Tag: Kamalnath

  • ಕಮಲ್‌ನಾಥ್‌ ಇಂದು, ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ: ದಿಗ್ವಿಜಯ್‌ ಸಿಂಗ್‌

    ಕಮಲ್‌ನಾಥ್‌ ಇಂದು, ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ: ದಿಗ್ವಿಜಯ್‌ ಸಿಂಗ್‌

    ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ (Kamal Nath) ಅವರು ಬಿಜೆಪಿಗೆ ಜಂಪ್‌ ಮಾಡುತ್ತಾರೆ ಎಂಬ ವದಂತಿಗಳಿಗೆ ಇದೀಗ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ (Digvijay Singh) ಪ್ರತಿಕ್ರಿಯಿಸಿದ್ದಾರೆ.

    ಇಂದು ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಮಲ್ ನಾಥ್ ಅವರ ನಿಷ್ಠೆ ಕಾಂಗ್ರೆಸ್ (Congress) ಜೊತೆಗಿದೆ. ಕಮಲ್ ನಾಥ್ ಅವರು ಕಾಂಗ್ರೆಸ್ ನ ಭಾಗವಾಗಿದ್ದಾರೆ. ಹೀಗಾಗಿ ಅವರು ಯಾವತ್ತೂ ಬೇರೆ ಪಕ್ಷಕ್ಕೆ ಹಾರಲಾರರು. ಅವರು ಇಂದು, ಮುಂದೆ ಹಾಗೂ ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದು ಒತ್ತಿ ಹೇಳಿದರು.

    ಛಿಂದ್ವಾರ ಸಂಸದ, ಪುತ್ರ ನಕುಲ್‌ನಾಥ್ ಜೊತೆ ಸೇರಿ ಕಮಲ್‌ನಾಥ್ 12 ಕ್ಕೂ ಹೆಚ್ಚು ಶಾಸಕರ ಜೊತೆಗೆ ಬಿಜೆಪಿ (BJP) ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಫೆ.22ಕ್ಕೆ ಮಧ್ಯಪ್ರದೇಶ ಪ್ರವೇಶವಾಗುವ ಹೊತ್ತಲ್ಲೇ ಈ ವಿಚಾರ ಕೇಳಿಬಂದಿತ್ತು. ಇದನ್ನೂ ಓದಿ: ಕಾಂಗ್ರೆಸ್‌ಗೆ ಇಂದಿರಾ ಗಾಂಧಿ 3ನೇ ಮಗ ಶಾಕ್? – ಪುತ್ರನ ಜೊತೆ ಕಮಲ್‌ನಾಥ್ ಬಿಜೆಪಿ ಸೇರ್ಪಡೆ?

    ಸದ್ಯಕ್ಕೆ ಕಮಲ್ ನಾಥ್ ಕಡೆಯಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಪಕ್ಷವನ್ನು ಬದಲಾಯಿಸುವ ಕುರಿತು ಕಮಲ್‌ ನಾಥ್‌ ಅವರನ್ನು ಹೇಳಿದಾಗ ನೀವೆಲ್ಲ ಯಾಕೆ ಉತ್ಸುಕರಾಗಿದ್ದೀರಿ. ಹಂಗೆ ಏನಾದರೂ ಇದ್ದರೆ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.

  • ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ ಬಿಜೆಪಿ ಸೇರೋದು ಸರಿಯಲ್ಲ: ಪರಮೇಶ್ವರ್

    ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ ಬಿಜೆಪಿ ಸೇರೋದು ಸರಿಯಲ್ಲ: ಪರಮೇಶ್ವರ್

    – ಇಂತಹ ಕಠಿಣ ಸಮಯದಲ್ಲಿ ಹೀಗೆ ಮಾಡೋದು ತಪ್ಪು

    ಬೆಂಗಳೂರು: ಕಾಂಗ್ರೆಸ್ ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಈಗ ಬಿಜೆಪಿ ‌ಸೇರುತ್ತೇನೆ ಎಂದರೆ ಅದು ಸರಿಯಲ್ಲ ಅಂತ ಮಧ್ಯ ಪ್ರದೇಶದ‌ ಮಾಜಿ ಸಿಎಂ ಕಮಲನಾಥ್ ವಿರುದ್ಧ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಕಿಡಿಕಾರಿದ್ದಾರೆ.

    ಮಧ್ಯಪ್ರದೇಶ ದ ಮಾಜಿ ಸಿಎಂ ಕಮಲನಾಥ್ ಬಿಜೆಪಿ (BJP) ಸೇರ್ಪಡೆ ವಿಚಾರಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, ಬಹಳ ಜನ ಕಾಂಗ್ರೆಸ್ ‌ನಲ್ಲಿ ಅಧಿಕಾರ ಅನುಭವಿಸಿ, ಎಲ್ಲಾ ಹಂತದಲ್ಲಿ ಅವರಿಗೆ ಸಹಕಾರ ಕೊಟ್ಟು ಬೆಳೆಸಿರುತ್ತೆ. ಅಧಿಕಾರ ಅನುಭವಿಸಿ ಕ್ಲುಲ್ಲಕ ಕಾರಣಕ್ಕೋ, ನಿಜವಾದ ಕಾರಣಕ್ಕೋ ಪಕ್ಷವನ್ನು ಬಿಡೋದು‌ ಸರಿಯಲ್ಲ ಎಂದರು‌. ಇದನ್ನೂ ಓದಿ: ಕಾಂಗ್ರೆಸ್‌ಗೆ ಇಂದಿರಾ ಗಾಂಧಿ 3ನೇ ಮಗ ಶಾಕ್? – ಪುತ್ರನ ಜೊತೆ ಕಮಲ್‌ನಾಥ್ ಬಿಜೆಪಿ ಸೇರ್ಪಡೆ?

