Tag: Kangana Ranauat

  • ‘ಅನಿಮಲ್’ ನಿರ್ದೇಶಕನ ಸಿನಿಮಾ ಆಫರ್‌ಗೆ ನೋ ಎಂದ ಕಂಗನಾ

    ‘ಅನಿಮಲ್’ ನಿರ್ದೇಶಕನ ಸಿನಿಮಾ ಆಫರ್‌ಗೆ ನೋ ಎಂದ ಕಂಗನಾ

    ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ‘ಅರ್ಜುನ್ ರೆಡ್ಡಿ’, ಇತ್ತೀಚಿನ ‘ಅನಿಮಲ್’ (Animal) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ. 900 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಸಂದೀಪ್ ನಿರ್ದೇಶನದ ವೈಖರಿ ನೋಡಿ ನಮ್ಮಗೂ ಅವರ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗಲಿ ಎಂದು ಕೆಲವು ನಟ-ನಟಿಯರು ಕಾಯ್ತಿದ್ದಾರೆ. ಇದರ ನಡುವೆ ಸಂದೀಪ್ ಕಡೆಯಿಂದ ಸಿಕ್ಕ ಆಫರ್‌ನ್ನು ಕಂಗನಾ ರಣಾವತ್ (Kangana Ranaut) ರಿಜೆಕ್ಟ್ ಮಾಡಿದ್ದಾರೆ.

    ಇತ್ತೀಚೆಗೆ ‘ಅನಿಮಲ್’ ಚಿತ್ರವನ್ನು ನೋಡಿದ ಬಳಿಕ ಕಂಗನಾ ಅವರು ತಮ್ಮ ಅನಿಸಿಕೆ ತಿಳಿಸಿದ್ದರು. ಈ ಸಿನಿಮಾ ಸ್ತ್ರಿ ವಿರೋಧಿಯಾಗಿದೆ ಎಂದು ಅವರು ಹೇಳಿದ್ದರು. ಕಂಗನಾ ಹೇಳಿಕೆಯನ್ನು ಸಂದೀಪ್ ಅವರು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಕಂಗನಾ ಅವರ ಪ್ರತಿಭೆಯ ಬಗ್ಗೆ ಸಂದೀಪ್‌ಗೆ ಅಭಿಮಾನ ಇದೆ. ಇದನ್ನೂ ಓದಿ:‘ರಿಚರ್ಡ್ ಆಂಟನಿ’ ಕುರಿತು ಅಪ್ ಡೇಟ್ ನೀಡಿದ ರಕ್ಷಿತ್ ಶೆಟ್ಟಿ

    ಅವಕಾಶ ಸಿಕ್ಕರೆ, ಪಾತ್ರಕ್ಕೆ ಕಂಗನಾ ಸೂಕ್ತ ಎನಿಸಿದರೆ ಅವರ ಬಳಿ ಹೋಗಿ ಕಥೆ ಹೇಳುತ್ತೇನೆ. ‘ಕ್ವೀನ್’ ಮತ್ತು ಇತರೆ ಸಿನಿಮಾಗಳಲ್ಲಿ ಅವರ ನಟನೆಯನ್ನು ನಾನು ಇಷ್ಟಪಟ್ಟಿದ್ದೇನೆ. ನನ್ನ ಚಿತ್ರದ ಬಗ್ಗೆ ಅವರು ನೆಗೆಟಿವ್ ಕಾಮೆಂಟ್ ಮಾಡಿದ್ದರೂ ನನಗೆ ಕೋಪ ಬರುವುದಿಲ್ಲ. ಒಟ್ಟಿನಲ್ಲಿ ಅವರ ಪರ್ಫಾರ್ಮೆನ್ಸ್ ನನಗೆ ನಿಜಕ್ಕೂ ಇಷ್ಟವಾಗಿದೆ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.

