Tag: Kampli Ganesh

  • ಸಂಧಾನದ ಚಾನ್ಸೇ ಇಲ್ಲ- ಶಾಸಕ ಆನಂದ್ ಸಿಂಗ್ ಮೊದಲ ಪ್ರತಿಕ್ರಿಯೆ

    ಸಂಧಾನದ ಚಾನ್ಸೇ ಇಲ್ಲ- ಶಾಸಕ ಆನಂದ್ ಸಿಂಗ್ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಈಗಲ್ ಟನ್ ರೆಸಾರ್ಟ್ ನಲ್ಲಿ ಹಲ್ಲೆಗೊಳಗಾಗಿರೋ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ಕೊಂಚ ಚೇತರಿಸಿಕೊಳ್ಳುತ್ತಿದ್ದು, ಸಂಧಾನದ ಚಾನ್ಸೇ ಇಲ್ಲ ಎಂದು ಹೇಳಿದ್ದಾರೆ.

    ಶುಕ್ರವಾರ ಅಪೋಲೋ ಆಸ್ಪತ್ರೆಯಿಂದ ನಾರಾಯಣ ನೇತ್ರಾಲಯಕ್ಕೆ ಹೋಗುವ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸದ್ಯ ನಾನು ಚೇತರಿಸಿಕೊರ್ಳಳುತ್ತಿದ್ದೇನೆ. ಆದ್ರೆ ಪೂರ್ತಿಯಾಗಿ ಚೇತರಿಸಿಕೊಳ್ಳಲು ಇನ್ನು 15-20 ದಿನ ಬೇಕಾಗಬಹುದು. ತುಂಬಾ ಕ್ರ್ಯಾಕ್ ಹಾಗೂ ಎದೆಯ ಭಾಗಕ್ಕೆ ನೋವಾಗಿದೆ ಎಂದು ಹೇಳಿದ್ರು.

    ಇದೇ ವೇಳೆ ಕಂಪ್ಲಿ ಗಣೇಶ್ ಬಗ್ಗೆ ಕೇಳಿದಾಗ, ಅವರು ಎಲ್ಲಿದ್ದಾರೋ ಗೊತ್ತಿಲ್ಲ, ಕಾನೂನು ಪ್ರಕಾರ ಕೈಗೊಳ್ಳಲಿ. ಸಂಧಾನದ ಚಾನ್ಸೇ ಇಲ್ಲ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ:  12 ದಿನವಾದ್ರೂ ಅರೆಸ್ಟ್ ಆಗಿಲ್ಲ ಶಾಸಕ ರೌಡಿ ಗಣೇಶ್ – ಇತ್ತ ಆನಂದ್ ಸಿಂಗ್ ಸಂಧಾನಕ್ಕೆ ಜಮೀರ್ ಸರ್ವಯತ್ನ

    ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿದ ನಂತರ ಕೈ ಶಾಸಕರು ಪಾರ್ಟಿ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಶಾಸಕ ಗಣೇಶ್ ಕೋಪಗೊಂಡು ಬಾಟಲ್ ನಿಂದ ಆನಂದ್ ಸಿಂಗ್ ತಲೆಗೆ ಹೊಡೆದಿದ್ದಾರೆ. ಪರಿಣಾಮ ಆನಂದ್ ಸಿಂಗ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಾಸಕ ಗಣೇಶ್ ಹಲ್ಲೆ ವಿಚಾರ ನನ್ನ ಇಲಾಖೆ ವ್ಯಾಪ್ತಿಗೆ ಬರಲ್ಲ- ಸಚಿವ ಕೆಜೆ ಜಾರ್ಜ್

    ಶಾಸಕ ಗಣೇಶ್ ಹಲ್ಲೆ ವಿಚಾರ ನನ್ನ ಇಲಾಖೆ ವ್ಯಾಪ್ತಿಗೆ ಬರಲ್ಲ- ಸಚಿವ ಕೆಜೆ ಜಾರ್ಜ್

    ಚಿಕ್ಕಮಗಳೂರು: ರೆಸಾರ್ಟ್ ರಾಜಕೀಯ ಮುಗಿಸಿ ಬಿಜೆಪಿಯವರು ಬರ ಅಧ್ಯಯನಕ್ಕೆ ಮುಂದಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಕೂಡ ಬರ ಅಧ್ಯಯನ ಆರಂಭಿಸಿದ್ದಾರೆ.