    ಪಕ್ಷ ನಮಗೆ ತಾಯಿ ಸಮಾನ. ತಾಯಿ ನಮಗೆ ಊಟ ಹಾಕಿ, ಬೆಳೆಸಿ ದೊಡ್ಡವರು ಮಾಡ್ತಾರೆ. ನಾವು ತಾಯಿಯನ್ನು ತಿರಸ್ಕಾರ ಮಾಡಿದ ಹಾಗೆ ಮಾಡೋದು‌ ಸರಿಯಲ್ಲ. ಕಾಂಗ್ರೆಸ್ ಪಕ್ಷ ಅವರಿಗೆಲ್ಲ ದೊಡ್ಡ ದೊಡ್ಡ ಹುದ್ದೆ ಕೊಟ್ಟು ಅವರನ್ನ ಬೆಳೆಸಿದೆ‌. ಅವರು ಕೂಡಾ ಪಕ್ಷಕ್ಕೆ ದುಡಿದಿರಬಹುದು. ಅವರಿಂದ ಪಕ್ಷಕ್ಕೆ ಅನುಕೂಲ ಆಗಿರಬಹುದು‌. ಇಂತಹ ಕಠಿಣ ಸಮಯದಲ್ಲಿ, ಚುನಾವಣೆ ಬರೋ ಸಮಯದಲ್ಲಿ ಹೀಗೆ ಮಾಡೋದು ಸರಿಯಲ್ಲ ಎಂದರು.

    ಕಮಲನಾಥ್ (Kamalnath) ಅಂತಹವರು ಮಧ್ಯಪ್ರದೇಶದಲ್ಲಿ ಚುನಾವಣೆ ಸರಿಯಾಗಿ ನಡೆಸಿಲ್ಲ ಅಂತ ನಮಗೆಲ್ಲ ಅನ್ನಿಸುತ್ತೆ. ಚುನಾವಣೆ ಮೊದಲು ಕಾಂಗ್ರೆಸ್ ಅಧಿಕಾರ ಬರುತ್ತೆ ಅಂತ ಹೇಳೋರು. ಆದರೆ ಕೆಟ್ಟ ಪರಿಸ್ಥಿತಿ ತಂದು ಸೋತಿದ್ದಾರೆ. ಇದಕ್ಕೆ ಕಮಲನಾಥ್ ಕಾರಣ ಅಂತ ವಿಶ್ಲೇಷಣೆ ‌ಮಾಡ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪಕ್ಷ ನಮ್ಮನ್ನ ಸರಿಯಾಗಿ ನಡೆಸಿಕೊಂಡಿಲ್ಲ ಅಂತ ಅವರಿಗೆ ಅನ್ನಿಸಿರಬಹುದು. ತಪ್ಪು ಅವರಿಂದ ಆಗಿ ಕಾಂಗ್ರೆಸ್ ದೂಷಣೆ ಮಾಡೋದು ಸರಿಯಲ್ಲ. ಅವರು ಕಾಂಗ್ರೆಸ್ ಬಿಡಬಾರದು ಅಂತ ನಮಗೂ ಅನ್ನಿಸುತ್ತೆ ಎಂದರು.

  • ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಸ್ಥನ ಸ್ಥಾನಕ್ಕೆ ಕಮಲ್‍ನಾಥ್ ರಾಜೀನಾಮೆ?

    ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಸ್ಥನ ಸ್ಥಾನಕ್ಕೆ ಕಮಲ್‍ನಾಥ್ ರಾಜೀನಾಮೆ?

    ಭೋಪಾಲ್: ಮಧ್ಯಪ್ರದೇಶದಲ್ಲಿ (Madhyapradesh) ಕಾಂಗ್ರೆಸ್ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ (Congress) ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಗೆಲುವು ಖಚಿತವಾಗಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಸೋಲು ಕಂಡ ಮರುದಿನವೇ ಕಮಲ್‍ನಾಥ್ (Kamal Nath) ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಕೈ ಹಿಡಿದ ಮಹಿಳೆಯರು

