Tag: kannad recipe

  • ಚಳಿಗೆ ಬಿಸಿಬಿಸಿ ಬೆಂಡೆಕಾಯಿ ಫ್ರೈ ಮಾಡೋ ವಿಧಾನ

    ಚಳಿಗೆ ಬಿಸಿಬಿಸಿ ಬೆಂಡೆಕಾಯಿ ಫ್ರೈ ಮಾಡೋ ವಿಧಾನ

    ವಾತಾವರಣ ಬದಲಾದಂತೆ ನಾವು ತಿನ್ನುವ ಆಹಾರಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತೇವೆ. ಹೀಗಿರುವಾಗ ಈಗ ಚಳಿ ಹೆಚ್ಚು ಹೀಗಾಗಿ ಬಿಸಿ-ಬಿಸಿಯಾಗಿ ಏನನ್ನಾದರು ತಿನ್ನಬೇಕು ಎಂದು ನಾಲಿಗೆ ಚಪ್ಪರಿಸುವುದು ಸಹಜ. ಸ್ನ್ಯಾಕ್ಸ್‍ಗೆ ಅಥವಾ ಊಟಕ್ಕೆ ಬಿಸಿ ಬಿಸಿಯಾಗಿ ರುಚಿಯಾದ ಬೆಂಡೆಕಾಯಿ ಫ್ರೈ ಮಾಡುವ ಮಾಹಿತಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಬೆಳ್ಳುಳ್ಳಿ- 2
    ಕರೀಬೇವು- 4ರಿಂದ 5
    ಇಂಗು- ಚಿಟಿಕೆ
    ಕಡಲೆ ಹಿಟ್ಟು- ಒಂದು ಕಪ್
    ಬೆಂಡೆಕಾಯಿ-100 ಗ್ರಾಂ
    ಗರಂಮಸಾಲಾ- ಅರ್ಧ ಟೀ ಸ್ಪೂನ್
    ಅರಿಶಿಣ -ಚಿಟಿಕೆ
    ದನಿಯಾ ಪೌಡರ್- 1 ಟೀ ಸ್ಪೂನ್
    ಕಾರದಪುಡಿ -2 ಟೀ ಸ್ಪೂನ್
    ಲಿಂಬು -ಒಂದು
    ಎಣ್ಣೆ -ಒಂದು ಕಪ್
    ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ
    * ಸ್ಟೌ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2ರಿಂದ 3 ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.
    * ಎಣ್ಣೆ ಬಿಸಿಯಾದ ನಂತ್ರ 4ರಿಂದ 5 ಕರಿಬೇವು ಮತ್ತು ಸಿಪ್ಪೆ ತೆಗೆದ 2 ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
    * ನಂತರ ಇದಕ್ಕೆ ಒಂದು ಕಪ್‍ನಷ್ಟು ಕಡಲೆ ಹಿಟ್ಟನ್ನು ಹಾಕಿ ಸುವಾಸನೆ ಬರುವವರೆಗೂ ಫ್ರೈ ಮಾಡಬೇಕು. ಈ ಮಸಾಲೆಯನ್ನು ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು.
    * ಇತ್ತ 100 ಗ್ರಾಂ ಬೆಂಡೆಕಾಯಿಯನ್ನು ತೆಗೆದುಕೊಂಡು ಮಧ್ಯದಲ್ಲಿ ಸೀಳಿಕೊಳ್ಳಬೇಕು.
    * ಈಗ ಹುರಿದಿರುವ ಮಸಾಲೆಗೆ ಸ್ವಲ್ಪ ಎಣ್ಣೆ, ಅರ್ಧ ಸ್ಪೂನ್ ಗರಂಮಸಾಲಾ , ಚಿಟಿಕೆ ಅರಿಶಿಣ, ಒಂದು ಟೀ ಸ್ಪೂನ್ ದನಿಯಾ ಪೌಡರ್, 2 ಟೀ ಸ್ಪೂನ್ ಖಾರದಪುಡಿ ಹಾಗೂ
    ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ಈ ಮಸಾಲೆಯನ್ನು ಸೀಳಿರುವ ಬೆಂಡೆಕಾಯಿ ಒಳಗೆ ತುಂಬಬೇಕು.
    * ನಂತರ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕಾದ ನಂತರ ಮಸಾಲೆ ತುಂಬಿರುವ ಬೆಂಡೆಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.

    ಈಗ ರುಚಿಯಾದ ಬೆಂಡೆಕಾಯಿ ಫ್ರೈ ಸವಿಯಲು ಸಿದ್ಧವಾಗುತ್ತದೆ. ರುಚಿ ರುಚಿಯಾದ ಬೆಂಡೆಕಾಯಿ ಫ್ರೈಯನ್ನು ಊಟದ ಜೊತೆಗೆ ಅಥವಾ ಸಂಜೆ ವೇಳೆ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು.

  • ಐದೇ ನಿಮಿಷದಲ್ಲಿ ಚಾಕಲೇಟ್ ಮಗ್ ಕೇಕ್ ಮಾಡೋ ವಿಧಾನ

    ಐದೇ ನಿಮಿಷದಲ್ಲಿ ಚಾಕಲೇಟ್ ಮಗ್ ಕೇಕ್ ಮಾಡೋ ವಿಧಾನ

    ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಚಾಕಲೇಟ್ ಫ್ಲೇವರ್ ಅಂದ್ರೆ ಅಚ್ಚುಮೆಚ್ಚು. ಕೇಕ್ ಗಳನ್ನು ಅಂಗಡಿಯಿಂದ ತಂದು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಹೇಗೆ? ಅದರಲ್ಲೂ ಕೇವಲ 5 ನಿಮಿಷದಲ್ಲೇ ಕೇಕ್ ರೆಡಿ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಮೈದಾ ಹಿಟ್ಟು – 2 ಚಮಚ
    * ಸಕ್ಕರೆ – 4 ಚಮಚ
    * ಕೋಕೋ ಪೌಡರ್ – 2 ಚಮಚ
    * ಮೊಟ್ಟೆ – 1
    * ಹಾಲು ಅಥವಾ ಮಜ್ಜಿಗೆ – ಸ್ವಲ್ಪ
    * ವೆನಿಲ್ಲಾ ಎಸೆನ್ಸ್- 1/4 ಚಮಚ

    ಮಾಡೋ ವಿಧಾನ:

    * ಒಂದು ಬೌಲ್ ತೆಗೆದುಕೊಂಡು ಅದಕ್ಕೆ 4 ಚಮಚದಷ್ಟು ಮೈದಾ ಹಿಟ್ಟು, 4 ಚಮಚ ಸಕ್ಕರೆ, ಹಾಗೆಯೇ 2 ಚಮಚದಷ್ಟು ಕೋಕೋ ಪೌಡರ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
    * ನಂತ್ರ ಈ ಹಿಟ್ಟಿಗೆ ಒಂದು ಮೊಟ್ಟೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.
    * ಬಳಿಕ ಅದಕ್ಕೆ 3 ಚಮಚ ಹಾಲು ಅಥವಾ ಮಜ್ಜಿಗೆ ಹಾಕಿ ಮತ್ತೆ ಚೆನ್ನಾಗಿ ಕಲಸಿಕೊಂಡು ಅದರ ಮೇಲೆ 3 ಚಮಚ ವೆಜಿಟೇಬಲ್ ಆಯಿಲ್ ಬೆರೆಸಿ ಮತ್ತೆ ಮಿಕ್ಸ್ ಮಾಡಿ.
    * ಅದಾದ ಬಳಿಕ 1/4 ಚಮಚದಷ್ಟು ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ನಂತ್ರ 2-3 ಸಣ್ಣ ಸಣ್ಣ ಮಗ್ ಗಳಲ್ಲಿ ಇದನ್ನ ಹಾಕಿ ಓವೆನ್ ನಲ್ಲಿಡಿ. 2 ನಿಮಿಷದ ಬಳಿಕ ಓವೆನ್ ನಿಂದ ಹೊರತೆಗೆಯಿರಿ. ಈಗ ಚಾಕಲೇಟ್ ಮಗ್ ಕೇಕ್ ತಿನ್ನಲು ರೆಡಿ.