    ಸಚಿವರು ಇಂದು ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿದರು. ಈ ವೇಳೆ ಈಗಲ್‍ಗನ್ ರೆಸಾರ್ಟಿನಲ್ಲಿ ಕಾಂಗ್ರೆಸ್ ಶಾಸಕರ ಹಲ್ಲೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಇದನ್ನು ಓದಿ: ಕಂಪ್ಲಿ ಗಣೇಶ್ ಕಣ್ಣಾ ಮುಚ್ಚಾಲೆ ಆಟ – ಮುಂಬೈನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು!

    ಗಣೇಶ್ ಹಲ್ಲೆ ಮಾಡಿರುವ ವಿಚಾರ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ನಾನು ಕೈಗಾರಿಕಾ ಮಂತ್ರಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತವಾರಿ ಸಚಿವ ಅಷ್ಟೇ. ಇದಕ್ಕೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಉತ್ತರ ಕೊಡುತ್ತಾರೆ ಎಂದು ಹಾರಿಕೆ ಉತ್ತರ ನೀಡಿದರು.

    ನೀವು ಪ್ರಕರಣದ ವಿಚಾರಣೆಯ ಕಮಿಟಿಯಲ್ಲಿ ಇರುವುದಿಂದ ಕೇಳಿದ್ವಿ ಅಂತಾ ಮಾಧ್ಯಮದವರು ಹೇಳುತ್ತಿದ್ದಂತೆ, ನಾನು ಕಮಿಟಿಯ ಸದಸ್ಯನಾಗಿ ನಿಮಗೆ ಎಲ್ಲವನ್ನೂ ಹೇಳುವುದಕ್ಕೆ ಆಗುತ್ತಾ? ಇಲ್ಲಿ ನಿಂತು ಎಲ್ಲವನ್ನೂ ಹೇಳಲಿಕ್ಕೆ ಆಗುವುದಿಲ್ಲ. ವಿಚಾರಣೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಾರಿಕೊಂಡರು.

    ಈ ವೇಳೆ ಅಲ್ಲಿದ್ದ ಕೆಲ ಸ್ಥಳೀಯರು, ನೀವು ಬಂದು, ನೋಡಿ ವಾಪಾಸ್ ಹೋಗಿಬಿಡುತ್ತೀರಿ. ಆದರೆ ನಿಮ್ಮಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಹನಿ ನೀರಿಗೂ ಹಾಹಾಕಾರವಿದೆ. ನಿಮ್ಮ ಅಧ್ಯಯನದ ಪ್ರವಾಸಕ್ಕಿಂತ ನಮಗೆ ಶಾಶ್ವತ ನೀರಾವರಿ ಯೋಜನೆ ಬೇಕು ಎಂದು ಆಗ್ರಹಿಸಿದರು. ಮಧ್ಯಾಹ್ನ 1 ಗಂಟೆಗೆ ಬಂದು ಬರ ಅಧ್ಯಯನ ನಡೆಸಿದ ಸಚಿವರು ಎರಡು ಗಂಟೆಗೆ ವಾಪಾಸ್ ನಡೆದರು. ಸಚಿವರ ಅಲ್ಲಿಂದ ಹೋಗುತ್ತಿದ್ದಂತೆ ಕೆಲವರು, ಇವರು ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಅಷ್ಟೇ ಎಂದು ಆಕ್ರೋಶ ಹೊರ ಹಾಕಿದರು.

    https://www.youtube.com/watch?v=F1q42m7oBuA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತ್ತ ಪೊಲೀಸರ ಹುಡುಕಾಟ, ಇತ್ತ ಜಾಮೀನಿಗೆ ಶಾಸಕ ಗಣೇಶ್ ಅರ್ಜಿ!

    ಅತ್ತ ಪೊಲೀಸರ ಹುಡುಕಾಟ, ಇತ್ತ ಜಾಮೀನಿಗೆ ಶಾಸಕ ಗಣೇಶ್ ಅರ್ಜಿ!

    ರಾಮನಗರ: ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಪೊಲೀಸರ ಹುಡುಕಾಟದ ನಡುವೆ ನಿರೀಕ್ಷಣಾ ಜಾಮೀನಿಗೆ ಮುಂದಾಗಿದ್ದಾರೆ.

    ಜನವರಿ 19ರ ರಾತ್ರಿ ಈಗಲ್ ಟನ್ ರೆಸಾರ್ಟಿನಲ್ಲಿ ಕಂಪ್ಲಿ ಗಣೇಶ್ ಕುಡಿದು ಗಲಾಟೆ ನಡೆಸಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸ್ ವಿಶೇಷ ತಂಡಗಳ ಹುಡುಕಾಟ ನಡೆಸುತ್ತಿವೆ.

    ಪೊಲೀಸರ ಹುಡುಕಾಟದ ನಡುವೆ ಶಾಸಕ ಗಣೇಶ್ ಜಾಮೀನು ಕಸರತ್ತು ನಡೆಸಿದ್ದು, ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಮುಂದಾಗಿದ್ದಾರೆ. ಇಂದು ರಾಮನಗರ ಜೆಎಮ್‍ಎಫ್‍ಸಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಶಾಸಕ ಗಣೇಶ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

    ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.

    ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಅವರನ್ನು ಅಮಾನತು ಮಾಡಲಾಗಿದೆ. ಕೆಪಿಸಿಸಿ ಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದಿಂದ ಶಾಸಕ ಗಣೇಶ್ ಅವರನ್ನು ಅಮಾನತು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಡಿ ಶಾಸಕ ಎಲ್ಲಿ? `ಕೈ’ ಶಾಸಕನನ್ನು ಹುಡುಕದಂತೆ ಸರ್ಕಾರದಿಂದಲೇ ಒತ್ತಡ?

    ರೌಡಿ ಶಾಸಕ ಎಲ್ಲಿ? `ಕೈ’ ಶಾಸಕನನ್ನು ಹುಡುಕದಂತೆ ಸರ್ಕಾರದಿಂದಲೇ ಒತ್ತಡ?

    – ರಾಜಿ ಸಂಧಾನಕ್ಕೆ ಗಣೇಶ್ ಯತ್ನ
    – ಆಸ್ಪತ್ರೆಗೆ ಬಂದು ಕ್ಷಮೆ ಕೇಳ್ತೀನಿ
    – ಅರೆಸ್ಟ್ ಆಗದ ಹೊರತು ಬಿಡುಗಡೆಯಾಗಲ್ಲ:  ಆನಂದ್ ಸಿಂಗ್ ಪ್ರತಿಜ್ಞೆ

    ಬೆಂಗಳೂರು: ಬಿಡದಿ ಈಗಲ್ ಟನ್ ರೆಸಾರ್ಟಿನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ `ರೌಡಿ’ ಶಾಸಕ ಕಂಪ್ಲಿ ಗಣೇಶ್ ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

    ಸೋಮವಾರ ಮಧ್ಯಾಹ್ನದವರೆಗೂ ರೆಸಾರ್ಟಿನಲ್ಲಿದ್ದ ಗಣೇಶ್ ತನ್ನ ವಿರುದ್ಧ ಎಫ್‍ಐಆರ್ ದಾಖಲಾಗುತ್ತಿದ್ದಂತೆ ದಿಢೀರ್ ಕಣ್ಮರೆಯಾಗಿದ್ದಾರೆ. ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಷ್ಟು ಹೊತ್ತಿಗೆ ಬಂಧನವಾಗಬೇಕಿತ್ತು.

