Tag: kannada cinema

  • ನಟಿ ರಶ್ಮಿಕಾಗೆ ಭದ್ರತೆ ಕೊಡಿ – ಅಮಿತ್‌ ಶಾ, ಪರಮೇಶ್ವರ್‌ಗೆ ಕೊಡವ ಸಂಘಟನೆಯಿಂದ ಪತ್ರ

    ನಟಿ ರಶ್ಮಿಕಾಗೆ ಭದ್ರತೆ ಕೊಡಿ – ಅಮಿತ್‌ ಶಾ, ಪರಮೇಶ್ವರ್‌ಗೆ ಕೊಡವ ಸಂಘಟನೆಯಿಂದ ಪತ್ರ

    – ರಶ್ಮಿಕಾ ಭಾರತೀಯ ಚಿತ್ರರಂಗಕ್ಕೆ ಸಿಕ್ಕಿರುವ ಅಪೂರ್ವ ಕೊಡುಗೆ ಎಂದ ಕೊಡವ ಮುಖಂಡ

    ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಭದ್ರತೆ ನೀಡುವಂತೆ ಕೊಡವ ಸಮುದಾಯ ಆಗ್ರಹಿಸಿದೆ. ನಮ್ಮ ಸಮುದಾಯದ ಹೆಣ್ಣುಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್‌ ಅವರಿಗೆ ಕೊಡವ ಸಂಘಟನೆಯಿಂದ (Kodava Organization) ಪತ್ರ ಬರೆಯಲಾಗಿದೆ.

    ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ (NU Nachappa) ಅವರು, ನಮ್ಮ ಕೊಡಗು ಮೂಲದ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಗ್ರ ಪೀಡಿತ ಪ್ರದೇಶದಿಂದ ನಾಪತ್ತೆಯಾಗಿದ್ದ ಬಾಲಕ ಸೇರಿ ಮೂವರ ಶವ ಪತ್ತೆ – ಭಯೋತ್ಪಾದಕ ಕೃತ್ಯ ಎಂದ ಬಿಜೆಪಿ

    ರಶ್ಮಿಕಾ ಮಂದಣ್ಣ ಅವರು ನಮ್ಮ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದವರು. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಮೂಲಕ ಅವರಿಂದು ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ನಟಿಯ ಜನಪ್ರಿಯತೆ ಹಾಗೂ ಕಲಾಪ್ರತಿಭೆಯನ್ನ ತಿಳಿಯದ ಕೆಲವರು ವಿನಾಕಾರಣ ಟೀಕೆ ಮಾಡುವ ಮೂಲಕ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಇದು ಘೋರ ಮಾತ್ರವಲ್ಲದೆ ಬೆದರಿಕೆಗೆ ಸಮ ಎಂದು ಪತ್ರದಲ್ಲಿ ದೂರಿದ್ದಾರೆ.

    ರಶ್ಮಿಕಾ ಮಂದಣ್ಣ ಭಾರತೀಯ ಚಲನಚಿತ್ರರಂಗಕ್ಕೆ ಸಿಕ್ಕಿರುವ ಅಪೂರ್ವ ಕೊಡುಗೆ. ಅವರು ಶ್ರೇಷ್ಠ ನಟಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಟಿ ಸ್ವಂತ ನಿರ್ಧಾರ ಹಾಗೂ ಆಕೆಯ ಆಯ್ಕೆಗಳ ಸ್ವಾತಂತ್ರ್ಯದ ಹಕ್ಕನ್ನು ನಾವೆಲ್ಲರೂ ಗೌರವಿಸಬೇಕು. ಅದನ್ನು ಬಿಟ್ಟು ಯಾರೋ ಒಬ್ಬರ ಸೂಚನೆಯಂತೆ, ನಿರೀಕ್ಷೆಯಂತೆ ಇರಬೇಕು ಎಂದು ಒತ್ತಡ ಹೇರಬಾರದು. ರಶ್ಮಿಕಾ ಅವರು ಕೊಡವ ಸಮಾಜಕ್ಕೆ ಸೇರಿರುವ ಕಾರಣದಿಂದಲೇ ಹೀಗೆಲ್ಲ ನಡೆದುಕೊಳ್ಳುತ್ತಿದ್ದಾರೆ ಎಂಬ ಅರ್ಥ ಬರುತ್ತದೆ ಎಂದು ಪತ್ರದಲ್ಲಿ ತಿಳಿದ್ದಾರೆ.  ಇದನ್ನೂ ಓದಿ: ಫರಂಗಿಪೇಟೆ ಅಪ್ರಾಪ್ತ ವಿದ್ಯಾರ್ಥಿ ನಾಪತ್ತೆ ಪ್ರಕರಣ – 12 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆ

  • ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿ: ಶಿವಣ್ಣ

    ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿ: ಶಿವಣ್ಣ

    ಬೆಂಗಳೂರು: ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದು ಹ್ಯಾಟ್ರಿಕ್  ಹೀರೋ ಶಿವರಾಜ್‌ಕುಮಾರ್ (Shiva Rajkumar) ಹೇಳಿದರು.

    ಅಮೆರಿಕದಲ್ಲಿ (America) ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿ ಬೆಂಗಳೂರಿಗೆ (Bengaluru) ಆಗಮಿಸಿದ ಬಳಿಕ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ಏರ್ಪೋಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದರು. ಇದನ್ನೂ ಓದಿ: ಶಿವಣ್ಣ ನಮ್ಮ ರಾಜ್ಯದ ಆಸ್ತಿ: ಕೃಷ್ಣ ಬೈರೇಗೌಡ

