Tag: Kanakpur

  • ಒಂದೇ ದಿನ ಪ್ರಚಾರಕ್ಕೆ ಹೋಗಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆದ್ದ ಡಿಕೆಶಿ

    ಒಂದೇ ದಿನ ಪ್ರಚಾರಕ್ಕೆ ಹೋಗಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆದ್ದ ಡಿಕೆಶಿ

    ಬೆಂಗಳೂರು: ಕನಕಪುರ (Kanakapura) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿಕೆ ಶಿವಕುಮಾರ್ (DK Shivakumar) 1 ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಈ ಬಾರಿ ಡಿಕೆ ಶಿವಕುಮಾರ್ ಅವರನ್ನು ಸೋಲಿಸಲು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡಿತ್ತು. ಈ ಹಿನ್ನೆಲೆಯಲ್ಲೇ ಬಿಜೆಪಿಯ (BJP) ಪ್ರಮುಖ ನಾಯಕ ಆರ್. ಅಶೋಕ್ (R Ashok) ಅವರನ್ನು ಕನಕಪುರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ ಡಿಕೆ ಶಿವಕುಮಾರ್ ಬಿಜೆಪಿಗೆ ತಿರುಗೇಟು ನೀಡಿ, ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದರು.

    ಅದಾದ ಬಳಿಕವೂ ಡಿಕೆಶಿ ಮಾತಿನಂತೆ ನಡೆದುಕೊಂಡಿದ್ದು, ಪ್ರಚಾರದ ಕೊನೆಯ ದಿನವಷ್ಟೇ ಕನಕಪುರ ಕ್ಷೇತ್ರಕ್ಕೆ ಬಂದು ಭರ್ಜರಿ ಪ್ರಚಾರ ನಡೆಸಿದ್ದರು. ಇದೀಗ ಕನಕಪುರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮತದಾರರು ಡಿಕೆಶಿಯ ಕೈಹಿಡಿದಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates

    ಕನಕಪುರ ಕ್ಷೇತ್ರದಲ್ಲಿ ಬಿಜೆಪಿಯ ಆರ್. ಅಶೋಕ್ ಹಾಗೂ ಜೆಡಿಎಸ್‍ನ (JDS) ಬಿ. ನಾಗರಾಜು ವಿರುದ್ಧ ಡಿಕೆ ಶಿವಕುಮಾರ್ ಸ್ಪರ್ಧಿಸಿದ್ದರು. ಆರ್. ಅಶೋಕ್ 3ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ನಾನು ಜೈಲಲ್ಲಿದ್ದಾಗ ಸೋನಿಯಾ ಗಾಂಧಿ ಭೇಟಿಯಾಗಲು ಬಂದಿದ್ದನ್ನು ಎಂದೂ ಮರೆಯಲ್ಲ: ಡಿಕೆಶಿ ಭಾವುಕ

  • ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬಿಗ್ ಬಾಸ್ ಓಟಿಟಿಯ (Bigg Boss OTT) ಆವೃತ್ತಿಯಲ್ಲಿ ಆಯ್ಕೆಯಾಗಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ (Aryavardhan Guruji), ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ (Rupesh Shetty) ಇನ್ನೂ ತಮ್ಮ ತಮ್ಮ ಮನೆ ತಲುಪಿಲ್ಲ. ಸದ್ಯಕ್ಕೆ ಅವರು ತಲುವುದೂ ಇಲ್ಲ. ಅಂದು ಓಟಿಟಿ ಫಿನಾಲೆ ಮುಗಿದ ತಕ್ಷಣವೇ ಈ ನಾಲ್ವರನ್ನೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅವರು ದಿನಗಳನ್ನು ಕಳೆಯುತ್ತಿದ್ದಾರೆ. ಸೆ.24ರವರೆಗೂ ಅವರು ಈಗಿರುವ ಸ್ಥಳದಲ್ಲೇ ಇರಬೇಕಾಗಿದೆ.

    ಈ ಮೊದಲು ಬೆಂಗಳೂರಿನ (Bangalore) ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಆ ನಾಲ್ವರನ್ನೂ ಇಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಸಲಿಯಾಗಿ ಅವರು ಇರುವುದು ಬೆಂಗಳೂರು ಕನಕಪುರ (Kanakpur) ರಸ್ತೆಯಲ್ಲಿರುವ ರೆಸಾರ್ಟ್ ವೊಂದರಲ್ಲಿ ಎಂದು ಗೊತ್ತಾಗಿದೆ. ಯಾರ ಸಂಪರ್ಕಕ್ಕೂ ಸಿಗದೇ ಇರುವ ರೀತಿಯಲ್ಲಿ ಅವರನ್ನು ರೆಸಾರ್ಟ್ನಲ್ಲಿ ಇಡಲಾಗಿದ್ದು, ಬಿಗ್ ಬಾಸ್ ಸೀಸನ್ 9 ವೇದಿಕೆಯ ಮೇಲೆಯೇ ಈ ನಾಲ್ವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಬೆಂಗಳೂರು ಕನಪುರ ರಸ್ತೆಯಲ್ಲಿನ ಪೈಪ್ ಲೈನ್ ರೋಡಿನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ (Resort) ನಾಲ್ವರು ಇದ್ದರು, ಅವರನ್ನು ಯಾರಿಂದಲೂ ಸಂಪರ್ಕಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ, ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಕಾವೇರಿ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸುಲಭಕ್ಕೆ ಹೋಗುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿ ಆ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

    ಈ ಮಧ್ಯೆಯೂ ನಿನ್ನೆ ಸಾನ್ಯ ಐಯ್ಯರ್ ಅವರ ಹುಟ್ಟು ಹಬ್ಬವನ್ನು ಅದೇ ರೆಸಾರ್ಟ್ ನಲ್ಲಿ ಆಚರಿಸಲಾಗಿದೆ. ರೂಪೇಶ್, ರಾಕೇಶ್ ಅಡಿಗ (Rakesh Adiga) ಮತ್ತು ಆರ್ಯವರ್ಧನ್ ಗುರೂಜಿ ಕೇಕ್ ತರಿಸಿ, ಸಾನ್ಯ (Sanya Iyer) ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಈ ನಾಲ್ವರು ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ ಎನ್ನುವುದು ಮತ್ತೊಂದು ಮಾಹಿತಿ.

    Live Tv
    [brid partner=56869869 player=32851 video=960834 autoplay=true]