನಿಧನರಾಗಿದ್ದಾರೆ. ಭಾನುವಾರ (ಡಿ.11) ರಾತ್ರಿ 10:30ಕ್ಕೆ ಅವರು ಕೊನೆಯುಸಿರು ಎಳೆದರು. ಚಿತ್ರರಂಗದ ಆರಂಭದಲ್ಲಿ ಅವಕಾಶ ಸಿಗದೇ ಇದ್ದಾಗ ಟೈಲರಿಂಗ್ ಮಾಡಿಕೊಂಡಿದ್ದರು. ನಂತರ ಅವರಿಗೆ ಕಾಸ್ಟ್ಯೂಮರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬಳಿಕ 40 ವರ್ಷಗಳ ಕಾಲ ಗಂಡಸಿ ನಾಗರಾಜ್ ಅವರು ಕಾಸ್ಟ್ಯೂಮರ್ ಆಗಿ ಸೈ ಎನಿಸಿಕೊಂಡಿದ್ದರು. ನವರಸ ನಾಯಕ ಜಗ್ಗೇಶ್ (Actor Jaggesh) ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು. ಜಗ್ಗೇಶ್ ನಟನೆಯ ಅಧಿಕ ಸಿನಿಮಾಗಳಿಗೆ ಗಂಡಸಿ ನಾಗರಾಜ್ ಕೆಲಸ ಮಾಡಿದ್ದರು.

    ಇನ್ನೂ ಗಂಡಸಿ ನಾಗರಾಜ್ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕಳೆದ 5 ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿ ಆಗದೇ ಪದ್ಮನಾಭ ನಗರದ ದೇವೇಗೌಡ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು (ಡಿ.12) ಮಧ್ಯಾಹ್ನ 3:30ರ ಸುಮಾರಿಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ಇನ್ನೂ ಗಂಡಸಿ ನಾಗರಾಜ್ ರವರು ನಟಿಸಿ ಕೆಲಸ ಮಾಡಿದ ಚಿತ್ರಗಳು ಸರ್ವರ್ ಸೋಮಣ್ಣ ,ಸೂಪರ್ ನನ್ನ ಮಗ,ಬಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ ,ಶ್ರೀ ಮಂಜುನಾಥ ,ಮದುವೆ,ಮಾತಾಡು ಮಾತಾಡು ಮಲ್ಲಿಗೆ, ಪರ್ವ,ರಾಜಹುಲಿ, ಶಿಕಾರಿ ಹೀಗೆ 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. `ಕೋಟಿಗೊಬ್ಬ 3′ ಇವರ ಕೊನೆಯ ಚಿತ್ರವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಯಶ್ ಮುಂದಿನ ಸಿನಿಮಾ, ಐರಾ ಪ್ರೊಡಕ್ಷನ್ ಹೌಸ್ ಬಗ್ಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

    ಯಶ್ ಮುಂದಿನ ಸಿನಿಮಾ, ಐರಾ ಪ್ರೊಡಕ್ಷನ್ ಹೌಸ್ ಬಗ್ಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

    ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ `ಕೆಜಿಎಫ್ 2′ (Kgf 2) ಸಕ್ಸಸ್ ನಂತರ ಮುಂದೇನು ಮಾಡ್ತಾರೆ ಎಂಬುದೇ ಅಭಿಮಾನಿಗಳಿಗೆ ಪ್ರಶ್ನೆಯಾಗಿತ್ತು. ಅದಕ್ಕೆ ಪೂರಕವೆಂಬಂತೆ ಮಗಳು ಐರಾ ಹೆಸರಿನಲ್ಲಿ ಯಶ್‌, ಪ್ರೊಡಕ್ಷನ್ ಹೌಸ್ ಮಾಡುತ್ತಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಸುದ್ದಿ ನಿಜನಾ ಎಂಬುದಕ್ಕೆ ಇದೀಗ ಸ್ಪಷ್ಟನೆ ಸಿಕ್ಕಿದೆ.