    ಫ್ಲೈಟ್‌ನಲ್ಲಿ 20 ಗಂಟೆಯಾಯಿತು. ಆರು ಗಂಟೆ ಕಾಲ ಸರ್ಜರಿ ನಡೆಯಿತು. ಎರಡನೇ ದಿನದಿಂದಲೇ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳಷ್ಟೇ ಅಲ್ಲ, ಇಂಡಸ್ಟ್ರಿ ಅವರು ಧೈರ್ಯ ತುಂಬಿದರು. ಗೀತನ ಬಗ್ಗೆ ಮಾತಾಡಲ್ಲ. ಗೀತಾ ಹೆಂಡತಿನೂ ಹೌದು, ತಾಯಿನೂ ಹೌದು. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನೋಡಿಕೊಂಡಿದ್ದಾಳೆ. ನಿವೇದಿತಾ ಗೆಳತಿ ಅನು ಒಂದು ತಿಂಗಳು ನಮ್ಮ ಜೊತೆ ಇದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಪಿವೋಟ್ ಚಿತ್ರದ ಸ್ನೀಕ್ ಪೀಕ್

    ಇಂಡಸ್ಟ್ರಿ ಆರೈಕೆ, ಜನರ ಆರೈಕೆ, ಮಾಧ್ಯಮ ಆರೈಕೆ ಇವತ್ತು ಒಳ್ಳೆಯದಾಗಿದೆ. ಗಂಡಸರಿಗೆ ತಾಯಂದಿರು ತುಂಬಾ ಇರುತ್ತಾರೆ.ಅಮ್ಮ, ಹೆಂಡತಿ ಮಗಳು ಹೀಗೆ. ಈ ಬಾರಿ ನಿವೇದಿತಾ ಕೂಡ ನಮ್ಮ ಜೊತೆ ಇದ್ದಳು. ವಿಶ್ರಾಂತಿ ಹೇಳಿದ್ದಾರೆ. ನಾರ್ಮಲ್ ಕೆಲಸ ಮಾಡುತ್ತೇನೆ. ಮಾರ್ಚ್ ಬಳಿಕ ಆಕ್ಷನ್ ವರ್ಕ್ ಶುರು ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಿಜವಾದ ಸ್ವಾತಂತ್ರ‍್ಯ ಹೋರಾಟಗಾರರನ್ನು ಮೂಲೆಗೆ ತಳ್ಳಿದ್ದು ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

    ಎರಡು ಮೂರು ದಿನ ಲಿಕ್ವಿಡ್ ಫುಡ್‌ನಲ್ಲೇ ಇದ್ದೆ. ಎರಡು ದಿನ, ಮೂರು ದಿನದ ಬಳಿಕ ನಿಧಾನವಾಗಿ ನಡೆಯಲು ಶುರು ಮಾಡಿದೆ. ಜೀವನವೇ ಒಂದು ಪಾಠ, ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ. ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ. 131 ಸಿನಿಮಾ ಬಗ್ಗೆ ಪ್ಲ್ಯಾನ್ ಇದೆ. ರಾಮ್ ಚರಣ್ ಅವರ ಸಿನಿಮಾ ಮಾಡುತ್ತೇನೆ ಎಂದರು. ಇದನ್ನೂ ಓದಿ: ಆಸ್ಪತ್ರೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ಡಿಸ್ಚಾರ್ಜ್‌ – ಸಚಿವೆ ಭಾವುಕ

  • ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ – ನಟ ದುನಿಯಾ ವಿಜಯ್‌

    ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ – ನಟ ದುನಿಯಾ ವಿಜಯ್‌

    ಕನ್ನಡ ಚಿತ್ರರಂಗದಲ್ಲಿ (Kannada Cinema) ನಟ ದುನಿಯಾ ವಿಜಯ್‌ (Duniya Vijay) ಹಾಗೂ ಲೂಸ್‌ ಮಾದ (loose mada) ನಡುವೆ ವೈಮನಸ್ಸು ಇತ್ತು ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್‌ ಮಾದ ಯೋಗೇಶ್‌ ಸ್ಪಷ್ಟನೆ ಕೊಟ್ಟಿದ್ದರು. ಇದಕ್ಕೆ ನಟ ದುನಿಯಾ ವಿಜಯ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ದುನಿಯಾ ವಿಜಯ್‌, ಯೋಗಿ ನನ್ನ ಸ್ವಂತ ಅಕ್ಕನ ಮಗ. ಚಿಕ್ಕ ವಯಸ್ಸಿನಿಂದಲೂ ಅವನನ್ನ ಎತ್ತಿ ಆಡಿಸಿ ಬೆಳೆಸಿದ್ದೇನೆ. ಆ ಪ್ರೀತಿ ಯಾವಾಗಲೂ ಇರುತ್ತೆ. ಎಷ್ಟೇ ದೂರ ಇದ್ದರೂ ಯೋಗಿ ಚೆನ್ನಾಗಿರಲಿ ಅಂತ ಆಶಿಸ್ತೀನಿ ಅಂತ ಹೇಳಿದ್ದಾರೆ.

    ಭೀಮಾ ಸಿನಿಮಾದಲ್ಲಿ ನಟನೆ ಮಾಡಬೇಕಿತ್ತು. ಆದ್ರೆ ಆಗಲ್ಲ. ಮುಂದೆ ನನ್ನ ನಿರ್ದೇಶನದಲ್ಲಿ ಯೋಗಿಗೆ ಸಿನಿಮಾ ಮಾಡ್ತೀನಿ. ಒಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ಆಸೆ ಇದೆ. ಏಕೆಂದರೆ ನಾನು ಕಷ್ಟಪಟ್ಟು ಬಂದಿದ್ದೇನೆ, ಯೋಗಿನೂ ಕಷ್ಟಪಟ್ಟು ಮೇಲೆ ಬಂದಿದ್ದಾನೆ. ಆದ್ರೆ ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ, ಬೇರೆನಿಲ್ಲ. ಒಂದು ಸ್ಕ್ರಿಪ್ಟ್‌ ಬಂದಿತ್ತು. ಯೋಗಿ ಸಿನಿಮಾ ಮಾಡಿಸೋಣ ಅಂತ ಹೇಳಿದ್ದೇನೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

    ನಟ ಯೋಗಿ ಹೇಳಿದ್ದೇನು?
    ದುನಿಯಾ ವಿಜಯ್‌ ಹಾಗೂ ನನಗೆ ಕಿರಿಕ್‌ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ. ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್‌ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್‌ ಹಾಗೂ ನನ್ನ ಫ್ರೆಂಡ್‌ಶಿಪ್‌ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಯೋಗಿ-ವಿಜಿ ಇಬ್ಬರೂ ಸಂಬಂಧಿಕರು:
    ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಇಬ್ಬರೂ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. ‘ದುನಿಯಾ’ ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡೂ ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು. ನಟ ಯೋಗಿಯ ಸಿನಿಮಾ ಕರಿಯರ್‌ನಲ್ಲಿ ‘ದುನಿಯಾ’ ಸಿನಿಮಾ ಒಂದು ತೂಕವಾದರೆ, ‘ಸಿದ್ಲಿಂಗು’ ಸಿನಿಮಾ ಇನ್ನಷ್ಟು ಖ್ಯಾತಿ ಕೊಟ್ಟಿತ್ತು.

    ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ
    ʻದುನಿಯಾʼ ಬಳಿಕ ಲೂಸ್‌ಮಾದ ಅಂತಲೇ ಯೋಗಿ ಖ್ಯಾತಿ ಪಡೆದರು. ದುನಿಯಾ ಸಕ್ಸಸ್ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ ಆಗಿ ಕನ್ನಡ ಚಿತ್ರಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಕೆಲವು ಹಿಟ್‌ ಸಿನಿಮಾಗಳನ್ನೂ ಕೊಟ್ಟರು.

  • ದುನಿಯಾ ವಿಜಯ್ ಜೊತೆ ಕಿರಿಕ್ ಆಗಿದ್ದು ನಿಜ – ಲೂಸ್‌ಮಾದ ಯೋಗೇಶ್‌

    ದುನಿಯಾ ವಿಜಯ್ ಜೊತೆ ಕಿರಿಕ್ ಆಗಿದ್ದು ನಿಜ – ಲೂಸ್‌ಮಾದ ಯೋಗೇಶ್‌

    – ʻಭೀಮಾʼ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು, ಕೂಡಿ ಬರಲಿಲ್ಲ ಎಂದ ನಟ

    ಕನ್ನಡ ಚಿತ್ರರಂಗದಲ್ಲಿ (Kannada Cinema) ನಟ ದುನಿಯಾ ವಿಜಯ್‌ (Duniya Vijay) ಹಾಗೂ ಲೂಸ್‌ ಮಾದ (loose mada) ನಡುವೆ ವೈಮನಸ್ಸು ಇತ್ತು ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್‌ ಮಾದ ಯೋಗೇಶ್‌ ಸ್ಪಷ್ಟನೆ ನೀಡಿದ್ದಾರೆ.

    ಸಿದ್ಲಿಂಗು-2 ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಇಬ್ಬರ ವೈಮನಸ್ಸಿನ ಕುರಿತು ಸ್ಪಷ್ಟನೆ ನೀಡಿದ್ದಾರೆ. ದುನಿಯಾ ವಿಜಯ್‌ ಹಾಗೂ ನನಗೆ ಕಿರಿಕ್‌ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್‌ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್‌ ಹಾಗೂ ನನ್ನ ಫ್ರೆಂಡ್‌ಶಿಪ್‌ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಯೋಗಿ-ವಿಜಿ ಇಬ್ಬರೂ ಸಂಬಂಧಿಕರು:
    ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಇಬ್ಬರೂ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. ‘ದುನಿಯಾ’ ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡೂ ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು. ನಟ ಯೋಗಿಯ ಸಿನಿಮಾ ಕರಿಯರ್‌ನಲ್ಲಿ ‘ದುನಿಯಾ’ ಸಿನಿಮಾ ಒಂದು ತೂಕವಾದರೆ, ‘ಸಿದ್ಲಿಂಗು’ ಸಿನಿಮಾ ಇನ್ನಷ್ಟು ಖ್ಯಾತಿ ಕೊಟ್ಟಿತ್ತು. ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸ್‌

    ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ
    ʻದುನಿಯಾʼ ಬಳಿಕ ಲೂಸ್‌ಮಾದ ಅಂತಲೇ ಯೋಗಿ ಖ್ಯಾತಿ ಪಡೆದರು. ದುನಿಯಾ ಸಕ್ಸಸ್ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ ಆಗಿ ಕನ್ನಡ ಚಿತ್ರಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಕೆಲವು ಹಿಟ್‌ ಸಿನಿಮಾಗಳನ್ನೂ ಕೊಟ್ಟರು.

  • ಮುಂದಿನ ತಿಂಗಳು ಆಪರೇಷನ್ ಇದೆ, ಯುಎಸ್‌ಎಗೆ ಹೋಗುತ್ತಿದ್ದೇನೆ: ಶಿವರಾಜ್ ಕುಮಾರ್

    ಮುಂದಿನ ತಿಂಗಳು ಆಪರೇಷನ್ ಇದೆ, ಯುಎಸ್‌ಎಗೆ ಹೋಗುತ್ತಿದ್ದೇನೆ: ಶಿವರಾಜ್ ಕುಮಾರ್

    -ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಹ್ಯಾಟ್ರಿಕ್‌ ಹೀರೋ

    ಶಿವಮೊಗ್ಗ: ಸದ್ಯ ಆರೋಗ್ಯ ಸುಧಾರಣೆ ಆಗಿದೆ. ಮುಂದಿನ ತಿಂಗಳು ಆಪರೇಷನ್ ಇದೆ. ಯುಎಸ್‌ಎಗೆ ಹೋಗುತ್ತಿದ್ದೇನೆ ಎಂದು ನಟ ಶಿವರಾಜ್ ಕುಮಾರ್ (Dr Shiva Rajkumar) ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಭೈರತಿ ರಣಗಲ್ ಸಿನಿಮಾದ ಗ್ರಾಂಡ್ ಸಕ್ಸಸ್‌ನಲ್ಲಿರುವ ನಟ ಶಿವರಾಜ್ ಕುಮಾರ್ ಇಂದು ಪತ್ನಿ ಸಮೇತ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಗೋಪಿ ವೃತ್ತದಲ್ಲಿರುವ ಮಲ್ಲಿಕಾರ್ಜುನ್ ಚಿತ್ರಮಂದಿರಕ್ಕೆ ಆಗಮಿಸಿದ ಶಿವಣ್ಣ ಅಭಿಮಾನಿಗಳ ಜೊತೆಗೆ ಭೈರತಿ ರಣಗಲ್ ಸಿನಿಮಾದ ಸಕ್ಸಸ್ ಅನ್ನು ಹಂಚಿಕೊಂಡರು. ಇದನ್ನೂ ಓದಿ: ಡಿಕೆಶಿ ತಂದಿಕ್ಕುವ ಕೆಲಸ ಮಾಡ್ತಿದ್ದಾರೆ: ಅಶೋಕ್ ಕಿಡಿ

