Tag: kannada cinema

  • ಜೇಮ್ಸ್ ನಿರ್ದೇಶಕನ ಹೊಸ ಚಿತ್ರಕ್ಕೆ ಗಣೇಶ್ ಹೀರೋ

    ಜೇಮ್ಸ್ ನಿರ್ದೇಶಕನ ಹೊಸ ಚಿತ್ರಕ್ಕೆ ಗಣೇಶ್ ಹೀರೋ

    ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಸಮಯದಲ್ಲಿ ನೂತನ ಚಿತ್ರದ ಘೋಷಣೆಯಾಗಿದೆ.

    ಎಸ್‌ವಿಸಿ ಫಿಲಂಸ್ (SVC Films) ಲಾಂಛನದಲ್ಲಿ ಎಂ.ಮುನೇಗೌಡ ಅವರು ನಿರ್ಮಿಸುತ್ತಿರುವ ʻಪ್ರೊಡಕ್ಷನ್ ನಂ 3ʼ ಚಿತ್ರವನ್ನು “ಬಹದ್ದೂರ್”, “ಭರ್ಜರಿ “, “ಭರಾಟೆ”, `ಜೇಮ್ಸ್’ (James Movie) ನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿದ್ದಾರೆ.

    ಗಣೇಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಮೂರನೇ ಚಿತ್ರವನ್ನು ಘೋಷಿಸಿರುವ ನಿರ್ಮಾಪಕ ಎಂ ಮುನೇಗೌಡ ಅವರು ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ “ಭುವನಂ ಗಗನಂ” ನಿರ್ಮಿಸಿದ್ದ ಎಂ.ಮುನೇಗೌಡ ಅವರು ಪ್ರಸ್ತುತ “ಅಯೋಗ್ಯ 2” ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗ ಮೂರನೇ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಚೇತನ್ ಕುಮಾರ್ ಅವರ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರವಿದು. ಈ ನೂತನ ಚಿತ್ರದ ಚಿತ್ರೀಕರಣ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ. ಶಿವು ಗೌಡ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ “ಪ್ರೊಡಕ್ಷನ್ ನಂ ೩” ಚಿತ್ರದ ತಾರಾಬಳಗ ಹಾಗೂ ತಂತ್ರಜ್ಞರ ಕುರಿತು ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರ ಬೀಳಲಿದೆ.

  • `ಡಿಜಾಂಗೋ ಕೃಷ್ಣಮೂರ್ತಿ’ ಆದ ಗೋಲ್ಡನ್ ಸ್ಟಾರ್

    `ಡಿಜಾಂಗೋ ಕೃಷ್ಣಮೂರ್ತಿ’ ಆದ ಗೋಲ್ಡನ್ ಸ್ಟಾರ್

    ಎಸ್‌ಎನ್‌ಟಿ ಎಂಟರ್ಪ್ರೈಸಸ್ ಲಾಂಛನದಲ್ಲಿ ಎಸ್‌ಸಿ ರವಿ ಭದ್ರಾವತಿ ಅವರು ನಿರ್ಮಿಸುತ್ತಿರುವ, ಖ್ಯಾತ ಗೀತಸಾಹಿತಿ ಅರಸು ಅಂತಾರೆ ನಿರ್ದೇಶನ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ ‘ಡಿಜಾಂಗೋ ಕೃಷ್ಣಮೂರ್ತಿ’ (Django Krishnamurthy) ಎಂದು ಹೆಸರಿಡಲಾಗಿದೆ.

    ಗಣೇಶ್ ಅವರ ಹುಟ್ಟುಹಬ್ಬದ ದಿನವೇ ಶೀರ್ಷಿಕೆ ಅನಾವರಣ ಮಾಡಿರುವ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಹುನಿರೀಕ್ಷಿತ ಹಾಗೂ ಅಪಾರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.

    Golden Star Ganesh

    ಗಣೇಶ್ ಅವರಿಗೆ ನಾಯಕಿಯಾಗಿ ʻಹನುಮಾನ್ʼ ಖ್ಯಾತಿಯ ಅಮೃತ ಅಯ್ಯರ್ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ, ಅರುಣ ಬಾಲರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಅನೂಪ್ ಸೀಳಿನ್ ಸಂಗೀತ, ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನವಿರುವ “ಡಿಜಾಂಗೋ ಕೃಷ್ಣಮೂರ್ತಿ” ಚಿತ್ರಕ್ಕೆ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ.

  • ಹುಟ್ಟು ಹಬ್ಬದ ದಿನ ಆಂಜನೇಯ ಅವತಾರವೆತ್ತ ಗಣೇಶ್

    ಹುಟ್ಟು ಹಬ್ಬದ ದಿನ ಆಂಜನೇಯ ಅವತಾರವೆತ್ತ ಗಣೇಶ್

    ಕನ್ನಡ ಚಿತ್ರರಂಗದ ತ್ಯಾಗರಾಜರು ಅಂತಾನೇ ಖ್ಯಾತಿ ಪಡೆದಿರುವ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕಾಂಬೋ ‘Yours Sincerely Raamʼಗಾಗಿ ಒಂದಾಗಿರುವುದು ಗೊತ್ತೇ ಇದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇಂದು ಗಣೇಶ್ ಹುಟ್ಟುಹಬ್ಬಕ್ಕೆ ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ. ‘Yours Sincerely Raamʼ ಪೋಸ್ಟರ್ ಬಿಡುಗಡೆ ಮಾಡಿ ಗೋಲ್ಡನ್ ಸ್ಟಾರ್‌ಗೆ ಬರ್ತ್‌ಡೇ ಶುಭಾಶಯ ತಿಳಿಸಿದೆ.

    ಗಣೇಶ್ ಜನ್ಮದಿನಕ್ಕೆ ಅನಾವರಣಗೊಂಡಿರುವ ಪೋಸ್ಟರ್ ಬಹಳ ವಿಶೇಷವಾಗಿದೆ. ಗಣೇಶ್ ಹಿಂದೆಂದೂ ಕಾಣದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಅವತಾರದಲ್ಲಿ ಮಳೆ ಹುಡ್ಗ ದರ್ಶನ ಕೊಟ್ಟಿದ್ದಾರೆ. ಹಿಮಾಲಯದ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬಂದಿರುವ ಪೋಸ್ಟರ್ ನಲ್ಲಿ ರಾಮ ಸೈಕಲ್ ಮೇಲೆ ಕುಳಿತಿದ್ದು, ಭಜರಂಗಿ ಭುಜದಲ್ಲಿ ಪೋಸ್ಟ್ ಮ್ಯಾನ್ ಬ್ಯಾಗ್ ಕಾಣಿಸುತ್ತದೆ. ಪೋಸ್ಟರ್ ನಾನಾ ಕುತೂಹಲ ಹುಟ್ಟುಹಾಕುವ ಕ್ರಿಯೇಟ್ ಮಾಡುವುದರ ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ: ಪತ್ನಿಯನ್ನು ಎತ್ತಿ ಮುದ್ದಾಡಿದ ಯಶ್

    ʻಪುಷ್ಪಕ ವಿಮಾನ’, ʻಇನ್ಸ್ಪೆಕ್ಟರ್ ವಿಕ್ರಮ್ʼ, ʻಮಾನ್ಸೂನ್ ರಾಗʼದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಿನಿಮಾ ಹಸಿವಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ಪೂಜೆ

    ಐರಾ ಫಿಲ್ಮ್ಸ್ ಮತ್ತು ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಸತ್ಯ ರಾಯಲ Your’s sincerely ರಾಮ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದ್ದು, ಈ ವರ್ಷಾಂತ್ಯಕ್ಕೆ Your’s sincerely ತೆರೆಗೆ ಬರಲಿದೆ. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಮದಗಜ ಮಹೇಶ್

  • ಮನೆ ಹತ್ತಿರ ಬರಬೇಡಿ ಎಂದಿದ್ಯಾಕೆ ಗಣೇಶ ?

    ಮನೆ ಹತ್ತಿರ ಬರಬೇಡಿ ಎಂದಿದ್ಯಾಕೆ ಗಣೇಶ ?

    ಸಾಮಾನ್ಯವಾಗಿ ಸಿನಿಮಾ ತಾರೆಯರ ಹುಟ್ಟುಹಬ್ಬಕ್ಕೆ (Birthday) ಅವರವರ ಅಭಿಮಾನಿಗಳು ಮನೆ ಹತ್ತಿರ ಬಂದು ತಮ್ಮ ನೆಚ್ಚಿನ ನಟರಿಗೆ ಶುಭಾಶಯ ಕೋರುವುದು, ಕೇಕ್ ತಂದು ಕಟ್ ಮಾಡಿಸುವುದು ವಾಡಿಕೆ. ಆದರೆ ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸ್ಟಾರ್‌ಗಳು ಅಭಿಮಾನಿಗಳ ಕೈಗೆ ಸುಲಭವಾಗಿ ಸಿಗುತ್ತಿಲ್ಲ. ಹೀಗಾಗಿ ಅಭಿಮಾನಿಗಳು ವರ್ಷಪೂರ್ತಿ ಕಾದಿದ್ದು ಕೊನೆ ಪಕ್ಷ ಹುಟ್ಟುಹಬ್ಬದ ದಿನವಾದ್ರೂ ಸಿಗಬೇಕು ಎಂದುಕೊಂಡಿದ್ದ ಫ್ಯಾನ್ಸ್‌ಗೆ ಇತ್ತೀಚೆಗೆ ಸ್ಟಾರ್‌ಗಳು ಸಬೂಬು ನೀಡುವಂತೆ ಕಾರಣ ಹೇಳಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.

    ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹುಟ್ಟುಹಬ್ಬ, ಹೀಗಾಗಿ ಎರಡು ದಿನ ಮುನ್ನವೇ ಗಣೇಶ್ ಇನ್ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬದ ಕುರಿತಾಗಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಇರೋದಿಲ್ಲ. ಯಾರೂ ಮನೆ ಹತ್ತಿರ ಬರಬೇಡಿ ಎಂದಿದ್ದಾರೆ. ಬದಲಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ, ಅದೇ ನನಗೆ ಕೊಡುವ ಉಡುಗೊರೆ ಎಂದಿದ್ದಾರೆ. ಹೀಗಾಗಿ ಈ ಬಾರಿ ಗಣೇಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

    ಪಿನಾಕ ಹಾಗೂ ಯುವರ್ ಸಿನ್ಸಿಯರ್ಲಿ ರಾಮ್ ಸಿನಿಮಾದ ಚಿತ್ರೀಕರಣಕ್ಕಾಗಿ ಬೇರೆ ಊರಿನಲ್ಲಿರುವ ಕಾರಣಕ್ಕೆ ಗಣೇಶ್ ಅಭಿಮಾನಿಗಳಿಗೆ ಮನೆ ಹತ್ರ ಬರಬೇಡಿ ಎಂದಿದ್ದಾರೆ. `ಕೃಷ್ಣಂ ಪ್ರಣಯ ಸಖಿ’ ಚಿತ್ರದ ಯಶಸ್ಸಿನ ಬಳಿಕ ಗಣೇಶ್ ಚಿತ್ರಗಳಿಗೆ ಮತ್ತೆ ಪುಷ್ಠಿ ಸಿಕ್ಕಿದ್ದು ಬಲು ಬೇಡಿಕೆ ಹೊಂದಿದ್ದಾರೆ. ಹೀಗಾಗಿ ಈ ವರ್ಷದಲ್ಲಿ ಪಿನಾಕ ಹಾಗೂ ಯುವರ್ ಸಿನ್ಸಿಯರ್ಲಿ ರಾಮ್ ಚಿತ್ರವನ್ನ ತೆರೆಗೆ ತರಲು ಪ್ರಯತ್ನಸುತ್ತಿರುವ ಗಣೇಶ್ ನಿರಂತರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರಂತೆ.

  • ಪಿಂಕ್‌ ಪ್ಯಾರೊಟ್ ಜೊತೆ ದರ್ಶನ್ ಮುದ್ದು ರಾಕ್ಷಸಿಯ ಮುದ್ದು ಮಾತು!

    ಪಿಂಕ್‌ ಪ್ಯಾರೊಟ್ ಜೊತೆ ದರ್ಶನ್ ಮುದ್ದು ರಾಕ್ಷಸಿಯ ಮುದ್ದು ಮಾತು!

    ಇತ್ತೀಚೆಗೆ ದರ್ಶನ್ (Darshan) ತಮ್ಮ ಸಮಯವನ್ನ ಸಿನಿಮಾ ಹಾಗೂ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಮೊದಲೆಲ್ಲಾ ವೀಕೆಂಡ್ ಬಂದ್ರೆ ಫ್ರೆಂಡ್ಸ್ ಜೊತೆ ಸಮಯ ಕಳೆಯುತ್ತಿದ್ದ ದಾಸ ಈಗ ಕುಟುಂಬದ ಜೊತೆ ವೀಕೆಂಡ್ ಕಳೆಯುತ್ತಾರೆ. ಅದಕ್ಕೆ ಸಾಕ್ಷಿ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಆಗಾಗ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡುವ ಫೋಟೋಗಳು. ಇದೀಗ ದರ್ಶನ್ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಹೊಸ ಸ್ಟೋರಿ ಬಹು ವಿಶೇಷವಾಗಿದೆ.

    ಈ ಭಾನುವಾರ ಬೆಳ್ಳಂಬೆಳಗ್ಗೆ ವಿಜಯಲಕ್ಷ್ಮಿ ನಯಾ ಸ್ಟೋರಿ ಹಾಕಿದ್ದಾರೆ. ಇದು ಮೈಸೂರು ಬಳಿಯ ದರ್ಶನ್ ಫಾರ್ಮ್ಹೌಸ್ ಅನ್ನೋದಾಗಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಗಿಳಿ (Pink Parrot) ಜೊತೆ ವಿಜಯಲಯಕ್ಷ್ಮಿಯವರು ಸಮಯ ಕಳೆದ ವೀಡಿಯೋ ಪೋಸ್ಟ್ ಮಾಡಿದ್ದಾರೆ. ದರ್ಶನ್ ಫಾರ್ಮ್ಹೌಸ್‌ನಲ್ಲಿ ಸೊಗಸಾದ ಪಿಂಕ್ ಗಿಳಿಗಳಿದ್ದು ಅದರ ಜೊತೆ ಮುದ್ದಾದ ಆಟದ ದೃಶ್ಯವನ್ನ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಾರೆ ವಿಜಯಲಕ್ಷ್ಮಿ. ಇದನ್ನೂ ಓದಿ: ಬಿಗ್‌ ಬಾಸ್ ಸೀಸನ್-12ಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡ್ರಾ?

    ಪತ್ನಿಯನ್ನ ದರ್ಶನ್ ಮುದ್ದುರಾಕ್ಷಿಸಿ ಎಂದು ಕರೆಯುತ್ತಾರೆ ಎಂದು ಆಗಾಗ ಹೇಳಿಕೊಂಡಿದ್ದಾರೆ. ಹೀಗಾಗಿ ಪಿಂಕ್‌ ಪ್ಯಾರೊಟ್ ಜೊತೆ ದರ್ಶನ್ ಮುದ್ದು ರಾಕ್ಷಸಿಯ ಮುದ್ದು ಮಾತುಕತೆ ದೃಶ್ಯಕ್ಕೆ ದರ್ಶನ್ ಫ್ಯಾನ್ಸ್ ಕಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತಿವಾಗಿದೆ. ಇದನ್ನೂ ಓದಿ: ರಶ್ಮಿಕಾರನ್ನೇ ಫಾಲೋ ಮಾಡ್ತಿದ್ದಾರಾ ‘ಕಿಸ್ಸಿಕ್’ ಬೆಡಗಿ – 7 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಶ್ರೀಲೀಲಾ!

  • ಅರೇರೇ ಯಾರೋ ಇವಳು ಅಂತಿದ್ದಾರೆ ವಿನಯ್ ರಾಜ್ ಕುಮಾರ್!

    ಅರೇರೇ ಯಾರೋ ಇವಳು ಅಂತಿದ್ದಾರೆ ವಿನಯ್ ರಾಜ್ ಕುಮಾರ್!

    ಈಗಾಗಲೇ ಸಿನಿಪ್ರಿಯರ ಮನಸ್ಸನ್ನ ಗೆದ್ದಿರುವಂತಹ `ಅಂದೊಂದಿತ್ತು ಕಾಲ’ (Andondittu Kaala) ಚಿತ್ರದ `ಮುಂಗಾರು ಮಳೆಯಲ್ಲಿ…’ ಎಂಬ ಹಾಡು ಸೂಪರ್ ಹಿಟ್ ಆಗಿದ್ದು, ಯೂಟ್ಯೂಬ್‌ನಲ್ಲಿ 36.4 ಮಿಲಿಯನ್ ವೀವ್ಸ್ ಆಗಿದೆ. ಹಾಗೆಯೇ ಈ ಸಾಂಗ್‌ನ ರೀಲ್ಸ್ ಬಹಳಷ್ಟು ಅಭಿಮಾನಿಗಳು ಮಾಡಿ ಅಪ್ಲೋಡ್ ಕೂಡ ಮಾಡಿದ್ದಾರೆ. ಇದು ಇಡೀ ಚಿತ್ರತಂಡದ ಸಂಭ್ರಮವನ್ನು ಹೆಚ್ಚು ಮಾಡಿದ್ದು, ಚಿತ್ರ ಯಶಸ್ವಿ ಆಗುವ ನಿರೀಕ್ಷೆಯಲ್ಲಿದ್ದಾರೆ. ಈಗ ತಮ್ಮ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡುವುದರ ಜೊತೆಗೆ ಪತ್ರಿಕಾಗೋಷ್ಠಿ ಆಯೋಜನೆ ಮಾಡಿತ್ತು ಚಿತ್ರತಂಡ.

    ವೇದಿಕೆಯ ಮೇಲೆ ಈ ಚಿತ್ರದ ಮೊದಲ ಹಾಡಿನ ಫೀಮೇಲ್ ವರ್ಷನ್ ರುಚಿತ ರಾಜೇಶ್ ಎಂಬ ಯುವ ಗಾಯಕಿ ಹಾಡಿ ಗಮನ ಸೆಳೆದರು. ತದನಂತರ ಎರಡನೇ ಗೀತೆಯನ್ನು ಇಡೀ ರಾಜ್ಯಕ್ಕೆ 10ನೇ ತರಗತಿಯಲ್ಲಿ ಫಸ್ಟ್ ಬಂದ ಮಲ್ಲಸಂದ್ರದಲ್ಲಿರುವ ಬಿ.ಎನ್ ಆರ್ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಂದ (School Students) ರಿಲೀಸ್ ಮಾಡಿಸಿದ್ದು ಮತ್ತೊಂದು ವಿಶೇಷವಾಗಿದ್ದು, ಇದಕ್ಕೆ ಕಾರಣ ಏನು ಎಂಬುವುದು ಹಾಡಿನಲ್ಲಿ ತಿಳಿಯುತ್ತದೆ.

    ನಟ ವಿನಯ್ ರಾಜಕುಮಾರ್ (Vinay Rajkumar) ಮಾತನಾಡುತ್ತಾ ಈ ಚಿತ್ರದ ಮೊದಲ ಸಾಂಗ್ ದೊಡ್ಡ ಹಿಟ್ ಆಗಿದೆ. ನಾನು ಕೂಡ ಸಾಂಗ್ ಅನ್ನು ಫ್ಯಾನ್ಸುಗಳು ರೀಲ್ಸ್ ಮಾಡಿದ್ದು ನೋಡಿದೆ. ಮಿಲಿಯನ್ಸ್ ವಿವ್ಯೂ ರಿಚ್ ಆಗಿರೋದು ನಮ್ಮ ತಂಡಕ್ಕೂ ನನಗೂ ಖುಷಿ ಇದೆ. ಈಗ ನಮ್ಮ ಚಿತ್ರದ 2ನೇ ಹಾಡು ಬಿಡುಗಡೆಯಾಗುತ್ತಿದೆ, ಇದು ನನ್ನ ಪೆವರೇಟ್ ಗೀತೆ. ನಾನು ನಿರ್ದೇಶಕ ಕೀರ್ತಿಗೆ ಇದನ್ನೇ ಮೊದಲು ಬಿಡಿ ಎಂದಿದ್ದೆ. ಈ ಚಿತ್ರದಲ್ಲಿ ನಾನು 16 ವರ್ಷದ ಹುಡುಗನ ಗೆಟಪ್‌ನಲ್ಲಿ ಮಾಡುವುದು ಚಾಲೆಂಜ್ ಆಗಿತ್ತು. ವೈಟ್ ಲಾಸ್ ಮಾಡುವುದು ಕಷ್ಟ ಆಗಿತ್ತು. ಹಾಡು ತುಂಬಾ ಚೆನ್ನಾಗಿ ಬಂದಿದೆ. ಲೊಕೇಶನ್, ಸಾಂಗ್ ಎಲ್ಲವೂ ಸೊಗಸಾಗಿದೆ. ಶಾಲಾ ದಿನಗಳಲ್ಲಿ ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ್ದೇನೆ. ಆದರೆ ನಿಜ ಜೀವನದಲ್ಲಿ ಹತ್ತನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಮೂರು ಶೇಡ್ ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ನಿಮ್ಮ ಬೆಂಬಲ ಇರಲಿ ಎಂದರು. ಇನ್ನು ಈ ಚಿತ್ರದ ಶಾಲಾ ವಿದ್ಯಾರ್ಥಿಯ ಹಾಡಿನಲ್ಲಿ ಕಾಣಿಸಿಕೊಂಡಿರುವ ಯುವ ನಟಿ ನಿಶಾ ರವಿಕೃಷ್ಣನ್ ಮಾತನಾಡುತ್ತಾ ಇದರಲ್ಲಿ ನನ್ನದೊಂದು ಸಣ್ಣ ಪಾತ್ರವಾದರೂ ಬಹಳ ಇಂಪಾರ್ಟೆಂಟ್ ಆಗಿದೆ. ನಿರ್ದೇಶಕರು, ನಿರ್ಮಾಪಕರು ತುಂಬಾ ಸಹಕಾರ ನೀಡಿದ್ದಾರೆ. ಅದೇ ರೀತಿ ನಟ ವಿನಯ್ ರಾಜಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ಸುಂದರ ಪ್ರಮುಖ ಪಾತ್ರವಾಗಿದ್ದು, ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದರು.

    ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾತನಾಡುತ್ತಾ ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈಗಾಗಲೇ ನಮ್ಮ ಚಿತ್ರದ ಮೊದಲ ಸಾಂಗ್ಸ್ ಮಿಲಿಯನ್ಸ್ ಗಟ್ಟಲೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಒಳ್ಳೆ ರೆಸ್ಪಾನ್ಸ್ ನಮಗೆ ಸಿಕ್ಕಿದೆ. ನಾವು ಆ ಸಾಂಗ್ ಶೂಟಿಂಗ್ ಮಾಡುವ ಬಹಳಷ್ಟು ಮಳೆ ಇತ್ತು, ಕೊರೋನಾ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದು, ಆಗ ಯುಗಾದಿಯ ಹಬ್ಬ, ನಿರ್ಮಾಪಕರು ನಮ್ಮ ಜೊತೆ ಇದ್ದು ಸಂಭ್ರಮಿಸಿದ್ದ ಕ್ಷಣ ಮರೆಯಲು ಸಾಧ್ಯವಿಲ್ಲ. ನಮಗೆ ಏನು ಬೇಕು ಅದೆಲ್ಲವನ್ನು ನಿರ್ಮಾಪಕ ಭುವನ್ ಸುರೇಶ್ ನೀಡಿದ್ದಾರೆ. ನಿರ್ಮಾಪಕರು ಚಿತ್ರ ಚೆನ್ನಾಗಿ ಬರಲು ಬಹಳಷ್ಟು ಸಪ್ಪೋರ್ಟ್ ಮಾಡುತ್ತಿದ್ದಾರೆ. ನಮ್ಮ ಚಿತ್ರದಲ್ಲಿ ವಿನಯ್ ರಾಜಕುಮಾರ್ ಬಹಳ ಸಪೋರ್ಟ್ ಮಾಡಿದ್ದು, ತುಂಬಾ ಸೈಲೆಂಟ್ ವ್ಯಕ್ತಿತ್ವ, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

    ಈಗ ಬಿಡುಗಡೆಯಾಗಿರುವ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ವಿನಯ್ ರಾಜಕುಮಾರ್ ಹಾಗೂ ನಿಶಾ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ನಿರ್ಮಾಪಕರ ಪತ್ನಿಯವರು ನಟಿ ನಿಶಾ ರನ್ನು ಆಯ್ಕೆ ಮಾಡಿದ್ದು ಮರೆಯುವಂತಿಲ್ಲ. ನಮ್ಮ ಚಿತ್ರದ ಇನ್ನೂ ಮೂರು ಹಾಡು, ಟ್ರೇಲರ್ ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಆಗಸ್ಟ್ 29ರಂದು ಸಿನಿಮಾ ರಿಲೀಸ್ ಆಗಲಿದೆ. ಇದೊಂದು ಪ್ಯೂರ್ ಲವ್ ಹಾಗೂ ಗೆಳೆತನ ಚಿತ್ರವಾಗಿದ್ದು, ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತೆ ಎಂದರು.

    ಭುವನ್ ಮ್ಯೂವಿಸ್ ಬ್ಯಾನರ್ ನ ಭುವನ್ ಸುರೇಶ್ ಮಾತನಾಡುತ್ತಾ ನನಗೆ ನಮ್ಮ ಹುಡುಗರ ಶ್ರಮದ ಬಗ್ಗೆ ಬಹಳ ನಂಬಿಕೆ ಇದೆ. ಚಿತ್ರ ಚೆನ್ನಾಗಿ ಬಂದಿದೆ. ಇದಕ್ಕೂ ಮೊದಲು ನಾನು ಕಾಲಾಪತ್ತರ ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ಈಗಾಗಲೇ ಮುಂಗಾರು ಮಳೆಯಲ್ಲಿ… ಹಾಡು ದೊಡ್ಡ ಹಿಟ್ ಆಗಿದ್ದು , ನನ್ನ ರಾಜಕೀಯ ಸ್ನೇಹಿತರು ಹಾಗೂ ನಮ್ಮೂರಿನ ಜನರು ಹಾಡಿನ ಬಗ್ಗೆ ಮೆಚ್ಚುಗೆಯನ್ನು ತಿಳಿಸಿದ್ದಾರೆ. ಈಗ ನಮ್ಮ ಚಿತ್ರದ ಎರಡನೇ ಹಾಡು ಕೂಡ ಹಿಟ್ ಆಗಲಿ. ನಾನು ನನ್ನ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುತ್ತೇನೆ. ನೀವು ಎಲ್ಲರೂ ಬಂದು ನೋಡಿ ಹರಸಿ ಎಂದರು. ಸಂಗೀತ ನಿರ್ದೇಶಕ ರಾಘವೇಂದ್ರ .ವಿ ಮಾತನಾಡುತ್ತಾ ನಮ್ಮ ಮೊದಲ ಸಾಂಗ್ ಮೇಘಾ ಹಿಟ್ ಆಗಿದ್ದು , ನಿಮ್ಮಗಳ ಪ್ರೋತ್ಸಾಹ ಇದಕ್ಕೆ ಕಾರಣ. ಈಗ ಎರಡನೇ ಹಾಡು ಎ2 ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದೆ. ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದ ಹೇಳುವೆ. ಇಡೀ ಸಾಂಗ್ ನಲ್ಲಿ ನಿಶಾ ಅವರ ಲುಕ್ ಹಾಗೂ ವಿನಯ್ ಇನೂಸೆಂಟ್ ಹೈಲಟ್ ಆಗಿದೆ. ಪ್ರತಿ ಶಾಟ್ ಕೂಡ ಅದ್ಭುತವಾಗಿ ಬಂದಿದೆ. ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿವೆ ಎಂದರು. ಇನ್ನೂ ಛಾಯಾಗ್ರಹಕ ಅಭಿಷೇಕ್ ಕಾಸರಗೋಡು , ಸಂಕಲನಗಾರ ಕೀರ್ತಿ, ನೃತ್ಯ ನಿರ್ದೇಶಕ ರಘು ಆರ್.ಜೆ ಚಿತ್ರದ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

    ಈಗ ‘ಅರೇರೇ ಯಾರೋ ಇವಳು …’ ಸಾಂಗ್ ರಿಲೀಸ್ ಆಗಿದ್ದು , 90ರ ಕಾಲಘಟ್ಟದಲ್ಲಿ ನಾಯಕ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ನಿಶಾ ಹರಿಕೃಷ್ಣನ್ 10ನೇ ತರಗತಿ ವಿದ್ಯಾರ್ಥಿಗಳಾಗಿ ಅಭಿನಯಿಸಿದ್ದಾರೆ. ಹಾಡು ಮಧುರವಾಗಿ ಮನಮುಟ್ಟುವಂತಿದೆ. ಈ “ಅಂದೊಂದಿತ್ತು ಕಾಲ” ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ಚಿತ್ರ ತಂಡ ನೀಡಿದೆಯಂತೆ.

  • ವಿದೇಶಕ್ಕೆ ಹಾರಲು ರೆಡಿಯಾದ ದರ್ಶನ್

    ವಿದೇಶಕ್ಕೆ ಹಾರಲು ರೆಡಿಯಾದ ದರ್ಶನ್

    ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ ಜೈಲಿನಿಂದ ರಿಲೀಸ್‌ ಆದ ಬಳಿಕವೂ ವಿದೇಶಕ್ಕೆ ತೆರಳದಂತೆ ಕೋರ್ಟ್ ನಟ ದರ್ಶನ್‌ಗೆ (Darshan) ಷರತ್ತು ವಿಧಿಸಿತ್ತು. ಪಾಸ್ ಪೋರ್ಟ್ ಕೂಡ ಮುಟ್ಟುಗೋಲು ಹಾಕಿಕೊಂಡಿತ್ತು. ಜಾಮೀನು ಸಿಕ್ಕು ಜೈಲಿನಿಂದ ಬಂದ ನಂತರ, ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳು ಅನುಮತಿ ಕೇಳಿದ್ದರು ನಟ ದರ್ಶನ್. ಅವರಿಗೆ ಈಗ ಅನುಮತಿ ಸಿಕ್ಕಿದೆ. ಹಾಗಾಗಿ ಸದ್ಯದಲ್ಲೇ ವಿದೇಶ ವಿಮಾನ ಏರಲು ಸಜ್ಜಾಗಿದ್ದಾರೆ ದರ್ಶನ್.

    ದರ್ಶನ್ ನಟನೆಯ ಡೆವಿಲ್ (The Devil) ಸಿನಿಮಾದ ಚಿತ್ರೀಕರಣ ಸದ್ಯ ಬೆಂಗಳೂರಿನಲ್ಲಿ (Bengaluru) ನಡೆಯುತ್ತಿದೆ. ಸಾಹಸ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಈ ವಾರದಲ್ಲಿ ಬಹುತೇಕ ಸಾಹಸ ಸನ್ನಿವೇಶಗಳ ಶೂಟಿಂಗ್ ಮುಗಿಯಲಿದೆಯಂತೆ. ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಇಡೀ ಟೀಮ್ ವಿದೇಶಕ್ಕೆ ಹಾರಲಿದೆ. ವಿದೇಶದಲ್ಲಿ ಹಾಡಿನ ಶೂಟಿಂಗ್ ಗೆ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕ ಪ್ರಕಾಶ್.

    ಜುಲೈ 1 ರಿಂದ ಜುಲೈ 28ರ ವರೆಗೂ ದರ್ಶನ್ ಅವರಿಗೆ ಕೋರ್ಟ್ ನಿಂದ ವಿದೇಶಕ್ಕೆ ಹೋಗಲು ಅನುಮತಿ ಸಿಕ್ಕಿದೆ. ಹಾಗಾಗಿ ಜುಲೈ ಮೊದಲ ವಾರದಲ್ಲೇ ಅವರು ವಿದೇಶಕ್ಕೆ ಹಾರಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಡಿನ ಚಿತ್ರೀಕರಣಕ್ಕೆ ಪ್ಲ್ಯಾನ್ ಆಗಿದ್ದು, ಟಿಕೆಟ್ ಕೂಡ ಬುಕ್ ಆಗಿದೆ ಅಂತಾರೆ ಸಿನಿಮಾ ಟೀಮ್‌ನ ಸದಸ್ಯರು.

  • ಮತ್ತೆ ಬಣ್ಣಕ್ಕೆ ಮರಳುವ ಸುಳಿವು ಕೊಟ್ಟರಾ ನಟಿ ಅಮೂಲ್ಯ ?

    ಮತ್ತೆ ಬಣ್ಣಕ್ಕೆ ಮರಳುವ ಸುಳಿವು ಕೊಟ್ಟರಾ ನಟಿ ಅಮೂಲ್ಯ ?

    ದುವೆಯ ಬಳಿಕ ನಟಿ ಅಮೂಲ್ಯ (Amulya) ಬಣ್ಣ ಹಚ್ಚಲಿಲ್ಲ. ಹಾಗಂತ ಬಣ್ಣಕ್ಕೆ ಅವರು ವಿದಾಯವನ್ನೂ ಹೇಳಿರಲಿಲ್ಲ. ಅನೇಕ ವರ್ಷಗಳಿಂದ ಅವರು ನಟನೆಗೆ ರೀ-ಎಂಟ್ರಿ ಕೊಡ್ತಾರೆ ಎಂಬ ವದಂತಿ ಇದೆ. ಮಕ್ಕಳಿಬ್ಬರೂ ಬೆಳೆದು ದೊಡ್ಡವರಾಗುತ್ತಿದ್ದಾರೆ. ಅಮೂಲ್ಯ ಲುಕ್ ವಿಚಾರದಲ್ಲೂ ಮತ್ತದೇ ಹಳೆಯ ಚಾರ್ಮ್‌ಗೆ ಮರಳಿದ್ದಾರೆ. ಇದೀಗ ಅವರು ಪೋಸ್ಟ್ ಮಾಡಿರುವ ಹೊಸದೊಂದು ಫೋಟೋಶೂಟ್ ಮತ್ತೆ ಮರಳುವ ತಯಾರಿಯ ಸುಳಿವನ್ನ ನೀಡುತ್ತಿದೆ.

    ಸಾಮಾನ್ಯವಾಗಿ ಸಾಂಪ್ರದಾಯಿಕವಾಗೇ ಕಾಣಿಸಿಕೊಳ್ಳುವ ಅಮೂಲ್ಯ ಇದೀಗ ಜಬರ್ದಸ್ತ್ ಮಾಡರ್ನ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕಪ್ಪು ಬಿಳಿ ಮಾಡರ್ನ್ ಬಟ್ಟೆ ಧರಿಸಿ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವಂತೆ ಪೋಸ್ ಕೊಟ್ಟಿದ್ದಾರೆ. ಇದಕ್ಕವರು ವಿಶೇಷ ಕ್ಯಾಪ್ಷನ್ ಕೊಟ್ಟಿದ್ದು “ಜೀವನವು ಅಸ್ಪಷ್ಟವಾದಾಗ ನಿಮ್ಮ ಗಮನವನ್ನು ಹೊಂದಿಸಿ” ಎಂದಿದ್ದಾರೆ. ಇದರರ್ಥ ಸಿನಿಮಾಕ್ಕೆ ಮರಳುವತ್ತ ಗಮನ ಕೊಡ್ತಿದ್ದಾರೆ ಎನ್ನಬಹುದೇ?

    ಸಿನಿಮಾರಂಗದಲ್ಲಿ ಪೀಕ್‌ನಲ್ಲಿದ್ದಾಗಲೇ ಅಮೂಲ್ಯ ಮದುವೆಯಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡರು. ಮುಗುಳುನಗೆ ಚಿತ್ರವೇ ಕೊನೆ. ಮತ್ತೆ ಅವರು ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸ್ಕೊಂಡಿರಲಿಲ್ಲ. ಮದುವೆ ಮಕ್ಕಳು ಎಂದು ಬ್ಯುಸಿಯಾಗಿದ್ದ ಅಮೂಲ್ಯ ಮತ್ತೆ ಬಣ್ಣಕ್ಕೆ ಮರಳಲಿದ್ದಾರೆ ಎಂಬ ವದಂತಿಗೆ ಪುಷ್ಠಿ ನೀಡುವಂತೆ ಇದೀಗ ಅಮೂಲ್ಯ ಫೋಟೋಶೂಟ್ ನಯಾ ಚಾಪ್ಟರ್ ಶುರುಮಾಡುತ್ತಿದೆ.

  • `ಮಹಾವತಾರ ಸಿನಿಮಾಟಿಕ್ ಯೂನಿವರ್ಸ್’ ಅನಾವರಣ – ಹೊಂಬಾಳೆ ಫಿಲ್ಮ್ಸ್ ದಿಟ್ಟ ಹೆಜ್ಜೆ

    `ಮಹಾವತಾರ ಸಿನಿಮಾಟಿಕ್ ಯೂನಿವರ್ಸ್’ ಅನಾವರಣ – ಹೊಂಬಾಳೆ ಫಿಲ್ಮ್ಸ್ ದಿಟ್ಟ ಹೆಜ್ಜೆ

    ಹೊಂಬಾಳೆ ಫಿಲ್ಮ್ಸ್ (Hombale Films) ಪ್ರಸ್ತುತಪಡಿಸುತ್ತಿರುವ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ಅನಿಮೇಟೆಡ್ ಫ್ರಾಂಚೈಸಿ `ಮಹಾವತಾರ ಸಿನಿಮಾಟಿಕ್ ಯೂನಿವರ್ಸ್ʼನ (Mahavatar Universe) ಪಟ್ಟಿಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ವಿಸ್ತರಿಸಲಿರುವ ಈ ಸರಣಿಯು ಭಗವಾನ್ ವಿಷ್ಣುವಿನ ಹತ್ತು ದೈವಿಕ ಅವತಾರಗಳನ್ನು ಒಳಗೊಂಡಿದ್ದು, 2025 ರಲ್ಲಿ ಮಹಾವತಾರ ನರಸಿಂಹದಿಂದ ಪ್ರಾರಂಭವಾಗಿ 2037 ರಲ್ಲಿ ಮಹಾವತಾರ ಕಲ್ಕಿ ಭಾಗ 2 ರೊಂದಿಗೆ ಕೊನೆಗೊಳ್ಳಲಿದೆ.

    ಅಧಿಕೃತ ಬಿಡುಗಡೆ ವೇಳಾಪಟ್ಟಿ ಹೀಗಿದೆ:
    * ಮಹಾವತಾರ ನರಸಿಂಹ (2025)
    * ಮಹಾವತಾರ ಪರಶುರಾಮ (2027)
    * ಮಹಾವತಾರ ರಘುನಂದನ್ (2029)
    * ಮಹಾವತಾರ ಧ್ವಾರಕಾಧೇಶ್ (2031)
    * ಮಹಾವತಾರ ಗೋಕುಲಾನಂದ (2033)
    * ಮಹಾವತಾರ ಕಲ್ಕಿ ಭಾಗ 1 (2035)
    * ಮಹಾವತಾರ ಕಲ್ಕಿ ಭಾಗ 2 (2037)

    ನಿರ್ದೇಶಕ ಅಶ್ವಿನ್ ಕುಮಾರ್ ಅವರು, ʻನಾವು ಕ್ಲೀಮ್ ಪ್ರೊಡಕ್ಷನ್ಸ್‌ನಲ್ಲಿ, ಹೊಂಬಾಳೆ ಫಿಲ್ಮ್‌ನೊಂದಿಗೆ ಸೇರಿ, ಭಾರತದ ಪರಂಪರೆಯನ್ನು ಹಿಂದೆಂದೂ ನೋಡಿರದ ಸಿನಿಮಾಟಿಕ್ ಪ್ರಮಾಣದಲ್ಲಿ ದೊಡ್ಡ ಪರದೆಗೆ ತರಲು ಉತ್ಸುಕರಾಗಿದ್ದೇವೆ. ದಶಾವತಾರದ ಮಹಾವತಾರ ಯೂನಿವರ್ಸ್ ಮೂಲಕ ಅಲೌಕಿಕ ಅನುಭವ ಪ್ರಾರಂಭವಾಗುತ್ತದೆ. ಈಗ ಭಾರತ ಘರ್ಜಿಸಲಿದೆʼ ಎಂದು ಹೇಳಿದ್ದಾರೆ.

    ನಿರ್ಮಾಪಕಿ ಶಿಲ್ಪಾ ಧವನ್ (Shilpa Dhavan) ಉತ್ಸಾಹ ವ್ಯಕ್ತಪಡಿಸಿ, ʻಸಾಧ್ಯತೆಗಳು ಅಪರಿಮಿತವಾಗಿವೆ ಮತ್ತು ನಮ್ಮ ಕಥೆಗಳು ಪರದೆಯ ಮೇಲೆ ಘರ್ಜಿಸುವುದನ್ನು ನೋಡಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ಒಂದು ಮಹಾಕಾವ್ಯದ ಸಿನಿಮಾ ಸವಾರಿಗೆ ಸಿದ್ಧರಾಗಿʼ ಎಂದಿದ್ದಾರೆ.

    ಹೊಂಬಾಳೆ ಫಿಲಮ್ಸ್‌ ಹೇಳೋದೇನು?
    ಹೊಂಬಾಳೆ ಫಿಲಮ್ಸ್‌ನಲ್ಲಿ, ನಾವು ಸಮಯ ಮತ್ತು ಗಡಿಗಳನ್ನು ಮೀರಿದ ಕಥೆ ಹೇಳುವಿಕೆಯನ್ನು ನಂಬುತ್ತೇವೆ. ಮಹಾವತಾರ ಮೂಲಕ, ವಿಷ್ಣುವಿನ ಪವಿತ್ರ ಅವತಾರಗಳನ್ನು ಉಸಿರುಬಿಗಿದುಕೊಳ್ಳುವ ಅನಿಮೇಷನ್ ಮೂಲಕ ಜೀವಂತಗೊಳಿಸುವ ಒಂದು ಸಿನಿಮಾಟಿಕ್ ಯೂನಿವರ್ಸ್ ಅನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ. ಇದು ಕೇವಲ ಚಲನಚಿತ್ರ ಸರಣಿಯಲ್ಲ – ಇದು ಭಾರತದ ಆಧ್ಯಾತ್ಮಿಕ ಪರಂಪರೆಗೆ ನಮ್ಮ ಗೌರವ. ಮಹಾವತಾರ ಸಿನಿಮಾಟಿಕ್ ಯೂನಿವರ್ಸ್ ಕೇವಲ ಚಲನಚಿತ್ರಕ್ಕೆ ಸೀಮಿತವಾಗಿಲ್ಲ. ಇದನ್ನು ಬಹು ವೇದಿಕೆಗಳಲ್ಲಿ ಸಾಂಸ್ಕೃತಿಕ ವಿದ್ಯಮಾನವಾಗಿ ಕಲ್ಪಿಸಲಾಗಿದೆ. ಕಾಮಿಕ್ಸ್, ತಲ್ಲೀನಗೊಳಿಸುವ ವಿಡಿಯೋ ಗೇಮ್‌ಗಳು, ಡಿಜಿಟಲ್ ಕಥೆ ಹೇಳುವಿಕೆ ಮತ್ತು ಸಂಗ್ರಹಯೋಗ್ಯ ಅನುಭವಗಳಿಗೆ ವಿಸ್ತರಿಸುವ ಮೂಲಕ, ಈ ಯೂನಿವರ್ಸ್ ಅಭಿಮಾನಿಗಳಿಗೆ ಮಹಾಕಾವ್ಯದ ಕಥೆಯೊಂದಿಗೆ ತೊಡಗಿಸಿಕೊಳ್ಳಲು ಹಲವು ಮಾರ್ಗಗಳನ್ನು ನೀಡುತ್ತದೆ. ಗ್ರಾಫಿಕ್ಸ್‌ ಕಾದಂಬರಿ ರೂಪಾಂತರಗಳಿಂದ ಹಿಡಿದು ಸಂವಾದಾತ್ಮಕ ಸಾಹಸಗಳವರೆಗೆ, ಮಹಾವತಾರವು ಪ್ರಾಚೀನ ಕಥೆಗಳನ್ನು ವಿವಿಧ ಮಾಧ್ಯಮಗಳಲ್ಲಿ ಜೀವಂತಗೊಳಿಸುತ್ತದೆ. ಇದು ಇಂದಿನ ಪ್ರೇಕ್ಷಕರಿಗೆ ಎಲ್ಲಾ ವಯೋಮಾನದವರಿಗೆ ಮತ್ತು ವೇದಿಕೆಗಳಲ್ಲಿ ಅನುರಣಿಸುವ ಶ್ರೀಮಂತ ಜಗತ್ತನ್ನು ನಿರ್ಮಿಸುತ್ತದೆ.

    ಮಹಾವತಾರ ನರಸಿಂಹ ಚಿತ್ರವನ್ನು ಅಶ್ವಿನ್ ಕುಮಾರ್ ನಿರ್ದೇಶಿಸಿದ್ದು, ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ಅವರು ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಮತ್ತು ತಮ್ಮ ಆಕರ್ಷಕ ವಿಷಯಕ್ಕೆ ಹೆಸರುವಾಸಿಯಾದ ಹೊಂಬಾಳೆ ಫಿಲಮ್ಸ್‌ ಇದನ್ನು ಪ್ರಸ್ತುತಪಡಿಸುತ್ತಿದೆ. ಈ ಡೈನಾಮಿಕ್ ಪಾಲುದಾರಿಕೆಯು ವಿವಿಧ ಮನರಂಜನಾ ವೇದಿಕೆಗಳಲ್ಲಿ ಸಿನಿಮಾಟಿಕ್ ಅದ್ಭುತ ನೀಡುವ ಗುರಿಯನ್ನು ಹೊಂದಿದೆ. ಅದರ ಅಪ್ರತಿಮ ದೃಶ್ಯ ವೈಭವ, ಸಾಂಸ್ಕೃತಿಕ ಶ್ರೀಮಂತಿಕೆ, ಸಿನಿಮಾಟಿಕ್ ಶ್ರೇಷ್ಠತೆ ಮತ್ತು ಕಥೆ ಹೇಳುವಿಕೆಯ ಆಳದೊಂದಿಗೆ, ಈ ಚಿತ್ರವು 3D ಯಲ್ಲಿ ಮತ್ತು ಐದು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಜುಲೈ 25, 2025 ರಂದು ಚಿತ್ರ ಬಿಡುಗಡೆಯಾಗಲಿದೆ.

  • ಅಜಯ್ ರಾವ್ ಈಗ ರಗಡ್ ಹೀರೋ – ಹೊಸ ಚಿತ್ರಕ್ಕೆ ಚಾಲನೆ

    ಅಜಯ್ ರಾವ್ ಈಗ ರಗಡ್ ಹೀರೋ – ಹೊಸ ಚಿತ್ರಕ್ಕೆ ಚಾಲನೆ

    `ನನ್ ಮಗಳೇ’ ಹೀರೋಯಿನ್ ಸೇರಿದಂತೆ ಹಲವು ಸದಭಿರುಚಿಯ ಚಿತ್ರಗಳ ನಿರ್ದೇಶಕ ಎಸ್.ಕೆ. ಬಾಹುಬಲಿ (S.K Bahubali) ಇದೀಗ ಕೃಷ್ಣ ಅಜಯ್ ರಾವ್ (Ajay Rao) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಿ.ಕೆ. ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕ ಕಿರಣ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಯೋಗರಾಜ್ ಭಟ್ಟರು ಕ್ಲಾಪ್ ಮಾಡಿದರೆ, ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕ ಎಂ.ಡಿ. ಶ್ರೀಧರ್, ಎಸ್. ನಾರಾಯಣ್, ಶಿವತೇಜಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲವರ್ ಬಾಯ್, ಆಕ್ಷನ್ ಹೀರೋ, ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ ಅಜಯ್ ರಾವ್ ಈ ಚಿತ್ರದ ಮೂಲಕ ರಗಡ್ ಹೀರೋ ಆಗುತ್ತಿದ್ದಾರೆ.

    ಮುಹೂರ್ತದ ನಂತರ ನಿರ್ದೇಶಕ ಬಾಹುಬಲಿ ಮಾತನಾಡುತ್ತ ಇದೊಂದು ಫ್ಯಾಮಿಲಿ ಥ್ರಿಲ್ಲರ್ ಚಿತ್ರ, ನ್ಯಾಷನಲ್ ಲೆವೆಲ್‌ನಲ್ಲಿ ನಡೆಯುವ ಕಥೆ. ಒಂದು ಘಟನೆಯನ್ನು ಇನ್‌ಸ್ಪಿರೇಶನ್ ಆಗಿ ತೆಗೆದುಕೊಂಡು ಸ್ಕ್ರಿಪ್ಟ್ ಮಾಡಿದ್ದೇವೆ. ನಾನು ಈ ಕಥೆ ಮಾಡಿಕೊಂಡಾಗಲೇ ಈ ಕ್ಯಾರೆಕ್ಟರನ್ನು ಅಜಯ್ ರಾವ್ ಕೈಲೇ ಮಾಡಿಸಬೇಕೆಂದುಕೊಂಡೆ. ಅವರು ಫ್ಯಾಮಿಲಿ ಹೀರೋ, ಕಥೆ ಕೇಳಿದ ತಕ್ಷಣ ಅವರೂ ಸಹ ಒಪ್ಪಿದರು. ಅವರ ಪಾತ್ರಕ್ಕೆ 4-5 ಶೇಡ್ಸ್ ಇದೆ. ಅದರಲ್ಲಿ ಈ ಬೋಳು ತಲೆಯ ಗೆಟಪ್ ಕೂಡ ಒಂದು. ಇದಕ್ಕೆ ಬಾಂಬೆಯಿಂದ ವಿಗ್ ಮೇಕರ್ ಕರೆಸಿದ್ದೆವು. ಅವರು ನಾಲ್ಕೈದು ಗಂಟೆ ತೆಗೆದುಕೊಂಡು ಅಜಯ್‌ ರಾವ್ ಅವರಿಗೆ ಈ ವಿಗ್ ಕೂರಿಸಿದರು. ಚಿತ್ರದಲ್ಲಿದು 2-3 ಸೀನ್ ಮಾತ್ರ ಬರುತ್ತದೆ. ಬೆಂಗಳೂರು, ಮೈಸೂರು, ಪಾಂಡಿಚೇರಿ ಸುತ್ತಮುತ್ತ 60 ರಿಂದ 70 ದಿನ ಶೂಟಿಂಗ್ ನಡೆಸುವ ಪ್ಲಾನ್‌ ಇದೆ. ಉಪಾಧ್ಯಕ್ಷ ಖ್ಯಾತಿಯ ಮಲೈಕಾ ಟಿ.ವಸುಪಾಲ್ ಅವರು ಚಿತ್ರದ ನಾಯಕಿ ಪಾತ್ರ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಯಶ್‌ಗೆ ಹಾಲಿವುಡ್‌ನ ಆಸ್ಕರ್ ವಿಜೇತ ಪ್ರೊಡ್ಯೂಸರ್ ಬಲ!

    ನಾಯಕ ಅಜಯ್‌ ರಾವ್ ಮಾತನಾಡಿ ಯುದ್ದಕಾಂಡ ಟೈಮಲ್ಲಿ ಬಾಹುಬಲಿ ಬಂದು ಈ ಕಥೆ ಹೇಳಿದರು. ಕೇಳಿದಕೂಡಲೇ ಇಷ್ಟವಾಯ್ತು. ಯೋಗಾನಂದ್ ಅದ್ಭುತವಾದ ಡೈಲಾಗ್ ಬರೆದಿದ್ದಾರೆ. ಫಿಟ್‌ನೆಸ್ ಬಗ್ಗೆ ಏನೋ ಒಂದು ಸಾಧನೆ ಮಾಡಬೇಕೆಂದು ಹೊರಟಾಗ ಆತ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಬಾಹುಬಲಿ ಅವರು ಹೇಳಹೊರಟಿದ್ದಾರೆ. ನನ್ನ ಪಾತ್ರಕ್ಕೆ ಫಿಸಿಕಲ್ ಟ್ರಾನ್ಸ್‌ಫಾರ್ಮೇಶನ್ ತುಂಬಾ ಇರುತ್ತದೆ, ನಿರ್ಮಾಪಕರಿಗೆ ಸಿನಿಮಾ ಬಗ್ಗೆ ತುಂಬಾ ಕಾನ್ಫಿಡೆನ್ಸ್ ಇದೆ ಎಂದು ಹೇಳಿದರು.

    ಚಿತ್ರದ ನಿರ್ಮಾಪಕ ಕಿರಣ್ ಮಾತನಾಡುತ್ತ ಬಾಹುಬಲಿ ನನಗೆ ಬಹಳ ದಿನಗಳಿಂದ ಪರಿಚಯ. ತುಂಬಾ ಕಥೆ ಹೇಳಿದ್ದರು. ಅದರಲ್ಲಿ ಈ ಕಥೆ ಇಷ್ಟವಾಯಿತು ಎಂದು ಹೇಳಿದರು. ಛಾಯಾಗ್ರಾಹಕ ಸುಜ್ಞಾನ್ ಮಾತನಾಡುತ್ತ ನಿರ್ದೇಶಕರು ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಅಜಯ ರಾವ್ ಅವರಿಗೆ ಬೇರೆ ಬೇರೆ ಗೆಟಪ್ ಇರೋದ್ರಿಂದ ನಾವು ತುಂಬಾ ಕೆಲಸ ಮಾಡಬೇಕಿದೆ. ತುಂಬಾ ಚಾಲೆಂಜ್ ಇರುತ್ತೆ ಎಂದರು. ಉಳಿದಂತೆ ನಟ ಉಗ್ರಂ ಮಂಜು, ಸಂಭಾಷಣೆಗಾರ ಯೋಗಾನಂದ್ ಮದ್ದಾನ್ ಚಿತ್ರದ ಕುರಿತಂತೆ ಮಾತನಾಡಿದರು.

    ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅಲ್ಲದೆ ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದ್ದು ಯೋಗರಾಜ್ ಭಟ್, ಕವಿರಾಜ್, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಕೆ.ಎಂ.ಪ್ರಕಾಶ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ, ರವಿವರ್ಮ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಇದನ್ನೂ ಓದಿ: 22 ಲಕ್ಷ ವಂಚನೆ ಆರೋಪ – ನಂದಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ಕೊಡಲು ಮುಂದಾದ ಶಬರೀಶ್