Tag: Kanimozhi

  • ಭಯೋತ್ಪಾದನೆ ವಿರುದ್ಧ ಭಾರತದ ದಿಟ್ಟ ಹೋರಾಟಕ್ಕೆ ಬೆಂಬಲ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷ ನಿಯೋಗ

    ಭಯೋತ್ಪಾದನೆ ವಿರುದ್ಧ ಭಾರತದ ದಿಟ್ಟ ಹೋರಾಟಕ್ಕೆ ಬೆಂಬಲ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷ ನಿಯೋಗ

    – ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ನಿಲುವು ಸ್ಪಷ್ಟ

    ಸ್ಲೊವೇನಿಯಾ: ಭಯೋತ್ಪಾದನೆ (Terrorism) ವಿರುದ್ಧ ಭಾರತದ ದೃಢ ಸಂಕಲ್ಪವನ್ನು ಜಾಗತಿಕವಾಗಿ ಎತ್ತಿ ಹಿಡಿಯುವ ಮೂಲಕ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡುವುದಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ (Brijesh Chowta) ಅವರನ್ನು ಒಳಗೊಂಡ ಸಂಸದೆ ಕನಿಮೋಳಿ (Kanimozhi ನೇತೃತ್ವದ ಸರ್ವಪಕ್ಷಗಳ ನಿಯೋಗವು ರಷ್ಯಾ ಭೇಟಿ ಬಳಿಕ ಇದೀಗ ಸ್ಲೊವೇನಿಯಾ ದೇಶದಲ್ಲಿದೆ. ಇಂದು ಹಲವು ಕಡೆ ಉನ್ನತ ಮಟ್ಟದ ಸಭೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ.

    ಸ್ಲೊವೇನಿಯಾ ದೇಶಕ್ಕೆ ಆಗಮಿಸಿದ ನಿಯೋಗವನ್ನು ಅಲ್ಲಿನ ಭಾರತೀಯ ರಾಯಭಾರಿ ಅಧಿಕಾರಿ ಅಮಿತ್ ನಾರಂಗ್ ಅವರು ಬರಮಾಡಿಕೊಂಡಿದ್ದರು. ನಂತರ ಅವರು ಸರ್ವಪಕ್ಷಗಳ ಸಂಸದೀಯ ನಿಯೋಗದ ಜತೆಗೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸ್ಲೊವೇನಿಯಾ ದೇಶವು ಭಾರತದೊಂದಿಗೆ ಬೆಂಬಲವಾಗಿ ನಿಂತಿದ್ದು, ಉಭಯ ದೇಶಗಳ ನಡುವೆ ವೃದ್ದಿಸುತ್ತಿರುವ ಬಾಂಧವ್ಯದ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.

    ಇದಾದ ಬಳಿಕ ಸರ್ವಪಕ್ಷದ ನಿಯೋಗವು ರಾಷ್ಟ್ರೀಯ ಅಸೆಂಬ್ಲಿಯ ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷರಾದ ಹೆಚ್.ಇ ಪ್ರೆಡ್ರಾಗ್ ಬಕೋವಿಕ್ ಮತ್ತು ಭಾರತ-ಸ್ಲೊವೇನಿಯಾ ಪಾರ್ಲಿಮೆಂಟರಿ ಫ್ರೆಂಡ್ ಶಿಪ್ ಗ್ರೂಪ್‌ನ ಮಿರ್ಸ್ಲಾವ್ ಗ್ರೆಗೋರಿಕ್ ಅವರೊಂದಿಗೆ ಸಭೆ ನಡೆಸಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಕುರಿತ ಭಾರತದ ಬಲವಾದ ಬದ್ಧತೆ ಕುರಿತು ಮನವರಿಕೆ ಮಾಡಿಕೊಟ್ಟಿದೆ. ಭಯೋತ್ಪಾದನೆಯನ್ನ ಪೋಷಿಸುತ್ತಿರುವ ಪಾಕಿಸ್ತಾನದ ಇಬ್ಬಗೆಯ ನೀತಿಯ ಕುರಿತು ಭಾರತದ ಕಳವಳವನ್ನ ಸ್ಲೊವೇನಿಯಾದ ಜನಪ್ರತಿನಿಧಿಗಳು ಹಾಗೂ ಚಿಂತಕರಿಗೆ ಸ್ಪಷ್ಟವಾಗಿ ತಿಳಿಹೇಳಲಾಯಿತು.

