Tag: Kannada Association

  • ಜನವರಿ 22ರ ಕರ್ನಾಟಕ ಬಂದ್ ಮುಂದೂಡಿಕೆ: ಕನ್ನಡ ಸಂಘಟನೆಗಳ ಒಕ್ಕೂಟ

    ಜನವರಿ 22ರ ಕರ್ನಾಟಕ ಬಂದ್ ಮುಂದೂಡಿಕೆ: ಕನ್ನಡ ಸಂಘಟನೆಗಳ ಒಕ್ಕೂಟ

    ಬೆಂಗಳೂರು: ಸದ್ಯಕ್ಕೆ ಕರ್ನಾಟಕ ಬಂದ್ ಮುಂದೂಡಿದ್ದೇವೆ. ಲಾಕ್‍ಡೌನ್ ಇಲ್ಲದಿದ್ದರೆ ಜನವರಿ 22ಕ್ಕೆ ದೊಡ್ಡ ಮಟ್ಟದ ಹೋರಾಟ ಮಾಡಲು ತೀರ್ಮಾನಿಸಲಾಗಿತ್ತು. ಇಂದಿನ ಕನ್ನಡ ಸಂಘಟನೆಗಳ ಸಭೆಯ ನಿರ್ಣಯದಂತೆ ಬಂದ್ ಬದಲು ಮೆರವಣಿಗೆ ಮಾಡುತ್ತೇವೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ರಾಜ್ಯ ಬಂದ್ ಹಿಂಪಡೆದ ಬಳಿಕ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲು ಕನ್ನಡ ಪರ ಹೋರಾಟಗಾರರ ಸಭೆ ಕರೆಯಲಾಗಿತ್ತು. ಕನ್ನಡ ಒಕ್ಕೂಟದ ರಾಜ್ಯಾದ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವುಡ್‍ಲ್ಯಾಂಡ್ಸ್ ಹೊಟೇಲ್‍ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಾಟಳ್ ನಾಗರಾಜ್ ಮಾತನಾಡಿ, ಕೊರೊನಾ ಮತ್ತು ಸರ್ಕಾರದ ಟಫ್ ರೂಲ್ಸ್ ಜಾರಿ ಹಿನ್ನೆಲೆ, ಜ.22 ರಂದು ಕರೆ ನೀಡಿದ್ದ ರಾಜ್ಯ ಬಂದ್ ಹಿಂಪಡೆದಿದ್ದೇವೆ. ಮುಂದಿನ ದಿನದಲ್ಲಿ ಲಾಕ್ ಡೌನ್ ಇಲ್ಲದಿದ್ದರೆ ಜ. 22 ರಂದೇ ಬೆಂಗಳೂರಲ್ಲಿ ಹಿಂದೆಂದು ನಡೆಯದ ರೀತಿಯಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ ಎಂದರು. ಇದನ್ನೂ ಓದಿ: ಭದ್ರತಾ ಲೋಪ – ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಹೋರಾಟದ ಕುರಿತು ಒಗ್ಗೂಡಿಸುತ್ತೇವೆ. 22ರ ಶನಿವಾರ ಬೆಳಗ್ಗೆ 10 ಗಂಟೆಗೆ ಟೌನ್‍ಹಾಲ್‍ನಿಂದ ಬೃಹತ್ ಮೆರವಣಿಗೆ ಆರಂಭವಾಗುತ್ತದೆ, ಮೇಕೆದಾಟು, ಮಹದಾಯಿ, ಎಂಇಎಸ್ ಮೂರು ವಿಚಾರಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತೇವೆ. ಟೌನ್‍ಹಾಲ್‍ನಿಂದ ಸ್ವಾತಂತ್ರ್ಯ ಉದ್ಯಾನವನದ ವರೆಗೆ ದೊಡ್ಡ ಮೆರವಣಿಗೆ ಮಾಡುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನೆಡೆಸುವಂತೆ ಸಂಘಟನೆಗಳಿಗೆ ಕರೆ ನೀಡುತ್ತೇವೆ ಎಂದರು. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

    ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.

  • ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

    ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

    ಬೆಂಗಳೂರು: ವೀರ ಸಾವರ್ಕರ್ ಅವರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅಂತಾ ಬ್ರಿಟಷರಿಗೆ ಗೊತ್ತಿತ್ತು. ಸಾವರ್ಕರ್ ಬ್ರಿಟಿಷರ ಪಾಲಿಗೆ ನ್ಯೂಕ್ಲಿಯರ್ ಆಗಿದ್ರು. ಹಾಗಾಗಿ ದೇಶದ ಜನರಿಂದ ಬ್ರಿಟಿಷರು ಅವರನ್ನು ದೂರ ಇಟ್ಟರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

    ಟೌನ್ ಹಾಲ್ ನಲ್ಲಿ ನಡೆದ ವೀರ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ವೀರ ಸಾರ್ವಕರ್ ಅವರ ಈ ಪುಸ್ತಕದ ಟೈಟಲ್‍ನಲ್ಲೇ ಇದೊಂದು ಅಪರೂಪದ ಪುಸ್ತಕ ಅನ್ನೋದು ತಿಳಿಯುತ್ತೆ. ಈ ಪುಸ್ತಕ ಬಿಡುಗಡೆಯಲ್ಲಿ ನಾನು ಭಾಗಿಯಾಗಿರೋದು ನನಗೆ ಹೆಮ್ಮೆ. ವೀರ ಸಾರ್ವಕರ್ ಹೆಸರಿನಲ್ಲಿ ಒಂದು ಶಕ್ತಿ ಇದೆ. ನಾವು ಎಲ್ಲರನ್ನೂ ವೀರರು ಎಂದು ಕರೆಯುವುದಿಲ್ಲ. ಆದರೆ ಸಾವರ್ಕರ್ ಇಡೀ ದೇಶದಲ್ಲಿ ವೈಚಾರಿಕತೆ ಕಿಚ್ಚು ಹಚ್ಚಿ ನಾಗರೀಕತೆ ಹಾಗೂ ಸಂಸ್ಕೃತಿಯ ಕಿಡಿ ಹಚ್ಚಿದ್ರು ಎಂದು ಸ್ಮರಿಸಿಕೊಂಡರು. ಇದನ್ನೂ ಓದಿ: ಶಿಕ್ಷಕರು ಅನಕ್ಷರಸ್ಥ ಬಾಳಲ್ಲಿ ಅಕ್ಷರ ಬೆಳಕು ಮೂಡಿಸಿರಿ: ಅಶೋಕ್ ಸಿಂದಗಿ

    ಸಾವರ್ಕರ್ ಅವರನ್ನ ಸಾಕಷ್ಟು ಜನ ದೂರುತ್ತಾರೆ. ಅಂತವರೆಲ್ಲ ದಯಾಮಾಡಿ ಸಾವರ್ಕರ್ ಇದ್ದ ಜೈಲು ಕೋಣೆಗೆ ಹೋಗಿ ಬನ್ನಿ. ಆಗ ಅವರ ಬಗ್ಗೆ ನಿಮಗಿರುವ ಕೊಳಕು ಮನಸ್ಥಿತಿ ಹೋಗುತ್ತದೆ. ಇತಿಹಾಸವನ್ನು ಸರಿಯಾಗಿ ಓದಿದರೆ ಮಾತ್ರ ಭವಿಷ್ಯವನ್ನ ಕಟ್ಟಲು ಸಾಧ್ಯ ಎಂದು ತಿಳಿಸಿದರು.

    ನಾಗರಿಕತೆಯೇ ಸಂಸ್ಕೃತಿ ಅಲ್ಲ, ನಮ್ಮಲ್ಲಿ ಏನು ಇದೆ ಅದು ನಾಗರಿಕತೆ, ನಾವು ಏನಾಗಿದ್ದೀವಿ ಅನ್ನೋದು ಸಂಸ್ಕೃತಿ. ಸಿಂಧೂ ತಟ್ಟದಲ್ಲಿ ಬೆಳೆದುಬಂದ ಮೌಲ್ಯಗಳೇ ಸಂಸ್ಕೃತಿ. ನಮ್ಮ ಸಂಸ್ಕೃತಿ ಮಾತ್ರ ನಮ್ಮ ಅಂತಃಕರಣವನ್ನು ಜಾಗೃತಿಗೊಳಿಸಲು ಸಾಧ್ಯ ಅನ್ನೊದನ್ನು ಹೇಳೋದೆ ವೀರ ಸಾರ್ವಕರ್ ಪುಸ್ತಕವಾಗಿದೆ. ಕೆಲವು ಧರ್ಮಗಳು ಹಿಂಸೆಯ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿವೆ. ನಮ್ಮ ಧರ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿದೆ ಎಂದರು.

    ವೈಚಾರಿಕವಾಗಿ ಬಾಬಾ ಸಾಹೇಬರ ಜೊತೆ ಸಾರ್ವಕರ್ ಉತ್ತಮ ಸಂಬಂಧ ಹೊಂದಿದ್ದರು. ಬ್ರಿಟಿಷರು ನಮ್ಮನ್ನ ಒಡೆಯಲಿಕ್ಕೆ ಅಸ್ಪೃಶ್ಯತೆ ಆರಂಭಿಸಿದರು. ಬಳಿಕ ಬಂದ ರಾಜಕಾರಣಿಗಳು ಲಾಭಕ್ಕಾಗಿ ಬಳಸಿಕೊಂಡು ಮುಂದುವರೆಸಿದರು. ಈಗ ಇದೆಲ್ಲ ಬದಲಾಗಬೇಕಿದೆ ಎಂದು ಸಾರಿದರು.

    ಈ ಕಾರ್ಯಕ್ರಮದಲ್ಲಿ ಆದುಚುಂಚನಗಿರಿ ಮಹಾಂಸ್ಥಾನ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಕೃತಿಯ ಲೇಖಕ ಉದಯ ಮಹೂರ್ಕರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಉಪಸ್ಥಿತರಿದ್ದರು. ಇದನ್ನೂ ಓದಿ: ಎರಡು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ 57 ನೌಕರರ ವಿರುದ್ಧ ಶಿಸ್ತುಕ್ರಮ

    ಪುಸ್ತಕ ಬಿಡುಗಡೆ ವೇಳೆ ಕನ್ನಡ ಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಹೈಡ್ರಾಮ ಸೃಷ್ಟಿಯಾಗಿತ್ತು. ಈ ವೇಳೆ ಟೌನ್ ಹಾಲ್ ಮುಂಭಾಗ ಹಿಂದೂ ಪರ ಕಾರ್ಯಕರ್ತರು ಮತ್ತು ಕನ್ನಡ ಪರ ಸಂಘಟನೆಗಳ ಪರ ವಿರೋಧ ಕೂಗಾಟ ನಡೆಯುತ್ತಿತ್ತು. ಪರಿಣಾಮ ಪೊಲೀಸರು ಈ ಪ್ರತಿಭಟನಕಾರರನ್ನು ವಶಕ್ಕೆ ಪಡೆದುಕೊಂಡರು. ಸಿಎಂ ಬರುವುದಕ್ಕೂ ಮುನ್ನ ಈ ಪ್ರತಿಭಟನೆ ನಡೆದಿತ್ತು.