    ಶಿವರಾಜ್ ಕುಮಾರ್ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂಬ ವಿಷಯ ತಿಳಿದ ಅಭಿಮಾನಿಗಳು ಚಿತ್ರಮಂದಿರ ಬಳಿ ಬೆಳಗ್ಗೆಯಿಂದಲೂ ಕಾಯುತ್ತಿದ್ದರು. ಬೈರತಿ ರಣಗಲ್ ಸ್ಟೈಲ್‌ನಲ್ಲಿ ಕ್ಯಾಸ್ಟ್ಯೂಮ್ ಹಾಕಿಕೊಂಡು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಆಗಮನಕ್ಕಾಗಿ ಕಾಯುತ್ತಿದ್ದ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸಿದರು. ಇದನ್ನೂ ಓದಿ: ರಕ್ತದಲ್ಲಿ ಪತ್ರ ಬರೆದು ನಿಖಿಲ್‍ಗೆ ಧೈರ್ಯ ತುಂಬಿದ ಅಭಿಮಾನಿ!

    ಇನ್ನೂ ಶಿವರಾಜ್ ಕುಮಾರ್ ದಂಪತಿ ಗೋಪಿ ಸರ್ಕಲ್‌ಗೆ ಬರುತ್ತಲೇ ಅಭಿಮಾನಿಗಳು ಘೋಷಣೆಯನ್ನು ಕೂಗಿದರು. ಚಿತ್ರತಂಡದ ಜೊತೆ ಫ್ಯಾನ್ಸ್ಗಳಿಗೆ ಧನ್ಯವಾದ ತಿಳಿಸಿದ ಶಿವರಾಜ್ ಕುಮಾರ್ ಅಭಿಮಾನಿಗಳ ಅಭಿಮಾನಕ್ಕೆ ಫಿದಾ ಆದರು. ಇದನ್ನೂ ಓದಿ: ಭಾರಿ ಮೊತ್ತಕ್ಕೆ ಉಪೇಂದ್ರ ನಿರ್ದೇಶನದ ‘ಯುಐ’ ವಿತರಣೆ ಹಕ್ಕು ಖರೀದಿಸಿದ ಕೆವಿಎನ್ ಪ್ರೊಡಕ್ಷನ್ಸ್

    ಇನ್ನೂ ಅಭಿಮಾನಿಗಳನ್ನ ಭೇಟಿ ಮಾಡಿ ಮಾತನಾಡಿದ ಶಿವರಾಜ್ ಕುಮಾರ್, ಎಲ್ಲಾ ಕಡೆಗಳಲ್ಲಿ ಬೈರತಿ ರಣಗಲ್ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಕಲೆಕ್ಷನ್ ಸಹ ಚೆನ್ನಾಗಿದೆ ಎಂದರು. ಸದ್ಯ 45 ಸಿನಿಮಾ ರೆಡಿಯಾಗುತ್ತಿದೆ. ತೆಲುಗಿನಲ್ಲಿ ರಾಮ್ ಚರಣ್ ಜೊತೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಈಸೂರು ದಂಗೆ ಬಗ್ಗೆ ಚಿತ್ರ ಮಾಡಬೇಕು ಎಂದು ನಿರ್ದೇಶಕರ ಜೊತೆ ಮಾತನಾಡಿದ್ದೇನೆ. ಆ ಸಿನಿಮಾವನ್ನು ಮಾಡೇ ಮಾಡಲಾಗುತ್ತೆ ಎಂದರು. ಇದನ್ನೂ ಓದಿ: ಅಂಬರೀಶ್ ಪುಣ್ಯಸ್ಮರಣೆ – ಎಲ್ಲೆಲ್ಲಿಯೂ ನೀನೆ.. ಎಂದೆಂದಿಗೂ ನೀನೆ ಎಂದ ಸುಮಲತಾ

  • ರಸ್ತೆ ಅಪಘಾತ: ದರ್ಶನ್‌ ʻಕಾಟೇರʼ ಸಿನಿಮಾದಲ್ಲಿ ನಟಿಸಿದ್ದ ಬಾಲನಟ ರೋಹಿತ್‌ಗೆ ಗಾಯ

    ರಸ್ತೆ ಅಪಘಾತ: ದರ್ಶನ್‌ ʻಕಾಟೇರʼ ಸಿನಿಮಾದಲ್ಲಿ ನಟಿಸಿದ್ದ ಬಾಲನಟ ರೋಹಿತ್‌ಗೆ ಗಾಯ

    ಮಂಡ್ಯ: ದರ್ಶನ್‌ ʻಕಾಟೇರʼ ಸಿನಿಮಾದಲ್ಲಿ (Kaatera Cinema) ನಟಿಸಿದ್ದ ಬಾಲನಟ ಮಾಸ್ಟರ್‌ ರೋಹಿತ್‌ (Master Rohit) ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ನಡೆದಿದೆ.

    ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ಕಾರು-ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರೋಹಿತ್‌ ಗಾಯಗೊಂಡಿದ್ದಾರೆ. ಸದ್ಯ ಮಾಸ್ಟರ್‌ ರೋಹಿತ್‌ಗೆ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ತೆರಳುವಾಗ ಘಟನೆ ನಡೆದಿದೆ, ಘಟನೆಯಲ್ಲಿ ರೋಹಿತ್ ತಾಯಿಯೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

    ʻಒಂದಲ್ಲ ಎರಡಲ್ಲʼ ಸಿನಿಮಾದ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತನಾಗಿದ್ದ ರೋಹಿತ್‌, ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದರು.

  • ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ

    ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ

    ಕನಸಿನ ರಾಣಿ ಮಾಲಾಶ್ರೀ (Malashri) ಮಗಳ ಜೊತೆ ಪೆದ್ದಮ್ಮನ ದರ್ಶನ ಮಾಡಿದ್ದಾರೆ. ಹೈದ್ರಾಬಾದ್‍ನ ಜುಬಲಿ ಹಿಲ್ಸ್‍ನಲ್ಲಿರುವ ಪೆದ್ದಮ್ಮ ದೇವಸ್ಥಾನ ಅಲ್ಲಿನ ಸುಪ್ರಸಿದ್ಧ ದೇವಸ್ಥಾನದಲ್ಲೊಂದು. ಕರ್ನಾಟಕದಲ್ಲಿ ಮೆಜೆಸ್ಟಿಕ್‍ನಲ್ಲಿರುವ ಅಣ್ಣಮ್ಮ ದೇವಿಯ ಮೇಲಿನ ನಂಬಿಕೆಯಂತೆ ಹೈದ್ರಾಬಾದ್‍ನಲ್ಲಿ ಪೆದ್ದಮ್ಮ ದೇವಿಯ ಮೇಲೆ ಭಕ್ತರ ಅಪಾರ ನಂಬಿಕೆ ಇದೆ. ಹೀಗಾಗಿ ಗೌರಿ ಹಬ್ಬದ ದಿನ ಅಲ್ಲಿನ ಪೆದ್ದಮ್ಮನ ದರ್ಶನ ಮಾಡಿದ್ದಾರೆ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ (Aradhana Ram).

    ಬಾಲಯ್ಯರ 50ನೇ ವರ್ಷದ ಸಿನಿಮಾ ಜರ್ನಿ ವಿಶೇಷವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಮಾಲಾಶ್ರೀ ಮಗಳ ಸಮೇತ ಅತಿಥಿಯಾಗಿ ತೆರಳಿದ್ದರು. ಹಲವು ದಿನ ಅಲ್ಲೇ ಉಳಿದಿದ್ದಾರೆ. ಅಷ್ಟಕ್ಕೂ ಆಂಧ್ರನಾಡು ಮಾಲಾಶ್ರೀಯ ತವರುಮನೆ ಕೂಡ. ಹೀಗಾಗಿ ಆಂಧ್ರಕ್ಕೆ ತೆರಳಿದ್ದ ಮಾಲಾಶ್ರೀ ಅಲ್ಲಿನ ಸಹೋದ್ಯೋಗಿ ಆಪ್ತರನ್ನೆಲ್ಲಾ ಭೇಟಿಯಾಗಿದ್ದಾರೆ. ಈ ವೇಳೆ ಅಲ್ಲಿಯೇ ಇರುವ ಪೆದ್ದಮ್ಮ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಇದನ್ನೂ ಓದಿ: `ಡಿ’ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷ್ಯವಾದ ಮಣ್ಣು – ದೇಶದಲ್ಲೇ ಮೊದಲ ಪ್ರಕರಣ!

    `ಕಾಟೇರ’ ಚಿತ್ರದ ಮೂಲಕ ಮಾಲಾಶ್ರೀ ಮಗಳು ಆರಾಧನಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಬಳಿಕ ಆರಾಧನಾ ಒಳ್ಳೆಯ ಅವಕಾಶಕ್ಕಾಗಿ ಕಾದಿದ್ದಾರೆ. ಈ ನಡುವೆ ಟಾಲಿವುಡ್‍ನಿಂದಲೂ ಆರಾಧನಾಗೆ ಸಿನಿಮಾ ಆಫರ್ ಬರ್ತಿರೋ ಸುದ್ದಿಯಿತ್ತು. ಬಹುಶಃ ಹೈದ್ರಾಬಾದ್‍ಗೆ ತೆರಳಿರುವ ಮಾಲಾಶ್ರೀ ಮಗಳ ಸಿನಿಮಾ ಕರಿಯರ್ ವಿಚಾರವಾಗಿಯೂ ಚರ್ಚಿಸಿರುವ ಸಾಧ್ಯತೆ ಇದೆ. ಹಲವು ಸ್ಕ್ರಿಪ್ಟ್‍ಗಳನ್ನ ಕೇಳಿರುವ ಸುದ್ದಿಯೂ ಬಂದಿದೆ. ಶ್ರೀಘ್ರದಲ್ಲೇ ಆರಾಧನಾ ಟಾಲಿವುಡ್‍ಗೆ ಎಂಟ್ರಿ ಕೊಟ್ರೂ ಆಶ್ಚರ್ಯವೇನಿಲ್ಲ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

  • ರಾಜ್ಯಾದ್ಯಂತ ʻಕಾಟೇರʼ ದರ್ಶನ – ಮುಗಿಲು ಮುಟ್ಟಿದ ಡಿಬಾಸ್‌ ಅಭಿಮಾನಿಗಳ ಸಂಭ್ರಮ

    ರಾಜ್ಯಾದ್ಯಂತ ʻಕಾಟೇರʼ ದರ್ಶನ – ಮುಗಿಲು ಮುಟ್ಟಿದ ಡಿಬಾಸ್‌ ಅಭಿಮಾನಿಗಳ ಸಂಭ್ರಮ

    ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಶುರುವಾಗಿದೆ.

    ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್‌ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್‌ ಡಿಬಾಸ್‌ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿ ಹೊರ ಬಂದ ಅಭಿಮಾನಿಗಳು ಸಾರಥಿಗೆ ಜೈಕಾರ ಕೂಗತೊಡಗಿದ್ದಾರೆ. ಈ ನಡುವೆ ಕಾಟೇರಮ್ಮನ ಗುಡಿ ಮಾಡಿ ದೇವಿ ಪ್ರತಿಮೆ ಸ್ಥಾಪಿಸಿರುವ ದೃಶ್ಯಗಳು ಕಂಡುಬಂದಿವೆ.

    ದರ್ಶನ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ದರ್ಬಾರ್‌ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿದೆ. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ಗಳಲ್ಲಿ ಬೆಳಗ್ಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿದೆ. ಸೂರ್ಯೋದಯವಾಗುವುದಕ್ಕೂ ಮುನ್ನವೇ ಕಾಟೇರ 335 ಶೋಗಳಲ್ಲಿ ಅಬ್ಬರಿಸಿದ್ದು ಅಭಿಮಾನಿಗಳ ಮನಗೆದ್ದಿದೆ. ಇಡೀ ದಿನ 1,600 ಶೋಗಳ ಪ್ರದರ್ಶನಕ್ಕೆ ಸಜ್ಜಾಗಿದೆ. ಒಟ್ಟಿನಲ್ಲಿ ಬಹುದಿನಗಳ ಬಳಿಕ ದರ್ಶನ್‌ ಮಾಸ್‌ ಲುಕ್‌ನಲ್ಲಿ ತೆರೆಯ ಮೇಲೆ ಕಾಲಿಟ್ಟಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

    ‘ಕಾಟೇರ’ ಸಿನಿಮಾದ ಕಥೆ ನಡೆಯುವುದು 1974ರ ಕಾಲಘಟ್ಟದಲ್ಲಿ. ಭೀಮನಹಳ್ಳಿ ಎಂಬ ಊರಿನಲ್ಲಿ ಕುಲುಮೆ ಕೆಲಸ ಮಾಡುತ್ತಿರುವ ಯುವಕ ಕಾಟೇರ (ದರ್ಶನ್). ದುಡಿಮೆನೇ ದೇವ್ರು ಅಂತ ನಂಬಿರುವ ವ್ಯಕ್ತಿ. ಆದರೆ ಇದೇ ಊರಿನಲ್ಲಿ ಜಮಿನ್ದಾರನ ದಬ್ಬಾಳಿಕೆ ಇರುತ್ತದೆ, ಗೇಣಿದಾರರಿಗೆ ಅನ್ಯಾಯವಾಗುತ್ತಿರುತ್ತದೆ, ಭತ್ತ ಬೆಳೆಯುವ ರೈತನಿಗೆ ಬದುಕೋದೇ ಕಷ್ಟವಾಗಿರುತ್ತದೆ. ಅಷ್ಟಕ್ಕೂ ಆ ಊರಿನಲ್ಲಿ ಅಂಥದ್ದು ಏನಾಗುತ್ತಿರುತ್ತದೆ? ತನ್ನವರ ಮೇಲಿನ ದಬ್ಬಾಳಿಕೆಗೆ ಕಾಟೇರ ಯಾವ ರೀತಿ ಉತ್ತರ ಕೊಡುತ್ತಾನೆ ಎಂಬ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ.

  • Naga Panchami: ಚಂದನವನದಲ್ಲಿ ನಾಗಾರಾಧನೆ: ಹಿರಿತೆರೆಗೂ ಹರಿದು ಬಂದ ಹಾವು!

    Naga Panchami: ಚಂದನವನದಲ್ಲಿ ನಾಗಾರಾಧನೆ: ಹಿರಿತೆರೆಗೂ ಹರಿದು ಬಂದ ಹಾವು!

    ನಾಗರ ಪಂಚಮಿ ಹಬ್ಬವನ್ನು (Naga Panchami Festival) ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದಂದು ವಿಶೇಷವಾಗಿ ಹಾವುಗಳನ್ನು (Snake) ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ನಮ್ಮ ಪೂರ್ವಜರು ಹಾವುಗಳನ್ನು ದೇವತೆಗಳಿಗೆ ಹೋಲಿಸಿ ‘ನಾಗದೇವತೆ’ ಎಂದು ಕರೆದಿದ್ದಾರೆ. ಹಾವುಗಳ ಪರಂಪರೆ ಕುರಿತು ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಿಂದ ಬಂದ ಅನೇಕ ಆಚರಣೆಗಳೂ ಜಾರಿಯಲ್ಲಿವೆ. ಆದರೆ ನಾಗ, ಫಲವನ್ನು ನೀಡುವ ದೇವರು ಎಂಬುದು ತುಂಬಾ ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ. ಸಂತಾನ ಪ್ರಾಪ್ತಿಗಾಗಿ ನಾಗ ದೇವರ ಆರಾಧನೆ ನಮ್ಮಲ್ಲಿ ಬಹಳ ಜನಪ್ರಿಯ. ನಮ್ಮ ಭೂಮಿಯನ್ನು ಆದಿಶೇಷ ತನ್ನ ಹೆಡೆಯಲ್ಲಿ ಧರಿಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲಾಗಿದೆ. ಏಕೆಂದರೆ ಆಹಾರ ಪದಾರ್ಥಗಳನ್ನು ನಾಶ ಮಾಡುವ ಇತರ ಜಂತುಗಳನ್ನ ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ನಾಗನ ಮಹಿಮೆಗಳನ್ನು ಸಾರುವ ಅನೇಕ ಸಿನಿಮಾಗಳೂ ಕನ್ನಡ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಮೂಡಿಬಂದಿವೆ. ಅವುಗಳತ್ತ ಒಮ್ಮೆ ಚಿತ್ತ ಹಾಯಿಸೋಣ….

