Tag: kannada cinema

  • ಮ್ಯೂಸಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ಮನಸ್ಮಿತ

    ಮ್ಯೂಸಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ಮನಸ್ಮಿತ

    ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಮನಸ್ಮಿತ’ ಚಿತ್ರವನ್ನು ಅಪ್ಪಣ್ಣ ಸಂತೋಷ್ ರಚಿಸಿ ನಿರ್ದೇಶನ ಮಾಡಿ, ತಾಯಿ ಸೀತಮ್ಮ.ವಿ.ಟಿ ಹೆಸರಿನೊಂದಿಗೆ ಜಮುನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ದೀಪಿಕಾ.ವಿ.ಎ. ಇದ್ದಾರೆ. ನಿರ್ದೇಶಕರು ಒಮ್ಮೆ ಹೊರಗೆ ಹೋಗಿದ್ದಾಗ ಪುಸ್ತಕವನ್ನು ಓದಿ, ಅದರಿಂದ ಪ್ರೇರಣೆಗೊಂಡು ಕಥೆಯನ್ನು ಬರೆದು, ಅದನ್ನು ಚಿತ್ರರೂಪಕ್ಕೆ ತಂದಿದ್ದಾರೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಮ್ಯೂಸಿಕಲ್ ರೋಮ್ಯಾಂಟಿಕ್ ಥ್ರಿಲ್ಲರ್ ವಿಭಾಗದಲ್ಲಿ ಸಂಗೀತದ ನಾನಾ ಮಜಲುಗಳು ಹಾಗೂ ಪ್ರೇಮ ಕಥೆಯು ಬೆರತಿದ್ದು, ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಹುಡುಗಿಯ ಪ್ರೀತಿಯನ್ನು ಪಡೆಯಲು ಹೇಗೆ ಸಮರ್ಪಿಸಿಕೊಳ್ಳುತ್ತಾನೆ. ಕುಟುಂಬದಲ್ಲಿ ಆದ ನೋವು, ಕೆಟ್ಟದಾಗಿರುವುದನ್ನು ಹೋಗಲಾಡಿಸಲು ಯಾವ ರೀತಿ ಹೋರಾಡುತ್ತಾನೆ ಎಂಬುದನ್ನು ಮನರಂಜನಾತ್ಮಕವಾಗಿ ತೋರಿಸಲಾಗಿದೆ. ಸೆನ್ಸಾರ್‌ನವರು ಪ್ರಶಂಸೆ ವ್ಯಕ್ತಪಡಿಸಿದ್ದು ಅಲ್ಲದೆ ’ಮನಮಂದಿರದಿ ನೆಲೆಸಿರುವೆ’ ಮತ್ತು ’ಶಿವನ’ ಕುರಿತ ಹಾಡು ಚೆನ್ನಾಗಿ ಮೂಡಿಬಂದಿರುವುದರಿಂದ ಎರಡು ಬಾರಿ ವೀಕ್ಷಿಸಿದ್ದಾರಂತೆ.

    ಕಾಲೇಜು ಹುಡುಗನಾಗಿ ಮಡಕೇರಿ ಮೂಲದ ಚರಣ್‌ಗೌಡ ನಾಯಕ. ಹಲವು ಶೇಡ್ಸ್‌ಗಳಲ್ಲಿ ಕಾಣಿಸಿಕೊಳ್ಳುವ ಬೆಂಗಳೂರಿನ ಸಂಜನಾ ದಾಸ್ ನಾಯಕಿ. ಗಾಯಕನಾಗಿ ಬಾಲಿವುಡ್‌ನ ಅತುಲ್‌ಕುಲಕರ್ಣಿ, ನೃತ್ಯಗಾರ್ತಿಯಾಗಿ ಪಲ್ಲವಿ ಪುರೋಹಿತ್, ಮನೆಹಾಳು  ಮಾಡುವ ರಾಜೇಂದ್ರ ಕಾರಂತ್, ನಾಯಕನ ತಾಯಿಯಾಗಿ ಶಿಲ್ಪ, ಉಳಿದಂತೆ ಸುಚೇಂದ್ರ ಪ್ರಸಾದ್, ಮೂಗು ಸುರೇಶ್, ಕರಿಸುಬ್ಬು, ವೀಣಾ ಪೊನ್ನಪ್ಪ, ಸೌಭಾಗ್ಯ, ಪ್ರದೀಪ್‌ ಶಾಸ್ತ್ರೀ, ಪ್ರದೀಪ್‌ ಪೂಜಾರಿ ನಟಿಸಿದ್ದಾರೆ. ಕೆ.ಕಲ್ಯಾಣ್, ಮಂಜು.ಎಂ.ದೊಡ್ಡಮನಿ ಬರೆದಿರುವ ಹಾಡುಗಳಿಗೆ ಕ್ಲಾಸಿಕಲ್ ಸಂಗೀತವನ್ನು ಒದಗಿಸಿರುವ ಹರಿಕಾವ್ಯ ಎರಡು ಗೀತೆಗಳನ್ನು ರಚನೆ ಮಾಡಿದ್ದಾರೆ. ಈ ಪೈಕಿ ಹಾಡುಗಳಿಗೆ ಹರಿಹರನ್, ಶಂಕರ್‌ಮಹದೇವನ್ ಧ್ವನಿಯಾಗಿರುವುದು ವಿಶೇಷ.  ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಛಾಯಾಗ್ರಹಣ ಕೆ.ಎಸ್.ಚಂದ್ರಶೇಖರ್, ಸಂಕಲನ ಮಧುತುಂಬಕೆರೆ, ನೃತ್ಯ ಕಲೈ, ಸಾಹಸ ಕೌರವವೆಂಕಟೇಶ್ ಚಿತ್ರಕ್ಕಿದೆ. ಬೆಂಗಳೂರು, ಮರಳವಾಡಿ, ಕೂರ್ಗ್‌ನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

  • ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ಡಿಯೋ ಮತ್ತು ಟೀಸರ್ ಮೂಲಕ ಸಖತ್ ಸುದ್ದಿಯಲ್ಲಿರುವ ‘ಟಕ್ಕರ್’ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡುತ್ತಿದೆ. ಈ ಚಿತ್ರದ ಮೂಲಕ ನವನಟ ಮನೋಜ್ ಕುಮಾರ್ ಸ್ಯಾಂಡಲ್‌ವುಡ್ ಅಂಗಳಕ್ಕೆ ಗ್ರ‍್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಸೈಬರ್ ಕ್ರೈಂ ಕಥಾಹಂದರ ಒಳಗೊಂಡ ಮಾಸ್ ಆಕ್ಷನ್ ಸಿನಿಮಾ ಇದಾಗಿದ್ದು ಟಕ್ಕರ್ ಮೂಲಕ ಪ್ರೇಕ್ಷಕರ ಮನಗೆದ್ದು ಟರ್ನಿಂಗ್ ಪಾಯಿಂಟ್ ಪಡೆಯೋಕೆ ಮನೋಜ್ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

    ಮೊದಲ ಬಾರಿ ನಾಯಕ ನಟನಾಗಿ ಬಣ್ಣ ಹಚ್ಚಿರುವ ಮನೋಜ್ ಕುಮಾರ್ ಸಿನಿಮಾ ರಂಗಕ್ಕೆ ಬರೋಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಪ್ರೇಕ್ಷಕರ ಮನದ ಸಿಂಹಾಸನವನ್ನು ಅಲಂಕರಿಸಲು ನಟನೆ, ಆಕ್ಷನ್, ಡಾನ್ಸ್ ಎಲ್ಲದರಲ್ಲೂ ಪಳಗಿದ್ದಾರೆ. ಕ್ಯಾಚಿ ಟೈಟಲ್ ಈಗಾಗಲೇ ಎಲ್ಲರ ಮನದಲ್ಲೂ ರಿಜಿಸ್ಟರ್ ಆಗಿದೆ. ಸಿನಿಮಾದಲ್ಲಿ ಹೀರೋ ಯಾವ ರೀತಿ ಟಕ್ಕರ್ ಕೊಡ್ತಾರೆ ಅನ್ನೋದಕ್ಕೆ ಸಿನಿಮಾ ಬಿಡುಗಡೆಯಾಗಬೇಕಷ್ಟೆ. ಇದನ್ನೂ ಓದಿ: ‘ಟಕ್ಕರ್’ ನಿರ್ಮಾಪಕರ ಚಾಲೆಂಜಿಂಗ್ ಸ್ಟೋರಿ – ಕಲಾವಿದನಾಗಬಂದವರು ನಿರ್ಮಾಪಕರಾದ ಕಹಾನಿ

    ಚಿತ್ರದಲ್ಲಿ ಮನೋಜ್ ಅವರದ್ದು ಕಾಲೇಜ್ ಹುಡುಗನ ಪಾತ್ರ. ಮನೆಯಲ್ಲಿ ಅಸಡ್ಡೆ ಮಾಡಿದ್ರು ಊರಿಗೆ ಉಪಕಾರಿಯಾಗಿರೋ ಮಗನ ಪಾತ್ರ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಆದ್ರು ಹೊರ ಜಗತ್ತಲ್ಲಿ ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ಹುಡುಗ. ಮಾಸ್ ಅವತಾರದ ಜೊತೆ, ಲವರ್ ಬಾಯ್ ಆಗಿ ತೆರೆ ಮೇಲೆ ಮಿಂಚಿರೋ ಮನೋಜ್‌ಗೆ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆಯೋ ಬಯಕೆ. ಅದು ಟಕ್ಕರ್ ಸಿನಿಮಾದಿಂದ ಸಾಧ್ಯವಾಗುತ್ತೆ ಅನ್ನೋ ಭರವಸೆಯೂ ಇದೆ. ಸಾಕಷ್ಟು ಹೋಮ್ ವರ್ಕ್, ಪರಿಶ್ರಮದೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು ಪ್ರೇಕ್ಷಕರ ರಿಯಾಕ್ಷನ್‌ಗಾಗಿ ಕಾತರರಾಗಿದ್ದಾರೆ. ಚೊಚ್ಚಲ ಸಿನಿಮಾಗಿರುವುದರಿಂದ ಸಹಜವಾಗೇ ಎಕ್ಸೈಟ್‌ಮೆಂಟ್ ಹೆಚ್ಚಿದೆ ಎನ್ನುತ್ತಾರೆ ನಟ ಮನೋಜ್ ಕುಮಾರ್. ಇದನ್ನೂ ಓದಿ: ‘ಟಕ್ಕರ್’ ನಲ್ಲಿ ಡಾಕ್ಟರ್ ಆದ ನಟಿ ರಂಜನಿ ರಾಘವನ್

