ಹೌದು, ರಾಜ್ಯದೆಲ್ಲೆಡೆ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವಿವಿಧ ಶೈಲಿ, ವಿವಿಧ ಆಕಾರ, ವಿವಿಧ ವೇಷಗಳಲ್ಲಿ ಗಣೇಶನ ವಿಗ್ರಹಗಳು ರಾರಾಜಿಸುತ್ತಿವೆ. ಅದರಂತೆ ಕೊಪ್ಪಳ (Koppal) ಜಿಲ್ಲೆಯ ಕನಕಗಿರಿಯಲ್ಲಿ ಜೋಕಾಲಿ ಆಡುತ್ತಿರುವ ಗಣೇಶ (Jokali Ganesha) ಮೂರ್ತಿಯೊಂದು ಗಮನ ಸೆಳೆಯುತ್ತಿದೆ.
ಚೇತನ್ ಹಣ ನೀಡುವಂತೆ ತಂದೆ, ತಾಯಿ ಹಾಗೂ ಅಜ್ಜಿಯನ್ನು ಪ್ರತಿದಿನ ಪೀಡಿಸುತ್ತಿದ್ದ. ಅಜ್ಜಿ ಕನಕಮ್ಮನ ಕೈಕಾಲು ಹಿಡಿದಿದ್ದ. ಆದರೂ ಕನಕಮ್ಮ ಹಣ ಕೊಟ್ಟಿರಲಿಲ್ಲ. ಇದರಿಂದ ಕೋಪಗೊಂಡ ಚೇತನ್ ಅಜ್ಜಿ ಕನಕಮ್ಮನ ತಲೆಯ ಮೇಲೆ ರುಬ್ಬುವ ಕಲ್ಲು ಎತ್ತಿಹಾಕಿದ್ದ. ಕನಕಮ್ಮಳ ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಳೆಯಿಂದ ಪಂದ್ಯ ರದ್ದು, ಕೋಲ್ಕತ್ತಾ ಔಟ್ – ಪ್ಲೇ ಆಫ್ ಸನಿಹದಲ್ಲಿ ಆರ್‌ಸಿಬಿ
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಪಿಐ ಎಂ.ಡಿ ಫೈಜುಲ್ಲಾ ಭೇಟಿ ನೀಡಿ, ಪರಿಶೀಲಿಸಿದರು. ಆರೋಪಿ ಚೇತನ್‌ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಚೇತನ್ ತಂದೆ ವೆಂಕಟೇಶ್ ದೂರಿನಾಧರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಪ್ಪಳ: ರಾಜ್ಯದಲ್ಲಿ ಚುನಾವಣೆಯ (Election) ಕಾವು ದಿನದಿಂದ ದಿನಕ್ಕೆ ಕಾವು ಹೆಚ್ಚುತ್ತಿದ್ದು, ಈ ನಡುವೆ ಶಾಸಕರೊಬ್ಬರು ಎದುರಾಳಿ ಅಭ್ಯರ್ಥಿಯ ಮೇಲೆ ದರ್ಪ ಮೆರೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಯ ಮೇಲೆ ಬಿಜೆಪಿ (BJP) ಶಾಸಕ ಬಸವರಾಜ ದಡೇಸೂಗುರು (Basavaraj Dadesugur) ಕನಕಗಿರಿ (Kanakagiri) ತಹಶೀಲ್ದಾರ್ ಕಚೇರಿಯಲ್ಲಿ ದರ್ಪ ಮೆರೆದಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಧರ್ಮಣ್ಣ ಎಂಬವವರರು ನಾಮಪತ್ರ ಸಲ್ಲಿಸಲು ತಹಶಿಲ್ದಾರ್ ಕಚೆರಿಗೆ ತೆರಳಿದ್ದ ವೇಳೆ ಶಾಸಕ ಏಕಾಏಕಿ ಗಲಾಟೆಗೆ ಮುಂದಾಗಿದ್ದಾರೆ. ಶಾಸಕ ಗಲಾಟೆಗೆ ಮುಂದಾಗುತ್ತಿದ್ದಂತೆ ಜೊತೆಯಲ್ಲಿದ್ದ ಬೆಂಬಲಿಗರು ಅವರನ್ನು ಸಮಾಧಾನ ಪಡೆಸಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಿದರೆ ಮತ ವಿಭಜನೆಯಾಗುತ್ತದೆ ಎಂಬ ಭೀತಿಯಲ್ಲಿ ಶಾಸಕ, ಅಭ್ಯರ್ಥಿಯನ್ನು ಹೆದರಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಅರಕಲಗೂಡಿನಲ್ಲಿ ದಿಢೀರ್ ಬೆಳವಣಿಗೆ – ಕೈ ಟಿಕೆಟ್ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿ?