    ಗೆಲುವಿನ ಬಗ್ಗೆ ಪಕ್ಷಕ್ಕೆ ಎಷ್ಟು ಮನವರಿಕೆಯಾಗಿತ್ತೆಂದರೆ ಮತ ಎಣಿಕೆಯ ದಿನ ಬೆಳಿಗ್ಗೆಯೇ ಕಮಲ್‍ನಾಥ್ ಅವರಿಗೆ ಅಭಿನಂದನೆ ಸಲ್ಲಿಸಿ ಬ್ಯಾನರ್‍ಗಳನ್ನು ಹಾಕಲಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಬಿಜೆಪಿ ಮುನ್ನಡೆ ಸಾಧಿಸಿದ್ದರಿಂದ ಬ್ಯಾನರ್ ತೆರವುಗೊಳಿಸಲಾಯಿತು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ರಾಜ್ಯದಲ್ಲಿ ಬಿಜೆಪಿ ವಿರುದ್ಧ ಅಲೆ ಕಂಡುಬಂದಿದ್ದರಿಂದ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿತ್ತು. ಹೀಗಾಗಿ ಹೆಚ್ಚಿನ ಪ್ರಚಾರವನ್ನು ಕಾಂಗ್ರೆಸ್ ನಾಯಕರು ಕೈಗೊಂಡಿರಲಿಲ್ಲ. ಇದು ಮತದಾರರೊಂದಿಗಿನ ಸಂವಹನದ ಮೇಲೆ ಪರಿಣಾಮ ಬೀರಿತು ಮತ್ತು ಪಕ್ಷದ ಸಂದೇಶವನ್ನು ರವಾನಿಸಲು ಸಾಧ್ಯವಾಗಲಿಲ್ಲ ಎಂದು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಐಎನ್‍ಡಿಐಎ ಒಕ್ಕೂಟದ ಸಮಾಜವಾದಿ ಪಕ್ಷಕ್ಕೆ ಭರವಸೆ ನೀಡಲಾದ ಐದರಿಂದ ಏಳು ಸ್ಥಾನಗಳನ್ನು ನಿರಾಕರಿಸುವುದು ಮೈತ್ರಿ ನಾಯಕರ ಕೋಪಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮತ್ತೆ ಮಾಮಾಜಿ ಮ್ಯಾಜಿಕ್‌ – ಬಿಜೆಪಿ ಸುನಾಮಿಗೆ ಕಾಂಗ್ರೆಸ್‌ ಕೊಚ್ಚಿ ಹೋಗಿದ್ದು ಹೇಗೆ?

    ಭವಿಷ್ಯದಲ್ಲಿ ರಾಜ್ಯದ ಪರಿಸ್ಥಿತಿ ಹೀಗಿದ್ದರೆ ಮುಂದೆ ನಾವು ಗೆಲ್ಲಲು ಸಾಧ್ಯವಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ. ಇತ್ತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, ಮಧ್ಯಪ್ರದೇಶ, ಛತ್ತೀಸ್‍ಗಢ ಮತ್ತು ರಾಜಸ್ಥಾನವನ್ನು ಕಾಂಗ್ರೆಸ್ ಗೆಲ್ಲಬಹುದಿತ್ತು. ಆದರೆ ಕೆಲವು ಮತಗಳನ್ನು ಐಎನ್‍ಡಿಐಎ ಒಕ್ಕೂಟವು ಕಡಿತಗೊಳಿಸಿದೆ ಎಂದು ಹೇಳಿದರು.

    ಕಾಂಗ್ರೆಸ್‌ ಸೋತಿದ್ದು ಹೇಗೆ?: ಮಧ್ಯಪ್ರದೇಶದಲ್ಲಿ ಮೊದಲೇ ಬಿಜೆಪಿ ಪ್ರಬಲವಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಬದಲಿ ನಾಯಕತ್ವದ ಸುಳಿವು ನೀಡಿತ್ತು. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಜನಪ್ರೀಯತೆ ಗುರುತಿಸುವಲ್ಲಿ ಕಾಂಗ್ರೆಸ್‌ ಮತ್ತೆ ವಿಫಲವಾಯಿತು. ಇದರ ಜೊತೆ 2019ರಲ್ಲಿ ಕಮಲ್‌ ನಾಥ್‌ ಜೊತೆ ಕಿತ್ತಾಟದಿಂದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ನಿಂದ ಹೊರ ಬಂದಿದ್ದರು. ಇದು ಕಾಂಗ್ರೆಸ್‌ ದೊಡ್ಡ ಹೊಡೆತ ನೀಡಿತ್ತು.

  • ಕಮಲ್‍ನಾಥ್ ತಾಯಿ, ಸೋದರಿ ಬಂಗಾಳದ ‘ಐಟಂ’-ಇಮರ್ತಿ ದೇವಿ

    ಕಮಲ್‍ನಾಥ್ ತಾಯಿ, ಸೋದರಿ ಬಂಗಾಳದ ‘ಐಟಂ’-ಇಮರ್ತಿ ದೇವಿ

    ಭೋಪಾಲ್: ಮಾಜಿ ಸಿಎಂ ಕಮಲ್‍ನಾಥ್ ತಾಯಿ ಮತ್ತು ಸೋದರಿ ಬಂಗಾಳದ ಐಟಂ ಎಂದು ಬಿಜೆಪಿ ನಾಯಕಿ ಇಮರ್ತಿ ದೇವಿ ಅವರ ಹೇಳಿಕೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕ ಆಚಾರ್ಯ ಪ್ರಮೋದ್ ಈ ವಿಡಿಯೋ ಹಂಚಿಕೊಂಡಿದ್ದಾರೆ.

    ಇಮರ್ತಿ ದೇವಿ ಹೇಳಿದ್ದೇನು?: ಅವನು ಬಂಗಾಳದ ವ್ಯಕ್ತಿ. ಸಿಎಂ ಆಗಲು ಮಧ್ಯಪ್ರದೇಶಕ್ಕೆ ಬಂದಿದ್ದಾನೆ. ಹೇಗೆ ಮಾತನಾಡಬೇಕು ಎಂದು ಸಭ್ಯತೆ ಇಲ್ಲದ ವ್ಯಕ್ತಿ ಬಗ್ಗೆ ಏನು ಹೇಳಬೇಕು. ಸಿಎಂ ಸ್ಥಾನದಿಂದ ಇಳಿದ ಬಳಿಕ ಕಮಲ್‍ನಾಥ್ ಹುಚ್ಚನಾಗಿ ಮಧ್ಯಪ್ರದೇಶದ ತುಂಬಾ ಓಡಾಡುತ್ತಿದ್ದಾನೆ. ಹುಚ್ಚನಾಗಿದ್ದರಿಂದ ಅವನು ಏನು ಬೇಕಾದರೂ ಹೇಳಬಹುದು. ಅವನು ನಮ್ಮ ರಾಜ್ಯದವನಲ್ಲ. ಅವನ ತಾಯಿ ಮತ್ತು ಸೋದರಿ ಬಂಗಾಳದ ಐಟಂ ಆಗಿರಬಹುದು ನಮಗೆ ಗೊತ್ತಿಲ್ಲ.