    ರಘು ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಟಕ್ಕರ್. ಈ ಹಿಂದೆ ಹುಲಿರಾಯ ಸಿನಿಮಾ ನಿರ್ದೇಶಿಸಿದ್ದ ನಾಗೇಶ್ ಕೋಗಿಲು ಈ ಸಿನಿಮಾ ನಿರ್ಮಾಣ ಮಾಡಿದ್ದು, ಎಸ್‌ಎಲ್‌ಎನ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಅದ್ದೂರಿಯಾಗಿ ತೆರೆ ಮೇಲೆ ತಂದಿದ್ದಾರೆ. ಮೇ 6ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಸಾಧುಕೋಕಿಲ, ಸುಮಿತ್ರ, ಜೈಜಗದೀಶ್, ಭಜರಂಗಿ ಲೋಕಿ ಒಳಗೊಂಡಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB

    ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB

    ಬೆಂಗಳೂರು: ಏಪ್ರಿಲ್ 24ರ ದಿನ ಕನ್ನಡಿಗರ ಪಾಲಿನ ಹೆಮ್ಮೆಯ ದಿನ. ಏಕೆಂದರೆ ಇಂದು ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜ್‌ಕುಮಾರ್ ಅವರ ಜನ್ಮದಿನ.

    ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರ ಪುತ್ರ ಮುತ್ತುರಾಜ್ ಆಗಿ ಚಿತ್ರರಂಗ ಪ್ರವೇಶಿಸಿದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಹಲವು ದಾಖಲೆಗಳನ್ನೇ ನಿರ್ಮಿಸಿದವರು ರಾಜ್‌ಕುಮಾರ್. ಕನ್ನಡ ನಾಡು, ನುಡಿಯ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಕಾಳಜಿಯಿಂದಾಗಿ ಅವರು ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್‌ ನೆನೆದು ತಂಗಿ ಕಣ್ಣೀರು

    ಹೀಗೆ ಅಭಿಮಾನಿಗಳ ಹಾಗೂ ಕನ್ನಡ ಪ್ರೇಮಿಗಳ ಆರಾಧ್ಯ ದೈವವಾಗಿ ಸ್ಥಾನ ಪಡೆದುಕೊಂಡಿರುವ ಡಾ.ರಾಜ್‌ಕುಮಾರ್ ಅವರ ಜನ್ಮದಿನವಾದ ಇಂದು ಹಲವಾರು ರಾಜಕೀಯ ಗಣ್ಯರು, ಚಲನಚಿತ್ರ ನಟ-ನಟಿಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತಿದ್ದಾರೆ. #ಡಾ.ರಾಜ್‌ಕುಮಾರ್ ಹ್ಯಾಶ್‌ಟ್ಯಾಗ್‌ನೊಂದಿಗೆ ಟಾಪ್‌ಟ್ರೆಂಡಿಗ್‌ನಲ್ಲಿ ರಾಜ್ ಕಂಗೊಳಿಸುತ್ತಿದ್ದಾರೆ.

    ಈ ಸಾಲಿಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಹ ಸೇರಿಕೊಂಡಿದ್ದು, ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಯಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನದ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭ ಕೋರಿ, ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇದನ್ನೂ ಓದಿ: ಉಪ್ಪಿ-ಆರ್‌ಜಿವಿ ಕಾಂಬಿನೇಷನ್ ಹೊಸ ಚಿತ್ರ: `ಐ ಆ್ಯಮ್ ಆರ್’ ಫಸ್ಟ್ ಲುಕ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಡಾ.ರಾಜ್‌ಕುಮಾರ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ `ನಾವಾಡುವ ನುಡಿಯೇ ಕನ್ನಡ ನುಡಿ’, ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ.ರಾಜ್‌ಕುಮಾರ್ ಅವರ 93ನೇ ಜನ್ಮಮಹೋತ್ಸವದ ನೆನಪಿನಲ್ಲಿ’ ಎಂದು ಬರೆದುಕೊಂಡಿದ್ದು, ಅಣ್ಣಾವ್ರ ದಿನವನ್ನು ಆರ್‌ಸಿಬಿ ಸ್ಮರಿಸಿದೆ.

    ಅಲ್ಲದೆ ಇದೇ ದಿನದಂದು ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬವೂ ಇದ್ದು, ತೆಂಡೂಲ್ಕರ್ ಅವರಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ಶುಭಾಶಯ ಕೋರಿದೆ.