    ಅನಿಸಿಕೆ ಮತ್ತು ಟೀಕೆ ಎರಡು ಬೇರೆ ಬೇರೆ ಆಗಿರುತ್ತವೆ. ಎಲ್ಲ ಬಗೆಯ ಕಲೆ ಕೂಡ ವಿಮರ್ಶೆಗೆ ಮತ್ತು ಚರ್ಚೆಗೆ ಒಳಪಡಬೇಕು. ಅದು ಸಹಜವಾದ ವಿಷಯ. ಸಂದೀಪ್ ಅವರು ನನ್ನ ವಿಮರ್ಶೆಗೆ ಗೌರವ ನೀಡಿದ್ದು ನೋಡಿದರೆ ತಿಳಿಯುತ್ತದೆ. ಅವರು ಕೇವಲ ಗಂಡಸುತನದ ಸಿನಿಮಾ ಮಾಡುವುದಷ್ಟೇ ಅಲ್ಲ, ಅವರ ಆ್ಯಟಿಟ್ಯೂಡ್ ಕೂಡ ಹಾಗೆಯೇ ಇದೆ. ಧನ್ಯವಾದಗಳು ಸರ್. ಆದರೆ ನೀವು ನನಗೆ ಯಾವುದೇ ಪಾತ್ರ ನೀಡಬೇಡಿ. ನೀಡಿದರೆ ನಿಮ್ಮ ಆಲ್ಫಾ ಮೇಲ್ ಪಾತ್ರಗಳು ಸ್ತ್ರಿವಾದಿ ಆಗಿಬಿಡುತ್ತವೆ. ಆಗ ನಿಮ್ಮ ಸಿನಿಮಾಗಳು ಸೋಲುತ್ತವೆ. ನೀವು ಉತ್ತಮ ಸಿನಿಮಾ ಮಾಡುವವರು. ಇಂಡಸ್ಟ್ರಿಗೆ ನಿಮ್ಮ ಅಗತ್ಯ ಇದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ ‘ಅನಿಮಲ್’ ಪಾರ್ಟ್ 2 ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಅನಿಮಲ್ ಚಿತ್ರದಂತೆ ಪಾರ್ಟ್ 2 ಕೂಡ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ.

  • 100 ದಿನಗಳ ನಂತ್ರ ಮುಂಬೈಗೆ ಎಂಟ್ರಿ – ನನಗೆ ಯಾರ ಪರ್ಮಿಷನ್ ಬೇಕಿಲ್ಲ ಅಂದ ಕಂಗನಾ

    100 ದಿನಗಳ ನಂತ್ರ ಮುಂಬೈಗೆ ಎಂಟ್ರಿ – ನನಗೆ ಯಾರ ಪರ್ಮಿಷನ್ ಬೇಕಿಲ್ಲ ಅಂದ ಕಂಗನಾ

    ಮುಂಬೈ: ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ 104 ದಿನಗಳ ಬಳಿಕ ಮುಂಬೈಗೆ ಬಂದಿದ್ದು, ಇಂದು ನಗರದ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ಗಜಾನನ ದರ್ಶನ ಪಡೆದರು. ದೇವಾಲಯದಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಕಂಗನಾ ರಣಾವತ್, ನನಗೆ ಇಲ್ಲಿ ಬರಲು ಯಾರ ಅನುಮತಿಯೂ ಬೇಕಿಲ್ಲ. ಕೇವಲ ಗಣಪತಿ ಬಪ್ಪಾನ ಪರ್ಮಿಷನ್ ಬೇಕೆಂದು ಹೇಳುವ ಮೂಲಕ ಶಿವಸೇನೆ ನಾಯಕರಿಗೆ ಟಾಂಗ್ ಕೊಟ್ಟರು.

    ಇಂದು ಬೆಳಗ್ಗೆ ಸೋದರಿ ರಂಗೋಲಿ ಸಿದ್ಧಿವಿನಾಯಕ ಮಂದಿರಕ್ಕೆ ಆಗಮಿಸಿದ ಕಂಗನಾ ಪಕ್ಕಾ ಮರಾಠಿ ಮಹಿಳೆಯಂತೆ ಸೀರೆ ತೊಟ್ಟಿದ್ದರು. ಮೂಗಿಗೊಂದು ದೊಡ್ಡದಾದ ನತ್ತು, ಕೇಶಕ್ಕೆ ಪರಿಮಳ ಭರಿತ ಮಲ್ಲಿಗೆಯ ಸುತ್ತು, ಹಣೆಗೆ ಅಗಲವಾದ ಕುಂಕುಮ, ಪೈಥಾನಿ ಸೀರೆ ತೊಟ್ಟು ಬಂದಿದ್ದ ಕಂಗನಾ ಎಲ್ಲರ ಗಮನ ಸೆಳೆದರು. ದೇವಾಸ್ಥಾನದಿಂದ ಹೊರ ಬರುತ್ತಿದ್ದಂತೆ ಗಣಪತಿ ಬಪ್ಪಾ ಮೋರಾಯ, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದರು.

