Tag: Kanakapura Constituency

  • ಕನಕಪುರ ಕ್ಷೇತ್ರದ ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ- ಸಿಎಂ ಹೇಳಿದ್ರೂ ಟ್ರಾನ್ಸ್‌ಫರ್‌ಗೆ ತಡೆ

    ಕನಕಪುರ ಕ್ಷೇತ್ರದ ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ- ಸಿಎಂ ಹೇಳಿದ್ರೂ ಟ್ರಾನ್ಸ್‌ಫರ್‌ಗೆ ತಡೆ

    ರಾಮನಗರ: ನೂತನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಶಿಕ್ಷಣ ಇಲಾಖೆಯಲ್ಲಿ ಕಳೆದ ಕೆಲ ವರ್ಷಗಳಿಂದ ನಿಂತಿದ್ದ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಶಿಕ್ಷಣ ಇಲಾಖೆಯ (Education Department) ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಕೌನ್ಸಿಲಿಂಗ್ ಮೂಲಕ 30 ಸಾವಿರಕ್ಕೂ ಅಧಿಕ ಶಿಕ್ಷಕರ ವರ್ಗಾವಣೆಗೆ ಕಳೆದ ಜೂನ್‍ನಲ್ಲಿ ಕೌನ್ಸಿಲಿಂಗ್ ನಡೆದಿತ್ತು.

    ಕೌನ್ಸಿಲಿಂಗ್‍ನಲ್ಲಿ ತಮಗೆ ಬೇಕಾದ ಊರುಗಳಿಗೆ ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡಿದ್ರು. ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿದ ಸರ್ಕಾರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಂಡು 43 ಸಾವಿರ ಅತಿಥಿ ಶಿಕ್ಷಕರ ನೇಮಕವನ್ನ ಸಹ ಮಾಡಿಕೊಂಡಿದೆ. ಇದರಿಂದ ಕನಿಷ್ಠ 10 ವರ್ಷಗಳ ಕಾಲ ಒಂದೇ ಕಡೆ ಸೇವೆ ಸಲ್ಲಿಸಿದ್ದ ತಮ್ಮ ಊರು ಕುಟುಂಬವನ್ನ ಬಿಟ್ಟಿದ್ದ ಶಿಕ್ಷಕರು ತಮಗೆ ಬೇಕಾದ ಜಾಗಗಳಿಗೆ ವರ್ಗಾವಣೆ ಪತ್ರ ಪಡೆದು ಅಲ್ಲಿ ಸೇವೆ ಶುರು ಮಾಡಿದ್ದಾರೆ.

    ಇಡೀ ರಾಜ್ಯಕ್ಕೆ ಅನ್ವಯವಾಗಿದ್ದ ರೂಲ್ಸ್ ಮಾನ್ಯ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತವರು ಕ್ಷೇತ್ರ, ಸಂಸದ ಡಿಕೆ ಸುರೇಶ್ (DK Suresh) ಅವರ ಸ್ವಕ್ಷೇತ್ರವಾದ ಕನಕಪುರ ತಾಲೂಕಿನ ಶಿಕ್ಷಕರಿಗೆ ಮಾತ್ರ ವರ್ಗಾವಣೆ ಆಗಿದ್ರು ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದಕ್ಕೆ ಕಾರಣವಾಗಿರೋದು ಡಿಸಿಎಂ ಡಿಕೆಶಿ, ಮತ್ತು ಸಂಸದ ಡಿ.ಕೆ ಸುರೇಶ್, ತಮ್ಮ ತಾಲೂಕಿನ ಮಕ್ಕಳ ಹಿತ ದೃಷ್ಟಿಯಿಂದ ಶೈಕ್ಷಣಿಕ ವರ್ಷ ಮುಗಿಯೋವರೆಗೆ ಬಿಡುಗಡೆ ಮಾಡದಂತೆ ತಡೆಹಿಡಿದಿದ್ದಾರೆ ಅನ್ನೋ ಮಾತುಗಳು ತಾಲೂಕಿನ ಶಿಕ್ಷಕರಿಂದ ಕೇಳಿ ಬರುತ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ 12 ಪಬ್‌, ಬಾರ್‌ಗಳಿಗೆ ಬೀಗ

