‘ಕಮಲಿ’ (Kamali) ಧಾರಾವಾಹಿ ಮೂಲಕ ಮನೆ ಮಾತಾದ ನಟಿ ಯಶಸ್ವಿನಿ ರವೀಂದ್ರ (Yashaswini Ravindra) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಟಿವಿ ಪ್ರೇಕ್ಷಕರಿಗೆ ರಚನಾ ಆಗಿ ಗಮನ ಸೆಳೆದವರು ನಟಿ ಯಶಸ್ವಿನಿ ರವೀಂದ್ರ, ಜನಪ್ರಿಯ ‘ಕಮಲಿ’ ಧಾರಾವಾಹಿಯಲ್ಲಿ ಹೀರೋ ರಿಷಿ (Rishi) ಸಹೋದರಿ ಪಾತ್ರದಲ್ಲಿ ನಟಿಸಿದ್ದರು. ರಚನಾ ಎಂಬ ಪಾತ್ರಕ್ಕೆ ಯಶಸ್ವಿನಿ ಜೀವ ತುಂಬಿದ್ದರು.
ನಟಿ ಯಶಸ್ವಿನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದಾರೆ. ಆಪ್ತರ ಸಮ್ಮುಖದಲ್ಲಿ ಯಶಸ್ವಿನಿ- ಚೇತನ್ ರಾಜ್ ಸಿಂಪಲ್ ಆಗಿ ಮದುವೆಯಾಗಿದ್ದಾರೆ. ನವ ಜೋಡಿಗೆ ಹೊಸ ಬಾಳಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.
`ಕಮಲಿ'(Kamali Serial) ಧಾರಾವಾಹಿ ಮೂಲಕ ಖಳನಾಯಕಿಯಾಗಿ ಮಿಂಚಿದ ಅನಿಕಾ ಅಲಿಯಾಸ್ ಗೇಬ್ರಿಯೆಲ್ಲಾ (Gabriella) ಮತ್ತು ನಟ ಸುಹಾಸ್(Suhas) ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ಸ್ನೇಹಿತರ ಜೊತೆ ಅದ್ದೂರಿ ಆರತಕ್ಷತೆ ನೆರವೇರಿಸಿಕೊಂಡಿದ್ದಾರೆ. ಸದ್ಯ ರಿಸೆಪ್ಷನ್(Reception) ಫೋಟೋ ಸಖತ್ ವೈರಲ್ ಆಗುತ್ತಿದೆ.
ಕಿರುತೆರೆ ಜನಪ್ರಿಯ ಸೀರಿಯಲ್ `ಕಮಲಿ’ ಕಲಾವಿದರಾದ ಅನಿಕಾ ಮತ್ತು ಸುಹಾಸ್ ಇದೀಗ ರಿಯಲ್ ಲೈಫ್‌ನಲ್ಲಿ ಒಂದಾಗಿದ್ದಾರೆ. ಈ ಸೀರಿಯಲ್ ಮೂಲಕ ಪರಿಚಿತರಾದ ಗೇಬ್ರಿಯೆಲ್ಲಾ, ಸುಹಾಸ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇದೀಗ ಗುರು ಹಿರಿಯರ ಸಮ್ಮತಿಯ ಮೇರೆಗೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್(Wedding) ಆಗಿದ್ದಾರೆ. ಇದೀಗ ಕುಟುಂಬಸ್ಥರು, ಚಿತ್ರರಂಗದ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್
ನವಜೋಡಿಗೆ ಶುಭಹಾರೈಸಲು `ಕಮಲಿ’ ಸೀರಿಯಲ್ ತಂಡ ಮತ್ತು ವಾಹಿನಿಯ ಇತರೆ ಸೀರಿಯಲ್‌ನ ಕಲಾವಿದರು ಆರತಕ್ಷತೆಗೆ ಆಗಮಿಸಿ ಶುಭಹಾರೈಸಿದ್ದಾರೆ. ಇನ್ನೂ ನೆಚ್ಚಿನ ಜೋಡಿಗೆ ಸಾಮಾಜಿಕ ಜಾಲತಾಣದ ಮೂಲಕ ಫ್ಯಾನ್ಸ್ ವಿಶ್ಸ್ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ವರ್ಷಗಳ ಹಿಂದೆಯೇ ಅಂಕಿತಾ ಹಾಗೂ ಸುಹಾಸ್ ಎನ್ನುವವರ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ಆಗಿ ಸರಿಯಾಗಿ ಒಂದು ವರ್ಷ ಆದನಂತರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸುಹಾಸ್ ಕುಮಾರಸ್ವಾಮಿ ಎಂಬುವವರ ಜೊತೆ ಅಂಕಿತಾ ಮದುವೆ ನಡೆದಿದೆ. ಕೆನಡಾದಲ್ಲಿ ಸುಹಾಸ್ ನೆಲೆಸಿದ್ದು, ಫೋಟೋಗ್ರಾಫರ್ ಆಗಿ ಸುಹಾಸ್ ಕೆಲಸ ಮಾಡುತ್ತಿದ್ದಾರೆ. ಇನ್ನು ನೆಚ್ಚಿನ ನಟಿಯ ಹೊಸ ಬಾಳಿಗೆ ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕನ್ನಡ ಕಿರುತೆರೆ ಮತ್ತು ಹಿರಿತೆರೆ ನಿರ್ದೇಶಕ ಅರವಿಂದ್ ಕೌಶಿಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದಾರೆ. ಕಿರುತೆರೆ ನಿರ್ಮಾಪಕ ರೋಹಿತ್ ಎನ್ನುವವರಿಗೆ 73 ಲಕ್ಷ ರೂಪಾಯಿ ವಂಚಿಸಿದ ಕಾರಣಕ್ಕಾಗಿ ಅವರ ವಿರುದ್ಧ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ನಿನ್ನೆ ರಾತ್ರಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವೈಯ್ಯಾಲಿ ಕಾವಲ್ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ
2020ರಲ್ಲೇ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ ಸೇರಿದಂತೆ ಹಲವರು ವಿರುದ್ಧ ರೋಹಿತ್ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧ ಪಟ್ಟಂತೆ ಇದೀಗ ಪೊಲೀಸ್ ನವರು ನಿರ್ದೇಶಕ ಅರವಿಂದ್ ಅವರನ್ನು ಬಂಧಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಗೆ ಸಂಬಂಧಿಸಿದ ವಂಚನೆ ಪ್ರಕರಣ ಇದಾಗಿದೆ. ಇದನ್ನೂ ಓದಿ : ಡಾ.ರಾಜ್ ಕುಟುಂಬದೊಂದಿಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ ಜೇಮ್ಸ್ ನಿರ್ಮಾಪಕ
ಈ ಕುರಿತು ದೂರಿನಲ್ಲಿ ಉಲ್ಲೇಖಿಸಿರುವ ರೋಹಿತ್, 28 ಮೇ 2018 ರಿಂದ ‘ಕಮಲಿ’ ಧಾರಾವಾಹಿ ಶುರುವಾಯಿತು. ಮೊದ ಮೊದಲು ಧಾರಾವಾಹಿಯಲ್ಲಿ ನಿರ್ಮಾಪಕರು ರೋಹಿತ್ ಎಂದು ತೋರಿಸಲಾಗುತ್ತಿತ್ತು. ಆ ನಂತರ ನನ್ನ ಹೆಸರನ್ನೇ ಕಿತ್ತು ಹಾಕಲಾಯಿತು. ಅಷ್ಟರಲ್ಲಿ ನಾನು ಆ ಧಾರಾವಾಹಿಗಾಗಿ 73 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೆ. ನನ್ನ ಹೆಸರು ತಗೆದು ಹಾಕಿದ್ದಕ್ಕೆ ಕೇಳಿದೆ. ಅದಕ್ಕೆ ಅವರು ಸಕಾರಣ ಕೊಡಲಿಲ್ಲ. ಈವರೆಗೂ ಲಾಭಾಂಶದಲ್ಲಿ ಒಂದು ಪೈಸೆಯನ್ನೂ ನನಗೆ ಕೊಟ್ಟಿಲ್ಲ. ಹಣ ಕೇಳಿದರೆ ಕೊಡುತ್ತಿಲ್ಲ. ಹೀಗಾಗಿ ನನಗೆ ವಂಚನೆ ಆಗಿದೆ ಎಂದು ದೂರಿನಲ್ಲಿ ಬರೆದಿದ್ದಾರೆ ರೋಹಿತ್. ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್
ಆದರೆ, ಅರವಿಂದ್ ಕೌಶಿಕ್ ಹೇಳುವುದೇ ಬೇರೆ. ಗೆಳೆಯರೊಟ್ಟಿಗೆ ಸೇರಿ ನಾನು ನಮ್ಮದೇ ಸತ್ವ ಮೀಡಿಯಾ ಸಂಸ್ಥೆಯನ್ನು ಹುಟ್ಟು ಹಾಕಿದ್ದೆವು. ಆ ಸಂಸ್ಥೆಗೆ ವಾಹಿನಿಯವರು ಧಾರಾವಾಹಿ ನಿರ್ಮಿಸಲು ಒಪ್ಪಿಗೆ ಕೊಟ್ಟಿದ್ದರು. ಬಂಡವಾಳ ಹೂಡುವವರು ಬೇಕಾಗಿದ್ದರಿಂದ ರೋಹಿತ್ ಅವರೇ ನಮ್ಮನ್ನು ಸಂಪರ್ಕಿಸಿದರು. ಫೈನಾನ್ಸ್ ಮಾಡಿದ್ದರು. ತಮ್ಮ ಹೆಸರಿನ ಮುಂದೆ ನಿರ್ಮಾಪಕರು ಎಂದು ಹಾಕುವಂತೆ ಕೇಳಿದರು. ಅದಕ್ಕೆ ವಾಹಿನಿಯವರು ಒಪ್ಪದೇ ಇರುವ ಕಾರಣಕ್ಕಾಗಿ ನಾವು ಯಾರ ಹೆಸರನ್ನೂ ಹಾಕಲಿಲ್ಲ. ರೋಹಿತ್ ಈ ಧಾರಾವಾಹಿಗೆ ತಾನೇ ನಿರ್ಮಾಪಕ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ನನ್ನೊಂದಿಗೆ ಹಣ ಹಾಕಿದವರು ನನಗೆ ಪ್ರಶ್ನೆ ಮಾಡಿದರು. ಹಾಗಾಗಿ ಅವರ ಹೆಸರನ್ನು ತಗೆದುಹಾಕಲಾಯಿತು. ನಂತರ ಧಾರಾವಾಹಿ ನಿಂತಿತು. ತಮಗೆ ಹಣ ವಾಪಸ್ಸು ಬರುವುದಿಲ್ಲ ಎಂದು ತಮಗೆ ತಾವೇ ಅಂದುಕೊಂಡು ಹೀಗೆ ದೂರು ನೀಡಿದ್ದಾರೆ. ನಾನು ಹಣ ಕೊಡುವುದಿಲ್ಲ ಎಂದು ಯಾವತ್ತೂ ಹೇಳಿಲ್ಲ ಎಂದಿದ್ದಾರೆ ಅರವಿಂದ ಕೌಶಿಕ್.