    ಇದಾದ ಬಳಿಕ ಸ್ಲೊವೇನಿಯಾದ ಪ್ರಧಾನ ಮಂತ್ರಿ ಕಚೇರಿಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸಂಯೋಜಕರಾದ ಎಚ್.ಇ ವೋಜ್ಕೊ ವೋಲ್ಕ್ ಅವರೊಂದಿಗೆ ನಿಯೋಗವು ಮಹತ್ವದ ಸಭೆ ನಡೆಸಿದೆ. ನಂತರ ಸ್ಲೊವೇನಿಯಾದ ವಿದೇಶಾಂಗ ಮತ್ತು ಯುರೋಪಿಯನ್ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಬಾರ್ಬರಾ ಜ್ವೊಕೆಲ್ಜ್ ಅವರನ್ನು ನಿಯೋಗ ಭೇಟಿ ಮಾಡಿತು. ಈ ವೇಳೆ ಪಹಲ್ಗಾಮ್ ದಾಳಿಯನ್ನು ಸ್ಲೊವೇನಿಯಾ ಸ್ಪಷ್ಟವಾಗಿ ಖಂಡಿಸುವುದರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತವು ಭಯೋತ್ಪಾದನೆ ವಿರುದ್ಧದ ತಳೆದಿರುವ ನಿಲುವಿಗೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆ ಮೂಲಕ ಭಯೋತ್ಪಾದನೆ ವಿರುದ್ಧದ ಭಾರತದ ದಿಟ್ಟ ಹೋರಾಟದಲ್ಲಿ ಎಲ್ಲ ರೀತಿಯ ಸಹಕಾರದ ಭರವಸೆಯನ್ನು ನೀಡಿದೆ..

  • ಬಸ್ ಚಾಲಕಿಗೆ ಕಮಲ್ ಹಾಸನ್ ಕಾರು ಗಿಫ್ಟ್ : ಇದರ ಹಿಂದಿದೆ ಗೊಂದಲದ ಸ್ಟೋರಿ

    ಬಸ್ ಚಾಲಕಿಗೆ ಕಮಲ್ ಹಾಸನ್ ಕಾರು ಗಿಫ್ಟ್ : ಇದರ ಹಿಂದಿದೆ ಗೊಂದಲದ ಸ್ಟೋರಿ

    ರಡ್ಮೂರು ದಿನಗಳಿಂದ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ (Kamal Haasan) ಅವರು, ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿಯನ್ನು (Bus Driver) ಕರೆಯಿಸಿಕೊಂಡು ಕಾರು (Car)  ಗಿಫ್ಟ್ ನೀಡಿರುವ ಸುದ್ದಿ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬರೀ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಇದೀಗ ತಮಿಳು ನಾಡಿನ ರಾಜಕೀಯ ವಲಯದಲ್ಲೂ ಅದು ಚರ್ಚೆಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ನಡೆ ಎಂದು ಹೇಳಲಾಗುತ್ತಿದ್ದು, ಕಾರು ಕೊಟ್ಟಿರುವ ಕಮಲ್ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

    ಏನಿದು ಪ್ರಕರಣ?

    ಶರ್ಮಿಳಾ (Sharmila) ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ. ಅವತ್ತು ಮಹಿಳಾ ಚಾಲಕಿಯರನ್ನು ಗೌರವಿಸುವುದಕ್ಕಾಗಿ ಡಿಎಂಕೆ ಸಂಸದೆ ಕನಿಮೊಳಿ (Kanimozhi) ಕೊಯಮತ್ತೂರಿಗೆ ಬಂದಿದ್ದರು. ಚಾಲಕಿಯರನ್ನು ಗೌರವಿಸಿದ ಕೆಲವೇ ಗಂಟೆಗಳಲ್ಲೇ ಕನಿಮೊಳಿ ಅವರು ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ಏರಿದ್ದಾರೆ. ಇಲ್ಲಿಯೇ ಎಡವಟ್ಟು ಆಗಿದೆ.

    ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ಏರಿದ್ದ ಕನಿಮೊಳಿಗೆ ಆ ಬಸ್ ನಲ್ಲಿದ್ದ ಕಂಡಕ್ಟರ್ ಟಿಕೆಟ್ ತಗೆದುಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಶರ್ಮಿಳಾ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಂಸದರು ನಮ್ಮನ್ನು ಗೌರವಿಸುವುದಕ್ಕಾಗಿ ಬಸ್ ಏರಿದ್ದಾರೆ. ಬಸ್‍ ನಲ್ಲಿ ಅವರು ಪ್ರಯಾಣಿಸುತ್ತಿರುವುದು ನಮಗೆ ಗೌರವ. ಟಿಕೆಟ್ ತಗೆದುಕೊಳ್ಳುವುದು ಬೇಡ ಎಂದಿದ್ದಾರೆ ಶರ್ಮಿಳಾ. ಈ ವಿಚಾರವಾಗಿ ಕಂಡಕ್ಟರ್ ಗೂ ಮತ್ತು ಶರ್ಮಿಳಾಗೂ ಗಲಾಟೆ ಆಗಿದೆ. ಈ ಗಲಾಟೆಗೆ ಈಗ ನಾನಾ ಬಣ್ಣಗಳು ಮೆತ್ತಿಕೊಂಡಿವೆ. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಈ ಘಟನೆಯಾದ ಕೆಲವೇ ಗಂಟೆಗಳಲ್ಲೇ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಒಂದು ಕಡೆಯಾದರೆ, ಮತ್ತೊಂದು ಕಡೆ ಬಸ್ ಮಾಲೀಕರೆ ಶರ್ಮಿಳಾರನ್ನು ಕೆಲಸದಿಂದ ತಗೆದುಹಾಕಿದ್ದಾರೆ ಎನ್ನುವ ಸುದ್ದಿಯೂ ಇದೆ. ಸ್ವಯಂ ಪ್ರಚಾರಕ್ಕಾಗಿ ಸಿಲೆಬ್ರಿಟಿಗಳನ್ನು ಬಸ್ ನಲ್ಲಿ ಹತ್ತಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಸ್ ಮಾಲೀಕರು ಶರ್ಮಿಳಾರನ್ನು ಕೆಲಸದಿಂದ ತಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿಯನ್ನು ಮಾಲೀಕರು ನಿರಾಕರಿಸಿದ್ದಾರೆ.

    ಮತ್ತೊಂದು ಕಡೆ ಶರ್ಮಿಳಾ ಡಿಎಂಕೆ (DMK) ಬೆಂಬಲಿಗರು. ಹಾಗಾಗಿ ಕನಿಮೊಳಿ ಅವರ ಬೆಂಬಲಕ್ಕೆ ನಿಂತು ಟಿಕೆಟ್ ರಹಿತ ಪ್ರಯಾಣ ಮಾಡಿಸಲು ಮುಂದಾಗಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ಏನೇ ಆದರೂ ಕೆಲಸ ಕಳೆದುಕೊಂಡು ಶರ್ಮಿಳಾಗೆ ಕಮಲ್ ಹಾಸನ್ ಕಾರು ಗಿಫ್ಟ್ ನೀಡುವ ಮೂಲಕ ಅವರ ಬದುಕಿಗೆ ನೆರವಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕನಿಮೊಳಿಗೆ ಟಿಕೆಟ್ – ಕೆಲಸ ತೊರೆದ ತಮಿಳುನಾಡಿನ ಮೊದಲ ಬಸ್ ಚಾಲಕಿ

    ಕನಿಮೊಳಿಗೆ ಟಿಕೆಟ್ – ಕೆಲಸ ತೊರೆದ ತಮಿಳುನಾಡಿನ ಮೊದಲ ಬಸ್ ಚಾಲಕಿ

    ಚೆನ್ನೈ: ಡಿಎಂಕೆ (DMK) ಸಂಸದೆ ಕನಿಮೊಳಿ (Kanimozhi) ಅವರಿಗೆ ಬಸ್ ಟಿಕೆಟ್ ನೀಡಿದ್ದಕ್ಕೆ ಬೇಸತ್ತು ತಮಿಳುನಾಡಿನ (Tamil Nadu) ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

    ಸಂಸದೆ ಗಾಂಧಿಪುರಂನಿಂದ ಪೀಲಮೇಡುವಿಗೆ ತೆರಳಲು ಬಸ್ ಏರಿದ್ದರು. ಈ ವೇಳೆ ಕಂಡಕ್ಟರ್ ಟಿಕೆಟ್ ನೀಡಿದ್ದರು. ಇದಕ್ಕೆ ಚಾಲಕಿ ಹಾಗೂ ಕಂಡಕ್ಟರ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಅಲ್ಲದೇ ಚಾಲಕಿ ಶರ್ಮಿಳಾ ಪ್ರಚಾರಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕೆಲಸವನ್ನು ತೊರೆದಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್ ಸುಧಾಮೂರ್ತಿಗೆ ಬಾಲ ಸಾಹಿತ್ಯ ಪುರಸ್ಕಾರ