ಕೊಪ್ಪಳ: ಜಿಲ್ಲೆಯ ಕನಕಗಿರಿ (Kanakagiri) ವಿಧಾನಸಭೆ ಕ್ಷೇತ್ರದ ಮತದಾರರು ಅವರ ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಿದ್ದೇ ಹೆಚ್ಚು. ಇನ್ನೂ ಕಳೆದ 2008ರಲ್ಲಿ ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರ ಆದಾಗಿನಿಂದ ಹೊರ ಜಿಲ್ಲೆಯ ಅಭ್ಯರ್ಥಿಗಳ ದರ್ಬಾರ್ ಶುರುವಾಗಿದೆ.
ಹೌದು, ಕಳೆದ 1978ರಲ್ಲಿ ಕನಕಗಿರಿ ವಿಧಾನಸಭೆ ಕ್ಷೇತ್ರ ರಚನೆ ಆಗಿದೆ. ಕನಕಗಿರಿ ಪಟ್ಟಣದ ಸುತ್ತಲಿನ ಅಖಂಡ ರಾಯಚೂರು ಜಿಲ್ಲೆಯ ಗಂಗಾವತಿ, ಸಿಂಧನೂರು ಮತ್ತು ಕುಷ್ಟಗಿ ತಾಲೂಕಿನ ಗ್ರಾಮ ಒಳಗೊಂಡು ಕ್ಷೇತ್ರ ರೂಪುಗೊಂಡಿತ್ತು. ಈ ಕ್ಷೇತ್ರದಲ್ಲಿ ನಾಗಪ್ಪ ಸಾಲೋಣಿ ಹೊರತಾಗಿ ಉಳಿದವರೆಲ್ಲ ಬೇರೆ ಕಡೆಯಿಂದ ಬಂದು ವಿಜಯ ಮಾಲೆ ಧರಿಸಿಕೊಂಡಿದ್ದಾರೆ.
ಕ್ಷೇತ್ರದ ಮೊದಲ ಶಾಸಕರಾಗಿ ಗಂಗಾವತಿಯ ಎಂ ನಾಗಪ್ಪ ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದಾರೆ. ನಂತರ 1983 ಮತ್ತು 1985ರಲ್ಲಿ ಅದೇ ಗಂಗಾವತಿ ಮೂಲದ ಶ್ರೀರಂಗದೇವರಾಯ ಕನಕಗಿರಿ ಕ್ಷೇತ್ರ ಪ್ರತಿನಿಧಿಸಿದ್ದರೆ, 1989ರಲ್ಲಿ ಮತ್ತದೇ ಗಂಗಾವತಿ ಮೂಲದ ಮಲ್ಲಿಕಾರ್ಜುನ ನಾಗಪ್ಪ ಕನಕಗಿರಿ ಕ್ಷೇತ್ರದಿಂದ ಗೆದ್ದಿದ್ದಾರೆ.