    `ಕೆಜಿಎಫ್ 2′ ಕೋಟಿ ಕೋಟಿ  ಕಲೆಕ್ಷನ್ ಮಾಡಿ, ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಯಶ್ ಮುಂದಿನ ಸಿನಿಮಾಗೆ ಕಾತರದಿಂದ ಕಾಯ್ತಿರುವ ಸಂದರ್ಭದಲ್ಲಿ ಐರಾ ನಿರ್ಮಾಣ ಸಂಸ್ಥೆ (Ayra Production House) ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೀಗ ಈ ವಿಚಾರಕ್ಕೆ ಉತ್ತರ ಸಿಕ್ಕಿದೆ. ನಿನ್ನೆಯಷ್ಟೇ ಐರಾ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ಸಂದರ್ಭದಲ್ಲೂ ಈ ಕುರಿತು ಯಾವುದೇ ಘೋಷಣೆ ಆಗಿಲ್ಲ. ಇದು ಸುಳ್ಳು ಅನ್ನೋದು ಅಭಿಮಾನಿಗಳಿಗೂ ಖಚಿತವಾಗಿದೆ. ಇದನ್ನೂ ಓದಿ: ಹರಿಪ್ರಿಯಾ- ವಸಿಷ್ಠ ಸಿಂಹ ಎಂಗೇಜ್‌ಮೆಂಟ್‌ ಫೋಟೋಸ್‌ ಔಟ್

    ನಟ ಯಶ್‌ಗೆ ಐರಾ ಪ್ರೊಡಕ್ಷನ್ ಹೌಸ್ ಮಾಡುವ ಬಗ್ಗೆ ಯಾವುದೇ ಪ್ಲ್ಯಾನ್ ಇಲ್ಲ. ಹೊಸ ಬಗೆಯ ಕಥೆ, ಪಾತ್ರದ ತಯಾರಿಯಲ್ಲಿದ್ದಾರೆ. ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಾಗಿದ್ದು, ಅದರ ತಯಾರಿಯಲ್ಲಿ ಯಶ್ ತಂಡ ಬ್ಯುಸಿಯಾಗಿದ್ದಾರೆ. ಕೊರೊನಾ ನಿಮಿತ್ತ ಯಶ್ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ 2023ಕ್ಕೆ ರಾಕಿ ಭಾಯ್ ಬರ್ತ್‌ಡೇಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಯಶ್ ಟೀಮ್ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

    ಯಶ್ ಹುಟ್ಟುಹಬ್ಬದಂದು ತಮ್ಮ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಸ್ವಾತಿ ಎಚ್‌ವಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಸ್ವಾತಿ ಎಚ್‌ವಿ

    ಕಿರುತೆರೆಯ ಸಾಕಷ್ಟು ಧಾರಾವಾಹಿ ಮೂಲಕ ಗುರುತಿಸಿಕೊಂಡಿರುವ ಸ್ವಾತಿ ಹೆಚ್ ವಿ(Swathi Hv) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ನಾಗಾರ್ಜುನ ರವಿ(Nagarjuna Ravi) ಜೊತೆ ನಟಿ ಹಸೆಮಣೆ ಏರಿದ್ದಾರೆ.

    ಶುಭವಿವಾಹ, ಪುಟ್ಟಗೌರಿ ಮದುವೆ, ಗಂಗಾ, ರಂಗನಾಯಕಿ ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ಸ್ವಾತಿ ದಾಂಪತ್ಯ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸ್ವಾತಿ ಮತ್ತು ನಾಗಾರ್ಜುನ ರವಿ ಮದುವೆ ನಡೆದಿದೆ. ಈ ಸಂಭ್ರಮದಲ್ಲಿ ಶಿಲ್ಪಾ ಶೆಟ್ಟಿ, ನಂದಿನಿ, ಅನಿಕಾ ಸಿಂಧ್ಯ, ಅಭಿಷೇಕ್ ದಾಸ್ ಹೀಗೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ಡಿಪ್ಲೋಮಾ ಇನ್ ಜ್ಯುವೆಲ್ಲರಿ ಡಿಸೈನ್ ಮಾಡುತ್ತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಟಿ ಅನಿರೀಕ್ಷಿತವಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ದಂಡುಪಾಳ್ಯ, ಬಿಡಲಾರೆ ನಿನ್ನ, ವಾರಸ್ಧಾರ, ಉಡ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಹೊಸ ಬಾಳಿಗೆ ಕಾಲಿಟ್ಟಿರುವ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]