Tag: kanagana ranaut

  • ಬಂಗಾರದ ಬೆಳೆ ತೆಗೆದ `ಪಠಾಣ್’ ಚಿತ್ರಕ್ಕೆ ಕಂಗನಾ ರಣಾವತ್ ಮೆಚ್ಚುಗೆ

    ಬಂಗಾರದ ಬೆಳೆ ತೆಗೆದ `ಪಠಾಣ್’ ಚಿತ್ರಕ್ಕೆ ಕಂಗನಾ ರಣಾವತ್ ಮೆಚ್ಚುಗೆ

    ಬಾದಷಾ ಶಾರುಖ್ ಖಾನ್ (Sharukh Khan) ನಟನೆಯ `ಪಠಾಣ್’ (Pathaan Film) ಚಿತ್ರ ಬಾಕ್ಸಾಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ಶಾರುಖ್ ಚಿತ್ರದಿಂದ ಬಾಲಿವುಡ್‌ಗೆ ಮರುಜೀವ ಬಂದಂತೆ ಆಗಿದೆ. ಇದೀಗ ʻಪಠಾಣ್ʼ ಚಿತ್ರದ ನೋಡಿ ಕಂಗನಾ ರಣಾವತ್ ಹಾಡಿ ಹೊಗಳಿದ್ದಾರೆ.

    ನಿರೀಕ್ಷೆಗೂ ಮೀರಿ ಪಠಾಣ್ ಸಿನಿಮಾ ಬಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಹಿಂದಿ ಸಿನಿಮಾಗಳಿಂದ ಗೆಲುವು ಸಿಗದೇ ಸೋತಿದ್ದ ಬಾಲಿವುಡ್‌ಗೆ ಇದೀಗ ಹೊಸ ಕಳೆ ಬಂದಿದೆ. ಜ.25ರಂದು ತೆರೆಗೆ ಅಬ್ಬರಿಸಿದ್ದ `ಪಠಾಣ್’ ಚಿತ್ರಕ್ಕೆ ವ್ಯಾಪಕ್ತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೂಲಗಳ ಪ್ರಕಾರ ಮೊದಲ ದಿನವೇ ಶಾರುಖ್ ಚಿತ್ರ 50ರಿಂದ 51.5 ಕೋಟಿ ರೂ. ಕಲೆಕ್ಷನ್ ಮಾಡಿದೆ. 2ನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

    `ಜೀರೋ’ (Zero) ಚಿತ್ರದಿಂದ ಸೋತು ಸುಣ್ಣಗಾಗಿದ್ದ ಶಾರುಖ್‌ಗೆ `ಪಠಾಣ್’ ಚಿತ್ರದಿಂದ ಬೂಸ್ಟ್ ಸಿಕ್ಕಂತೆ ಆಗಿದೆ. ಇನ್ನೂ ಈ ಸಿನಿಮಾ ನೋಡಿ ಕಂಗನಾ ಕೂಡ ರಿಯಾಕ್ಟ್ ಮಾಡಿದ್ದಾರೆ. ಪಠಾಣ್ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಈ ರೀತಿಯ ಸಿನಿಮಾಗಳು ಖಂಡಿತಾ ವರ್ಕ್ ಆಗಬೇಕು. ಹಿಂದಿ ಚಿತ್ರರಂಗವು ಇತರೆ ಚಿತ್ರರಂಗಕ್ಕಿಂತ ಹಿಂದೆ ಬಿದ್ದಿದೆ. ಕೊನೆಗೂ ನಮ್ಮ ಸಿನಿಮಾಗಳ ಮೂಲಕ ಕಮ್‌ಬ್ಯಾಕ್ ಆಗಿದ್ದೇವೆ ಎಂದು ನಟಿ ಹೊಗಳಿದ್ದಾರೆ. ಸಿನಿಮಾ ಮತ್ತು ಶಾರುಖ್ ನಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಪುತ್ರಿ ಅಥಿಯಾ- ರಾಹುಲ್‌ ಮದುವೆಗೆ ದುಬಾರಿ ಉಡುಗೊರೆ ನೀಡಿದ ಸುನೀಲ್ ಶೆಟ್ಟಿ

    ಶೀಘ್ರದಲ್ಲಿಯೇ 100 ಕೋಟಿ ರೂಪಾಯಿ ಕ್ಲಬ್‌ಗೆ ಪಠಾಣ್ ಸಿನಿಮಾ ಸೇರಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಒಳ್ಳೆಯ ಕಮಾಯಿ ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 20 ತಿಂಗಳ ನಂತರ ಟ್ವಿಟ್ಟರ್‌ಗೆ ಮರಳಿದ ಬಾಲಿವುಡ್ ನಟಿ ಕಂಗನಾ ರಣಾವತ್

    20 ತಿಂಗಳ ನಂತರ ಟ್ವಿಟ್ಟರ್‌ಗೆ ಮರಳಿದ ಬಾಲಿವುಡ್ ನಟಿ ಕಂಗನಾ ರಣಾವತ್

    ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranut) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ ಕಂಗನಾ ಮತ್ತೆ ಟ್ವಿಟ್ಟರ್‌ಗೆ (Twitter) ಮರಳಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    ಈ ಹಿಂದೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕೆ ಟ್ವಿಟ್ಟರ್ ಸಂಸ್ಥೆ 20 ತಿಂಗಳ ಹಿಂದೆ ಕಂಗನಾ ಖಾತೆಯನ್ನ ಸಸ್ಪೆಡ್ ಮಾಡಿತ್ತು. ಇದೀಗ ಅವರ ಟ್ವಿಟ್ಟರ್ ಖಾತೆ ಆಕ್ಟೀವ್ ಆಗಿದೆ. ಮತ್ತೆ ಟ್ವಿಟ್ಟರ್‌ಗೆ ಮರಳಿ ಬಂದಿರುವ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಸಿನಿಮಾ `ಎಮರ್ಜೆನ್ಸಿ’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Oscars 2023: `ಆರ್‌ಆರ್‌ಆರ್’ ಸಿನಿಮಾದ `ನಾಟು ನಾಟು’ ಸಾಂಗ್ ನಾಮಿನೇಟ್

    ಸೋಷಿಯಲ್ ಮೀಡಿಯಾದಲ್ಲಿ ಕಂಗನಾ ರಣಾವತ್ ಅವರು ಸಕ್ರಿಯರಾಗಿರುತ್ತಾರೆ. ಟ್ವಿಟ್ಟರ್‌ನಲ್ಲಿ ಅವರು ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈಗ ತಾವು ಟ್ವಿಟ್ಟರ್‌ಗೆ ಮರಳಿರುವ ಸುದ್ದಿಯನ್ನು ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ.

    ಈವರೆಗೆ ಕಂಗನಾ ರಣಾವತ್ ಅವರನ್ನು ಟ್ವಿಟ್ಟರ್‌ನಲ್ಲಿ ಬರೋಬ್ಬರಿ 2.9 ಮಿಲಿಯನ್  ಜನರು ಫಾಲೋ ಮಾಡುತ್ತಿದ್ದಾರೆ. ಈಗ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೀಪಿಕಾ ಪಡುಕೋಣೆ ಆಯ್ತು, ಈಗ ಕಂಗನಾ ರಣಾವತ್‌ಗೂ ಕೇಸರಿ ಕಂಟಕ

    ದೀಪಿಕಾ ಪಡುಕೋಣೆ ಆಯ್ತು, ಈಗ ಕಂಗನಾ ರಣಾವತ್‌ಗೂ ಕೇಸರಿ ಕಂಟಕ

    ಕಾಂಟ್ರವರ್ಸಿ ಕ್ವೀನ್ ಕಂಗನಾ(Kangana Ranaut) ಮತ್ತೆ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಳೆದ ನಾಲ್ಕೈದು ದಿನಗಳಿಂದ ದೀಪಿಕಾ ಕೇಸರಿ ಬಿಕಿನಿ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿರುವ ಬೆನ್ನಲ್ಲೇ ಕಂಗನಾ ರಣಾವತ್ ಕೂಡ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಿಯಾಲಿಟಿ ಶೋವೊಂದರ ಪೋಸ್ಟರ್‌ನಲ್ಲಿ ಕಂಗನಾ ಕೇಸರಿ ಬಣ್ಣಕ್ಕೆ ಬೂಟುಗಾಲಿಟ್ಟಿದ್ದಾರೆ ಎಂಬ ವಿಚಾರಕ್ಕೆ ನೆಟ್ಟಿಗರು ನಟಿಯ ವಿರುದ್ಧ ಗರಂ ಆಗಿದ್ದಾರೆ.

    `ಪಠಾಣ್’ (Pathan) ಚಿತ್ರದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ (Deepika Paukone) ಕೇಸರಿ ಬಿಕಿನಿ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಕಂಗನಾ ರಣಾವತ್ ಈಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. `ಲಾಕಪ್’ (Lock Upp) ಎಂಬ ರಿಯಾಲಿಟಿ ಶೋವೊಂದರಲ್ಲಿ ಕಂಗನಾ ರಣಾವತ್ ನಿರೂಪಣೆ ಜವಾಬ್ದಾರಿಯನ್ನ ಹೊತ್ತಿದ್ದರು. ಈ ಶೋನಲ್ಲಿನಪೋಸ್ಟರ್‌ನಲ್ಲಿ ಕಂಗನಾ ಕೇಸರಿ ಬಣ್ಣಕ್ಕೆ ಬೂಟುಗಾಲಿಟ್ಟಿದ್ದಾರೆ. ಈ ವಿಚಾರವಾಗಿ ನಟಿ ಟ್ರೋಲ್ ಆಗ್ತಿದ್ದಾರೆ.

    ಪದ್ಮಶ್ರೀ ಪುರಸ್ಕೃತ ನಟಿ ಕಂಗನಾರನ್ನ ಚಿತ್ರರಂಗದಿಂದ ಬ್ಯಾನ್ (Ban) ಮಾಡಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತ ಟ್ರೋಲ್ (Troll) ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನೂ ಓದಿ: ಕೇಸರಿ ಬಿಕಿನಿಗೆ ನೆಟ್ಟಿಗರು ಗರಂ: ಬೈಕಾಟ್ ಪಠಾಣ್ ಟ್ರೆಂಡ್

    ದೀಪಿಕಾ (Deepika) ಕೇಸರಿ ಬಿಕಿನಿ ವಿವಾದ ನಂತರ ಕಂಗನಾ ಅನೇಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ ಈ ವಿವಾದದ ಬಗ್ಗೆ ಕಂಗನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಗನಾ ಕೇಸರಿ ವಿವಾದ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಧಾಕಡ್‌ ಚಿತ್ರ ರಿಲೀಸ್ ಹಿನ್ನೆಲೆ ಕಂಗನಾ ರಣಾವತ್ ಟೆಂಪಲ್ ರನ್

    ಧಾಕಡ್‌ ಚಿತ್ರ ರಿಲೀಸ್ ಹಿನ್ನೆಲೆ ಕಂಗನಾ ರಣಾವತ್ ಟೆಂಪಲ್ ರನ್

    ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ `ಧಾಕಡ್’ ಸಿನಿಮಾ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. `ಧಾಕಡ್’ ರಿಲೀಸ್‌ಗೂ ಮುನ್ನ ಕಂಗನಾ ರಣಾವತ್ ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಕಂಗನಾ ತಿರುಮಲಕ್ಕೆ ಬಂದಿರೋ ಫೋಟೋಗಳು ಭಾರೀ ವೈರಲ್‌ ಆಗುತ್ತಿದೆ.

    ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಿತ್ರ `ಧಾಕಡ್’ ಇದೇ ಮೇ 20ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಚಿತ್ರದ ರಿಲೀಸ್ ಹಿನ್ನೆಲೆ ಕಂಗನಾ ಮತ್ತು ಚಿತ್ರತಂಡ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇದೀಗ ತಿರುಮಲಕ್ಕೆ ಬಂದಿರುವ ಫೋಟೋಗಳು ವೈರಲ್ ಆಗಿವೆ. ಬಾಲಿವುಡ್ ನಟಿ ಕಂಗನಾ ಆಗಮನದ ಹಿನ್ನೆಲೆ ದೇವಸ್ಥಾನದ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿತ್ತು.

     

    View this post on Instagram

     

    A post shared by Kangana Dhaakad (@kanganaranaut)

    `ಧಾಕಡ್’ ಚಿತ್ರತಂಡದೊಂದಿಗೆ ತಿರುಪತಿ ದೇವರಿಗೆ ಪೂಜೆ ಸಲ್ಲಿಸಿದ ಕಂಗನಾ ಅವರು ಆರ್ಶೀವಾದ ಪಡೆದುಕೊಂಡಿದ್ದಾರೆ. ಸಹೋದರಿ ರಂಗೋಲಿ ಚಂಡೇಲ್ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಆಪ್ತರ ಜತೆ ದೇವರ ದರ್ಶನ ಪಡೆದಿದ್ದಾರೆ. ಬಾಲಿವುಡ್‌ನಲ್ಲಿ ಸೌತ್ ರಂಗದ ಸಿನಿಮಾಗಳು ಹೆಚ್ಚು ಸೌಂಡ್‌ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿಯ ಯಾವ ಚಿತ್ರ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುವಲ್ಲಿ ಸೋತಿದೆ. ಹಾಗಾಗಿ ಸಹಜವಾಗಿ `ಧಾಕಡ್’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಹಾಗಾಗಿ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿ ಕಂಗನಾ ಮತ್ತು ಟೀಮ್ ದೇವರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ರಾಗಿಣಿ ಮದುವೆಯಲ್ಲಿ ಪಾಲ್ಗೊಂಡ ರಶ್ಮಿಕಾ ಮಂದಣ್ಣ: ಫ್ಲೈಟ್ ಡಿಲೆಯಾಗಿ ಒದ್ದಾಡಿದ ನಟಿ

     

    View this post on Instagram

     

    A post shared by Kangana Dhaakad (@kanganaranaut)

    `ಧಾಕಡ್’ ಚಿತ್ರದ ಫಸ್ಟ್ ಲುಕ್ ಮತ್ತು ಟ್ರೇಲರ್‌ನಲ್ಲಿ ಸಖತ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರೋ ಕಂಗನಾ ಟ್ಯಾಲೆಂಟ್ ನೋಡಿ ಇತ್ತೀಚೆಗೆ ಸಲ್ಮಾನ್ ಖಾನ್ ಟ್ರೇಲರ್ ಶೇರ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ರಿಲೀಸ್ ಬಳಿಕ ಅದೆಷ್ಟರ ಮಟ್ಟಿಗೆ ಸೌಂಡ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.