ಸ್ಥಳೀಯ ಅಭ್ಯರ್ಥಿ ಎಂಬ ವ್ಯಾಪಕ ಪ್ರಚಾರದೊಂದಿಗೆ 1994ರಲ್ಲಿ ಕಾರಟಗಿ ಮೂಲದ ಸಾಲೋಣಿ ನಾಗಪ್ಪ ಆಯ್ಕೆಯಾಗಿದ್ದಾರೆ. ಜನತಾದಳದಿಂದ ಕನಕಗಿರಿ ಶಾಸಕರಾಗುವ ಮೂಲಕ ಕಾಂಗ್ರೆಸ್‌ನ ಹಿಡಿತ ತಪ್ಪಿಸಿದ್ದಾರೆ. ಅಷ್ಟೇ ಅಲ್ಲದೇ ಕನಕಗಿರಿ ಕ್ಷೇತ್ರದ ಮೇಲೆ ನೆರೆ ತಾಲೂಕಿನವರ ಹಿಡಿತ ತಪ್ಪಿಸಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮುಂದೆ ನಡೆದ 1999ರ ಚುನಾವಣೆಯಲ್ಲಿಯೂ ಮತ್ತೆ ಕನಕಗಿರಿ ಮತದಾರರು ಹೊರ ಕ್ಷೇತ್ರದ ಮಲ್ಲಿಕಾರ್ಜುನ ನಾಗಪ್ಪರನ್ನು ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಲ್ಲಿಕಾರ್ಜುನ ನಾಗಪ್ಪ ಎಸ್‌ಎಂ ಕೃಷ್ಣ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿ ಆಗಿದ್ದಾರೆ. ನಂತರ 2004ರಲ್ಲಿಯೂ ನೆರೆಯ ಗಂಗಾವತಿ ಕ್ಷೇತ್ರ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದ ಜಿ ವೀರಪ್ಪ ಕನಕಗಿರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ನೆರೆ ಜಿಲ್ಲೆ ದರ್ಬಾರ್: ಪಕ್ಕದ ಕ್ಷೇತ್ರದ ನಾಯಕ ಹಿಡಿತದಲ್ಲಿದ್ದ ಕನಕಗಿರಿ ಕ್ಷೇತ್ರ 2008ರ ನಂತರ ನೆರೆ ಜಿಲ್ಲೆಯ ನಾಯಕರ ವಶವಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಾಗಿ 2008ರಲ್ಲಿ ಕನಕಗಿರಿ ವಿಧಾನಸಭೆ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.
2008ರ ಚುನಾವಣೆ ವೇಳೆ ಮತದಾನಕ್ಕೆ ಕೇವಲ 2 ತಿಂಗಳು ಬಾಕಿ ಇರುವಾಗ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಶಿವರಾಜ್ ತಂಗಡಗಿ. ಬಾಗಲಕೋಟೆ ಜಿಲ್ಲೆ ಇಳಕಲ್‌ನಿಂದ ಬಂದು, ಬಿಜೆಪಿ ಟಿಕೆಟ್‌ಗೆ ಪೈಪೋಟಿ ಮಾಡಿದ್ದ ತಂಗಡಗಿ, ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದರು.
ಕೊಪ್ಪಳ ಜಿಲ್ಲೆಯವರೇ ಆದ ಶ್ಯಾಮಣ್ಣ ನಾರಿನಾಳ ಬಿಜೆಪಿಯಿಂದ, ಮುಕುಂದ್ ರಾವ್ ಭವಾನಿಮಠ ಕಾಂಗ್ರೆಸ್‌ನಿಂದ ಕಣದಲ್ಲಿದ್ದರೂ ಕನಕಗಿರಿ ಮತದಾರರು ಆಯ್ಕೆ ಮಾಡಿದ್ದು ಮಾತ್ರ ನೆರೆ ಜಿಲ್ಲೆಯ ಶಿವರಾಜ್ ತಂಗಡಗಿ (Shivaraj Tangadagi) ಅವರನ್ನು. ಇದನ್ನೂ ಓದಿ: ಜಾತಿ ಬಲ ಇಲ್ಲದಿದ್ದರೂ, ಅಭಿವೃದ್ಧಿ ನಂಬಿ ಗೆದ್ದು ಸಚಿವರಾದ ಬಿ.ಸಿ. ನಾಗೇಶ್
ಶಿವರಾಜ್ ತಂಗಡಗಿ ಭೋವಿ ಸಮುದಾಯಕ್ಕೆ ಸೇರಿದ್ದು, ಕನಕಗಿರಿ ಕ್ಷೇತ್ರದಲ್ಲಿ ಸ್ವ ಜಾತಿ ಮತ ಇರೋದು ಕೇವಲ 4 ಸಾವಿರ ಮಾತ್ರ. ಆದಾಗ್ಯೂ 2 ಬಾರಿ ಸತತವಾಗಿ ಆಯ್ಕೆ ಆಗಿದ್ದಲ್ಲದೇ ಎರಡೂ ಅವಧಿಯಲ್ಲಿ ಕ್ಯಾಬಿನೆಟ್ ಮಂತ್ರಿ ಆಗಿದ್ದು ಶಿವರಾಜ್ ತಂಗಡಗಿ ಹೆಚ್ಚುಗಾರಿಕೆ.
ಹಾಲಿ ಶಾಸಕರದ್ದು ನೆರೆ ಜಿಲ್ಲೆ: 2018ರಲ್ಲಿ ಶಾಸಕರಾಗಿ ಆಯ್ಕೆ ಆಗಿರೋ ಬಸವರಾಜ ದಡೆಸುಗೂರ (Basavaraj Dadesugur) ಕೂಡಾ ರಾಯಚೂರು ಜಿಲ್ಲೆಯವರು. ಸದ್ಯ ನಡೆಯುತ್ತಿರುವ 2023ರ ವಿಧಾನಸಭೆ ಚುನಾವಣೆಯಲ್ಲೂ ಕನಕಗಿರಿ ಕ್ಷೇತ್ರದಲ್ಲಿ ಬೇರೆ ಜಿಲ್ಲೆಯವರದ್ದೇ ದರ್ಬಾರ್ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯ ಶಿವರಾಜ್ ತಂಗಡಗಿ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ದಡೆಸುಗೂರ ಸೇರಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಟಿಕೆಟ್‌ಗೆ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಬಹುತೇಕರು ಮತ್ತದೇ ನೆರೆ ಜಿಲ್ಲೆಯವರು.
ರಾಯಚೂರು ಜಿಲ್ಲೆಯ ಗಾಯಿತ್ರಿ ಛಲವಾದಿ, ಹಾಲಿ ಬೆಂಗಳೂರಿನಲ್ಲಿರೋ ಯಾದಗಿರಿ ಜಿಲ್ಲೆಯ ಡಿಎಂ ಧರ್ಮಣ್ಣ, ಬಳ್ಳಾರಿ ಜಿಲ್ಲೆಯ ರಾಜಗೋಪಾಲ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳು.
ಕೆಆರ್‌ಪಿಪಿ ಘೋಷಿತ ಅಭ್ಯರ್ಥಿ ಡಾ. ಚಾರುಲ್ ದಾಸರಿ ಬಳ್ಳಾರಿ ಜಿಲ್ಲೆಯವರು. ಜೆಡಿಎಸ್ ಕೂಡ ರಾಯಚೂರು ಜಿಲ್ಲೆಯ ಉಮೇಶ್ ಉಮಲೂಟಿ ಅವರನ್ನು ಅಭ್ಯರ್ಥಿ ಅಂತಾ ಹೇಳಿಕೊಂಡಿತ್ತು. ಆದರೆ ಕಳೆದ 15 ದಿನದಿಂದ ಕನಕಗಿರಿ ವಿಧಾನಸಭೆ ಕ್ಷೇತ ವ್ಯಾಪ್ತಿಯ ಹುಲಿಹೈದರ ಗ್ರಾಮದ ಹನುಮೇಶ ಹುಳ್ಕಿಹಾಳ ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆ
ಕೊಪ್ಪಳ: ಜಿಲ್ಲೆಯ ಕೆಲ ಬಿಜೆಪಿ ಶಾಸಕರನ್ನು ಸೆಳೆಯಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳಿಗೆ ಪುಷ್ಠಿ ನೀಡುವಂತೆ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ್ ಮತ್ತು ಸಿಎಂ ಕುಮಾರಸ್ವಾಮಿ ಭೇಟಿಯಾಗಿರುವ ಫೋಟೋ ವೈರಲ್ ಆಗಿದೆ.
ಶನಿವಾರ ವೆಂಕಟರಾವ್ ನಾಡಗೌಡ ಅವರ ಸಮ್ಮುಖದಲ್ಲಿ ಬಸವರಾಜ್ ದಡೇಸಗೂರ್ ಸಿಎಂ ಜೊತೆ ಕೈ ಕುಲುಕಿರುವ ಫೋಟೋ ಹಲವು ಜಿಲ್ಲೆಯ ಕಮಲ ಅಂಗಳದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಕಳೆದ ಹಲವು ದಿನಗಳಿಂದ ಬಸವರಾಜ್ ತೊರೆಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಒಂದು ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಲಿದ್ದಾರೆ ಎನ್ನಲಾಗಿದೆ.
ಕೇವಲ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡರೆ ಸಾಲದು ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಬಿಜೆಪಿಯ ಎಂಎಲ್‍ಎ ಗಳನ್ನು ಸೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಈ ಸುದ್ದಿಯ ಬೆನ್ನಲ್ಲೆ ಬಸವರಾಜ್ ದಡೇಸಗೂರ್ ಫೋಟೋ ವೈರಲ್ ಆಗಿದೆ.
ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್, ಸುರಪುರ ಶಾಸಕ ರಾಜುಗೌಡ, ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಮತ್ತು ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್‍ಗೆ ಕೈ ಗಾಳ ಹಾಕಿದೆ. ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಬಗ್ಗೆ ಈಗಾಗಲೇ ಸಿದ್ದರಾಮಯ್ಯ ಅವರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುರಪುರ ಶಾಸಕ ರಾಜುಗೌಡ, ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರಿಂದ ಕಳೆದ ಕೆಲ ದಿನಗಳಿಂದ ಮೊಬೈಲ್ ಸ್ವಿಚ್ಛ್ ಆಫ್ ಅಗಿತ್ತು. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಕೊಪ್ಪಳ: ರಥದ ಚಕ್ರ ಮಧ್ಯದ ಕಟ್ಟಿಗೆಯ ಇರಿಸು ಮುರಿದು ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ ಘಟನೆ ಕೊಪ್ಪಳದಲ್ಲಿ ನೆಡದಿದೆ.
ಐತಿಹಾಸಿ ರಥೋತ್ಸವ ಎಂದೇ ಪ್ರಖ್ಯಾತಿ ಪಡೆದ ಕನಕಗಿರಿ ಕನಕರಾಯನ ರಥೋತ್ಸವದಲ್ಲಿ ಇಂದು ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡ ಕೆಲವರು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಆಗಿದ್ದೇನು?:
ಕನಕರಾಯನ ಜಾತ್ರೆ ನಿಮ್ಮಿತ್ತ ಅದ್ಧೂರಿ ರಥೋತ್ಸವ ನಡೆದಿತ್ತು. ದಾರಿಯ ಮಧ್ಯದಲ್ಲಿ ರಥದ ಒಂದು ಗಾಲಿಯ ಕಟ್ಟಿಗೆ ಇರಿಸು ಮುರಿದಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಕೆಲವರು ರಥಕ್ಕೆ ಭಾರೀ ಅನಾಹುತವನ್ನು ತಡೆದಿದ್ದಾರೆ. ಬಳಿಕ ರಥದಲ್ಲಿದ್ದ ಪೂಜಾರಿಗಳನ್ನು ಕೆಳಗೆ ಇಳಿಸಿ, ರಥಕ್ಕೆ ಆಸರೆಯಾಗಿ ಕಂಬಗಳನ್ನು ಇಟ್ಟು ಯಾವುದೇ ದುರಂತ ನಡೆಯದಂತೆ ಕ್ರಮಕೈಗೊಂಡಿದ್ದಾರೆ. ಆದರೆ ರಥೋತ್ಸವ ನೋಡಲು ಬಂದ ಸಾವಿರಾರು ಭಕ್ತರಿಗೆ ಘಟನೆ ನಿರಾಶೆ ಮೂಡಿಸಿದೆ.
ಅರ್ಧ ದಾರಿಯಲ್ಲೇ ನಿಂತ ರಥಕ್ಕೆ ನಾಳೆ ಬೆಳಗ್ಗೆ ಹೋಮ ಹವನ ಮಾಡಿಸಲಾಗುವುದು. ನಂತರ ಭಕ್ತರು ರಥವನ್ನು ಎಳೆದು ಪಾದಗಟ್ಟಿ ಮುಟ್ಟಿಸಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಅನಾಹುತದ ಬಗ್ಗೆ ಮೊದಲೇ ತಿಳಿದಿತ್ತು?:
ಕನಕರಾಯನ ರಥವು ಬಹಳ ವರ್ಷಗಳದ್ದಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ರಥೋತ್ಸವದ ವೇಳೆ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆದರೂ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸುವ ಬಗ್ಗೆ ನಿರ್ಲಕ್ಷ್ಯವಹಿಸಿದ್ದರು. ರಥ ಬಹಳ ಹಳೆಯದಾಗಿದ್ದರಿಂದ ಅವಘಡ ಸಂಭವಿಸುತ್ತದೆ ಎಂದು ದೇವಸ್ಥಾನದ ಆಡಳಿತಕ್ಕೆ ಮೊದಲೇ ಗೊತ್ತಿತ್ತು. ಹೀಗಾಗಿ ರಥಕ್ಕೆ ಇನ್ಸೂರೆನ್ಸ್ ಮಾಡಿಸುವ ಚಿಂತನೆ ಕೂಡ ನಡೆಸಿದ್ದರಂತೆ.
ಘಟನೆ ಬಗ್ಗೆ ಗೊತ್ತಿದ್ದರೂ ರಥೋತ್ಸವ ನಡೆಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ನಿರ್ಲಕ್ಷ್ಯೆ ತೋರಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.