Tag: kanakapur

  • ಶಬರಿಮಲೆ ಬೆಟ್ಟ ಇಳಿಯುವಾಗ ಹೃದಯಾಘಾತ – 18 ವರ್ಷದ ಅಯ್ಯಪ್ಪ ಭಕ್ತ ಸಾವು

    ಶಬರಿಮಲೆ ಬೆಟ್ಟ ಇಳಿಯುವಾಗ ಹೃದಯಾಘಾತ – 18 ವರ್ಷದ ಅಯ್ಯಪ್ಪ ಭಕ್ತ ಸಾವು

    ರಾಮನಗರ: ಶಬರಿಮಲೆ (Sabarimala) ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ ಬರುವಾಗ ಕನಕಪುರ (Kanakapur) ಮೂಲದ 18 ವರ್ಷದ ಅಯ್ಯಪ್ಪನ ಭಕ್ತನೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾನೆ.

    ಮೃತ ಯುವಕನನ್ನು ಪ್ರಜ್ವಲ್ (18) ಎಂದು ಗುರುತಿಸಲಾಗಿದೆ. ಮೂಲತಃ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸಿ ಪ್ರಜ್ವಲ್, ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದ. ಕಳೆದ ಎರಡು ದಿನಗಳ ಹಿಂದೆ ತಂದೆ ಹಾಗೂ ಸ್ನೇಹಿತರ ಜೊತೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ. ಇದನ್ನೂ ಓದಿ: ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

    ಅಯ್ಯಪ್ಪನ ದರ್ಶನ ಮುಗಿಸಿ, ಬೆಟ್ಟ ಇಳಿಯುವಾಗ ಪ್ರಜ್ವಲ್‌ಗೆ ಹೃದಯಾಘಾತವಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು. ಆದರೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.

    ಸ್ಥಳಕ್ಕೆ ಶಬರಿಮಲೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆ ನಡೆಸಿ ಕನಕಪುರಕ್ಕೆ ತರಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಶಾರ್ಟ್‌ಕಟ್‌ನಲ್ಲಿ ಬಂದಿದ್ದಕ್ಕೆ ಇಂಗ್ಲಿಷ್‌ನಲ್ಲಿ ಕೆಟ್ಟದಾಗಿ ಬೈಯ್ದು, ಹಲ್ಲೆ ಮಾಡಿದ್ರು – ರ‍್ಯಾಪಿಡೊ ಚಾಲಕ ಸುಹಾಸ್‌

  • ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ

    ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ

    ರಾಮನಗರ: ಜಿಲ್ಲೆಯಲ್ಲಿ (Ramanagar) ವಕೀಲರ ಧರಣಿಗೆ ಕುಮಾರಸ್ವಾಮಿಯೇ ಕಾರಣ. ಅಶಾಂತಿ ಸೃಷ್ಠಿಸುತ್ತಿರುವುದೇ ಜೆಡಿಎಸ್ (JDS) ಹಾಗೂ ಬಿಜೆಪಿ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

    ರಾಮನಗರದಲ್ಲಿ ಡಿ.ಕೆ. ಸಹೋದರರಿಂದ ಅಶಾಂತಿ ಸೃಷ್ಟಿ ಎಂದಿದ್ದ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕನಕಪುರದಲ್ಲಿ ಪ್ರತಿಕ್ರಿಯಿಸಿದ ಅವರು, ವಕೀಲರ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಮಾಡಿದ್ದಾರೆ. ಅವರಿಗೆ ಬೇರೆ ಕೆಲಸವಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಬಿಜೆಪಿಯವರು ಅಶಾಂತಿ ಸೃಷ್ಟಿಸುವುದು ಮಾಮೂಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕೋಮು ವಿಷಯದಲ್ಲಿ ಅವರು ಯಾವಾಗಲೂ ರಾಜಕೀಯ ಮಾಡುತ್ತಾರೆ. ಅವರಿಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗುವುದಿಲ್ಲ. ಸ್ಥಳೀಯ ಶಾಸಕ ಮತ್ತು ಪಿಎಸ್‌ಐ ಸಹ ಅಲ್ಪಸಂಖ್ಯಾತರಾಗಿದ್ದರಿಂದ ವಕೀಲರ ವಿಷಯದಲ್ಲಿ ರಾಜಕೀಯ ಮಾಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಸಹ ಅಲ್ಪಸಂಖ್ಯಾತ ಅಧಿಕಾರಿ ಬೇಡ ಎಂದಿದ್ದರು. ವಕೀಲರ ಹೋರಾಟಕ್ಕೆ ಸಂಬಂಧಿಸಿದಂತೆ, ಪಿಎಸ್‌ಐ ವಿರುದ್ಧ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ. ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದೆ ಎಂದರು. ಇದನ್ನೂ ಓದಿ: ವಿಶ್ವದ ಏಕೈಕ ಮಂದಸ್ಮಿತ ಬಾಹುಬಲಿಗೆ ಗುರುವಾರ ಮಹಾಮಸ್ತಕಾಭಿಷೇಕ

  • ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿಗೆ ಕನಕಪುರ ಸೇರಿಸೋದು ಸರಿ: ಪ್ರದೀಪ್ ಈಶ್ವರ್

    ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿಗೆ ಕನಕಪುರ ಸೇರಿಸೋದು ಸರಿ: ಪ್ರದೀಪ್ ಈಶ್ವರ್

    ಚಿಕ್ಕಬಳ್ಳಾಪುರ: ಅಭಿವೃದ್ಧಿ ವಿಚಾರವಾಗಿ ಕನಕಪುರ (Kanakapur) ಬೆಂಗಳೂರಿಗೆ (Bengaluru) ಸೇರಿಸೋದು ಸರಿ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿಕೆ ನೀಡಿದ್ದಾರೆ.

    ಕನಕಪುರ ಬೆಂಗಳೂರಿಗೆ ಸೇರಿಸುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ಸಂಬಂಧ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ಅಭಿವೃದ್ಧಿ ವಿಚಾರವಾಗಿ ಕನಕಪುರ ಬೆಂಗಳೂರಿಗೆ ಸೇರಿಸೋದು ಸರಿ. ಡಿಸಿಎಂ ಡಿಕೆ ಶಿವಕುಮಾರ್ ಹೇಳಿರೋದು ಸರಿ ಇದೆ. ಉದ್ಯಮಿಗಳು ಧೈರ್ಯದಿಂದ ಬಂದು ಕನಕಪುರದಲ್ಲಿ ಬಂಡವಾಳ ಹೂಡುತ್ತಾರೆ. ಇದರಿಂದ ಕನಕಪುರ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಕಾಡಾನೆ ಥರ ಆಗ್ತಿದ್ದಾರೆ: ಸಿಪಿ ಯೋಗೇಶ್ವರ್ ಟಾಂಗ್

    ಕನಕಪುರ ಬೇರೆ ಜಿಲ್ಲೆ ಅಂದಾಗ ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಾರೆ. ಬೆಂಗಳೂರು ಅಂದಾಗ ಜನರ ಮೈಂಡ್ ಸೆಟ್ ಬೇರೆ ಇರಲಿದೆ. ವಿಶಾಲವಾದ ದೃಷ್ಟಿಕೋನದಲ್ಲಿ ಡಿಕೆಶಿ ಇದನ್ನು ಹೇಳಿದ್ದಾರೆ. ಆದರೆ ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಬೈಯೋದೇ ಅವರ ಕೆಲಸ ಎಂದು ಪ್ರದೀಪ್ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಬರ ನಿರ್ವಹಣೆಗೆ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ: ಸಿದ್ದರಾಮಯ್ಯ ವಿರುದ್ಧ ಕೋಟ ಕಿಡಿಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾರಾದ್ರೂ ಲಂಚ ಕೇಳಿದ್ರೆ ನೇರವಾಗಿ ನನಗೆ ಪತ್ರ ಬರೆಯಿರಿ, ಒದ್ದು ಒಳಗೆ ಹಾಕಿಸ್ತೀನಿ: ಡಿಕೆಶಿ

