Tag: kanakpura

  • ಕನಕಪುರದಲ್ಲಿ ಮತ್ತೆ ಮತಾಂತರ ಸದ್ದು – ಪೊಲೀಸರಿಂದ 10ಕ್ಕೂ ಹೆಚ್ಚು ಮಂದಿ ವಿಚಾರಣೆ

    ಕನಕಪುರದಲ್ಲಿ ಮತ್ತೆ ಮತಾಂತರ ಸದ್ದು – ಪೊಲೀಸರಿಂದ 10ಕ್ಕೂ ಹೆಚ್ಚು ಮಂದಿ ವಿಚಾರಣೆ

    ರಾಮನಗರ: ಜಿಲ್ಲೆಯ ಕನಕಪುರದಲ್ಲಿ 10ಕ್ಕೂ ಹೆಚ್ಚು ಬಡ ಜನರನ್ನು ಟಾರ್ಗೆಟ್ ಮಾಡಿ, ಅವರೆಲ್ಲರನ್ನು ಮತಾಂತರಕ್ಕೆ (Conversion) ಯತ್ನಿಸಿದ ಆರೋಪ ಬಂದಿದೆ.

    ಕನಕಪುರ (Kanakpura) ಪಟ್ಟಣದ ನವಾಜಿಬಾರೆ ಬಡಾವಣೆಯ ಮನೆಯೊಂದರಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಮತಾಂತರ ಮಾಡಲಿ ಕೆಲ ಕ್ರೈಸ್ತ ಸಮುದಾಯದವರು ಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನು ತಡರಾತ್ರಿ ಮತಾಂತರ ಮಾಡಲು ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನೆಯ (Sri Ram Sena) ಮುಖಂಡರು ಟೌನ್ ಪೊಲೀಸರಿಗೆ (Police) ದೂರು ನೀಡಿದ್ದರು.

    ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಕನಕಪುರ ಟೌನ್ ಪೊಲೀಸರು 12 ಮಂದಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಎಲ್ಲರ ಮಾಹಿತಿ ಕಲೆಹಾಕಿ ಬಳಿಕ ವಾಪಸ್ ಕಳುಹಿಸಿದ್ದಾರೆ.

    ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್ ಮಾತನಾಡಿ, ಬಡ ಕುಟುಂಬಗಳನ್ನು ಗುರಿಯಾಗಿಸಿ ಮಾಡುತ್ತಿರುವ ಇಬ್ಬರು ಕ್ರೈಸ್ತ ಸಮುದಾಯದ ಮುಖಂಡರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಗಿಲ್ಲ ಎಂದು ಕಿಡಿಕಾರಿದರು.

    ಘಟನೆಗೆ ಸಂಬಂಧಿಸಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಪ್ರತಿಕ್ರಿಯಿಸಿ, ಮತಾಂತರ ಆಗಬಾರದು ಅಂತಲೇ ಕಾಯ್ದೆಯನ್ನು ತರಲಾಗಿದೆ. ಧರ್ಮದ ಬದಲಾವಣೆಗೆ ಅವಕಾಶ ಕೊಡಬಾರದು. ಜನತೆಯ ಭಾವನೆಗೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆ ರೀತಿ ಮತಾಂತರದಲ್ಲಿ ತೊಡಗಿದ್ದರೆ ಕಾನೂನಿನ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ

    ಕನಕಪುರ ಭಾಗದಲ್ಲಿ ಈ ರೀತಿ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನಿಂದಲೂ ಮತಾಂತರ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕಪಾಲಿ ಬೆಟ್ಟದ ಯೇಸು ಪ್ರತಿಮೆ ವಿಚಾರ ಇನ್ನೂ ಕೋರ್ಟ್‍ನಲ್ಲಿ ಇರುವಾಗಲೇ ಪಡಿತರ ಚೀಟಿ ಮೂಲಕ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ : ಅಧಿಕೃತ ಆಹ್ವಾನವಿಲ್ಲ, ಹೋಗಲ್ಲ ಎಂದ ಸಿದ್ಧರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಡಿಕೆಶಿ ರಾಜಕೀಯ ಸಾಮರ್ಥ್ಯ ಕನಕಪುರಕಷ್ಟೆ: ಸಿಟಿ ರವಿ

    ಡಿಕೆಶಿ ರಾಜಕೀಯ ಸಾಮರ್ಥ್ಯ ಕನಕಪುರಕಷ್ಟೆ: ಸಿಟಿ ರವಿ

    ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ. ಆದರೆ, ಅವರ ರಾಜಕೀಯ ಸಾಮರ್ಥ್ಯ ಕೇವಲ ಕನಕಪುರಕಷ್ಟೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದರು.

    ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, 2022 ಆಗಸ್ಟ್ ಬಳಿಕ ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡುತ್ತದೆ ಎಂದು ಹೇಳಿದ್ದರು. ಡಿಕೆಶಿಯವರ ಈ ಹೇಳಿಕೆಗೆ ನಗರದ ಸಿಂಡಿಕೇಟ್ ಸರ್ಕಲ್‍ನಲ್ಲಿ ಮಾತನಾಡಿದ ಅವರು, ದೇಶದ ಜನರೇ ಕಾಂಗ್ರೆಸನ್ನು ಟಾರ್ಗೆಟ್ ಮಾಡಿದ್ದಾರೆ. ನಮಗೆ ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯ ಮಾಡಿದರು.

    ಡಿ.ಕೆ.ಶಿವಕುಮಾರ್ ಅವರು, ತಮ್ಮನ್ನು ತಾವು ವೈಭವೀಕರಿಸಿಕೊಳ್ಳಬಹುದು. ನಾನು ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ. ಪ್ರಶ್ನೆ ಮಾಡಲ್ಲ. ಆದರೆ, ಅವರ ರಾಜಕೀಯ ಸಾಮರ್ಥ್ಯ ಸಾಬೀತು ಮಾಡಿರೋದು ಕೇವಲ ಕನಕಪುರದಲ್ಲಷ್ಟೆ ಎಂದ ಅವರು, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

    ಒಂದು ರಾಜಕೀಯ ಪಕ್ಷದಲ್ಲಿ ಇದ್ದೇನೆ ಎಂದು ಶೆಲ್ಟರ್ ತೆಗೆದುಕೊಳ್ಳಲು ಆಗುವುದಿಲ್ಲ. ತಪ್ಪು ಮಾಡದೆ ಜೈಲಿಗೆ ಹೋದರೆ ಅದೊಂದು ಶಕ್ತಿಯಾಗುತ್ತದೆ. ತಪ್ಪು ಮಾಡಿದವರದ್ದು ರಾಜಕೀಯ ಅಂತ್ಯವಾಗುತ್ತದೆ ಎಂದು ಹೇಳಿದರು.

    ಬಿಜೆಪಿಗೆ ಡಿಕೆಶಿಯವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ದೇಶದ ಜನರೇ ಕಾಂಗ್ರೆಸನ್ನು ಟಾರ್ಗೆಟ್ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಮೈ ಲಡಕಿ ಹೂಂ, ಲಡ್ ಸಕ್ತಾ ಹೈ ಹೇ ಎಂದು ಪ್ರಿಯಾಂಕ ಗಾಂಧಿ ಅವರೇ ಚುನಾವಣೆ ನೇತೃತ್ವ ವಹಿಸಿದ್ದರು. ಅದು ಏನಾಯ್ತು. 387 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿತು ಎಂದು ಕಾಂಗ್ರೆಸ್ ಕಾಲೆಳೆದರು. ಇದನ್ನೂ ಓದಿ: ರೈತ ಸಂಘದಿಂದ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ

    ಕಾಂಗ್ರೆಸ್ ಅವರೇ ಅಧಿಕಾರದಲ್ಲಿದ್ದ ಪಂಜಾಬ್‍ನಲ್ಲಿ ಹೀನಾಯವಾಗಿ ಸೋತರು. ಆಮ್ ಆದ್ಮಿ ಪಕ್ಷಕ್ಕೆ ರೆಡ್ ಕಾರ್ಪೆಟ್ ಹಾಸಿ ಕಕೊರ್ಂಡ್ ಬಂದು ಕೂರಿಸಿದ್ದಾರೆ. ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡಿರುವಾಗ, ಡಿಕೆಶಿ ಟಾರ್ಗೆಟ್ ಮಾಡಿ ಏನಾಗಬೇಕೆಂದು ಪ್ರಶ್ನಿಸಿದರು. ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!