    ಕಮಲ್‍ನಾಥ್ ಹೇಳಿಕೆ: ಕಾಂಗ್ರೆಸ್ ನಿಂದ ಗ್ವಾಲಿಯರ್ ನ ದಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಇಮರ್ತಿ ದೇವಿ ಸದ್ಯ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದಾರೆ. ಈಗ ಹಾಲಿ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

    ದಬ್ರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಅವರ ಪರ ಮತ ಯಾಚನೆ ಮಾಡುತ್ತಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್, ನಮ್ಮ ಅಭ್ಯರ್ಥಿ ಸುರೇಶ್ ರಾಜೆ ಸರಳ ವ್ಯಕ್ತಿ ಆಗಿದ್ದು ಆಕೆಯಂಥಲ್ಲ. ಆಕೆಯ ಹೆಸರೇನು? ನಿಮಗೆಲ್ಲರಿಗೂ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ. ನೀವು ನನಗೆ ಮೊದಲೇ ಎಚ್ಚರಿಕೆ ನೀಡಬೇಕಾಗಿತ್ತು. ಎಂತಹ `ಐಟಂ’ ಎಂದು ಕುಹಕವಾಡಿದ್ದರು.

    https://twitter.com/ShobhaBJP/status/1317839445576404998

    ಕಮಲ್‍ನಾಥ್ ಹೇಳಿಕೆಗೆ ಇರ್ಮತಿ ಕಣ್ಣೀರು: ಬಂಗಾಳದಿಂದ ಬಂದ ಈ ವ್ಯಕ್ತಿಗಳಿಗೆ ಮಧ್ಯ ಪ್ರದೇಶದಲ್ಲಿರುವ ಹಕ್ಕು ಇಲ್ಲ. ಮಧ್ಯ ಪ್ರದೇಶದಲ್ಲಿ ಮಹಿಳೆಯರನ್ನ ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಮಹಿಳೆಯರನ್ನ ಮನೆಯ ಲಕ್ಷ್ಮಿ ಎಂದು ಕರೆಯಲಾಗು ತ್ತದೆ. ಇಂದು ಕಮಲ್‍ನಾಥ್ ಮಧ್ಯಪ್ರದೇಶ ಎಲ್ಲ ಮಹಿಳೆಯರನ್ನ ಕಮಲ್‍ನಾಥ್ ನಿಂದಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಇಂತಹ ಹೊಲಸನ್ನು ಕೈ ಅಧಿನಾಯಕಿ ಸೋನಿಯಾಗಾಂಧಿ ತೆಗೆದು ಹಾಕಬೇಕು. ನೀವು ಒಬ್ಬರು ಮಹಿಳೆ, ಮಗಳು, ತಾಯಿ. ಹಾಗಾಗಿ ಕಮಲ್‍ನಾಥ್ ಅವರನ್ನ ನಿಮ್ಮ ಪಕ್ಷದಿಂದ ಕೈ ಬಿಡಿ ಎಂದು ಮನವಿ ಮಾಡಿಕೊಂಡಿದ್ದರು.

    ಕಮಲ್‍ನಾಥ್ ಹೇಳಿಕೆಗೆ ರಾಹುಲ್ ಗಾಂಧಿ ಬೇಸರ: ಇನ್ನು ಕಮಲ್‍ನಾಥ್ ಹೇಳಿಕೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಬೇಸರ ವ್ಯಕ್ತಪಡಿಸಿದ್ದರು. ಕಮಲ್‍ನಾಥ್ ನಮ್ಮ ಪಕ್ಷದವರೇ ಆಗಿದ್ದರೂ, ಓರ್ವ ಮಹಿಳೆಗೆ ಬಳಸಿದ ಪದ ಸರಿಯಾಗಿರಲಿಲ್ಲ. ಅವರು ಯಾರೇ ಆಗಿದ್ದರೂ ಇಂತಹ ಹೇಳಿಕೆಯನ್ನ ನಾನು ಪ್ರಶಂಸಿಸುವದಿಲ್ಲ. ಕಮಲ್‍ನಾಥ್ ಹೇಳಿಕೆ ದುರದೃಷ್ಟಕರ ಎಂದು ಅಸಮಾಧಾನ ಹೊರ ಹಾಕಿದ್ದರು.