    ರಾಮನಗರ ಡಿವೈಎಸ್ಪಿ ಪುರುಷೋತ್ತಮ್ ಹಾಗೂ ಬಿಡದಿ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಗಣೇಶ್ ಪತ್ತೆಗೆ ಮೂರು ತಂಡ ರಚನೆಯಾಗಿದ್ದು, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಗಣೇಶ್ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. `ಕೈ’ ಶಾಸಕನಾಗಿರುವ ಗಣೇಶ್ ಹುಡುಕದಂತೆ ಪೊಲೀಸರ ಮೇಲೆ ಸರ್ಕಾರದಿಂದಲೇ ಒತ್ತಡ ಇದ್ಯಾ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ.

    ಸಂಧಾನಕ್ಕೆ ಯತ್ನ:
    ಮಾನ ಉಳಿಸಿಕೊಳ್ಳುವಲ್ಲಿ ಭರದಲ್ಲಿ `ರೌಡಿ ಎಂಎಲ್‍ಎ’ ರಕ್ಷಣೆಗೆ ಕಾಂಗ್ರೆಸ್ ಮುಂದಾಗುತ್ತಿದ್ದು, ಗಣೇಶ್ ಮತ್ತು ಆನಂದ್ ಸಿಂಗ್ ಜೊತೆಗೆ ಸಂಧಾನಕ್ಕೆ ಪ್ರಯತ್ನ ನಡೆಸುತ್ತಿದೆ. ದೋಸ್ತಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಜೊತೆ ಗಣೇಶ್ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಕೋಪದಲ್ಲಿ ಏನೋ ಆಗಿ ಹೋಗಿದೆ. ನಾನು ಅಣ್ಣನ ಕ್ಷಮೆ ಕೇಳುತ್ತೇನೆ ಎಂದು ರಾಜಿ ಸಂಧಾನದಲ್ಲಿ ಪ್ರಕರಣವನ್ನು ಇತ್ಯರ್ಥ ಪಡಿಸಲು ಗಣೇಶ್ ಮುಂದಾಗಿದ್ದಾರೆ. ಜಮೀರ್ ಮೂಲಕ ಗಣೇಶ್ ಸಂಧಾನಕ್ಕೆ ಯತ್ನಿಸಿದ್ದಾರೆ. ಆನಂದ್ ಸಿಂಗ್ ಒಪ್ಪುವುದಾದರೆ ಆಸ್ಪತ್ರೆಗೆ ಗಣೇಶ್ ಅವರನ್ನು ಕರೆದುಕೊಂಡು ಬಂದು ಕ್ಷಮೆ ಕೇಳಿಸುತ್ತೇನೆ ಎಂದು ಜಮೀರ್ ನಾಯಕರ ಜೊತೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆನಂದ್ ಸಿಂಗ್ ಪ್ರತಿಜ್ಞೆ:
    ಶಾಸಕ ಗಣೇಶ್ ಅರೆಸ್ಟ್ ಆಗಬೇಕು. ಅಲ್ಲಿಯವರೆಗೆ ನಾನು ಆಸ್ಪತ್ರೆಯಿಂದ ಹೊರಬರುವುದಿಲ್ಲ ಎಂದು ಆನಂದ್ ಸಿಂಗ್ ಪ್ರತಿಜ್ಞೆ ಮಾಡಿದ್ದಾರಂತೆ. ಈಗ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಗಣೇಶ್‍ಗೆ ಜಾಮೀನು ಸಿಗುತ್ತದೆ. ಹೀಗಾಗಿ ಗಣೇಶ್ ಅರೆಸ್ಟ್ ಆಗುವವರೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನುವ ವಿಚಾರವನ್ನು ಮೂಲಗಳು ತಿಳಿಸಿವೆ. ಆನಂದ್ ಸಿಂಗ್ ಗಾಯವೆಲ್ಲಾ ಮಾಸುತ್ತಿದ್ದು, ಕಣ್ಣಿನ ಭಾಗದಲ್ಲಿ ಊತ ಕಡಿಮೆ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇವಲ ಮಾತಿಗೆ ಮಾತು ಬೆಳೆದಿದೆ ಅಷ್ಟೇ, ಹಲ್ಲೆ ಮಾಡಿಲ್ಲ: ಕಂಪ್ಲಿ ಗಣೇಶ್