    ಕನಿಮೋಳಿಯವರು ನಾನು ಓಡಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸಲು ಬಂದಿದ್ದರು. ಆದರೆ ಕಂಡಕ್ಟರ್ ಟಿಕೆಟ್ ಖರೀದಿಸುವಂತೆ ಸಂಸದರಿಗೆ ಹೇಳಿದರು. ಇದು ನನ್ನ ಮತ್ತು ಕಂಡಕ್ಟರ್ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಸಂಸದರನ್ನು ಭೇಟಿಯಾದ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಆದರೆ ಸಂಸದರಿಗೆ ಮಾಡಿದ ಅಗೌರವವನ್ನು ನನಗೆ ಸಹಿಸಿಕೊಳ್ಳಲು ಆಗಲಿಲ್ಲ. ಸಂಸದರಿಗೆ ಕಂಡಕ್ಟರ್ ಟಿಕೆಟ್ ನೀಡಿರುವುದು ಸರಿಯಾದ ನಡೆಯಲ್ಲ ಎಂದು ಶರ್ಮಿಳಾ ಆರೋಪಿಸಿದ್ದಾರೆ.

    ಬಿಜೆಪಿ (BJP) ಶಾಸಕಿ ವನತಿ ಶ್ರೀನಿವಾಸನ್ ಕೂಡ ಈ ಹಿಂದೆ ಶರ್ಮಿಳಾ ಚಲಾಯಿಸುತ್ತಿದ್ದ ಬಸ್‍ನಲ್ಲಿ ಪ್ರಯಾಣಿಸಿದ್ದಾರೆ. ಚಾಲಕಿಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿವೆ.

    ಸಾರಿಗೆ ಸಂಸ್ಥೆಯ ಮುಖ್ಯಸ್ಥ ದುರೈ ಕಣ್ಣನ್ ಅವರು ಕನಿಮೊಳಿಯವರ ಭೇಟಿಯ ಮಾಹಿತಿಯನ್ನು ನಿರಾಕರಿಸಿದ್ದಾರೆ. ನಮಗೆ ತಿಳಿಸಿದ್ದರೆ ನಾವು ಸಂಸದರಿಗೆ ಸೂಕ್ತ ವ್ಯವಸ್ಥೆ ಮಾಡುತ್ತಿದ್ದೆವು. ಅಲ್ಲದೇ ಆಡಳಿತ ಮಂಡಳಿ ಶರ್ಮಿಳಾ ಅವರಿಗೆ ಕೆಲಸ ಬಿಡುವಂತೆ ಬಲವಂತಪಡಿಸಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.

    ಈ ಘಟನೆಗೂ ಮೊದಲು ಸಭೆಯೊಂದಕ್ಕೆ ತೆರಳುವ ಮುನ್ನ, ಕನಿಮೊಳಿ ಅವರು ಬಸ್ ಚಾಲಕಿಯಾಗಲು ಶರ್ಮಿಳಾ ಪಟ್ಟಿರುವ ಶ್ರಮವನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿಗೆ ಕೇಂದ್ರದ ಬಾಗಿಲು ಬಂದ್ – ಸರ್ಕಾರದ ಮುಂದಿರುವ ಆಯ್ಕೆಗಳೇನು?

  • ಪ್ರಚಾರಕ್ಕೆ ಬರುವಂತೆ ಕನಿಮೋಳಿ, ಕಮಲ್‌ ಹಾಸನ್‌ಗೆ ಕಾಂಗ್ರೆಸ್‌ ಆಹ್ವಾನ

    ಪ್ರಚಾರಕ್ಕೆ ಬರುವಂತೆ ಕನಿಮೋಳಿ, ಕಮಲ್‌ ಹಾಸನ್‌ಗೆ ಕಾಂಗ್ರೆಸ್‌ ಆಹ್ವಾನ

    ಬೆಂಗಳೂರು: ಕರ್ನಾಟಕ ಚುನಾವಣಾ (Karnataka Election) ಪ್ರಚಾರಕ್ಕೆ ತಮಿಳುನಾಡಿನ ಇಬ್ಬರು ನಾಯಕರಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ.

    ಡಿಎಂಕೆ ಸಂಸದೆ ಕನಿಮೋಳಿ (Kanimozhi) ಮತ್ತು ತಮಿಳು ಚಿತ್ರ ರಂಗದ ಸೂಪರ್ ಸ್ಟಾರ್ ಕಮಲ್‌ ಹಾಸನ್ (Kamal Haasan) ಅವರಿಗೂ ಆಹ್ವಾನ ನೀಡಿದೆ. ಇದನ್ನೂ ಓದಿ: ರೈತರ ಶೇ.85ರಷ್ಟು ಹಣವನ್ನ ಕಾಂಗ್ರೆಸ್ಸಿನವರೇ ನುಂಗಿ ನೀರು ಕುಡಿದಿದ್ದಾರೆ – ಮೋದಿ ಸಿಡಿಮಿಡಿ

    ತಮಿಳು (Tamil) ಪ್ರಾಬಲ್ಯದ ಬೆಂಗಳೂರು, ಶಿವಮೊಗ್ಗ ಹಾಗೂ ಕೋಲಾರ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಇವರಿಗೆ ಆಹ್ವಾನ ನೀಡಿದ್ದಾರೆ.

    ಬಿಜೆಪಿ ಅಭ್ಯರ್ಥಿಗಳ ಪರ ಈಗಾಗಲೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಪ್ರಚಾರ ನಡೆಸುತ್ತಿದ್ದಾರೆ. ಈಗ ಕಾಂಗ್ರೆಸ್‌ ತಮಿಳುನಾಡು ನಾಯಕರ ಮೂಲಕ ಪ್ರಚಾರ ನಡೆಸಲು ಮುಂದಾಗಿದೆ.

  • ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

    ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

    ಚೆನ್ನೈ: ಬಿಜೆಪಿ (BJP) ನಾಯಕರಾಗಿ ಬದಲಾದ ಹಲವರು ನಟಿಯರ ಬಗ್ಗೆ ಡಿಎಂಕೆ (DMK) ವಕ್ತಾರ ಸೈದಾಯಿ ಸಾಧಿಕ್ (Saidai Sadiq) ಆಕ್ಷೇಪಾರ್ಹ ಹೇಳಿಕೆ ನೀಡಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡು ಬಿಜೆಪಿಯಲ್ಲಿರುವ ನಟಿ ಖುಷ್ಬು ಸುಂದರ್ (Khushbu Sundar), ನಮಿತಾ (Namitha), ಗೌತಮಿ (Gowthami), ಗಾಯತ್ರಿ ರಘುರಾಮ್‍ರನ್ನು ಐಟಂಗಳು ಎಂದು ಬಹಿರಂಗ ಸಮಾವೇಶವೊಂದಲ್ಲಿ ಸಾಧಿಕ್ ವ್ಯಾಖ್ಯಾನಿಸಿದ್ದಾರೆ.

    ತಮಿಳುನಾಡಲ್ಲಿ ಬಿಜೆಪಿ ತಳವೂರುತ್ತಿದೆ ಎಂದು ಖುಷ್ಬು ಹೇಳ್ತಾರೆ. ಅಮಿತ್ ಶಾ (Amit Shah) ನೆತ್ತಿಯ ಮೇಲೆ ಕೂದಲಾದರೂ ಬರಬಹುದು ಆದ್ರೆ, ಇಲ್ಲಿ ಕಮಲದ ವಿಕಸನ ಆಗಲ್ಲ. ಡಿಎಂಕೆಯನ್ನು ನಾಶ ಮಾಡಿ ಬಿಜೆಪಿ ಬಲಿಷ್ಠಗೊಳಿಸಲು ಇಂತವರೆಲ್ಲ ನೆರವಾಗ್ತಾರಾ? ಖಂಡಿತವಾಗಲೂ ಸಾಧ್ಯವಿಲ್ಲ. ನನ್ನ ಬ್ರದರ್ ಇಳಯ ಅರುಣ ಖುಷ್ಬುರನ್ನು ಎಷ್ಟೋ ಬಾರಿ ಭೇಟಿ ಮಾಡಿದ್ರು. ಅಂದ್ರೆ ನಾನು ಹೇಳೋದು, ಆಕೆ ಡಿಎಂಕೆಯಲ್ಲಿದ್ದಾಗ (DMK) ಆರು ಬಾರಿ ಸಮಾವೇಶಗಳಲ್ಲಿ ಮೀಟ್ ಮಾಡಿದ್ರು ಎಂದು ನಾನಾರ್ಥ ಬರುವಂತೆ ಮಾತನಾಡಿದ್ದಾರೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಜುಟ್ಟು ಹಿಡಿದು ರೋಗಿಯನ್ನು ಬೆಡ್ ಮೇಲೆ ಎಳೆದೊಯ್ದ ನರ್ಸ್ – ನಡೆದಿದ್ದೇನು ಗೊತ್ತಾ?

    ಸಾದಿಕ್ ಹೇಳಿಕೆ ಖಂಡಿಸಿ ಬಿಜೆಪಿ ಬೀದಿಗೆ ಇಳಿದಿದೆ. ನಟಿ ಖುಷ್ಬು ಟ್ವೀಟ್ ಮಾಡಿ, ಮಹಿಳೆಯರನ್ನು ಅಪಮಾನಿಸುವುದು ಹೊಸ ದ್ರಾವಿಡ ಮಾದರಿಯ ಭಾಗವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬೆನ್ನಲ್ಲೇ ಡಿಎಂಕೆ ನಾಯಕಿ ಕನಿಮೋಳಿ ಕ್ಷಮೆಯಾಚಿಸಿದ್ದಾರೆ. ನಾನೊಬ್ಬ ಮಹಿಳೆಯಾಗಿ, ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಹೇಳಿದ್ರೂ ಕ್ಷಮಿಸಲು ಸಾಧ್ಯವಿಲ್ಲ. ನನ್ನ ನಾಯಕ ಸ್ಟಾಲಿನ್, ನನ್ನ ಪಕ್ಷ ಡಿಎಂಕೆ ಇದನ್ನು ಎಂದಿಗೂ ಕ್ಷಮಿಸಲ್ಲ ಎಂದು ಕನಿಮೋಳಿ (Kanimozhi) ಟ್ವೀಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಮಹಿಳೆಯರನ್ನು ಐಟಂ ಎಂದು ಅವಹೇಳನಕಾರಿ ಎಂದು ಮುಂಬೈ ವಿಶೇಷ ಕೋರ್ಟ್ (Court) ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

  • 2ಜಿ ಸ್ಪೆಕ್ಟ್ರಮ್ ಹಗರಣ- ಎ. ರಾಜಾ, ಕನಿಮೋಳಿ ಸೇರಿದಂತೆ ಎಲ್ಲಾ 17 ಆರೋಪಿಗಳು ಖುಲಾಸೆ

    2ಜಿ ಸ್ಪೆಕ್ಟ್ರಮ್ ಹಗರಣ- ಎ. ರಾಜಾ, ಕನಿಮೋಳಿ ಸೇರಿದಂತೆ ಎಲ್ಲಾ 17 ಆರೋಪಿಗಳು ಖುಲಾಸೆ

    ನವದೆಹಲಿ: ದೇಶದ ಅತೀ ದೊಡ್ಡ, ಬಹು ಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ.

    ದೂರಸಂಪರ್ಕ ಇಲಾಖೆಯ ಮಾಜಿ ಸಚಿವ ಎ. ರಾಜಾ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮಗಳು ಕನಿಮೋಳಿ ಸೇರಿದಂತೆ 17 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

    ಪ್ರಕರಣದ ಅಂತಿಮ ಹಂತದ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯ ದಲ್ಲಿ ನವೆಂಬರ್‍ನಲ್ಲಿ ಆರಂಭಗೊಂಡಿತ್ತು. ಹಗರಣಕ್ಕೆ ಸಂಬಂಧಿಸಿದ ಒಟ್ಟು ಮೂರು ಪ್ರಕರಣಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ಪೈಕಿ ಒಂದು ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಮತ್ತೆರಡು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಿತ್ತು.

    ಎ. ರಾಜಾ ಅವರು ಸೆಲ್‍ಫೋನ್ ನೆಟ್‍ವರ್ಕ್‍ಗಳಿಂದ ಕಿಕ್‍ಬ್ಯಾಕ್ ಪಡೆದು ಏರ್‍ವೇವ್ಸ್ ಹಾಗೂ ಲೈಸೆನ್ಸ್ ನೀಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು 1.76 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಸಾಕ್ಷಾಧಾರಗಳ ಕೊರತೆಯಿಂದಾಗಿ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್, ಎ. ರಾಜಾ ವಿತರಿಸಿದ್ದ ಎಲ್ಲಾ ಲೈಸೆನ್ಸ್ ಗಳನ್ನ ರದ್ದು ಮಾಡಿತ್ತು.

    ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಹೊರಭಾಗದಲ್ಲಿ ಜಮಾಯಿಸಿದ್ದ 500ಕ್ಕೂ ಹೆಚ್ಚು ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ಇದು ನಮ್ಮ ನೈತಿಕ ವಿಜಯ ಎಂದು ಬಣ್ಣಿಸಿದೆ.