  • ಹಸಿವಿನಿಂದ ದೇಗುಲದ ಹಣ ಕದ್ದ ಬಾಲಕಿಯ ನೆರವಿಗೆ ನಿಂತ ಸರ್ಕಾರ

    ಹಸಿವಿನಿಂದ ದೇಗುಲದ ಹಣ ಕದ್ದ ಬಾಲಕಿಯ ನೆರವಿಗೆ ನಿಂತ ಸರ್ಕಾರ

    ಭೋಪಾಲ್: ತನ್ನ ಹಾಗೂ ಕುಟುಂಬದ ಹಸಿವನ್ನು ನೀಗಿಸಿಕೊಳ್ಳಲು 12 ವರ್ಷದ ಬಾಲಕಿಯೊಬ್ಬಳು ದೇವಸ್ಥಾನದ ಹುಂಡಿಯಲ್ಲಿದ್ದ 250 ರೂಪಾಯಿ ಕದ್ದು ಸಿಕ್ಕಬಿದ್ದಿದ್ದಳು. ಈ ವಿಷಯವನ್ನು ತಿಳಿದ ಮಧ್ಯಪ್ರದೇಶ ಸರ್ಕಾರ ಬಾಲಕಿ ಕುಟುಂಬಕ್ಕೆ ನೆರವಾಗಿದೆ.

    ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರೆಹ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಟುಂಬದ ಹಸಿವನ್ನು ನೀಗಿಸಲು ಬಾಲಕಿ ವಿಧಿಯಿಲ್ಲದೆ ದೇವಸ್ಥಾನದ ಹುಂಡಿ ಹಣ ಕದ್ದಿದ್ದಳು. ಸೆ. 21ರಂದು ರೆಹ್ಲಿ ಗ್ರಾಮದ ದೇವಸ್ಥಾನದ ಹುಂಡಿಯಿಂದ 250 ರೂ. ಹಣವನ್ನು ಕದ್ದಿದ್ದಳು. ಈ ದೃಶ್ಯವು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದ್ದರಿಂದ ಸೆ.22ರಂದು ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಬಾಲಕಿಯನ್ನು ಬಂಧಿಸಿದ ಪೊಲೀಸರು ಆಕೆಯನ್ನು ಶಹಡೋಲ್ ಜಿಲ್ಲೆಯ ಬಾಲಮಂದಿರಕ್ಕೆ ಕಳುಹಿಸಿದ್ದರು.

     

    ವಿಚಾರಣೆ ವೇಳೆ ಬಾಲಕಿ ಹಣ ಯಾಕೆ ಕಳ್ಳತನ ಮಾಡಿದ್ದು ಎನ್ನುವುದನ್ನು ತಿಳಿಸಿದಳು. ನನ್ನ ಕುಟುಂಬದ ಹಸಿವು ನೀಗಿಸಲು ಹಣ ಕಳ್ಳತನ ಮಾಡಿದೆ. ಸೆ.21ರಂದು 10 ಕೆಜಿ ಗೋಧಿಯನ್ನು ಹಿಟ್ಟು ಮಾಡಿಸಿಕೊಳ್ಳಲು ಹೋಗಿದ್ದೆ. ಆದರೆ ದಾರಿಯಲ್ಲಿ ಎಲ್ಲೋ ಗೋಧಿಯನ್ನು ಮರೆತು ಬಿಟ್ಟುಬಂದೆ. ಅದನ್ನು ಬಿಟ್ಟರೆ ನಮಗೆ ಊಟಕ್ಕೆ ಬೇರೆ ಏನು ಇರಲಿಲ್ಲ. ಆದ್ದರಿಂದ ದೇವಸ್ಥಾನದಿಂದ 250 ರೂ. ಕದ್ದು ಅದರಿಂದ ಗೋಧಿ ಖರೀಧಿಸಿದೆ. ಉಳಿದ ಹಣವನ್ನು ಹಾಗೆ ಇಟ್ಟಿದ್ದೇನೆ ಎಂದು ತಿಳಿಸಿದಳು.

    ಈ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿದು ಬಾಲಕಿಗೆ ಬೇಲ್ ಕೊಡಿಸಿ ಬಿಡಿಸಿದರು. ಜೊತೆಗೆ ಆಕೆಯ ತಂದೆಗೆ 10 ಸಾವಿರ ಹಣವನ್ನು ನೀಡಿ ಸಹಾಯ ಮಾಡಿದ್ದರು. ಬಾಲಕಿಯ ಪರಿಸ್ಥಿತಿ ಬಗ್ಗೆ ಅರಿತ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಅವರು ಬಾಲಕಿ ಕುಟುಂಬದ ನೆರವಿಗೆ ಬಂದಿದ್ದು, ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಹಣವನ್ನು ಘೋಷಿಸಿದ್ದಾರೆ. ಜೊತೆಗೆ ಸರ್ಕಾರದಿಂದ ಬಾಲಕಿ ಕುಟುಂಬಕ್ಕೆ ಅವಶ್ಯಕವಿರುವ ವಸ್ತುಗಳನ್ನು ನೀಡಿವುದರ ಜೊತೆಗೆ ಸ್ವಲ್ಪ ಭೂಮಿಯನ್ನು ಕೂಡ ನೀಡಲಾಗಿದೆ. ಹಾಗೆಯೇ ಬಾಲಕಿಯ ಶಿಕ್ಷಣದ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