  • ವಿನಯ್ ಪ್ರಸಾದ್ ನಟನೆಯ ಮಾರಾಯ ಚಿತ್ರದ ಟ್ರೈಲರ್ ರಿಲೀಸ್

    ವಿನಯ್ ಪ್ರಸಾದ್ ನಟನೆಯ ಮಾರಾಯ ಚಿತ್ರದ ಟ್ರೈಲರ್ ರಿಲೀಸ್

    ವಿಭಿನ್ನ ಶೀರ್ಷಿಕೆಗಳ ಮೂಲಕ ಹೊರ ಬರುತ್ತಿರುವ ಚಿತ್ರಗಳ ಪೈಕಿ ’ಮಾರಾಯ’ ಸಿನಿಮಾವೊಂದು ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಸಿನಿಮಾವನ್ನು ನೋಡಿದ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ’ಯುಎ’ ಪ್ರಮಾಣಪತ್ರ ನೀಡಿದ್ದಾರೆ. ಉದಯ್‌ಪ್ರೇಮ್ ನಿರ್ದೇಶನ ಮಾಡುವುದರ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿರುವುದು ಹೊಸ ಅನುಭವವಂತೆ. ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

    ಇವರ ಶ್ರಮಕ್ಕೆ ಎನ್.ಜಿ.ಸುಜಾತ ನಂದನ್ ಸಾಥ್ ನೀಡಿದ್ದಾರೆ. ತಾರಗಣದಲ್ಲಿ ಹಿರಿಯ ನಟಿ ವಿನಯಪ್ರಸಾದ್, ಡಿಂಗ್ರಿನಾಗರಾಜ್, ಬಿಗ್‌ಬಾಸ್ ಖ್ಯಾತಿಯ ದಿವಾಕರ್, ಸಲಗ ಸೂರಿಯಣ್ಣ(ದಿನೇಶ್), ಮಹಾಭಾರತದ ಚಿಲ್ಲರ್‌ಮಂಜು, ಬಸು, ಜಿಕೆ, ಮೈ ಆಟೋ ಗ್ರಾಫ್‌ನ ಕುಮಾರ್‌ದೇವ್, ಮಣಿ, ಶ್ರೇಯ, ತೀನಾತಿಮಯ್ಯ, ಸ್ನೇಹ ಮುಂತಾದವರು ನಟಿಸಿದ್ದಾರೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಚಿತ್ರದ ಟೈಟಲ್ ಟ್ರಾಕ್‌ನ್ನು ರಾಜೇಶ್‌ಕೃಷ್ಣನ್ ಹಾಡಿದ್ದು, ಎರಡು ಲಕ್ಷ ಜನರು ವೀಕ್ಷಣೆ ಮಾಡಿರುವುದು ತಂಡಕ್ಕೆ ಸಂತಸ ತಂದಿದೆ.  ಅಲ್ಲದೆ ಯುಗಾದಿ ಹಬ್ಬದಂದು ಟ್ರೇಲರ್ ಬಿಡುಗಡೆಗೊಂಡಿದ್ದು ವೈರಲ್ ಆಗಿದೆ. ಸಂಗೀತ ವಿನುಮನಸು, ಛಾಯಾಗ್ರಹಣ ಉದಯಾನಂದ ಬರ್ಕೆ, ಸಂಕಲನ ಶಿವಕುಮಾರ್.ಎ, ಸಾಹಸ ಚಂದ್ರುಬಂಡೆ ಅವರದಾಗಿದೆ.

  • ಹೀರೋ ಆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್

    ಹೀರೋ ಆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್

    ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮತ್ತು ರಾಜ್ಯ ಕಂಡಂತ ಉತ್ತಮ ಕ್ರೀಡಾ ಪಟು, ರಾಜ್ಯ ಪ್ರಶಸ್ತಿ ವಿಜೇತ (ಏಕಲವ್ಯ) ಜಿಮ್ ರವಿ ಪ್ರಥಮಬಾರಿ ನಾಯಕನಾಗಿ ಮತ್ತು ರವಿಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿರುವ ’ಪುರುಷೋತ್ತಮ’ ಸೆನ್ಸಾರ್ ಆಗಿದ್ದು ಯುಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಇದನ್ನೂ ಓದಿ : ವಿಜಯ್ ರಾಘವೇಂದ್ರ ನಟನೆಯ ಚಿತ್ರಕ್ಕೆ ರಾಘು ಟೈಟಲ್

    ‘ಚಿತ್ರವನ್ನು ಕಂಡಂತ ನಾನಾ ವಲಯದವರು ಸಾಮಾಜಿಕ ಕಳಕಳಿಯ ಚಿತ್ರವೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶೋಷಣೆಗೊಳಗಾದಂಥ ಹೆಣ್ಣನ್ನು ಗಂಡನಾದವನು ಸಾಥ್ ಕೊಟ್ಟು ಯಾವ ರೀತಿ ಕಾಪಾಡುತ್ತಾನೆ. ಗಂಡನ ಜವಾಬ್ದಾರಿ ಎಷ್ಟು ಸೂಕ್ಷ್ಮ ಇರುತ್ತದೆ ಎನ್ನುವುದು ಸಿನಿಮಾದ ಎಳೆಯಾಗಿದೆ’ ಎಂದಿದ್ದಾರೆ ಜಿಮ್ ರವಿ. ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