    ಯಾರಾದ್ರೂ ಲಂಚ ಕೇಳಿದ್ರೆ ನೇರವಾಗಿ ನನಗೆ ಪತ್ರ ಬರೆಯಿರಿ, ಒದ್ದು ಒಳಗೆ ಹಾಕಿಸ್ತೀನಿ: ಡಿಕೆಶಿ

    ರಾಮನಗರ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ (Congress Guarantee) ವಿಚಾರವಾಗಿ ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ಪತ್ರ ಬರೆಯಿರಿ, ಒದ್ದು ಒಳಗೆ ಹಾಕಿಸುತ್ತೇನೆ ಎಂದು ಡಿಸಿಎಂ (Deputy CM) ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

    ಕನಕಪುರದ (Kanakapur) ಕಬ್ಬಾಳು ಗ್ರಾಮದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗಲಿದೆ. ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ರೂ. ಕೊಡುತ್ತೇವೆ. ಯಾರು ಯಜಮಾನಿ ಎಂದು ನೀವು ತೀರ್ಮಾನ ಮಾಡಿಕೊಳ್ಳಬೇಕು. ಅಲ್ಲದೆ ಈ ಯೋಜನೆಗೆ ಹೆಣ್ಣುಮಕ್ಕಳ ಅಕೌಂಟ್ ನಂಬರನ್ನೇ ಕೊಡಬೇಕು. ಈ ಯೋಜನೆಗಳಿಗೆ ಜೂ.15ರಿಂದ ಜು.15ರ ವರೆಗೆ ಅರ್ಜಿ ಹಾಕಬೇಕು. ಯಾರಿಗೂ ಲಂಚ ಕೊಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್ ಮೇಲೆ ಟೈರ್ ಇಟ್ಟ ದುಷ್ಕರ್ಮಿಗಳು – ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಇದೇ ತಿಂಗಳು 11ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಿಗಲಿದೆ. ರಾಜ್ಯದಲ್ಲಿ ಎಲ್ಲಿಗೆ ಬೇಕಾದರೂ ಓಡಾಡಬಹುದು. ಆದರೆ ಗಂಡಸರು ಟಿಕೆಟ್ ತೆಗೆದುಕೊಂಡು ಓಡಾಡಬೇಕು. ಯಾಕೆಂದರೆ ಕೆಎಸ್‍ಆರ್‍ಟಿಸಿ ನಡಿಯಬೇಕಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.

    ಕಾಂಗ್ರೆಸ್ ಅಧಿಕಾರಕ್ಕೆ ತಂದಿರುವುದಕ್ಕೆ ನಿಮಗೆ ಈ ಯೋಜನೆಗಳು ಸಿಗುತ್ತಿದೆ. ನಾನು ನಿಮ್ಮ ಉಪಕಾರ ಸ್ಮರಣೆ ನೆನೆಯಲು ಇಲ್ಲಿಗೆ ಬಂದಿದ್ದೇನೆ. ನೀವು ಕಾಂಗ್ರೆಸ್‍ಗೆ ಕೊಟ್ಟ ಶಕ್ತಿ ಸಾರ್ಥಕವಾಗುತ್ತದೆ. ರಾಜ್ಯದ ಇತಿಹಾಸದಲ್ಲೇ ಹೆಚ್ಚು ಅಂತರದಲ್ಲಿ ಗೆಲ್ಲಿಸಿದ್ದೀರಿ ಎಂದಿದ್ದಾರೆ. ಇದನ್ನೂ ಓದಿ: ಸಬ್‍ಇನ್‍ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು – ಪತಿಯ ವಿರುದ್ಧ ಕೊಲೆ ಆರೋಪ

  • ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

    ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

    ರಾಮನಗರ: ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ (Sri Ram Sena) ಬ್ಯಾನ್ ಮಾಡಿದ್ದು ಯಾಕೆಂದು ಯೋಗಿ (Yogi Adityanath) ಹೇಳಬೇಕು ಎಂದು ಕಾಂಗ್ರೆಸ್ (Congress) ನಾಯಕ ಡಿ.ಕೆ ಸುರೇಶ್ (D.K. Suresh) ಕಿಡಿಕಾರಿದ್ದಾರೆ.