    ಈ ಬಗ್ಗೆ ಕಮಲ್‍ನಾಥ್ ಅವರು ಟ್ವೀಟ್ ಮಾಡಿ, ಸಾಕಷ್ಟು ಬಾರೀ ಅನಿವಾರ್ಯ ಕಾರಣಗಳಿಂದ ಮುಗ್ಧರು ಚಿಕ್ಕವಯಸ್ಸಿನಲ್ಲಿ ಸಂಪಾದನೆ ಮಾಡಲು ತಪ್ಪು ದಾರಿ ಹಿಡುದುಬಿಡುತ್ತಾರೆ. ಸಾಗರ್ ಜಿಲ್ಲೆಯ ರೆಹ್ಲಿ ಗ್ರಾಮದ ಬಾಲಕಿ ಕುಟುಂಬಕ್ಕೆ 1 ಲಕ್ಷ ರೂ. ಹಣವನ್ನು ನೀಡಲು ಸೂಚಿಸಿದ್ದೇನೆ. ಇದನ್ನು ಹೊರತುಪಡಿಸಿ, ಕುಟುಂಬವು ಸರ್ಕಾರಿ ಕಲ್ಯಾಣ ಯೋಜನೆಗಳ ಲಾಭವನ್ನೂ ಕೂಡ ಪಡೆಯಲಿದೆ. ರೇಷನ್ ಹಾಗೂ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸರ್ಕಾರ ಭರಿಸಲಿದೆ ಎಂದು ತೀಳಿಸಿದರು.

  • ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಪುತ್ರನಿಂದ 660.1 ಕೋಟಿ ಆಸ್ತಿ ಘೋಷಣೆ

    ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಪುತ್ರನಿಂದ 660.1 ಕೋಟಿ ಆಸ್ತಿ ಘೋಷಣೆ

    ಭೋಪಾಲ್: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ಪುತ್ರ ನಕುಲ್ ನಾಥ್ ತಮ್ಮ ಬಳಿ ಒಟ್ಟು 660.1 ಕೋಟಿ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

    ಉದ್ಯಮಿ ಮತ್ತು ರಾಜಕಾರಣಿಯಾಗಿರುವ ನಕುಲ್ ಬಳಿ ಒಟ್ಟು 615.93 ಕೋಟಿ ರೂ. ಸ್ಥಿರಾಸ್ತಿ ಇದ್ದರೆ ಪತ್ನಿ ಪ್ರಿಯಾ ಅವರ ಬಳಿ 2.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಮಗನಿಗೆ ಹೋಲಿಸಿದರೆ ತಂದೆಯ ಆಸ್ತಿ ಕಡಿಮೆಯಿದ್ದು, ಚಿಂದ್ವಾರ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಮಲ್‍ನಾಥ್ ತಮ್ಮ ಬಳಿ ಒಟ್ಟು 124 ಕೋಟಿ ರೂ. ಆಸ್ತಿಯಿಂದೆ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.

    ತನ್ನ ಬಳಿ 41.77 ಕೋಟಿ ಚರಾಸ್ತಿ ಇದ್ದರೆ ಪತ್ನಿಯ ಬಳಿ ಯಾವುದೇ ಚರಾಸ್ತಿ ಇಲ್ಲ ಎಂದು ನಕುಲ್ ಘೋಷಿಸಿಕೊಂಡಿದ್ದಾರೆ. ಆಸ್ತಿಗಳ ಪೈಕಿ ಕೆಲವು ತನ್ನ ಬಳಿ ಇದ್ದರೆ, ಕೆಲವು ಕುಟುಂಬ ನಿಯಂತ್ರಣದಲ್ಲಿರುವ ಕಂಪನಿ ಮತ್ತು ಟ್ರಸ್ಟ್ ನಲ್ಲಿದೆ ಎಂದು ನಕುಲ್ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ನಕುಲ್ ಮತ್ತು ಪ್ರಿಯಾ ದಂಪತಿ ಯಾವುದೇ ವಾಹನವನ್ನು ಹೊಂದಿಲ್ಲ.

    896.669 ಗ್ರಾಂ ಚಿನ್ನದ ಬಾರ್, 7.630 ಕೆಜಿ ಬೆಳ್ಳಿ, 78.45 ಲಕ್ಷ ರೂ. ಮೌಲ್ಯದ ವಜ್ರದ ಆಭರಣಗಳು ನಕುಲ್ ಬಳಿ ಇದ್ದರೆ, ಪತ್ನಿ ಪ್ರಿಯಾ ಬಳಿ 270.322 ಗ್ರಾಂ ಚಿನ್ನ, 57.62 ಲಕ್ಷ ರೂ. ಮೌಲ್ಯದ ವಜ್ರದ ಆಭರಣಗಳು ಇವೆ.

    ಆದಾಯದಲ್ಲಿ ಪತಿಗಿಂತ ಪತ್ನಿಯ ಆದಾಯವೇ ಜಾಸ್ತಿ ಇದ್ದು 2017-18ರ ಆದಾಯ ತೆರಿಗೆ ರಿಟನ್ರ್ಸ್ ವೇಳೆ ಪ್ರಿಯಾ 4.18 ಕೋಟಿ ಆದಾಯ ಹೊಂದಿದ್ದರೆ, ನಕುಲ್ 2.76 ಕೋಟಿ ರೂ. ಆದಾಯ ಹೊಂದಿದ್ದಾರೆ. ನಕುಲ್ ತಮ್ಮ ಸಹೋದರನ ಜೊತೆ ಜಂಟಿಯಾಗಿ ಚಿಂದ್ವಾರ ಜಿಲ್ಲೆಯಲ್ಲಿ ಒಟ್ಟು 7.82 ಎಕ್ರೆ ಜಮೀನು ಹೊಂದಿದ್ದಾರೆ. ಇಲ್ಲಿಯವರಗೆ ನಕುಲ್ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ.