    ಎಪ್ರಿಲ್ ಎರಡನೇ ವಾರದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ನಾಯಕ ಲಾಯರ್ ಪಾತ್ರ ಆಗಿರುವುದರಿಂದ ವಕೀಲ ಬಾಂದವರು ಕುತೂಹಲದಿಂದ ಕಾಯುತ್ತಿದ್ದಾರೆ. ’ಸಂಸಾರ ಅಂದ್ಮಲೆ’ ಹಾಡು ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿರುವುದು, ಹಾಡಿನಲ್ಲಿ ಯಾರೂ ಊಹಿಸದ ನೃತ್ಯ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ’ದಿಲ್ದಾರ’ ಮತ್ತು ’ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ’ ಚಿತ್ರಗಳನ್ನು ನಿರ್ದೆಶನ ಮಾಡಿರುವ ಅಮರ್‌ನಾಥ್.ಎಸ್.ವಿ ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಪೂರ್ವ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಮೈಸೂರುಪಭು ಸೇರಿದಂತೆ ಹಲವು ಖ್ಯಾತ ಕಲಾವಿದರುಗಳು ಅಭಿನಯಿಸಿದ್ದಾರೆ. ಆನಂದ್ ಪ್ರಿಯಾ, ಪ್ರಮೋದ್‌ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್‌ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

  • ವಿಜಯ್ ರಾಘವೇಂದ್ರ ನಟನೆಯ ಚಿತ್ರಕ್ಕೆ ರಾಘು ಟೈಟಲ್

    ವಿಜಯ್ ರಾಘವೇಂದ್ರ ನಟನೆಯ ಚಿತ್ರಕ್ಕೆ ರಾಘು ಟೈಟಲ್

    ದ್ದಿಲ್ಲದೇ ವಿಜಯ್ ರಾಘವೇಂದ್ರ ಒಂದಿಲ್ಲೊಂದು ಸಿನಿಮಾಗಳಿಗೆ ಸಹಿ ಮಾಡುತ್ತಲೇ ಇರುತ್ತಾರೆ. ಟಿವಿ ಶೋ ಜತೆ ಜತೆಗೆ ಸತತವಾಗಿ ಸಿನಿಮಾ ಮಾಡುವುದರಲ್ಲಿ ವಿಜಯ್ ರಾಘವೇಂದ್ರ ಯಾವತ್ತಿಗೂ ಹಿಂದೆ ಬಿದ್ದಿಲ್ಲ. ಸದ್ಯ ಅವರು ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ರಾಘು ಎಂದು ಟೈಟಲ್ ಇಡಲಾಗಿದೆ. ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

    ಆನ, ಬ್ಯಾಂಗ್ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಆನಂದ್ ರಾಜ್ ರಾಘು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವಂತಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ರಾಘು ಥ್ರಿಲ್ಲರ್ ಎಕ್ಸ್ ಪಿರಿಮೆಂಟಲ್ ಸಿನಿಮಾವಾಗಿದ್ದು, ಕನ್ನಡದಲ್ಲಿ ಇದೊಂದು ಹೊಸತನದ ಸಿನಿಮಾವಾಗಿದ್ದು, ವಿಜಯ್ ರಾಘವೇಂದ್ರ ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ. ಡಿಕೆಎಸ್ ಸ್ಟುಡಿಯೋಸ್ ಮತ್ತು ಕೋಟ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ರಣ್ವೀತ್‌ ಶಿವಕುಮಾರ್‌, ಅಭಿಷೇಕ್‌ ಕೋಟ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಬ್ಯಾಂಗ್’, ‘ಫ್ಯಾಮಿಲಿ ಪ್ಯಾಕ್’ ಖ್ಯಾತಿಯ ಉದಯ್‌ ಲೀಲಾ ಕ್ಯಾಮೆರಾ ವರ್ಕ್,  ಸೂರಜ್‌ ಜೋಯಿಸ್‌ ಸಂಗೀತ ಸಂಯೋಜನೆ, ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ.  ಮೇ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ.

  • ಸಿನಿಮಾದವರು 90 ಹೊಡಿ ಅಂದ್ರು, ಸೆನ್ಸಾರಿನವರು 90 ಬಿಡಿ ಅಂದ್ರು: ಬಿರಾದಾರ 500ನೇ ಸಿನಿಮಾದ ಅಸಲಿ ಸ್ಟೋರಿ ಏನು?

    ಸಿನಿಮಾದವರು 90 ಹೊಡಿ ಅಂದ್ರು, ಸೆನ್ಸಾರಿನವರು 90 ಬಿಡಿ ಅಂದ್ರು: ಬಿರಾದಾರ 500ನೇ ಸಿನಿಮಾದ ಅಸಲಿ ಸ್ಟೋರಿ ಏನು?