    ಸಿಎಂಗೂ ಈ ಬಗ್ಗೆ ಗಮನಕ್ಕೆ ತಂದಿರೋ ಶಿಕ್ಷಕರು, ಶಿಕ್ಷಣ ಸಚಿವರಿಗೂ, ವರ್ಗಾವಣೆ ತಡೆದಿರೋದನ್ನ ತಿಳಿಸಿದ್ದಾರೆ. ಸಿಎಂ ಖುದ್ದು ಆದೇಶ ಹೊರಡಿಸಿದ್ದು, ಅಕ್ಟೋಬರ್ 5 ರೊಳಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡು ವರ್ಗಾವಣೆ ಆಗಿರೋ ಶಿಕ್ಷಕರನ್ನ ಬಿಡುಗಡೆ ಮಾಡಿ ಎಂದು ಸೂಚಿಸಿದ್ದಾರೆ. ಆದರೂ ಇನ್ನೂ ಇಲ್ಲಿನ ಶಿಕ್ಷಕರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಡಿಸಿಎಂ ಹಾಗೂ ಸಂಸದ ಡಿಕೆ ಸುರೇಶ್ ಅವ್ರಿಗೂ ಶಿಕ್ಷಕರು ಮನವಿ ಮಾಡಿದ್ದು, ಅದಷ್ಟು ಬೇಗ ಬಿಡುಗಡೆಯ ಪತ್ರ ನೀಡಿ ಎಂದು ಕೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • DCM ಡಿಕೆಶಿ ಮನೆದೇವರು ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನ, ಬೆಳ್ಳಿ ಕಳ್ಳತನ‌!

    DCM ಡಿಕೆಶಿ ಮನೆದೇವರು ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನ, ಬೆಳ್ಳಿ ಕಳ್ಳತನ‌!

    ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಮನೆದೇವರಾದ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದೆ.

    ಕನಕಪುರ ಪಟ್ಟಣದಲ್ಲಿರುವ ಕೆಂಕೇರಮ್ಮ ದೇವಾಲಯದಲ್ಲಿ (Kenkeramma Temple) ಸೋಮವಾರ ಬೆಳಗ್ಗೆ ಅರ್ಚಕರು ಊಟಕ್ಕೆ ಹೋಗಿದ್ದಾಗ ದೇವಿಯ ಮೈಮೇಲೆ ಇದ್ದ 8 ಗ್ರಾಂ ತೂಕ ಚಿನ್ನದ ತಾಳಿ ಹಾಗೂ 50 ಗ್ರಾಂ ನಷ್ಟು ಬೆಳ್ಳಿ ಆಭರಣಗಳನ್ನ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸ್ವಾತಂತ್ರ‍್ಯ ದಿನಕ್ಕೆ ವೆಂಕಟೇಶ್ ‘ಸೈಂಧವ್’ ಟೀಮ್‌ನಿಂದ ಸ್ಪೆಷಲ್ ಗಿಫ್ಟ್- ಡಿಸೆಂಬರ್‌ 22ಕ್ಕೆ ಸಿನಿಮಾ ರಿಲೀಸ್

    ಖದೀಮನ ಕೈಚಳಕ ದೇವಾಲಯದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ ಸ್ಯಾಂಡಲ್‌ವುಡ್ ತಾರೆಯರು

    ಕೂಡಲೇ ಕಳ್ಳನನ್ನ ಬಂಧಿಸುವಂತೆ ಭಕ್ತರು ಆಗ್ರಹಿಸಿದ್ದಾರೆ. ಪ್ರತಿವರ್ಷವೂ ಈ ದೇವಾಲಯದಲ್ಲಿ ಅದ್ಧೂರಿ ಕೊಂಡೋತ್ಸವ ಜರುಗಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲದೇ ಡಿ.ಕೆ ಶಿವಕುಮಾರ್ ಚುನಾವಣಾ ಸಂದರ್ಭದಲ್ಲಿ ಕುಟುಂಬ ಸಮೇತ ಆಗಮಿಸಿ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ‌.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಕೈ’ ಹಿಡಿದ ನಾರಾಯಣ ಗೌಡ, ಪ್ರಭಾಕರ ರೆಡ್ಡಿ – ಹೆಚ್‌ಡಿಕೆಗೆ ಡಿಕೆ ಬ್ರದರ್ಸ್ ಟಕ್ಕರ್

    `ಕೈ’ ಹಿಡಿದ ನಾರಾಯಣ ಗೌಡ, ಪ್ರಭಾಕರ ರೆಡ್ಡಿ – ಹೆಚ್‌ಡಿಕೆಗೆ ಡಿಕೆ ಬ್ರದರ್ಸ್ ಟಕ್ಕರ್

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ (Karnataka Election 2023) ಅಖಾಡ ರಂಗೇರಿದೆ. ಚುನಾವಣೆಗೆ ದಿನಗಣನೆ ಬಾಕಿಯಿದ್ದರೂ ಪಕ್ಷಾಂತರ ಪರ್ವ ಮುಂದುವರಿದಿದೆ. ಈ ನಡುವೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಡಿಕೆ ಬ್ರದರ್ಸ್ ಕನಕಪುರದಲ್ಲಿ ಟಕ್ಕರ್ ಕೊಟ್ಟಿದ್ದಾರೆ.

    2018ರ ಚುನಾವಣೆಗೆ ಕನಕಪುರದಲ್ಲಿ ಡಿಕೆಶಿ ವಿರುದ್ಧವೇ ಜೆಡಿಎಸ್‌ನಿಂದ (JDS) ಕಣಕ್ಕಿಳಿದಿದ್ದ ನಾರಾಯಣಗೌಡ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಭಾಕರ ರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಸಂಸದ ಡಿ.ಕೆ ಸುರೇಶ್ (DK Suresh) ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ಜಗದೀಶ್‌ ಶೆಟ್ಟರ್‌ 100ಕ್ಕೆ ನೂರರಷ್ಟು ಗೆಲ್ತಾರೆ – ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

    ಪ್ರಭಾಕರ ರೆಡ್ಡಿ ಈ ಬಾರಿಯೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಜೆಡಿಎಸ್‌ನಿಂದ ಡಿಕೆಶಿ ಆಪ್ತೆ ಸುಷ್ಮಾ ರಾಜಗೋಪಾಲ್‌ಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಪ್ರಭಾಕರ್ ಪಕ್ಷಾಂತರ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೂ ಮಾಡಿಲ್ಲ, ಪಿಎಫ್‌ಐ ಮಾತ್ರ ಅಭಿವೃದ್ಧಿಯಾಯ್ತು: ಅರುಣ್ ಸಿಂಗ್

    ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೊಸ ಬದಲಾವಣೆ ಆಗ್ತಿದೆ. ನಾರಾಯಣಗೌಡ ಅವರು ರೈತ ಕುಟುಂಬದಿಂದ ಬಂದ ನಾಯಕ. ಡಿಕೆಶಿಗೆ ಒಳ್ಳೆಯದಾಗಬೇಕು ಅಂತಾ ಅವರು ತ್ಯಾಗ ಮಾಡಿದ್ದಾರೆ. ಪ್ರಭಾಕರ್ ರೆಡ್ಡಿ ಕೂಡ ಪಕ್ಷ ಸೇರಿದ್ದಾರೆ. ಇಲ್ಲಿ ಹೊಸಬರು, ಹಳಬರು ಎಂಬ ಪ್ರಶ್ನೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. 78 ಲಕ್ಷ ಸದಸ್ಯರು ಕಾಂಗ್ರೆಸ್‌ನಲ್ಲಿದ್ದು, ಗ್ಯಾರಂಟಿ ಯೋಜನೆ ಕಾರ್ಡ್ ಮನೆ ಮನೆ ತಲುಪುತ್ತಿದೆ. ಸಮೀಕ್ಷೆಗಳೂ ಕಾಂಗ್ರೆಸ್ ಪರವಾಗಿದ್ದು, ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.