    1980ರಿಂದ 2014ರವರೆಗಿನ ಎಲ್ಲ ಲೋಕಸಭಾ ಚುನಾವಣೆಯಲ್ಲಿ ಚಿಂದ್ವಾರಾ ಕ್ಷೇತ್ರದಿಂದ ಕಮಲ್‍ನಾಥ್ ಜಯಗಳಿಸಿದ್ದು, ಈಗ ಈ ಚುನಾವಣೆಯಲ್ಲಿ ಅವರ ಪುತ್ರ ಈ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿರುವ ಕಮಲ್‍ನಾಥ್ 2018ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಚುನಾವಣೆ ನಡೆದ 6 ತಿಂಗಳ ಒಳಗಡೆ ಶಾಸಕರಾಗಬೇಕಾಗಿರುವ ಹಿನ್ನೆಲೆಯಲ್ಲಿ ಕಮಲ್‍ನಾಥ್ ಈಗ ಚಿಂದ್ವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

  • ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರೈತರ ಸಾಲಮನ್ನಾ ಮಾಡಿದ ಮಧ್ಯಪ್ರದೇಶದ ನೂತನ ಸಿಎಂ

    ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರೈತರ ಸಾಲಮನ್ನಾ ಮಾಡಿದ ಮಧ್ಯಪ್ರದೇಶದ ನೂತನ ಸಿಎಂ

    – ಮಧ್ಯಪ್ರದೇಶದ ನೂತನ ಸಾರಥಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಮಲ್‍ನಾಥ್

    ಭೋಪಾಲ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕ ಕಮಲ್‍ನಾಥ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ರೈತರ ಅಲ್ಪಾವಧಿ ಕೃಷಿಸಾಲ ಮನ್ನಾ (2 ಲಕ್ಷ ರೂ.ಒಳಗಿನ ಸಾಲ) ಮಾಡಿದ್ದಾರೆ.

    ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ನೂತನ ಮುಖ್ಯಮಂತ್ರಿ ಕಮಲ್‍ನಾಥ್ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದ್ದರು. ಬಳಿಕ 2018ರ ಮಾರ್ಚ್ 31ರ ಮೊದಲು ಸಾಲ ಪಡೆದ ರೈತರ ಅಲ್ಪಾವಧಿಯ 2 ಲಕ್ಷ ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡುವ ಆದೇಶಕ್ಕೆ ಸಹಿ ಹಾಕಿದ್ದಾರೆ.

    ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸಾಲಮನ್ನಾ ಕುರಿತು ಘೋಷಿಸಿಕೊಂಡಿದ್ದ ಕಾಂಗ್ರೆಸ್, ಅಧಿಕಾರದ ಗದ್ದುಗೆ ಏರಿದ ಮರುಕ್ಷಣವೇ ರೈತರ ಸಾಲಮನ್ನಾ ಮಾಡುವ ಮೂಲಕ ತನ್ನ ಮಾತನ್ನು ಉಳಿಸಿಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಇದು ಮೊದಲನೇ ಭಾಗದ ರೈತರ ಸಾಲಮನ್ನಾವನ್ನಾಗಿ, ಎರಡನೇಯದು ಶೀಘ್ರವೇ ನೆರವೇರುತ್ತದೆ ಎಂದು ಬರೆದುಕೊಂಡಿದ್ದಾರೆ.

    ಮುಖ್ಯಮಂತ್ರಿ ಕಮಲ್‍ನಾಥ್ ಪ್ರಮಾಣವಚನ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಿಎಸ್‍ಪಿ, ಎಸ್‍ಪಿ ಪಕ್ಷಗಳ ಹಲವು ಮುಖಂಡರು ಭಾಗವಹಿಸಿದ್ದರು.

    ನೆಹರೂ ಕುಟುಂಬಕ್ಕೆ ಪರಮಾಪ್ತರಾಗಿರುವ ಕಮಲ್ ನಾಥ್ ಇದೇ ಪ್ರಪ್ರಥಮ ಬಾರಿ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಉತ್ತರ ಪ್ರದೇಶದ ಕಾನ್ಪುರದವರಾಗಿದ್ದರೂ, ಮಧ್ಯಪ್ರದೇಶದ ಛಿಂದವಾಡ ಕೋಲಸಭಾ ಕ್ಷೇತ್ರದಿಂದ ಸತತ ಒಂಭತ್ತು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

    ಕಳೆದ ಮೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲದೇ ವಿಧಾನಸಭಾ ಚುನಾವಣೆಯ ಮುಂದಾಳತ್ವವನ್ನು ಯಶಸ್ವಿಯಾಗಿ ಮುನ್ನಡೆಸಿ, ಸತತ 15 ವರ್ಷಗಳ ಬಳಿಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಂತೆ ಮಾಡಿದ್ದರು.

    230 ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ 116 ಸ್ಥಾನಗಳು ಬೇಕಾಗಿತ್ತು. ಕಾಂಗ್ರೆಸ್ ತನ್ನ 114 ಸ್ಥಾನಗಳ ಜೊತೆಗೆ ಬಿಎಸ್‍ಪಿಯ 2, ಎಸ್‍ಪಿ 1 ಹಾಗೂ ಪಕ್ಷೇತರರ 4 ಸ್ಥಾನಗಳೊಂದಿಗೆ 121 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಿದೆ.

    ಡಿಸೆಂಬರ್ 11 ರಂದು ಪ್ರಕಟಗೊಂಡ ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದ 230 ಕ್ಷೇತ್ರಗಳಲ್ಲಿ ಕಾಂಗ್ರೆಸ್ 114 ಸ್ಥಾನಗಳನ್ನು ಪಡೆದಿತ್ತು. ಉಳಿದಂತೆ ಆಡಳಿತಾರೂಢ ಬಿಜೆಪಿ 109 ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಉಳಿದಂತೆ ಬಿಎಸ್‍ಪಿ 2, ಎಸ್‍ಪಿ 1 ಹಾಗೂ ಇತರರು 4 ಸ್ಥಾನಗಳಲ್ಲಿ ಜಯಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸಿಗರು ಬೇಕಾದ್ರೆ ರಾಹುಲ್ ಗಾಂಧಿಯ ಮೂತ್ರವನ್ನೂ ಕುಡಿಯಲು ರೆಡಿ ಇರ್ತಾರೆ: ಬಿಜೆಪಿ ಮುಖಂಡ

    ಕಾಂಗ್ರೆಸಿಗರು ಬೇಕಾದ್ರೆ ರಾಹುಲ್ ಗಾಂಧಿಯ ಮೂತ್ರವನ್ನೂ ಕುಡಿಯಲು ರೆಡಿ ಇರ್ತಾರೆ: ಬಿಜೆಪಿ ಮುಖಂಡ

    ಭೋಪಾಲ್: ಕಾಂಗ್ರೆಸಿಗರು ರಾಹುಲ್ ಗಾಂಧಿಯ ಮೂತ್ರವನ್ನೂ ಬೇಕಾದರೆ ಕುಡಿಯಲು ತಯಾರಿ ಇರುತ್ತಾರೆ ಎಂದು ಮಧ್ಯ ಪ್ರದೇಶದ ಚುನಾವಣೆಯ ಉಸ್ತುವಾರಿಯನ್ನ ಹೊತ್ತಿರುವ ಬಿಜೆಪಿಯ ಉಪಾಧ್ಯಕ್ಷ ಪ್ರಭಾತ್ ಝಾ ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.

    ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತವಾಗಿರುವ ಕಮಲ್‍ನಾಥ್ ಅವರನ್ನು ತೆಗಳಲು ಪ್ರಭಾತ್ ಝಾ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿ ಆರ್ ವಿಎಸ್ ಮಣಿ ಅವರ ಬರೆದ ಪುಸ್ತಕದಲ್ಲಿರುವ ಅಂಶವನ್ನು ಪ್ರಸ್ತಾಪಿಸಿ ಟೀಕಿಸಿದ್ದಾರೆ.

    ಕೇಂದ್ರ ಸಚಿವರಾಗಿದ್ದ ವೇಳೆ ಕಮಲ್‍ನಾಥ್ ಇಶ್ರಾತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಮೋದಿ ಹೆಸರನ್ನು ಸೇರಿಸಲು ಆರ್‍ವಿಎಸ್ ಮಣಿ ಮೇಲೆ ಒತ್ತಡ ಹೇರಿದ್ದರು. ಆರ್‍ವಿಎಸ್ ಮಣಿ ಈ ಬೇಡಿಕೆಯನ್ನು ಒಪ್ಪದಕ್ಕೆ ಕಮಲ್‍ನಾಥ್, ಬಹಳಷ್ಟು ಜನರು ರಾಹುಲ್ ಗಾಂಧಿಯ ಮೂತ್ರವನ್ನು ಕುಡಿಯಲು ತಯಾರಿದ್ದಾಗ ನೀವು ಯಾಕೆ ಈ ಒಂದು ಸಣ್ಣ ಉಪಕಾರವನ್ನು ಮಾಡಬಾರದು ಎಂದು ಪ್ರಶ್ನಿಸಿದ್ದರು ಎಂಬುದಾಗಿ ಪ್ರಭಾತ್ ಝಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಕಮಲ್‍ನಾಥ್ ಅವರ ಬಗ್ಗೆ ಮಾತನಾಡಲು ನನಗೆ ನಾಚಿಕೆ ಆಗುತ್ತದೆ. ನನ್ನ ಸಹೋದರಿ ಇಲ್ಲೇ ಇದ್ದರೂ ನನ್ನ ಮರ್ಯಾದೆಯನ್ನು ಬಿಟ್ಟು ಹೇಳುತ್ತಿದ್ದೇನೆ. ಅವರು ನಮ್ಮ ಮುಖ್ಯಮಂತ್ರಿಯ ಬಗ್ಗೆ ಮಾತನಾಡುವುದು ಏನು? ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಈಗಾಗಲೇ ಗೊತ್ತಾಗಿದೆ. ಮಾಜಿ ಸಚಿವರಾಗಿ ಇಂತಹ ಮಾತುಗಳನ್ನ ಆಡುವರು ಜನಗಳಿಗೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.

    ಪ್ರಭಾತ್ ಝಾ ಹೇಳಿಕೆಗೆ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಲುಜಾ ಪ್ರತಿಕ್ರಿಯಿಸಿ, ಬಿಜೆಪಿ ಅವರು ನಕಲಿ ವಿಡಿಯೋಗಳನ್ನು ಪ್ರಕಟಿಸಿ ಕಮಲ್‍ನಾಥ್ ಅವರ ಚಾರಿತ್ರ್ಯ ಹರಣಕ್ಕೆ ಮುಂದಾಗಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv