Tag: kaniyoor

  • ಪುತ್ತೂರಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‍ಗೆ ದಂತದಿಂದ ತಿವಿದ ಕಾಡಾನೆ!

    ಪುತ್ತೂರಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‍ಗೆ ದಂತದಿಂದ ತಿವಿದ ಕಾಡಾನೆ!

    ಮಂಗಳೂರು: ಪುತ್ತೂರಿಂದ ಬೆಂಗಳೂರಿಗೆ (Puttur- Bengaluru) ತೆರಳುತ್ತಿದ್ದ ಕೆಎಸ್‍ಆರ್‌ಟಿ ಸಿ ಸ್ಲೀಪರ್ ಕೋಚ್ ಬಸ್‍ (KSRTC Sleeper Coach Bus) ಗೆ ಕಾಡಾನೆಯೊಂದು ದಂತದಿಂದ ತಿವಿದ ಘಟನೆ ನಡೆದಿದೆ.

    ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪ ತಡರಾತ್ರಿ ಘಟನೆ ನಡೆದಿದೆ. ಕಾಡಾನೆ (Wild Elephant) ದಾಳಿಯಿಂದ ಬಸ್‍ಗೆ ಹಾನಿಯಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇದನ್ನೂ ಓದಿ: ಆಡಳಿತ ಮಂಡಳಿಯವರು ಮಾಡಿದ ಸಾಲಕ್ಕೆ ಶಾಲೆಯನ್ನೇ ಸೀಜ್ ಮಾಡಿದ ಬ್ಯಾಂಕ್ ಸಿಬ್ಬಂದಿ!

    ಬಸ್ ಪುತ್ತೂರಿನಿಂದ ಕಾಣಿಯೂರು (Kaniyoor) ಮಾರ್ಗವಾಗಿ ಸುಬ್ರಹ್ಮಣ್ಯ (Subrahmanya) ಮೂಲಕ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ ಚಾಲಕ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಿಸಿದ್ದಾರೆ. ಆದರೂ ಬಸ್ಸಿನ ಎಡಭಾಗಕ್ಕೆ ಆನೆ ತನ್ನ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.

    ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ, ಪರಿಶೀಲನೆ ನೀಡಿಸಿದ್ದಾರೆ. ಪರಿಶೀಲನೆ ಬಳಿಕ ಬಸ್ ಬೆಂಗಳೂರಿನತ್ತ ತೆರಳಿದೆ.

  • ಕಾರು ಹೊಳೆಗೆ ಬಿದ್ದ ಪ್ರಕರಣ- ನಾಪತ್ತೆಯಾಗಿದ್ದ ಇಬ್ಬರ ಮೃತದೇಹವೂ ಪತ್ತೆ

    ಕಾರು ಹೊಳೆಗೆ ಬಿದ್ದ ಪ್ರಕರಣ- ನಾಪತ್ತೆಯಾಗಿದ್ದ ಇಬ್ಬರ ಮೃತದೇಹವೂ ಪತ್ತೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಹೊಳೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಕೂಡ ಪತ್ತೆಯಾಗಿದೆ.

    ಸೇತುವೆಯಿಂದ 400 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಮೃತದೇಹದ ಅಂಗಿ ಕಳಚಿದ್ದು ಪ್ಯಾಂಟ್ ಧರಿಸಿದ ರೀತಿ ಪತ್ತೆಯಾಗಿದೆ. ಹೊಳೆಗೆ ಬಿದ್ದಿರುವ ಮರದಲ್ಲಿ ಕವುಚಿ ಸಿಲುಕಿಕೊಂಡಿದೆ. ಮಳೆ ಕಡಿಮೆಯಾಗಿ ನೀರು ಇಳಿಕೆಯಾದರಿಂದ ಸ್ಥಳೀಯರಿಗೆ ಮೃತದೇಹ ಕಾಣಿಸಿದೆ. ಪೊಲೀಸರು ಆಗಮಿಸಿದ ಬಳಿಕ ಮೃತದೇಹ ಮೇಲಕೆತ್ತಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಹೊಳೆಗೆ ಕಾರು ಉರುಳಿದ ಪ್ರಕರಣಕ್ಕೆ ಟ್ವಿಸ್ಟ್- ಆಕ್ಸಿಡೆಂಟ್ ಆಗೋ 4 ನಿಮಿಷ ಮೊದಲೇ ಕರೆ ಮಾಡಿದ್ದ ಯುವಕರು..!

    ಜು.10ರ ರಾತ್ರಿ ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಉರುಳಿತ್ತು. ಘಟನೆಯಂದು ಕಾರನ್ನು ಸ್ಥಳೀಯರು ಹಾಗೂ ಮ,ಉಳುಗುತಜ್ಞರ ಸಜಹಾಯದಿಂದ ಮೇಲಕ್ಕೆತ್ತಲಾಗಿತ್ತು. ಆದರೆ ನಾಪತ್ತೆಯಾಗಿದ್ದ ವಿಟ್ಲದ ಧನುಷ್(25)ಧನುಷ್ (24) ಪತ್ತೆಯಾಗಿರಲಿಲ್ಲ. ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

    Live Tv
    [brid partner=56869869 player=32851 video=960834 autoplay=true]

  • ಕಾರು ಹೊಳೆಗೆ ಉರುಳಿದ ಪ್ರಕರಣ- ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಪತ್ತೆ

    ಕಾರು ಹೊಳೆಗೆ ಉರುಳಿದ ಪ್ರಕರಣ- ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಪತ್ತೆ

    ಮಂಗಳೂರು: ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಉರುಳಿಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದೆ.

    ಕಾರಿನಲ್ಲಿದ್ದ ವಿಟ್ಲದ ಧನುಷ್(25), ಕನ್ಯಾನ ಧನುಷ್ (24) ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇವಬ್ಬರು ಕೂಡ ಸಹೋದರ ಸಂಬಂಧಿಗಳಾಗಿದ್ದಾರೆ. ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.

    ಘಟನಾ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲಿ ಕಾರು ಪತ್ತೆಯಾಗಿದ್ದು, ಇದೀಗ ನಾಪತ್ತೆಯಾದವರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಣಿಯೂರಿನಲ್ಲಿ ಹೊಳೆಗೆ ಬಿದ್ದ ಕಾರು- ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ

    ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಧ್ಯರಾತ್ರಿ ಭಾರೀ ವೇಗವಾಗಿ ಬಂದ ಕಾರು ಹೊಳೆಗೆ ಬಿದ್ದಿದೆ. ಘಟನೆಯ ದೃಶ್ಯವು ಬೈತಡ್ಕ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಅಪಘಾತದ ವೇಗಕ್ಕೆ ಸೇತುವೆಯ ತಡೆಬೇಲಿ ಜಖಂ ಆಗಿದೆ. ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಣಿಯೂರಿನಲ್ಲಿ ಹೊಳೆಗೆ ಬಿದ್ದ ಕಾರು- ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ

    ಕಾಣಿಯೂರಿನಲ್ಲಿ ಹೊಳೆಗೆ ಬಿದ್ದ ಕಾರು- ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಅಂತೆಯೇ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಸಮೀಪ ಹೊಳೆಗೆ ಕಾರೊಂದು ಬಿದ್ದ ಪ್ರಸಂಗ ನಡೆದಿದೆ.

    ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಧ್ಯರಾತ್ರಿ ಭಾರೀ ವೇಗವಾಗಿ ಬಂದ ಕಾರು ಹೊಳೆಗೆ ಬಿದ್ದಿದೆ. ಘಟನೆಯ ದೃಶ್ಯವು ಬೈತಡ್ಕ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕುಮಾರಧಾರಾ ನದಿ ಸೇರುವ ಗೌರಿ‌ ಹೊಳೆ ಕಟ್ಟಿರುವ ಸೇತುವೆ ಅಪಘಾತದ ವೇಗಕ್ಕೆ ತಡೆಬೇಲಿ ಜಖಂ ಆಗಿದೆ. ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ. ಕಾರು ಮತ್ತು ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕೊಡಗಿನ ಚೆಂಬುವಿನಲ್ಲಿ ಇಂದೂ ಭೂಕಂಪನ- ಆತಂಕಕ್ಕೀಡಾದ ಜನ

    ಕಾರು ಕಡಬ ತಾಲೂಕಿನ ಗುತ್ತಿಗಾರು ಮೂಲದ ಮಾರುತಿ-800 ಎಂಬ ಬಗ್ಗೆ ಮಾಹಿತಿ ಲಭಿಸಿದ್ದು, ಮೂವರು ಇದ್ದಿರುವ ಶಂಕೆ  ವ್ಯಕ್ತವಾಗಿದೆ. ಸದ್ಯ ಬೋಟ್ ಮೂಲಕ ಶೋಧ ನಡೆಸುತ್ತಿರುವ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಕಾರು ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರು ನೀರಿನೊಳಗೆ ಮುಳುಗಿ ಹೋಗಿರುವ ಸಂಶಯ ವ್ಯಕ್ತ ವಾಗುತ್ತಿದೆ.

    ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]