    ನಾಗಕನ್ಯೆ:

    1975ರಲ್ಲಿ ಬಂದ ಸಿನಿಮಾ ‘ನಾಗಕನ್ಯೆ’. ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ನಿರ್ದೇಶನದ ಸಿನಿಮಾವಿದು. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸತ್ಯಂ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ನಾಗಕನ್ಯೆಯ ಸಂಗೀತ ಅನೇಕ ವರ್ಷಗಳ ಕಾಲ ಇಂತಹ ಚಿತ್ರಗಳಿಗೆ ಮಾದರಿ ಆಗಿತ್ತು. ಇದನ್ನೂ ಓದಿ: ನಾಗಭೂಷಣ್, ಅಮೃತಾ ನಟನೆಯ ‘ಟಗರು ಪಲ್ಯ’ ಟೈಟಲ್ ಟ್ರ‍್ಯಾಕ್ ರಿಲೀಸ್

    ಗರುಡರೇಖೆ:

    1982ರಲ್ಲಿ ಬಂದ ಸಿನಿಮಾ ‘ಗರುಡರೇಖೆ’. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಹಲವು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ. ಪಿ.ಎಸ್. ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಗರುಡ ರೇಖೆಯ ಮಹತ್ವವನ್ನು ತಿಳಿಸಲಾಗಿತ್ತು. ಗರುಡರೇಖೆ ಹೊಂದಿರುವ ವ್ಯಕ್ತಿಯ ಕಥೆಯನ್ನೂ ಇದು ಒಳಗೊಂಡಿತ್ತು.

    ಬೆಳ್ಳಿನಾಗ:

    1986ರಲ್ಲಿ ಮೂಡಿ ಬಂದಿದ್ದ ಸಿನಿಮಾ ‘ಬೆಳ್ಳಿನಾಗ’. ಟೈಗರ್ ಪ್ರಭಾಕರ್, ನಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಎನ್.ಎಸ್ ಧನಂಜಯ್ ಅವರ ನಿರ್ದೇಶನ ಈ ಚಿತ್ರಕ್ಕಿದ್ದು, ವಿ.ಲಕ್ಷ್ಮಣ ಅವರ ಸಿನಿಮಾಟೋಗ್ರಫಿಯಲ್ಲಿ ನಾಗನನ್ನು ಅದ್ಭುತವಾಗಿ ತೋರಿಸಲಾಗಿತ್ತು. ಇದನ್ನೂ ಓದಿ: ಮೊದಲು ಪ್ರಪೋಸ್ ಮಾಡಿದ್ದು ಯಾರು? ಲವ್ ಸ್ಟೋರಿ ಬಿಚ್ಚಿಟ್ಟ ಹರ್ಷಿಕಾ-ಭುವನ್ ಜೋಡಿ

    ನಾಗಿಣಿ:

    1991ರಲ್ಲಿ ಬಂದಿದ್ದ ನಾಗಿಣಿ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಈ ಚಿತ್ರ ಸೇಡಿನ ಕಥೆಯನ್ನ ಒಳಗೊಂಡಿದೆ. ನಾಗರಾಜನನ್ನ ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು. ಶ್ರೀಪ್ರಿಯ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿತ್ತು.

    ಶಿವನಾಗ:

    1992ರಲ್ಲಿ ಬಿಡುಗಡೆಯಾದ ಚಿತ್ರ ‘ಶಿವನಾಗ’. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನ ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆಎಸ್‌ಆರ್ ದಾಸ್ ಈ ಚಿತ್ರ ನಿರ್ದೇಶಿಸಿದ್ದರು. ಈ ಸಿನಿಮಾ ನೋಡಿದ ಅದೆಷ್ಟೂ ಅಭಿಮಾನಿಗಳು ಶಿವನಾಗ ಪೂಜೆಯನ್ನು ಕೈಗೊಂಡಿದ್ದು ಇತಿಹಾಸ.

    ಖೈದಿ:

    ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ಖೈದಿ ಸಿನಿಮಾದ ಹಾಡೊಂದು ಇಂದಿಗೂ ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ ‘ತಾಳೆ ಹೂವು ಪೊದೆಯಿಂದ…’ ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ. ಈ ಸಿನಿಮಾ ಬಿಡುಗಡೆಯಾದ ವೇಳೆಯಲ್ಲಿ ಶಾಲಾ ಕಾಲೇಜು ಸಮಾರಂಭದಲ್ಲಿ ಅತೀ ಹೆಚ್ಚು ಮಕ್ಕಳು ಡಾನ್ಸ್ ಮಾಡಿದ ಹಾಡು ಇದಾಗಿತ್ತು.

    ನಾಗಮಂಡಲ:

    ಗಿರೀಶ್ ಕಾರ್ನಾಡ್ ಅವರ ನಾಟಕವನ್ನು ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿ.ಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ 5 ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಎರಡು ಬಗೆಯ ಪಾತ್ರ ಮಾಡಿದ್ದರು. ಒಂದು ಮನುಷ್ಯನ ಪಾತ್ರವಾದರೆ, ಮತ್ತೊಂದು ಹಾವಿನ ಪಾತ್ರ. ಅಣ್ಣಪ್ಪನ ಹೆಂಡತಿಯನ್ನು ಹಾವಾಗಿ ಬಂದು ಮೋಹಿಸುವ ಕಥೆಯನ್ನು ಇದು ಒಳಗೊಂಡಿತ್ತು. ವಿಜಯಲಕ್ಷ್ಮಿ ಈ ಸಿನಿಮಾದ ನಾಯಕಿ. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ನಾಗ ಪೂಜೆಗಾಗಿಯೇ ಈ ಸಿನಿಮಾದಲ್ಲಿ ವಿಶೇಷ ಗೀತೆಯೊಂದನ್ನು ಸಂಯೋಜನೆ ಮಾಡಿದ್ದರು ಸಿ.ಅಶ್ವತ್ಥ್.

    ನಾಗದೇವತೆ:

    2000ನೇ ವರ್ಷದಲ್ಲಿ ತೆರೆಗೆ ಬಂದ ಸಿನಿಮಾ ನಾಗದೇವತೆ. ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ತಯಾರಾಗಿದ್ದ ಈ ಚಿತ್ರದಲ್ಲಿ ಪ್ರೇಮ, ಚಾರುಲತಾ, ಸೌಂದರ್ಯ, ಸಾಯಿ ಕುಮಾರ್ ಸೇರಿದಂತೆ ಹಲವರು ನಟಿಸಿದ್ದರು. ಸೌಂದರ್ಯ ನಾಗದೇವತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ನಾಗ ದೇವತೆಯನ್ನು ಪೂಜಿಸುವುದರಿಂದ ಆಗುವ ಲಾಭದ ಕುರಿತಾದ ಸಿನಿಮಾ ಇದಾಗಿತ್ತು.

    ಶ್ರೀನಾಗಶಕ್ತಿ:

    ಭಕ್ತಿ ಪ್ರಧಾನ ಕಥೆಗಳಿಗೆ ಹೆಸರುವಾಸಿವಾಗಿರುವ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಬಂದ ಸಿನಿಮಾ ಶ್ರೀನಾಗಶಕ್ತಿ. ಶ್ರುತಿ, ರಾಮ್ ಕುಮಾರ್ ಹಾಗೂ ಚಂದ್ರಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಚಂದ್ರಿಕಾ ಈ ಸಿನಿಮಾದಲ್ಲಿ ಹಾವಿನ ಪಾತ್ರ ಮಾಡಿದ್ದರು. ಚಂದ್ರಿಕಾ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟ ಸಿನಿಮಾ ಕೂಡ ಇದಾಗಿದೆ. 2011ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.

    ಹಾವಿನ ಮಹಿಮೆ ಸಾರುವ ಕನ್ನಡ ಸಿನಿಮಾಗಳು:

    ನಾಗದೇವತೆ-ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಅನೇಕ ಸಿನಿಮಾಗಳು ತೆರೆಯಲ್ಲಿ ಮಿಂಚಿವೆ. 1972ರಲ್ಲಿ ವಿಷ್ಣುವರ್ಧನ್, 2002ರಲ್ಲಿ ಉಪೇಂದ್ರ ಹಾಗೂ 2016ರಲ್ಲಿ ರಮ್ಯಾ-ದಿಗಂತ್ ನಟಿಸಿದ ಚಿತ್ರಕ್ಕೆ ʻನಾಗರಹಾವುʼಎಂದು ಹೆಸರಿಡಲಾಗಿತ್ತು. ರುದ್ರನಾಗ, ನಾಗರಹೊಳೆ, ನಾಗ ಕಾಳ ಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿವೆ.

    ಕೇವಲ ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ನಾಗದೇವತೆ ಕುರಿತಾದ ಧಾರಾವಾಹಿಗಳು ಬಂದಿವೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಜನಪ್ರಿಯವಾದ ಧಾರಾವಾಗಿ ಎಂದರೆ ಅದು ‘ನಾಗಿಣಿ’. ಇತ್ತೀಚೆಗೆ ನಾಗಿಣಿಯ ಕಥಾ ಹಂದರವನ್ನು ಹೊಂದಿರುವ ಸಾಕಷ್ಟು ಧಾರಾವಾಹಿಗಳು ಕಿರಿತೆರೆಯಲ್ಲಿ ಪ್ರಸಾರವಾಗುತ್ತಿವೆ. ಹಾವಿನ ಟ್ರೆಂಡ್ ಇದೀಗ ಕಿರುತೆರೆಯಲ್ಲಿ ಜನಪ್ರಿಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ಕಾರವಾರ: ಯಾರೋ ಏನೋ ಹೇಳಿದರೂ ಎಂದು ಕೇಳವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಲ್ಲಿ ಸಾಬೀತಾಗಿದೆ ಎಂದು ತೆಲಗು ನಿರ್ದೇಶಕ ಗೀತಕೃಷ್ಣ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ತಿರುಗೇಟು ಕೊಟ್ಟರು.

    Century Star Shivarajkumar shows no signs of slowing down- The New Indian Express

    ಸ್ಯಾಂಡಲ್‍ವುಡ್ ಇಂಡಸ್ಟ್ರಿ ಡರ್ಟಿ ಎಂದು ಗೀತಕೃಷ್ಣ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಈ ಹೇಳಿಕೆಯನ್ನು ವಿರೋಧಿಸಿದ ಶಿವರಾಜ್ ಕುಮಾರ್ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ. ಕೆಜಿಎಫ್-2 ಸಿನಿಮಾದಿಂದ ಅದು ಪ್ರೂ ಆಗಿದೆ. ಯಾರು ಏನೇ ಹೇಳಿದ್ರು ಈ ಕಿವಿಯಲ್ಲಿ ಕೇಳಬೇಕು ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನ ತೋರಿಸುತ್ತೆ. ಇಂತವರ ಬಗ್ಗೆ ಪ್ರತಿಕ್ರಿಯೆ ಕೊಟ್ಟಷ್ಟು ಅವರಿಗೆ ಲಾಭ ಆಗುತ್ತೆ ಎಂದು ತಿಳಿಸಿದರು.

    ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರಗೆ ಎಲ್ಲ ಕಲಾವಿದರು ಇಂಡಸ್ಟ್ರಿಯನ್ನ ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಇಂತವರ ಕೀಳು ಮಾತಿಗೆ ಕಿವಿ ಕೊಡದೆ, ಅವರು ಯಾರು ಅಂತಾ ನೆಗ್ಲೆಟ್ ಮಾಡಬೇಕು ಎಂದರು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ 

    Shocking: Death threat to Shivarajkumar | Kannada Movie News - Times of India

    ‘ಬೈರಾಗಿ’ ಸಿನಿಮಾ ಕುರಿತು ಮಾತನಾಡಿದ ಅವರು, ನನ್ನ ಮುಂದಿನ ಸಿನಿಮಾ ‘ಬೈರಾಗಿ’ ಯಾವುದೇ ಪ್ಯಾನ್ ಇಂಡಿಯಾವಲ್ಲ. ಭಾವನೆಗಳ ಕಥೆ ಇದು. ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಅರ್ಥವಿದೆ. ನನ್ನ ಪಾಲಿಗೆ ಬಂದ ಸಿನಿಮಾಗಳನ್ನ ಮಾಡುತ್ತಿದ್ದೇನೆ ಎಂದರು.