Tag: kanike hundi

  • ರಾಯರ ಹುಂಡಿಗೆ ಹರಿದು ಬಂತು ಕೋಟ್ಯಂತರ ರೂ. ಕಾಣಿಕೆ

    ರಾಯರ ಹುಂಡಿಗೆ ಹರಿದು ಬಂತು ಕೋಟ್ಯಂತರ ರೂ. ಕಾಣಿಕೆ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

    ಮೇ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ಒಟ್ಟು 2,27,42,499 ರೂ. ಸಂಗ್ರಹವಾಗಿದೆ. ಇನ್ನೂ ಸಂಗ್ರಹವಾದ ಕಾಣಿಕೆಯಲ್ಲಿ 5,14,735 ರೂಪಾಯಿ ನಾಣ್ಯಗಳು ಹಾಗೂ 2,22,27,764 ರೂಪಾಯಿ ನೋಟುಗಳಿವೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    31 ಗ್ರಾಂ ಬಂಗಾರ, 1660 ಗ್ರಾಂ ಬೆಳ್ಳಿಯಿದೆ. ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದು ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    /p>

  • ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ ಗಂಗಾವತಿಯ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಸಂಗ್ರಹಿಸಲು ಮುಂದಾಗಿದ್ರು. ನಂವೆಬರ್ 8 ರಂದು 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧವಾಗಿದೆ. ಆದ್ರೆ ಹುಂಡಿ ತೆಗೆದಾಗ ನಿಷೇಧಿತ 500 ರೂಪಾಯಿ ಹಾಗೂ ನಕಲಿ 2 ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಿದೆ.

    ಹುಂಡಿಯಲ್ಲಿ ಪತ್ತೆಯಾದ 2000 ಮುಖಬೆಲೆಯ ಹಾಗೂ ಹಳೇ 500 ರೂ. ನೋಟು ಮಕ್ಕಳು ಆಡುವ ಆಟಿಕೆ ನೋಟುಗಳಾಗಿವೆ. ಆಟಿಕೆಯ ಎರಡು ಸಾವಿರದ ನೋಟು ಗಾತ್ರದಲ್ಲಿ ಚಿಕ್ಕದಾಗಿದ್ದು, ಬಹುತೇಕ ಅಸಲಿ ನೋಟಿನ ವಿನ್ಯಾಸವನ್ನೇ ಹೋಲುತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಕ್ಕಳು ಹುಂಡಿಯಲ್ಲಿ ಆಟಿಕೆ ನೋಟುಗಳನ್ನು ಹಾಕಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹುಂಡಿಯಲ್ಲಿ ಒಟ್ಟು 38,770 ರೂಪಾಯಿ ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ್ ಮಾಹಿತಿ ನೀಡಿದ್ರು.