Tag: Kanmani

  • ರಘುಗೆ ಹೆಂಡ್ತಿ ಸ್ಥಾನದಲ್ಲಿ ನಿಂತ್ಕೋಳಕ್ಕೆ ತುಂಬಾ ಜನ ಇದ್ದಾರಂತೆ

    ರಘುಗೆ ಹೆಂಡ್ತಿ ಸ್ಥಾನದಲ್ಲಿ ನಿಂತ್ಕೋಳಕ್ಕೆ ತುಂಬಾ ಜನ ಇದ್ದಾರಂತೆ

    ಬಿಗ್‍ಬಾಸ್ ಮನೆಯ ಅಂತಿಮ ದಿನ ಕಣ್ಮಣಿ ರಘುಗೆ ನಾಳೆ ನೀವು ಅಡುಗೆ ಮನೆಯಲ್ಲಿ ಇರುತ್ತೀರಾ ಎಂಬ ಪ್ರಶ್ನೆ ಕೇಳಿದ್ದಾಳೆ. ಆಗ ರಘು ಅಡುಗೆ ಮನೆಯಲ್ಲಿ ಇರುತ್ತೇನೆ ಆದರೆ ಅಡುಗೆ ಮನೆಯಲ್ಲಿ ಇನ್ನೊಬ್ಬರು ಇರುವುದಿಲ್ಲ ಬದಲಾಗಿ ನನ್ನ ಹೆಂಡತಿ ಇರುತ್ತಾಳೆ ಎನ್ನುತ್ತಾರೆ.

    ಈ ವೇಳೆ ಅರವಿಂದ್ ಅದು ನಿನ್ನನ್ನು ಇಂದು ಮನೆಯೊಳಗೆ ಬಿಟ್ಟುಕೊಂಡರೆ ಮಾತ್ರ ಎಂದು ರೇಗಿಸುತ್ತಾರೆ. ನೀವು ನನ್ನ ಹೆಂಡ್ತಿ ಸ್ಪೋರ್ಟಿವ್ ಆಗಿ ಇದ್ದಾಳಾ ಎಂದು ಚೇಕ್ ಮಾಡುತ್ತಿದ್ದೀರಾ. ನಾನು ಮನೆಗೆ ಹೋಗಬೇಕಾ, ಇಲ್ಲ ಅಂದರೆ ಎಲ್ಲಾದರೂ ಹೋಗಬೇಕಾ ಗೊತ್ತಾಗುತ್ತಿಲ್ಲ ಎಂದು ರಘು ಕೇಳಿದಾಗ, ನಾವು ಆರೋಗ್ಯ ಮಾತ್ರ ವಿಚಾರಿಸಿದ್ದು, ಇನ್ನು ಮಿಕ್ಕಿದ್ದು ಗಂಡ-ಹೆಂಡತಿಗೆ ಬಿಟ್ಟಿದ್ದು ಎಂದು ಕಣ್ಮಣಿ ಹೇಳುತ್ತಾಳೆ.

    ಈ ವೇಳೆ ಶುಭಾ ಪೂಂಜಾ ನನಗೆ ತಿಳಿದಿರುವಂತೆ ರಘುನಾ ಇಲ್ಲೇ ಬಿಟ್ಟು ಬಿಡಿ. ಏಕೆಂದರೆ ಅವರನ್ನು ಮನೆಗೆ ಸೇರಿಸುವುದಿಲ್ಲ ಅನಿಸುತ್ತದೆ ಎಂದರೆ ಅರವಿಂದ್ ಪಾಪ ಅವನ ಬಳಿ ಕಾರ್ಡ್ ಕೂಡ ಇಲ್ಲ ಅಂತಿದ್ದ ಎಂದು ರೇಗಿಸುತ್ತಾರೆ. ಆಗ ಕಣ್ಮಣಿ, ನಿಮಗೆ ಈಗಾಗಲೇ ನಿಮ್ಮ ಹೆಂಡತಿ ವಾಯ್ಸ್ ನೋಟ್ ಕಳುಹಿಸಿದ್ದಾರಲ್ಲ ಎಂದು ಕೇಳಿದಾಗ, ಮಜಾ ಮಾಡಿ ನೀನು ಬಾ, ನಿನಗಿದೆ ಎಂದು ಎದುರಿಸಿದಂತೆ ಇತ್ತು. ನಾನು ಅವಳು ಹೇಳಿದ್ದನ್ನು ಸೀರಿಯಸ್ ಆಗಿ ತೆಗೆದುಕೊಂಡು ಮಜಾ ಏನೋ ಮಾಡಿ ಬಿಟ್ಟೆ. ಆದ್ರೆ ಮುಂದೆ ಏನು ಗೊತ್ತಾಗುತ್ತಿಲ್ಲ ಎನ್ನುತ್ತಾರೆ.

    ಹಾಗದರೆ ನಿಮಗೊಂದು ಸಣ್ಣ ಸಿಕ್ರೆಟ್ ಹೇಳಿ ಬಿಡುತ್ತೇನೆ. ಆ ವಾಯ್ಸ್ ನೋಟ್‍ನಲ್ಲಿ ಒಂದೆರಡು ವರ್ಡ್ ನಾವು ಎಡಿಟ್ ಮಾಡಿದ್ದೇವೆ ಎಂದು ಕಣ್ಮಣಿ ರಘುಗೆ ಹೇಳತ್ತಾಳೆ. ಆಗ ರಘು ಏನಂತಾ ಇತ್ತು ಎಂದಾಗ ಕಣ್ಮಣಿ ಹೊರಗೆ ಹೋಗಿ ಲೈವ್‍ನಲ್ಲಿಯೇ ಗೊತ್ತಾಗುತ್ತದೆ ಎಂದಿದ್ದಾಳೆ.

    ನಂತರ ಕಣ್ಮಣಿ ಒಂದು ವೇಳೆ ನಿಮ್ಮ ಹೆಂಡತಿ ನಿಮ್ಮನ್ನು ಮನೆಗೆ ಸೇರಿಸಲಿಲ್ಲ ಅಂದರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸುತ್ತಾಳೆ. ಆಗ ಶುಭಾ, ಪ್ರಶಾಂತ್ ಎಲ್ಲರು ನಮ್ಮ ಮನೆಗೆ ಬರಬಹುದು ಎಂದು ಹೇಳುತ್ತಿದ್ದಾಗ ರಘು, ಈಗಾಗಲೇ ಇದರ ಬಗ್ಗೆ ಸಾಕಷ್ಟು ಬಾರಿ ಯಾರ ಮನೆಯಲ್ಲಿ ಎಷ್ಟು ದಿನ ಇರಬಹುದು ಎಂದು ಮಾತನಾಡಿದ್ದೇವೆ. ನನಗೆ ಹೆಂಡ್ತಿ ಸ್ಥಾನದಲ್ಲಿ ನಿಂತುಕೊಳ್ಳಲು ಬಹಳಷ್ಟು ಜನ ಇದ್ದಾರೆ ಎಂದು ಹೇಳುತ್ತಾರೆ.

    ಆಗ ಕಣ್ಮಣಿ ರಘು ಶುಭಾ ಮನೆಗೆ ಹೋದರೆ ಏನಾಗುತ್ತದೆ ಎಂದು ಗೊತ್ತು ತಾನೇ ಎಂದು ನೆನಪಿಸುತ್ತಾರೆ. ಈ ವೇಳೆ ರಘು ಪಾತ್ರೆ ತೊಳೆಯುವಂತೆ, ಬಟ್ಟೆ ಒಗೆಯುವಂತೆ ಸನ್ನೆ ಮಾಡಿ ತೋರಿಸುತ್ತಾರೆ.

     

  • ಅರವಿಂದ್ ಕಾಸ್ಟೂಮ್‍ಗೆ ಮ್ಯಾಚಿಂಗ್ ಸೀರೆ ಎತ್ತಿಟ್ಟಿದ್ದ ದಿವ್ಯಾ ಉರುಡುಗ

    ಅರವಿಂದ್ ಕಾಸ್ಟೂಮ್‍ಗೆ ಮ್ಯಾಚಿಂಗ್ ಸೀರೆ ಎತ್ತಿಟ್ಟಿದ್ದ ದಿವ್ಯಾ ಉರುಡುಗ

    ಬಿಗ್‍ಬಾಸ್ ಮನೆಯ ಕೊನೆಯ ದಿನದಂದು ದೊಡ್ಮನೆ ಸ್ಪರ್ಧಿಗಳು ತಮಗೆ ಅರಿವಿಲ್ಲದೇ ಗ್ರಾಂಡ್ ಫಿನಾಲೆಗೆ ರೆಡಿಯಾಗುವಂತೆ ಫುಲ್ ಟಿಪ್ ಟಾಪ್ ಆಗಿ ಮಿಂಚುತ್ತಿದ್ದರು. ಈ ವೇಳೆ ಅರವಿಂದ್ ಧರಿಸಿದ್ದ ಉಡುಪಿಗೆ ಮ್ಯಾಚ್ ಆಗುವಂತಹ ಸೀರೆಯನ್ನು ದಿವ್ಯಾ ಉರುಡುಗ ಎತ್ತಿಟ್ಟಿದ್ದ ವಿಚಾರವನ್ನು ಕಣ್ಮಣಿ ರಿವೀಲ್ ಮಾಡಿದ್ದಾಳೆ.

    ಕಣ್ಮಣಿ ಉಡುಪಿನ ಬಗ್ಗೆ ಮನೆಯ ಸ್ಪರ್ಧಿಗಳೊಂದಿಗೆ ಮಾತನಾಡುವ ವೇಳೆ ಅರವಿಂದ್ ನಿಮ್ಮ ಬಳಿ ಎಷ್ಟು ಬಟ್ಟೆಗಳಿದೆ ಎಂದು ಕೇಳಿದ್ದಾರೆ. ಅದಕ್ಕೆ ಅರವಿಂದ್ ನನ್ನ ಬಳಿ ಈ ಸೀಸನ್ ಮುಗಿಯುವವರೆಗೂ ಹೊಸ ಬಟ್ಟೆಗಳಿದೆ ಎನ್ನುತ್ತಾರೆ. ನಿಮ್ಮ ಬಳಿ ಇರುವ ಸ್ಟಾಕ್‍ಗೂ ನಿಮ್ಮ ಬಳಿ ಇರುವ ಕಾನ್ಫಿಡೆಂಟ್‍ಗೂ ಏನಾದರು ಸಂಬಂಧ ಇದ್ಯಾ ಎಂದು ಪ್ರಶ್ನಿಸಿದಾಗ ಯಾವುದೇ ಸಂಬಂಧವಿಲ್ಲ. ಬರಬೇಕಾದರೆನೇ ನಾನು ಎಲ್ಲ ಬಟ್ಟೆಗಳನ್ನು ತೆಗೆದುಕೊಂಡು ಬಂದಿದ್ದೇನೆ ನನ್ನ ಹತ್ತಿರ ಬಹಳಷ್ಟು ಬಟ್ಟೆಗಳಿದೆ ಎಂದಿದ್ದಾರೆ.

    ನೀವು ಇವತ್ತು ಹಾಕಿಕೊಂಡಿರುವ ಕಾಸ್ಟೂಮ್‍ಗೆ ಮ್ಯಾಚಿಂಗ್ ಸ್ಯಾರಿ ದಿವ್ಯಾ ಎತ್ತಿಟ್ಟಿದ್ದರು ಅಂದಾಗ ಅರವಿಂದ ನಾಚಿಕೆಯಿಂದ ಹೌದು ಎಂದು ಉತ್ತರಿಸುತ್ತಾರೆ. ದಿವ್ಯಾ ವಾಯ್ಸ್ ಕೇಳಿ ಹೇಗೆ ಅನಿಸಿತು ಎಂದಾಗ ಸಖತ್ ಆಗಿತ್ತು. ಬಹಳ ಖುಷಿಯಾಯ್ತು. ಅವಳಿಗೆ ಸ್ವಲ್ಪ ಎನರ್ಜಿ ಬಂದಿದೆ. ಈಗ ಅವಳ ಹೆಲ್ತ್, ರೈಟ್ ಡೈರೆಕ್ಷನ್‍ನಲ್ಲಿದೆ. ನಾವು ಕೇಳಿಕೊಂಡಿದ್ದನ್ನು ಗಮನದಲ್ಲಿಟ್ಟುಕೊಂಡು ಅವಳ ವಾಯ್ಸ್ ನೋಟ್ಸ್ ಕಳುಹಿಸಿದಕ್ಕೆ ನಿಮಗೆ ತುಂಬಾ ಧನ್ಯವಾದ ಎಂದು ತಿಳಿಸಿದರು.

    ವೀಕೆಂಡ್‍ನಲ್ಲಿ ನಾನು ನಾಮಿನೇಟ್ ಆಗಿದ್ದರೂ ನನ್ನ ಪಕ್ಕದಲ್ಲಿ ಕುಳಿತುಕೊಂಡಿರುತ್ತಿದ್ದಳು. ಅವಳ ವಾಯ್ಸ್ ಕೇಳಿ ಬಹಳ ಖುಷಿಯಾಯಿತು ಎಂದಿದ್ದಾರೆ.

  • ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

    ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

    ಕೊರೊನಾದಿಂದ ಬಿಗ್‍ಬಾಸ್ ಕಾರ್ಯಕ್ರಮ ಅಂತಿಮ ಹಂತಕ್ಕೆ ತಲುಪಿದೆ. ಸದ್ಯ ವಾರದ ಕೊನೆಯ ದಿನ ಮನೆಮಂದಿಗೆ ಕಣ್ಮಣಿ ಕೇಳಿದ ಪ್ರಶ್ನೆಯೊಂದಕ್ಕೆ ಶಮಂತ್ ಹಾಗೂ ಅರವಿಂದ್ ವೈಷ್ಣವಿಯನ್ನು ಸಹಿಸಿಕೊಂಡು ಇದ್ದೀವಿ ಎಂದಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ನಿಧಿ ಹಾಗೂ ಶುಭಾ ಇವರಿಬ್ಬರ ನಡುವೆ ಯಾರು, ಯಾರನ್ನು ಹೆಚ್ಚಾಗಿ ಸಹಿಸಿಕೊಳ್ಳುತ್ತಾರೆ ಎಂದು ಕಣ್ಮಣಿ ಪ್ರಶ್ನಿಸಿದೆ. ಆಗ ಮನೆಯ ಸದಸ್ಯರು ಒಬ್ಬೊಬ್ಬರಾಗಿಯೇ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಬರುತ್ತಾರೆ. ಈ ವೇಳೆ ಶಮಂತ್ ಸರದಿ ಬಂದಾಗ, ನನಗೆ ಮೊನ್ನೆಯಿಂದ ವೈಷ್ಣವಿಯವರು ಬ್ರೂಸ್ಲಿ, ಬ್ರೂಸ್ಲಿ ಅಂತಾ ಒಂದು ಜೋಕ್ ಹೇಳುತ್ತಿದ್ದಾರೆ. ಅದನ್ನು ಕೇಳಿ ತಲೆಯನ್ನ ಹೋಗಿ ಗೋಡೆಗೆ ಗುದ್ದಿಕೊಳ್ಳೋಣ ಎನ್ನುವಷ್ಟು ತಲೆ ಕೆಟ್ಟು ಹೋಗಿದೆ. ಅದರಲ್ಲಿ ಉತ್ತರ ಯಾವುದೋ, ಪ್ರಶ್ನೆ ಯೂವುದೋ ಅಂತ ಗೊತ್ತೆ ಆಗುತ್ತಿರಲಿಲ್ಲ. ಆದರೆ ಸಖತ್ ಆಗಿ ಇತ್ತು. ಸ್ವಲ್ಪನಾದರೂ ತಲೆಗೆ ಕೆಲಸ ಕೊಟ್ಟರು. ಸೋ ವೈಷ್ಣವಿಯವರನ್ನು ಸಹಿಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾರೆ.

    ನಂತರ ಅರವಿಂದ್, ಸಹಿಸಿಕೊಳ್ಳುವುದೆಂದರೆ ಶಮಂತ್ ಹೇಳಿದಂತೆ ವೈಷ್ಣವಿ. ಯಾಕೆಂದರೆ ಕೆಲವೊಂದು ಬಾರಿ ಪಾಯಿಂಟ್ ಇಲ್ಲದಿರುವ ಜೋಕ್ ಹೇಳುತ್ತಿರುತ್ತಾರೆ. ಅದು ಡೈರೆಕ್ಷನ್‍ನಲ್ಲಿಯೂ ಇರುವುದಿಲ್ಲ. ಅದನ್ನು ಸ್ವಲ್ಪ ನುಂಗಿ, ನುಂಗಿ ಹೇಳುತ್ತಿರುತ್ತಾರೆ. ಅದಕ್ಕೆ ನಾನು ರೇಗಾಡಿಕೊಂಡು ಸಹಿಸಿಕೊಳ್ಳುತ್ತಿರುತ್ತೇನೆ. ಪಾಯಿಂಟ್ ಇಲ್ಲದೇ ಇರುವುದಕ್ಕೆ ರೇಗಾಡುತ್ತಿರುತ್ತೇವೆ ಹೊರತು ಜೋಕ್‍ಗೆ ರೇಗಾಡುವುದಿಲ್ಲ ಎನ್ನುತ್ತಾರೆ.