    ಕನಕಪುರದಲ್ಲಿ (Kanakapur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಆಡಳಿತದ ಮೂರು ರಾಜ್ಯಗಳಲ್ಲಿ ಶ್ರೀರಾಮ ಸೇನೆ ಬ್ಯಾನ್ ಆಗಿದೆ. ಯಾಕೆ ಬ್ಯಾನ್ ಮಾಡಿದ್ದಾರೆ ಎಂದು ಬಿಜೆಪಿಗರು ಹೇಳಬೇಕು. ಚುನಾವಣೆ ಹೊಸ್ತಿಲಲ್ಲಿ ಗೆಲ್ಲಲು ಆಗದೆ ಧರ್ಮದ ಹೆಸರಿನಲ್ಲಿ ಅಡ್ಡ ಬರುತ್ತಿರುವುದು ಒಳ್ಳೆಯದಲ್ಲ. ನಾವು ಸಹ ಹಿಂದೂಗಳು, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆಯಬೇಕಾಗಿಲ್ಲ. ನಾವೂ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡುತ್ತೇವೆ. ಆದರೆ ಚುನಾವಣಾ ಪ್ರಚಾರದಲ್ಲಿ ರಾಮ ಮತ್ತು ಹನುಮನ ತಂದು ಪೂಜೆ ಮಾಡುವುದಿಲ್ಲ. ವೋಟಿಗಾಗಿ ಪೂಜೆ ಮಾಡುವವರಿಗೆ ಜನ ಉತ್ತರಿಸಲಿದ್ದಾರೆ ಎಂದರು. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

    ಇನ್ನೂ ಕನಕಪುರದಲ್ಲಿ ಅಮಿತ್ ಶಾ ಪ್ರಚಾರದ ವಿಚಾರವಾಗಿ ಮಾತನಾಡಿದ ಅವರು, ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ಅಮಿತ್ ಶಾ ಬಂದರೂ ಸಂತೋಷ, ಮೋದಿ ಬಂದರೂ ಸಂತೋಷ. ಅವರಿಬ್ಬರೂ ಮೇಕೆದಾಟು ಯೋಜನೆಗೆ ಯಾವಾಗ ಅನುಮತಿ ಕೊಡುತ್ತೀರಾ? ಅದರ ಬಗ್ಗೆ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ.

    ಕನಕಪುರದಲ್ಲಿ ಭಯದ ವಾತಾವರಣ ಇದೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಎಲ್ ಸಂತೋಷ್ ಅವರಿಗೆ ನಾನೇ ಎಲ್ಲಾ ರೀತಿಯ ರಕ್ಷಣೆ ನೀಡುತ್ತೇನೆ. ಅವರೇ ಮನೆಮನೆಗೆ ಬಂದು ಮತ ಕೇಳಲಿ. ನಾನು ಒಂದು ಮಾತು ಹೇಳಿದ್ರೆ ಸಾಕು ಅವರಿಗೆ ರಕ್ಷಣೆ ಸಿಗುತ್ತದೆ. ಅದಕ್ಕಾಗಿ ಬಿಎಸ್‍ಎಫ್‍ನ ಅಗತ್ಯವಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

  • ಡಿಕೆಶಿಗೆ ಬಿಗ್ ರಿಲೀಫ್ – ನಾಮಪತ್ರ ಸ್ವೀಕೃತ

    ಡಿಕೆಶಿಗೆ ಬಿಗ್ ರಿಲೀಫ್ – ನಾಮಪತ್ರ ಸ್ವೀಕೃತ

    ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕನಕಪುರ (Kanakapur) ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ.