    ಹಾಸ್ಯ ನಟ ಬಿರಾದಾರ್ ನಾಯಕನಾಗಿ ನಟಿಸುತ್ತಿರುವ ‘90 ಹೊಡಿ ಮನೀಗ್ ನಡಿ’ ಚಿತ್ರವು ಸೆನ್ಸಾರ್ ಅಂಗಳದಲ್ಲಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಈ ಸಿನಿಮಾಗೆ ಟೈಟಲ್ ಕೊಟ್ಟಿದ್ದರೂ, ಸೆನ್ಸಾರ್ ಮಂಡಳಿಯು ಮಾತ್ರ ತಕರಾರು ಎತ್ತಿತ್ತು. ‘90 ಹೊಡಿ ಮನೀಗ್ ನಡಿ’ ಎಂದರೆ ಜನರನ್ನು ನೇರವಾಗಿ  ಕುಡಿತಕ್ಕೆ ಪ್ರಚೋದಿಸಿದಂತಾಗುತ್ತದೆ’ ಎನ್ನುವುದು ಸೆನ್ಸಾರ ಮಂಡಳಿಯ ವಾದವಾಗಿತ್ತು. ಹಾಗಾಗಿ ಜನರಿಗೆ ಕುಡಿಸಬೇಡಿ, ಬಿಡಿಸಿ ಎಂದು ನೇರವಾಗಿಯೇ ಮಂಡಳಿಯ ಅಧಿಕಾರಿಗಳು ಮತ್ತು ಸದಸ್ಯರು ಚಿತ್ರತಂಡಕ್ಕೆ ಸೂಚಿಸಿತ್ತು. ಕುಡಿಸುವ ಹುಮ್ಮಸ್ಸಿನಲ್ಲಿಯೇ ಇದ್ದ ಚಿತ್ರತಂಡವು ಒಲ್ಲದ ಮನಸ್ಸಿನಿಂದ ಕೊನೆಗೂ ಶೀರ್ಷಿಕೆಯನ್ನು ಬದಲಾಯಿಸಿದೆ. ಅದು ‘ಕುಡಿ’ ಇರುವ ಕಡೆ ‘ಬಿಡಿ’ ಎಂದು ಮಾಡಿ ಅದೇ ಶೀರ್ಷಿಕೆಯನ್ನೇ ಮುಂದುವರೆಸಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಇದೊಂದು ಕಾಮಿಡಿ, ಕ್ರೈಮ್ ಥ್ರಿಲ್ಲರ್ ಕಥೆ ಆಧರಿಸಿದ ಚಿತ್ರವಂತೆ. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ನಾಗೇಂದ್ರ ಪ್ರಸಾದ್ ಮತ್ತು ಶಿವು ಬೋರಗಿ ಅವರ ಸಾಹಿತ್ಯವಿದೆ. ತಾರಾಗಣದಲ್ಲಿ ಬಿರಾದಾರ್ ಜೊತೆ ನೀತಾ ಮೈಂದರ್ಗಿ,  ಪ್ರೀತು ಪೂಜಾ, ಹಿರಿಯ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಮೊದಲಾವದರು ಇದ್ದಾರೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಸಿನಿಮಾ ಮತ್ತೊಂದು ವಿಶೇಷ ಸಂಗತಿ ಅಂದರೆ, ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ವೈಜನಾಥ ಬಿರಾದಾರ್ ಅವರ ಅಭಿನಯದ ಐನೂರನೇ ಚಿತ್ರ ಇದಾಗಿದೆ.

  • ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

    ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

    ನ್ನಡ ಸಿನಿಮಾ ರಂಗದ ಹಲವು ತಾರೆಯರಿಗೆ ಸಿಂಹಸ್ವಪ್ನವಾಗಿರುವ, ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ಇದೀಗ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಆಗಸ್ಟ್ 15ರ ಹಿನ್ನೆಲೆಯಾಗಿಟ್ಟುಕೊಂಡು ಅವರು ಸಿನಿಮಾ ಮಾಡುತ್ತಿದ್ದಾರೆ. ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ  ಅವರು, ‘ಇದೊಂದು ದೇಶಬಿಟ್ಟು ಹೋದವರ ಕಥೆಯನ್ನು ಹೇಳಲು ಹೊರಟಿದ್ದೇವೆ. ಸ್ವಾತಂತ್ರ್ಯ ದಿನದ ಎರಡು ದಿನದ ಮುಂಚೆ ಭಾರತದಲ್ಲಿ ನಡೆದ ಮಹತ್ವದ ಘಟನೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆಗಸ್ಟ್ 13, 14 ಮತ್ತು 15 ಹೀಗೆ ಮೂರು ದಿನಗಳಲ್ಲಿ ನಡೆಯುವಂತಹ ಸಿನಿಮಾ ಇದಾಗಿದೆ’ ಎಂದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಇದೊಂದು ಪ್ಯಾನ್ ಇಂಡಿಯಾ ಮಾದರಿಯ ಚಿತ್ರವಾಗಿದ್ದರಿಂದ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾ ರಂಗದ ಕಲಾವಿದರು ಈ ಚಿತ್ರದಲ್ಲಿ ಇರಲಿದ್ದಾರೆ. ಸದ್ದಿಲ್ಲದೇ ಶೇ.90ರಷ್ಟು ಭಾಗದ ಚಿತ್ರೀಕರಣ ಕೂಡ ನಡೆದಿದೆಯಂತೆ. “ಈ ಸಿನಿಮಾವನ್ನು ಒಟ್ಟು 12 ಭಾಷೆಗಳಲ್ಲಿ ತಯಾರಿಸುತ್ತಿದ್ದೇವೆ. ಚೈನೀಸ್ ಭಾಷೆಗೂ ಅದನ್ನು ಡಬ್ ಮಾಡುವ ಆಲೋಚನೆ ಹೊಂದಿದ್ದೇವೆ. ಭಾರೀ ಬಜೆಟ್ ನಲ್ಲೇ ಈ ಸಿನಿಮಾ ಶುರುವಾಗಲಿದೆ. ಹಾಗಂತ ಇದು ದಿ ಕಾಶ್ಮೀರ್ ಫೈಲ್ಸ್ ಮಾದರಿಯ ಚಿತ್ರವಲ್ಲ. ಮನರಂಜನೆಯ ಜತೆ ಜತೆಗೆ ಒಂದು ನಿಜ ಸಂಗತಿಯನ್ನು ಈ ಸಿನಿಮಾದ ಮೂಲಕ ಬಯಲು ಮಾಡುತ್ತಿದ್ದೇವೆ’ ಎನ್ನುವುದು ಪ್ರಶಾಂತ್ ಸಂಬರಗಿ ಮಾತು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ‘ಕೇರಾಫ್ ಫುಟ್ ಪಾತ್’ ಚಿತ್ರ ಖ್ಯಾತಿಯ ಕಿಶನ್ ಮತ್ತು ಅವರ ತಂದೆ ಶ್ರೀಕಾಂತ್ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಟೀನೇಟ್ ಸಿನಿಮಾದ ನಂತರ ಬರುತ್ತಿರುವ ಇವರ ಚಿತ್ರ ಇದಾಗಿದೆ. ಸಿನಿಮಾದ ಕಲಾವಿದರ ಮತ್ತು ತಂತ್ರಜ್ಞರ ವಿವರವನ್ನು ಸದ್ಯಕ್ಕೆ ಬಹಿರಂಗ ಪಡಿಸಿಲ್ಲ ಚಿತ್ರತಂಡ. ಬೇರೆ ರೀತಿಯಲ್ಲಿ ಅದನ್ನು ಲಾಂಚ್ ಮಾಡಬೇಕಾಗಿದ್ದರಿಂದ ಇದಷ್ಟೇ ಮಾಹಿತಿಯನ್ನು ಪ್ರಶಾಂತ್ ಸಂಬರಗಿ ನೀಡಿದ್ದಾರೆ.

  • ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    ಬೆಂಗಳೂರಿನ ಓರಾಯನ್ ಮಾಲ್‍ನಲ್ಲಿ ಕೆಜಿಎಫ್-2 ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ಭಾನುವಾರ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಿನಿ ಲೆಜೆಂಡ್‍ಗಳು ಭಾಗಿಯಾಗಿದ್ದು, ಕೆಜಿಎಫ್-2 ತಂಡ ಅವರನ್ನೆಲ್ಲ ಸ್ವಾಗತಿಸಲು ವಿಶೇಷ ತಂಡವನ್ನು ರೆಡಿ ಮಾಡಿತ್ತು. ವಿಶೇಷ ಅತಿಥಿಯಾಗಿ ಕನ್ನಡದ ನಟ ಶಿವರಾಜ್‍ಕುಮಾರ್ ಬಂದಿದ್ದು, ಅವರೇ ಟ್ರೈಲರ್ ರಿಲೀಸ್ ಮಾಡಿದರು.

    ಶಿವಣ್ಣ ಟ್ರೈಲರ್ ರಿಲೀಸ್ ಮಾಡುತ್ತಿದ್ದಂತೆ ರಾಕಿಬಾಯ್ ಅಭಿಮಾನಿಗಳು ಟ್ರೈಲರ್ ವೀಕ್ಷಣೆ ಮಾಡಿದ್ದು, ಸಿನಿಮಾ ಇಂಡಸ್ಟ್ರಿಯಲ್ಲೇ ದೊಡ್ಡ ಇತಿಹಾಸ ಸೃಷ್ಟಿಮಾಡಿದೆ. ಕೆಜಿಎಫ್ – 2 ಟ್ರೈಲರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಕ್ಕೂ ಹೆಚ್ಚು ವ್ಯೂ ಆಗಿದ್ದು, ಇಂದು ಸಿನಿಲೋಕದ ಇತಿಹಾಸದಲ್ಲಿ ಮೊದಲಬಾರಿಗೆ ಎಂಬುದು ಈ ತಂಡದ ಮತ್ತೊಂದು ಯಶಸ್ಸು ಆಗಿದೆ. ಇದನ್ನೂ ಓದಿ: ಕೆಜಿಎಫ್-2 ಸಿನಿಮಾದ ಪೂರ್ತಿ ಕ್ರೆಡಿಟ್ ನಮ್ಮ ಕನ್ನಡ ಇಂಡಸ್ಟ್ರಿಗೆ ಹೋಗಬೇಕು: ರಾಕಿಬಾಯ್

    ಕೆಜಿಎಫ್-2 ಟ್ರೈಲರ್ ರಿಲೀಸ್ ಆದ 30 ನಿಮಿಷಕ್ಕೆ 1.1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಕನ್ನಡದಲ್ಲಿ 1.1 ಮಿಲಿಯನ್ , ತೆಲುಗು 1.1 ಮಿಲಿಯನ್, ತಮಿಳು 7.30 ಲಕ್ಷ, ಮಲಯಾಳಂ 4 ಲಕ್ಷ. ಹಿಂದಿ 6 ಸಾವಿರ ವೀಕ್ಷಣೆ ಪಡೆದಿಕೊಂಡಿದೆ. ಈ ಟ್ರೈಲರ್ ನೋಡಿದ ರಾಕಿಬಾಯ್ ಅಭಿಮಾನಿಗಳು ಯಶ್ ಡೈಲಾಗ್‍ಗೆ ಫಿದಾ ಆಗಿದ್ದಾರೆ.

    ಈ ಟ್ರೈಲರ್‌ನಲ್ಲಿರುವ ‘ವೈಲೆನ್ಸ್.. ವೈಲೆನ್ಸ್ ಐ ಡೋಂಟ್ ಲೈಕ್ ವೈಲೆನ್ಸ್, ಬಟ್ ವೈಲೆನ್ಸ್ ಲೈಕ್ಸ್ ಮಿ’ ಎಂಬ ಡೈಲಾಗ್ ಫುಲ್ ಟ್ರೆಂಡ್ ಕ್ರಿಯೇಟ್ ಆಗಿದೆ. ಅಲ್ಲದೇ ಶಿವಣ್ಣ ಸಹ ತಮ್ಮ ಮಾತನ್ನು ಪ್ರಾರಂಭಿಸುವ ಮುನ್ನ ಈ ಡೈಲಾಗ್‍ ಹೇಳಿದ್ದು, ಅಭಿಮಾನಿಗಳಲ್ಲಿ ಸಂತೋಷ ಇನ್ನೂ ಹೆಚ್ಚಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಟ್ರೈಲರ್‌ನಲ್ಲಿ ರವೀನಾ, ಸಂಜಯ್ ದತ್, ಶ್ರೀನಿಧಿ ಮತ್ತು ಯಶ್ ಅಭಿನಯ ಎಲ್ಲರಲ್ಲೂ ಕುತೂಹಲ ಕೆರಳಿಸುತ್ತಿದೆ. ಇಡೀ ಸಿನಿಮಾ ಹೇಗೆ ಇರಬಹುದು ಎಂಬುದು ಅಭಿಮಾನಿಗಳು ಕುತೂಹಲ ಮೂಡಿಸಿದೆ.

  • 12 ವರ್ಷಗಳ ನಂತರ ಕನ್ನಡಕ್ಕೆ ಖುಷ್ಬು : ರವಿಚಂದ್ರನ್ ಪತ್ನಿಯಾಗಿ ನಟನೆ

    12 ವರ್ಷಗಳ ನಂತರ ಕನ್ನಡಕ್ಕೆ ಖುಷ್ಬು : ರವಿಚಂದ್ರನ್ ಪತ್ನಿಯಾಗಿ ನಟನೆ

    ಖುಷ್ಬು ಅಂದಾಕ್ಷಣ ತಕ್ಷಣವೇ ನೆನಪಾಗುವ ಸಿನಿಮಾ ‘ರಣಧೀರ’. ಈ ಚಿತ್ರದ ರವಿಚಂದ್ರನ್ ಮತ್ತು ಖುಷ್ಬು ಜೋಡಿ ಮರೆಯುವುದುಂಟೆ. ನಂತರ ಇವರು ಜತೆಯಾಗಿ ಎರಡು ಚಿತ್ರಗಳಲ್ಲೂ ಕಾಣಿಸಿಕೊಂಡರು. ಆ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿದ್ದರಿಂದ ಹಿಟ್ ಜೋಡಿ ಎಂದೇ ಸ್ಯಾಂಡಲ್ ವುಡ್ ಕರೆಯುತ್ತಿತ್ತು. ನಂತರ ಖುಷ್ಬು ಬೇರೆ ಬೇರೆ ಚಿತ್ರಗಳಲ್ಲಿ ನಟಿಸರೂ, ಕ್ರೇಜಿಸ್ಟಾರ್ ಜತೆ ನಟಿಸಲು ಮತ್ತೆ ಅವರಿಗೆ ಅವಕಾಶವೇ ಸಿಕ್ಕಿರಲಿಲ್ಲ. ಯುಗ ಪುರುಷ ಸಿನಿಮಾ ನಂತರ ಮತ್ತೆ ಈ ಜೋಡಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದೆ. ಕಿರೀಟಿ ನಟನೆಯ ಹೊಸ ಸಿನಿಮಾದಲ್ಲಿ ನಾಯಕನ ತಂದೆಯಾಗಿ ರವಿಚಂದ್ರನ್ ನಟಿಸುತ್ತಿದ್ದರೆ, ತಾಯಿಯಾಗಿ ಖುಷ್ಬು ಪಾತ್ರ ನಿರ್ವಹಣೆ ಮಾಡಲಿದ್ದಾರೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    2005ರಲ್ಲಿ ತೆರೆಕಂಡ ಮ್ಯಾಜಿಕ್ ಅಜ್ಜಿ ಸಿನಿಮಾದಲ್ಲಿ ಖುಷ್ಬು ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡಿದ್ದರು. ನಂತರ ಜನನಿ ಸಿನಿಮಾದಲ್ಲಿ ಅವರದ್ದು ಗೆಸ್ಟ್ ರೋಲ್. ಈ ಸಿನಿಮಾ ರಿಲೀಸ್ ಆಗಿದ್ದು 2010ರಲ್ಲಿ. ಬರೋಬ್ಬರಿ ಹನ್ನೆರಡು ವರ್ಷಗಳ ನಂತರ ಖುಷ್ಬು ಸ್ಯಾಂಡಲ್ ವುಡ್ ಗೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ : ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್

    ಈಗಾಗಲೇ ರವಿಚಂದ್ರನ್ ಸುದೀಪ್, ದರ್ಶನ್ ಸೇರಿದಂತೆ ಹಲವು ನಟರ ಸಿನಿಮಾಗಳಲ್ಲಿ ತಂದೆಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಹೊಸ ಹುಡುಗನ ಚಿತ್ರಕ್ಕೆ ತಂದೆಯಾಗಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ.