Tag: kannada cinema

  • ಹಾಡೊಂದಕ್ಕೆ 75,000 ರೂ. ಮೌಲ್ಯದ ಸೀರೆ ಉಟ್ಟಿದ್ದ ರಮ್ಯಾ !

    ಹಾಡೊಂದಕ್ಕೆ 75,000 ರೂ. ಮೌಲ್ಯದ ಸೀರೆ ಉಟ್ಟಿದ್ದ ರಮ್ಯಾ !

    ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ನಲ್ಲಿ ಸೃಷ್ಟಿಮಾಡಿದ್ದ ಕ್ರೇಜ್ ಅಷ್ಟಿಷ್ಟಲ್ಲ. ತೆರೆಯ ಹಿಂದೆಯೂ ತೆರೆಯ ಮುಂದೆಯೂ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದ್ದರು ರಮ್ಯಾ. ವಿಶೇಷವಾಗಿ ರಮ್ಯಾ ಸಿನಿಮಾಗಳಲ್ಲಿ ಕಾಸ್ಟ್ಯೂಮ್ ವಿಚಾರಕ್ಕೂ ಹೆಚ್ಚು ಸುದ್ದಿಯಾಗುತ್ತಿದ್ದರು. ಹೀಗೆ `ರಕ್ತ ಕಾಶ್ಮೀರ’ ಚಿತ್ರದ ಹಾಡೊಂದಕ್ಕಾಗಿ ರಮ್ಯಾ 75 ಸಾವಿರ ರೂಪಾಯಿ ಬೆಲೆಯ ಸೀರೆ ಉಟ್ಟಿದ್ದರಂತೆ.

    15 ವರ್ಷಗಳ ಹಿಂದೆಯೇ 75 ಸಾವಿರ ರೂಪಾಯಿಗೆ ಬೆಲೆಬಾಳುವ ಸೀರೆಯನ್ನು ಒಂದು ನಿಮಿಷ ಕಾಣಿಸಿಕೊಳ್ಳುವ ಹಾಡಿಗಾಗಿ ರಮ್ಯಾ ಧರಿಸಿದ್ದರು ಎಂಬ ರಹಸ್ಯ ಇದೀಗ ರಿವೀಲ್ ಆಗಿದೆ.

    ರಮ್ಯಾ-ಉಪೇಂದ್ರ ನಟಿಸಿರುವ ರಕ್ತಕಾಶ್ಮೀರ ಚಿತ್ರದ ಹಾಡಿಗಾಗಿ ಈ ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಬಳಿ ಬಂದ ರಮ್ಯಾ, ಅಂಕಲ್ ನಾನೊಂದು ಸೀರೆ ನೋಡಿದ್ದೇನೆ. ಅದನ್ನ ನೀವು ಚಿತ್ರೀಕರಣಕ್ಕಾಗಿ ಕೊಡಿಸಬೇಕು ಎಂದರಂತೆ. ಆಗಲಿ ಎಂದು ರಮ್ಯಾ ಇಷ್ಟ ಪಟ್ಟಿದ್ದ ಆ ಸೀರೆಯನ್ನ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೊಡಿಸಿದ್ದರಂತೆ. ಅದರ ಬೆಲೆ ಆಗಲೇ 75 ಸಾವಿರ ರೂಪಾಯಿ ಆಗಿತ್ತು ಎಂದಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಇದರಿಂದಾಗಿ ರಮ್ಯಾ ಉಟ್ಟಿದ್ದ ಸೀರೆಯ ವೈಭವ ಬೆಳಕಿಗೆ ಬಂದಿದೆ.

  • ರಕ್ತಕಾಶ್ಮೀರ ಸಿನಿಮಾದಲ್ಲಿ ಕನ್ನಡದ 14 ಸ್ಟಾರ್ ನಟರು

    ರಕ್ತಕಾಶ್ಮೀರ ಸಿನಿಮಾದಲ್ಲಿ ಕನ್ನಡದ 14 ಸ್ಟಾರ್ ನಟರು

    ವೃತ್ತಿಜೀವನದಲ್ಲಿ ಐವತ್ತು ವರ್ಷಗಳನ್ನು ಪೂರೈಸಿರುವ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ – ರಮ್ಯ ಮುಖ್ಯಪಾತ್ರದಲ್ಲಿ ನಟಿಸಿರುವ ʼರಕ್ತ ಕಾಶ್ಮೀರʼ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಈ ವರ್ಷ ನನಗೆ ಬಹಳ ವಿಶೇಷ. ನಾನು ನಿರ್ದೇಶಕನಾಗಿ 50 ವರ್ಷಗಳಾಗಿದೆ ಹಾಗೂ ನಾನು ನಿರ್ದೇಶಿಸಿರುವ ಎರಡು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದೆ. ಅದರಲ್ಲಿ ಮೊದಲು ʼರಕ್ತ ಕಾಶ್ಮೀರʼ ಚಿತ್ರ ಬಿಡುಗಡೆಯಾಗುತ್ತಿದೆ. ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಹಾಗೂ ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರದ ಹತ್ತಿರ ಸಿಂಧೂ ನದಿ ದಂಡೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ಭಯದ ವಾತವಾರಣವಿದ್ದರೂ ಚಿತ್ರೀಕರಣ ಅಂದುಕೊಂಡ ಹಾಗೆ ಆಯಿತು. ಉಪೇಂದ್ರ ಅವರು ಈ ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಮ್ಯ ಅವರು ಆರು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ಕೈದು ಜನ ಬಾಲ ಕಲಾವಿದರು ಸಹ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಉಪೇಂದ್ರ ಅವರು ಮಕ್ಕಳಿಗೆ ದೇಶದ ಕುರಿತು ಜಾಗೃತಿ ಮೂಡಿಸುತ್ತಾರೆ. ಹಾಗೆ ಅವರ ಮೂಲಕವೇ ಮಹತ್ತರ ಕೆಲಸವನ್ನು ಮಾಡಿಸುತ್ತಾರೆ. ಚಿತ್ರದ ಮತ್ತೊಂದು ವಿಶೇಷ ಎಂದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿದ್ದಾರೆ. ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕನ್ನಡದ ದಿಗ್ಗಜ ನಾಯಕರು ಒಂದೇ ಹಾಡಿನಲ್ಲಿ ಅಭಿನಯಿಸಿರುವುದು ಹಿಂದೆಂದೂ ಆಗಿರದ ಇತಿಹಾಸವೇ ಸರಿ. ನನ್ನ ಮೇಲೆ ಪ್ರೀತಿಯಿಟ್ಟು ಅಭಿನಯಿಸಿದ ಅವರೆಲ್ಲರಿಗೂ ಧನ್ಯವಾದ. ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇಂದು ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ. ಮಾರ್ಸ್ ಸುರೇಶ್ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ತಿಳಿಸಿದರು.

    ನಾನು ಈ ಚಿತ್ರದ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ತಂದೆ ಅವರು ಹೇಳಿದ ಹಾಗೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕರು ನಮ್ಮ ಚಿತ್ರದಲ್ಲಿ ನಟಿಸಿರುವುದು ನಿಜಕ್ಕೂ ಹೆಮ್ಮೆ. ಆರು ದಿನಗಳ ಕಾಲ ಅಷ್ಟು ಜನ ಕಲಾವಿದರೊಂದಿಗೆ ಕಾಲ ಕಳೆದಿದ್ದು ಮರೆಯಲಾಗದ ಅನುಭವ. ನಮ್ಮ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಆದಿತ್ಯ ಹೇಳಿದರು.

    ನಾನು ಈ ಹಿಂದೆ ಬಾಬು ಅವರ ಕೆಲವು ಚಿತ್ರಗಳನ್ನು ಹಂಚಿಕೆ ಮಾಡಿದ್ದೆ. ಆದರೆ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿರುವುದು ಇದೇ ಮೊದಲು ಎಂದು ವಿತರಕ ಮಾರ್ಸ್ ಸುರೇಶ್ ತಿಳಿಸಿದರು. ವೀರ ಕಂಬಳ ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

  • ಚಿಕ್ಕಣ್ಣ ಹೊಸ ಲುಕ್: ಲಕ್ಷ್ಮೀಪುತ್ರ ಫಸ್ಟ್ ಲುಕ್ ರಿಲೀಸ್

    ಚಿಕ್ಕಣ್ಣ ಹೊಸ ಲುಕ್: ಲಕ್ಷ್ಮೀಪುತ್ರ ಫಸ್ಟ್ ಲುಕ್ ರಿಲೀಸ್

    ಉಪಾಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್ ವುಡ್‌ಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದ ಚಿಕ್ಕಣ್ಣ (Chikkanna) ಸದ್ಯ ಲಕ್ಷ್ಮೀಪುತ್ರ ಚಿತ್ರದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಈ ಸಿನಿಮಾದಿಂದ ಹೊಸ ಅಪ್‌ಡೇಟ್‌ ಸಿಕ್ಕಿದೆ. ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಲಕ್ಷ್ಮೀಪುತ್ರ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

    ಫಸ್ಟ್ ಲುಕ್‌ನಲ್ಲಿ ಚಿಕ್ಕಣ್ಣ, ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಕ ಧರಿಸಿ, ಬಾಳೆಗೊನೆಯನ್ನು ಹಿಡಿದು ನಡೆದುಕೊಂಡು ಬರುತ್ತಿದ್ದಾರೆ. ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಈಗಾಗಲೇ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.ಇದನ್ನೂ ಓದಿ: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಾಜೇಂದ್ರ ಸಿಂಗ್ ಬಾಬು

    smip

    ಲಕ್ಷ್ಮೀಪುತ್ರ ತಾಯಿ ಮಗನ ಬಾಂಧವ್ಯದ ಕಥೆಯನ್ನು ಹೊಂದಿದೆ. ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದು, ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವಿಜಯ್ ಎಸ್.ಸ್ವಾಮಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

    ಚಿತ್ರದಲ್ಲಿ ಚಿಕ್ಕಣ್ಣನಿಗೆ ತಾಯಿ ತಾರಾ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮ್ಸ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ. ಸಚಿವ ಸಂತೋಷ್ ಲಾಡ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಗಿರೀಶ್ ಆರ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತವಿದೆ.

    ಮಾಸ್ ಮಾದ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದರೆ, ರಾಜೇಶ್ ರಾವ್ ಸಹ ನಿರ್ದೇಶನ ಮಾಡುತ್ತಿದ್ದಾರೆ. ಎಪಿ ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ನಿರ್ಮಾಣ ಹಾಗೂ ರವಿ ಕಿರಣ್ ಕೋ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ.ಇದನ್ನೂ ಓದಿ: ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

     

  • ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಾಜೇಂದ್ರ ಸಿಂಗ್ ಬಾಬು

    ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಾಜೇಂದ್ರ ಸಿಂಗ್ ಬಾಬು

    ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ನಿರ್ದೇಶಕರಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಸ್.ವಿ.ಆರ್ 50 ಸಾಧನೆ.. ಸಂಭ್ರಮ ಕಾರ್ಯಕ್ರಮ ಉದ್ಘಾಟನೆ ಮಾಡಲಾಯ್ತು. ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಿದ್ದು, ಅ.23 ರಿಂದ 27 ರವರೆಗೆ 5 ದಿನಗಳ ಕಾಲ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾಗಳ ಪ್ರದರ್ಶನ ಸಂವಾದ ಕಾರ್ಯಕ್ರಮ ನಡೆಯಲಿದೆ.

    ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ನಟ ಕಿಚ್ಚ ಸುದೀಪ್, ಗಿರೀಶ್ ಕಾಸರವಳ್ಳಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಅಶ್ವತ್ಥ್ ನಾರಾಯಣ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಶಾಸಕ ಮುನಿರತ್ನ ಭಾಗಿಯಾಗಿದ್ದರು. ಉಳಿದಂತೆ ಈ ಸಮಾರಂಭಕ್ಕೆ ಗಿರಿಜಾ ಲೊಕೇಶ್, ಸಂಗೀತ ನಿರ್ದೇಶಕ ಹಂಸಲೇಖ, ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಾಥ್ ಹಾಗೂ ರಾಜೇಂದ್ರ ಸಿಂಗ್ ಬಾಬು ಕುಟುಂಬಸ್ಥರು, ಆಪ್ತರು ಸೇರಿ ಇಡೀ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: ತೆಲುಗಿನ ಸೈಕಲ್‌ ರಾಜಕಾರಣಿ ಗುಮ್ಮಡಿ ನರಸಯ್ಯನಾದ ಶಿವಣ್ಣ

    ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಅವರ ಇಡೀ ಕುಟುಂಬ ಸಿನಿಮಾ ರಂಗಕ್ಕೆ ನೀಡಿದ ಅಪಾರ ಕೊಡುಗೆ ಬಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಮಾತಾಡಿದ್ದಾರೆ. ಪ್ರತಿ ವರ್ಷವೂ ಚಿತ್ರರಂಗದಲ್ಲಿ ಸಾಧನೆ ಮಾಡಿದ ಒಬ್ಬೊಬ್ಬ ನಿರ್ದೇಶಕರನ್ನ, ತಂತ್ರಜ್ಞರನ್ನ ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಲಿದೆಯಂತೆ.

  • ದಿ ವೀರ್ ಚಿತ್ರದಲ್ಲಿ ಜೆಕೆ ಭರ್ಜರಿ ಆಕ್ಷನ್

    ದಿ ವೀರ್ ಚಿತ್ರದಲ್ಲಿ ಜೆಕೆ ಭರ್ಜರಿ ಆಕ್ಷನ್

    ನ್ನಡ ಸಿನಿಮಾ (Kannada Cinema) ಮತ್ತು ಸೀರಿಯಲ್‌ಗಳಲ್ಲಿ ಜೆಕೆ ಎಂದೇ ಖ್ಯಾತಿ ಪಡೆದಿರುವ ಕಾರ್ತಿಕ್ ಜಯರಾಮ್ (Kartik Jayram) ನಟಿಸಿರುವ ದಿ ವೀರ್ ಸಿನಿಮಾದ (D Veer Movie) ಟೀಸರ್ ರಿಲೀಸ್ ಆಗಿದೆ. ರಾಜರಾಜೇಶ್ವರಿ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಝಲಕ್ ಕುತೂಹಲ ಹೆಚ್ಚಿಸಿದೆ. 2 ನಿಮಿಷ 44 ಸೆಕೆಂಡ್ ಇರುವ ಟೀಸರ್ ಭರ್ಜರಿ ಆಕ್ಷನ್‌ಗಳಿಂದ ಕೂಡಿದೆ. ನಿರ್ದೇಶಕರು ಎಲ್ಲಿಯೂ ಕಥೆಯ ಗುಟ್ಟು ಬಿಟ್ಟು ಕೊಡದೇ ಟೀಸರ್ ಕಟ್ ಮಾಡಿದ್ದಾರೆ. ಸಿಕ್ಸ್ ಪ್ಯಾಕ್ಸ್‌ನಲ್ಲಿ ಜೆಕೆ ಸಖತ್ ಖದರ್ ತೋರಿಸಿದ್ದಾರೆ.

    ಹೊಸ ನಿರ್ದೇಶಕ ಆರ್.ಲೋಹಿತ್ ನಾಯಕ್ ಅವರು ‘ದಿ ವೀರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಜೆಕೆ ನಟಿಸಿದ್ದ ‘ಐರಾವನ್’ ಸಿನಿಮಾದ ತಂಡದಲ್ಲೂ ಲೋಹಿತ್ ಕೆಲಸ ಮಾಡಿದ್ದರು. ಈಗ ಅವರು ‘ದಿ ವೀರ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದನ್ನೂ ಓದಿ: ಫ್ಯಾಥೋ ಸಾಂಗ್ ಬಿಕ್ಕಿ ಬಿಕ್ಕಿ ಅತ್ತ ಸಿದ್ದು

    ಚಿತ್ರದಲ್ಲಿ ರೋಚಿತ್ ಅವರು ವಿಲನ್ ಆಗಿ ಅಭಿನಯಿಸಿದ್ದಾರೆ. ಮಂಜು ಪಾವಗಡ ಕೂಡ ನಟಿಸಿದ್ದಾರೆ. ಹೊಸ ನಟಿ ಪ್ರಣಿತಿ ಅವರು ಈ ಸಿನಿಮಾದ ಮೂಲಕ ನಾಯಕಿಯಾಗಿದ್ದಾರೆ. ದಿ ವೀರ್ ಸಿನಿಮಾಗೆ ಧ್ರುವ ಎಂ.ಬಿ. ಅವರು ಸಂಗೀತ ನೀಡುತ್ತಿದ್ದಾರೆ. ದೇವೇಂದ್ರ ಛಾಯಾಗ್ರಹಣ, ಆರ್ಯನ್ ಗೌಡ ಸಂಕಲನ, ಶಂಕರ್ ರಾಮನ್ ಹಾಗೂ ನಾಗಾರ್ಜುನ್ ಪ್ರಕಾಶ್ ಸಂಭಾಷಣೆ ಒದಗಿಸಿದ್ದಾರೆ. ಜಯಶ್ರೀನಿವಾಸನ್ ಗುರೂಜಿ ಅವರ ಧರ್ಮಪತ್ನಿ ಗೀತಾ ಜಯಶ್ರೀನಿವಾಸನ್ ಮತ್ತು ವಿಶಾಲ್ ತೇಜ್ ದಿ ವೀರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ನಾಗರಾಜ ಸೋಮಯಾಜಿ ಹೊಸ ಸಿನಿಮಾ – `ದೇವಿ ಮಹಾತ್ಮೆ’ ಪೋಸ್ಟರ್ ರಿಲೀಸ್

  • ಬಿದ್ದು ಕಾಲು ಮುರಿದುಕೊಂಡ ಹಿರಿಯ ನಟ ಉಮೇಶ್ – ಆರೋಗ್ಯ ಸ್ಥಿತಿ ಹೇಗಿದೆ?

    ಬಿದ್ದು ಕಾಲು ಮುರಿದುಕೊಂಡ ಹಿರಿಯ ನಟ ಉಮೇಶ್ – ಆರೋಗ್ಯ ಸ್ಥಿತಿ ಹೇಗಿದೆ?

    – ಆರ್ಥಿಕ ಸಹಾಯಕ್ಕಾಗಿ ಕಲಾವಿದರ ಸಂಘದ ಮೊರೆ ಹೋದ ನಟ

    ಕನ್ನಡದ ಹಿರಿಯ ನಟ ಉಮೇಶ್ (Actor Umesh) ವಯೋ ಸಹಜ ತೊಂದರೆಗಳಿಂದ ಬಳಲುತ್ತಿದ್ದಾರೆ. ಇಂಥಹ ಕಷ್ಟದ ಹೊತ್ತಲ್ಲೇ ಅವರು ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡಿದ್ದಾರೆ.

    ಶುಕ್ರವಾರ ಬೆಳಗ್ಗೆ ಮನೆಯಲ್ಲೇ ಜಾರಿ ಬಿದ್ದ ಉಮೇಶ್ ನೋವಿನಿಂದಾಗಿ ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಮುದ್ದಿನಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇದೀಗ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಹಿರಿಯ ನಟ ಉಮೇಶ್ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟರಾಗಿ, ಐದು ದಶಕದಿಂದ ಬಣ್ಣ ಹಚ್ಚುತ್ತಿರುವ ಕಲಾವಿದ. ಇದೀಗ ಇಳಿ ವಯಸ್ಸಿನಲ್ಲಿ ಕಾಲಿಗೆ ಫ್ರ್ಯಾಕ್ಟರ್‌ ಮಾಡಿಕೊಂಡು ನರಳುತ್ತಿದ್ದಾರೆ. ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ ಕಲಾವಿದರ ಸಂಘದ ಮೊರೆ ಹೋಗಿದ್ದಾರೆ ಉಮೇಶ್.

    ಈ ವಯಸ್ಸಿನಲ್ಲೂ ಅವರು ನಟನೆಯ ತೊರೆದಿಲ್ಲ. ಆದರೆ ಮುಂದಿನ ಸ್ಥಿತಿ ಏನು ಅನ್ನೋ ಚಿಂತೆ ಅವರಿಗೂ ಕುಟುಂಬಸ್ಥರಿಗೂ ಎದುರಾಗಿದೆ. ಸದ್ಯಕ್ಕೀಗ ಕಾಲಿಗೆ ಆಪರೇಷನ್ ಮಾಡಬೇಕಾಗಿ ಬಂದಿದೆ. ವಿಶ್ರಾಂತಿ ಬಳಿಕ ಆರೋಗ್ಯದಲ್ಲಿ ಚೇತರಿಕೆ ಆಗಬೇಕಾಗಿದೆ.

  • ಖೇಲಾ ಸಿನಿಮಾದ ಶೂಟಿಂಗ್ ಮುಗಿಸಿದ ವಿಹಾನ್

    ಖೇಲಾ ಸಿನಿಮಾದ ಶೂಟಿಂಗ್ ಮುಗಿಸಿದ ವಿಹಾನ್

    ರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಖೇಲಾ ಚಿತ್ರದ (Khela Kannada Movie) ಚಿತ್ರೀಕರಣ ಮುಕ್ತಾಯವಾಗಿದೆ.

    ಬೆಂಗಳೂರು, ಮೈಸೂರು ಹಾಗೂ ಉತ್ತರಕಾಂಡದಲ್ಲಿ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಹಿರಿಯ ನಿರ್ದೇಶಕ ವಿಷ್ಣುಕಾಂತ್ ಅವರ ಪುತ್ರ ಭರತ್ ವಿ.ಜೆ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರ ಪ್ರೇಮ ಕಥಾಹಂದರ ಹೊಂದಿದೆ. ಇದು ಮಾಮೂಲಿ ತರಹದ ಪ್ರೇಮಕಥೆಯಲ್ಲ. ವಿಭಿನ್ನ ಲವ್ ಸ್ಟೋರಿ! ಇದನ್ನೂ ಓದಿ: BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

    ಈ ಚಿತ್ರದ ಮೂಲಕ ಜನಪ್ರಿಯ ಧಾರಾವಾಹಿಗಳಾದ ಶ್ರಾವಣಿ ಸುಬ್ರಹ್ಮಣ್ಯ ಹಾಗೂ ಮೈನಾದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಹಾನ್ ಪ್ರಭಂಜನ್ ನಾಯಕನಾಗಿ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಆಶಿಕಾ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಮುಖಪಾತ್ರದಲ್ಲಿ ಯುವರಾಜ್ ಗೌಡ, ಸ್ವಾತಿ ಮುಂತಾದವರಿದ್ದಾರೆ. ವಿಶೇಷಪಾತ್ರದಲ್ಲಿ ನಟಿ ಸಂಗೀತಾ ಭಟ್ ಕಾಣಿಸಿಕೊಂಡಿದ್ದಾರೆ.

    ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಖೇಲಾ ಚಿತ್ರಕ್ಕೆ ಎಂ.ಎಸ್ ತ್ಯಾಗರಾಜ್ ಸಂಗೀತ ನಿರ್ದೇಶನ, ಸ್ವಾಮಿ ಮೈಸೂರು ಛಾಯಾಗ್ರಹಣ ಹಾಗೂ ಅಮಿತ್ ಜವಳ್ಕರ್ ಸಂಕಲನವಿದೆ. ಸಂಭಾಷಣೆಯನ್ನು ಆರ್ ಪ್ರಮೋದ್ ಜೋಯಿಸ್ ಬರೆದಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್‌ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್‌ ಸಿಂಹ

  • ಇದು ನಮ್ಮ ಸಂಬಂಧದ ಸಂಭ್ರಮ – ಫ್ಯಾನ್ಸ್‌ಗೆ ಪತ್ರ ಬರೆದು ರಚಿತಾ ರಾಮ್ ಆಹ್ವಾನ

    ಇದು ನಮ್ಮ ಸಂಬಂಧದ ಸಂಭ್ರಮ – ಫ್ಯಾನ್ಸ್‌ಗೆ ಪತ್ರ ಬರೆದು ರಚಿತಾ ರಾಮ್ ಆಹ್ವಾನ

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಏಕಾಏಕಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫ್ಯಾನ್ಸ್ ತಾವೇ ಖುದ್ದು ಪತ್ರ ಬರೆದು ಆಹ್ವಾನ ಕೊಟ್ಟಿದ್ದಾರೆ. `ಎಲ್ರೂ ತಪ್ಪದೇ ಮನೆಗೆ ಬನ್ನಿ ಗುಡ್ ನ್ಯೂಸ್ ಇದೆ’ ಎಂದು ತಾವೇ ಕೈಯ್ಯಾರೆ ಬರೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಅಕ್ಟೋಬರ್ 3, ರಚಿತಾ ರಾಮ್ ಹುಟ್ಟುಹಬ್ಬ. ಹೀಗಾಗಿ ಈ ದಿನ ಬೆಂಗಳೂರಿನ ಆರ್‌ಆರ್‌ ನಗರದ ತಮ್ಮ ನಿವಾಸಕ್ಕೆ ಅಭಿಮಾನಿಗಳನ್ನ ಪ್ರೀತಿಯಿಂದ ಆಹ್ವಾನಿಸಿದ್ದಾರೆ. `ಫ್ಯಾನ್ಸ್, ಕುಟುಂಬಸ್ಥರು ಒತ್ತಾಯದ ಮೇರೆಗೆ ನಾನು ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ. ಇದು ಹುಟ್ಟುಹಬ್ಬದ ಆಚರಣೆ ಅಲ್ಲ ನಮ್ಮ ಸಂಬಂಧದ ಸಂಭ್ರಮ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಯೆಟ್ನಾಂ ಬೀದಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ – ರೀಲ್ಸ್ ರಾಣಿ ಕಂಬನಿಗೆ ಕಾರಣವೇನು?

    ರಚಿತಾ ಹುಟ್ಟುಹಬ್ಬದ ವಿಶೇಷವಾಗಿ ಅವರು ಅಭಿನಯಿಸುತ್ತಿರುವ ಸಿನಿಮಾ ತಂಡದಿಂದ ಅನೇಕ ವಿಶೇಷಗಳು, ಅಭಿಮಾನಿಗಳಿಗೆ ಸರ್ಪ್ರೈಸ್‌ ಗಿಫ್ಟ್‌ ಇರುವ ಸಾಧ್ಯತೆ ಇದೆ. ಒಟ್ನಲ್ಲಿ ಅನೇಕ ವರ್ಷಗಳ ಬಳಿಕ ರಚಿತಾ ರಾಮ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ವಿಶೇಷ. ಇದನ್ನೂ ಓದಿ: ಕಾಂತಾರ ದೃಶ್ಯ ವೈಭೋಗ ಕಣ್ತುಂಬಿಕೊಂಡ ಪ್ರೇಕ್ಷಕರು ಹೇಳಿದ್ದೇನು?

  • ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

    ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

    ಪ್ರತಿಷ್ಠಿತ ಧಾರಾವಾಹಿ ʻಲಕ್ಷ್ಮಿ ನಿವಾಸʼದಿಂದ ನಟಿ ಅಂಜಲಿ ಸುಧಾಕರ್ (Anjali Sudhakar) ಹೊರ ನಡೆದಿದ್ದಾರೆ. ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ರೇಣುಕಾ ಪಾತ್ರದ ಮೂಲಕ ಮನೆ ಮಾತಾಗಿದ್ದ ಅಂಜಲಿ ಸುಧಾಕರ್ ಇತ್ತೀಚೆಗೆ ತಮ್ಮ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಈಗ ದಿಢೀರ್ ಅಂತಾ ಧಾರಾವಾಹಿಯಿಂದಲೇ ಹೊರ ಬಂದಿದ್ದಾರೆ. ಅಂಜಲಿ ಹೊರಬರೋದಕ್ಕೆ ಕಾರಣವೇನು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.

    ಅಂಜಲಿ ಸುಧಾಕರ್ ಸೀರಿಯಲ್‌ನಿಂದ (Lakshmi Nivasa Serial) ಹೊರ ಬಂದಿರುವ ಬಗ್ಗೆ ಅವರ ಸ್ನೇಹಿತೆ ವಿಜಯಲಕ್ಷ್ಮಿ ಸುಬ್ರಮಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಖುದ್ದಾಗಿ ಅಂಜಲಿಯವರನ್ನ ಸಂಪರ್ಕ ಮಾಡಿದಾಗ ಸ್ಪಷ್ಟನೆ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿತ್ತು. ಇತ್ತೀಚೆಗೆ ಪಾತ್ರದ ತಿರುವುಗಳಲ್ಲಿ ತುಂಬಾ ಬದಲಾವಣೆ ಮಾಡಿದ್ದಾರೆ. ನನ್ನ ಪಾತ್ರವನ್ನ ತುಂಬಾ ನೆಗೆಟಿವ್ ಆಗಿ ಪೋಷಣೆ ಮಾಡುತ್ತಿರೋದು ತುಂಬಾ ಬೇಸರ ಮೂಡಿಸಿದೆ. ಚಾನೆಲ್ ಅವರಿಂದ ಈ ಸಮಸ್ಯೆಯಾಗಿಲ್ಲ ಬದಲಾಗಿ ಧಾರಾವಾಹಿ ತಂಡದಿಂದ ಈ ಸಮಸ್ಯೆಯಾಗಿದೆ ಎಂದಿದ್ದಾರೆ ನಟಿ ಅಂಜಲಿ ಸುಧಾಕರ್.

    ಇನ್ನು ಈ ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಆಚೆ ಬಂದಿರೋದು ಪೇಮೆಂಟ್ ವಿಚಾರಕ್ಕೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ಪೇಮೆಂಟ್ ವಿಚಾರದಲ್ಲಿ ಯಾವುದೇ ತೊಂದರೆಯಾಗಿಲ್ಲ, ಕೆಲವು ಬಾರಿ ಡಿಲೇ ಆಗಿದೆ, ಹೊರತು ವೇತನದ ಸಮಸ್ಯೆಯಾಗಿಲ್ಲ ಎಂದಿದ್ದಾರೆ.

    ಈ ಮುಂಚೆ ನಟಿ ಶ್ವೇತಾ ಕೂಡಾ ಈ ಧಾರಾವಾಹಿಯಿಂದ ಹೊರ ನಡೆದಿದ್ದರು. ಇದರ ಬೆನ್ನಲ್ಲೇ ಇದೀನ ನಟಿ ಅಂಜಲಿ ಸುಧಾಕರ್ ರೇಣುಕಾ ಪಾತ್ರವನ್ನ ತೊರೆದು ಆಚೆ ಬಂದಿದ್ದಾರೆ.

    ನಟಿ ಅಂಜಲಿ ಸುಧಾಕರ್ ಬೇರೆ ಬೇರೆ ಧಾರಾವಾಹಿಯಲ್ಲಿ ಪಾಸಿಟಿವ್ ಆಗಿರುವ ಪಾತ್ರದ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ. ಆದರೆ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಮಾತ್ರ ತುಂಬಾ ನೆಗೆಟಿವ್ ಆಗಿರುವ ಪಾತ್ರದ ಪೋಷಣೆ ನಿರ್ವಹಿಸುವುದು. ಆ ಮೂಲಕ ಜನರು ಸ್ವೀಕರಿಸುವ ರೀತಿ ಕಷ್ಟವಾಗುತ್ತಿರುವ ಕಾರಣದಿಂದ ಈ ಧಾರಾವಾಹಿಯಿಂದ ಆಚೆ ನಡೆದಿದ್ದಾರಂತೆ ನಟಿ ಅಂಜಲಿ ಸುಧಾಕರ್.

  • ನಂದಿಬೆಟ್ಟದಲ್ಲಿ ಶಿವರಾಜ್ ಕುಮಾರ್ ನಟನೆಯ ‘ಡ್ಯಾಡ್’ ಶೂಟಿಂಗ್

    ನಂದಿಬೆಟ್ಟದಲ್ಲಿ ಶಿವರಾಜ್ ಕುಮಾರ್ ನಟನೆಯ ‘ಡ್ಯಾಡ್’ ಶೂಟಿಂಗ್

    ರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shivarajkumar) ಅವರು ನಾಯಕರಾಗಿ ನಟಿಸುತ್ತಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ʼಡ್ಯಾಡ್ʼ ಚಿತ್ರ (Dad Cinema) ಇತ್ತೀಚೆಗಷ್ಟೇ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿತ್ತು. ಈಗ ಎರಡನೇ ಹಂತದ ಚಿತ್ರೀಕರಣ ನಂದಿ ಬೆಟ್ಟದಲ್ಲಿ (Nandi Hills) ನಡೆಯತ್ತಿದೆ. ಶಿವರಾಜಕುಮಾರ್, ಬೇಬಿ ನಕ್ಷತ್ರ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

    ಹರೀಶ್ ಪೆದ್ದಿ ಅವರು ಮೈರಾ ಕ್ರಿಯೇಷನ್ಸ್ ಲಾಂಛನದಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ಕನ್ನೆಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕರಿಗೆ ಹಾಗೂ, ನಿರ್ದೇಶಕರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ಬಿ.ಎಸ್. ಸುಧೀಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಶಿವರಾಜ್‌ಕುಮಾರ್ ಅವರು ಅನೇಕ ವರ್ಷಗಳ ನಂತರ ಈ ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಹಾಗೂ ಬಿ.ರಾಜಶೇಖರ್ ಅವರ ಛಾಯಾಗ್ರಹಣವಿದೆ.