    ಸೋಮವಾರ ಮನಾಲಿಯಿಂದ ಸೋದರಿ ಜೊತೆ ಮುಂಬೈಗೆ ಬಂದಿಳಿದಿದ್ದ ಕಂಗನಾ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ದೇವಸ್ಥಾನಕ್ಕೆ ಕಂಗನಾ ಭೇಟಿ ನೀಡಿರುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

     

    View this post on Instagram

     

    A post shared by Viral Bhayani (@viralbhayani)

    ಸೆಪ್ಟೆಂಬರ್ 9ರಂದು ವೈ ಪ್ಲಸ್ ಭದ್ರತೆಯೊಂದಿಗೆ ಕಂಗನಾ ಮುಂಬೈಗೆ ಬಂದಿದ್ದರು. ಈ ವೇಳೆ ಬಿಎಂಸಿ ಕಂಗನಾ ಕಚೇರಿಯನ್ನ ಧ್ವಂಸಗೊಳಿಸಿತ್ತು. ನಂತರ ಐದು ದಿನಗಳ ಬಳಿಕ ಸೆಪ್ಟೆಂಬರ್ 14ರಂದು ಕಂಗನಾ ಮನಾಲಿಗೆ ಹಿಂದಿರುಗಿದ್ದರು. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಜೀವನಾಧರಿಸಿ ಸಿನಿಮಾ ತಲೈವಿಯಲ್ಲಿ ಕಂಗನಾ ನಟಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ತಲೈವಿ ಹಿಂದಿ, ತಮಿಳು ಮತ್ತು ತೆಲಗು ಭಾಷೆಯಲ್ಲಿ ರಿಲೀಸ್ ಆಗಲಿದೆ.

     

    View this post on Instagram

     

    A post shared by Viral Bhayani (@viralbhayani)

  • ಜಯಲಲಿತಾ ಪಾತ್ರದಲ್ಲಿ ಲೀನಳಾಗಿದ್ದೆ – ತಲೈವಿ ಶೂಟಿಂಗ್‌ ಕಂಪ್ಲೀಟ್‌

    ಜಯಲಲಿತಾ ಪಾತ್ರದಲ್ಲಿ ಲೀನಳಾಗಿದ್ದೆ – ತಲೈವಿ ಶೂಟಿಂಗ್‌ ಕಂಪ್ಲೀಟ್‌

    ಮುಂಬೈ: ಬಹುನೀರಿಕ್ಷಿತ ತಲೈವಿ ಸಿನಿಮಾದ ಚಿತ್ರೀಕರಣದ ಶೂಟಿಂಗ್ ಮುಗಿಸಿರುವ ಸಂತೋಷವನ್ನು ಕಂಗನಾ ರಣಾವತ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ಹೈದ್ರಾಬಾದ್‍ನಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಸಿನಿಮಾ ತಂಡ ಇಂದು ಚಿತ್ರೀಕರಣವನ್ನು ಪೂರ್ಣಪ್ರಮಾಣದಲ್ಲಿ ಮುಗಿಸಿದೆ. ಈ ಬಗ್ಗೆ ಕಂಗನಾ ರಣಾವತ್ ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

    ತಲೈವಿ ಸಿನಿಮಾವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಸಂಪೂರ್ಣವಾಗಿ ತಲೈವಿ ಪಾತ್ರದಲ್ಲಿ ಲೀನಳಾಗಿಬಿಟ್ಟಿದ್ದೆ. ಆದರೆ ಎಲ್ಲಾ ಒಳ್ಳೆಯ ಕ್ಷಣಗಳಿಗೆ ಅಂತ್ಯ ಇದ್ದೇ ಇರುತ್ತದೆ. ಈಗ ಬೈ ಹೇಳುವ ಸಮಯ ಬಂದಾಗಿದೆ. ಇಂಥಹ ಒಂದು ಅದ್ಭುತವಾದ ಪಾತ್ರ ನಿರ್ವಹಿಸಲು ಅವಕಾಶ ಒಮ್ಮೆ ಮಾತ್ರವೇ ಸಿಗುತ್ತದೆ. ಈ ಅವಕಾಶವನ್ನು ಕೊಟ್ಟ ನಿರ್ದೇಶಕ ಎಲ್.ಎ ವಿಜಯ್, ಶೈಲೇಶ್ ಆರ್ ಸಿಂಗ್ ಸೇರಿದಂತೆ ಹಲವರಿಗೆ ಧನ್ಯವಾದ ಹೇಳಿ ಕಂಗನಾ ಟ್ವಿಟ್ ಮಾಡಿದ್ದಾರೆ.

    ತಲೈವಿ ಸಿನಿಮಾವು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಜೀವನ ಕತೆಯಾಧಾರಿತ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಜಯಲಲಿತಾ ಪಾತ್ರವನ್ನು ಕಂಗನಾ ನಿರ್ವಹಿಸುತ್ತಿದ್ದಾರೆ. ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳುತ್ತಿದ್ದಾರೆ.

  • ನಾಚಿಕೆ ಆಗ್ಬೇಕು, ನಾನು ನಿಮ್ಮ ಮಗನ ವಯಸ್ಸಿನವಳು: ಠಾಕ್ರೆಗೆ ಕಂಗನಾ ತಿರುಗೇಟು

    ನಾಚಿಕೆ ಆಗ್ಬೇಕು, ನಾನು ನಿಮ್ಮ ಮಗನ ವಯಸ್ಸಿನವಳು: ಠಾಕ್ರೆಗೆ ಕಂಗನಾ ತಿರುಗೇಟು

    – ಸಿಎಂ ಸ್ಥಾನದಲ್ಲಿರಲು ಠಾಕ್ರೆ ಯೋಗ್ಯರಲ್ಲ
    – ನಿಮ್ಮ ಕೊಳಕು ಭಾಷಣ, ಅಯೋಗ್ಯತನದ ಪ್ರತೀಕ

    ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮತ್ತೆ ಮುನ್ನಲೆಗೆ ಬಂದಿದೆ. ಭಾನುವಾರ ದಸರಾ ಸಮಾವೇಶದಲ್ಲಿ ಸಿಎಂ ನೀಡಿದ ಹೇಳಿಕೆಯನ್ನ ಖಂಡಿಸಿರುವ ಮಣಿಕರ್ಣಿಕಾ ಸಾಲು ಸಾಲು ಟ್ವೀಟ್ ಗಳ ಮೂಲಕ ತಿರುಗೇಟು ನೀಡಿದ್ದಾರೆ.

    ಸಂಜಯ್ ರಾವತ್ ನನ್ನನ್ನು ಹರಾಮ್‍ಕೋರ್ ಅಂದ, ಉದ್ಧವ್ ನನಗೆ ನಮಕ್ ಹರಾಮ್ ಅಂತ ಹೇಳಿದ್ದಾನೆ. ಮುಂಬೈನಲ್ಲಿ ನನಗೆ ಆಶ್ರಯ ಸಿಗದಿದ್ರೆ ನನಗೆ ಊಟವೇ ಸಿಗುತ್ತಿರಲಿಲ್ಲ ಅಂತಾ ಹೇಳ್ತಿದ್ದಾರೆ. ನಿಮಗೆ ನಾಚಿಕೆ ಆಗಬೇಕು, ನಾನು ನಿಮ್ಮ ಮಗನ ವಯಸ್ಸಿನ ಸ್ವಾವಲಂಭಿ ಮಹಿಳೆ. ನಿಮ್ಮ ವ್ಯಕ್ತಿತ್ವವನ್ನ ನೀವು ನೀಡಿದ ಹೇಳಿಕೆಗಳು ತೋರಿಸುತ್ತಿವೆ. ಸ್ವಜನಪಕ್ಷಪಾತದ ಅತಿ ಕೆಟ್ಟ ಉತ್ಪನ್ನವೇ ಮುಖ್ಯಮಂತ್ರಿ ಠಾಕ್ರೆ ಎಂದು ಕಂಗನಾ ಮತ್ತೆ ಏಕವಚನದಲ್ಲಿ ಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಕಂಗನಾಗೆ ಎದುರಾಯ್ತು ಮತ್ತೊಂದು ಕಂಟಕ – 10 ದಿನದಲ್ಲಿ 3 ಎಫ್‍ಐಆರ್

    ಹಿಮಾಲಯದ ಸುಂದರತೆಯನ್ನ ಎಲ್ಲ ಭಾರತೀಯರು ಅನುಭವಿಸಬಹುದು. ಹಾಗೆಯೇ ಮುಂಬೈನಲ್ಲಿರುವ ಕೆಲಸಗಳು ನಮ್ಮೆಲ್ಲರಿಗಾಗಿ ಇವೆ. ಎರಡೂ ನನ್ನ ಮನೆಗಳು. ಪ್ರಜಾಪ್ರಭುತ್ವದಲ್ಲಿ ನೀವು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಡಿ. ನಿಮ್ಮ ಕೊಳಕು ಭಾಷಣ, ನಿಮ್ಮ ಅಯೋಗ್ಯತೆಯ ಮಟ್ಟದ ಪ್ರದರ್ಶನವಾಗಿದೆ ಎಂದು ಕಂಗಣಾ ಟೀಕಿಸಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ 

    ಮುಖ್ಯಮಂತ್ರಿಯಾಗಿರುವ ಉದ್ಧವ್ ಠಾಕ್ರೆ ತನ್ನನ್ನು ತಾನು ಮಹಾರಾಷ್ಟ್ರದ ಗುತ್ತಿಗೆದಾರ ಅಂದುಕೊಂಡು ದೇಶದ ವಿಭಜನೆ ಮಾಡುತ್ತಿದ್ದಾನೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಕೇವಲ ಜನರ ಸೇವಕ, ಸರ್ವಾಧಿಕಾರಿ ಅಲ್ಲ. ಸಿಎಂ ಸ್ಥಾನ ಬದಲಾಗುತ್ತಿರುತ್ತದೆ, ಆದ್ರೆ ಠಾಕ್ರೆ ಮಹಾರಾಷ್ಟ್ರ ಕೇವಲ ತನ್ನದೇ ಎಂಬ ರೀತಿ ವರ್ತಿಸುತ್ತಿರೋದು ಏಕೆ ಎಂದು ಕಂಗನಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶದಂತೆ ತುಮಕೂರಲ್ಲಿ ಕಂಗನಾ ವಿರುದ್ಧ ಎಫ್‍ಐಆರ್

    ಸಿಎಂ ಠಾಕ್ರೆ ಹೇಳಿದ್ದೇನು?: ಕೆಲಸ ಅರಸಿಕೊಂಡು ಬಂದ ಕೆಲವರು ಮುಂಬೈಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ. ತಮ್ಮ ರಾಜ್ಯದಲ್ಲಿ ಸರಿಯಾಗಿ ಊಟ ಸಿಗದಕ್ಕೆ ಇಲ್ಲಿಗೆ ಬಂದಿರುತ್ತಾರೆ ಎಂದು ಕಂಗನಾ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

    ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಒಂದು ವರ್ಷವಾಯ್ತು. ಅಂದಿನಿಂದ ಇಂದಿನವರೆಗೂ ಕೆಲವರು ಸರ್ಕಾರ ಪತನವಾಗುತ್ತೆ ಅಂತ ಹೇಳುತ್ತಿದ್ದಾರೆ. ನಿಮಗೆ ತಾಕತ್ತು ಇದ್ರೆ ನಮ್ಮ ಸರ್ಕಾರ ಬೀಳಿಸಿ ಎಂದು ನಾನು ನಿಮಗೆ ಬಹಿರಂಗವಾಗಿ ಸವಾಲು ಹಾಕುತ್ತೇನೆ. ಕೆಲವರು ರಾಜ್ಯದಲ್ಲಿ ದೇವಸ್ಥಾನಗಳನ್ನು ತೆಗೆಯದಿರುವುದಕ್ಕೆ ಬಾಳಾ ಠಾಕ್ರೆ ಮತ್ತು ನನ್ನ ಹಿಂದುತ್ವ ಬೇರೆ ಎಂದು ಹೇಳುತ್ತಿದ್ದಾರೆ. ನಿಮ್ಮ ಹಿಂದುತ್ವ ಅಂದ್ರೆ ಗಂಟೆ ಬಾರಿಸುವುದು ಮತ್ತು ಭಜನೆ ಮಾಡೋದು ಎಂದರ್ಥ. ನಾವು ಇಷ್ಟು ಚಿಕ್ಕದಾಗಿ ಹಿಂದುತ್ವ ವ್ಯಾಖ್ಯಾನ ಮಾಡಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿಗೆ ಹೆಸರು ಹೇಳದೇ ತಿರುಗೇಟು ನೀಡಿದ್ದರು. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