Tag: Kamasutra

  • ಉರ್ಫಿ ಜಾವೇದ್ ಬೆನ್ನಿಗೆ ನಿಂತು ‘ಕಾಮಸೂತ್ರ’ ನೆನಪಿಸಿಕೊಂಡ ಶೆರ್ಲಿನ್ ಚೋಪ್ರಾ

    ಉರ್ಫಿ ಜಾವೇದ್ ಬೆನ್ನಿಗೆ ನಿಂತು ‘ಕಾಮಸೂತ್ರ’ ನೆನಪಿಸಿಕೊಂಡ ಶೆರ್ಲಿನ್ ಚೋಪ್ರಾ

    ಬಾಲಿವುಡ್ (Bollywood)ನ ವಿವಾದಿತ ತಾರೆ ಶೆರ್ಲಿನ್ ಚೋಪ್ರಾ (Sherlyn Chopra) ಮತ್ತೆ ಸುದ್ದಿಗೆ ಸಿಕ್ಕಿದ್ದಾರೆ. ತಮ್ಮ ಬದುಕಿನಲ್ಲಿ ನಡೆದ ಹಲವಾರು ಘಟನೆಗಳನ್ನು ಅವರು ಕ್ಯಾಮೆರಾ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಮತ್ತೋರ್ವ ನಟಿ ಉರ್ಫಿ ಜಾವೇದ್ (Urfi Javed) ಪರವಾಗಿ ಸಾಕಷ್ಟು ಮಾತುಗಳನ್ನು ಆಡಿದ್ದಾರೆ. ಉರ್ಫಿಯನ್ನು ಅವರು ಮೆಚ್ಚಿಕೊಂಡಿದ್ದಾರೆ.

    ಅರೆಬರೆ ಬಟ್ಟೆ ಧರಿಸುವ ಕಾರಣದಿಂದಾಗಿ ಉರ್ಫಿ ಜಾವೇದ್ ಈಗಾಗಲೇ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೀದಿಯಲ್ಲೇ ಅನೇಕರು ಜಗಳ ಮಾಡಿದ್ದಾರೆ. ಆದರೆ, ಅಂತಹ ಬಟ್ಟೆಯನ್ನು ಹಾಕಿದರೆ ತಪ್ಪೇನು ಎನ್ನುತ್ತಾರೆ ಶೆರ್ಲಿನ್ ಚೋಪ್ರಾ, ‘ನಮ್ಮದು ಕಾಮಸೂತ್ರದ (Kamasutra) ದೇಶ. ಇಂಥದ್ದೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳೋಕೆ ಯಾರಿಗೂ ಹಕ್ಕಿಲ್ಲ’ ಎಂದಿದ್ದಾರೆ ಶೆರ್ಲಿನ್.

    ಕಳೆದ ವರ್ಷ ನೀಲಿ ಸಿನಿಮಾ ನಿರ್ಮಾಣದ ಕುರಿತಾಗಿ ರಾಜ್ ಕುಂದ್ರಾ (Raj Kundra) ಅರೆಸ್ಟ್ ಆಗಿದ್ದರು. ಈ ವೇಳೆ ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಮಾತನಾಡಿದ್ದರು. ತಮ್ಮ ಹಳೆಯ ರಿಲೇಷನ್‌ಶಿಪ್ ಬಗ್ಗೆ ಅವರು ಮುಚ್ಚುಮರೆ ಇಲ್ಲದೇ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಹಣಕ್ಕಾಗಿ ಹಲವರ ಜೊತೆ ಲೈಂಗಿಕ ಕ್ರಿಯೆ(Sex)  ನಡೆಸಿದ್ದೆ ಎಂದು ಈ ಹಿಂದೆ ನಟಿ ಹೇಳಿದ್ದರು. ಇದರ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ನೇರವಾಗಿ ಮಾತನಾಡುವ ಮೂಲಕ ಅನೇಕರ ಹುಬ್ಬೇರಿಸಿದ್ದಾರೆ. ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು. ಆ ಹೇಳಿಕೆಯ ಬಗ್ಗೆ ಈಗ ನಟಿ ಮಾತನಾಡಿದ್ದಾರೆ.

    ಈ ಹಿಂದೆ ಅವರು ರಾಜಕಾರಣಿಯ ಮಗನೊಬ್ಬನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಆತನ ಜೊತೆ ತಮಗೆ ಇದ್ದ ಸಂಬಂಧದ ಬಗ್ಗೆ ಹೇಳಿಕೆ ನೀಡುವಾಗ ಶೆರ್ಲಿನ್ ಚೋಪ್ರಾ ಅವರು ಮುಚ್ಚುಮರೆ ಇಲ್ಲದೇ ಮಾತನಾಡಿದ್ದರು. ಆದರೆ ತಮ್ಮ ಹೇಳಿಕೆ ಬೇರೆ ರೀತಿಯಲ್ಲಿ ಬಿಂಬಿತವಾಗಿದೆ ಎಂಬುದು ಶೆರ್ಲಿನ್ ಚೋಪ್ರಾ ಅವರು ಹೇಳಿದ್ದಾರೆ.

     

    ತನ್ನ ಬಾಯ್ ಫ್ರೆಂಡ್ ತನಗೆ ಲೈಂಗಿಕತೆಗಾಗಿ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದನು. ರಾಜಕಾರಣಿಯ ಪುತ್ರನ ನಡವಳಿಕೆ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ. ಇನ್ನೂ ಸಿನಿಮಾ ಆಡಿಷನ್ ನೀಡುವಾಗ ಅನೇಕ ನಿರ್ದೇಶಕ-ನಿರ್ಮಾಪಕರು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]