Tag: kanatara film

  • ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಸ್ಯಾಂಡಲ್‌ವುಡ್ ನಟ ಚೇತನ್(Actor Chetan) ಇತ್ತೀಚೆಗೆ `ಕಾಂತಾರ’ (Kantara Film) ಸಿನಿಮಾ ನೋಡಿ, ವಿವಾದಾತ್ಮಕ ಹೇಳಿಕೆ ನೀಡಿದ್ದರು. ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಅವರ ಹೇಳಿಕೆಗೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಪ್ರತಿಕ್ರಿಯೆ ನೀಡಿದ್ದಾರೆ. ಪಬ್ಲಿಕ್ ಟಿವಿ ಡಿಜಿಟಲ್‌ಗೆ ಈ ಕುರಿತು ಮಾತನಾಡಿದ್ದಾರೆ.

    ಸದಾ ವಿವಾದಾತ್ಮಕ ಹೇಳಿಕೆಯ ಮೂಲಕ ಸದ್ದು ಮಾಡುವ ನಟ ಚೇತನ್ ಇದೀಗ ಭೂತಾರಾಧನೆ ಕುರಿತಾಗಿ ನೀಡಿರುವ ಹೇಳಿಕೆಯಿಂದ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ `ಕಾಂತಾರ’ (Kantara Film) ಚಿತ್ರದಲ್ಲಿ ಫ್ಯಾಷನ್ ಡಿಸೈನರ್ ಆಗಿ ಪ್ರಗತಿ ಶೆಟ್ಟಿ ಕೆಲಸ ಮಾಡಿದ್ದಾರೆ. ಚೇತನ್ ವಿವಾದದ ಕುರಿತು ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ದೇವರು ಮೆಚ್ಚೋದಿಲ್ಲ ಎಂದು ಸಾನ್ಯ ವಿರುದ್ಧ ರಾಂಗ್ ಆದ ಸಂಬರ್ಗಿ

    ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಜನಗಳೇ ಇದಕ್ಕೆ ಉತ್ತರ ಕೊಡ್ತಿದ್ದಾರೆ. ಆ ಉತ್ತರ ಕೊಡಬೇಕೋ ಅವರೇ ಕೊಡುತ್ತಾರೆ ಎಂದು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಚೇತನ್ ವಿವಾದದ ಕುರಿತು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • BREAKING:`ಕಾಂತಾರ’ ಪಾರ್ಟ್ 2 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ನಟ ಪ್ರಮೋದ್ ಶೆಟ್ಟಿ

    BREAKING:`ಕಾಂತಾರ’ ಪಾರ್ಟ್ 2 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ನಟ ಪ್ರಮೋದ್ ಶೆಟ್ಟಿ

    ಚಿತ್ರರಂಗದ ದಶದಿಕ್ಕುಗಳಲ್ಲೂ ಸೌಂಡ್ ಮಾಡುತ್ತಿರೋದು ಸದ್ಯ ಒಂದೇ ಹೆಸರು `ಕಾಂತಾರ'(Kantara Film) ಸಿನಿಮಾ. ತುಳುನಾಡಿನ ದೈವದ ಕಥೆಗೆ ದೇವರ ಆರಾಧನೆಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಈ ಚಿತ್ರದ ಸೀಕ್ವೇಲ್ ಬರುತ್ತಾ ಎಂದು ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್ಗೆ `ಕಾಂತಾರ’ ಚಿತ್ರದ ನಟ ಪ್ರಮೋದ್ ಶೆಟ್ಟಿ (Pramod Shetty) ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಭೂತಕೋಲದ ಮಹತ್ವ ಸಾರುವ ಕಥೆಯನ್ನ ಅಚ್ಚುಕಟ್ಟಾಗಿ ರಿಷಬ್ ಶೆಟ್ಟಿ ತೆರೆಯ ಮೇಲೆ ತೋರಿಸಿ, ಸೈ ಎನಿಸಿಕೊಂಡಿದ್ದಾರೆ. ನಿರ್ದೇಶನದ ಜೊತೆ ನಟನೆಯನ್ನ ಮಾಡಿ ಗೆದ್ದಿದ್ದಾರೆ. ಕಾಂತಾರ ಚಿತ್ರ ನೋಡಿ ಅದೆಷ್ಟೋ ಜನ ಅಭಿಮಾನಿಗಳು ಇದರ ಸೀಕ್ವೇಲ್ ಬಂದ್ರೆ ಚೆನ್ನಾಗಿರುತ್ತದೆ ಎಂದು ಆಸೆಪಟ್ಟಿದ್ದರು. ಅದರಂತೆಯೇ `ಕಾಂತಾರ ಪಾರ್ಟ್ 2′(Kantara 2) ಬರುವುದರ ಬಗ್ಗೆ ಪ್ರಮೋದ್ ಶೆಟ್ಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ʻಕಾಂತಾರʼ ಸಿನಿಮಾ ನೋಡದ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಪ್ರತಿಕ್ರಿಯೆ

    `ಕಾಂತಾರ’ ಸಿನಿಮಾದಲ್ಲಿ ರಿಷಬ್ ಮುಂದೆ ಟಕ್ಕರ್ ಕೊಟ್ಟ ಖಡಕ್ ವಿಲನ್ ಪ್ರಮೋದ್ ಶೆಟ್ಟಿ ಅವರಿಗೂ ಭರ್ಜರಿ ಆಫರ್ಸ್ ಅರಸಿ ಬರುತ್ತಿದೆ. ಇದೀಗ ಮಲಯಾಳಂ(Malyalam) ಚಿತ್ರರಂಗದತ್ತ ಮುಖ ಮಾಡಿರುವ ನಟ ಪ್ರಮೋದ್, ಕಾಂತಾರ ಸೀಕ್ವೇಲ್ ಬರಲಿದೆ ಎಂಬ ಬಿಗ್ ಅಪ್‌ಡೇಟ್ ಕೊಟ್ಟಿದ್ದಾರೆ.

    ಸಿನಿಮಾ ಎಂಡ್ ಆಗಿರುವ ರೀತಿ ನೋಡಿದ್ರೆ, ಎಲ್ಲರೂ ಪಾರ್ಟ್ 2 ಬರುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೌದು.. ಕಾಂತಾರ ಪಾರ್ಟ್ 2 ತೆರೆಯ ಮೇಲೆ ಬರಲಿದೆ ಎಂದು ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ. ರಿಷಬ್ ತಲೆಯಲ್ಲಿ ಯಾವ ತರಹ ಕಥೆ ಓಡುತ್ತಿದೆ ಗೊತ್ತಿಲ್ಲ. ಸದ್ಯ ಅವರು ಬ್ಯುಸಿಯಿದ್ದಾರೆ. ಇನ್ನೂ ಈ ಕುರಿತು ರಿಷಬ್ ಶೆಟ್ಟಿ ಅವರು ಬಿಗ್ ಅಪ್‌ಡೇಟ್ ಕೊಡಲಿದ್ದಾರೆ ಎಂದು ಸಹನಟ ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]