    ಡಿಕೆ ಶಿವಕುಮಾರ್ ಕಾಂಗ್ರೆಸ್‌ನಿಂದ (Congress) ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರವನ್ನು ಸಲ್ಲಿಸಿದ್ದರು. ಆದರೆ ಆದಾಯ ತೆರಿಗೆ ನೋಟಿಸ್ ಹಿನ್ನೆಲೆ ಅವರ ನಾಮಪತ್ರ ತಿರಸ್ಕೃತವಾಗುತ್ತದೆ ಎಂಬ ಭೀತಿಯಿತ್ತು. ಹೀಗಾಗಿ ಅವರ ಸಹೋದ ಡಿಕೆ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದರು. ಇದೀಗ ಡಿಕೆಶಿ ನಾಮಪತ್ರ ಸ್ವೀಕೃತವಾಗಿದ್ದು, ದೊಡ್ಡ ತಲೆನೋವು ಕಳೆದಂತಾಗಿದೆ.

    ಕೆಪಿಸಿಸಿ ಅಧ್ಯಕ್ಷರ ನಾಮಪತ್ರವನ್ನು ಚುನಾವಣಾಧಿಕಾರಿ ಸಂತೋಷ್ ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ. ಅಫಿಡವಿಟ್ ಸೇರಿ ಇನ್ನಿತರ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ. ಡಿಕೆಶಿ 4 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದು, ಎಲ್ಲಾ ನಾಮಪತ್ರಗಳನ್ನೂ ಸ್ವೀಕೃತಗೊಳಿಸಲಾಗಿದೆ. ಇದನ್ನೂ ಓದಿ: ಚುನಾವಣಾ ಕಣಕ್ಕಿಳಿಯಲು ನಕಲಿ ಜಾತಿ ಪ್ರಮಾಣ ಪತ್ರ – ಸರ್ಟಿಫಿಕೇಟ್ ರದ್ದು ಪಡಿಸಿದ ಡಿಸಿ

    ಡಿಕೆಶಿಯ ನಾಮಪತ್ರ ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ನಾಮಪತ್ರ ಹಿಂದಕ್ಕೆ ಪಡೆಯಲಿದ್ದು ಯಾವಗಾ ಹಿಂದಕ್ಕೆ ಪಡೆಯುತ್ತಾರೆ ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಶನಿವಾರದ ಒಳಗಡೆ ಸರ್ಕಾರಿ ಬಂಗಲೆ ತೊರೆಯಲಿದ್ದಾರೆ ರಾಹುಲ್ ಗಾಂಧಿ

  • ಕನಕಪುರದಲ್ಲಿ ಮೋದಿ, ಶಾ ಆಟ ನಡೆಯೋದಿಲ್ಲ: ಡಿಕೆ ಸುರೇಶ್

    ಕನಕಪುರದಲ್ಲಿ ಮೋದಿ, ಶಾ ಆಟ ನಡೆಯೋದಿಲ್ಲ: ಡಿಕೆ ಸುರೇಶ್

    ರಾಮನಗರ: ಕನಕಪುರದಲ್ಲಿ ಪ್ರಧಾನಿ ಮೋದಿ (Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ (Amit Shah) ಚುನಾವಣಾ ತಂತ್ರಗಳು ಫಲಿಸುವುದಿಲ್ಲ ಎಂದು ಸಂಸದ ಡಿ.ಕೆ ಸುರೇಶ್ (D.K Suresh) ಹೇಳಿದ್ದಾರೆ.

    ಕನಕಪುರದಲ್ಲಿ (Kanakapur) ಡಿ.ಕೆ ಶಿವಕುಮಾರ್ (D.K Shivakumar) ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧೆ ವಿಚಾರವಾಗಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಹಿಂದೆ ಡಿಕೆ ಶಿವಕುಮಾರ್‌  ಮಾಜಿ ಪ್ರಧಾನಿ ದೇವೇಗೌಡ (H. D. Deve Gowda) ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಚುನಾವಣೆ ಎದುರಿಸಿದ್ದರು. ಇಡೀ ಜೀವನವನ್ನೇ ನಾವು ಹೋರಾಟವಾಗಿ ಮಾಡಿಕೊಂಡು ಬಂದಿದ್ದೇವೆ. ಬಿಜೆಪಿಯ ತಂತ್ರಗಳ ಎದುರು ಸ್ಪರ್ಧಿಸುವುದು ದೊಡ್ಡ ವಿಚಾರವಲ್ಲ. ನನಗೆ ರಾಜಕೀಯ ಹೊಸದಲ್ಲ ರಾಜಕೀಯದ ಅನುಭವವಿದೆ ಎಂದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಡಿಕೆ ಶಿವಕುಮಾರ್ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತಲು ಆಗಲ್ಲ: ಸಿಪಿ ಯೋಗೇಶ್ವರ್

    ಪದ್ಮನಾಭನಗರದಿಂದ ಶಿವಕುಮಾರ್ ಸಹೋದರ ಸಂಸದ ಡಿ.ಕೆ ಸುರೇಶ್ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ಕೇಳಿ ಬಂದಿತ್ತು. ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಹೈಕಮಾಂಡ್ ಅಶೋಕ್ ಅವರಿಗೆ ಟಿಕೆಟ್ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅಶೋಕ್ ವಿರುದ್ಧ ಡಿಕೆ ಸುರೇಶ್ ಅವರನ್ನು ಕಣಕ್ಕೆ ಇಳಿಸಿದರೆ ಉತ್ತಮ ಎಂಬ ಸಲಹೆ ವ್ಯಕ್ತಪಡಿಸಿದ್ದರು.

    ಆರ್.ಅಶೋಕ್‍ಗೆ (R. Ashoka) ಟಿಕೆಟ್ ನೀಡಿದ ವಿಚಾರವಾಗಿ ಬಿಜೆಪಿ ನಾಯಕರು ಡಿ.ಕೆ ಶಿವಕುಮಾರ್ ವಿರುದ್ಧ ಪ್ರಬಲ ಒಕ್ಕಲಿಗ ನಾಯಕ ಆರ್. ಅಶೋಕ್‍ರನ್ನು ಕಣಕ್ಕಿಳಿಸಲಾಗಿದೆ. ಈ ಚುನಾವಣೆ ಗೆಲ್ಲುವ ಭರವಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪದ್ಮನಾಭನಗರದಿಂದ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

  • ಇನ್ಮುಂದೆ ಡಿಕೆ ಶಿವಕುಮಾರ್ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತಲು ಆಗಲ್ಲ: ಸಿಪಿ ಯೋಗೇಶ್ವರ್

    ಇನ್ಮುಂದೆ ಡಿಕೆ ಶಿವಕುಮಾರ್ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತಲು ಆಗಲ್ಲ: ಸಿಪಿ ಯೋಗೇಶ್ವರ್

    ರಾಮನಗರ: ಕೆಲವು ಪಕ್ಷದ ನಾಯಕರು ಕ್ಷೇತ್ರಗಳಲ್ಲಿ ವಿರೋಧ ಇಲ್ಲದಂತೆ ಮಾಡಿಕೊಂಡಿದ್ದರು. ಅಂತಹ ಕ್ಷೇತ್ರಗಳಲ್ಲಿ ಅವರ ವಿರುದ್ಧ ಬಲಿಷ್ಠ ನಾಯಕರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಈಗ ಅಂತಹ ನಾಯಕರು ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತುವುದಕ್ಕೆ ಆಗುವುದಿಲ್ಲ. ಕ್ಷೇತ್ರದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P.Yogeshwara) ಚಾಟಿ ಬೀಸಿದ್ದಾರೆ.

    ಡಿ.ಕೆ ಶಿವಕುಮಾರ್ ಕ್ಷೇತ್ರಕ್ಕೆ ಪ್ರಬಲ ಒಕ್ಕಲಿಗ ನಾಯಕನನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ (BJP) ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕನಕಪುರದಲ್ಲಿ (Kanakapur) ಸಚಿವ ಆರ್.ಅಶೋಕ್ (R.Ashoka) ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಈ ಮೂಲಕ ಆಶೋಕ್‍ಗೆ ಬಿಗ್ ಟಾಸ್ಕ್ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್‍ಗೆ ಬೀದರ್ ಉತ್ತರ, ಭಾಲ್ಕಿ ಟಿಕೆಟ್ ಆಯ್ಕೆಯ ಭಾರಿ ಟೆನ್ಶನ್

    ಕನಕಪುರದ ಜೆಡಿಎಸ್ (JDS) ಅಭ್ಯರ್ಥಿಯೇ ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಕಾಂಗ್ರೆಸ್‍ಗೆ ವಿರೋಧಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಬಿಜೆಪಿಯಿಂದ ಪ್ರಬಲ ನಾಯಕನನ್ನು ಆಯ್ಕೆ ಮಾಡಿರುವುದು ಗೆಲ್ಲುವ ಅವಕಾಶ ಇದೆ. ಜೊತೆಗೆ ರಾಮನಗರದಲ್ಲೂ ಅವಕಾಶ ಇತ್ತು. ಆದರೂ ಒಂದಷ್ಟು ಹೊಸ ಪ್ರಯೋಗ ಒಳ್ಳೆಯದು ಎಂದು ಹೇಳಿದ್ದಾರೆ.

    ಮಂಡ್ಯದಲ್ಲೂ ನಾನೇ ಕರೆತಂದ ಇಬ್ಬರಿಗೆ ಟಿಕೆಟ್ ಸಿಕ್ಕಿದೆ. ಇಂಡವಾಳು ಸಚ್ಚಿದಾನಂದ ಹಾಗೂ ಅಶೋಕ್ ಜಯರಾಂಗೆ ಟಿಕೆಟ್ ಹಂಚಿಕೆಯಾಗಿದೆ. ರಾಮನಗರದಲ್ಲೂ (Ramanagara) ಇಬ್ಬರು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ರಾಮನಗರದಲ್ಲಿ ಕನಿಷ್ಠ ಎರಡು ಸೀಟ್ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

    ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪಿದ ವಿಚಾರದ ಬಗ್ಗೆ ಮಾತನಾಡಿ, ನಮ್ಮ ಪಕ್ಷ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಹೊಸಬರಿಗೆ ಅವಕಾಶ ನೀಡುವ ಕೆಲಸ ಮಾಡಿದ್ದಾರೆ. ಕೆಲವರಿಗೆ ವಯಸ್ಸಿನ ಕಾರಣ ಹಾಗೂ ಇನ್ನಿತರ ಕಾರಣಗಳಿಂದ ಟಿಕೆಟ್ ನೀಡಿಲ್ಲ. ಆದರೆ ಹಿರಿಯ ನಾಯಕರಿಗೆ ಪರ್ಯಾಯ ಅವಕಾಶಗಳಿವೆ ಅವರನ್ನೂ ಗೌರವದಿಂದ ನಡೆಸಿಕೊಳ್ಳುವ ಕೆಲಸ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್‍ಬೈ – ಶೀಘ್ರವೇ ಕಾಂಗ್ರೆಸ್ ಸೇರ್ಪಡೆ?

  • ಡಿ.ಕೆ.ಬ್ರದರ್ಸ್‍ಗೆ ನಿಖಿಲ್ ಕುಮಾರಸ್ವಾಮಿ ಓಪನ್ ಚಾಲೆಂಜ್

    ಡಿ.ಕೆ.ಬ್ರದರ್ಸ್‍ಗೆ ನಿಖಿಲ್ ಕುಮಾರಸ್ವಾಮಿ ಓಪನ್ ಚಾಲೆಂಜ್

    ರಾಮನಗರ: ಡಿಕೆ ಸೋದರರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಬಹಿರಂಗವಾಗಿ ಚಾಲೆಂಜ್ ಹಾಕಿದ್ದಾರೆ.

    ರಾಮನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಪಕ್ಷದಲ್ಲಿ ಸ್ವಲ್ಪ ಗೊಂದಲಗಳಿರೋದು ನಿಜ. ಅದನ್ನ ಪರಿಹರಿಸುವ ಕೆಲಸವನ್ನ ಕುಮಾರಸ್ವಾಮಿ ಅವರು ಮಾಡುತ್ತಿದ್ದಾರೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷನಾಗಿ 30 ಜಿಲ್ಲೆಗಳ ಪ್ರವಾಸ ನಡೆಸುತ್ತಿದ್ದೇನೆ. ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನ ಮಾಡಿದ್ದು, ಅದನ್ನ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಲಾಗುತ್ತೆ. ಪಕ್ಷ ಸಂಘಟನೆಯ ಜವಾಬ್ದಾರಿಯನ್ನ ಹಿರಿಯರು ನನಗೆ ನೀಡಿದ್ದು, ಅದನ್ನ ನಿರ್ವಹಿಸುತ್ತಿದ್ದೇನೆ ಎಂದರು.

    ಎಚ್ಚರಿಕೆ ಅಂತ ಹೇಳಿದ್ಯಾರಿಗೆ?: ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್ ಮತದಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮದೇ ಮತಗಳು ಕನಕಪುರದಲ್ಲಿ, 2023ಕ್ಕೆ ಇಲ್ಲಿ ಸೂಕ್ತ ಅಭ್ಯರ್ಥಿ ಇಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ. ಕೆಲವರು ನಮ್ಮ ಕ್ಷೇತ್ರಗಳಿಗೆ ಕೈ ಹಾಕ್ತಿದ್ದಾರೆ. ಹಾಗಾಗಿ ನಾವು ಸಹ ಅವರ ಕ್ಷೇತ್ರಕ್ಕೆ ಕೈ ಹಾಕಬೇಕಾಗುತ್ತೆ ಅಂತ ಎಚ್ಚರಿಕೆ ಕೊಡಲು ಇಷ್ಟಪಡುತ್ತೇನೆ ಅಂದ್ರು.

  • ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ: ಡಿಕೆಶಿ

    ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ: ಡಿಕೆಶಿ

    ಬೆಂಗಳೂರು: ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ರೇಷ್ಮೆ, ಕಡಲೆ, ಅರಿಶಿನ ಬೆಳೆಯುತ್ತೇನೆ ವಿನಃ ಆದರೆ ದೆಹಲಿಗೆ ಹೋಗಲ್ಲ. ರಾಜ್ಯದಲ್ಲಿಯೇ ರಾಜಕಾರಣ ಮಾಡುತ್ತೇನೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ನಾನು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಸಂಬಂಧಪಟ್ಟವರನ್ನ ಕೇಳಿ. ಎಐಸಿಸಿ ಅಧ್ಯಕ್ಷರು ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ನಾನು ಅಧ್ಯಕ್ಷರನ್ನ ಭೇಟಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ವಿಚಾರ ನಾನಂತು ಮಾತನಾಡಲ್ಲ. ನನಗೇನು ಅತುರ ಇಲ್ಲ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಡಿಕೆಶಿ ಕೆಪಿಸಿಸಿ ಪಟ್ಟದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಏನೇ ಆದರು ರಾಜ್ಯ ರಾಜಕಾರಣದ ಮೇಲೆ ನನ್ನ ಕಣ್ಣು ಅನ್ನೋದನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ.

    ಸಿಬಿಐ ಮೇಲೆ ನನಗೆ ನಂಬಿಕೆ ಇದೆ. ಸಿಬಿಐ ತನ್ನ ಗೌರವ ಉಳಿಸಿಕೊಂಡಿದೆ. ಸಿಬಿಐ ಯಾವುದೇ ನೋಟಿಸ್ ನನಗೆ ಕೊಟ್ಟಿಲ್ಲ. ಕೇಂದ್ರ ಮತ್ತು ಯಡಿಯೂರಪ್ಪ ಸಿಬಿಐ ಅವರಿಗೆ ನನ್ನ ಮನೆ ಸುತ್ತಲೂ ಇರುವಂತೆ ಹೇಳಿದ್ದಾರೆ. ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿ ಇದ್ದರೂ ಸಿಎಂ ಸಿಬಿಐಗೆ ಪತ್ರ ಬರೆದಿದ್ದಾರೆ. ಎಲ್ಲವನ್ನೂ ಆರ್‍ ಟಿಐ ಅಡಿ ದಾಖಲೆ ತೆಗೆದುಕೊಂಡಿದ್ದೇನೆ. ಮಾಧ್ಯಮಗಳ ಮುಂದೆ ಏನೂ ಹೇಳಲ್ಲ ಎಂದರು.