    ಕೇವಲ ಮಾತಿಗೆ ಮಾತು ಬೆಳೆದಿದೆ ಅಷ್ಟೇ, ಹಲ್ಲೆ ಮಾಡಿಲ್ಲ: ಕಂಪ್ಲಿ ಗಣೇಶ್

    ಬೆಂಗಳೂರು: ಕೇವಲ ಮಾತಿಗೆ ಮಾತಿ ಬೆಳೆದಿದೆ ಅಷ್ಟೇ. ಹಲ್ಲೆ ಮಾಡಿದ್ದಾರೆ ಎನ್ನುವುದು ಶುದ್ಧ ಸುಳ್ಳು ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದು ಶುದ್ಧ ಸುಳ್ಳು. ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಬಾಟಲಿ ತೆಗೆದುಕೊಂಡು ಹೊಡೆದಿದ್ದಾರೆ. ಅವರಿಗೆ 14-15 ಹೊಲಿಗೆ ಹಾಕಿದ್ದಾರೆ ಎಂದು ತೋರಿಸುತ್ತಿದ್ದೀರಿ. ಆದರೆ ಆನಂದಣ್ಣಗೆ ನಾನು ಪ್ರಾಮಾಣಿಕವಾಗಿ ನಾನು ಹಾಗೂ ನನ್ನ ಕುಟುಂಬ ಅವರ ಬೆನ್ನಿಗೆ ನಿಂತಿದ್ದೇವೆ. ವೈಯಕ್ತಿಕವಾಗಿ ನನಗೆ ಅವರ ಬಗ್ಗೆ ಅವರ ಕುಟುಂಬದ ಬಗ್ಗೆ ಬಹಳ ಗೌರವ ನೀಡುತ್ತೇನೆ. ಇದು ಬೇಕು ಅಂತಾ ಮಾಡಿದ್ದಲ್ಲ ಎಂದರು.

    ನನ್ನ ಗನ್‍ಮ್ಯಾನ್ ಬಗ್ಗೆಯೂ ಬಹಳ ಮಾತನಾಡುತ್ತಿದ್ದೀರಿ. ಆದರೆ ಅದೆಲ್ಲಾ ಸುಳ್ಳು. ನನಗೆ ಆನಂದಣ್ಣ ಅವರ ಬಗ್ಗೆ ಯಾವುದೇ ದ್ವೇಷ ಇಲ್ಲ. ನಾವು ಕೇವಲ ಮಾತನಾಡಿದ್ದು, ಆದರೆ ದೊಡ್ಡ ಮಟ್ಟದಲ್ಲಿ ಈಗ ಸೃಷ್ಟಿ ಆಗಿರುವ ರೀತಿ ಏನೂ ನಡೆದಿಲ್ಲ. ಮಾತಿಗೆ ಮಾತು ಬೆಳಿತು ಅಷ್ಟೇ ಎಂದು ಹೇಳುತ್ತಾ ಕಂಪ್ಲಿ ಗಣೇಶ್ ಅಲ್ಲಿಂದ ಹೊರಟು ಹೋದರು.

    https://www.youtube.com/watch?v=2s8iSLkOnfk&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೆಸಾರ್ಟಿನಲ್ಲೇ ಬಡಿದಾಡಿಕೊಂಡು ರಾಜ್ಯದ ಮಾನವನ್ನು ಹಾಳು ಮಾಡಿದ್ರು – ಆರ್. ಅಶೋಕ್

    ರೆಸಾರ್ಟಿನಲ್ಲೇ ಬಡಿದಾಡಿಕೊಂಡು ರಾಜ್ಯದ ಮಾನವನ್ನು ಹಾಳು ಮಾಡಿದ್ರು – ಆರ್. ಅಶೋಕ್

    ಬೆಂಗಳೂರು: ಕರ್ನಾಟಕ ಶಾಸಕರ ಮಾನ ಮರ್ಯಾದೆಯನ್ನು ಹರಾಜು ಹಾಕುವ ಕೆಲಸವನ್ನು ಕಾಂಗ್ರೆಸ್‍ನವರು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಶಾಸಕ ಆನಂತ್ ಸಿಂಗ್ ಮೇಲಿನ ಹಲ್ಲೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಗುಂಡಾಗಿರಿ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಜನಪ್ರತಿನಿಧಿಯಾಗಿದ್ದು ರೆಸಾರ್ಟಿನಲ್ಲಿ ಹೊಡೆದಾಡಿಕೊಂಡು ರಾಜ್ಯದ ಎಲ್ಲ ಶಾಸಕರ ಮಾನವನ್ನು ಹರಾಜು ಹಾಕಿದ್ದಾರೆ. ಜನರಿಗೆ ಶಾಸಕರ ಮೇಲಿದ್ದ ನಂಬಿಕೆ, ಗೌರವವನ್ನು ಹಾಳು ಮಾಡಿದ್ದಾರೆ. ಈ ಘಟನೆಯಿಂದ ರಾಜ್ಯ 224 ಶಾಸಕರು ತಲೆ ತಗ್ಗಿಸಿ ನಡೆಯುವಂತಾಗಿದೆ ಎಂದು ಕಿಡಿಕಾರಿದ್ದಾರೆ.

    ಬಾರ್ ನಲ್ಲಿ ಗಲಾಟೆ ಮಾಡಿದ ಪುಂಡ ಪೋಕರಿಗಳನ್ನು ಪೊಲೀಸರು ಹಿಡಿದು ಥಳಿಸಿ ಬುದ್ಧಿ ಕಲಿಸುತ್ತಾರೆ. ಆದರೆ ಈಗ ಎಲ್ಲಿ ಹೋಗಿದ್ದಾರೆ ಪೊಲೀಸರು? ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ರೆಸಾರ್ಟಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಂದರೆ ಗುಂಡಾ ಸಂಸ್ಕøತಿಯ ಪಕ್ಷ ಎನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದರು.

    ಆನಂದ್ ಸಿಂಗ್ ಅವರಿಗೆ ಬಾಟಲ್ ನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಈ ಹಿಂದೆ ಶಾಸಕ ನಲಪಾಡ್ ಪುತ್ರನ ಪ್ರಕರಣವನ್ನು ನಾವು ನೋಡಿದ್ದೇವೆ ಎಂದ ಅವರು, ಈ ಘಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ಅವರು ಶಾಸಕರ ಮಧ್ಯೆ ಬೆಂಕಿ ಹಚ್ಚಿ, ಪಕ್ಷದಲ್ಲಿ ಗುಂಪುಗಳನ್ನಾಗಿ ಮಾಡಿದರು. ಸಿಎಲ್‍ಪಿ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಸುಮಾರು 20 ಶಾಸಕರು ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರ ಕುತಂತ್ರವೇ ಕಾರಣ ಎಂದು ದೂರಿದರು.

    ಆನಂದ್ ಸಿಂಗ್ ಅವರಿಗೆ ಕೇವಲ ಎದೆನೋವು ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹಾಗಿದ್ದರೆ ಆನಂದ್ ಸಿಂಗ್ ಅವರನ್ನು ಹೊರಗೆ ತಂದು ತೋರಿಸಲಿ, ನಿಜವಾದ ಸತ್ಯ ಬಯಲಿಗೆ ಬರುತ್ತದೆ. ಪ್ರಕರಣವನ್ನು ಮುಚ್ಚಿ ಹಾಕುವುದು ಸರಿಯಲ್ಲ ಎಂದು ಗುಡುಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv